ಅಧ್ಯಾಯ 8:
ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ:
ಒಂದು ಅಂಕದ ಪ್ರಶ್ನೋತ್ತರಗಳು:
1. ಅಂತರರಾಷ್ಟ್ರೀಯ ಸಂಬಂಧ ಎಂದರೇನು?
ಉ: ಪರಮಾಧಿಕಾರವುಳ್ಳ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ ನಡುವಿನ ಸಂಬಂಧಗಳನ್ನು ಅಂತರರಾಷ್ಟ್ರೀಯ ಸಂಬಂಧ ಎನ್ನುವರು.
2. ಅಂತರರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಮೊದಲು ಬಳಸಿದವರು ಯಾರು?
ಉ: ಅಂತರರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಮೊದಲು ಬಳಸಿದವರು ಜರ್ಮಿ ಬೆಂಥಾಮ್.
3. ಜರ್ಮಿ ಬೆಂಥಾಮ್ ಬರೆದ ಗ್ರಂಥ ಯಾವುದು?
ಉ: ಜರ್ಮಿ ಬೆಂಥಾಮ್ ಲಾ ಆಫ಼್ ನೇಷನ್ ಎಂಬ ಗ್ರಂಥ ಬರೆದನು.
4. ಪರಮಾಧಿಕಾರ ಎಂಬ ಪದವನ್ನು ಮೊದಲು ಬಳಸಿದವರು ಯಾರು?
ಉ: ಪರಮಾಧಿಕಾರ ಎಂಬ ಪದವನ್ನು ಮೊದಲು ಬಳಸಿದವರು ಜೀನ್ ಬೊಡಿನ್.
5. ಜೀನ್ ಬೊಡಿನ್ ಬರೆದ ಕ್ರುತಿ ಹೆಸರಿಸಿ.
ಉ: ಜೀನ್ ಬೊಡಿನ್ ಬರೆದ ಕ್ರುತಿ ದಿ ರಿಪಬ್ಲೀಕ್.
6. ರಾಷ್ಟ್ರೀಯ ಶಕ್ತಿ ಎಂದರೇನು?
ಉ: ಒಂದು ದೇಶದ ವಿವಿಧ ಬಗೆಯ ಸಾಮರ್ಥ್ಯ ಹಾಗು ಬಲವನ್ನು ರಾಷ್ಟ್ರೀಯ ಶಕ್ತಿ ಎನ್ನುವರು.
7. ಶಕ್ತಿ ಬಣಗಳು ಎಂದರೇನು?
ಉ: ಜಗತ್ತು ಅಮೇರಿಕ ನೇತ್ರುತ್ವದಲ್ಲಿ ಬಂಡವಾಳಶಾಹಿ ಹಾಗು ಸೋವಿಯತ್ ರಷ್ಯಾದ ನೇತ್ರುತ್ವದಲ್ಲಿ ಸಮತಾವಾದಿ ಎಂಬ ಗುಂಪುಗಳಾಗಿ ರಚನೆಯಾದುದನ್ನು ಶಕ್ತಿ ಬಣಗಳು ಎನ್ನಲಾಗುತ್ತದೆ.
8. ರಾಷ್ಟ್ರಾಧಿಪತ್ಯ ಎಂದರೇನು?
ಉ: ಜಾಗತಿಕ ಶಕ್ತಿಯು ಯಾರಲ್ಲಿ ಕೇಂದ್ರೀಕ್ರುತವಾಗಿದೆ ಎಂಬುದನ್ನು ಸೂಚಿಸುವುದೇ ರಾಷ್ಟ್ರಾಧಿಪತ್ಯವಾಗಿದೆ.
9. ವೆಸ್ಟ್ ಫ಼ಾಲಿಯಾ ಒಪ್ಪಂದವು ಯಾವಾಗ ನಡೆಯಿತು?
ಉ: ವೆಸ್ಟ್ ಫ಼ಾಲಿಯಾ ಒಪ್ಪಂದವು 1648ರಲ್ಲಿ ನಡೆಯಿತು.
10. ರಾಷ್ಟ್ರಗಳ ಸಂಘ ಯಾವಾಗ ಅಸ್ತಿತ್ವಕ್ಕೆ ಬಂದಿತು?
ಉ: ಮೊದಲ್ಅ ಮಹಾ ಯುದ್ಧದ ನಂತರ 10 ಜನೇವರಿ 1920ರಂದು ರಾಷ್ಟ್ರಗಳ ಸಂಘ ಅಸ್ತಿತ್ವಕ್ಕೆ ಬಂದಿತು.
11. ರಾಷ್ಟ್ರಗಳ ಸಂಘವು ಯಾವಾಗ ಕೊನೆಗೊಂಡಿತು?
ಉ: ರಾಷ್ಟ್ರಗಳ ಸಂಘವು 1939ರಲ್ಲಿ ಎರಡನೆಯ ಮಹಾ ಯುದ್ಧ ಆರಂಭವಾಗುವ ಮೂಲಕ ಕೊನೆಗೊಂಡಿತು.
12. ವಿಶ್ವ ಸಂಸ್ಥೆಯು ಯಾವಾಗ ಅಸ್ತಿತ್ವಕ್ಕೆ ಬಂದಿತು?
ಉ: 1945ರ ಅಕ್ಟೋಬರ್ 24ರಂದು ವಿಶ್ವ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿತು.
13. ವಿಶ್ವ ಸಂಸ್ಥೆಯ ಸನದಿಗೆ ಸಹಿ ಮಾಡಿದ ಮೂಲ ಸದಸ್ಯ ರಾಷ್ಟ್ರಗಳು ಎಷ್ಟು?
ಉ: ವಿಶ್ವ ಸಂಸ್ಥೆಯ ಸನದಿಗೆ ಸಹಿ ಮಾಡಿದ ಮೂಲ ಸದಸ್ಯ ರಾಷ್ಟ್ರಗಳ ಸಂಖೆ 51.
