ಅಧ್ಯಾಯ 9:
ಭಾರತದ ವಿದೇಶಾಂಗ ನೀತಿ:
ಒಂದು ಎರಡು ಅಂಕದ ಪ್ರಶ್ನೋತ್ತರಗಳು:
1. ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಯಾರು?
ಉ: ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಜವಾಹರಲಾಲ್ ನೆಹರು.
2. INC ಯನ್ನು ವಿಸ್ತರಿಸಿ.
ಉ: INC ಯನ್ನು ವಿಸ್ತರಿಸಿದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್[INDIAN NATIONAL CONGRESS] ಎಂದಾಗುತ್ತದೆ.
3. ಭಾರತ ಸಂವಿಧಾನದ ಯಾವ ವಿಧಿಯು ವಿದೇಶಾಂಗ ನೀತಿಯ ಬಗ್ಗೆ ತಿಳಿಸುತ್ತದೆ?
ಉ: ಭಾರತ ಸಂವಿಧಾನದ 51ನೆಯ ವಿಧಿಯು ವಿದೇಶಾಂಗ ನೀತಿಯ ಬಗ್ಗೆ ತಿಳಿಸುತ್ತದೆ.
4. NAM ವಿಸ್ತರಿಸಿ?
ಉ: NAM ವಿಸ್ತರಿಸಿದರೆ ಅಲಿಪ್ತ ಚಳುವಳಿ[NON ALIGN MOVEMENT] ಎಂದಾಗುತ್ತದೆ.
5. ಪ್ರಸ್ತುತ ಅಲಿಪ್ತ ಚಳುವಳಿ ಸಂಘಟನೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ?
ಉ: ಪ್ರಸ್ತುತ ಅಲಿಪ್ತ ಚಳುವಳಿ ಸಂಘಟನೆಯಲ್ಲಿ 120 ಸದಸ್ಯ ರಾಷ್ಟ್ರಗಳಿವೆ.
6. ವರ್ಣಬೇಧ ನೀತಿ ಎಂದರೇನು?
ಉ: ಶ್ವೇತ ವರ್ಣೀಯ ಶ್ರೇಷ್ಠತೆಯನ್ನು ಪಾಲಿಸಿ ಕಪ್ಪು ವರ್ಣೀಯರಿಗೆ ಹಕ್ಕುಗಳನ್ನು ನಿರಾಕರಿಸುವುದನ್ನು ವರ್ಣಬೇಧ ಎನ್ನಲಾಗುತ್ತದೆ.
7. CHOGM ವಿಸ್ತರಿಸಿ.
ಉ: CHOGM ವಿಸ್ತರಿಸಿದರೆ ಕಾಮನ್ವೆಲ್ತ್ ರಾಷ್ಟ್ರ ಸರ್ಕಾರಗಳ ಮುಖ್ಯಸ್ಥರ ಸಮ್ಮೇಳನ[COMMONWEALTH HEADS OF GOVERNMENT MEETING] ಎಂದಾಗುತ್ತದೆ.
8. CHOGM ಇದರ ಮುಖ್ಯಸ್ಥರು ಯಾರು?
ಉ: CHOGM ಮುಖ್ಯಸ್ಥರು ಬ್ರಿಟನ್ ರಾಣಿ ಅಥವ ರಾಜ.
9. ಭಾರತವು ಪ್ರಥಮ ಅಣು ಪರೀಕ್ಷೆಯನ್ನು ಯಾವಾಗ ನಡೆಸಿತು?
ಉ: ಭಾರತವು ಪ್ರಥಮ ಅಣು ಪರೀಕ್ಷೆಯನ್ನು 1974ರಲ್ಲಿ ನಡೆಸಿತು.
10. NPT ಯನ್ನು ವಿಸ್ತರಿಸಿ.
ಉ: NPT ಯನ್ನು ವಿಸ್ತರಿಸಿದರೆ ಅಣ್ವಸ್ತ್ರ ನಿಷೇಧ ಒಪ್ಪಂದ[NON PROLIFERATION TREATY] ಎಂದಾಗುತ್ತದೆ.
