ಮಂಗಳವಾರ, ಜನವರಿ 17, 2023

model questions

ಸಾರ್ವಜನಿಕ ನೀತಿ ಎಂಬ ಶಿರ್ಷಿಕೆಯುಳ್ಳ ಬಿ. ಎ ಐದನೇ ಸೆಮಿಸ್ಟರಿನ ಎರಡನೇ ಪತ್ರಿಕೆಯ ಮಾದರಿ ಪ್ರಶ್ನೆಗಳು:
 
 ಎರಡು ಅಂಕದ ಪ್ರಶ್ನೆಗಳು:
 1. ಸಾರ್ವಜನಿಕ ನೀತಿ ಎಂದರೇನು?
 2. ಸಾರ್ವಜನಿಕ ನೀತಿಯನ್ನು ನಿರ್ಧರಿಸುವ ಎರಡು ಅಂಶಗಳನ್ನು ಬರೆಯಿರಿ.
 3. ಹಿತಾಸಕ್ತಿ ಗುಂಪುಗಳ ಅರ್ಥವನ್ನು ತಿಳಿಸಿರಿ.
 4. ಒತ್ತಡ ಗುಂಪು ಎಂದರೇನು?
 5. ಹಿತಾಸಕ್ತಿ ಗುಂಪು ಹಾಗೂ ಒತ್ತಡ ಗುಂಪಿನ ನಡುವಿನ ವ್ಯತ್ಯಾಸವನ್ನು ತಿಳಿಸಿರಿ.
 6. ಯಾವುದಾದರೂ ಮೂರು ಸಾಮಾಜಿಕ ಚಳುವಳಿಯನ್ನು ಹೆಸರಿಸಿರಿ.
 7. ಸಮೂಹ ಮಾಧ್ಯಮಗಳನ್ನು ಹೆಸರಿಸಿರಿ.
 8. ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಮೂರು ಸಂಬಂಧಗಳನ್ನು ಬರೆಯಿರಿ.
 9. ಕೇಂದ್ರ ಮತ್ತು ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿರುವ ಎರಡು ಅಂಶಗಳನ್ನು ಬರೆಯಿರಿ.
 10. ರಾಷ್ಟ್ರಪತಿಯವರು ನೇಮಿಸುವ ಎರಡು ಸಂವಿಧಾನಾತ್ಮಕ ಹುದ್ದೆಗಳನ್ನು ಹೆಸರಿಸಿರಿ.
 11. ಮಹಾ ಲೆಕ್ಕ ಪರಿಶೋಧಕ ಮತ್ತು ನಿಯಂತ್ರಕರ ಎರಡು ಕಾರ್ಯಗಳನ್ನು ಬರೆಯಿರಿ.
 12. ಮಹಾ ನ್ಯಾಯವಾದಿಯ ಎರಡು ಜವಾಬ್ದಾರಿಗಳನ್ನು ತಿಳಿಸಿರಿ.
 13. ಹಣಕಾಸು ಆಯೋಗವನ್ನು ಯಾರು ಮತ್ತು ಏಕೆ ರಚಿಸುತ್ತಾರೆ? 
 14. ಭಾರತದ ಕೇಂದ್ರ ಶಾಸಕಾಂಗವಾದ ಸಂಸತ್ತಿನ ಎರಡು ಸದನಗಳನ್ನು ಹೆಸರಿಸಿರಿ.
 15. ಭಾರತದಲ್ಲಿ ಕಾರ್ಯಾಂಗದ ಮುಖ್ಯಸ್ಥರಾದ ರಾಷ್ಟ್ರಪತಿ ಉತ್ಸವ ಮೂರ್ತಿ ಎನಿಸಿಕೊಳ್ಳಲು ಕಾರಣವೇನು?
 16. ಭಾರತದ ನ್ಯಾಯಾಂಗ ವ್ಯವಸ್ಥೆಯ ಮೂರು ಲಕ್ಷಣಗಳಾವುವು?
 