14. ವಿಶ್ವ ಸಂಸ್ಥೆಯ ಮೂಲ ತತ್ವಗಳನ್ನು ಅದರ ಪ್ರನಾಳಿಕೆಯ ಯಾವ ವಿಧಿಯಲ್ಲಿ ಕಾಣಬಹುದು?
ಉ: ವಿಶ್ವ ಸಂಸ್ಥೆಯ ಮೂಲ ತತ್ವಗಳನ್ನು ಅದರ ಪ್ರನಾಳಿಕೆಯ ಎರದನೆಯ ವಿಧಿಯಲ್ಲಿ ಕಾಣಬಹುದು.
15. ವಿಶ್ವ ಸಂಸ್ಥೆಯ ಉದ್ದೇಶಗಳನ್ನು ಅದರ ಪ್ರಣಾಳಿಕೆಯ ಯಾವ ವಿಧಿಯಲ್ಲಿ ಕಾಣಬಹುದು?
ಉ: ವಿಶ್ವ ಸಂಸ್ಥೆಯ ಉದ್ದೇಶಗಳನ್ನು ಅದರ ಪ್ರಣಾಳಿಕೆಯ ಮೊದಲನೆಯ ವಿಧಿಯಲ್ಲಿ ಕಾಣಬಹುದು.
16. ಪ್ರಸ್ತುತ ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖೆ ಎಷ್ಟು?
ಉ: ಪ್ರಸ್ತುತ ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖೆ 193.
17. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಂದು ಸದಸ್ಯ ರಾಷ್ಟ್ರದಿಂದ ಎಷ್ಟು ಸದಸ್ಯರು ಭಾಗವಹಿಸಬಹುದು?
ಉ: ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಂದು ಸದಸ್ಯ ರಾಷ್ಟ್ರದಿಂದ ಐದು ಸದಸ್ಯರು ಭಾಗವಹಿಸಬಹುದು.
18. ವಿಶ್ವ ಸಂಸ್ಥೆಯ ಅತ್ಯಂತ ಚಿಕ್ಕ ಹಾಗು ಶಕ್ತಿಶಾಲಿ ಅಂಗ ಯಾವುದು?
ಉ: ವಿಶ್ವ ಸಂಸ್ಥೆಯ ಅತ್ಯಂತ ಚಿಕ್ಕ ಹಾಗು ಶಕ್ತಿಶಾಲಿ ಅಂಗ ಭದ್ರತಾ ಮಂಡಳಿಯಾಗಿದೆ.
19. ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖೆ ಎಷ್ಟು?
ಉ: ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖೆ ಐದು.
20. ವಿಶ್ವ ಸಂಸ್ಥೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಯಾರು?
ಉ: ವಿಶ್ವ ಸಂಸ್ಥೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಆಗಿದ್ದರು.
21. ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯು ಎಲ್ಲಿದೆ?
ಉ: ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯು ಅಮೇರಿಕದ ನ್ಯೂಯಾರ್ಕ್ ನಗರದಲ್ಲಿದೆ.
22. ಅಂತರರಾಷ್ಟ್ರೀಯ ನ್ಯಾಯಾಲಯವು ಎಲ್ಲಿದೆ?
ಉ: ಅಂತರರಾಷ್ಟ್ರೀಯ ನ್ಯಾಯಾಲಯವು ನೆದರ್ಲ್ಯಾಂಡ್ನ ಹೇಗ್ ನಗರದಲ್ಲಿದೆ.
23. ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಎಷ್ಟು ನ್ಯಾಯಾಧೀಶರಿರುತ್ತಾರೆ?
ಉ: ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಒಟ್ಟು 15 ನ್ಯಾಯಾಧೀಶರಿರುತ್ತಾರೆ.
24. ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರವಧಿ ಎಷ್ಟು ವರ್ಷಗಳು?
ಉ: ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರವಧಿ 9 ವರ್ಷಗಳು.
25. ಏಕ ಪಕ್ಷೀಯ ರಾಷ್ಟ್ರಾಧಿಪತ್ಯ ಎಂದರೇನು?
ಉ: ಅಂತರರಾಷ್ಟ್ರೀಯವಾಗಿ ಒಂದೇ ರಾಷ್ಟ್ರವು ತನ್ನ ಆರ್ಥಿಕ ಸ್ಥಿರತೆ,ಸಂಸ್ಕ್ರುತಿ ಹಾಗು ಸೈನಿಕ ಬಲಗಳ ನೆರವಿನಿಂದ ಉನ್ನತ ಸ್ಥಾನಮಾನ ಪಡೆದಿರುವುದನ್ನು ಏಕ ಪಕ್ಷೀಯ ರಾಷ್ಟ್ರಾಧಿಪತ್ಯ ಎನ್ನಬಹುದು.ಉದಾ:ಶೀತಲ ಸಮರದ ಮೊದಲು ಹಾಗು ಯು.ಎಸ್.ಎಸ್.ಆರ್ ಒಡಕಿನ ಬಳಿಕ ಅಮೇರಿಕದ ಶಕ್ತಿ ಪ್ರದರ್ಶನ.
26. ದ್ವೀ ಪಕ್ಷೀಯ ರಾಷ್ಟ್ರಾಧಿಪತ್ಯ ಎಂದರೇನು?
ಉ: ಅಂತರರಾಷ್ಟ್ರೀಯವಾಗಿ ಎರಡು ದೇಶಗಳು ತಮ್ಮ ಆರ್ಥಿಕ ಸ್ಥಿರತೆ,ಸಂಸ್ಕ್ರುತಿ ಹಾಗು ಸೈನಿಕ ಬಲಗಳ ವಿಚಾರದಲ್ಲಿ ಉನ್ನತ ಸ್ಥಾನಮಾನಕ್ಕಾಗಿ ಪೈಪೋಟಿ ನಡೆಸುವುದನ್ನು ದ್ವೀ ಪಕ್ಷೀಯ ರಾಷ್ಟ್ರಾಧಿಪತ್ಯ ಎನ್ನುವರು.ಉದಾ:ಶೀತಲ ಸಮರದ ಸಮಯದಲ್ಲಿ ಯು.ಎಸ್.ಏ ಮತ್ತು ಯು.ಎಸ್.ಎಸ್.ಆರ್ ನಡುವಿನ ಶಕ್ತಿ ಪ್ರದರ್ಶನ.