11. CTBT ಯನ್ನು ವಿಸ್ತರಿಸಿ.
ಉ: CTBT ಯನ್ನು ವಿಸ್ತರಿಸಿದರೆ ಸಮಗ್ರ ಅಣ್ವಸ್ತ್ರ ಪರೀಕ್ಷಾ ನಿಷೇಧ ಒಪ್ಪಂದ[COMPREHENSIVE NUECLEAR TEST BAN TREATY] ಎಂದಾಗುತ್ತದೆ.
12. OPCW ವಿಸ್ತರಿಸಿ.
ಉ: OPCW ವಿಸ್ತರಿಸಿದರೆ ರಾಸಾಯನಿಕ ಅಸ್ತ್ರಗಳ ನಿಷೇಧ ಸಂಸ್ಥೆ[ORGANISATION FOR PROHIBITION OF CHEMICAL WEAPONS] ಎಂದಾಗುತ್ತದೆ.
13. 2013 ರಲ್ಲಿ ಇಂಧಿರಾಗಾಂಧಿ ಶಾಂತಿ ಪ್ರಶಸ್ತಿ ಪಡೆದವರು ಯಾರು?
ಉ: 2013 ರಲ್ಲಿ ಇಂಧಿರಾಗಾಂಧಿ ಶಾಂತಿ ಪ್ರಶಸ್ತಿಯನ್ನು ಜರ್ಮನಿಯ ಚಾನ್ಸಲರ್ ಪಡೆದರು.
14. NSG ಯನ್ನು ವಿಸ್ತರಿಸಿ.
ಉ: NSG ಯನ್ನು ವಿಸ್ತರಿಸಿದರೆ ಅಣ್ವಸ್ತ್ರ ಪೂರೈಸುವ ರಾಷ್ಟ್ರಗಳ ಗುಂಪು[NUECLEAR SUPPLYING GROOP] ಎಂದಾಗುತ್ತದೆ.
15. CIS ವಿಸ್ತರಿಸಿ.
ಉ: CIS ವಿಸ್ತರಿಸಿದರೆ ಕಾಮನ್ವೆಲ್ತ್ ಆಫ಼್ ಇಂಟಿಗ್ರೇಟೆಡ್ ಸ್ಟೇಟ್ಸ್[COMMONWEALTH OF INTEGRATED STATES] ಎಂದಾಗುತ್ತದೆ.
16. PRC ವಿಸ್ತರಿಸಿ.
ಉ: PRC ವಿಸ್ತರಿಸಿದರೆ ಚೀನಾದ ಜನತಾ ಗಣರಾಜ್ಯ[PEOPLE.S REPUBLIC OF CHAINA] ಎಂದಾಗುತ್ತದೆ.
17. NEFA ಯನ್ನು ವಿಸ್ತರಿಸಿ.
ಉ: NEFA ಯನ್ನು ವಿಸ್ತರಿಸಿದರೆ ನಾರ್ತ್ ವೆಸ್ಟರ್ನ್ ಫ಼್ರಂಟೀರ್ ಏಜೆನ್ಸಿ[NORTH WESTERN FRONTEER AGENSY] ಎಂದಾಗುತ್ತದೆ.
18. LAC ಯನ್ನು ವಿಸ್ತರಿಸಿ.
ಉ: LAC ಯನ್ನು ವಿಸ್ತರಿಸಿದರೆ ಅಧಿಕ್ರುತ ಗಡಿ ನಿಯಂತ್ರಣ ರೇಖೆ[LINE OF ACTUAL CONTROL] ಎಂದಾಗುತ್ತದೆ.
19. ಪಾಕಿಸ್ತಾನವು ಯಾವಾಗ ಉದಯಿಸಿತು.
ಉ: ಪಾಕಿಸ್ತಾನವು 1947ರಲ್ಲಿ ಉದಯಿಸಿತು.
20. LOC ಯನ್ನು ವಿಸ್ತರಿಸಿ.
ಉ: LOC ಯನ್ನು ವಿಸ್ತರಿಸಿದರೆ ಗಡಿ ನಿಯಂತ್ರಣ ರೇಖೆ[LINE OF CONTROL] ಎಂದಾಗುತ್ತದೆ.