 ಐದು ಅಥವಾ ಹತ್ತು ಅಂಕದ ಪ್ರಶ್ನೆಗಳು:
 1. ಸಾರ್ವಜನಿಕ ನೀತಿಯ ಸ್ವರೂಪವನ್ನು ವಿವರಿಸಿರಿ.
 2. ಸಾರ್ವಜನಿಕ ನೀತಿಯ ವ್ಯಾಪ್ತಿಯನ್ನು ಪರಿಶೀಲಿಸಿರಿ.
 3. ಬದಲಾಗುತ್ತಿರುವ ಸನ್ನಿವೇಶದಲ್ಲಿ ಸಾರ್ವಜನಿಕ ನೀತಿಯ ಮಹತ್ವವನ್ನು ಚರ್ಚಿಸಿರಿ.
 4. ಭಾರತದಲ್ಲಿನ ಸಾರ್ವಜನಿಕ ನೀತಿಯ ಪ್ರಕ್ರಿಯೆಯನ್ನು ಸಂಕ್ಷೀಪ್ತವಾಗಿ ವಿವರಿಸಿರಿ.
 5. ಸಾರ್ವಜನಿಕ ನೀತಿಯ ನಿರೂಪಣೆಯಲ್ಲಿ ಒತ್ತಡ ಗುಂಪುಗಳ ಪಾತ್ರವನ್ನು ವಿಶ್ಲೇಷಿಸಿರಿ. ಭಾರತದಲ್ಲಿ ಸಮೂಹ ಮಾಧ್ಯಮಗಳು ಸಾರ್ವಜನಿಕ ನೀತಿ ನಿರೂಪಣೆಯಲ್ಲಿ ಹೇಗೆ ಸಹಕಾರಿ ಎಂಬುದನ್ನು ವಿವರಿಸಿರಿ.
 6. ಸಾಮಾಜಿಕ ಚಳುವಳಿಗಳು ಭಾರತದಲ್ಲಿ ಸಾರ್ವಜನಿಕ ನೀತಿ ನಿರೂಪಣೆಗೆ ಸಹಕಾರಿ ಎಂಬುದನ್ನು ಸಮರ್ಥಿಸಿರಿ.
 7. ಸಾರ್ವಜನಿಕ ನೀತಿಯ ಅನುಷ್ಟಾನದಲ್ಲಿ ಸರ್ಕಾರದ ಪಾತ್ರವನ್ನು ವಿಶ್ಲೇಷಿಸಿರಿ.
 8. ಸಾರ್ವಜನಿಕ ನೀತಿಯನ್ನು ಜಾರಿಗೊಳಿಸುವಲ್ಲಿ ಸರ್ಕಾರೇತರ ಸಂಸ್ಥೆಗಳ ಜವಾಬ್ದಾರಿಯನ್ನು ಚರ್ಚಿಸಿರಿ.
 9. ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆಡಳಿತಾತ್ಮಕ ಸಂಬಂಧವನ್ನು ಪರಿಶೀಲಿಸಿರಿ.
 10. ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸನೀಯ ಸಂಬಂಧಗಳನ್ನು ಚರ್ಚಿಸಿರಿ.
 11. ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಅಂಶಗಳನ್ನು ಪರಿಶೀಲಿಸಿರಿ.
 12. ಭಾರತದ ಮಹಾ ಲೆಕ್ಕ ಪರಿಶೋಧಕ ಮತ್ತು ನಿಯಂತ್ರಕರ ಅಧಿಕಾರ ಕಾರ್ಯಗಳನ್ನು ವಿವರಿಸಿರಿ.
 13. ಭಾರತದ ಮಹಾ ನ್ಯಾಯವಾದಿಯವರ ಜವಾಬ್ದಾರಿಗಳನ್ನು ವಿಶ್ಲೇಷಿಸಿರಿ.
 14. ಭಾರತದಲ್ಲಿ ಹಣಕಾಸು ಆಯೋಗದ ರಚನೆಯನ್ನು ಕುರಿತು ಟಿಪ್ಪಣಿ ಬರೆಯಿರಿ.
 15. ಹಣಕಾಸು ಆಯೋಗದ ಅಧಿಕಾರ ಕಾರ್ಯಗಳನ್ನು ಚರ್ಚಿಸಿರಿ.
 16. ಭಾರತದಲ್ಲಿ ಶಾಸಕಾಂಗವು ಹೊಂದಿರುವ ಆಡಳಿತಾತ್ಮಕ ನಿಯಂತ್ರಣವನ್ನು ಪರಿಶೀಲಿಸಿರಿ.
 17. ಭಾರತದ ನ್ಯಾಯಾಂಗವು ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿದೆ ಎಂಬುದನ್ನು ಸಮರ್ಥಿಸಿರಿ.
 18. ಭಾರತದಲ್ಲಿ ಕಾರ್ಯಾಂಗದ ಕಾರ್ಯಾಚರಣೆಯನ್ನು ವಿವರಿಸಿರಿ.
 19. ಭಾರತದಲ್ಲಿ ನ್ಯಾಯಾಂಗದ ಕಾರ್ಯಾಚರಣೆಯನ್ನು ಸಂಕ್ಷೀಪ್ತವಾಗಿ ಪರಿಶೀಲಿಸಿರಿ.
 20. ಭಾರತದಲ್ಲಿನ ಶಾಸಕಾಂಗದ ಕಾರ್ಯಾಚರಣೆಯನ್ನು ಪರಿಶೀಲಿಸಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...