27. ಬಹು ಪಕ್ಷೀಯ ರಾಶ್ಟ್ರಾಧಿಪತ್ಯ ಎಂದರೇನು?
ಉ: ಅಂತರರಾಷ್ಟ್ರೀಯವಾಗಿ ಎರಡಕ್ಕಿಂತ ಹೆಚ್ಚು ರಾಷ್ಟ್ರಗಳು ತಮ್ಮ ಆರ್ಥಿಕ ಸ್ಥಿರತೆ,ಸಂಸ್ಕ್ರುತಿ ಹಾಗು ಸೈನಿಕ ಬಲಗಳ ವಿಚಾರದಲ್ಲಿ ಉನ್ನತ ಸ್ಥಾನಮಾನಕ್ಕಾಗಿ ಪೈಪೋಟಿ ನಡೆಸುವುದನ್ನು ಬಹು ಪಕ್ಷೀಯ ರಾಶ್ಟ್ರಾಧಿಪತ್ಯ ಎನ್ನುವರು.ಉದಾಪ್ರಸ್ತುತ ಅಮೇರಿಕ,ಚೀನಾ,ಜಪಾನ್,ಭಾರತ,ಜರ್ಮನಿಗಳ ನಡುವಿನ ಶಕ್ತಿ ಪ್ರದರ್ಶನ.
28. ಸಂಯುಕ್ತ ರಾಷ್ಟ್ರ ಸಂಘ[ವಿಶ್ವ ಸಂಸ್ಥೆ] ಎಂದರೇನು?
ಉ: ಎರಡನೆಯ ಮಹಾ ಯುದ್ಧದ ನಂತರ ಪ್ರಬಲ ರಾಷ್ಟ್ರಗಳ ನಾಯಕರು ಜಗತ್ತಿನಲ್ಲಿ ಯುದ್ಧ ತಡೆದು ಶಾಂತಿಯನ್ನು ಸ್ಥಾಪಿಸಲು ಜಾರಿಗೊಳಿಸಿದ ಸಂಸ್ಥೆಯೇ ಸಂಯುಕ್ತ ರಾಷ್ಟ್ರ ಸಂಘ[ವಿಶ್ವ ಸಂಸ್ಥೆ] ಆಗಿದೆ.
29. ಅಮ್ಪಿಟೊನಿಕ್ ಸಂಘ ಎಂದರೇನು?
ಉ: ಕ್ರಿ.ಶ. ಆರನೇಯ ಶತಮಾನದಲ್ಲಿ ಗ್ರೀಸ್ನಲ್ಲಿ ಯುದ್ಧಗಳನ್ನು ತಡೆದು ರಾಜ್ಯಗಳ ನಡುವೆ ಮೈತ್ರಿಯನ್ನು ಪ್ರೋತ್ಸಾಹಿಸಲು ಅಸ್ತಿತ್ವಕ್ಕೆ ಬಂದ ಮೊದಲ ಅಂತರರಾಷ್ಟ್ರೀಯ ಸಂಘಟನೆಯೇ ಅಮ್ಪಿಟೊನಿಕ್ ಸಂಘವಾಗಿದೆ.
30. ಪ್ರಾದೇಶಿಕ ಸಂಘಟನೆ ಎಂದರೇನು?
ಉ: ನಿರ್ದಿಷ್ಟ ಪ್ರದೇಶದ ಸಾರ್ವಬೌಮ ರಾಷ್ಟ್ರಗಳು ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಒಂದುಗೂಡಿರುವ ವ್ಯವಸ್ಥೆಯನ್ನು ಪ್ರಾದೇಶಿಕ ಸಂಘಟನೆ ಎನ್ನಬಹುದು.
31. ಪ್ರಾದೇಶಿಕ ಸಂಘಟನೆಗಳಿಗೆ ಉದಾಹರಣೆ ಕೊಡಿ.
ಉ: saarc [SOUTH ASIAN ASSOCIATION FOR REASONAL CO-OPERATION],asean [ASSOCIATION OF SOUTH EAST ASIAN NATIONS], opec [OIL PRODUCTING AND EXPORTING COUNTRIES], oas [ORGANISATION OF AMERICAN STATES], oau [ORGANISATION OF AFRICAN UNION] ಪ್ರಮುಖ ಪ್ರಾದೇಶಿಕ ಸಂಘಟನೆಗಳಾಗಿವೆ.
32. ಆಸಿಯಾನ್ ಸಂಘಟನೆಯು ಯಾವಾಗ ಅಸ್ತಿತ್ವಕ್ಕೆ ಬಂದಿತು?
ಉ: ಆಸಿಯಾನ್ ಸಂಘಟನೆಯು ಆಗಸ್ಟ್ ಎಂಟು 1967ರಂದು ಬ್ಯಾಂಕಾಕ್ ಸಮ್ಮೇಳನದ ಫ಼ಲವಾಗಿ ಅಸ್ತಿತ್ವಕ್ಕೆ ಬಂದಿತು.
33. ಆಸಿಯಾನ್ ಸಂಘಟನೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ?
ಉ: ಆಸಿಯಾನ್ ಸಂಘಟನೆಯಲ್ಲಿ ಹತ್ತು ಸದಸ್ಯ ರಾಷ್ಟ್ರಗಳಿವೆ.