21. MFN ವಿಸ್ತರಿಸಿ.
ಉ: MFN ವಿಸ್ತರಿಸಿದರೆ ಅಧಿಕ ವಿಶ್ವಾಸಮಯ ರಾಷ್ಟ್ರ[MOST FAVOURATE NATION] ಎಂದಾಗುತ್ತದೆ.
22. ಬಾಂಗ್ಲಾ ದೇಶವು ಯಾವಾಗ ಜನಿಸಿತು?
ಉ: ಬಾಂಗ್ಲಾ ದೇಶವು 1971ರಲ್ಲಿ ಜನಿಸಿತು.
23. ಬಂಗ ಬಂಧು ಎಂದು ಯಾರನ್ನು ಕರೆಯಲಾಗುತ್ತದೆ?
ಉ: ಬಂಗ ಬಂಧು ಎಂದು ಶೇಖ್ ಮುಜಿಬರ್ ರೆಹಮಾನ್ರನ್ನು ಕರೆಯಲಾಗುತ್ತದೆ.
24. IPKF ವಿಸ್ತರಿಸಿ.
ಉ: IPKF ವಿಸ್ತರಿಸಿದರೆ ಅಂತರರಾಷ್ಟ್ರೀಯ ಶಾಂತಿ ಪಾಲನಾ ಪಡೆ[INTERNATIONAL PEACE KEEPING FORCE] ಎಂದಾಗುತ್ತದೆ.
25. LTTE ವಿಸ್ತರಿಸಿ.
ಉ: LTTE ವಿಸ್ತರಿಸಿದರೆ ಲಿಬರೇಶನ್ ಟೈಗರ್ಸ್ ಆಫ಼್ ತಮಿಳು ಇಳ್ಳಂ[LIBERATION TIGERS OF TAMILU ILLAM] ಎಂದಾಗುತ್ತದೆ.
26. NATO ವಿಸ್ತರಿಸಿ.
ಉ: NATO ವಿಸ್ತರಿಸಿದರೆ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೆಷನ್ [NORTH ATLANTIC TREATY ORGANISATION] ಎಂದಾಗುತ್ತದೆ.
27. 1971 ರಲ್ಲಿ ಭಾರತ ಮತ್ತು ರಷ್ಯಾದ ನಡುವೆ ಯಾವ ಒಪ್ಪಂದ ಏರ್ಪಟ್ಟಿತು?
ಉ: 1971 ರಲ್ಲಿ ಭಾರತ ಮತ್ತು ರಷ್ಯಾದ ನಡುವೆ ಸ್ನೇಹ,ಶಾಂತಿ ಮತ್ತು ಸಹಕಾರದ ಇಪ್ಪತ್ತು ವರ್ಷಗಳ ಒಪ್ಪಂದ ಏರ್ಪಟ್ಟಿತು..
28. ಭಾರತ ಮತ್ತು ಅಮೇರಿಕದ ನಡುವೆ ನಾಗರಿಕ ಪರಮಾಣು ಒಪ್ಪಂದ ಯಾವಾಗ ಏರ್ಪಟ್ಟಿತು?
ಉ: ಭಾರತ ಮತ್ತು ಅಮೇರಿಕದ ನಡುವೆ 2006 ರಲ್ಲಿ ನಾಗರಿಕ ಪರಮಾಣು ಒಪ್ಪಂದ ಏರ್ಪಟ್ಟಿತು.
29. 2013 ರ ನೊಬೆಲ್ ಶಾಂತಿ ಪುರಸ್ಕಾರವು ಯಾರಿಗೆ ದೊರಕಿತು?
ಉ: 2013 ರ ನೊಬೆಲ್ ಶಾಂತಿ ಪುರಸ್ಕಾರವು ರಾಸಾಯನಿಕ ಅಸ್ತ್ರ ನಿಷೇಧ ಸಂಸ್ಥೆಗೆ ದೊರಕಿದೆ.
30. ಕೌಟಿಲ್ಯ ವಿದೇಶಾಂಗ ನೀತಿ ಕುರಿತು ಯಾವ ಸಿದ್ಧಾಂತ ಮಂಡಿಸಿದ್ದಾನೆ?
