[II.] ಸಂವಿಧಾನ ರಚನಾ ಸಭೆಯ ರಚನೆ:
ಮೇ 1946 ರಲ್ಲಿ ಕ್ಯಾಬಿನೆಟ್ ಆಯೋಗದ ಶಿಫಾರಸಿನಂತೆ ನವೆಂಬರ್ 1946 ರ ವೇಳೆಗೆ ಭಾರತ ಸಂವಿಧಾನ ರಚನಾ ಸಭೆಯು ರಚನೆಗೊಂಡಿತು. ಕ್ಯಾಬಿನೆಟ್ ಆಯೋಗವು ದೇಶ ವಿಭಜನೆಯನ್ನು ನಿರಾಕರಿಸಿ ಅಖಂಡ ಭಾರತಕ್ಕೆ ಏಕೈಕ ಸಂವಿಧಾನ ರಚನಾ ಸಭೆಯನ್ನು ಶಿಫಾರಸು ಮಾಡಿತ್ತು. ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖೆ, ಸದಸ್ಯರ ನೇಮಕದ ವಿಧಾನ, ಸದಸ್ಯರ ಹಂಚಿಕೆ ಕುರಿತು ಕ್ಯಾಬಿನೆಟ್ ಆಯೋಗವೇ ಸ್ಪಷ್ಟವಾಗಿ ವಿವರಿಸಿದ್ದು ಕೆಳಗಿನ ಅಂಶಗಳಲ್ಲಿ ಆ ಕುರಿತಾದ ಮಾಹಿತಿಯನ್ನು ಕಾಣಬಹುದಾಗಿದೆ.
1. ಸಂವಿಧಾನ ರಚನಾ ಸಭೆಯ ೊಟ್ಟು ಸದಸ್ಯರ ಸಂಖೆ 389. 389 ಸದಸ್ಯರ ಪೈಕಿ ಬ್ರಿಟಿಷರೇ ನೇರವಾಗಿ ಆಳುತ್ತಿದ್ದ ಬ್ರಿಟಿಷ್ ಪ್ರಾಂತ್ಯಗಳಿಂದ 296 ಸದಸ್ಯರು ಚುನಾಯಿತಗೊಳ್ಳಬೇಕು. ಉಳಿದ 93 ಸದಸ್ಯರು ರಾಜ ಮನೆತನಗಳ ಅಧೀನದ ದೇಶೀಯ ಸಂಸ್ಥಾನಗಳಿಂದ ನಾಮಕರಣಗೊಳ್ಳಬೇಕು.
2. ಬ್ರಿಟಿಷ್ ಪ್ರಾಂತ್ಯಗಳ 296 ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಚೀಫ್ ಕಮೀಷನರ್ ಪ್ರಾಂತ್ಯಗಳಾದ ದೆಹಲಿ, ಅಜ್ಮೀರ್, ಕೂರ್ಗ್ ಾಗು ಬ್ರಿಟಿಷ್ ಬಲುಚಿಸ್ತಾನದಿಂದ ಭರ್ತಿ ಮಾಡಬೇಕಿತ್ತು. ಉಳಿದ 292 ಸ್ತಾನಗಳನ್ನು 11 ಬ್ರಿಟಿಷ್ ಪ್ರಾಂತ್ಯಗಳಿಂದ ಾಯ್ಕೆ ಮಾಡಬೇಕಿದ್ದು ಸಿಕ್ಕರಿಗೆ 4, ಮುಸ್ಲೀಮರಿಗೆ 78 ಹಾಗು ಸಾಮಾನ್ಯರಿಗೆ 210 ಸ್ತಾನ ಮೀಸಲಿಡಲಾಗಿತ್ತು. ಸೀಕ್, ಮುಸ್ಲೀಮ್ ಹಾಗು ಸಾಮಾನ್ಯ ಎಂಬ ಮೂರು ವರ್ಗದಿಂದ ಅವರವರ ಜನಸಂಖೆ ಆಧರಿಸಿ ಬ್ರಿಟಿಷ್ ಪ್ರಾಂತ್ಯದ 292 ಪ್ರತಿನಿಧಿಗಳು ಾಯ್ಕೆಯಾಗಬೇಕಿತ್ತು.
3. ಸಂವಿಧಾನ ರಚನಾ ಸಭೆಯ ೊಬ್ಬ ಸದಸ್ಯ ಹತ್ತು ಲಕ್ಷ ಜನರನ್ನು ಪ್ರತಿನಿಧಿಸಬೇಕಾಗಿತ್ತು. ಹೀಗಾಗಿ ಆಯಾ ಬ್ರಿಟಿಷ್ ಪ್ರಾಂತ್ಯ ಹಾಗು ದೇಶೀಯ ಸಂಸ್ಥಾನಗಳ ಜನಸಂಖೆಯನ್ನಾಧರಿಸಿ ಅವುಗಳು ಪ್ರತಿನಿಧಿಸಬೇಕಾದ ಸದಸ್ಯರ ಸಂಖೆಯನ್ನು ಹಂಚಲಾಗಿತ್ತು.
