[A.] ಅಂತರ್ರಾಷ್ಟ್ರೀಯ ಸಂಬಂಧಗಳ ಅರ್ಥ [Meaning of International Relations]:
ಸರಳಾರ್ಥದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಅಧ್ಯಯನ ಮಾಡುವ ಶಾಸ್ತ್ರವನ್ನು ಅಂತರ್ರಾಷ್ಟ್ರೀಯ ಸಂಬಂಧಗಳು ಎನ್ನಲಾಗುತ್ತದೆ. ವಿಶಾಲಾರ್ಥದಲ್ಲಿ ಅಂತರ್ರಾಷ್ಟ್ರೀಯ ವ್ಯವಸ್ಥೆಯಲ್ಲಿನ ರಾಷ್ಟ್ರೀಯ ಮತ್ತು ರಾಷ್ಟ್ರೇತರ ಪಾತ್ರಧಾರಿಗಳು ತಮ್ಮ ನಡುವಿನ ವೈವಿಧ್ಯಮಯ ಸಂಬಂಧಗಳ ನಿರ್ವಹಣೆಯಲ್ಲಿ ತೋರುವ ವರ್ತನೆಗಳನ್ನು ಅಧ್ಯಯನ ನಡೆಸುವುದೇ ಅಂತರ್ರಾಷ್ಟ್ರೀಯ ಸಂಬಂಧಗಳು ಎನಿಸಿಕೊಳ್ಳುತ್ತದೆ. ರಾಷ್ಟ್ರಗಳ ನಡುವಿನ ಸಂಬಂಧಗಳ ರಾಜಕೀಯ ಆಯಾಮವನ್ನು ಕುರಿತಂತೆ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಬೆಳಕು ಚೆಲ್ಲುತ್ತದೆ. ರಾಷ್ಟ್ರಗಳ ನಡುವಿನ ರಾಜಕೀಯ ಸಂಬಂಧಗಳು ಸಹಜವಾಗಿ ರಾಷ್ಟ್ರಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಂಶಗಳಿಂದ ಪ್ರಭಾವಕ್ಕೊಳಗಾಗಿ ನಿರ್ಧರಿಸಲ್ಪಡುತ್ತವೆ. ಹೀಗಾಗಿ ರಾಷ್ಟ್ರಗಳ ನಡುವಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ತಾಂತ್ರಿಕ, ಸೈನಿಕ ಸಂಬಂಧಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧ ಎಂಬುದಾಗಿ ಗುರುತಿಸಲ್ಪಟ್ಟಿದೆ. ಅಂತರ್ರಾಷ್ಟ್ರೀಯ ರಾಜಕೀಯವೆಂದೂ ಕರೆಯಲ್ಪಡುವ ಅಂತರ್ರಾಷ್ಟ್ರೀಯ ಸಂಬಂಧಗಳ ಅರ್ಥವನ್ನು ಕುರಿತಂತೆ ಚಿಂತಕರಲ್ಲಿ ಏಕಾಭಿಪ್ರಾಯವಿಲ್ಲ. ಈ ಪರಿಕಲ್ಪನೆಯ ಪರಿಪೂರ್ಣ ತಿಳುವಳಿಕೆಗೆ ನೆರವಾಗಬಲ್ಲ ಚಿಂತಕರ ವಿವಿಧ ವ್ಯಾಖ್ಯಾನಗಳನ್ನು ಈ ಕೆಳಗೆ ನೀಡಲಾಗಿದೆ.
ಹಾರ್ಟ್ಮನ್ ಪ್ರಕಾರ (ದೇಶಗಳು ಇತರ ದೇಶಗಳಿಗೆ ಪೂರಕವಾಗುವಂತೆ ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ಪ್ರಕ್ರಿಯೆಗಳ ಅಧ್ಯಯನ ಕ್ಷೇತ್ರವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಹಾನ್ಸ್ ಮಾರ್ಗೆಂತೊ ಪ್ರಕಾರ (ರಾಷ್ಟ್ರಗಳ ನಡುವಿನ ಅಧಿಕಾರದ ಗಳಿಕೆ ಮತ್ತು ಬಳಕೆಗಾಗಿ ಜರುಗುವ ಹೋರಾಟಗಳ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಬರ್ಟನ್ ಪ್ರಕಾರ (ಒಂದಕ್ಕಿಂತ ಹೆಚ್ಚು ರಾಷ್ಟ್ರಗಳನ್ನು ಬಾಧಿಸುವ ಘಟನೆ ಅಥವಾ ಸನ್ನಿವೇಶಗಳ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಪೆಡಲ್ ಫೋರ್ಡ್ ಮತ್ತು ಲಿಂಕನ್ ಪ್ರಕಾರ (ಬದಲಾಗುತ್ತಿರುವ ಅಧಿಕಾರ ಸಂಬಂಧದ ಮಾದರಿಗೊಳಪಟ್ಟ ರಾಷ್ಟ್ರಗಳ ನಡುವಿನ ನೀತಿಗಳನ್ನು ಒಳಗೊಂಡಿರುವ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಸ್ಪ್ರೌಟ್ ಮತ್ತು ಸ್ಪ್ರೌಟ್ ಅಭಿಪ್ರಾಯದಲ್ಲಿ (ಸ್ವತಂತ್ರ ರಾಜಕೀಯ ಸಮುದಾಯಗಳ ನಡುವಿನ ಕೆಲವು ವಿರೋಧಾತ್ಮಕ, ಪ್ರತಿಭಟನಾತ್ಮಕ ಹಾಗೂ ಸಂಘರ್ಷಾತ್ಮಕ ಆಯಾಮದ ಮೂಲಾಂಶಗಳ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಈ ಮೇಲೆ ಪ್ರಸ್ತಾಪಿಸಲಾಗಿರುವ ಚಿಂತಕರ ವ್ಯಾಖ್ಯಾನಗಳಲ್ಲಿ ಅಂತರ್ರಾಷ್ಟ್ರೀಯ ಸಂಬಂಧ ಕುರಿತಂತೆ ಏಕಾಭಿಪ್ರಾಯವಿಲ್ಲದಿರುವುದು ಕಂಡು ಬರುತ್ತದೆ. ಕೆಲವು ಚಿಂತಕರು ರಾಷ್ಟ್ರಗಳ ನಡುವಿನ ಅಧಿಕಾರಯುತ ಸಂಬಂಧಗಳಿಗೆ ಮಾತ್ರ ಅಂತರ್ರಾಷ್ಟ್ರೀಯ ಸಂಬಂಧವನ್ನು ಸೀಮಿತಗೊಳಿಸಿದರೆ ಇತರರು ರಾಷ್ಟ್ರಗಳ ನಡುವಿನ ವೈವಿಧ್ಯಮಯ ಸಂಬಂಧಗಳಿಗೆ ಅದನ್ನು ಅನ್ವಯಿಸಲು ಪ್ರಯತ್ನಿಸಿದ್ದಾರೆ. ಅಂತರ್ರಾಷ್ಟ್ರೀಯ ರಾಜಕೀಯವು ರಾಷ್ಟ್ರಗಳ ನಡುವಿನ ಸಂಕೀರ್ಣ ಮತ್ತು ಚಲನಶೀಲ ಸಂಬಂಧಗಳ ವ್ಯವಸ್ಥೆಯಾಗಿದ್ದು ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಪರಿಕಲ್ಪನೆ. ಹೀಗಾಗಿ ಸರ್ವ ಸಮ್ಮತವಾದ ಅರ್ಥವನ್ನು ಒದಗಿಸುವುದು ಕಷ್ಟಸಾಧ್ಯ. ಒಟ್ಟಾರೆ ಪ್ರತಿಯೊಂದು ರಾಷ್ಟ್ರವು ತನ್ನ ರಾಷ್ಟ್ರೀಯ ಹಿತಾಸಕ್ತಿ ಸಾಧನೆಯ ಗುರಿಯೊಡನೆ ಅನ್ಯ ರಾಷ್ಟ್ರಗಳೊಡನೆ ಹೊಂದಿರುವ ಸಂಬಂಧಗಳನ್ನು ಅಭ್ಯಸಿಸುವುದನ್ನು ಅಂತರ್ರಾಷ್ಟ್ರೀಯ ಸಂಬಂಧಗಳು ಪ್ರತಿನಿಧಿಸುತ್ತವೆ.
[B.] ಅಂತರ್ರಾಷ್ಟ್ರೀಯ ಸಂಬಂಧಗಳ ಸ್ವರೂಪ [Nature of International Relations]:
ಆರಂಭದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧ ತೀರಾ ಸೀಮಿತವಾಗಿತ್ತು. ಮಾನವರ ಚಟುವಟಿಕೆಗಳಲ್ಲಿ ಬದಲಾವಣೆಯಾದಂತೆ ಕಾಲಾನುಕ್ರಮದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿಯೂ ಬದಲಾವಣೆಗಳು ಕಂಡು ಬರತೊಡಗಿದವು. ಇದರೊಡನೆ ಆಧುನಿಕ ಯುಗದಲ್ಲಿನ ರಾಷ್ಟ್ರ ರಾಜ್ಯಗಳ ಉದಯ, ತಾಂತ್ರಿಕ ಬೆಳವಣಿಗೆ, ಅಣ್ವಸ್ತ್ರಗಳ ಸಂಶೋಧನೆ, ರಾಷ್ಟ್ರಗಳ ಬಹು ಧ್ರುವೀಕರಣ, ರಾಷ್ಟ್ರೇತರ ಪಾತ್ರಧಾರಿಗಳ ಪ್ರಭಾವ, ಜಾಗತಿಕ ಸವಾಲುಗಳಿಂದ ಅಂತರ್ರಾಷ್ಟ್ರೀಯ ಸಂಬಂಧಗಳು ಬದಲಾವಣೆಗೊಳ್ಳುತ್ತಾ ಬಂದಿವೆ. ಚಲನಶೀಲ ಗುಣವುಳ್ಳ ಅಂತರ್ರಾಷ್ಟ್ರೀಯ ಸಂಬಂಧಗಳ ಸ್ವರೂಪವನ್ನು ಕಂಡುಕೊಳ್ಳುವುದು ಅತ್ಯಂತ ಸವಾಲಿನ ಸಂಗತಿ. ಆದ್ದಾಗ್ಯೂ ಅಂತರ್ರಾಷ್ಟ್ರೀಯ ಸಂಬಂಧಗಳ ಈ ಕೆಳಗಿನ ಪ್ರಮುಖ ಲಕ್ಷಣಗಳ ಬೆಳಕಿನಲ್ಲಿ ಅದರ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸೋಣ.
1. ಚಲನಶೀಲ ಜಾಗತಿಕ ರಾಜಕೀಯದ ಅಧ್ಯಯನ: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ಕೇಂದ್ರಬಿಂದುವಾದ ರಾಷ್ಟ್ರಗಳ ನಡುವಿನ ಸಂಬಂಧಗಳು ಸ್ಥಿರವಾಗಿರದೇ ಚಲನಶೀಲ ಗುಣವನ್ನು ಹೊಂದಿರುತ್ತವೆ. ನಿರ್ದಿಷ್ಟ ರಾಷ್ಟ್ರಗಳ ಸಂಬಂಧವು ಕಾರಣಾಂತರದಿಂದ ಸಂಘರ್ಷದ ಬದಲು ಶಾಂತಿಯುತ ಅಥವಾ ಶಾಂತಿಯ ಬದಲು ಸಂಘರ್ಷಯುತ ಸಂಬಂಧಗಳಾಗಿ ಪರಿವರ್ತನೆಗೊಳ್ಳುತ್ತಿರುತ್ತವೆ. ಇದರೊಡನೆ ಆರಂಭದಲ್ಲಿನ ರಾಷ್ಟ್ರೀಯ ಪಾತ್ರಧಾರಿಗಳೊಡನೆ ಇತ್ತೀಚೆಗೆ ವೈವಿಧ್ಯಮಯ ರಾಷ್ಟ್ರೇತರ ಪಾತ್ರಧಾರಿಗಳು ರಾಷ್ಟ್ರಗಳ ನಡುವಿನ ಸಂಬಂಧವನ್ನು ಪ್ರಭಾವಿಸುತ್ತಿವೆ. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಚಲನಶೀಲ ಸ್ವರೂಪವನ್ನು ಮೈಗೂಡಿಸಿಕೊಂಡಿದೆ.
2. ಬಹುಶಾಸ್ತ್ರೀಯ ಅಧ್ಯಯನಕ್ಕೆ ಆಸ್ಪದ: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ನಡುವಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಂಬಂಧಗಳನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಯುನೆಸ್ಕೊ ಸಂಸ್ಥೆಯು 1998 ರ ತನ್ನ ವರದಿಯಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳನ್ನು ರಾಷ್ಟ್ರಗಳ ನಡುವಿನ ವೈವಿಧ್ಯಮಯ ಸಂಬಂಧಗಳನ್ನು ರಾಜಕೀಯವಾಗಿ ಅಭ್ಯಸಿಸುವ ವಿಷಯವೆಂದು ಪ್ರತಿಪಾದಿಸಿತ್ತು. ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನಕಾರರು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಸಮರ್ಪಕವಾಗಿ ಅಭ್ಯಸಿಸಲು ಇತಿಹಾಸ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರದಂತಹ ಇತರ ಶಾಸ್ತ್ರಗಳ ತಿಳುವಳಿಕೆ ಹೊಂದಿರಬೇಕಾದದ್ದು ಅಗತ್ಯವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ, ಸಂಬಂಧಗಳು ಎಂಬ ವಿಷಯವು ಬಹುಶಾಸ್ತ್ರೀಯ ಸ್ವರೂಪವುಳ್ಳ ವಿಷಯವೆಂಬುದು ಸ್ಪಷ್ಟವಾಗುತ್ತದೆ.
3. ರಾಷ್ಟ್ರಗಳ ಹಿತಾಸಕ್ತಿ ಮತ್ತು ಶಕ್ತಿಗೆ ಮಹತ್ವ: ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವುದು ಪ್ರತಿಯೊಂದು ದೇಶದ ಗುರಿಯಾಗಿರುತ್ತದೆ. ಹಿತಾಸಕ್ತಿಗಳ ಈಡೇರಿಕೆಗೆ ತನ್ನ ಶಕ್ತಿಯನ್ನು ಆಯಾ ರಾಷ್ಟ್ರಗಳು ಅಂತರ್ರಾಷ್ಟ್ರೀಯ ಸಂಬಂಧಗಳ ವೇಳೆಯಲ್ಲಿ ಬಳಸಿಕೊಳ್ಳುತ್ತವೆ. ಆದ್ದರಿಂದ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ಹಿತಾಸಕ್ತಿ ಮತ್ತು ಶಕ್ತಿಗೆ ಅಧಿಕ ಪ್ರಾಶಸ್ತ್ಯ ನೀಡುವ ವಿಷಯವಾಗಿ ಪರಿಗಣಿಸಲ್ಪಟ್ಟಿದೆ.
4. ಜಾಗತಿಕ ಸವಾಲುಗಳಿಗೆ ಆಧ್ಯತೆ: ಅಂತರ್ರಾಷ್ಟ್ರೀಯ ಸಂಬಂಧಗಳು ರಾಷ್ಟ್ರೀಯ ಸವಾಲುಗಳಿಗಿಂತ ಜಾಗತಿಕ ಸವಾಲುಗಳಿಗೆ ಮಹತ್ವ ನೀಡುತ್ತವೆ. ತಮ್ಮನ್ನು ಬಾಧಿಸುವ ಸಮಾನ ಸವಾಲುಗಳನ್ನು ರಾಷ್ಟ್ರಗಳ ನಡುವಿನ ವಿವಿಧ ಸಂಬಂಧಗಳು ಆಧರಿಸಿರುತ್ತವೆ. ಆದ್ದರಿಂದಲೇ ಗೊಲ್ಡ್ಸ್ಟೈನ್ ಮತ್ತು ಪೆವ್ಹೌಸ್ ತಮ್ಮ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಕೃತಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ಜಾಗತಿಕ ಸವಾಲುಗಳ ನಡುವೆ ಸಮತೋಲನ ತರುವುದೇ ಅಂತರ್ರಾಷ್ಟ್ರೀಯ ಸಂಬಂಧಗಳ ಉದ್ದೇಶವೆಂದು ಅಭಿಪ್ರಾಯಪಟ್ಟಿದ್ದಾರೆ. ಉದಾ: ಜಾಗತಿಕ ಸವಾಲಾಗಿರುವ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ರಾಷ್ಟ್ರಗಳು ಸಮ್ಮತಿಸಿದರೂ ತಮ್ಮ ಹಿತಾಸಕ್ತಿಗಾಗಿ ಭಯೋತ್ಪಾದನೆಯನ್ನು ಬೆಂಬಲಿಸಲು ಮುಂದಾಗುವ ನಡುವೆ ಸಮತೋಲನ ಸಾಧಿಸಲು ಅಂತರ್ರಾಷ್ಟ್ರೀಯ ಸಂಬಂಧಗಳು ನೆರವಾಗುವುದು.
5. ವಿಶ್ಲೇಷಣಾತ್ಮಕ ಮತ್ತು ಪ್ರಾಯೋಗಿಕ ವಿಧಾನಗಳಿಗೆ ಒಲವು: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಹಲವಾರು ಸಿದ್ಧಾಂತಗಳಿಂದ ಕೂಡಿರುವ ಅಧ್ಯಯನ ವಿಷಯವೆನಿಸಿದೆ. ಈ ಪೈಕಿ ಆದರ್ಶವಾದ ಮತ್ತು ನವ ಉದಾರವಾದ ಸಿದ್ಧಾಂತಗಳು ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಕುರಿತಾದ ವಿಶ್ಲೇಷಣಾತ್ಮಕ ಸಿದ್ಧಾಂತಗಳೆನಿಸಿದರೆ ವಾಸ್ತವಿಕ ಮತ್ತು ನವ ವಾಸ್ತವಿಕ ಸಿದ್ಧಾಂತಗಳು ಪ್ರಾಯೋಗಿಕ ವಿಧಾನವನ್ನು ಆಧರಿಸಿವೆ.
