ಅರಿಸ್ಟಾಟಲ್ನ ಜೀವನ ಮತ್ತು ಕೃತಿಗಳು:
ಜನನ ಮತ್ತು ಸ್ಥಳ: ಅರಿಸ್ಟಾಟಲ್ನು ಕ್ರಿ. ಪೂ. 384 ರಲ್ಲಿ ಮ್ಯಾಸಿಡೊನಿಯಾದ ಗಡಿಯಲ್ಲಿನ ಸ್ಟಗಿರಾ (STAGIRA) ಎಂಬಲ್ಲಿ ಜನಿಸಿದನು. ಈತನ ತಂದೆ ನಿಕೊಮಾಚಸ್ (NICOMACHUS) ಮ್ಯಾಸಿಡೊನಿಯಾದ ಅರಸ ಮೂರನೇ ಅಮಿನ್ಟಸ್ (AMYNTAS III) ಎಂಬಾತನ ಆಸ್ಥಾನದಲ್ಲಿ ವೈಧ್ಯನಾಗಿದ್ದನು. ಹೀಗಾಗಿ ಬಾಲ್ಯದಲ್ಲಿ ಅರಿಸ್ಟಾಟಲ್ನು ಶ್ರೀಮಂತಿಕೆಯ ಸೌಲಭ್ಯಗಳನ್ನು ಪಡೆದಿದ್ದು ಪ್ರತಿಭಾವಂತ ಮಗುವಾಗಿ ಬೆಳೆದನು. ಜೊತೆಗೆ ಸ್ವತಂತ್ರ ಮತ್ತು ವೈಜ್ಙಾನಿಕ ಆಲೋಚನಾ ಶಕ್ತಿಯನ್ನು ಮೈಗೂಡಿಸಿಕೊಂಡಿದ್ದನು.
ವಿದ್ಯಾಭ್ಯಾಸ: ಆರಂಭದಲ್ಲಿ ತಂದೆಯ ಇಚ್ಛೆಯಂತೆ ಅರಿಸ್ಟಾಟಲ್ನು ವೈಧ್ಯಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದನು. ಮುಂದೆ ತನ್ನ 17 ನೇ ವಯಸ್ಸಿನಲ್ಲಿ (ಕ್ರಿ. ಪೂ. 367) ಅಥೆನ್ಸಿನಲ್ಲಿದ್ದ ಪ್ಲೇಟೊನ ಅಕಾಡೆಮಿಗೆ ಅಧ್ಯಯನಕ್ಕಾಗಿ ಸೇರಿಕೊಂಡನು. ಪ್ಲೇಟೊನ ವಿದ್ಯಾರ್ಥಿಯಾಗಿ ತತ್ವಶಾಸ್ತ್ರ, ತರ್ಕಶಾಸ್ತ್ರ, ನೀತಿಶಾಸ್ತ್ರ, ರಾಜಕೀಯ, ಖಗೋಳಶಾಸ್ತ್ರ ಮುಂತಾದ ಹಲವು ವಿಷಯಗಳಲ್ಲಿ ಅಧ್ಯಯನ ನಡೆಸಿ ಪಾರಂಗತನಾದನು. ತನ್ನ ಪ್ರತಿಭೆ ಹಾಗೂ ಪಾಂಡಿತ್ಯದಿಂದ ಪ್ಲೇಟೊವಿನ ನೆಚ್ಚಿನ ಶಿಷ್ಯನೆನಿಸಿಕೊಂಡನಲ್ಲದೇ ಅಕಾಡೆಮಿಯಲ್ಲಿ ಶಿಕ್ಷಕನಾಗಿಯೂ ಕಾರ್ಯ ನಿರ್ವಹಿಸುವ ಅವಕಾಶ ಪಡೆದನು. ಪ್ಲೇಟೊನ ನಿಧನದವರೆಗೆ ಅಂದರೆ 20 ವರ್ಷಗಳವರೆಗೆ ಅರಿಸ್ಟಾಟಲ್ ಅಕಾಡೆಮಿಯಲ್ಲಿದ್ದನು. ಪ್ಲೇಟೊನ ನಿಧನದ ಬಳಿಕ ಆತನ ಉತ್ತರಾಧಿಕಾರಿಯಾಗುವ ಅರ್ಹತೆ ಪಡೆದಿದ್ದರೂ ಅರಿಸ್ಟಾಟಲ್ಗೆ ಅಕಾಡೆಮಿಯ ಮುಖ್ಯಸ್ಥನಾಗುವ ಅವಕಾಶ ದೊರೆಯಲಿಲ್ಲ. ಸ್ಪ್ಯುಸಿಪಸ್ (SPEUSIPPUS) ಎಂಬ ಪ್ಲೇಟೊನ ಉತ್ತರಾಧಿಕಾರಿಯೊಡನೆ ಹೊಂದಿದ್ದ ಭಿನ್ನಾಭಿಪ್ರಾಯ ಮತ್ತು ಅಥೆನ್ಸಿನಲ್ಲಿದ್ದ ಮ್ಯಾಸಿಡೊನಿಯಾ ಕುರಿತಾದ ವಿರೋಧಗಳಿಂದ ಕ್ರಿ. ಪೂ. 348 ರಲ್ಲಿ ಅರಿಸ್ಟಾಟಲ್ನು ಅಕಾಡೆಮಿಯಿಂದ ನಿರ್ಗಮಿಸಲು ತೀರ್ಮಾನಿಸಿದನು.
ವಿದೇಶಿ ಪ್ರವಾಸ: ಅಕಾಡೆಮಿಯಿಂದ ಹೊರಟ ಅರಿಸ್ಟಾಟಲ್ನು 12 ವರ್ಷಗಳವರೆಗೆ ಏಷ್ಯಾ ಮೈನರ್ ಪ್ರದೇಶಗಳಲ್ಲಿ ಸಂಚರಿಸಿದನು. ಈ ವೇಳೆಯಲ್ಲಿ ಅರಿಸ್ಟಾಟಲ್ ನೈಸರ್ಗಿಕ ವಿಜ್ಙಾನಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡನು. ಮ್ಯಾಸಿಡೊನಿಯಾದ ರಾಜ ಫಿಲಿಪ್ ತನ್ನ 14 ವಯಸ್ಸಿನ ರಾಜಕುಮಾರ ಅಲೆಗ್ಸಾಂಡರನಿಗೆ ಶಿಕ್ಷಕನಾಗಲು ಕ್ರಿ. ಪೂ. 343 ರಲ್ಲಿ ಅರಿಸ್ಟಾಟಲ್ನನ್ನು ಕೇಳಿಕೊಂಡನು. ಆಗ ಪ್ರವಾಸವನ್ನು ಮೊಟಕುಗೊಳಿಸಿ ಶಿಕ್ಷಕನಾಗಲು ಸಮ್ಮತಿಸಿದ ಅರಿಸ್ಟಾಟಲ್ನು ಕ್ರಿ. ಪೂ. 336 ರಲ್ಲಿ ಫಿಲಿಪ್ ನಿಧನನಾಗಿ ಅಲೆಗ್ಸಾಂಡರ್ ಉತ್ತರಾಧಿಕಾರಿಯಾಗುವವರೆಗೆ ಆತನಿಗೆ ಗುರುವಾಗಿದ್ದನು.