34. ಭಾರತವು ಯಾವಾಗ ಆಸಿಯಾನ್ ಸಂಘಟನೆಯ ಸಂಪೂರ್ಣ ಅಥಿತಿ ರಾಷ್ಟ್ರವಾಯಿತು?
ಉ: 1996ರಲ್ಲಿ ಭಾರತವು ಆಸಿಯಾನ್ ಸಂಘಟನೆಯ ಸಂಪೂರ್ಣ ಅಥಿತಿ ರಾಷ್ಟ್ರವಾಯಿತು.
35. ಭಾರತ ಹಾಗು ಆಸಿಯಾನ್ ನಡುವೆ ಪ್ರಥಮ ಸಮ್ಮೇಳನ ಯಾವಾಗ ಜರುಗಿತು?
ಉ: 2002ರಲ್ಲಿ ಭಾರತ ಹಾಗು ಆಸಿಯಾನ್ ನಡುವೆ ಪ್ರಥಮ ಸಮ್ಮೇಳನ ಜರುಗಿತು.
36. ಸಾರ್ಕ್ ಸಂಘಟನೆಯ ಪಿತಾಮಹ ಯಾರು?
ಉ: ಬಾಂಗ್ಲಾ ದೇಶದ ಅಧ್ಯಕ್ಷ ಜಿಯಾ ಉರ್ ರೆಹಮಾನ್ ಸಾರ್ಕ್ನ ಪಿತಾಮಹನಾಗಿದ್ದಾನೆ.
37. ಸಾರ್ಕ್ನ ಮೊದಲ ಶ್ರುಂಗ ಸಭೆಯು ಯಾವಾಗ ಜರುಗಿತು?
ಉ: ಸಾರ್ಕ್ನ ಮೊದಲ ಶ್ರುಂಗ ಸಭೆಯು ಡಿಸೆಂಬರ್ 1985ರಲ್ಲಿ ಬಾಂಗ್ಲಾ ದೇಶದ ಢಾಕಾದಲ್ಲಿ ಜರುಗಿತು.
38. ಯಾವ ದಿನವನ್ನು ಸಾರ್ಕ್ ಚಾರ್ಟರ್ನ ದಿನಾಚರಣೆಯಾಗಿ ಆಚರಿಸಲಾಗುತ್ತದೆ?
ಉ: ಪ್ರತಿ ವರ್ಷ ಡಿಸೆಂಬರ್ ಎಂಟನ್ನು ಸಾರ್ಕ್ ಚಾರ್ಟರ್ನ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
39. ಆಫ್ಘಾನಿಸ್ತಾನವು ಯಾವಾಗ ಸಾರ್ಕ್ ಸಂಘಟನೆ ಸೇರಿತು?
ಉ: ಆಫ್ಘಾನಿಸ್ತಾನವು ಎಂಟನೆಯ ಸದಸ್ಯ ರಾಷ್ಟ್ರವಾಗಿ 2007ರಲ್ಲಿ ಸಾರ್ಕ್ ಸಂಘಟನೆ ಸೇರಿತು.
40. SAFTA ವಿಸ್ತರಿಸಿ.
ಉ: SAFTA ವಿಸ್ತರಿಸಿದರೆ ಸೌತ್ ಏಶಿಯನ್ ಫ಼್ರೀ ಟ್ರೇಡ್ ಅಗ್ರಿಮೆಂಟ್ ಎಂದಾಗುತ್ತದೆ.
41. saeu ವಿಸ್ತರಿಸಿ.
ಉ: saeu ವಿಸ್ತರಿಸಿದರೆ ಸೌತ್ ಏಶಿಯನ್ ಎಕನಾಮಿಕ್ ಯೂನಿಯನ್ ಎಂದಾಗುತ್ತದೆ.ಅದೇ ರೀತಿ S.A.V.E ವಿಸ್ತರಿಸಿದರೆ
42. SAVE ವಿಸ್ತರಿಸಿ.
ಉ: SAVE ವಿಸ್ತರಿಸಿದರೆ ಸಾರ್ಕ್ ಆಡಿಯೋ ವಿಡಿಯೋ ಎಕ್ಸ್ಚೇಂಜ್ ಎಂದಾಗುತ್ತದೆ.
43. ಬ್ರಿಕ್ಸ್ ಸಂಘಟನೆಯ ಮೊದಲ ಶ್ರುಂಗ ಸಭೆ ಎಲ್ಲಿ ಜರುಗಿತು?
ಉ: ಬ್ರಿಕ್ಸ್ ಸಂಘಟನೆಯ ಮೊದಲ ಶ್ರುಂಗ ಸಭೆ ರಷ್ಯಾದಲ್ಲಿ ಜರುಗಿತು.
44. ಸೌತ್ ಆಫ಼್ರಿಕವು ಯಾವಾಗ ಬ್ರಿಕ್ಸ್ ಸದಸ್ಯತ್ವ ಪಡೆಯಿತು?
ಉ: ಸೌತ್ ಆಫ಼್ರಿಕವು 24 ಡಿಸೆಂಬರ್ 2010ರಂದು ಬ್ರಿಕ್ಸ್ ಸದಸ್ಯತ್ವ ಪಡೆಯಿತು.
45. ಬ್ರಿಕ್ಸ್ ಸಂಘಟನೆಯ ಏಳನೆಯ ಶ್ರುಂಗ ಸಭೆಯು ಎಲ್ಲಿ ಜರುಗಿತು?
ಉ: ಬ್ರಿಕ್ಸ್ ಸಂಘಟನೆಯ ಏಳನೆಯ ಶ್ರುಂಗ ಸಭೆಯು 2016ರಲ್ಲಿ ಭಾರತದ ಗೋವಾದಲ್ಲಿ ಜರುಗಿತು.
46. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯನ್ನು ಯಾರು ನೇಮಿಸುತ್ತಾರೆ?
