ಮಂಗಳವಾರ, ಮಾರ್ಚ್ 14, 2023

4th sem 1st chapter for davanageri university

ಅಧ್ಯಾಯ 1: ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮೂಲಾಧಾರಗಳು [Sources of Ancient Indian Political Thought].
, ಪ್ರಸ್ತಾವನೆ [Introduction]: ಸರಳಾರ್ಥದಲ್ಲಿ ದೇಶ ಅಂದರೆ ರಾಜ್ಯ ಕುರಿತಾದ ಚಿಂತನೆಯೇ ರಾಜಕೀಯ ಚಿಂತನೆ. ವಿಶಾಲಾರ್ಥದಲ್ಲಿ ರಾಜ್ಯ ಹಾಗೂ ರಾಜ್ಯಕ್ಕೆ ಸಂಬಂಧಿಸಿರುವ ಅಂದರೆ ಅದರ ಉಗಮ, ಸ್ವರೂಪ, ಗುರಿ, ಮೂಲಾಂಶಗಳನ್ನು ಕುರಿತಂತೆ ನಿರ್ದಿಷ್ಟ ವ್ಯಕ್ತಿ, ಗುಂಪು ಅಥವಾ ಸಮುದಾಯವೊಂದು ಪ್ರತಿಪಾದಿಸುವ ಮೌಲ್ಯ, ವಿಚಾರ ಅಥವಾ ಯೋಚನೆಗಳು ರಾಜಕೀಯ ಚಿಂತನೆ ಎನಿಸಿಕೊಳ್ಳುತ್ತದೆ. ಸಾರ್ವತ್ರಿಕ ಲಕ್ಷಣವುಳ್ಳ ರಾಜಕೀಯ ಚಿಂತನೆ ಎಂದೊಡನೆ ನಮ್ಮ ಗಮನವು ಪ್ರಾಚೀನ ಗ್ರೀಕ್ ನಗರ ರಾಜ್ಯಗಳತ್ತ ಹೊರಳುತ್ತದೆ. ಇದಕ್ಕೆ ಜಗತ್ತಿನ ಆರಂಭಿಕ ರಾಜಕೀಯ ಚಿಂತನೆಗೆ ಗ್ರೀಕರು ನೀಡಿದ ಕಾಣಿಕೆಯು ಪ್ರಧಾನ ಕಾರಣ. ಗ್ರೀಕ್ನ ಬುದ್ಧಿವಂತ ತ್ರಿವಳಿಗಳೆಂದು ಚಿರಪರಿಚಿತರಾದ ಸಾಕ್ರಟಿಸ್, ಪ್ಲೇಟೊ ಹಾಗೂ ಅರಿಸ್ಟಾಟಲ್ರ ಕಾಲದಲ್ಲಿ ಗ್ರೀಕರ ರಾಜಕೀಯ ಚಿಂತನೆಯು ವಿಶಾಲ ಮತ್ತು ವ್ಯವಸ್ಥಿತ ಸ್ವರೂಪವನ್ನು ಪಡೆದಿತ್ತು. ಪುಟ್ಟ ನಗರ ರಾಜ್ಯಗಳ ಸಮಸ್ಯೆಗಳನ್ನು ಕುರಿತಂತೆ ಗ್ರೀಕ್ ತತ್ವಜ್ಙಾನಿಗಳು ಮಂಡಿಸಿದ ರಾಜಕೀಯ ಚಟುವಟಿಕೆಗಳ ಚಿಂತನೆಯು ವೈಜ್ಞಾನಿಕ ತಳಹದಿ ಮೈಗೂಡಿಸಿಕೊಂಡಿತ್ತು. ಆದ್ದರಿಂದಲೇ ಗ್ರೀಕರು ರಾಜಕೀಯ ಚಿಂತನೆಯ ಹರಿಕಾರರೆಂಬ ನಿಲುವಿಗೆ ಬಹುತೇಕರು ಬರುತ್ತಾರೆ. ಮುಂದುವರಿದು, ಅರ್ನೆಸ್ಟ್ ಬಾರ್ಕರ್ ಎಂಬ ಚಿಂತಕ (ರಾಜಕೀಯ ಚಿಂತನೆಯು ಗ್ರೀಕರಿಂದಲೇ ಆರಂಭಗೊಂಡಿದೆ) ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವರು. ಆಸಕ್ತಿದಾಯಕ ಅಂಶವೇನೆಂದರೆ, ಜಗತ್ತಿನ ವಿವಿಧ ದೇಶಗಳಲ್ಲಿ ಸಮಾನ, ನಿರಂತರ ಹಾಗೂ ಸಮರ್ಪಕ ಪ್ರಾಶಸ್ತ್ಯ ನಾನಾ ಕಾರಣಗಳಿಂದ ಪ್ರಾಚೀನ ಕಾಲದಲ್ಲಿ ರಾಜಕೀಯ ಚಿಂತನೆಗೆ ದೊರಕಲಿಲ್ಲ. ಪರಿಣಾಮ ರಾಜಕೀಯ ಚಿಂತನೆಯು 2500 ವರ್ಷಗಳಷ್ಟು ಹಳೆಯದಾದರೂ ಪರಿಪೂರ್ಣ ವಿಷಯವಾಗಿ ಜಗತ್ತಿನ ಇತರ ಭಾಗಗಳಲ್ಲಿ ಗುರುತಿಸಿಕೊಳ್ಳಲು ವಿಫಲವಾಯಿತು. ಪ್ರಾಚೀನ ಗ್ರೀಕರು ಪ್ರತಿಪಾದಿಸಿದ ರಾಜಕೀಯ ಚಿಂತನೆಯು ಕಾಲಾನುಕ್ರಮದಲ್ಲಿ ಪಾಶ್ಚಿಮಾತ್ಯ ರಾಜಕೀಯ ಚಿಂತನೆ ಎಂಬುದಾಗಿ ಗುರುತಿಸಲ್ಪಟ್ಟಿತಲ್ಲದೇ ಅದರ ಪರಿಕಲ್ಪನೆಗಳು ವಿಶ್ವದಾದ್ಯಂತ ಪ್ರಭಾವವನ್ನು ಇಂದಿಗೂ ಹೊಂದುವಂತಾಯಿತು.
, ರಾಜಕೀಯ ಚಿಂತನೆಯ ವಿಚಾರದಲ್ಲಿ ಗ್ರೀಕರಿಗಿಂತ ಪ್ರಾಚೀನ ಭಾರತವು ಹಿಂದುಳಿದಿರಲಿಲ್ಲ. ನಾಗರಿಕತೆಯಷ್ಟೇ ಪುರಾತನವಾದ ರಾಜಕೀಯ ಚಿಂತನೆಯನ್ನು ಪ್ರಾಚೀನ ಭಾರತವೂ ಮೈಗೂಡಿಸಿಕೊಂಡಿತ್ತು. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಉಗಮವನ್ನು ಧರ್ಮ ಹಾಗೂ ತತ್ವಶಾಸ್ತ್ರದಲ್ಲಿ ಗುರುತಿಸಬಹುದಾಗಿದ್ದು ಆಳವಾದ ಆಧ್ಯಾತ್ಮಿಕ ಪ್ರಭಾವವನ್ನು ಹೊಂದಿತ್ತು. ಜೊತೆಗೆ ವಿಸ್ತೃತ ಮತ್ತು ಸಂಕೀರ್ಣ ಸ್ವರೂಪದ ರಾಜಕೀಯ ಚಿಂತನೆಯು ಪ್ರಾಚೀನ ಭಾರತದಲ್ಲಿ ಪ್ರತಿಪಾದಿಸಲ್ಪಟ್ಟಿತ್ತು. ಹೀಗಾಗಿ ಪ್ರಾಚೀನ ಭಾರತದ ರಾಜಕೀಯ ಚಿಂತನೆಗಳ ವಿಶ್ಲೇಷಣೆಗೆ ಅಸ್ತಿತ್ವದಲ್ಲಿರುವ ಪಾಶ್ಚಿಮಾತ್ಯ ಪರಿಕಲ್ಪನೆಗಳನ್ನು ನೇರವಾಗಿ ಅನ್ವಯಿಸಿ ಅಧ್ಯಯನ ಮಾಡುವುದು ಕಷ್ಟಕರ ಸಂಗತಿ ಎನಿಸಿತ್ತು. ಪಾಶ್ಚಿಮಾತ್ಯ ಪರಿಕಲ್ಪನೆಗಳಿಗಿಂತ ಭಿನ್ನವಾದ ಪರಿಕಲ್ಪನೆ ಅಥವಾ ಸಾಧನಗಳನ್ನು ಪ್ರಾಚೀನ ಭಾರತದ ರಾಜಕೀಯ ಚಿಂತನೆಯಲ್ಲಿ ಉಪಯೋಗಿಸುತ್ತಿದ್ದುದು ಗಮನಾರ್ಹ ಸಂಗತಿ. ಈ ಹಿನ್ನೆಲೆಯಲ್ಲಿ ಪ್ರಾಚೀನ ಭಾರತದ ರಾಜಕೀಯ ಚಿಂತನೆಯು ಬೆಳಕಿಗೆ ಬರಲಿಲ್ಲ.