ಈ ಮೇಲೆ ಪ್ರಸ್ತಾಪಿಸಲಾದ ಅಂತರ್ರಾಷ್ಟ್ರೀಯ ಸಂಬಂಧಗಳ ಲಕ್ಷಣಗಳ ನೆರವಿನಿಂದ ಅದರ ಸ್ವರೂಪವನ್ನು ಸೂಚ್ಯವಾಗಿ ಮನವರಿಕೆ ಮಾಡಿಕೊಳ್ಳಬಹುದಾಗಿದೆ. ರಾಷ್ಟ್ರಗಳ ನಡುವೆ ಅಧಿಕಾರಕ್ಕಾಗಿ ಜರುಗುವ ನಿರಂತರ ಹೋರಾಟವೇ ಅಂತರ್ರಾಷ್ಟ್ರೀಯ ಸಂಬಂಧಗಳ ತಿರುಳಾಗಿದ್ದು ಅದರ ಸ್ವರೂಪದಿನದಿಂದ ದಿನಕ್ಕೆ ಬದಲಾಗುತ್ತಾ ಬಂದಿದೆ. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ವಿಷಯದ ಸ್ಪಷ್ಟ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳುವುದು ಕಷ್ಟಕರ ವಿಷಯವೆನಿಸಿದೆ.
[C.] ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿ [Scope of International Relations]:
ವ್ಯಾಪ್ತಿ ಎಂದರೆ ಪದಶಃ ಗಡಿ, ಸೀಮೆ, ಎಲ್ಲೆ ಎಂದಾಗುತ್ತದೆ. ಒಂದು ವಿಷಯದ ಅಧ್ಯಯನವು ಒಳಗೊಂಡಿರುವ ವಿಷಯ ವಸ್ತುವನ್ನು ಸೂಚಿಸಲು ವ್ಯಾಪ್ತಿ ಎಂಬ ಪದವನ್ನು ಬಳಸಲಾಗುತ್ತದೆ. ನಿರ್ದಿಷ್ಟ ವಿಷಯವೊಂದರ ಜ್ಙಾನದ ಗಡಿಯನ್ನು ಆ ವಿಷಯದ ವ್ಯಾಪ್ತಿಯು ನಿರ್ಧರಿಸುತ್ತದೆ. ಹೊಸದಾಗಿ ಇತ್ತೀಚೆಗೆ ಸಮಾಜ ವಿಜ್ಞಾನಗಳ ಕುಟುಂಬವನ್ನು ಸೇರಿರುವ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ವಿಷಯವು ತನ್ನದೇಯಾದ ಅಧ್ಯಯನ ವ್ಯಾಪ್ತಿಯನ್ನು ಹೊಂದಿದೆ. ಬೆಳವಣಿಗೆ ಹೊಂದುತ್ತಿರುವ ವಿಷಯವಾದ್ದರಿಂದ ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯು ಚಲನಶೀಲವಾಗಿದ್ದು ಸ್ಥಿರವಾದ ಅಧ್ಯಯನ ವ್ಯಾಪ್ತಿಯನ್ನು ಹೊಂದಲು ಸಾಧ್ಯವಾಗಿಲ್ಲ. 1954 ರಲ್ಲಿ ಯುನೆಸ್ಕೋ ಸಂಸ್ಥೆ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವನ್ನು ಸ್ವತಂತ್ರ ಅಧ್ಯಯನ ವಿಷಯವನ್ನಾಗಿ ಪರಿಗಣಿಸಿದ ಬಳಿಕ ಅನೇಕ ಚಿಂತಕರು ಇದರ ವ್ಯಾಪ್ತಿಯನ್ನು ಕುರಿತಂತೆ ಭಿನ್ನ ವಿಚಾರಗಳನ್ನು ಪ್ರತಿಪಾದಿಸಿದರು. ಉದಾ: ವಿನ್ಸಂಟ್ ಬೇಕರ್ ಏಳು ಕ್ಷೇತ್ರಗಳನ್ನು ಮತ್ತು ಎಫ್. ಎಸ್. ಡನ್ನ್ ಐದು ಕ್ಷೇತ್ರಗಳನ್ನು ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನ ವ್ಯಾಪ್ತಿ ಒಳಗೊಂಡಿದೆ ಎಂಬುದಾಗಿ ಪ್ರತಿಪಾದಿಸಿದುದು. ಕಾಲಾನುಕ್ರಮದಲ್ಲಿ ಬಹುಶಾಸ್ತ್ರಿಯ ಸ್ವರೂಪವನ್ನು ಮೈಗೂಡಿಸಿಕೊಂಡು ಬೆಳವಣಿಗೆ ಹೊಂದುತ್ತಿರುವ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಅಧ್ಯಯನ ವಿಷಯವು ಪ್ರಸ್ತುತ ತನ್ನ ವ್ಯಾಪ್ತಿಯಲ್ಲಿ ಈ ಕೆಳಗಿನ ಅಂಶಗಳ ಅಧ್ಯಯನವನ್ನು ಹೊಂದಿದೆ.
1. ರಾಷ್ಟ್ರ ರಾಜ್ಯಗಳ ವ್ಯವಸ್ಥೆ: ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ಜಗತ್ತಿನ ರಾಷ್ಟ್ರ ರಾಜ್ಯಗಳೇ ಪ್ರಧಾನ ಪಾತ್ರಧಾರಿಗಳು. ಜಗತ್ತಿನ ಪ್ರತಿ ರಾಷ್ಟ್ರ ರಾಜ್ಯವು ಭಿನ್ನ ಭೌಗೋಳಿಕತೆ, ಜನಸಂಖ್ಯೆ, ಸಂಪನ್ಮೂಲಗಳು, ನಾಯಕತ್ವ ಹೊಂದಿದ್ದು ತಮ್ಮ ಅನುಕೂಲಕ್ಕಾಗಿ ಅವುಗಳ ನೆರವಿನಿಂದ ಇತರ ರಾಷ್ಟ್ರ ರಾಜ್ಯಗಳೊಡನೆ ಸಂಬಂಧವೇರ್ಪಡಿಸಿಕೊಳ್ಳಲು ಮುಂದಾಗುತ್ತವೆ. ಫಲವಾಗಿ ರಾಷ್ಟ್ರ ರಾಜ್ಯಗಳ ನಡುವೆ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಂಬಂಧಗಳು ರೂಪುಗೊಳ್ಳುತ್ತವೆ. ಇಂತಹ ರಾಷ್ಟ್ರ ರಾಜ್ಯಗಳ ನಡುವಿನ ಸಂಬಂಧಗಳ ಜಾಲವು ಸಹಜವಾಗಿ ಅಂತರ್ರಾಷ್ಟ್ರೀಯ ರಾಜಕೀಯ ಅಧ್ಯಯನದ ವ್ಯಾಪ್ತಿಗೊಳಪಡುತ್ತವೆ.
2. ರಾಷ್ಟ್ರೀಯ ಹಿತಾಸಕ್ತಿಗಳು: ವ್ಯಕ್ತಿಯಂತೆ ಜಗತ್ತಿನ ಪ್ರತಿಯೊಂದು ರಾಷ್ಟ್ರ ತನ್ನದೇಯಾದ ಗುರಿಗಳನ್ನು ಮೈಗೂಡಿಸಿಕೊಂಡಿರುತ್ತವೆ. ರಾಷ್ಟ್ರಗಳ ಗುರಿಗಳ ಸಾಧನೆಯಲ್ಲಿ ಸಹಜವಾಗಿ ಅವುಗಳ ಹಿತಾಸಕ್ತಿ ಕಂಡು ಬರುತ್ತದೆ. ತನ್ನ ಾರ್ಥಿಕ, ಸೈನಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮುಂತಾದ ಹಿತಾಸಕ್ತಿಗಳ ರಕ್ಷಣೆಗೆ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ಶಾಂತಿಯುತ ಅಥವಾ ಸಂಘರ್ಷಮಯ ಸಂಬಂಧಗಳನ್ನು ಹೊಂದಿರುತ್ತವೆ. ಉದಾ: ತಮ್ಮ ಸೈದ್ಧಾಂತಿಕ ಹಿತಾಸಕ್ತಿಗಾಗಿ ಅಮೇರಿಕಾ ಮತ್ತು ರಷ್ಯಾದ ನಡುವೆ ಸಂಘರ್ಷಮಯ ಸಂಬಂಧ ಕಂಡು ಬರುತ್ತಿರುವುದು. ಇಂತಹ ರಾಷ್ಟ್ರಗಳ ಭಿನ್ನ ಹಿತಾಸಕ್ತಿಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ವ್ಯಾಪ್ತಿಯಲ್ಲಿ ಕಂಡು ಬರುತ್ತವೆ.
3. ರಾಷ್ಟ್ರೀಯ ಶಕ್ತಿ: ರಾಷ್ಟ್ರವೊಂದು ತನ್ನ ಹಿತಾಸಕ್ತಿಗೆ ಪೂರಕವಾಗಿ ಇತರ ರಾಷ್ಟ್ರಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ರಾಷ್ಟ್ರ ಶಕ್ತಿ ಎನ್ನಲಾಗುತ್ತದೆ. ಪರಸ್ಪರ ಸಂಬಂಧಗಳನ್ನು ಹೊಂದಲು ಬಯಸುವ ರಾಷ್ಟ್ರಗಳ ಪ್ರಧಾನ ಉದ್ದೇಶ ತಮ್ಮ ರಾಷ್ಟ್ರೀಯ ಶಕ್ತಿಯನ್ನು ಸುಧಾರಿಸಿಕೊಳ್ಳುವುದೇ ಆಗಿರುತ್ತದೆ. ವಾಸ್ತವದಲ್ಲಿ, ಅಂತರ್ರಾಷ್ಟ್ರೀಯ ಸಂಬಂಧಗಳು ರಾಷ್ಟ್ರಗಳ ನಡುವಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಡೆಸುವ ಹೋರಾಟವೆಂದೇ ಪರಿಗಣಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಗಳ ರಾಷ್ಟ್ರೀಯ ಶಕ್ತಿಯ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ಪ್ರಧಾನ ವಸ್ತು ವಿಷಯವೆನಿಸಿದೆ.
4. ವಿದೇಶಾಂಗ ನೀತಿ: ಇತರ ರಾಷ್ಟ್ರ ಅಥವಾ ರಾಷ್ಟ್ರಗಳೊಡನೆ ವ್ಯವಹರಿಸುವಾಗ ರಾಷ್ಟ್ರವೊಂದರ ವರ್ತನೆಯನ್ನು ನಿರ್ದೇಶಿಸುವ ಅಥವಾ ನಿಯಂತ್ರಿಸುವ ತತ್ವಗಳನ್ನು ವಿದೇಶಾಂಗ ನೀತಿ ಎನ್ನಲಾಗುತ್ತದೆ. ರಾಷ್ಟ್ರೀಯ ಶಕ್ತಿಯನ್ನು ಆಧರಿಸಿ ರಚನೆಗೊಳ್ಳುವ ರಾಷ್ಟ್ರಗಳ ವಿದೇಶಾಂಗ ನೀತಿಯು ಆಯಾ ರಾಷ್ಟ್ರಗಳ ಹಿತಾಸಕ್ತಿಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುತ್ತದೆ. ವಿದೇಶಾಂಗ ನೀತಿಯ ಅಧ್ಯಯನವೊಂದರಿಂದಲೇ ಒಂದು ರಾಷ್ಟ್ರ ಇತರ ರಾಷ್ಟ್ರಗಳೊಡನೆ ಹೊಂದಿರುವ ಸಂಬಂಧಗಳ ಸ್ವರೂಪವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ನೀತಿಯ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಅವಿಭಾಜ್ಯ ಅಂಶವೆನಿಸಿದ್ದು ಅದರ ವ್ಯಾಪ್ತಿಯಲ್ಲಿ ಸ್ಥಾನ ಗಳಿಸಿಕೊಂಡಿದೆ.
5. ಆರ್ಥಿಕ ಸಾಧನಗಳು: ರಾಷ್ಟ್ರಗಳ ನಡುವಿನ ವೈವಿಧ್ಯಮಯ ಸಂಬಂಧಗಳ ಪೈಕಿ ಆರ್ಥಿಕ ಸಂಬಂಧಗಳು ಅಗ್ರ ಸ್ಥಾನ ಪಡೆದಿರುತ್ತವೆ. ರಾಷ್ಟ್ರಗಳ ನಡುವಣ ರಾಜಕೀಯ ಸಂಬಂಧಗಳನ್ನು ಆರ್ಥಿಕತೆಯು ಸ್ವಾಭಾವಿಕವಾಗಿ ನಿರ್ದೇಶಿಸುತ್ತವೆ. ವಿದೇಶಿ ನೆರವು, ಸಾಲ, ವ್ಯಾಪಾರ ಒಡಂಬಡಿಕೆಯಂತಹ ಆರ್ಥಿಕ ಸಾಧನಗಳು ಸಾಮಾನ್ಯವಾಗಿ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಪ್ರಭಾವಿಸುತ್ತವೆ. ಉದಾ: ಚೀನಾ ಮತ್ತು ಪಾಕಿಸ್ತಾನದ ಸಂಬಂಧದಲ್ಲಿ ಆರ್ಥಿಕ ಸಾಧನಗಳ ಪ್ರಭಾವವಿರುವುದು. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಸ್ಥಾನ ಪಡೆದಿರುವ ಆರ್ಥಿಕ ಸಂಬಂಧಗಳನ್ನು ತನ್ನ ವಸ್ತು ವಿಷಯವನ್ನಾಗಿ ಹೊಂದುವಂತಾಗಿದೆ.
6. ಜಾಗತಿಕ ಮತ್ತು ಪ್ರಾದೇಶಿಕ ಸಂಸ್ಥೆಗಳು: ಸಮಕಾಲೀನ ಜಗತ್ತಿನಲ್ಲಿ ಅಂದರೆ ಎರಡನೇ ಮಹಾ ಯುದ್ಧದ ನಂತರದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳಿಗೆ ಜಾಗತಿಕ ಮತ್ತು ಪ್ರಾದೇಶಿಕ ಸಂಸ್ಥೆಗಳು ಸಾಂಸ್ಥಿಕ ಆಯಾಮವನ್ನು ಒದಗಿಸಲು ಯಶಸ್ವಿಯಾಗಿವೆ. ಉದಾ: ವಿಶ್ವ ಸಂಸ್ಥೆ ಹಾಗೂ ಅದರ ಇತರ ಸಂಸ್ಥೆಗಳು ಜಾಗತಿಕ ಸ್ವರೂಪದ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಸಹಕಾರ ಸಂಸ್ಥೆ, ಆಗ್ನೇಯ ಏಷ್ಯಾದ ರಾಷ್ಟ್ರಗಳ ಸಂಘಟನೆ, ಪೆಟ್ರೋಲಿಯಂ ಉತ್ಪಾದಕ ರಾಷ್ಟ್ರಗಳ ಸಂಸ್ಥೆ ಮುಂತಾದವು ಪ್ರಾದೇಶಿಕ ಸ್ವರೂಪದ ರಾಷ್ಟ್ರಗಳ ನಡುವಣ ಸಂಬಂಧಗಳನ್ನು ನಿಯಂತ್ರಿಸುತ್ತಿರುವುದು. ವಿವಿಧ ಸಂಸ್ಥೆಗಳೊಡನೆ ಕೆಲವು ವ್ಯಾಪಾರಿ ವ್ಯವಸ್ಥೆಗಳು ಮತ್ತು ಸಮಾನ ಮನಸ್ಕ ರಾಷ್ಟ್ರಗಳ ಗುಂಪುಗಳು ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಪ್ರಭಾವಿಸುತ್ತಿವೆ. ಉದಾ: ಜಿ -8, ಜಿ - 20, ಜಿ – 77 ಇತ್ಯಾದಿ. ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಪ್ರಭಾವಿಸುತ್ತಿರುವ ಈ ಬಗೆಯ ಸಾಂಸ್ಥಿಕ ವ್ಯವಸ್ಥೆಗಳು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಗೆ ಬರುತ್ತವೆ.
7. ರಾಷ್ಟ್ರೇತರ ಪಾತ್ರಧಾರಿಗಳು: ಸಮಕಾಲೀನ ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ರಾಷ್ಟ್ರೀಯ ಪಾತ್ರಧಾರಿಗಳೊಡನೆ ಅಂದರೆ ಸರ್ಕಾರದೊಡನೆ ರಾಷ್ಟ್ರೇತರ ಪಾತ್ರಧಾರಿಗಳೂ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಿವೆ. ಸ್ವಯಂ ಸೇವಾ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು, ಮಾನವ ಹಕ್ಕುಗಳ ಹೋರಾಟ ಸಂಸ್ಥೆಗಳು, ಶಾಂತಿ ಚಳುವಳಿಗಳು ಪ್ರಧಾನ ರಾಷ್ಟ್ರೇತರ ಪಾತ್ರಧಾರಿಗಳಾಗಿದ್ದು ನಾನಾ ಕ್ಷೇತ್ರದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಪ್ರಭಾವಿಸುತ್ತಿವೆ. ಹೀಗಾಗಿ ರಾಷ್ಟ್ರೇತರ ಪಾತ್ರಧಾರಿಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಗೆ ಒಳಪಟ್ಟಿದೆ.
8. ಸಿದ್ಧಾಂತಗಳು:
9. ಜಾಗತಿಕ ಸವಾಲುಗಳು:
10. ವಿವಿಧ ಪರಿಕಲ್ಪನೆಗಳು:
ಈ ಮೇಲೆ ಪ್ರಸ್ತಾಪಿಸಲಾಗಿರುವ ಅಂಶಗಳು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯಲ್ಲಿನ ಪ್ರಧಾನ ವಸ್ತು ವಿಷಯವನ್ನು ಮನವರಿಕೆ ಮಾಡಿಕೊಡುತ್ತವೆ. ಗಮನಾರ್ಹ ಅಂಶವೇನೆಂದರೆ, ಅಂತರ್ರಾಷ್ಟ್ರೀಯ ಸಂಬಂಧಗಳು ಚಲನಶೀಲ ಸ್ವರೂಪ ಪಡೆದಿದ್ದು ಬೆಳವಣಿಗೆ ಹೊಂದುತ್ತಲೇ ಸಾಗಿವೆ. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯನ್ನು ಸ್ಪಷ್ಟವಾಗಿ ವಿವರಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ.
ಮಾದರಿ ಪ್ರಶ್ನೆಗಳು [Model Questions]:
[A.] ಎರಡು ಅಂಕದ ಪ್ರಶ್ನೆಗಳು:
1. ರಾಷ್ಟ್ರಗಳಿಗೆ ಅಂತರ್ರಾಷ್ಟ್ರೀಯ ಸಂಬಂಧಗಳ ಅಗತ್ಯವನ್ನು ಬರೆಯಿರಿ.