4. ಸಂವಿಧಾನ ರಚನಾ ಸಭೆಯ ಪ್ರತಿನಿಧಿಗಳು ಪ್ರಾಂತೀಯ ಶಾಸನಸಭೆಯ ತಮ್ಮ ವರ್ಗದ ಪ್ರತಿನಿಧಿಗಳಿಂದ ಪ್ರಮಾಣಾನುಗುಣ ಪ್ರಾತಿನಿಧ್ಯತಾ ಏಕಮತ ವರ್ಗಾವಣಾ ತತ್ವದಂತೆ ಮತ ಪಡೆದು ಆಯ್ಕೆಯಾಗಬೇಕಿತ್ತು.
5. ದೇಶೀಯ ಸಂಸ್ಥಾನಗಳಿಗೆ ನಿಗಧಿಪಡಿಸಲಾದ ಸಂಖೆಯ ಸದಸ್ಯರು ಆಯಾ ದೇಶೀಯ ಸಂಸ್ಥಾನಗಳ ಮುಖ್ಯಸ್ಥರಿಂದ ನಾಮಕರಣಗೊಳ್ಳಬೇಕಾಗಿತ್ತು.
ಬ್ರಿಟಿಷ್ ಪ್ರಾಂತ್ಯಗಳಿಗೆ ಮೀಸಲಾಗಿದ್ದ 296 ಸ್ಥಾನಗಳಿಗೆ ಜುಲೈ ಹಾಗು ಆಗಸ್ಟ್ 1946 ರಲ್ಲಿ ಚುನಾವಣೆ ಜರುಗಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ 208, ಮುಸ್ಲೀಮ್ ಲೀಗ್ 73 ಮತ್ತು ಇತರರು 15 ಸ್ಥಾನಗಳನ್ನು ಜಯಿಸಿದರು. ದೇಶೀಯ ಸಂಸ್ಥಾನಗಳಿಗೆ ಮೀಸಲಾಗಿದ್ದ 93 ಸ್ಥಾನಗಳ ನಾಮಕರಣ ನಿಧಾನವಾಯಿತು. ಹಿಂದೂ, ಮುಸ್ಲೀಮ್, ಕ್ರೈಸ್ತ, ಪಾರಸೀ, ಆಂಗ್ಲೊ ಇಂಡಿಯನ್, ಮಹಿಳೆಯರನ್ನು ಒಳಗೊಂಡಿದ್ದ ಸಂವಿಧಾನ ರಚನಾ ಸಭೆ ಆಡಳಿತಾನುಭವಿಗಳು, ಶಿಕ್ಷಣ ತಜ್ನರು, ಪತ್ರಿಕೋದ್ಯಮಿಗಳು, ನ್ಯಾಯವಾದಿಗಳು, ಸಮಾಜ ಚಿಂತಕರಿಂದ ಕೂಡಿತ್ತು. ಮಹಾತ್ಮಾ ಗಾಂಧಿ ಹಾಗು ಮಹಮದಲಿ ಜಿನ್ನಾ ಸಂವಿಧಾನ ರಚನಾ ಸಭೆಯಿಂದ ಹೊರಗುಳಿದರು. ಉಳಿದಂತೆ ಪ್ರಮುಖ ಸ್ವತಂತ್ರ ಹೋರಾಟಗಾರರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಆಯ್ಕೆಯಾದರು. ರಾಜಕುಮಾರಿ ಅಮೃತ್ ಕೌರ್, ಹಂಸ ಮೆಹ್ತಾ, ದುರ್ಗಾ ಬಾಯಿ ದೇಶಮುಖ್, ಪೂರ್ಣಿಮ ಬ್ಯಾನರ್ಜಿ, ವಿಜಯಲಕ್ಶ್ಮೀ ಪಂಡಿತ್, ಸರೋಜಿನಿ ನಾಯ್ಡು ಸೇರಿ 15 ಮಹಿಳೆಯರು ಸಂವಿಧಾನ ರಚನಾ ಸಭೆಯಲ್ಲಿದ್ದರು. ಒಟ್ಟಾರೆ ಭಾರತ ಸಂವಿಧಾನ ರಚನಾ ಸಭೆಯು ಪರೋಕ್ಷವಾಗಿ ಚುನಾಯಿತ ಮತ್ತು ನಾಮಕರಣಗೊಂಡ ಸದಸ್ಯರಿಂದ ರಚನೆಗೊಂಡಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