ಲಿಸಿಯಂ ಸ್ಥಾಪನೆ: ಅಲೆಗ್ಸಾಂಡರನು ಅಧಿಕಾರಕ್ಕೇರಿದೊಡನೆ ಅಥೆನ್ಸ್ ಸೇರಿದಂತೆ ಅನೇಕ ಗ್ರೀಕ್ ನಗರ ರಾಜ್ಯಗಳು ಮ್ಯಾಸಿಡನ್ ಸಾಮ್ರಾಜ್ಯದ ಭಾಗವಾದವು. ಈ ವೇಳೆ ತನ್ನ ಶಿಷ್ಯನ ನೆರವಿನಿಂದ ಅರಿಸ್ಟಾಟಲ್ನು ಅಥೆನ್ಸಿನಲ್ಲಿ ಅಕಾಡೆಮಿಗೆ ಸಮನಾದ ಲಿಸಿಯಂ ಎಂಬ ಶಿಕ್ಷಣ ಸಂಸ್ಥೆಯನ್ನು ಕ್ರಿ. ಪೂ. 335 ರಲ್ಲಿ ಸ್ಥಾಪಿಸಿದನು. ವಿಶ್ವ ವಿದ್ಯಾಲಯಕ್ಕೆ ಸಮರೂಪಿ ಸಂಸ್ಥೆಯಾಗಿದ್ದ ಲಿಸಿಯಂನಲ್ಲಿ ಅರಿಸ್ಟಾಟಲ್ ಸಂಶೋಧನೆ, ಬೋಧನೆ ಹಾಗೂ ಾಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದನು. ಲಿಸಿಯಂನಲ್ಲಿ ಅರಿಸ್ಟಾಟಲ್ ಮುಂಜಾನೆ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೂ ಮತ್ತು ಸಂಜೆ ಸಾರ್ವಜನಿಕರನ್ನೂ ಕುರಿತಂತೆ ಉಪನ್ಯಾಸ ನೀಡುತ್ತಿದ್ದನು. ಅರಿಸ್ಟಾಟಲ್ನ ಲಿಸಿಯಂ ನಿರ್ದಿಷ್ಟ ಪಠ್ಯಕ್ರಮವಾಗಲಿ, ಅವಧಿಯಾಗಲಿ, ಪ್ರವೇಶಾತಿಯಾಗಲಿ, ಪರೀಕ್ಷೆಗಳಾಗಲಿ ಅಥವಾ ಶುಲ್ಕವಾಗಲಿ ಿರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯಾಗಿತ್ತು. ವಿಶೇಷವೇನೆಂದರೆ ಅರಿಸ್ಟಾಟಲ್ ಲಿಸಿಯಂನಲ್ಲಿ ಜೀವಶಾಸ್ತ್ರ ಮತ್ತು ಇತಿಹಾಸ ಕುರಿತು ಆಳವಾದ ಸಂಶೋಧನೆ ಕೈಗೊಂಡಿದ್ದನು. ಲಿಸಿಯಂ ಅರಿಸ್ಟಾಟಲ್ ನೇತೃತ್ವದಲ್ಲಿ ಸಕಲ ಶಾಸ್ತ್ರಗಳ ಅಧ್ಯಯನ ಕೇಂದ್ರವಾಗಿತ್ತು.