2. ಅಂತರ್ರಾಷ್ಟ್ರೀಯ ಸಂಬಂಧ ಎಂದರೇನು?
3. ಅಂತರ್ರಾಷ್ಟ್ರೀಯ ಸಂಬಂಧವನ್ನು ವ್ಯಾಖ್ಯಾನಿಸಿರಿ.
4. ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಪದಕ್ಕೆ ಸಮಾನವಾಗಿ ಬಳಸಲಾಗುವ ಪದಗಳನ್ನು ಹೆಸರಿಸಿರಿ.
5. ಅಂತರ್ರಾಷ್ಟ್ರೀಯ ರಾಜಕೀಯ ಮತ್ತು ಅಂತರ್ರಾಷ್ಟ್ರೀಯ ಸಂಬಂಧಗಳ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ.
6. ಅಂತರ್ರಾಷ್ಟ್ರೀಯ ಸಂಬಂಧಗಳ ಬದಲಾವಣೆಗೆ ಪ್ರಭಾವ ಬೀರುವ ನಾಲ್ಕು ಅಂಶಗಳನ್ನು ತಿಳಿಸಿರಿ.
7. ಅಂತರ್ರಾಷ್ಟ್ರೀಯ ಸಂಬಂಧಗಳ ಮೂರು ಲಕ್ಷಣಗಳನ್ನು ಬರೆಯಿರಿ.
8. ವ್ಯಾಪ್ತಿ ಎಂದರೇನು?
9. ರಾಷ್ಟ್ರೀಯ ಶಕ್ತಿಯ ಅರ್ಥವನ್ನು ಬರೆಯಿರಿ.
10. ವಿದೇಶಾಂಗ ನೀತಿ ಎಂದರೇನು?
11. ಯಾವುದಾದರೂ ಮೂರು ಪ್ರಾದೇಶಿಕ ಸಂಘಟನೆಗಳನ್ನು ಹೆಸರಿಸಿರಿ.
12. ಯಾವುದಾದರೂ ಮೂರು ರಾಷ್ಟ್ರೇತರ ಪಾತ್ರಧಾರಿಗಳನ್ನು ಬರೆಯಿರಿ.
13. ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ಪ್ರಧಾನ ಪರಿಕಲ್ಪನೆಗಳನ್ನು ತಿಳಿಸಿರಿ.
[B.] ಐದು ಅಂಕದ ಪ್ರಶ್ನೆಗಳು:
1. ಅಂತರ್ರಾಷ್ಟ್ರೀಯ ರಾಜಕೀಯ ಮತ್ತು ಸಂಬಂಧಗಳನ್ನು ಕುರಿತು ಟಿಪ್ಪಣಿ ಬರೆಯಿರಿ.
2. ಅಂತರ್ರಾಷ್ಟ್ರೀಯ ಸಂಬಂಧಗಳ ಸ್ವರೂಪವನ್ನು ಪರಿಶೀಲಿಸಿರಿ.
[C.] ಹತ್ತು ಅಂಕದ ಪ್ರಶ್ನೆಗಳು:
1. ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯನ್ನು ವಿವರಿಸಿರಿ.
ಅಧ್ಯಾಯ 1: ಅಂತರ್ರಾಷ್ಟ್ರೀಯ ರಾಜಕೀಯ ಮತ್ತು ಸಂಬಂಧಗಳು [International Politics and Relations]:
ಪ್ರಸ್ತಾವನೆ [Introduction]: ಅರಿಸ್ಟಾಟಲ್ ಅಭಿಪ್ರಾಯಪಟ್ಟಂತೆ ಮಾನವ ಸ್ವಭಾವತಃ ಸಂಗ ಜೀವಿ. ಸಂಗ ಜೀವಿಯಾದ ಮಾನವ ಒಂಟಿಯಾಗಿ ಬಾಳಲು ಸಾಧ್ಯವಾಗಲಿಲ್ಲ. ತನ್ನ ದೈನಂದಿನ ಮೂಲಭೂತ, ಅಗತ್ಯಗಳನ್ನು ಪೂರೈಸಿಕೊಳ್ಳಲು ಆತ ಇತರ ಮಾನವರನ್ನು ಅನಿವಾರ್ಯವಾಗಿ ಅವಲಂಬಿಸಬೇಕಾಯಿದ್ದು ಸಹಜವಾಗಿ ಮಾನವರ ನಡುವೆ ಸಂಬಂಧಗಳು ಮೂಡಿದವು. ಇದರೊಡನೆ ಭಾವನಾ ಜೀವಿಯಾದ ಮಾನವ ತನ್ನ ಸುಖ ಮತ್ತು ದುಖಃಗಳನ್ನು ಹಂಚಿಕೊಳ್ಳಲು ಇತರ ಮಾನವರೊಡನೆ ನಿರಂತರವಾಗಿ ಸಂಬಂಧ ಮುಂದುವರಿಸಿದನು. ಹೀಗೆ ಸ್ವಾವಲಂಬಿಯಲ್ಲದ ಮಾನವರು ತಮ್ಮ ಜೀವನದ ಪರಿಪೂರ್ಣತೆಗೆ ಕಾಲಾನುಕ್ರಮದಲ್ಲಿ ಇತರರೊಡನೆ ವೈವಿಧ್ಯಮಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕಾಯಿತು. ಫಲವಾಗಿ ಮಾನವ ಸಮಾಜವನ್ನು ಸಮಾಜಶಾಸ್ತ್ರಜ್ಞರು ಸಂಬಂಧಗಳ ಬಲೆ ಎಂದು ಪರಿಗಣಿಸುವಂತಾಯಿತು.
ಮಾನವನಂತೆ ಮಾನವ ನಿರ್ಮಿತ ರಾಜಕೀಯ ಸಂಸ್ಥೆಯಾಗಿರುವ ರಾಷ್ಟ್ರಗಳೂ ಒಂಟಿಯಾಗಿರಲು ಸಾಧ್ಯವಿಲ್ಲ. ವ್ಯಕ್ತಿಯಂತೆ ಪ್ರತಿ ರಾಷ್ಟ್ರವು ತನ್ನ ವಿವಿಧ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸ್ವಾವಲಂಬಿಯಾಗಿರದ ಕಾರಣಕ್ಕೆ ಸಹಜವಾಗಿ ಜಗತ್ತಿನ ಇತರ ರಾಷ್ಟ್ರಗಳೊಡನೆ ವಿವಿಧ ಸಂಬಂಧಗಳನ್ನು ಮೈಗೂಡಿಸಿಕೊಂಡಿರುತ್ತವೆ. ಗಮನಾರ್ಹ ಅಂಶವೇನೆಂದರೆ ಅಂತರ್ರಾಷ್ಟ್ರೀಯ ಸಂಬಂಧಗಳು ಪರಸ್ಪರ ಮಾನವರ ನಡುವಿನ ಸಂಬಂಧಗಳಾಗಿರದೇ ಮಾನವ ಸಮುದಾಯವನ್ನು ಪ್ರತಿನಿಧಿಸುವ ರಾಷ್ಟ್ರವೆಂಬ ರಾಜಕೀಯ ಸಂಸ್ಥೆಗಳ ನಡುವಿನ ಸಂಬಂಧಗಳಾಗಿವೆ. ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಆರಂಭದಲ್ಲಿ ರಾಜ್ಯಶಾಸ್ತ್ರದ ಭಾಗವಾಗಿ ಜರುಗುತ್ತಿತ್ತು. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಅಂತರ್ರಾಷ್ಟ್ರೀಯ ರಾಜಕೀಯವೆಂಬ ಶಿರ್ಷಿಕೆಯಿಂದಲೂ ಗುರುತಿಸಲಾಗುತ್ತದೆ. ಕಾಲಾನುಕ್ರಮದಲ್ಲಿ ಸ್ವತಂತ್ರ ಅಧ್ಯಯನ ವಿಷಯವಾಗಿ ಬೆಳೆದು ಬಂದಿರುವ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ನೂತನ ಸಮಾಜ ವಿಜ್ಞಾನವಾಗಿ ಪ್ರಸ್ತುತ ಪರಿಗಣಿಸಲ್ಪಟ್ಟಿದೆ. ಪ್ರಸಕ್ತ ಅಧ್ಯಾಯದಲ್ಲಿ ಸಮಾನಾರ್ಥದಲ್ಲಿ ಬಳಸಲ್ಪಡುವ ಅಂತರ್ರಾಷ್ಟ್ರೀಯ ರಾಜಕೀಯ ಅಥವಾ ಅಂತರ್ರಾಷ್ಟ್ರೀಯ ಸಂಬಂಧಗಳ ಅರ್ಥ, ಸ್ವರೂಪ ಮತ್ತು ವ್ಯಾಪ್ತಿಯನ್ನು ಕುರಿತು ಬೆಳಕು ಚೆಲ್ಲಲಾಗಿದೆ.
[A.] ಅಂತರ್ರಾಷ್ಟ್ರೀಯ ಸಂಬಂಧಗಳ ಅರ್ಥ [Meaning of International Relations]:
ಸರಳಾರ್ಥದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಅಧ್ಯಯನ ಮಾಡುವ ಶಾಸ್ತ್ರವನ್ನು ಅಂತರ್ರಾಷ್ಟ್ರೀಯ ಸಂಬಂಧಗಳು ಎನ್ನಲಾಗುತ್ತದೆ. ವಿಶಾಲಾರ್ಥದಲ್ಲಿ ಅಂತರ್ರಾಷ್ಟ್ರೀಯ ವ್ಯವಸ್ಥೆಯಲ್ಲಿನ ರಾಷ್ಟ್ರೀಯ ಮತ್ತು ರಾಷ್ಟ್ರೇತರ ಪಾತ್ರಧಾರಿಗಳು ತಮ್ಮ ನಡುವಿನ ವೈವಿಧ್ಯಮಯ ಸಂಬಂಧಗಳ ನಿರ್ವಹಣೆಯಲ್ಲಿ ತೋರುವ ವರ್ತನೆಗಳನ್ನು ಅಧ್ಯಯನ ನಡೆಸುವುದೇ ಅಂತರ್ರಾಷ್ಟ್ರೀಯ ಸಂಬಂಧಗಳು ಎನಿಸಿಕೊಳ್ಳುತ್ತದೆ. ರಾಷ್ಟ್ರಗಳ ನಡುವಿನ ಸಂಬಂಧಗಳ ರಾಜಕೀಯ ಆಯಾಮವನ್ನು ಕುರಿತಂತೆ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಬೆಳಕು ಚೆಲ್ಲುತ್ತದೆ. ರಾಷ್ಟ್ರಗಳ ನಡುವಿನ ರಾಜಕೀಯ ಸಂಬಂಧಗಳು ಸಹಜವಾಗಿ ರಾಷ್ಟ್ರಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಂಶಗಳಿಂದ ಪ್ರಭಾವಕ್ಕೊಳಗಾಗಿ ನಿರ್ಧರಿಸಲ್ಪಡುತ್ತವೆ. ಹೀಗಾಗಿ ರಾಷ್ಟ್ರಗಳ ನಡುವಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ತಾಂತ್ರಿಕ, ಸೈನಿಕ ಸಂಬಂಧಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧ ಎಂಬುದಾಗಿ ಗುರುತಿಸಲ್ಪಟ್ಟಿದೆ. ಅಂತರ್ರಾಷ್ಟ್ರೀಯ ರಾಜಕೀಯವೆಂದೂ ಕರೆಯಲ್ಪಡುವ ಅಂತರ್ರಾಷ್ಟ್ರೀಯ ಸಂಬಂಧಗಳ ಅರ್ಥವನ್ನು ಕುರಿತಂತೆ ಚಿಂತಕರಲ್ಲಿ ಏಕಾಭಿಪ್ರಾಯವಿಲ್ಲ. ಈ ಪರಿಕಲ್ಪನೆಯ ಪರಿಪೂರ್ಣ ತಿಳುವಳಿಕೆಗೆ ನೆರವಾಗಬಲ್ಲ ಚಿಂತಕರ ವಿವಿಧ ವ್ಯಾಖ್ಯಾನಗಳನ್ನು ಈ ಕೆಳಗೆ ನೀಡಲಾಗಿದೆ.
ಹಾರ್ಟ್ಮನ್ ಪ್ರಕಾರ (ದೇಶಗಳು ಇತರ ದೇಶಗಳಿಗೆ ಪೂರಕವಾಗುವಂತೆ ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ಪ್ರಕ್ರಿಯೆಗಳ ಅಧ್ಯಯನ ಕ್ಷೇತ್ರವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಹಾನ್ಸ್ ಮಾರ್ಗೆಂತೊ ಪ್ರಕಾರ (ರಾಷ್ಟ್ರಗಳ ನಡುವಿನ ಅಧಿಕಾರದ ಗಳಿಕೆ ಮತ್ತು ಬಳಕೆಗಾಗಿ ಜರುಗುವ ಹೋರಾಟಗಳ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಬರ್ಟನ್ ಪ್ರಕಾರ (ಒಂದಕ್ಕಿಂತ ಹೆಚ್ಚು ರಾಷ್ಟ್ರಗಳನ್ನು ಬಾಧಿಸುವ ಘಟನೆ ಅಥವಾ ಸನ್ನಿವೇಶಗಳ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಪೆಡಲ್ ಫೋರ್ಡ್ ಮತ್ತು ಲಿಂಕನ್ ಪ್ರಕಾರ (ಬದಲಾಗುತ್ತಿರುವ ಅಧಿಕಾರ ಸಂಬಂಧದ ಮಾದರಿಗೊಳಪಟ್ಟ ರಾಷ್ಟ್ರಗಳ ನಡುವಿನ ನೀತಿಗಳನ್ನು ಒಳಗೊಂಡಿರುವ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಸ್ಪ್ರೌಟ್ ಮತ್ತು ಸ್ಪ್ರೌಟ್ ಅಭಿಪ್ರಾಯದಲ್ಲಿ (ಸ್ವತಂತ್ರ ರಾಜಕೀಯ ಸಮುದಾಯಗಳ ನಡುವಿನ ಕೆಲವು ವಿರೋಧಾತ್ಮಕ, ಪ್ರತಿಭಟನಾತ್ಮಕ ಹಾಗೂ ಸಂಘರ್ಷಾತ್ಮಕ ಆಯಾಮದ ಮೂಲಾಂಶಗಳ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಈ ಮೇಲೆ ಪ್ರಸ್ತಾಪಿಸಲಾಗಿರುವ ಚಿಂತಕರ ವ್ಯಾಖ್ಯಾನಗಳಲ್ಲಿ ಅಂತರ್ರಾಷ್ಟ್ರೀಯ ಸಂಬಂಧ ಕುರಿತಂತೆ ಏಕಾಭಿಪ್ರಾಯವಿಲ್ಲದಿರುವುದು ಕಂಡು ಬರುತ್ತದೆ. ಕೆಲವು ಚಿಂತಕರು ರಾಷ್ಟ್ರಗಳ ನಡುವಿನ ಅಧಿಕಾರಯುತ ಸಂಬಂಧಗಳಿಗೆ ಮಾತ್ರ ಅಂತರ್ರಾಷ್ಟ್ರೀಯ ಸಂಬಂಧವನ್ನು ಸೀಮಿತಗೊಳಿಸಿದರೆ ಇತರರು ರಾಷ್ಟ್ರಗಳ ನಡುವಿನ ವೈವಿಧ್ಯಮಯ ಸಂಬಂಧಗಳಿಗೆ ಅದನ್ನು ಅನ್ವಯಿಸಲು ಪ್ರಯತ್ನಿಸಿದ್ದಾರೆ. ಅಂತರ್ರಾಷ್ಟ್ರೀಯ ರಾಜಕೀಯವು ರಾಷ್ಟ್ರಗಳ ನಡುವಿನ ಸಂಕೀರ್ಣ ಮತ್ತು ಚಲನಶೀಲ ಸಂಬಂಧಗಳ ವ್ಯವಸ್ಥೆಯಾಗಿದ್ದು ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಪರಿಕಲ್ಪನೆ. ಹೀಗಾಗಿ ಸರ್ವ ಸಮ್ಮತವಾದ ಅರ್ಥವನ್ನು ಒದಗಿಸುವುದು ಕಷ್ಟಸಾಧ್ಯ. ಒಟ್ಟಾರೆ ಪ್ರತಿಯೊಂದು ರಾಷ್ಟ್ರವು ತನ್ನ ರಾಷ್ಟ್ರೀಯ ಹಿತಾಸಕ್ತಿ ಸಾಧನೆಯ ಗುರಿಯೊಡನೆ ಅನ್ಯ ರಾಷ್ಟ್ರಗಳೊಡನೆ ಹೊಂದಿರುವ ಸಂಬಂಧಗಳನ್ನು ಅಭ್ಯಸಿಸುವುದನ್ನು ಅಂತರ್ರಾಷ್ಟ್ರೀಯ ಸಂಬಂಧಗಳು ಪ್ರತಿನಿಧಿಸುತ್ತವೆ.
ಆಸಕ್ತಿದಾಯಕ ಅಂಶವೇನೆಂದರೆ, ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಪದಕ್ಕೆ ಸಮಾನಾಂತರವಾಗಿ ಅಂತರ್ರಾಷ್ಟ್ರೀಯ ರಾಜಕೀಯ, ಅಂತರ್ರಾಷ್ಟ್ರೀಯ ವ್ಯವಹಾರಗಳು, ಜಾಗತಿಕ ರಾಜಕೀಯ, ಜಾಗತಿಕ ವ್ಯವಹಾರಗಳು, ವಿದೇಶಿ ವ್ಯವಹಾರಗಳು ಎಂಬಿತ್ಯಾದಿ ಪದಗಳನ್ನು ಬಳಸಲಾಗುತ್ತದೆ. ಆದರೆ, ಅಂತರ್ರಾಷ್ಟ್ರೀಯ ಸಂಬಂಧಗಳಿಗೆ ಸಮಾನಾಂತರವಾಗಿ ಅಂತರ್ರಾಷ್ಟ್ರೀಯ ರಾಜಕೀಯವೆಂಬ ಪದದ ಬಳಕೆ ಹೆಚ್ಚು ಜನಪ್ರಿಯವಾಗಿದೆ. ಅಂತರ್ರಾಷ್ಟ್ರೀಯ ರಾಜಕೀಯವು ಅಂತರ್ರಾಷ್ಟ್ರೀಯ ಸಂಬಂಧಗಳ ಅವಿಭಾಜ್ಯ ಅಂಗವಾದ್ದರಿಂದ ಹಾನ್ಸ್ ಮಾರ್ಗೆಂತೊ ಮತ್ತು ಕೆನೆತ್, ಥಾಮ್ಸನ್ ಅವೆರಡನ್ನೂ ಪರ್ಯಾಯವಾಗಿರುವ ಪದಗಳೆಂದು ಪ್ರತಿಪಾದಿಸಿ ಬಳಸಿರುವರು.. ಬಹುತೇಕ ಚಿಂತಕರು ಅಂತರ್ರಾಷ್ಟ್ರೀಯ ರಾಜಕೀಯದ ಬದಲು ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಪದವನ್ನೇ ಬಳಸಲು ಮುಂದಾಗಿರುವುದು ಗಮನಾರ್ಹ. ಅವರ ಈ ನಿಲುವಿಗೆ ಅಂತರ್ರಾಷ್ಟ್ರೀಯ ರಾಜಕೀಯ ಮತ್ತು ಸಂಬಂಧಗಳ ನಡುವಿನ ಕೆಳಗಿನ ವ್ಯತ್ಯಾಸಗಳು ಪ್ರಮುಖ ಕಾರಣಗಳಾಗಿವೆ.