, [I.] ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮೂಲಾಧಾರಗಳು [Sources of Ancient Indian Political Thought]:
, [A.] ವಸಾಹತು ಪೂರ್ವದ ಅಥವಾ ಸಾಹಿತ್ಯ ಆಧಾರಗಳು [Pree Colonial or Literary Sources]:
, 1. ವೇದ ಸಾಹಿತ್ಯ:
, 2. ಧರ್ಮ ಶಾಸ್ತ್ರಗಳು:
, 3. ಪುರಾಣಗಳು:
, 4. ಮಹಾ ಕಾವ್ಯಗಳು:
, 6. ಅರ್ಥಶಾಸ್ತ್ರ:
, 7. ಸಂಗಂ ಮತ್ತು ಇತರ ಸಾಹಿತ್ಯ ಕೃತಿಗಳು:
, 8. ವಿದೇಶಿಯರ ಬರಹಗಳು:
, ಈ ಮೇಲೆ ಚರ್ಚಿಸಲಾದ ವಸಾಹತು ಪೂರ್ವದಲ್ಲಿ ಲಭ್ಯವಿದ್ದ ಹಲವು ಸಾಹಿತ್ಯಿಕ ಮೂಲಾಧಾರಗಳ ನೆರವಿನಿಂದ ನಾವು ಪ್ರಾಚೀನ ಭಾರತೀಯ ರಾಜಕೀಯ ಚಿಂತನೆಯನ್ನು ಮನವರಿಕೆ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಪ್ರಸ್ತಾಪಿಸಲಾದ ಹಲವು ಮೂಲಗಳು ಪ್ರಾತಿನಿಧಿಕವಾಗಿದ್ದು ಇನ್ನೂ ಅನೇಕ ಸಾಹಿತ್ಯ ಮೂಲಗಳು ಅಂದಿನ ರಾಜಕೀಯ ಚಿಂತನೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಅಂದಿನ ರಾಜಕೀಯ ವಿಚಾರಗಳು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಲ್ಲಿ ಬೆರತು ಹೋದದ್ದರಿಂದ ಸ್ವತಂತ್ರ ರಾಜಕೀಯ ವಿಚಾರಗಳನ್ನು ವಿವರಿಸುವ ಗ್ರಂಥಗಳ ಕೊರತೆಯನ್ನು ನಾವು ವಸಾಹತು ಪೂರ್ವದ ಮೂಲಾಧಾರಗಳಲ್ಲಿ ಗುರುತಿಸಬಹುದಾಗಿದೆ.
, [B.] ವಸಾಹತು ನಂತರದ ಮೂಲಾಧಾರಗಳು ಅಥವಾ ಪುರಾತತ್ವ ಆಧಾರಗಳು [Post Colonial or Archiological Sources]:
, 1. ಶಾಸನಗಳು:
, ಅ. ಸಾ. ಶ. ಪೂ. ಒಂದನೇ ಶತಮಾನದ ಹಾತಿಗುಂಪಾ ಶಾಸನವು ಒರಿಸ್ಸಾದ ಉದಯಗಿರಿ ಬೆಟ್ಟದಲ್ಲಿದ್ದು ಕಾರವೇಲನ ಆಡಳಿತಾತ್ಮಕ ಸಂಗತಿಗಳನ್ನು ಸ್ಪಷ್ಟಪಡಿಸುತ್ತದೆ.