ಉ: ಭದ್ರತಾ ಮಂಡಳಿಯ ಶಿಫ಼ಾರಸಿನಂತೆ ಸಾಮಾನ್ಯ ಸಭೆಯು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯನ್ನು ನೇಮಿಸುತ್ತದೆ.
47. ಭಾರತ ಸಂವಿಧಾನದ ಎಷ್ಟನೆಯ ವಿಧಿಯಲ್ಲಿ ಅಂತರರಾಷ್ಟ್ರೀಯ ಶಾಂತಿ ಮತ್ತು ಒಪ್ಪಂದ ಕುರಿತು ತಿಳಿಸಿದೆ?
ಉ: ಭಾರತ ಸಂವಿಧಾನದ 51ನೆಯ ವಿಧಿಯಲ್ಲಿ ಅಂತರರಾಷ್ಟ್ರೀಯ ಶಾಂತಿ ಮತ್ತು ಒಪ್ಪಂದ ಕುರಿತು ತಿಳಿಸಿದೆ.
ಎರಡು ಅಂಕಗಳ ಪ್ರಶ್ನೋತ್ತರಗಳು:
1.
2.
3. ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಶಕ್ತಿಯೇ ಪ್ರಧಾನವಾದದ್ದು ಎಂದು ತಿಳಿಸಿದವರು ಯಾರು?
ಉ: ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಶಕ್ತಿಯೇ ಪ್ರಧಾನವಾದದ್ದು ಎಂದವರು ಹಾನ್ಸ್ ಮಾರ್ಗೆಂಥೊ.ಆದ್ದರಿಂದ ಅವರು ಅಂತರರಾಷ್ಟ್ರೀಯ ರಾಜಕಾರಣವನ್ನು ಶಕ್ತಿಗಾಗಿ ನಡೆಸುವ ಹೋರಾಟ ಎಂದು ಬಣ್ಣಿಸಿದ್ದಾರೆ.
4. ರಾಷ್ಟ್ರೀಯ ಶಕ್ತಿ ಎಂದರೇನು?
ಉ: ಒಂದು ದೇಶದ ವಿವಿಧ ಬಗೆಯ ಸಾಮರ್ಥ್ಯ ಹಾಗು ಬಲವನ್ನು ರಾಷ್ಟ್ರೀಯ ಶಕ್ತಿ ಎನ್ನಬಹುದು.ಇಲ್ಲಿ ಜನಸಂಖೆ,ಭೂ ಪ್ರದೆಶ,ಸೈನ್ಯ ಶಕ್ತಿ,ತಾಂತ್ರಿಕತೆ,ನೈಸರ್ಗಿಕ ಸಂಪನ್ಮೂಲಗಳು,ಆಕರ್ಷಕ ನಾಯಕತ್ವ ರಾಷ್ಟ್ರ ಶಕ್ತಿಯ ಮೂಲಾಂಶಗಳಾಗಿರುತ್ತವೆ.
5. ರಾಷ್ಟ್ರೀಯ ಹಿತಾಸಕ್ತಿ ಎಂದರೇನು?
ಉ: ಒಂದು ದೇಶವು ಇನ್ನೊಂದು ದೇಶದೊಡನೆ ವ್ಯವಹರಿಸುವಾಗ ತನಗೆ ಅನುಕೂಲವಾಗುವಂತೆ ನಿರ್ಧಾರ ರೂಪಿಸುವುದಕ್ಕೆ ರಾಷ್ಟ್ರೀಯ ಹಿತಾಸಕ್ತಿ ಎನ್ನಬಹುದು.ಇದು ದೇಶದ ಪ್ರಜೆಗಳ ಅಪೇಕ್ಷೆಯ ಆಧಾರ ಹೊಂದಿರುತ್ತದೆ.
6. ಶಕ್ತಿ ಬಣಗಳು ಎಂದರೇನು? ಉದಾಹರಣೆ ನೀಡಿ
ಉ: ಎರಡನೆಯ ಮಹಾ ಯುದ್ಧದ ನಂತರ ಪ್ರಪಂಚದ ದೇಶಗಳು ಎರಡು ಗುಂಪುಗಳಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾದವು. ಈ ಗುಂಪುಗಳನ್ನು ಶಕ್ತಿ ಬಣಗಳು ಎನ್ನಲಾಗುತ್ತದೆ. ಉದಾ:ಅಮೇರಿಕ ನೇತ್ರುತ್ವದ ಬಂಡವಾಳಶಾಹಿ ಬಣ ಹಾಗು ಸೋವಿಯತ್ ರಷ್ಯಾ ನೇತ್ರುತ್ವದ ಸಮಾಜವಾದಿ ಬಣ.
7. ಯಾವಾಗ ವೆಸ್ಟ್ ಫ಼ಾಲಿಯಾ ಮತ್ತು ಯುಟ್ರೆಚ್ ಒಪ್ಪಂದಗಳಿಗೆ ಸಹಿ ಹಾಕಲಾಯಿತು?
ಉ: ವೆಸ್ಟ್ ಫ಼ಾಲಿಯಾ ಒಪ್ಪಂದಕ್ಕೆ 1648ರಲ್ಲಿ ಹಾಗು ಯುಟ್ರೆಚ್ ಶಾಂತಿ ಒಪ್ಪಂದಕ್ಕೆ 1713ರಲ್ಲಿ ಸಹಿ ಹಾಕಲಾಯಿತು.
8. ರಾಷ್ಟ್ರಗಳ ಸಂಘದ ಎರಡು ಉದ್ದೇಶಗಳನ್ನು ತಿಳಿಸಿ?
ಉ: ರಾಷ್ಟ್ರಗಳ ಸಂಘದ ಎರಡು ಉದ್ದೇಶಗಳೆಂದರೆ
a.ಪ್ರಪಂಚವನ್ನು ಯುದ್ಧದಿಂದ ಕಾಪಾಡುವುದು
b.ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸುವುದು.