1. ಅಂತರ್ರಾಷ್ಟ್ರೀಯ ರಾಜಕೀಯವು ರಾಷ್ಟ್ರಗಳ ನಡುವಿನ ಸಂಬಂಧಗಳ ರಾಜಕೀಯ ಆಯಾಮವನ್ನು ಮಾತ್ರ ಪ್ರತಿನಿಧಿಸುತ್ತದೆ. ಆದರೆ, ಅಂತರ್ರಾಷ್ಟ್ರೀಯ ಸಂಬಂಧಗಳು ರಾಷ್ಟ್ರಗಳ ನಡುವಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಂಬಂಧಗಳೊಡನೆ ವ್ಯಾಪಾರ, ಶಿಕ್ಷಣ, ಪ್ರವಾಸ, ತಂತ್ರಜ್ಞಾನಗಳಂತಹ ಕ್ಷೇತ್ರಗಳ ಖಾಸಗಿ ಸಂಬಂಧಗಳನ್ನೂ ಬೆಂಬಲಿಸುತ್ತದೆ.
2. ಅಂತರ್ರಾಷ್ಟ್ರೀಯ ರಾಜಕೀಯವು ಸೀಮಿತ ವ್ಯಾಪ್ತಿಯನ್ನು ಪ್ರತಿನಿಧಿಸುತ್ತದೆ. ಆದರೆ, ಅಂತರ್ರಾಷ್ಟ್ರೀಯ ಸಂಬಂಧಗಳು ವಿಶಾಲ ವ್ಯಾಪ್ತಿಯನ್ನು ಮೈಗೂಡಿಸಿಕೊಂಡಿದೆ.
3. ಅಂತರ್ರಾಷ್ಟ್ರೀಯ ರಾಜಕೀಯದ ಅಧ್ಯಯನವು ವಿಶ್ಲೇಷಣಾತ್ಮಕ ವಿಧಾನವನ್ನು ಅವಲಂಬಿಸಿದೆ. ಆದರೆ, ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ವಿವರಣಾತ್ಮಕ ವಿಧಾನವನ್ನು ಹೆಚ್ಚು ಆಧರಿಸಿದೆ.
[B.] ಅಂತರ್ರಾಷ್ಟ್ರೀಯ ಸಂಬಂಧಗಳ ಸ್ವರೂಪ [Nature of International Relations]:
ಆರಂಭದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧ ತೀರಾ ಸೀಮಿತವಾಗಿತ್ತು. ಮಾನವರ ಚಟುವಟಿಕೆಗಳಲ್ಲಿ ಬದಲಾವಣೆಯಾದಂತೆ ಕಾಲಾನುಕ್ರಮದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿಯೂ ಬದಲಾವಣೆಗಳು ಕಂಡು ಬರತೊಡಗಿದವು. ಇದರೊಡನೆ ಆಧುನಿಕ ಯುಗದಲ್ಲಿನ ರಾಷ್ಟ್ರ ರಾಜ್ಯಗಳ ಉದಯ, ತಾಂತ್ರಿಕ ಬೆಳವಣಿಗೆ, ಅಣ್ವಸ್ತ್ರಗಳ ಸಂಶೋಧನೆ, ರಾಷ್ಟ್ರಗಳ ಬಹು ಧ್ರುವೀಕರಣ, ರಾಷ್ಟ್ರೇತರ ಪಾತ್ರಧಾರಿಗಳ ಪ್ರಭಾವ, ಜಾಗತಿಕ ಸವಾಲುಗಳಿಂದ ಅಂತರ್ರಾಷ್ಟ್ರೀಯ ಸಂಬಂಧಗಳು ಬದಲಾವಣೆಗೊಳ್ಳುತ್ತಾ ಬಂದಿವೆ. ಚಲನಶೀಲ ಗುಣವುಳ್ಳ ಅಂತರ್ರಾಷ್ಟ್ರೀಯ ಸಂಬಂಧಗಳ ಸ್ವರೂಪವನ್ನು ಕಂಡುಕೊಳ್ಳುವುದು ಅತ್ಯಂತ ಸವಾಲಿನ ಸಂಗತಿ. ಆದ್ದಾಗ್ಯೂ ಅಂತರ್ರಾಷ್ಟ್ರೀಯ ಸಂಬಂಧಗಳ ಈ ಕೆಳಗಿನ ಪ್ರಮುಖ ಲಕ್ಷಣಗಳ ಬೆಳಕಿನಲ್ಲಿ ಅದರ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸೋಣ.
1. ಚಲನಶೀಲ ಜಾಗತಿಕ ರಾಜಕೀಯದ ಅಧ್ಯಯನ: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ಕೇಂದ್ರಬಿಂದುವಾದ ರಾಷ್ಟ್ರಗಳ ನಡುವಿನ ಸಂಬಂಧಗಳು ಸ್ಥಿರವಾಗಿರದೇ ಚಲನಶೀಲ ಗುಣವನ್ನು ಹೊಂದಿರುತ್ತವೆ. ನಿರ್ದಿಷ್ಟ ರಾಷ್ಟ್ರಗಳ ಸಂಬಂಧವು ಕಾರಣಾಂತರದಿಂದ ಸಂಘರ್ಷದ ಬದಲು ಶಾಂತಿಯುತ ಅಥವಾ ಶಾಂತಿಯ ಬದಲು ಸಂಘರ್ಷಯುತ ಸಂಬಂಧಗಳಾಗಿ ಪರಿವರ್ತನೆಗೊಳ್ಳುತ್ತಿರುತ್ತವೆ. ಇದರೊಡನೆ ಆರಂಭದಲ್ಲಿನ ರಾಷ್ಟ್ರೀಯ ಪಾತ್ರಧಾರಿಗಳೊಡನೆ ಇತ್ತೀಚೆಗೆ ವೈವಿಧ್ಯಮಯ ರಾಷ್ಟ್ರೇತರ ಪಾತ್ರಧಾರಿಗಳು ರಾಷ್ಟ್ರಗಳ ನಡುವಿನ ಸಂಬಂಧವನ್ನು ಪ್ರಭಾವಿಸುತ್ತಿವೆ. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಚಲನಶೀಲ ಸ್ವರೂಪವನ್ನು ಮೈಗೂಡಿಸಿಕೊಂಡಿದೆ.
2. ಬಹುಶಾಸ್ತ್ರೀಯ ಅಧ್ಯಯನಕ್ಕೆ ಆಸ್ಪದ: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ನಡುವಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಂಬಂಧಗಳನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಯುನೆಸ್ಕೊ ಸಂಸ್ಥೆಯು 1998 ರ ತನ್ನ ವರದಿಯಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳನ್ನು ರಾಷ್ಟ್ರಗಳ ನಡುವಿನ ವೈವಿಧ್ಯಮಯ ಸಂಬಂಧಗಳನ್ನು ರಾಜಕೀಯವಾಗಿ ಅಭ್ಯಸಿಸುವ ವಿಷಯವೆಂದು ಪ್ರತಿಪಾದಿಸಿತ್ತು. ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನಕಾರರು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಸಮರ್ಪಕವಾಗಿ ಅಭ್ಯಸಿಸಲು ಇತಿಹಾಸ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರದಂತಹ ಇತರ ಶಾಸ್ತ್ರಗಳ ತಿಳುವಳಿಕೆ ಹೊಂದಿರಬೇಕಾದದ್ದು ಅಗತ್ಯವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ವಿಷಯವು ಬಹುಶಾಸ್ತ್ರೀಯ ಸ್ವರೂಪವುಳ್ಳ ವಿಷಯವೆಂಬುದು ಸ್ಪಷ್ಟವಾಗುತ್ತದೆ.
3. ರಾಷ್ಟ್ರಗಳ ಹಿತಾಸಕ್ತಿ ಮತ್ತು ಶಕ್ತಿಗೆ ಮಹತ್ವ: ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವುದು ಪ್ರತಿಯೊಂದು ದೇಶದ ಗುರಿಯಾಗಿರುತ್ತದೆ. ಹಿತಾಸಕ್ತಿಗಳ ಈಡೇರಿಕೆಗೆ ತನ್ನ ಶಕ್ತಿಯನ್ನು ಆಯಾ ರಾಷ್ಟ್ರಗಳು ಅಂತರ್ರಾಷ್ಟ್ರೀಯ ಸಂಬಂಧಗಳ ವೇಳೆಯಲ್ಲಿ ಬಳಸಿಕೊಳ್ಳುತ್ತವೆ. ಆದ್ದರಿಂದ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ಹಿತಾಸಕ್ತಿ ಮತ್ತು ಶಕ್ತಿಗೆ ಅಧಿಕ ಪ್ರಾಶಸ್ತ್ಯ ನೀಡುವ ವಿಷಯವಾಗಿ ಪರಿಗಣಿಸಲ್ಪಟ್ಟಿದೆ.
4. ಜಾಗತಿಕ ಸವಾಲುಗಳಿಗೆ ಆಧ್ಯತೆ: ಅಂತರ್ರಾಷ್ಟ್ರೀಯ ಸಂಬಂಧಗಳು ರಾಷ್ಟ್ರೀಯ ಸವಾಲುಗಳಿಗಿಂತ ಜಾಗತಿಕ ಸವಾಲುಗಳಿಗೆ ಮಹತ್ವ ನೀಡುತ್ತವೆ. ತಮ್ಮನ್ನು ಬಾಧಿಸುವ ಸಮಾನ ಸವಾಲುಗಳನ್ನು ರಾಷ್ಟ್ರಗಳ ನಡುವಿನ ವಿವಿಧ ಸಂಬಂಧಗಳು ಆಧರಿಸಿರುತ್ತವೆ. ಆದ್ದರಿಂದಲೇ ಗೊಲ್ಡ್ಸ್ಟೈನ್ ಮತ್ತು ಪೆವ್ಹೌಸ್ ತಮ್ಮ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಕೃತಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ಜಾಗತಿಕ ಸವಾಲುಗಳ ನಡುವೆ ಸಮತೋಲನ ತರುವುದೇ ಅಂತರ್ರಾಷ್ಟ್ರೀಯ ಸಂಬಂಧಗಳ ಉದ್ದೇಶವೆಂದು ಅಭಿಪ್ರಾಯಪಟ್ಟಿದ್ದಾರೆ. ಉದಾ: ಜಾಗತಿಕ ಸವಾಲಾಗಿರುವ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ರಾಷ್ಟ್ರಗಳು ಸಮ್ಮತಿಸಿದರೂ ತಮ್ಮ ಹಿತಾಸಕ್ತಿಗಾಗಿ ಭಯೋತ್ಪಾದನೆಯನ್ನು ಬೆಂಬಲಿಸಲು ಮುಂದಾಗುವ ನಡುವೆ ಸಮತೋಲನ ಸಾಧಿಸಲು ಅಂತರ್ರಾಷ್ಟ್ರೀಯ ಸಂಬಂಧಗಳು ನೆರವಾಗುವುದು.
5. ವಿಶ್ಲೇಷಣಾತ್ಮಕ ಮತ್ತು ಪ್ರಾಯೋಗಿಕ ವಿಧಾನಗಳಿಗೆ ಒಲವು: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಹಲವಾರು ಸಿದ್ಧಾಂತಗಳಿಂದ ಕೂಡಿರುವ ಅಧ್ಯಯನ ವಿಷಯವೆನಿಸಿದೆ. ಈ ಪೈಕಿ ಆದರ್ಶವಾದ ಮತ್ತು ನವ ಉದಾರವಾದ ಸಿದ್ಧಾಂತಗಳು ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಕುರಿತಾದ ವಿಶ್ಲೇಷಣಾತ್ಮಕ ಸಿದ್ಧಾಂತಗಳೆನಿಸಿದರೆ ವಾಸ್ತವಿಕ ಮತ್ತು ನವ ವಾಸ್ತವಿಕ ಸಿದ್ಧಾಂತಗಳು ಪ್ರಾಯೋಗಿಕ ವಿಧಾನವನ್ನು ಆಧರಿಸಿವೆ.
ಈ ಮೇಲೆ ಪ್ರಸ್ತಾಪಿಸಲಾದ ಅಂತರ್ರಾಷ್ಟ್ರೀಯ ಸಂಬಂಧಗಳ ಲಕ್ಷಣಗಳ ನೆರವಿನಿಂದ ಅದರ ಸ್ವರೂಪವನ್ನು ಸೂಚ್ಯವಾಗಿ ಮನವರಿಕೆ ಮಾಡಿಕೊಳ್ಳಬಹುದಾಗಿದೆ. ರಾಷ್ಟ್ರಗಳ ನಡುವೆ ಅಧಿಕಾರಕ್ಕಾಗಿ ಜರುಗುವ, ನಿರಂತರ ಹೋರಾಟವೇ ಅಂತರ್ರಾಷ್ಟ್ರೀಯ ಸಂಬಂಧಗಳ ತಿರುಳಾಗಿದ್ದು ಅದರ ಸ್ವರೂಪದಿನದಿಂದ ದಿನಕ್ಕೆ ಬದಲಾಗುತ್ತಾ ಬಂದಿದೆ. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ವಿಷಯದ ಸ್ಪಷ್ಟ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳುವುದು ಕಷ್ಟಕರ ವಿಷಯವೆನಿಸಿದೆ.
[C.] ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿ [Scope of International Relations]:
ವ್ಯಾಪ್ತಿ ಎಂದರೆ ಪದಶಃ ಗಡಿ, ಸೀಮೆ, ಎಲ್ಲೆ ಎಂದಾಗುತ್ತದೆ. ಒಂದು ವಿಷಯದ ಅಧ್ಯಯನವು ಒಳಗೊಂಡಿರುವ ವಿಷಯ ವಸ್ತುವನ್ನು ಸೂಚಿಸಲು ವ್ಯಾಪ್ತಿ ಎಂಬ ಪದವನ್ನು ಬಳಸಲಾಗುತ್ತದೆ. ನಿರ್ದಿಷ್ಟ ವಿಷಯವೊಂದರ ಜ್ಙಾನದ ಗಡಿಯನ್ನು ಆ ವಿಷಯದ ವ್ಯಾಪ್ತಿಯು ನಿರ್ಧರಿಸುತ್ತದೆ. ಹೊಸದಾಗಿ ಇತ್ತೀಚೆಗೆ ಸಮಾಜ ವಿಜ್ಞಾನಗಳ ಕುಟುಂಬವನ್ನು ಸೇರಿರುವ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ವಿಷಯವು ತನ್ನದೇಯಾದ ಅಧ್ಯಯನ ವ್ಯಾಪ್ತಿಯನ್ನು ಹೊಂದಿದೆ. ಬೆಳವಣಿಗೆ ಹೊಂದುತ್ತಿರುವ ವಿಷಯವಾದ್ದರಿಂದ ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯು ಚಲನಶೀಲವಾಗಿದ್ದು ಸ್ಥಿರವಾದ ಅಧ್ಯಯನ ವ್ಯಾಪ್ತಿಯನ್ನು ಹೊಂದಲು ಸಾಧ್ಯವಾಗಿಲ್ಲ. 1954 ರಲ್ಲಿ ಯುನೆಸ್ಕೋ ಸಂಸ್ಥೆ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವನ್ನು ಸ್ವತಂತ್ರ ಅಧ್ಯಯನ ವಿಷಯವನ್ನಾಗಿ ಪರಿಗಣಿಸಿದ ಬಳಿಕ ಅನೇಕ ಚಿಂತಕರು ಇದರ ವ್ಯಾಪ್ತಿಯನ್ನು ಕುರಿತಂತೆ ಭಿನ್ನ ವಿಚಾರಗಳನ್ನು ಪ್ರತಿಪಾದಿಸಿದರು. ಉದಾ: ವಿನ್ಸಂಟ್ ಬೇಕರ್ ಏಳು ಕ್ಷೇತ್ರಗಳನ್ನು ಮತ್ತು ಎಫ್. ಎಸ್. ಡನ್ನ್ ಐದು ಕ್ಷೇತ್ರಗಳನ್ನು ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನ ವ್ಯಾಪ್ತಿ ಒಳಗೊಂಡಿದೆ ಎಂಬುದಾಗಿ ಪ್ರತಿಪಾದಿಸಿದುದು. ಕಾಲಾನುಕ್ರಮದಲ್ಲಿ ಬಹುಶಾಸ್ತ್ರಿಯ ಸ್ವರೂಪವನ್ನು ಮೈಗೂಡಿಸಿಕೊಂಡು ಬೆಳವಣಿಗೆ ಹೊಂದುತ್ತಿರುವ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಅಧ್ಯಯನ ವಿಷಯವು ಪ್ರಸ್ತುತ ತನ್ನ ವ್ಯಾಪ್ತಿಯಲ್ಲಿ ಈ ಕೆಳಗಿನ ಅಂಶಗಳ ಅಧ್ಯಯನವನ್ನು ಹೊಂದಿದೆ.