, ಆ. ಸಾ. ಶ. ನಾಲ್ಕನೇ ಶತಮಾನದ ಅಲಹಾಬಾದ್ ಶಾಸನವು ಸಮುದ್ರ ಗುಪ್ತನ ದಂಡ ನಾಯಕ ಅರಿಸೇನನಿಂದ ರಚಿಸಲ್ಪಟ್ಟಿದ್ದು ಸಮುದ್ರ ಗುಪ್ತನ ವಿಜಯಗಳ ಮಾಹಿತಿಯನ್ನು ನೀಡುತ್ತದೆ.
, ಇ. ಸಾ. ಶ. ಏಳನೇ ಶತಮಾನದ ಐಹೊಳೆ ಶಾಸನವು ರವಿಕೀರ್ತಿಯಿಂದ ರಚಿಸಲ್ಪಟ್ಟಿದ್ದು ಎರಡನೇ ಪುಲಕೇಶಿಯ ಸಾಧನೆಗಳನ್ನು ವಿವರಿಸುತ್ತದೆ.
, ಈ. ಮೆಹರೌಲಿ ಶಾಸನವು ಎರಡನೇ ಚಂದ್ರಗುಪ್ತನ ಸಾಧನೆಗಳನ್ನು ಮನವರಿಕೆ ಮಾಡಿಕೊಡುತ್ತದೆ.
, ಉ. ಉತ್ತರ ಮೆಹರೂರು ಶಾಸನವು ತಮಿಳುನಾಡಿನಲ್ಲಿದ್ದು ಚೋಳ ವಂಶದ ಗ್ರಾಮಾಡಳಿತದ ವಿವರಗಳನ್ನು ಅಧ್ಯಯನ ಮಾಡಲು ಸಹಕಾರಿಯಾಗಿದೆ.
, ಊ. ಹಲ್ಮಿಡಿ ಶಾಸನವು ಸಾ. ಶ. ಐದನೇ ಶತಮಾನಕ್ಕೆ ಸೇರಿರುವ ಕನ್ನಡದ ಮೊದಲ ಶಾಸನವಾಗಿದ್ದು ಕದಂಬ ವಂಶದ ಮಾಹಿತಿ ಪೂರೈಸುತ್ತದೆ.
, 2. ಉತ್ಕನನಗಳು:
, 3. ನಾಣ್ಯಗಳು:
, 4. ಸ್ಮಾರಕಗಳು:
, ಈ ಮೇಲೆ ತಿಳಿಸಲಾದ ಪುರಾತತ್ವ ಆಧಾರಗಳ ಕಿರು ವಿವರಣೆಯಿಂದ ಅವುಗಳ ನೆರವಿನಿಂದಲೂ ಪ್ರಾಚೀನ ಭಾರತದ ರಾಜಕೀಯ ಚಿಂತನೆಯನ್ನು ಮನವರಿಕೆ ಮಾಡಿಕೊಳ್ಳಬಹುದೆಂಬ ಅಂಶವು ಸ್ಪಷ್ಟವಾಗುತ್ತದೆ. ಇವುಗಳೊಡನೆ ಬಂಡಾರ್ಕರ್, ಮಜೂಮ್ದಾರ್, ಆಲ್ಟೇಕರ್ ಮುಂತಾದ ಇತಿಹಾಸಕಾರರು ರಚಿಸಿದ ಕೃತಿಗಳೂ ಸಹ ಪ್ರಾಚೀನ ಭಾರತದ ರಾಜಕೀಯ ಚಿಂತನೆಗೆ ಪ್ರಮುಖ ಮೂಲಾಧಾರಗಳೆನಿಸಿವೆ. ಒಟ್ಟಾರೆ ವಿವಿಧ ಸಾಹಿತ್ಯ ಹಾಗೂ ಪುರಾತತ್ವ ಆಧಾರಗಳಿದ್ದರೂ ತತ್ವಶಾಸ್ತ್ರದ ಭಾಗವಾಗಿ ರಾಜಕೀಯ ಚಿಂತನೆ ಪ್ರಾಚೀನ ಭಾರತದಲ್ಲಿ ಅಸ್ತಿತ್ವದಲ್ಲಿದ್ದರಿಂದ ಸ್ಪಷ್ಟವಾಗಿ ಅದನ್ನು ಮನವರಿಕೆ ಮಾಡಿಕೊಳ್ಳುವುದು ಸವಾಲಿನ ಸಂಗತಿಯಾಗಿಯೇ ಉಳಿದುಕೊಂಡಿದೆ. ಪಾಶ್ಚಿಮಾತ್ಯ ದೃಷ್ಟಿಕೋನದಿಂದ ನೋಡದೇ ಭಾರತೀಯ ಸನ್ನಿವೇಶಕ್ಕೆ ಸೀಮಿತವಾಗಿ ಪ್ರಾಚೀನ ಭಾರತದ ರಾಜಕೀಯ ಚಿಂತನೆಯನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ ಎನ್ನಬಹುದು.