9. ರಾಷ್ಟ್ರಗಳ ಸಂಘದ ಅಂಗಗಳನ್ನು ತಿಳಿಸಿ?
ಉ:ರಾಷ್ಟ್ರಗಳ ಸಂಘವು ಮೂರು ಅಂಗಗಳಿಂದ ಕೂಡಿತ್ತು.ಅವೆಂದರೆ ಅ. ಶಾಸನ ಸಭೆ ಆ. ಮಂತ್ರಿ ಮಂಡಳ ಇ. ಅಂತರರಾಷ್ಟ್ರೀಯ ಕಾರ್ಯಾಲಯ.
10. ವಿಶ್ವ ಸಂಸ್ಥೆಯ ಪ್ರಣಾಳಿಕೆ ಕುರಿತು ಬರೆಯಿರಿ?
ಉ: ವಿಶ್ವ ಸಂಸ್ಥೆಯ ಪ್ರನಾಳಿಕೆಯು 19 ಭಾಗಗಳು ಹಾಗು 111 ವಿಧಿಗಳನ್ನು ಒಳಗೊಂಡಿತ್ತು.ಈ ಪ್ರಣಾಳಿಕೆಗೆ 51 ಸದಸ್ಯ ರಾಷ್ಟ್ರಗಳು ಸ್ಯಾನ್ ಫ಼್ರಾನ್ಸಿಸ್ಕೊದಲ್ಲಿ 1945 ಜುಲೈ 24 ರಂದು ಸಹಿ ಮಾಡಿದ್ದವು.
11.ವಿಶ್ವ ಸಂಸ್ಥೆಯ ಎರಡು ಉದ್ದೇಶಗಳನ್ನು ಬರೆಯಿರಿ?
ಉ: ವಿಶ್ವ ಸಂಸ್ಥೆಯ ಎರಡು ಉದ್ದೇಶಗಳೆಂದರೆ
ಅ. ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಸ್ಥಾಪಿಸುವುದು.
ಆ. ರಾಷ್ಟ್ರಗಳ ನಡುವೆ ಸ್ನೇಹ ಸಂಬಂಧಗಳನ್ನು ಬೆಳೆಸಿ ವಿವಾದಗಳನ್ನು ಮಾತುಕತೆಯ ಮೂಲಕ ಬಗೆ ಹರಿಸುವುದು.
12. ವಿಶ್ವ ಸಂಸ್ಥೆಯ ಎರಡು ತತ್ವಗಳನ್ನು ತಿಳಿಸಿ?
ಉ: ಅ. ಎಲ್ಲ ಸದಸ್ಯ ರಾಷ್ಟ್ರಗಳ ಪರಮಾಧಿಕಾರವನ್ನು ಪರಸ್ಪರ ಗೌರವಿಸುವುದು.
ಆ. ವಿಶ್ವ ಸಂಸ್ಥೆಯಲ್ಲಿ ಸದಸ್ಯರಾಷ್ಟ್ರಗಳು ಅಚಲ ನಂಬಿಕೆ ಹೊಂದುವುದು.
13. ವಿಶ್ವ ಸಂಸ್ಥೆಯ ಪ್ರಧಾನ ಅಂಗಗಳಾವುವು?
ಉ: ವಿಶ್ವ ಸಂಸ್ಥೆಯು 6 ಪ್ರಧಾನ ಅಂಗಗಳಿಂದ ಕೂಡಿದೆ.ಅವೆಂದರೆ ಅ. ಸಾಮಾನ್ಯ ಸಭೆ, ಆ. ಭದ್ರತಾ ಮಂಡಳಿ, ಇ. ಆರ್ಥಿಕ ಹಾಗು ಸಾಮಾಜಿಕ ಸಮಿತಿ, ಈ. ಧರ್ಮದರ್ಶಿ ಸಮೀತಿ, ಉ. ಅಂತರರಾಷ್ಟ್ರೀಯ ನ್ಯಾಯಾಲಯ ಮತ್ತು ಊ. ಸಚಿವಾಲಯ.
14. ಸಾಮಾನ್ಯ ಸಭೆಯ ಎರಡು ಕಾರ್ಯಗಳಾವುವು?
ಉ: ಅ. ಜಾಗತಿಕ ವಿಚಾರಗಳನ್ನು ಕುರಿತು ಚರ್ಚಿಸುವುದು,
ಆ. ವಿಶ್ವ ಸಂಸ್ಥೆಯ ಆಯವ್ಯಯವನ್ನು ಅನುಮೋದಿಸುವುದು,
ಇ. ಭದ್ರತಾ ಮಂಡಳಿ ಸೂಚಿಸಿರುವ ಮಸೂದೆಗಳನ್ನು ಅಂಗಿಕರಿಸುವುದು.
15. ಭದ್ರತಾ ಮಂಡಳಿಯ ಸದಸ್ಯತ್ವ ಕುರಿತು ಬರೆಯಿರಿ?
ಉ: ಭದ್ರತಾ ಮಂಡಳಿಯು ಖಾಯಂ ಹಾಗು ಹಂಗಾಮಿ ಸದಸ್ಯ ರಾಷ್ಟ್ರಗಳಿಂದ ಕೂಡಿರುತ್ತದೆ.ಇದರಲ್ಲಿ ಐದು ಖಾಯಂ ಸದಸ್ಯ ರಾಷ್ಟ್ರಗಳಿದ್ದರೆ 10 ಹಂಗಾಮಿ ಸದಸ್ಯರಾಷ್ಟ್ರಗಳು ಎರಡು ವರ್ಷಗಳ ಅವಧಿಗೆ ಸಾಮಾನ್ಯ ಸಬೆಯಿಂದ ಆಯ್ಕೆಯಾಗುತ್ತಾರೆ.
16. ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ?