1. ರಾಷ್ಟ್ರ ರಾಜ್ಯಗಳ ವ್ಯವಸ್ಥೆ: ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ಜಗತ್ತಿನ ರಾಷ್ಟ್ರ ರಾಜ್ಯಗಳೇ ಪ್ರಧಾನ ಪಾತ್ರಧಾರಿಗಳು. ಜಗತ್ತಿನ ಪ್ರತಿ ರಾಷ್ಟ್ರ ರಾಜ್ಯವು ಭಿನ್ನ ಭೌಗೋಳಿಕತೆ, ಜನಸಂಖ್ಯೆ, ಸಂಪನ್ಮೂಲಗಳು, ನಾಯಕತ್ವ ಹೊಂದಿದ್ದು ತಮ್ಮ ಅನುಕೂಲಕ್ಕಾಗಿ ಅವುಗಳ ನೆರವಿನಿಂದ ಇತರ ರಾಷ್ಟ್ರ ರಾಜ್ಯಗಳೊಡನೆ ಸಂಬಂಧವೇರ್ಪಡಿಸಿಕೊಳ್ಳಲು ಮುಂದಾಗುತ್ತವೆ. ಫಲವಾಗಿ ರಾಷ್ಟ್ರ ರಾಜ್ಯಗಳ ನಡುವೆ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಂಬಂಧಗಳು ರೂಪುಗೊಳ್ಳುತ್ತವೆ. ಇಂತಹ ರಾಷ್ಟ್ರ ರಾಜ್ಯಗಳ ನಡುವಿನ ಸಂಬಂಧಗಳ ಜಾಲವು ಸಹಜವಾಗಿ ಅಂತರ್ರಾಷ್ಟ್ರೀಯ ರಾಜಕೀಯ ಅಧ್ಯಯನದ ವ್ಯಾಪ್ತಿಗೊಳಪಡುತ್ತವೆ.
2. ರಾಷ್ಟ್ರೀಯ ಹಿತಾಸಕ್ತಿಗಳು: ವ್ಯಕ್ತಿಯಂತೆ ಜಗತ್ತಿನ ಪ್ರತಿಯೊಂದು ರಾಷ್ಟ್ರ ತನ್ನದೇಯಾದ ಗುರಿಗಳನ್ನು ಮೈಗೂಡಿಸಿಕೊಂಡಿರುತ್ತವೆ. ರಾಷ್ಟ್ರಗಳ ಗುರಿಗಳ ಸಾಧನೆಯಲ್ಲಿ ಸಹಜವಾಗಿ ಅವುಗಳ ಹಿತಾಸಕ್ತಿ ಕಂಡು ಬರುತ್ತದೆ. ತನ್ನ ಾರ್ಥಿಕ, ಸೈನಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮುಂತಾದ ಹಿತಾಸಕ್ತಿಗಳ ರಕ್ಷಣೆಗೆ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ಶಾಂತಿಯುತ ಅಥವಾ ಸಂಘರ್ಷಮಯ ಸಂಬಂಧಗಳನ್ನು ಹೊಂದಿರುತ್ತವೆ. ಉದಾ: ತಮ್ಮ ಸೈದ್ಧಾಂತಿಕ ಹಿತಾಸಕ್ತಿಗಾಗಿ ಅಮೇರಿಕಾ ಮತ್ತು ರಷ್ಯಾದ ನಡುವೆ ಸಂಘರ್ಷಮಯ ಸಂಬಂಧ ಕಂಡು ಬರುತ್ತಿರುವುದು. ಇಂತಹ ರಾಷ್ಟ್ರಗಳ ಭಿನ್ನ ಹಿತಾಸಕ್ತಿಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ವ್ಯಾಪ್ತಿಯಲ್ಲಿ ಕಂಡು ಬರುತ್ತವೆ.
3. ರಾಷ್ಟ್ರೀಯ ಶಕ್ತಿ: ರಾಷ್ಟ್ರವೊಂದು ತನ್ನ ಹಿತಾಸಕ್ತಿಗೆ ಪೂರಕವಾಗಿ ಇತರ ರಾಷ್ಟ್ರಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ರಾಷ್ಟ್ರ ಶಕ್ತಿ ಎನ್ನಲಾಗುತ್ತದೆ. ಪರಸ್ಪರ ಸಂಬಂಧಗಳನ್ನು ಹೊಂದಲು ಬಯಸುವ ರಾಷ್ಟ್ರಗಳ ಪ್ರಧಾನ ಉದ್ದೇಶ ತಮ್ಮ ರಾಷ್ಟ್ರೀಯ ಶಕ್ತಿಯನ್ನು ಸುಧಾರಿಸಿಕೊಳ್ಳುವುದೇ ಆಗಿರುತ್ತದೆ. ವಾಸ್ತವದಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳು ರಾಷ್ಟ್ರಗಳ ನಡುವಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಡೆಸುವ ಹೋರಾಟವೆಂದೇ ಪರಿಗಣಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಗಳ ರಾಷ್ಟ್ರೀಯ ಶಕ್ತಿಯ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ಪ್ರಧಾನ ವಸ್ತು ವಿಷಯವೆನಿಸಿದೆ.
4. ವಿದೇಶಾಂಗ ನೀತಿ: ಇತರ ರಾಷ್ಟ್ರ ಅಥವಾ ರಾಷ್ಟ್ರಗಳೊಡನೆ ವ್ಯವಹರಿಸುವಾಗ ರಾಷ್ಟ್ರವೊಂದರ ವರ್ತನೆಯನ್ನು ನಿರ್ದೇಶಿಸುವ ಅಥವಾ ನಿಯಂತ್ರಿಸುವ ತತ್ವಗಳನ್ನು ವಿದೇಶಾಂಗ ನೀತಿ ಎನ್ನಲಾಗುತ್ತದೆ. ರಾಷ್ಟ್ರೀಯ ಶಕ್ತಿಯನ್ನು ಆಧರಿಸಿ ರಚನೆಗೊಳ್ಳುವ ರಾಷ್ಟ್ರಗಳ ವಿದೇಶಾಂಗ ನೀತಿಯು ಆಯಾ ರಾಷ್ಟ್ರಗಳ ಹಿತಾಸಕ್ತಿಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುತ್ತದೆ. ವಿದೇಶಾಂಗ ನೀತಿಯ ಅಧ್ಯಯನವೊಂದರಿಂದಲೇ ಒಂದು ರಾಷ್ಟ್ರ ಇತರ ರಾಷ್ಟ್ರಗಳೊಡನೆ ಹೊಂದಿರುವ ಸಂಬಂಧಗಳ ಸ್ವರೂಪವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ನೀತಿಯ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಅವಿಭಾಜ್ಯ ಅಂಶವೆನಿಸಿದ್ದು ಅದರ ವ್ಯಾಪ್ತಿಯಲ್ಲಿ ಸ್ಥಾನ ಗಳಿಸಿಕೊಂಡಿದೆ.
5. ಆರ್ಥಿಕ ಸಾಧನಗಳು: ರಾಷ್ಟ್ರಗಳ ನಡುವಿನ ವೈವಿಧ್ಯಮಯ ಸಂಬಂಧಗಳ ಪೈಕಿ ಆರ್ಥಿಕ ಸಂಬಂಧಗಳು ಅಗ್ರ ಸ್ಥಾನ ಪಡೆದಿರುತ್ತವೆ. ರಾಷ್ಟ್ರಗಳ ನಡುವಣ ರಾಜಕೀಯ ಸಂಬಂಧಗಳನ್ನು ಆರ್ಥಿಕತೆಯು ಸ್ವಾಭಾವಿಕವಾಗಿ ನಿರ್ದೇಶಿಸುತ್ತವೆ. ವಿದೇಶಿ ನೆರವು, ಸಾಲ, ವ್ಯಾಪಾರ ಒಡಂಬಡಿಕೆಯಂತಹ ಆರ್ಥಿಕ ಸಾಧನಗಳು ಸಾಮಾನ್ಯವಾಗಿ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಪ್ರಭಾವಿಸುತ್ತವೆ. ಉದಾ: ಚೀನಾ ಮತ್ತು ಪಾಕಿಸ್ತಾನದ ಸಂಬಂಧದಲ್ಲಿ ಆರ್ಥಿಕ ಸಾಧನಗಳ ಪ್ರಭಾವವಿರುವುದು. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಸ್ಥಾನ ಪಡೆದಿರುವ ಆರ್ಥಿಕ ಸಂಬಂಧಗಳನ್ನು ತನ್ನ ವಸ್ತು ವಿಷಯವನ್ನಾಗಿ ಹೊಂದುವಂತಾಗಿದೆ.
6. ಜಾಗತಿಕ ಮತ್ತು ಪ್ರಾದೇಶಿಕ ಸಂಸ್ಥೆಗಳು: ಸಮಕಾಲೀನ ಜಗತ್ತಿನಲ್ಲಿ ಅಂದರೆ ಎರಡನೇ ಮಹಾ ಯುದ್ಧದ ನಂತರದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳಿಗೆ ಜಾಗತಿಕ ಮತ್ತು ಪ್ರಾದೇಶಿಕ ಸಂಸ್ಥೆಗಳು ಸಾಂಸ್ಥಿಕ ಆಯಾಮವನ್ನು ಒದಗಿಸಲು ಯಶಸ್ವಿಯಾಗಿವೆ. ಉದಾ: ವಿಶ್ವ ಸಂಸ್ಥೆ ಹಾಗೂ ಅದರ ಇತರ ಸಂಸ್ಥೆಗಳು, ಜಾಗತಿಕ ಸ್ವರೂಪದ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಸಹಕಾರ ಸಂಸ್ಥೆ, ಆಗ್ನೇಯ ಏಷ್ಯಾದ ರಾಷ್ಟ್ರಗಳ ಸಂಘಟನೆ, ಪೆಟ್ರೋಲಿಯಂ ಉತ್ಪಾದಕ ರಾಷ್ಟ್ರಗಳ ಸಂಸ್ಥೆ ಮುಂತಾದವು ಪ್ರಾದೇಶಿಕ ಸ್ವರೂಪದ ರಾಷ್ಟ್ರಗಳ ನಡುವಣ ಸಂಬಂಧಗಳನ್ನು ನಿಯಂತ್ರಿಸುತ್ತಿರುವುದು. ವಿವಿಧ ಸಂಸ್ಥೆಗಳೊಡನೆ ಕೆಲವು ವ್ಯಾಪಾರಿ ವ್ಯವಸ್ಥೆಗಳು ಮತ್ತು ಸಮಾನ ಮನಸ್ಕ ರಾಷ್ಟ್ರಗಳ ಗುಂಪುಗಳು ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಪ್ರಭಾವಿಸುತ್ತಿವೆ. ಉದಾ: ಜಿ -8, ಜಿ - 20, ಜಿ – 77 ಇತ್ಯಾದಿ. ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಪ್ರಭಾವಿಸುತ್ತಿರುವ ಈ ಬಗೆಯ ಸಾಂಸ್ಥಿಕ ವ್ಯವಸ್ಥೆಗಳು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಗೆ ಬರುತ್ತವೆ.
7. ರಾಷ್ಟ್ರೇತರ ಪಾತ್ರಧಾರಿಗಳು: ಸಮಕಾಲೀನ ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ರಾಷ್ಟ್ರೀಯ ಪಾತ್ರಧಾರಿಗಳೊಡನೆ ಅಂದರೆ ಸರ್ಕಾರದೊಡನೆ ರಾಷ್ಟ್ರೇತರ ಪಾತ್ರಧಾರಿಗಳೂ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಿವೆ. ಸ್ವಯಂ ಸೇವಾ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು, ಮಾನವ ಹಕ್ಕುಗಳ ಹೋರಾಟ ಸಂಸ್ಥೆಗಳು, ಶಾಂತಿ ಚಳುವಳಿಗಳು ಪ್ರಧಾನ ರಾಷ್ಟ್ರೇತರ ಪಾತ್ರಧಾರಿಗಳಾಗಿದ್ದು ನಾನಾ ಕ್ಷೇತ್ರದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಪ್ರಭಾವಿಸುತ್ತಿವೆ. ಹೀಗಾಗಿ ರಾಷ್ಟ್ರೇತರ ಪಾತ್ರಧಾರಿಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಗೆ ಒಳಪಟ್ಟಿದೆ.
8. ಸಿದ್ಧಾಂತಗಳು: ಸಮಕಾಲೀನ ಜಗತ್ತಿನಲ್ಲಿ ರಾಷ್ಟ್ರಗಳ ಸಂಬಂಧಗಳನ್ನು ಕೆಲ ಸಿದ್ಧಾಂತಗಳು ಪ್ರಭಾವಿಸುತ್ತಿವೆ. ಉದಾ: ರಾಷ್ಟ್ರೀಯವಾದ, ವಸಾಹತುಶಾಹಿವಾದ, ಸಾಮ್ರಾಜ್ಯವಾದ, ನವ ವಸಾಹತುವಾದ ಸಿದ್ಧಾಂತಗಳು. ಈ ವಿವಿಧ ಸಿದ್ಧಾಂತಗಳು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ನಿರ್ಧರಿಸುವುದರಿಂದ ಸಿದ್ಧಾಂತಗಳ ಮನವರಿಕೆಯು ಸಂಬಂಧಗಳ ಪರಿಪೂರ್ಣ ತಿಳುವಳಿಕೆಗೆ ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸೈದ್ಧಾಂತಿಕ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಪ್ರಧಾನ ವಸ್ತು ವಿಷಯವೆನಿಸಿದೆ.
9. ಜಾಗತಿಕ ಸವಾಲುಗಳು: ಪ್ರಸ್ತುತ ಜಗತ್ತು ವೈವಿಧ್ಯಮಯ ಜಾಗತಿಕ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳ ನಿಯಂತ್ರಣವು ರಾಷ್ಟ್ರಗಳ ನಡುವೆ ಪರಸ್ಪರ ಸಂಬಂಧಗಳಿಗೆ ಕಾರಣವಾಗುತ್ತಿವೆ. ಉದಾ: ಭಯೋತ್ಪಾದನೆ, ಜಾಗತಿಕ ತಾಪಮಾನ, ಶಸ್ತ್ರಾಸ್ತ್ರ ಸ್ಪರ್ಧೆ, ಅಣ್ವಸ್ತ್ರಗಳ ಪರೀಕ್ಷೆ, ಮಾನವ ಹಕ್ಕುಗಳ ಉಲ್ಲಂಘನೆ ಮುಂತಾದವು. ಈ ಸವಾಲುಗಳು ರಾಷ್ಟ್ರಗಳ ಸಂಬಂಧವನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿವೆ. ಫಲವಾಗಿ ವಿವಿಧ ಸವಾಲುಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯಲ್ಲಿ ಪರಿಗಣಿಸಲ್ಪಟ್ಟಿವೆ.
10. ವಿವಿಧ ಪರಿಕಲ್ಪನೆಗಳು: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಕುರಿತಾದ ಶಕ್ತಿ ಸಮತೋಲನ, ರಾಯಭಾರತ್ವ, ಸಾಮೂಹಿಕ ಭದ್ರತೆ, ವಿವಾದಗಳ ಶಾಂತಿಯುತ ಪರಿಹಾರ, ಯುದ್ಧ ಮುಂತಾದ ಹಲವು ಪರಿಕಲ್ಪನೆಗಳ ಅಧ್ಯಯನವನ್ನು ಒಳಗೊಳ್ಳುತ್ತದೆ.
ಈ ಮೇಲೆ ಪ್ರಸ್ತಾಪಿಸಲಾಗಿರುವ ಅಂಶಗಳು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯಲ್ಲಿನ ಪ್ರಧಾನ ವಸ್ತು ವಿಷಯವನ್ನು ಮನವರಿಕೆ ಮಾಡಿಕೊಡುತ್ತವೆ. ಗಮನಾರ್ಹ ಅಂಶವೇನೆಂದರೆ, ಅಂತರ್ರಾಷ್ಟ್ರೀಯ ಸಂಬಂಧಗಳು ಚಲನಶೀಲ ಸ್ವರೂಪ ಪಡೆದಿದ್ದು ಬೆಳವಣಿಗೆ ಹೊಂದುತ್ತಲೇ ಸಾಗಿವೆ. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯನ್ನು ಸ್ಪಷ್ಟವಾಗಿ ವಿವರಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ.
ಮಾದರಿ ಪ್ರಶ್ನೆಗಳು [Model Questions]:
[A.] ಎರಡು ಅಂಕದ ಪ್ರಶ್ನೆಗಳು:
1. ರಾಷ್ಟ್ರಗಳಿಗೆ ಅಂತರ್ರಾಷ್ಟ್ರೀಯ ಸಂಬಂಧಗಳ ಅಗತ್ಯವನ್ನು ಬರೆಯಿರಿ.
2. ಅಂತರ್ರಾಷ್ಟ್ರೀಯ ಸಂಬಂಧ ಎಂದರೇನು?
3. ಅಂತರ್ರಾಷ್ಟ್ರೀಯ ಸಂಬಂಧವನ್ನು ವ್ಯಾಖ್ಯಾನಿಸಿರಿ.
4. ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಪದಕ್ಕೆ ಸಮಾನವಾಗಿ ಬಳಸಲಾಗುವ ಪದಗಳನ್ನು ಹೆಸರಿಸಿರಿ.
5. ಅಂತರ್ರಾಷ್ಟ್ರೀಯ ರಾಜಕೀಯ ಮತ್ತು ಅಂತರ್ರಾಷ್ಟ್ರೀಯ ಸಂಬಂಧಗಳ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ.
6. ಅಂತರ್ರಾಷ್ಟ್ರೀಯ ಸಂಬಂಧಗಳ ಬದಲಾವಣೆಗೆ ಪ್ರಭಾವ ಬೀರುವ ನಾಲ್ಕು ಅಂಶಗಳನ್ನು ತಿಳಿಸಿರಿ.
7. ಅಂತರ್ರಾಷ್ಟ್ರೀಯ ಸಂಬಂಧಗಳ ಮೂರು ಲಕ್ಷಣಗಳನ್ನು ಬರೆಯಿರಿ.
8. ವ್ಯಾಪ್ತಿ ಎಂದರೇನು?
9. ರಾಷ್ಟ್ರೀಯ ಶಕ್ತಿಯ ಅರ್ಥವನ್ನು ಬರೆಯಿರಿ.
10. ವಿದೇಶಾಂಗ ನೀತಿ ಎಂದರೇನು?
11. ಯಾವುದಾದರೂ ಮೂರು ಪ್ರಾದೇಶಿಕ ಸಂಘಟನೆಗಳನ್ನು ಹೆಸರಿಸಿರಿ.