ಉ: ಕೌಟಿಲ್ಯ ತನ್ನ ಅರ್ಥಶಾಸ್ತ್ರ ಕ್ರುತಿಯಲ್ಲಿ ವಿದೇಶಾಂಗ ನೀತಿ ಕುರಿತು ಸಪ್ತಾಂಗ ಸಿದ್ಧಾಂತ ಹಾಗು ಮಂಡಲ ಸಿದ್ಧಾಂತ ಮಂಡಿಸಿದ್ದಾನೆ.
31.
32.
1. ವಿದೇಶಾಂಗ ನೀತಿ ಎಂದರೇನು?
ಉ: ಒಂದು ದೇಶವು ಇತರ ದೇಶಗಳೊಡನೆ ವ್ಯವಹರಿಸುವಾಗ ಅನುಸರಿಸುವ ನೀತಿಯನ್ನು ವಿದೇಶಾಂಗ ನೀತಿ ಎನ್ನುವರು. ಸಾಮಾನ್ಯವಾಗಿ ಇದು ಶಾಂತಿ,ಸಂಧಾನ ಹಾಗು ಬಲಾತ್ಕಾರಗಳ್ಇಂದ ಕೂಡಿರುತ್ತದೆ.
2. ಭಾರತೀಯ ವಿದೇಶಾಂಗ ನೀತಿಯನ್ನು ವ್ಯಾಖ್ಯಾನಿಸಿ?
ಉ: ಇಂದ್ರ ಕುಮಾರ್ ಗುಜರಾಲ್ ಪ್ರಕಾರ ಭಾರತದ ವಿದೇಶಾಂಗ ನೀತಿಯು ಹೊರಗಿನದಲ್ಲ.ಅದು ಸಂಪೂರ್ಣವಾಗಿ ಭಾರತೀಯತೆ ಮತ್ತು ಭಾರತದ ವಾತ್ಸವಗಳಿಂದ ರಚನೆಗೊಂಡಿದೆ.
3. ಭಾರತದ ವಿದೇಶಾಂಗ ನೀತಿಯ ಮೂಲಗಳಾವುವು?
ಉ: ಬೌದ್ಧ ಸಾಹಿತ್ಯ,ಕೌಟಿಲ್ಯನ, ಅರ್ಥಶಾಸ್ತ್ರ,ಟಿಪ್ಪುವಿನ ವಿದೇಶ ಸಂಪರ್ಕ,ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ನಿರ್ಣಯಗಳು ಭಾರತದ ವಿದೇಶಾಂಗ ನೀತಿಯ ಮೂಲಗಳಾಗಿವೆ.
4. ಭಾರತದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಿದ ಇಬ್ಬರು ವ್ಯಕ್ತಿಗಳನ್ನು ಹೆಸರಿಸಿ?
ಉ: ಗಾಂಧೀಜಿ,ಚಕ್ರವರ್ತಿ ರಾಜಗೋಪಾಲಾಚಾರಿ,ರಾಮ ಮನೋಹರ್ ಲೊಹಿಯಾ,ಜವಾಹರಲಾಲ್ ನೆಹರು ಭಾರತದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳಾಗಿದ್ದಾರೆ.
5. ಅಲಿಪ್ತ ನೀತಿ ಎಂದರೇನು?ಅದರ ಶಿಲ್ಪಿ ಯಾರು?
ಉ: ಅಮೇರಿಕ ನೇತ್ರುತ್ವದ ಬಂಡವಾಳಶಾಹಿ ಬಣಕ್ಕಾಗಲಿ ಅಥವ ರಷ್ಯಾ ನೇತ್ರುತ್ವದ ಸಮಾಜವಾದಿ ಬಣಕ್ಕಾಗಲಿ ಸೇರದೇ ಸ್ವತಂತ್ರವಾಗಿದ್ದು ತನಗೆ ಸರಿ ತೋರಿದ ನಿರ್ಧಾರಗಳನ್ನು ಕೈಗೊಳ್ಳುವ ನೀತಿಯೇ ಅಲಿಪ್ತ ನೀತಿ.ಇದರ ಶಿಲ್ಪಿ ಭಾರತದ ಜವಾಹರಲಾಲ್ ನೆಹರು.