ಉ: ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳೆಂದರೆ ಬ್ರಿಟನ್,ಚೀನಾ,ಫ಼್ರಾನ್ಸ್,ರಷ್ಯಾ ಹಾಗು ಯು.ಎಸ್.ಎ[BCFRU]
17. ವಿಶ್ವ ಸಂಸ್ಥೆಯ ಈಗಿನ ಪ್ರಧಾನ ಕಾರ್ಯದರ್ಶಿಯ ಹೆಸರೇನು? ಆತ ಯಾವ ದೇಶದವನು?
ಉ: ವಿಶ್ವ ಸಂಸ್ಥೆಯ ಈಗಿನ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರಸ್.ಆತ ಪೋರ್ಚುಗಲ್ ದೇಶದವನು.
18. ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ಸದಸ್ಯತ್ವ ಕುರಿತು ಬರೆಯಿರಿ?
ಉ: ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಒಟ್ಟು ಸದಸ್ಯರು 54.ಇವರಲ್ಲಿ ಪ್ರತಿ ವರ್ಷ 18 ಸದಸ್ಯರು ನಿವ್ರುತ್ತರಾಗಿ ಸಾಮಾನ್ಯಸಭೆಯಿಂದ ಹೊಸ ಸದಸ್ಯರು ಆಯ್ಕೆಯಾಗುತ್ತಾರೆ. ಈ ಮಂಡಳಿಯ ಸದಸ್ಯರ ಅಧಿಕಾರವಧಿಯು ಮೂರು ವರ್ಷಗಳಾಗಿರುತ್ತದೆ.
19. ಅಂತರರಾಷ್ಟ್ರೀಯ ಸಂಘಟನೆಯ ಒಂದು ವ್ಯಾಖ್ಯಾನವನ್ನು ನೀಡಿ?
ಉ: ಪೋಟರ್ ಪ್ರಕಾರ ನೀತಿ ನಿಯಮಗಳಿಗೆ ಬದ್ಧವಾಗಿ ರಾಷ್ಟ್ರಗಳು ಒಗ್ಗೂಡುವಿಕೆಯನ್ನು ಪ್ರದರ್ಶಿಸುವ ಅಂಗವೇ ಅಂತರರಾಷ್ಟ್ರೀಯ ಸಂಘ.
20. ಪ್ರಾದೇಶಿಕ ಸಂಘಟನೆಯನ್ನು ವ್ಯಾಖ್ಯಾನಿಸಿರಿ?
ಉ: ಜೋಸಫ಼್ ನೇಯ್ ಪ್ರಕಾರ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ರಾಜ್ಯಗಳು ರಚಿಸಿಕೊಳ್ಳುವ ಸಂಘಗಳೇ ಪ್ರಾದೇಶಿಕ ಸಂಘಟನೆಗಳಾಗಿವೆ.
21. ವಿಶ್ವ ಸಂಸ್ಥೆಯ ಎರಡು ಶಾಂತಿ ಪಾಲನಾ ಕಾರ್ಯಾಚರಣೆಗಳನ್ನು ಬರೆಯಿರಿ?
ಉ: ಕೊರಿಯಾ 1950/54,ಕಾಂಗೊ 1960/64,ಸೊಮಾಲಿಯ 1993/94,ದಕ್ಷಿಣ ಸೂಡಾನ್ 2013/14ರಲ್ಲಿ ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಗಳು ಜರುಗಿದವು.
22. ಭಾರತ ಮತ್ತು ಆಸಿಯಾನ್ ಸಹಭಾಗಿತ್ವ ಕುರಿತು ಬರೆಯಿರಿ?
ಉ: ಕಾರ್ಯ ನಿರತ,ಆರ್ಥಿಕ,ಶಾಂತಿ ಹಾಗು ಭದ್ರತೆ,ಪ್ರವಾಸೋದ್ಯಮ ಹಾಗು ಸಮ್ಮೇಳನ ಆಯೋಜನೆಯಲ್ಲಿ ಭಾರತ ಹಾಗು ಆಸಿಯಾನ್ ಸಹ ಭಾಗಿತ್ವವನ್ನು ಹೊಂದಿವೆ..
23. ಭಾರತ ಮತ್ತು ಆಸಿಯಾನ್ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ನಿಮಗೇನು ತಿಳಿದಿದೆ?
ಉ: ಭಾರತ ಹಾಗು ಆಸಿಯಾನ್ ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ ಶೇಕಡಾ 90ರಷ್ಟು ಉತ್ಪಾದನೆಗಳನ್ನು ಸುಂಕ ಮುಕ್ತಗೊಳಿಸಲಾಗಿದೆ.ಇವುಗಳಲ್ಲಿ ವಿಶೇಷವಾಗಿ ಕಾಫ಼ೀ ಪಾಮ್ ಆಯಿಲ್,ಬ್ಲ್ಯಾಕ್ ಟೀ,ಪೆಪ್ಪರ್ ಸೇರಿದ್ದು 2016ರವರೆಗೆ ವಿನಾಯಿತಿ ಘೋಷಿಸಲಾಗಿದೆ.
24. ಸಾರ್ಕ್ ಸಂಘಟನೆಯು ಯಾವಾಗ ಅಸ್ತಿತ್ವಕ್ಕೆ ಬಂದಿತು? ಅದರ ಕೇಂದ್ರ ಕಚೇರಿಯು ಎಲ್ಲಿದೆ?
ಉ: ಸಾರ್ಕ್ ಸಂಘಟನೆಯು 1985 ಡಿಸೆಂಬರ್ 8ರಂದು ಅಸ್ತಿತ್ವಕ್ಕೆ ಬಂದಿತು.ಸಾರ್ಕ್ನ ಕೇಂದ್ರ ಕಚೇರಿಯು ನೇಪಾಳದ ಕಟ್ಮಂಡೂ ನಗರದಲ್ಲಿದೆ.
25. ಸಾರ್ಕ್ ಸಂಘಟನೆಯ ಸದಸ್ಯ ರಾಷ್ಟ್ರಗಳನ್ನು ತಿಳಿಸಿ.