12. ಯಾವುದಾದರೂ ಮೂರು ರಾಷ್ಟ್ರೇತರ ಪಾತ್ರಧಾರಿಗಳನ್ನು ಬರೆಯಿರಿ.
13. ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ಪ್ರಧಾನ ಪರಿಕಲ್ಪನೆಗಳನ್ನು ತಿಳಿಸಿರಿ.
[B.] ಐದು ಅಂಕದ ಪ್ರಶ್ನೆಗಳು:
1. ಅಂತರ್ರಾಷ್ಟ್ರೀಯ ರಾಜಕೀಯ ಮತ್ತು ಸಂಬಂಧಗಳನ್ನು ಕುರಿತು ಟಿಪ್ಪಣಿ ಬರೆಯಿರಿ.
2. ಅಂತರ್ರಾಷ್ಟ್ರೀಯ ಸಂಬಂಧಗಳ ಸ್ವರೂಪವನ್ನು ಪರಿಶೀಲಿಸಿರಿ.
[C.] ಹತ್ತು ಅಂಕದ ಪ್ರಶ್ನೆಗಳು:
1. ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯನ್ನು ವಿವರಿಸಿರಿ.
ಅಧ್ಯಾಯ 1: ಅಂತರ್ರಾಷ್ಟ್ರೀಯ ರಾಜಕೀಯ ಮತ್ತು ಸಂಬಂಧಗಳು [International Politics and Relations]:
ಪ್ರಸ್ತಾವನೆ [Introduction]: ಅರಿಸ್ಟಾಟಲ್ ಅಭಿಪ್ರಾಯಪಟ್ಟಂತೆ ಮಾನವ ಸ್ವಭಾವತಃ ಸಂಗ ಜೀವಿ. ಸಂಗ ಜೀವಿಯಾದ ಮಾನವ ಒಂಟಿಯಾಗಿ ಬಾಳಲು ಸಾಧ್ಯವಾಗಲಿಲ್ಲ. ತನ್ನ ದೈನಂದಿನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಆತ ಇತರ ಮಾನವರನ್ನು ಅನಿವಾರ್ಯವಾಗಿ ಅವಲಂಬಿಸಬೇಕಾಯಿದ್ದು ಸಹಜವಾಗಿ ಮಾನವರ ನಡುವೆ ಸಂಬಂಧಗಳು ಮೂಡಿದವು. ಇದರೊಡನೆ ಭಾವನಾ ಜೀವಿಯಾದ ಮಾನವ ತನ್ನ ಸುಖ ಮತ್ತು ದುಖಃಗಳನ್ನು ಹಂಚಿಕೊಳ್ಳಲು ಇತರ ಮಾನವರೊಡನೆ ನಿರಂತರವಾಗಿ ಸಂಬಂಧ ಮುಂದುವರಿಸಿದನು. ಹೀಗೆ ಸ್ವಾವಲಂಬಿಯಲ್ಲದ ಮಾನವರು ತಮ್ಮ ಜೀವನದ ಪರಿಪೂರ್ಣತೆಗೆ ಕಾಲಾನುಕ್ರಮದಲ್ಲಿ ಇತರರೊಡನೆ ವೈವಿಧ್ಯಮಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕಾಯಿತು. ಫಲವಾಗಿ ಮಾನವ ಸಮಾಜವನ್ನು ಸಮಾಜಶಾಸ್ತ್ರಜ್ಞರು ಸಂಬಂಧಗಳ ಬಲೆ ಎಂದು ಪರಿಗಣಿಸುವಂತಾಯಿತು.
ಮಾನವನಂತೆ ಮಾನವ ನಿರ್ಮಿತ ರಾಜಕೀಯ ಸಂಸ್ಥೆಯಾಗಿರುವ ರಾಷ್ಟ್ರಗಳೂ ಒಂಟಿಯಾಗಿರಲು ಸಾಧ್ಯವಿಲ್ಲ. ವ್ಯಕ್ತಿಯಂತೆ ಪ್ರತಿ ರಾಷ್ಟ್ರವು, ತನ್ನ ವಿವಿಧ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸ್ವಾವಲಂಬಿಯಾಗಿರದ ಕಾರಣಕ್ಕೆ ಸಹಜವಾಗಿ ಜಗತ್ತಿನ ಇತರ ರಾಷ್ಟ್ರಗಳೊಡನೆ ವಿವಿಧ ಸಂಬಂಧಗಳನ್ನು ಮೈಗೂಡಿಸಿಕೊಂಡಿರುತ್ತವೆ. ಗಮನಾರ್ಹ ಅಂಶವೇನೆಂದರೆ ಅಂತರ್ರಾಷ್ಟ್ರೀಯ ಸಂಬಂಧಗಳು ಪರಸ್ಪರ ಮಾನವರ ನಡುವಿನ ಸಂಬಂಧಗಳಾಗಿರದೇ ಮಾನವ ಸಮುದಾಯವನ್ನು ಪ್ರತಿನಿಧಿಸುವ ರಾಷ್ಟ್ರವೆಂಬ ರಾಜಕೀಯ ಸಂಸ್ಥೆಗಳ ನಡುವಿನ ಸಂಬಂಧಗಳಾಗಿವೆ. ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಆರಂಭದಲ್ಲಿ ರಾಜ್ಯಶಾಸ್ತ್ರದ ಭಾಗವಾಗಿ ಜರುಗುತ್ತಿತ್ತು. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಅಂತರ್ರಾಷ್ಟ್ರೀಯ ರಾಜಕೀಯವೆಂಬ ಶಿರ್ಷಿಕೆಯಿಂದಲೂ ಗುರುತಿಸಲಾಗುತ್ತದೆ. ಕಾಲಾನುಕ್ರಮದಲ್ಲಿ ಸ್ವತಂತ್ರ ಅಧ್ಯಯನ ವಿಷಯವಾಗಿ ಬೆಳೆದು ಬಂದಿರುವ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ನೂತನ ಸಮಾಜ ವಿಜ್ಞಾನವಾಗಿ ಪ್ರಸ್ತುತ ಪರಿಗಣಿಸಲ್ಪಟ್ಟಿದೆ. ಪ್ರಸಕ್ತ ಅಧ್ಯಾಯದಲ್ಲಿ ಸಮಾನಾರ್ಥದಲ್ಲಿ ಬಳಸಲ್ಪಡುವ ಅಂತರ್ರಾಷ್ಟ್ರೀಯ ರಾಜಕೀಯ ಅಥವಾ ಅಂತರ್ರಾಷ್ಟ್ರೀಯ ಸಂಬಂಧಗಳ ಅರ್ಥ, ಸ್ವರೂಪ ಮತ್ತು ವ್ಯಾಪ್ತಿಯನ್ನು ಕುರಿತು ಬೆಳಕು ಚೆಲ್ಲಲಾಗಿದೆ.
[A.] ಅಂತರ್ರಾಷ್ಟ್ರೀಯ ಸಂಬಂಧಗಳ ಅರ್ಥ [Meaning of International Relations]:
ಸರಳಾರ್ಥದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಅಧ್ಯಯನ ಮಾಡುವ ಶಾಸ್ತ್ರವನ್ನು ಅಂತರ್ರಾಷ್ಟ್ರೀಯ ಸಂಬಂಧಗಳು ಎನ್ನಲಾಗುತ್ತದೆ. ವಿಶಾಲಾರ್ಥದಲ್ಲಿ ಅಂತರ್ರಾಷ್ಟ್ರೀಯ ವ್ಯವಸ್ಥೆಯಲ್ಲಿನ ರಾಷ್ಟ್ರೀಯ ಮತ್ತು ರಾಷ್ಟ್ರೇತರ ಪಾತ್ರಧಾರಿಗಳು ತಮ್ಮ ನಡುವಿನ ವೈವಿಧ್ಯಮಯ ಸಂಬಂಧಗಳ ನಿರ್ವಹಣೆಯಲ್ಲಿ ತೋರುವ ವರ್ತನೆಗಳನ್ನು ಅಧ್ಯಯನ ನಡೆಸುವುದೇ ಅಂತರ್ರಾಷ್ಟ್ರೀಯ ಸಂಬಂಧಗಳು ಎನಿಸಿಕೊಳ್ಳುತ್ತದೆ. ರಾಷ್ಟ್ರಗಳ ನಡುವಿನ ಸಂಬಂಧಗಳ ರಾಜಕೀಯ ಆಯಾಮವನ್ನು ಕುರಿತಂತೆ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಬೆಳಕು ಚೆಲ್ಲುತ್ತದೆ. ರಾಷ್ಟ್ರಗಳ ನಡುವಿನ ರಾಜಕೀಯ ಸಂಬಂಧಗಳು ಸಹಜವಾಗಿ ರಾಷ್ಟ್ರಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಂಶಗಳಿಂದ ಪ್ರಭಾವಕ್ಕೊಳಗಾಗಿ ನಿರ್ಧರಿಸಲ್ಪಡುತ್ತವೆ. ಹೀಗಾಗಿ ರಾಷ್ಟ್ರಗಳ ನಡುವಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ತಾಂತ್ರಿಕ, ಸೈನಿಕ ಸಂಬಂಧಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧ ಎಂಬುದಾಗಿ ಗುರುತಿಸಲ್ಪಟ್ಟಿದೆ. ಅಂತರ್ರಾಷ್ಟ್ರೀಯ ರಾಜಕೀಯವೆಂದೂ ಕರೆಯಲ್ಪಡುವ ಅಂತರ್ರಾಷ್ಟ್ರೀಯ ಸಂಬಂಧಗಳ ಅರ್ಥವನ್ನು ಕುರಿತಂತೆ ಚಿಂತಕರಲ್ಲಿ ಏಕಾಭಿಪ್ರಾಯವಿಲ್ಲ. ಈ ಪರಿಕಲ್ಪನೆಯ ಪರಿಪೂರ್ಣ ತಿಳುವಳಿಕೆಗೆ ನೆರವಾಗಬಲ್ಲ ಚಿಂತಕರ ವಿವಿಧ ವ್ಯಾಖ್ಯಾನಗಳನ್ನು ಈ ಕೆಳಗೆ ನೀಡಲಾಗಿದೆ.
ಹಾರ್ಟ್ಮನ್ ಪ್ರಕಾರ (ದೇಶಗಳು ಇತರ ದೇಶಗಳಿಗೆ ಪೂರಕವಾಗುವಂತೆ ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ಪ್ರಕ್ರಿಯೆಗಳ ಅಧ್ಯಯನ ಕ್ಷೇತ್ರವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಹಾನ್ಸ್ ಮಾರ್ಗೆಂತೊ ಪ್ರಕಾರ (ರಾಷ್ಟ್ರಗಳ ನಡುವಿನ ಅಧಿಕಾರದ ಗಳಿಕೆ ಮತ್ತು ಬಳಕೆಗಾಗಿ ಜರುಗುವ ಹೋರಾಟಗಳ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಬರ್ಟನ್ ಪ್ರಕಾರ (ಒಂದಕ್ಕಿಂತ ಹೆಚ್ಚು ರಾಷ್ಟ್ರಗಳನ್ನು ಬಾಧಿಸುವ ಘಟನೆ ಅಥವಾ ಸನ್ನಿವೇಶಗಳ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಪೆಡಲ್ ಫೋರ್ಡ್ ಮತ್ತು ಲಿಂಕನ್ ಪ್ರಕಾರ (ಬದಲಾಗುತ್ತಿರುವ ಅಧಿಕಾರ ಸಂಬಂಧದ ಮಾದರಿಗೊಳಪಟ್ಟ ರಾಷ್ಟ್ರಗಳ ನಡುವಿನ ನೀತಿಗಳನ್ನು ಒಳಗೊಂಡಿರುವ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಸ್ಪ್ರೌಟ್ ಮತ್ತು ಸ್ಪ್ರೌಟ್ ಅಭಿಪ್ರಾಯದಲ್ಲಿ (ಸ್ವತಂತ್ರ ರಾಜಕೀಯ ಸಮುದಾಯಗಳ ನಡುವಿನ ಕೆಲವು ವಿರೋಧಾತ್ಮಕ, ಪ್ರತಿಭಟನಾತ್ಮಕ ಹಾಗೂ ಸಂಘರ್ಷಾತ್ಮಕ ಆಯಾಮದ ಮೂಲಾಂಶಗಳ ಅಧ್ಯಯನವೇ ಅಂತರ್ರಾಷ್ಟ್ರೀಯ ಸಂಬಂಧಗಳು)
ಈ ಮೇಲೆ ಪ್ರಸ್ತಾಪಿಸಲಾಗಿರುವ ಚಿಂತಕರ ವ್ಯಾಖ್ಯಾನಗಳಲ್ಲಿ ಅಂತರ್ರಾಷ್ಟ್ರೀಯ ಸಂಬಂಧ ಕುರಿತಂತೆ ಏಕಾಭಿಪ್ರಾಯವಿಲ್ಲದಿರುವುದು ಕಂಡು ಬರುತ್ತದೆ. ಕೆಲವು ಚಿಂತಕರು ರಾಷ್ಟ್ರಗಳ ನಡುವಿನ ಅಧಿಕಾರಯುತ ಸಂಬಂಧಗಳಿಗೆ ಮಾತ್ರ ಅಂತರ್ರಾಷ್ಟ್ರೀಯ ಸಂಬಂಧವನ್ನು ಸೀಮಿತಗೊಳಿಸಿದರೆ ಇತರರು ರಾಷ್ಟ್ರಗಳ ನಡುವಿನ ವೈವಿಧ್ಯಮಯ ಸಂಬಂಧಗಳಿಗೆ ಅದನ್ನು ಅನ್ವಯಿಸಲು ಪ್ರಯತ್ನಿಸಿದ್ದಾರೆ. ಅಂತರ್ರಾಷ್ಟ್ರೀಯ ರಾಜಕೀಯವು ರಾಷ್ಟ್ರಗಳ ನಡುವಿನ ಸಂಕೀರ್ಣ ಮತ್ತು ಚಲನಶೀಲ ಸಂಬಂಧಗಳ ವ್ಯವಸ್ಥೆಯಾಗಿದ್ದು ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಪರಿಕಲ್ಪನೆ. ಹೀಗಾಗಿ ಸರ್ವ ಸಮ್ಮತವಾದ ಅರ್ಥವನ್ನು ಒದಗಿಸುವುದು ಕಷ್ಟಸಾಧ್ಯ. ಒಟ್ಟಾರೆ ಪ್ರತಿಯೊಂದು ರಾಷ್ಟ್ರವು ತನ್ನ ರಾಷ್ಟ್ರೀಯ ಹಿತಾಸಕ್ತಿ ಸಾಧನೆಯ ಗುರಿಯೊಡನೆ ಅನ್ಯ ರಾಷ್ಟ್ರಗಳೊಡನೆ ಹೊಂದಿರುವ ಸಂಬಂಧಗಳನ್ನು ಅಭ್ಯಸಿಸುವುದನ್ನು ಅಂತರ್ರಾಷ್ಟ್ರೀಯ ಸಂಬಂಧಗಳು ಪ್ರತಿನಿಧಿಸುತ್ತವೆ.
ಆಸಕ್ತಿದಾಯಕ ಅಂಶವೇನೆಂದರೆ, ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಪದಕ್ಕೆ ಸಮಾನಾಂತರವಾಗಿ ಅಂತರ್ರಾಷ್ಟ್ರೀಯ ರಾಜಕೀಯ, ಅಂತರ್ರಾಷ್ಟ್ರೀಯ ವ್ಯವಹಾರಗಳು, ಜಾಗತಿಕ ರಾಜಕೀಯ, ಜಾಗತಿಕ ವ್ಯವಹಾರಗಳು, ವಿದೇಶಿ ವ್ಯವಹಾರಗಳು ಎಂಬಿತ್ಯಾದಿ ಪದಗಳನ್ನು ಬಳಸಲಾಗುತ್ತದೆ. ಆದರೆ, ಅಂತರ್ರಾಷ್ಟ್ರೀಯ ಸಂಬಂಧಗಳಿಗೆ ಸಮಾನಾಂತರವಾಗಿ ಅಂತರ್ರಾಷ್ಟ್ರೀಯ ರಾಜಕೀಯವೆಂಬ ಪದದ ಬಳಕೆ ಹೆಚ್ಚು ಜನಪ್ರಿಯವಾಗಿದೆ. ಅಂತರ್ರಾಷ್ಟ್ರೀಯ ರಾಜಕೀಯವು ಅಂತರ್ರಾಷ್ಟ್ರೀಯ ಸಂಬಂಧಗಳ ಅವಿಭಾಜ್ಯ ಅಂಗವಾದ್ದರಿಂದ ಹಾನ್ಸ್ ಮಾರ್ಗೆಂತೊ ಮತ್ತು ಕೆನೆತ್ ಥಾಮ್ಸನ್ ಅವೆರಡನ್ನೂ ಪರ್ಯಾಯವಾಗಿರುವ ಪದಗಳೆಂದು ಪ್ರತಿಪಾದಿಸಿ ಬಳಸಿರುವರು.. ಬಹುತೇಕ ಚಿಂತಕರು ಅಂತರ್ರಾಷ್ಟ್ರೀಯ ರಾಜಕೀಯದ ಬದಲು ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಪದವನ್ನೇ ಬಳಸಲು ಮುಂದಾಗಿರುವುದು ಗಮನಾರ್ಹ. ಅವರ ಈ ನಿಲುವಿಗೆ ಅಂತರ್ರಾಷ್ಟ್ರೀಯ ರಾಜಕೀಯ ಮತ್ತು ಸಂಬಂಧಗಳ ನಡುವಿನ ಕೆಳಗಿನ ವ್ಯತ್ಯಾಸಗಳು ಪ್ರಮುಖ ಕಾರಣಗಳಾಗಿವೆ.
1. ಅಂತರ್ರಾಷ್ಟ್ರೀಯ ರಾಜಕೀಯವು ರಾಷ್ಟ್ರಗಳ ನಡುವಿನ ಸಂಬಂಧಗಳ ರಾಜಕೀಯ ಆಯಾಮವನ್ನು ಮಾತ್ರ ಪ್ರತಿನಿಧಿಸುತ್ತದೆ. ಆದರೆ, ಅಂತರ್ರಾಷ್ಟ್ರೀಯ ಸಂಬಂಧಗಳು ರಾಷ್ಟ್ರಗಳ ನಡುವಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಂಬಂಧಗಳೊಡನೆ ವ್ಯಾಪಾರ, ಶಿಕ್ಷಣ, ಪ್ರವಾಸ, ತಂತ್ರಜ್ಞಾನಗಳಂತಹ ಕ್ಷೇತ್ರಗಳ ಖಾಸಗಿ, ಸಂಬಂಧಗಳನ್ನೂ ಬೆಂಬಲಿಸುತ್ತದೆ.