ಕೊನೆಯ ದಿನಗಳು: ಅಲೆಗ್ಸಾಂಡರನ ನಾಯಕತ್ವದಲ್ಲಿ ಮ್ಯಾಸಿಡೊನಿಯನ್ ಸಾಮ್ರಾಜ್ಯ ಗ್ರೀಕ್ ನಗರ ರಾಜ್ಯಗಳ ಸ್ವಾತಂತ್ರ್ಯವನ್ನು ನಾಶಗೊಳಿಸಿತ್ತು. ಅರಿಸ್ಟಾಟಲ್ ಇಂತಹ ಮ್ಯಾಸಿಡೊನಿಯಾದೊಡನೆ ಗುರುತಿಸಿಕೊಂಡಿದ್ದನು. ಭಾರತದ ಮೇಲಿನ ದಂಡಯಾತ್ರೆಯಿಂದ ಮರಳುವಾಗ ಬ್ಯಾಬಿಲೊನಿಯಾದಲ್ಲಿ (ಕ್ರಿ. ಪೂ. 323) ಅಲೆಗ್ಸಾಂಡರನು ನಿಧನನಾದನು. ಅಥೆನ್ಸಿನಲ್ಲಿ ಮ್ಯಾಸಿಡೊನಿಯಾ ವಿರುದ್ಧ ಧಂಗೆಗಳು ಆರಂಭವಾದವು. ಆಗ ಈಗಾಗಲೇ ಮ್ಯಾಸಿಡೊನಿಯಾದೊಡನೆ ಗುರುತಿಸಿಕೊಂಡಿದ್ದ ಅರಿಸ್ಟಾಟಲ್ ಜೀವ ಭಯದಿಂದ ಚಾಲ್ಸಿಸ್ (CHALCIS) ಎಂಬಲ್ಲಿಗೆ ತೆರಳಿದನು. ಮಾರನೇ ವರ್ಷ ಅಂದರೆ ಕ್ರಿ. ಪೂ. 322 ರಲ್ಲಿ ಅರಿಸ್ಟಾಟಲ್ ನಿಧನ ಹೊಂದಿದನು.
ಕೃತಿಗಳು: ತನ್ನ ಗುರುವಾದ ಪ್ಲೇಟೊನಿಗಿಂತ ಅರಿಸ್ಟಾಟಲ್ನು ವೈವಿಧ್ಯಮಯ ಹಾಗೂ ವಿಶಾಲ ಚಿಂತನೆ ಮಂಡಿಸಿದ್ದನು. ತತ್ವಶಾಸ್ತ್ರ, ನೀತಿಶಾಸ್ತ್ರ, ತರ್ಕಶಾಸ್ತ್ರ, ಕಾವ್ಯ ಮಿಮಾಂಸೆ, ರಾಜಕೀಯ, ಖಗೋಳಶಾಸ್ತ್ರ, ಜೀವಶಾಸ್ತ್ರ, ಮಾನವಶಾಸ್ತ್ರ ಮುಂತಾದ ವಿಷಯಗಳನ್ನು ಕುರಿತಂತೆ ಅರಿಸ್ಟಾಟಲ್ನ ಅಧ್ಯಯನ ಹಾಗೂ ಸಂಶೋಧನೆಗಳನ್ನು ಗುರುತಿಸಬಹುದಾಗಿದೆ. ರಾಜ್ಯಶಾಸ್ತ್ರ ಸೇರಿದಂತೆ ಅನೇಕ ಶಾಸ್ತ್ರಗಳಿಗೆ ಅರಿಸ್ಟಾಟಲ್ ಮೂಲನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಹಾಗೂ ಅರಿಸ್ಟಾಟಲ್ ಅಧ್ಯಯನ ನಡೆಸದ ವಿಷಯಗಳಿಲ್ಲ ಎಂಬೋಕ್ತಿ ಸಮರ್ಪಕವಾಗಿದೆ. ಅರಿಸ್ಟಾಟಲ್ ತನ್ನ ಜೀವಿತಾವಧಿಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ
1. ಒರ್ಗನನ್ ('Organon)
2. ಹಿಸ್ಟರಿ ಆಫ್ ಅನಿಮಲ್ಸ್ (History of Animals')
3. ನಿಕೊಮಶಿಯನ್ ಎತಿಕ್ಸ್ ('Nicomachean Ethics')
4. ಮೆಟಫಿಜಿಕ್ಸ್ ('Metaphysics'(
5. ಆನ್ ಮೊನಾರ್ಕಿ ('On Monarchy')
6. ಆನ್ ಫಿಲಾಸಫಿ ('On Philosophy')
7. ಕಾನ್ಸ್ಟಿಟ್ಯೂಶನ್ ಆಫ್ ಅಥೆನ್ಸ್ ('Constitution of Athens)
8. ದಿ ಪಾಲಿಟಿಕ್ಸ್ (THE POLITICS)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