6. ಅಲಿಪ್ತ ಚಳುವಳಿಯ ನಾಯಕರನ್ನು ಹೆಸರಿಸಿ?
ಉ: ಭಾರತದ ನೆಹರು,ಇಂಡೊನೇಷ್ಯಾದ ಸುಕಾರ್ಣೊ,ಇಜಿಪ್ತಿನ ನಾಸೆರ್,ಯುಗೋಸ್ಲಾವಿಯಾದ ಟೀಟೊ ಅಲಿಪ್ತ ಚಳುವಳಿಯ ಪ್ರಮುಖ ನಾಯಕರಾಗಿದ್ದರು.
7. ಅಲಿಪ್ತ ಚಳುವಳಿಯ ಮೊದಲ ಸಮ್ಮೇಳನವು ಎಲ್ಲಿ ಮತ್ತು ಯಾವಾಗ ಜರುಗಿತು?
ಉ: ಅಲಿಪ್ತ ಚಳುವಳಿಯ ಮೊದಲ ಸಮ್ಮೇಳನವು ಯುಗೋಸ್ಲಾವಿಯಾದ ಬೆಲ್ಗ್ರೇಡ್ನಲ್ಲಿ 1961ರಲ್ಲಿ ಜರುಗಿತು.
8. ಅಲಿಪ್ತ ಚಳುವಳಿಯ 16ನೆಯ ಸಮ್ಮೇಳನವು ಎಲ್ಲಿ ಮತ್ತು ಯಾವಾಗ ಜರುಗಿತು?
ಉ: ಅಲಿಪ್ತ ಚಳುವಳಿಯ 16ನೆಯ ಸಮ್ಮೇಳನವು ಇರಾನಿನ ಟೆಹರಾನ್ನಲ್ಲಿ 2012ರಲ್ಲಿ ಜರುಗಿತು.
9. ಪಂಚಶೀಲ ಒಪ್ಪಂದ ಯಾವಾಗ ಮತ್ತು ಯಾರ ನಡುವೆ ಜರುಗಿತು?
ಉ: ಪಂಚಶೀಲ ಒಪ್ಪಂದವು 29 ಏಪ್ರಿಲ್ 1954ರಂದು ಭಾರತದ ನೆಹರು ಮತ್ತು ಚೀನಾದ ಅಧ್ಯಕ್ಷ ಚೌ-ಎನ್-ಲೈ ನಡುವೆ ಜರುಗಿತು.
10. ತಾಷ್ಕೆಂಟ್ ಒಪ್ಪಂದ ಯಾವಾಗ ಮತ್ತು ಯಾರ ನಡುವೆ ಜರುಗಿತು?
ಉ: ತಾಷ್ಕೆಂಟ್ ಒಪ್ಪಂದವು 1966 ರಲ್ಲಿ ಭಾರತದ ಪ್ರಧಾನಿ ಲಾಲ್ಬಹದೂರ್ ಶಾಸ್ತ್ರಿ ಹಾಗು ಪಾಕಿಸ್ತಾನದ ಅಧ್ಯಕ್ಷ ಅಯೂಬ್ಖಾನರ ನಡುವೆ ಜರುಗಿತು.
11. ಶೀಮ್ಲಾ ಒಪ್ಪಂದವು ಯಾವಾಗ ಮತ್ತು ಯಾರ ನಡುವೆ ಜರುಗಿತು?
ಉ: ಶಿಮ್ಲಾ ಒಪ್ಪಂದವು 1972 ರಲ್ಲಿ ಭಾರತದ ಪ್ರಧಾನಿ ಇಂದಿರಾಗಾಂಧಿ ಹಾಗು ಪಾಕಿಸ್ತಾನದ ಪ್ರಧಾನಿ Z.A ಭುಟ್ಟೊ ನಡುವೆ ಜರುಗಿತು.
12. ಅಲಿಪ್ತ ಚಳುವಳಿಯ 17ನೆಯ ಸಮ್ಮೇಳನ ಎಲ್ಲಿ ಮತ್ತು ಯಾವಾಗ ಜರುಗಲಿದೆ?