2. ಅಂತರ್ರಾಷ್ಟ್ರೀಯ ರಾಜಕೀಯವು ಸೀಮಿತ ವ್ಯಾಪ್ತಿಯನ್ನು ಪ್ರತಿನಿಧಿಸುತ್ತದೆ. ಆದರೆ, ಅಂತರ್ರಾಷ್ಟ್ರೀಯ ಸಂಬಂಧಗಳು ವಿಶಾಲ ವ್ಯಾಪ್ತಿಯನ್ನು ಮೈಗೂಡಿಸಿಕೊಂಡಿದೆ.
3. ಅಂತರ್ರಾಷ್ಟ್ರೀಯ ರಾಜಕೀಯದ ಅಧ್ಯಯನವು ವಿಶ್ಲೇಷಣಾತ್ಮಕ ವಿಧಾನವನ್ನು ಅವಲಂಬಿಸಿದೆ. ಆದರೆ, ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ವಿವರಣಾತ್ಮಕ ವಿಧಾನವನ್ನು ಹೆಚ್ಚು ಆಧರಿಸಿದೆ.
[B.] ಅಂತರ್ರಾಷ್ಟ್ರೀಯ ಸಂಬಂಧಗಳ ಸ್ವರೂಪ [Nature of International Relations]:
ಆರಂಭದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧ ತೀರಾ ಸೀಮಿತವಾಗಿತ್ತು. ಮಾನವರ ಚಟುವಟಿಕೆಗಳಲ್ಲಿ ಬದಲಾವಣೆಯಾದಂತೆ ಕಾಲಾನುಕ್ರಮದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿಯೂ ಬದಲಾವಣೆಗಳು ಕಂಡು ಬರತೊಡಗಿದವು. ಇದರೊಡನೆ ಆಧುನಿಕ ಯುಗದಲ್ಲಿನ ರಾಷ್ಟ್ರ ರಾಜ್ಯಗಳ ಉದಯ, ತಾಂತ್ರಿಕ ಬೆಳವಣಿಗೆ, ಅಣ್ವಸ್ತ್ರಗಳ ಸಂಶೋಧನೆ, ರಾಷ್ಟ್ರಗಳ ಬಹು ಧ್ರುವೀಕರಣ, ರಾಷ್ಟ್ರೇತರ ಪಾತ್ರಧಾರಿಗಳ ಪ್ರಭಾವ, ಜಾಗತಿಕ ಸವಾಲುಗಳಿಂದ ಅಂತರ್ರಾಷ್ಟ್ರೀಯ ಸಂಬಂಧಗಳು ಬದಲಾವಣೆಗೊಳ್ಳುತ್ತಾ ಬಂದಿವೆ. ಚಲನಶೀಲ ಗುಣವುಳ್ಳ ಅಂತರ್ರಾಷ್ಟ್ರೀಯ ಸಂಬಂಧಗಳ ಸ್ವರೂಪವನ್ನು ಕಂಡುಕೊಳ್ಳುವುದು ಅತ್ಯಂತ ಸವಾಲಿನ ಸಂಗತಿ. ಆದ್ದಾಗ್ಯೂ ಅಂತರ್ರಾಷ್ಟ್ರೀಯ ಸಂಬಂಧಗಳ ಈ ಕೆಳಗಿನ ಪ್ರಮುಖ ಲಕ್ಷಣಗಳ ಬೆಳಕಿನಲ್ಲಿ ಅದರ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸೋಣ.
1. ಚಲನಶೀಲ ಜಾಗತಿಕ ರಾಜಕೀಯದ ಅಧ್ಯಯನ: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ಕೇಂದ್ರಬಿಂದುವಾದ ರಾಷ್ಟ್ರಗಳ ನಡುವಿನ ಸಂಬಂಧಗಳು ಸ್ಥಿರವಾಗಿರದೇ ಚಲನಶೀಲ ಗುಣವನ್ನು ಹೊಂದಿರುತ್ತವೆ. ನಿರ್ದಿಷ್ಟ ರಾಷ್ಟ್ರಗಳ ಸಂಬಂಧವು ಕಾರಣಾಂತರದಿಂದ ಸಂಘರ್ಷದ ಬದಲು ಶಾಂತಿಯುತ ಅಥವಾ ಶಾಂತಿಯ ಬದಲು ಸಂಘರ್ಷಯುತ ಸಂಬಂಧಗಳಾಗಿ ಪರಿವರ್ತನೆಗೊಳ್ಳುತ್ತಿರುತ್ತವೆ. ಇದರೊಡನೆ ಆರಂಭದಲ್ಲಿನ ರಾಷ್ಟ್ರೀಯ ಪಾತ್ರಧಾರಿಗಳೊಡನೆ ಇತ್ತೀಚೆಗೆ ವೈವಿಧ್ಯಮಯ ರಾಷ್ಟ್ರೇತರ ಪಾತ್ರಧಾರಿಗಳು ರಾಷ್ಟ್ರಗಳ ನಡುವಿನ ಸಂಬಂಧವನ್ನು ಪ್ರಭಾವಿಸುತ್ತಿವೆ. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಚಲನಶೀಲ ಸ್ವರೂಪವನ್ನು ಮೈಗೂಡಿಸಿಕೊಂಡಿದೆ.
2. ಬಹುಶಾಸ್ತ್ರೀಯ ಅಧ್ಯಯನಕ್ಕೆ ಆಸ್ಪದ: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ನಡುವಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಂಬಂಧಗಳನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಯುನೆಸ್ಕೊ ಸಂಸ್ಥೆಯು 1998 ರ ತನ್ನ ವರದಿಯಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳನ್ನು ರಾಷ್ಟ್ರಗಳ ನಡುವಿನ ವೈವಿಧ್ಯಮಯ ಸಂಬಂಧಗಳನ್ನು ರಾಜಕೀಯವಾಗಿ ಅಭ್ಯಸಿಸುವ ವಿಷಯವೆಂದು ಪ್ರತಿಪಾದಿಸಿತ್ತು. ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನಕಾರರು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಸಮರ್ಪಕವಾಗಿ ಅಭ್ಯಸಿಸಲು ಇತಿಹಾಸ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರದಂತಹ ಇತರ ಶಾಸ್ತ್ರಗಳ ತಿಳುವಳಿಕೆ ಹೊಂದಿರಬೇಕಾದದ್ದು ಅಗತ್ಯವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ವಿಷಯವು ಬಹುಶಾಸ್ತ್ರೀಯ ಸ್ವರೂಪವುಳ್ಳ ವಿಷಯವೆಂಬುದು ಸ್ಪಷ್ಟವಾಗುತ್ತದೆ.
3. ರಾಷ್ಟ್ರಗಳ ಹಿತಾಸಕ್ತಿ ಮತ್ತು ಶಕ್ತಿಗೆ ಮಹತ್ವ: ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವುದು ಪ್ರತಿಯೊಂದು ದೇಶದ ಗುರಿಯಾಗಿರುತ್ತದೆ. ಹಿತಾಸಕ್ತಿಗಳ ಈಡೇರಿಕೆಗೆ ತನ್ನ ಶಕ್ತಿಯನ್ನು ಆಯಾ ರಾಷ್ಟ್ರಗಳು ಅಂತರ್ರಾಷ್ಟ್ರೀಯ ಸಂಬಂಧಗಳ ವೇಳೆಯಲ್ಲಿ ಬಳಸಿಕೊಳ್ಳುತ್ತವೆ. ಆದ್ದರಿಂದ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ಹಿತಾಸಕ್ತಿ ಮತ್ತು ಶಕ್ತಿಗೆ ಅಧಿಕ ಪ್ರಾಶಸ್ತ್ಯ ನೀಡುವ ವಿಷಯವಾಗಿ ಪರಿಗಣಿಸಲ್ಪಟ್ಟಿದೆ.
4. ಜಾಗತಿಕ ಸವಾಲುಗಳಿಗೆ ಆಧ್ಯತೆ: ಅಂತರ್ರಾಷ್ಟ್ರೀಯ ಸಂಬಂಧಗಳು ರಾಷ್ಟ್ರೀಯ ಸವಾಲುಗಳಿಗಿಂತ ಜಾಗತಿಕ ಸವಾಲುಗಳಿಗೆ ಮಹತ್ವ ನೀಡುತ್ತವೆ. ತಮ್ಮನ್ನು ಬಾಧಿಸುವ ಸಮಾನ ಸವಾಲುಗಳನ್ನು ರಾಷ್ಟ್ರಗಳ ನಡುವಿನ ವಿವಿಧ ಸಂಬಂಧಗಳು ಆಧರಿಸಿರುತ್ತವೆ. ಆದ್ದರಿಂದಲೇ ಗೊಲ್ಡ್ಸ್ಟೈನ್ ಮತ್ತು ಪೆವ್ಹೌಸ್ ತಮ್ಮ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಕೃತಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ಜಾಗತಿಕ ಸವಾಲುಗಳ ನಡುವೆ ಸಮತೋಲನ ತರುವುದೇ ಅಂತರ್ರಾಷ್ಟ್ರೀಯ ಸಂಬಂಧಗಳ ಉದ್ದೇಶವೆಂದು ಅಭಿಪ್ರಾಯಪಟ್ಟಿದ್ದಾರೆ. ಉದಾ: ಜಾಗತಿಕ ಸವಾಲಾಗಿರುವ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ರಾಷ್ಟ್ರಗಳು ಸಮ್ಮತಿಸಿದರೂ ತಮ್ಮ ಹಿತಾಸಕ್ತಿಗಾಗಿ ಭಯೋತ್ಪಾದನೆಯನ್ನು ಬೆಂಬಲಿಸಲು ಮುಂದಾಗುವ ನಡುವೆ ಸಮತೋಲನ ಸಾಧಿಸಲು ಅಂತರ್ರಾಷ್ಟ್ರೀಯ ಸಂಬಂಧಗಳು ನೆರವಾಗುವುದು.
5. ವಿಶ್ಲೇಷಣಾತ್ಮಕ ಮತ್ತು ಪ್ರಾಯೋಗಿಕ ವಿಧಾನಗಳಿಗೆ ಒಲವು: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ಹಲವಾರು ಸಿದ್ಧಾಂತಗಳಿಂದ ಕೂಡಿರುವ ಅಧ್ಯಯನ ವಿಷಯವೆನಿಸಿದೆ. ಈ ಪೈಕಿ ಆದರ್ಶವಾದ ಮತ್ತು ನವ ಉದಾರವಾದ ಸಿದ್ಧಾಂತಗಳು ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಕುರಿತಾದ ವಿಶ್ಲೇಷಣಾತ್ಮಕ ಸಿದ್ಧಾಂತಗಳೆನಿಸಿದರೆ ವಾಸ್ತವಿಕ ಮತ್ತು ನವ ವಾಸ್ತವಿಕ ಸಿದ್ಧಾಂತಗಳು ಪ್ರಾಯೋಗಿಕ ವಿಧಾನವನ್ನು ಆಧರಿಸಿವೆ.
ಈ ಮೇಲೆ ಪ್ರಸ್ತಾಪಿಸಲಾದ ಅಂತರ್ರಾಷ್ಟ್ರೀಯ ಸಂಬಂಧಗಳ ಲಕ್ಷಣಗಳ ನೆರವಿನಿಂದ ಅದರ ಸ್ವರೂಪವನ್ನು ಸೂಚ್ಯವಾಗಿ ಮನವರಿಕೆ ಮಾಡಿಕೊಳ್ಳಬಹುದಾಗಿದೆ. ರಾಷ್ಟ್ರಗಳ ನಡುವೆ ಅಧಿಕಾರಕ್ಕಾಗಿ ಜರುಗುವ ನಿರಂತರ ಹೋರಾಟವೇ ಅಂತರ್ರಾಷ್ಟ್ರೀಯ ಸಂಬಂಧಗಳ ತಿರುಳಾಗಿದ್ದು ಅದರ ಸ್ವರೂಪದಿನದಿಂದ ದಿನಕ್ಕೆ ಬದಲಾಗುತ್ತಾ ಬಂದಿದೆ. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ವಿಷಯದ ಸ್ಪಷ್ಟ ಸ್ವರೂಪವನ್ನು ಮನವರಿಕೆ ಮಾಡಿಕೊಳ್ಳುವುದು ಕಷ್ಟಕರ ವಿಷಯವೆನಿಸಿದೆ.
[C.] ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿ [Scope of International Relations]:
ವ್ಯಾಪ್ತಿ ಎಂದರೆ ಪದಶಃ ಗಡಿ, ಸೀಮೆ, ಎಲ್ಲೆ ಎಂದಾಗುತ್ತದೆ. ಒಂದು ವಿಷಯದ ಅಧ್ಯಯನವು ಒಳಗೊಂಡಿರುವ ವಿಷಯ ವಸ್ತುವನ್ನು ಸೂಚಿಸಲು ವ್ಯಾಪ್ತಿ ಎಂಬ ಪದವನ್ನು ಬಳಸಲಾಗುತ್ತದೆ. ನಿರ್ದಿಷ್ಟ ವಿಷಯವೊಂದರ ಜ್ಙಾನದ ಗಡಿಯನ್ನು ಆ ವಿಷಯದ ವ್ಯಾಪ್ತಿಯು ನಿರ್ಧರಿಸುತ್ತದೆ. ಹೊಸದಾಗಿ ಇತ್ತೀಚೆಗೆ ಸಮಾಜ ವಿಜ್ಞಾನಗಳ, ಕುಟುಂಬವನ್ನು ಸೇರಿರುವ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ವಿಷಯವು ತನ್ನದೇಯಾದ ಅಧ್ಯಯನ ವ್ಯಾಪ್ತಿಯನ್ನು ಹೊಂದಿದೆ. ಬೆಳವಣಿಗೆ ಹೊಂದುತ್ತಿರುವ ವಿಷಯವಾದ್ದರಿಂದ ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯು ಚಲನಶೀಲವಾಗಿದ್ದು ಸ್ಥಿರವಾದ ಅಧ್ಯಯನ ವ್ಯಾಪ್ತಿಯನ್ನು ಹೊಂದಲು ಸಾಧ್ಯವಾಗಿಲ್ಲ. 1954 ರಲ್ಲಿ ಯುನೆಸ್ಕೋ ಸಂಸ್ಥೆ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವನ್ನು ಸ್ವತಂತ್ರ ಅಧ್ಯಯನ ವಿಷಯವನ್ನಾಗಿ ಪರಿಗಣಿಸಿದ ಬಳಿಕ ಅನೇಕ ಚಿಂತಕರು ಇದರ ವ್ಯಾಪ್ತಿಯನ್ನು ಕುರಿತಂತೆ ಭಿನ್ನ ವಿಚಾರಗಳನ್ನು ಪ್ರತಿಪಾದಿಸಿದರು. ಉದಾ: ವಿನ್ಸಂಟ್ ಬೇಕರ್ ಏಳು ಕ್ಷೇತ್ರಗಳನ್ನು ಮತ್ತು ಎಫ್. ಎಸ್. ಡನ್ನ್ ಐದು ಕ್ಷೇತ್ರಗಳನ್ನು ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನ ವ್ಯಾಪ್ತಿ ಒಳಗೊಂಡಿದೆ ಎಂಬುದಾಗಿ ಪ್ರತಿಪಾದಿಸಿದುದು. ಕಾಲಾನುಕ್ರಮದಲ್ಲಿ ಬಹುಶಾಸ್ತ್ರಿಯ ಸ್ವರೂಪವನ್ನು ಮೈಗೂಡಿಸಿಕೊಂಡು ಬೆಳವಣಿಗೆ ಹೊಂದುತ್ತಿರುವ ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಅಧ್ಯಯನ ವಿಷಯವು ಪ್ರಸ್ತುತ ತನ್ನ ವ್ಯಾಪ್ತಿಯಲ್ಲಿ ಈ ಕೆಳಗಿನ ಅಂಶಗಳ ಅಧ್ಯಯನವನ್ನು ಹೊಂದಿದೆ.
1. ರಾಷ್ಟ್ರ ರಾಜ್ಯಗಳ ವ್ಯವಸ್ಥೆ: ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ಜಗತ್ತಿನ ರಾಷ್ಟ್ರ ರಾಜ್ಯಗಳೇ ಪ್ರಧಾನ ಪಾತ್ರಧಾರಿಗಳು. ಜಗತ್ತಿನ ಪ್ರತಿ ರಾಷ್ಟ್ರ ರಾಜ್ಯವು ಭಿನ್ನ ಭೌಗೋಳಿಕತೆ, ಜನಸಂಖ್ಯೆ, ಸಂಪನ್ಮೂಲಗಳು, ನಾಯಕತ್ವ ಹೊಂದಿದ್ದು ತಮ್ಮ ಅನುಕೂಲಕ್ಕಾಗಿ ಅವುಗಳ ನೆರವಿನಿಂದ ಇತರ ರಾಷ್ಟ್ರ ರಾಜ್ಯಗಳೊಡನೆ ಸಂಬಂಧವೇರ್ಪಡಿಸಿಕೊಳ್ಳಲು ಮುಂದಾಗುತ್ತವೆ. ಫಲವಾಗಿ ರಾಷ್ಟ್ರ ರಾಜ್ಯಗಳ ನಡುವೆ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಂಬಂಧಗಳು ರೂಪುಗೊಳ್ಳುತ್ತವೆ. ಇಂತಹ ರಾಷ್ಟ್ರ ರಾಜ್ಯಗಳ ನಡುವಿನ ಸಂಬಂಧಗಳ ಜಾಲವು ಸಹಜವಾಗಿ ಅಂತರ್ರಾಷ್ಟ್ರೀಯ ರಾಜಕೀಯ ಅಧ್ಯಯನದ ವ್ಯಾಪ್ತಿಗೊಳಪಡುತ್ತವೆ.