ಉ: ಸಾರ್ಕ್ ಸಂಘಟನೆಯು ಎಂಟು ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.ಅವುಗಳೆಂದರೆ ಅಪಘಾನಿಸ್ತಾನ,ಭಾರತ,ಬಾಂಗ್ಲಾ ದೇಶ್,ಬೂತಾನ,ಮಾಲ್ಡೀವ್ಜ್,ನೇಪಾಳ,ಪಾಕಿಸ್ತಾನ ಹಾಗು ಶ್ರೀಲಂಕ[abbbmnps]
26. ಭಾರತದಲ್ಲಿ ನಡೆದ ಸಾರ್ಕ್ ಶ್ರುಂಗ ಸಭೆಗಳನ್ನು ತಿಳಿಸಿ?
ಉ: ಸಾರ್ಕ್ನ ಎರಡನೆಯ ಶ್ರುಂಗ ಸಭೆಯು 1986ರಲ್ಲಿ, ಎಂಟನೆಯ ಸಮ್ಮೇಳನ 1995ರಲ್ಲಿ ಹಾಗು ಹದಿನಾಲ್ಕನೆಯ ಸಮ್ಮೇಳನವು 2007ರಲ್ಲಿ ಭಾರತದಲ್ಲಿ ಜರುಗಿದವು.
27. ಸಾರ್ಕ್ ನ ಎರಡು ಅಪೆಕ್ಸ್[ಪ್ರಾದೇಶಿಕ] ಕೇಂದ್ರಗಳನ್ನು ಬರೆಯಿರಿ?
ಉ: ಸಾರ್ಕಿನ ಎರಡು ಅಪೆಕ್ಸ್[ಪ್ರಾದೇಶಿಕ] ಸಂಸ್ಥೆಗಳೆಂದರೆ
ಸಾರ್ಕ್ ದಾಖಲೆಯ ಕೇಂದ್ರ [SAARC DOCUMENTARY CENTRE] ಮತ್ತು ಸಾರ್ಕ್ ಪ್ರಕ್ರುತಿ ವಿಕೋಪ ನಿರ್ವಹಣೆ ಕೇಂದ್ರ[SAARC DISOSTER MANAGEMENT CENTRE] ಆಗಿದ್ದು ಇವೆರಡೂ ಭಾರತದಲ್ಲಿ ಸ್ಥಾಪನೆಯಾಗಿವೆ.
28. SAARC ವಿಸ್ತರಿಸಿ.
ಉ: SAARC ವಿಸ್ತರಿಸಿದರೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ [SOUTH ASIAN ASSOSIATION FOR REASONAL CO-OPERATION] ಎಂದಾಗುತ್ತದೆ.
29. ಬ್ರಿಕ್ಸ್ನ ಸದಸ್ಯ ರಾಷ್ಟ್ರಗಳು ಎಷ್ಟು? ಅವು ಯಾವುವು?
ಉ: ಬ್ರಿಕ್ಸ್ನ ಸದಸ್ಯ ರಾಷ್ಟ್ರಗಳು ಐದು.ಅವೆಂದರೆ ಬ್ರೆಜಿಲ್,ರಷ್ಯಾ,ಇಂಡಿಯಾ,ಚೀನಾ ಹಾಗು ಸೌತ್ ಆಫ಼್ರಿಕ.
30. ರಾಷ್ಟ್ರಗಳ ಸಂಘವು ಯಾವಾಗ ಜಾರಿಯಾಯಿತು? ಅದರ ಪಿತಾಮಹ ಯಾರು?
ಉ: ರಾಷ್ಟ್ರಗಳ ಸಂಘವು 10 ಜನೇವರಿ 1920ರಲ್ಲಿ ಜಾರಿಗೊಂಡಿತು.ವುಡ್ರೊ ವಿಲ್ಸನ್ ಇದರ ಪಿತಾಮಹ ಎನಿಸಿರುವ
ಸಂಭವನೀಯ ಐದು ಅಥವ ಹತ್ತು ಅಂಕಗಳ ಪ್ರಶ್ನೆಗಳು:
1. ಅಂತರರಾಷ್ಟ್ರೀಯ ಸಂಬಂಧಗಳ ಅರ್ಥ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿ?
2. ಅಂತರರಾಷ್ಟ್ರೀಯ ಸಂಬಂಧಗಳ ಬೆಳವಣಿಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿ?
3. ವಿಶ್ವ, ಸಂಸ್ಥೆಯ ಪ್ರಧಾನ ಅಂಗಗಳನ್ನು ವಿವರಿಸಿ?
4. ವಿಶ್ವ ಸಂಸ್ಥೆಯಲ್ಲಿ ಭಾರತದ ಪಾತ್ರವನ್ನು ಚರ್ಚಿಸಿರಿ?
5. ಭಾರತ ಮತ್ತು ಆಸಿಯಾನ್ ಸಂಘಟನೆಯ ನಡುವಿನ ಸಹಕಾರವನ್ನು ವಿವರಿಸಿ?
6. ಭಾರತ ಮತ್ತು ಸಾರ್ಕ್ ಸಂಬಂಧವನ್ನು ಸಂಕ್ಷಿಪ್ತವಾಗಿ ಚರ್ಚಿಸಿರಿ?
7. ಅಂತರರಾಷ್ಟ್ರೀಯ ಸಂಘಟನೆಯಬೆಳವಣಿಗೆಯನ್ನು ವಿವರಿಸಿ?
8. ಸಾರ್ಕ್ ಕುರಿತು ಟಿಪ್ಪಣಿ ಬರೆಯಿರಿ?
9. ಅಂತರರಾಷ್ಟ್ರೀಯ ಸಂಬಂಧಗಳ ಪರಿಕಲ್ಪನೆಗಳನ್ನು ವಿವರಿಸಿ?
10. BRICS ಕುರಿತು ಟಿಪ್ಪಣಿ ಬರೆಯಿರಿ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