ಉ: ಅಲಿಪ್ತ ಚಳುವಳಿಯ 17ನೆಯ ಸಮ್ಮೇಳನವು 2015ರಲ್ಲಿ ವೆನಿಜುವೆಲ್ಲಾದಲ್ಲಿ ಜರುಗಲಿದೆ
13. ಪಂಚಶೀಲ ತತ್ವಗಳನ್ನು ತಿಳಿಸಿ?
ಉ: ಐದು ಪಂಚಶೀಲ ತತ್ವಗಳೆಂದರೆ
ಅ. ಪರಸ್ಪರರು ಪ್ರಾದೇಶಿಕ ಐಖ್ಯತೆ ಹಾಗು ಸಾರ್ವಭೌಮತೆಯನ್ನು ಗೌರವಿಸುವುದು.
ಆ. ಪರಸ್ಪರರು ಆಕ್ರಮಣ ನಡೆಸದಿರುವುದು.
ಇ. ಪರಸ್ಪರರು ಇನ್ನೊಬ್ಬರ ಆಂತರಿಕ ವ್ಯವಹಾರದಲ್ಲಿ ಕೈ ಹಾಕದಿರುವುದು.
ಈ. ಸಮಾನತೆ ಹಾಗು ಪರಸ್ಪರ ಸಹಕಾರ ತೋರುವುದು.
ಉ. ಪರಸ್ಪರರು ಶಾಂತಿಯುತ ಸಹ ಬಾಳ್ವೆ ನಡೆಸುವುದು.
14. ಮುಂದಿನ CHOGM ಸಮ್ಮೇಳನವನ್ನು ಯಾವಾಗ ಮತ್ತು ಎಲ್ಲಿ ನಡೆಸಲಾಗುತ್ತದೆ?
ಉ: ಮುಂದಿನ CHOGM ಸಮ್ಮೇಳನವು 2015 ರಲ್ಲಿ ಟಾಂಜೇನಿಯಾದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
15. ಜಗತ್ತಿನ ಪ್ರಮುಖ ಮಿಲಿಟರಿ ಬಣಗಳನ್ನು ಬರೆಯಿರಿ?
ಉ: ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಶನ್[NATO], ವಾರ್ಸಾ, ಆಸ್ಟ್ರೇಲಿಯಾ ನ್ಯೂಜಿಲೆಂಡ್ ಯುನೈಟೆಡ್ ಸ್ಟೇಟ್ಸ್[ANZUS], ಸೌತ್ ಈಸ್ಟ್ ಏಶಿಯನ್ ಟ್ರೀಟಿ ಆರ್ಗನೈಜೇಶನ್[SEATO], ಸೆಂಟ್ರಲ್ ಟ್ರೀಟಿ ಆರ್ಗನೈಜೇಶನ್[CENTO] ಮುಂತಾದವು ಜಗತ್ತಿನ ಪ್ರಮುಖ ಮಿಲಿಟರಿ ಬಣಗಳಾಗಿವೆ.
16. NSG ಯ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ?
ಉ: NSG ಯು 45 ರಾಷ್ಟ್ರಗಳಿಂದ ಕೂಡಿದ್ದು ರಷ್ಯಾ,ಜಪಾನ್,ಆಸ್ಟ್ರೇಲಿಯಾ,ದಕ್ಷಿಣ ಆಫ಼್ರಿಕಾ,ಐರೋಪ್ಯ ಒಕ್ಕೂಟದ ರಾಷ್ಟ್ರಗಳನ್ನು ಒಳಗೊಂಡಿದೆ.
17. ಬಾಂಗ್ಲಾ ದೇಶದ ಉಗಮಕ್ಕೆ ಕ್ಕಾರಣಗಳಾವುವು?
ಉ: ಅ. ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನದ ಶೋಷಣೆ.
ಆ. ಪ್ರಜಾಪ್ರಭುತ್ವ ವಿರೋಧಿ ನಿರ್ಧಾರಗಳು.
ಇ. ಪೂರ್ವ ಪಾಕಿಸ್ತಾನದ ಸ್ವಾಯತ್ತತೆಯ ಹೋರಾಟ.