, [II.] ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮಿತಿಗಳು [Limitations of Ancient Indian Political Thought]:
, 1. ವಿವಿಧ ಶಿರ್ಷಿಕೆಗಳ ಬಳಕೆ:
, 2. ಒಮ್ಮತದ ಅಭಾವ:
, 3. ಸ್ವತಂತ್ರ ಅಸ್ತಿತ್ವ ಹೊಂದದಿದ್ದದ್ದು:
, 4. ಧರ್ಮದ ಅತಿಯಾದ ಪ್ರಭಾವ:
, 5. ನಿಖರತೆ ಹಾಗೂ ಕಾಲಾನುಕ್ರಮಣಿಕೆಯ
, 6. ಸಂಸ್ಕೃತ ಭಾಷೆಯ ಆಧ್ಯತೆ:
, ಈ ಮೇಲಿನವು ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮೂಲಾಧಾರಗಳ ಮೇಲಿನ ಪ್ರಮುಖ ಮಿತಿಗಳಾಗಿವೆ. ಪ್ರಾಚೀನ ಭಾರತದಲ್ಲಿ ಅಂದಿನ ಸನ್ನಿವೇಶಾನುಸಾರ ಮಂಡಿಸಲ್ಪಟ್ಟ ರಾಜಕೀಯ ಚಿಂತನೆಯನ್ನು ಪಾಶ್ಚಿಮಾತ್ಯ ರಾಜಕೀಯ ಚಿಂತನೆಯೊಡನೆ ಹೋಲಿಸಲಾಗದು. ಏಕೆಂದರೆ, ಭಿನ್ನ ಹಾಗೂ ವೈವಿಧ್ಯಮಯ ಸಮಾಜದ ಅಗತ್ಯಾನುಸಾರ ವಿಕಾಸಗೊಂಡ ಭಾರತದ ರಾಜಕೀಯ ಚಿಂತನೆಯನ್ನು ಅಧ್ಯಯನ ಮಾಡುವ ಮೊದಲು ಭಾರತದ ಐತಿಹ್ಯ, ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ನಂಬಿಕೆಗಳ ಅರಿವು ಪಡೆದಿರಬೇಕಾಗುತ್ತದೆ. ಆಗ ಮಾತ್ರವೇ ಪ್ರಸ್ತಾಪಿತ ಮಿತಿಗಳ ನಡುವೆಯೂ ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮೂಲಾಧಾರಗಳನ್ನು ನಾವು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಚಿಂತಕ ಸುರೇಶಚಂದ್ರ ಪಟೇಲ್ (ಪಾಶ್ಚಿಮಾತ್ಯ ಕನ್ನಡಕ ಧರಿಸಿಕೊಂಡು ಭಾರತೀಯ ರಾಜಕೀಯ ಚಿಂತನೆಯನ್ನು ಅರಿಯಲಾಗದು) ಎಂದು ಅಭಿಪ್ರಾಯಪಟ್ಟಿರುವರು.
, ಮಾದರಿ ಪ್ರಶ್ನೆಗಳು:
, [A.] ಎರಡು ಅಂಕದ ಪ್ರಶ್ನೆಗಳು:
, 1. ರಾಜಕೀಯ ಚಿಂತನೆ ಎಂದರೇನು?
, 2. ಗ್ರೀಕರನ್ನು ರಾಜಕೀಯ ಚಿಂತನೆಯ ಹರಿಕಾರರು ಎನ್ನಲು ಕಾರಣವೇನು?