2. ರಾಷ್ಟ್ರೀಯ ಹಿತಾಸಕ್ತಿಗಳು: ವ್ಯಕ್ತಿಯಂತೆ ಜಗತ್ತಿನ ಪ್ರತಿಯೊಂದು ರಾಷ್ಟ್ರ ತನ್ನದೇಯಾದ ಗುರಿಗಳನ್ನು ಮೈಗೂಡಿಸಿಕೊಂಡಿರುತ್ತವೆ. ರಾಷ್ಟ್ರಗಳ ಗುರಿಗಳ ಸಾಧನೆಯಲ್ಲಿ ಸಹಜವಾಗಿ ಅವುಗಳ ಹಿತಾಸಕ್ತಿ ಕಂಡು ಬರುತ್ತದೆ. ತನ್ನ ಾರ್ಥಿಕ, ಸೈನಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮುಂತಾದ ಹಿತಾಸಕ್ತಿಗಳ ರಕ್ಷಣೆಗೆ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ಶಾಂತಿಯುತ ಅಥವಾ ಸಂಘರ್ಷಮಯ ಸಂಬಂಧಗಳನ್ನು ಹೊಂದಿರುತ್ತವೆ. ಉದಾ: ತಮ್ಮ ಸೈದ್ಧಾಂತಿಕ ಹಿತಾಸಕ್ತಿಗಾಗಿ ಅಮೇರಿಕಾ ಮತ್ತು ರಷ್ಯಾದ ನಡುವೆ ಸಂಘರ್ಷಮಯ ಸಂಬಂಧ ಕಂಡು ಬರುತ್ತಿರುವುದು. ಇಂತಹ ರಾಷ್ಟ್ರಗಳ ಭಿನ್ನ ಹಿತಾಸಕ್ತಿಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ವ್ಯಾಪ್ತಿಯಲ್ಲಿ ಕಂಡು ಬರುತ್ತವೆ.
3. ರಾಷ್ಟ್ರೀಯ ಶಕ್ತಿ: ರಾಷ್ಟ್ರವೊಂದು ತನ್ನ ಹಿತಾಸಕ್ತಿಗೆ ಪೂರಕವಾಗಿ ಇತರ ರಾಷ್ಟ್ರಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ರಾಷ್ಟ್ರ ಶಕ್ತಿ ಎನ್ನಲಾಗುತ್ತದೆ. ಪರಸ್ಪರ ಸಂಬಂಧಗಳನ್ನು ಹೊಂದಲು ಬಯಸುವ ರಾಷ್ಟ್ರಗಳ ಪ್ರಧಾನ ಉದ್ದೇಶ ತಮ್ಮ ರಾಷ್ಟ್ರೀಯ ಶಕ್ತಿಯನ್ನು ಸುಧಾರಿಸಿಕೊಳ್ಳುವುದೇ ಆಗಿರುತ್ತದೆ. ವಾಸ್ತವದಲ್ಲಿ ಅಂತರ್ರಾಷ್ಟ್ರೀಯ ಸಂಬಂಧಗಳು ರಾಷ್ಟ್ರಗಳ ನಡುವಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಡೆಸುವ ಹೋರಾಟವೆಂದೇ ಪರಿಗಣಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಗಳ ರಾಷ್ಟ್ರೀಯ ಶಕ್ತಿಯ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ಪ್ರಧಾನ ವಸ್ತು ವಿಷಯವೆನಿಸಿದೆ.
4. ವಿದೇಶಾಂಗ ನೀತಿ: ಇತರ ರಾಷ್ಟ್ರ ಅಥವಾ ರಾಷ್ಟ್ರಗಳೊಡನೆ ವ್ಯವಹರಿಸುವಾಗ ರಾಷ್ಟ್ರವೊಂದರ ವರ್ತನೆಯನ್ನು ನಿರ್ದೇಶಿಸುವ ಅಥವಾ ನಿಯಂತ್ರಿಸುವ ತತ್ವಗಳನ್ನು ವಿದೇಶಾಂಗ ನೀತಿ ಎನ್ನಲಾಗುತ್ತದೆ. ರಾಷ್ಟ್ರೀಯ ಶಕ್ತಿಯನ್ನು ಆಧರಿಸಿ ರಚನೆಗೊಳ್ಳುವ ರಾಷ್ಟ್ರಗಳ ವಿದೇಶಾಂಗ ನೀತಿಯು ಆಯಾ ರಾಷ್ಟ್ರಗಳ ಹಿತಾಸಕ್ತಿಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುತ್ತದೆ. ವಿದೇಶಾಂಗ ನೀತಿಯ ಅಧ್ಯಯನವೊಂದರಿಂದಲೇ ಒಂದು ರಾಷ್ಟ್ರ ಇತರ ರಾಷ್ಟ್ರಗಳೊಡನೆ ಹೊಂದಿರುವ ಸಂಬಂಧಗಳ ಸ್ವರೂಪವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ನೀತಿಯ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಅವಿಭಾಜ್ಯ ಅಂಶವೆನಿಸಿದ್ದು ಅದರ ವ್ಯಾಪ್ತಿಯಲ್ಲಿ ಸ್ಥಾನ ಗಳಿಸಿಕೊಂಡಿದೆ.
5. ಆರ್ಥಿಕ ಸಾಧನಗಳು: ರಾಷ್ಟ್ರಗಳ ನಡುವಿನ ವೈವಿಧ್ಯಮಯ ಸಂಬಂಧಗಳ ಪೈಕಿ ಆರ್ಥಿಕ ಸಂಬಂಧಗಳು ಅಗ್ರ ಸ್ಥಾನ ಪಡೆದಿರುತ್ತವೆ. ರಾಷ್ಟ್ರಗಳ ನಡುವಣ ರಾಜಕೀಯ ಸಂಬಂಧಗಳನ್ನು ಆರ್ಥಿಕತೆಯು ಸ್ವಾಭಾವಿಕವಾಗಿ ನಿರ್ದೇಶಿಸುತ್ತವೆ. ವಿದೇಶಿ ನೆರವು, ಸಾಲ, ವ್ಯಾಪಾರ ಒಡಂಬಡಿಕೆಯಂತಹ ಆರ್ಥಿಕ ಸಾಧನಗಳು ಸಾಮಾನ್ಯವಾಗಿ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಪ್ರಭಾವಿಸುತ್ತವೆ. ಉದಾ: ಚೀನಾ ಮತ್ತು ಪಾಕಿಸ್ತಾನದ ಸಂಬಂಧದಲ್ಲಿ ಆರ್ಥಿಕ ಸಾಧನಗಳ ಪ್ರಭಾವವಿರುವುದು. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಸ್ಥಾನ ಪಡೆದಿರುವ ಆರ್ಥಿಕ ಸಂಬಂಧಗಳನ್ನು ತನ್ನ ವಸ್ತು ವಿಷಯವನ್ನಾಗಿ ಹೊಂದುವಂತಾಗಿದೆ.
6. ಜಾಗತಿಕ ಮತ್ತು ಪ್ರಾದೇಶಿಕ ಸಂಸ್ಥೆಗಳು: ಸಮಕಾಲೀನ ಜಗತ್ತಿನಲ್ಲಿ ಅಂದರೆ ಎರಡನೇ ಮಹಾ ಯುದ್ಧದ ನಂತರದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳಿಗೆ ಜಾಗತಿಕ ಮತ್ತು ಪ್ರಾದೇಶಿಕ ಸಂಸ್ಥೆಗಳು ಸಾಂಸ್ಥಿಕ ಆಯಾಮವನ್ನು ಒದಗಿಸಲು ಯಶಸ್ವಿಯಾಗಿವೆ. ಉದಾ: ವಿಶ್ವ ಸಂಸ್ಥೆ ಹಾಗೂ ಅದರ ಇತರ ಸಂಸ್ಥೆಗಳು ಜಾಗತಿಕ ಸ್ವರೂಪದ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಸಹಕಾರ ಸಂಸ್ಥೆ, ಆಗ್ನೇಯ ಏಷ್ಯಾದ ರಾಷ್ಟ್ರಗಳ ಸಂಘಟನೆ, ಪೆಟ್ರೋಲಿಯಂ ಉತ್ಪಾದಕ ರಾಷ್ಟ್ರಗಳ ಸಂಸ್ಥೆ ಮುಂತಾದವು ಪ್ರಾದೇಶಿಕ ಸ್ವರೂಪದ ರಾಷ್ಟ್ರಗಳ ನಡುವಣ ಸಂಬಂಧಗಳನ್ನು ನಿಯಂತ್ರಿಸುತ್ತಿರುವುದು. ವಿವಿಧ ಸಂಸ್ಥೆಗಳೊಡನೆ ಕೆಲವು ವ್ಯಾಪಾರಿ ವ್ಯವಸ್ಥೆಗಳು ಮತ್ತು ಸಮಾನ ಮನಸ್ಕ ರಾಷ್ಟ್ರಗಳ ಗುಂಪುಗಳು ಅಂತರ್ರಾಷ್ಟ್ರೀಯ ಸಂಬಂಧಗಳನ್ನು ಪ್ರಭಾವಿಸುತ್ತಿವೆ. ಉದಾ: ಜಿ -8, ಜಿ - 20, ಜಿ – 77 ಇತ್ಯಾದಿ. ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಪ್ರಭಾವಿಸುತ್ತಿರುವ ಈ ಬಗೆಯ ಸಾಂಸ್ಥಿಕ ವ್ಯವಸ್ಥೆಗಳು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಗೆ ಬರುತ್ತವೆ.
7. ರಾಷ್ಟ್ರೇತರ ಪಾತ್ರಧಾರಿಗಳು:, ಸಮಕಾಲೀನ ಅಂತರ್ರಾಷ್ಟ್ರೀಯ ಸಂಬಂಧಗಳಲ್ಲಿ ರಾಷ್ಟ್ರೀಯ ಪಾತ್ರಧಾರಿಗಳೊಡನೆ ಅಂದರೆ ಸರ್ಕಾರದೊಡನೆ ರಾಷ್ಟ್ರೇತರ ಪಾತ್ರಧಾರಿಗಳೂ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಿವೆ. ಸ್ವಯಂ ಸೇವಾ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು, ಮಾನವ ಹಕ್ಕುಗಳ ಹೋರಾಟ ಸಂಸ್ಥೆಗಳು, ಶಾಂತಿ ಚಳುವಳಿಗಳು ಪ್ರಧಾನ ರಾಷ್ಟ್ರೇತರ ಪಾತ್ರಧಾರಿಗಳಾಗಿದ್ದು ನಾನಾ ಕ್ಷೇತ್ರದಲ್ಲಿ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಪ್ರಭಾವಿಸುತ್ತಿವೆ. ಹೀಗಾಗಿ ರಾಷ್ಟ್ರೇತರ ಪಾತ್ರಧಾರಿಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಗೆ ಒಳಪಟ್ಟಿದೆ.
8. ಸಿದ್ಧಾಂತಗಳು: ಸಮಕಾಲೀನ ಜಗತ್ತಿನಲ್ಲಿ ರಾಷ್ಟ್ರಗಳ ಸಂಬಂಧಗಳನ್ನು ಕೆಲ ಸಿದ್ಧಾಂತಗಳು ಪ್ರಭಾವಿಸುತ್ತಿವೆ. ಉದಾ: ರಾಷ್ಟ್ರೀಯವಾದ, ವಸಾಹತುಶಾಹಿವಾದ, ಸಾಮ್ರಾಜ್ಯವಾದ, ನವ ವಸಾಹತುವಾದ ಸಿದ್ಧಾಂತಗಳು. ಈ ವಿವಿಧ ಸಿದ್ಧಾಂತಗಳು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ನಿರ್ಧರಿಸುವುದರಿಂದ ಸಿದ್ಧಾಂತಗಳ ಮನವರಿಕೆಯು ಸಂಬಂಧಗಳ ಪರಿಪೂರ್ಣ ತಿಳುವಳಿಕೆಗೆ ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸೈದ್ಧಾಂತಿಕ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ಪ್ರಧಾನ ವಸ್ತು ವಿಷಯವೆನಿಸಿದೆ.
9. ಜಾಗತಿಕ ಸವಾಲುಗಳು: ಪ್ರಸ್ತುತ ಜಗತ್ತು ವೈವಿಧ್ಯಮಯ ಜಾಗತಿಕ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳ ನಿಯಂತ್ರಣವು ರಾಷ್ಟ್ರಗಳ ನಡುವೆ ಪರಸ್ಪರ ಸಂಬಂಧಗಳಿಗೆ ಕಾರಣವಾಗುತ್ತಿವೆ. ಉದಾ: ಭಯೋತ್ಪಾದನೆ, ಜಾಗತಿಕ ತಾಪಮಾನ, ಶಸ್ತ್ರಾಸ್ತ್ರ ಸ್ಪರ್ಧೆ, ಅಣ್ವಸ್ತ್ರಗಳ ಪರೀಕ್ಷೆ, ಮಾನವ ಹಕ್ಕುಗಳ ಉಲ್ಲಂಘನೆ ಮುಂತಾದವು. ಈ ಸವಾಲುಗಳು ರಾಷ್ಟ್ರಗಳ ಸಂಬಂಧವನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿವೆ. ಫಲವಾಗಿ ವಿವಿಧ ಸವಾಲುಗಳ ಅಧ್ಯಯನವು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯಲ್ಲಿ ಪರಿಗಣಿಸಲ್ಪಟ್ಟಿವೆ.
10. ವಿವಿಧ ಪರಿಕಲ್ಪನೆಗಳು: ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನವು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಕುರಿತಾದ ಶಕ್ತಿ ಸಮತೋಲನ, ರಾಯಭಾರತ್ವ, ಸಾಮೂಹಿಕ ಭದ್ರತೆ, ವಿವಾದಗಳ ಶಾಂತಿಯುತ ಪರಿಹಾರ, ಯುದ್ಧ ಮುಂತಾದ ಹಲವು ಪರಿಕಲ್ಪನೆಗಳ ಅಧ್ಯಯನವನ್ನು ಒಳಗೊಳ್ಳುತ್ತದೆ.
ಈ ಮೇಲೆ ಪ್ರಸ್ತಾಪಿಸಲಾಗಿರುವ ಅಂಶಗಳು ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯಲ್ಲಿನ ಪ್ರಧಾನ ವಸ್ತು ವಿಷಯವನ್ನು ಮನವರಿಕೆ ಮಾಡಿಕೊಡುತ್ತವೆ. ಗಮನಾರ್ಹ ಅಂಶವೇನೆಂದರೆ, ಅಂತರ್ರಾಷ್ಟ್ರೀಯ ಸಂಬಂಧಗಳು ಚಲನಶೀಲ ಸ್ವರೂಪ ಪಡೆದಿದ್ದು ಬೆಳವಣಿಗೆ ಹೊಂದುತ್ತಲೇ ಸಾಗಿವೆ. ಹೀಗಾಗಿ ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯನ್ನು ಸ್ಪಷ್ಟವಾಗಿ ವಿವರಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ.
ಮಾದರಿ ಪ್ರಶ್ನೆಗಳು [Model Questions]:
[A.] ಎರಡು ಅಂಕದ ಪ್ರಶ್ನೆಗಳು:
1. ರಾಷ್ಟ್ರಗಳಿಗೆ ಅಂತರ್ರಾಷ್ಟ್ರೀಯ ಸಂಬಂಧಗಳ ಅಗತ್ಯವನ್ನು ಬರೆಯಿರಿ.
2. ಅಂತರ್ರಾಷ್ಟ್ರೀಯ ಸಂಬಂಧ ಎಂದರೇನು?
3. ಅಂತರ್ರಾಷ್ಟ್ರೀಯ ಸಂಬಂಧವನ್ನು ವ್ಯಾಖ್ಯಾನಿಸಿರಿ.
4. ಅಂತರ್ರಾಷ್ಟ್ರೀಯ ಸಂಬಂಧಗಳು ಎಂಬ ಪದಕ್ಕೆ ಸಮಾನವಾಗಿ ಬಳಸಲಾಗುವ ಪದಗಳನ್ನು ಹೆಸರಿಸಿರಿ.
5. ಅಂತರ್ರಾಷ್ಟ್ರೀಯ ರಾಜಕೀಯ ಮತ್ತು ಅಂತರ್ರಾಷ್ಟ್ರೀಯ ಸಂಬಂಧಗಳ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ.
6. ಅಂತರ್ರಾಷ್ಟ್ರೀಯ ಸಂಬಂಧಗಳ ಬದಲಾವಣೆಗೆ ಪ್ರಭಾವ ಬೀರುವ ನಾಲ್ಕು ಅಂಶಗಳನ್ನು ತಿಳಿಸಿರಿ.
7. ಅಂತರ್ರಾಷ್ಟ್ರೀಯ ಸಂಬಂಧಗಳ ಮೂರು ಲಕ್ಷಣಗಳನ್ನು ಬರೆಯಿರಿ.
8. ವ್ಯಾಪ್ತಿ ಎಂದರೇನು?
9. ರಾಷ್ಟ್ರೀಯ ಶಕ್ತಿಯ ಅರ್ಥವನ್ನು ಬರೆಯಿರಿ.
10. ವಿದೇಶಾಂಗ ನೀತಿ ಎಂದರೇನು?
11. ಯಾವುದಾದರೂ ಮೂರು ಪ್ರಾದೇಶಿಕ ಸಂಘಟನೆಗಳನ್ನು ಹೆಸರಿಸಿರಿ.
12. ಯಾವುದಾದರೂ ಮೂರು ರಾಷ್ಟ್ರೇತರ ಪಾತ್ರಧಾರಿಗಳನ್ನು ಬರೆಯಿರಿ.
13. ಅಂತರ್ರಾಷ್ಟ್ರೀಯ ಸಂಬಂಧಗಳ ಅಧ್ಯಯನದ ಪ್ರಧಾನ ಪರಿಕಲ್ಪನೆಗಳನ್ನು ತಿಳಿಸಿರಿ.
[B.] ಐದು ಅಂಕದ ಪ್ರಶ್ನೆಗಳು:
1. ಅಂತರ್ರಾಷ್ಟ್ರೀಯ ರಾಜಕೀಯ ಮತ್ತು ಸಂಬಂಧಗಳನ್ನು ಕುರಿತು ಟಿಪ್ಪಣಿ ಬರೆಯಿರಿ.
2. ಅಂತರ್ರಾಷ್ಟ್ರೀಯ ಸಂಬಂಧಗಳ ಸ್ವರೂಪವನ್ನು ಪರಿಶೀಲಿಸಿರಿ.
[C.] ಹತ್ತು ಅಂಕದ ಪ್ರಶ್ನೆಗಳು:
1. ಅಂತರ್ರಾಷ್ಟ್ರೀಯ ಸಂಬಂಧಗಳ ವ್ಯಾಪ್ತಿಯನ್ನು, ವಿವರಿಸಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