ಈ. ಭಾರತದ ಒಳ ನುಸುಳುವ ನಿರಾಶ್ರಿತರ ಸಮಸ್ಯೆ.
ಉ. ಭಾರತ ನೀಡಿದ ಬೆಂಬಲ
ಬಾಂಗ್ಲಾದೇಶದ ಉಗಮಕ್ಕೆ ಕಾರಣಗಳಾಗಿವೆ.
18. ಶ್ರೀಲಂಕಾದಲ್ಲಿನ ತಮಿಳರನ್ನು ವರ್ಗೀಕರಿಸಿ?
ಉ: ಶ್ರೀಲಂಕಾದಲ್ಲಿನ ತಮಿಳರನ್ನು ಈ ಕೆಳಗಿನಂತೆ ವಿಂಗಡಿಸಲಾಗುತ್ತದೆ.
ಅ. ಜಾಫ಼್ನಾ ದ್ವೀಪದಲ್ಲಿನ ಪುರಾತನ ತಮಿಳರು.
ಆ. ನಗರ ಪ್ರದೇಶದಲ್ಲಿನ ವ್ರುತ್ತಿಪರ ತಮಿಳರು.
ಇ. ಹಿಂದುಗಳಲ್ಲದ ತಮಿಳರು.
ಈ. ಕಾರ್ಮಿಕ ವಲಸೆ ತಮಿಳರು.
19. ಶ್ರೀಲಂಕಾದಲ್ಲಿನ ಎರಡು ಉಗ್ರಗಾಮಿ ಸಂಘಟನೆಗಳನ್ನು ಹೆಸರಿಸಿ?
ಉ: ತಮಿಳ್ ಯುನೈಟೆಡ್ ಲಿಬರೇಶನ್ ಫ಼್ರಂಟ್[TULF] ಮತ್ತು ಲಿಬರೇಶನ್ ಟೈಗರ್ಸ್ ಆಫ಼್ ತಮಿಳು ಈಳಂ[LTTE] ಶ್ರೀಲಂಕಾದ ಎರಡು ಉಗ್ರಗಾಮಿ ಸಂಘಟನೆಗಳಾಗಿವೆ.
20. ಶ್ರೀಲಂಕಾದ ಜನಾಂಗಿಯ ಸಮಸ್ಯೆ ಕುರಿತು ನಿಮಗೇನು ತಿಳಿದಿದೆ?
ಉ: ಶ್ರೀಲಂಕಾದಲ್ಲಿ ಭಾರತೀಯ ಮೂಲದ ತಮಿಳರು ಹಾಗು ಶ್ರೀಲಂಕಾ ಮೂಲದ ಸಿಂಹಳೀಯರು ಎಂಬ ಗುಂಪುಗಳಿವೆ.ತಮಿಳರು ಪೌರತ್ವ,ರಾಜಕೀಯ ಹಕ್ಕುಗಳು ಮತ್ತು ಪ್ರಾದೇಶಿಕ ಸ್ವಾಯತ್ತತೆ ಪಡೆಯಲು ಬಯಸಿದರೆ ಸಿಂಹಳೀಯರು ಅದನ್ನು ನಿರಾಕರಿಸುತ್ತಾರೆ. ಹೀಗಾಗಿ ಇವರ ನಡುವೆ ಘರ್ಷಣೆಗಳು ಉಂಟಾಗಿ ಜನಾಂಗೀಯ ಸಮಸ್ಯೆ ತಲೆದೋರಿತ್ತು.
21. ಪೆರಿಸ್ಟ್ರೋಕಿಯಾ ಮತ್ತು ಗ್ಲಾಸ್ನಾಟ್ ಎಂದರೇನು?
ಉ: ಪೆರಿಸ್ಟ್ರೋಕಿಯಾ ಎಂದರೆ ಪುನರ್ರಚನೆ ಮತ್ತು ಗ್ಲಾಸ್ನಾಟ್ ಎಂದರೆ ಮುಕ್ತತೆ ಎಂದರ್ಥ. ಗೊರ್ಬಚೇವ್ ಇವುಗಳ ಜಾರಿಯ ಮೂಲಕ ರಷ್ಯಾದಲ್ಲಿ ಆರ್ಥಿಕ ಹಾಗು ರಾಜಕೀಯ ಸುಧಾರಣೆಗಳನ್ನು ತರಲು ಪ್ರಯತ್ನಿಸಿದರು.