, 3. ಪಾಶ್ಚಿಮಾತ್ಯ ರಾಜಕೀಯ ಚಿಂತನೆಯ ಪರಿಕಲ್ಪನೆಗಳನ್ನು ನೇರವಾಗಿ ಭಾರತದ ರಾಜಕೀಯ ಚಿಂತನೆಯಲ್ಲಿ ಅನ್ವಯಿಸಲು ಏಕೆ ಸಾಧ್ಯವಿಲ್ಲ?
, 4. ಪ್ರಾಚೀನ ಭಾರತದಲ್ಲಿ ರಾಜಕೀಯ ಚಿಂತನೆಯು ಯಾವ ಹೆಸರುಗಳಿಂದ ಕರೆಯಲ್ಪಟ್ಟಿತ್ತು?
, 5. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮೂಲಾಧಾರಗಳ ಎರಡು ಪ್ರಕಾರಗಳನ್ನು ತಿಳಿಸಿರಿ.
, 6. ಪ್ರಾಚೀನ ಭಾರತದ ನಾಲ್ಕು ವೇದಗಳನ್ನು ಹೆಸರಿಸಿರಿ.
, 7. ಪ್ರಾಚೀನ ಭಾರತದ ಎರಡು ಮಹಾ ಕಾವ್ಯಗಳನ್ನು ಬರೆಯಿರಿ.
, 8. ಸಂಗಂ ಸಾಹಿತ್ಯ ಎಂದರೇನು? ಅದರ ಮೂರು ಕೃತಿಗಳನ್ನು ಬರೆಯಿರಿ.
, 9. ಪ್ರಾಚೀನ ಭಾರತಕ್ಕೆ ಭೇಟಿ ನೀಡಿದ್ದ ಮೂವರು ವಿದೇಶಿಗರನ್ನು ಹೆಸರಿಸಿರಿ.
, 10. ಪ್ರಾಚೀನ ಭಾರತದ ಯಾವುದಾದರೂ ನಾಲ್ಕು ಶಾಸನಗಳನ್ನು ಬರೆಯಿರಿ.
, 11. ಉತ್ಕನನ ಎಂದರೇನು?
, 12. ರಾಜಕೀಯ ಚಿಂತನೆಯನ್ನು ಅರಿಯಲು ನಾಣ್ಯಗಳು ಹೇಗೆ ಸಹಕಾರಿ?
, 13. ಧರ್ಮವು ಭಾರತದ ರಾಜಕೀಯ ಚಿಂತನೆಗೆ ಒಂದು ಮಿತಿ. ಹೇಗೆ?
, 14. ಯಾವುದಾದರೂ ನಾಲ್ಕು ಪುರಾಣಗಳನ್ನು ಹೆಸರಿಸಿರಿ.
, 15. ಯಾವುದಾದರೂ ಮೂರು ಉತ್ಕನನ ಸ್ಥಳಗಳನ್ನು ಬರೆಯಿರಿ.
, 16. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮೂರು ಮಿತಿಗಳನ್ನು ಬರೆಯಿರಿ.
, [B.] ಐದು ಅಂಕದ ಪ್ರಶ್ನೆಗಳು:
, 1. ಪ್ರಾಚೀನ ಭಾರತದ ವಸಾಹತು ಪೂರ್ವದ ಅಥವಾ ಸಾಹಿತ್ಯ ಆಧಾರಗಳನ್ನು ವಿವರಿಸಿರಿ.
, 2. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ವಸಾಹತು ನಂತರದ ಅಥವಾ ಪ್ರಾಕ್ತನ ಮೂಲಾಧಾರಗಳನ್ನು ಬರೆಯಿರಿ.
, 3. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮಿತಿಗಳನ್ನು ಚರ್ಚಿಸಿರಿ.
, [C.] ಹತ್ತು ಅಂಕದ ಪ್ರಶ್ನೆಗಳು:
, 1. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ವಿವಿಧ ಮೂಲಾಧಾರಗಳನ್ನು ಪರಿಶೀಲಿಸಿರಿ.
, 2. ಪ್ರಾಚೀನ ಭಾರತದ ರಾಜಕೀಯ ಚಿಂತನೆಯ ಮಿತಿಗಳನ್ನು ಚರ್ಚಿಸಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...