22. ಚೀನಾ ಮತ್ತು ಭಾರತ ದೇಶಗಳ ನಡುವೆ ಸಹೋದರಿ ನಗರಗಳ ಸಂಬಂಧ ಯಾವ ನಗರಗಳ ನಡುವೆ ಏರ್ಪಟ್ಟಿದೆ?
ಉ: ಚೀನಾ ಹಾಗು ಭಾರತಗಳ ನಡುವೆ ಸಹೋದರಿ ನಗರಗಳ ಸಂಬಂಧವು ಬೀಜಿಂಗ್ ಹಾಗು ದೆಹಲಿ ಮತ್ತು ಚಿಂಗ್ಟು ಹಾಗು ಬೆಂಗಳೂರು ನಡುವೆ ಏರ್ಪಟ್ಟಿದೆ.
ಸಂಭವನೀಯ ಐದು ಅಥವ ಹತ್ತು ಅಂಕಗಳ ಪ್ರಶ್ನೆಗಳು:
1. ಭಾರತದ ವಿದೇಶಾಂಗ ನೀತಿಯ ತತ್ವಗಳನ್ನು ಸಂಕ್ಷಿಪ್ತವಾಗಿ ವಿವರಿಸಿ?
ಉ: ಒಂದು ದೇಶವು ಇತರ ದೇಶಗಳೊಡನೆ ವ್ಯವಹರಿಸುವಾಗ ಅನುಸರಿಸುವ ನೀತಿಯನ್ನು ವಿದೇಶಾಂಗ ನೀತಿ ಎನ್ನುವರು. ಪ್ರತಿಯೊಂದು ದೇಶ ತನ್ನದೇ ವಿದೇಶಾಂಗ ನೀತಿ ಹೊಂದಿದ್ದು ಸಾಮಾನ್ಯವಾಗಿ ಶಾಂತಿ,ಸಂಧಾನ ಹಾಗು ಬಲಾತ್ಕಾರಗಳ್ಇಂದ ಕೂಡಿರುತ್ತದೆ. ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಜವಾಹರಲಾಲ್ ನೆಹರು. ಭಾರತವು ಪ್ರಪಂಚದಲ್ಲಿ ಮಾದರಿಯಾಗಬಲ್ಲ ವಿದೇಶಾಂಗ ನೀತಿ ಪಾಲಿಸುತ್ತಿದ್ದು ಇದರ ಪ್ರಮುಖ ತತ್ವಗಳೆಂದರೆ
A. ಅಲಿಪ್ತ ನೀತಿ: ಅಮೇರಿಕ ನೇತ್ರುತ್ವದ ಬಂಡವಾಳಶಾಹಿ ಬಣಕ್ಕಾಗಲಿ ಅಥವ ರಷ್ಯಾ ನೇತ್ರುತ್ವದ ಸಮಾಜವಾದಿ ಬಣಕ್ಕಾಗಲಿ ಸೇರದೇ ಸ್ವತಂತ್ರವಾಗಿದ್ದು ತನಗೆ ಸರಿ ತೋರಿದ ನಿರ್ಧಾರಗಳನ್ನು ಕೈಗೊಳ್ಳುವ ನೀತಿಯೇ ಅಲಿಪ್ತ ನೀತಿ.ಇದರ ಶಿಲ್ಪಿ ಭಾರತದ ಜವಾಹರಲಾಲ್ ನೆಹರು. ಈ ನೀತಿಯು ಶಕ್ತಿ ಬಣಗಳ ನಡುವಿನ ಘರ್ಷಣೆಯನ್ನು ತಡೆಯಲು ಮತ್ತು ಶಾಂತಿ ಕಾಪಾಡಲು ಪ್ರಯತ್ನಿಸಿತು. ಅಭಿವ್ರುದ್ಧಿ ಹೊಂದುತ್ತಿದ್ದ ದೇಶವಾಗಿದ್ದು ಎರಡೂ ಬಣಗಳ ಸಹಾಯ ಪಡೆಯುವ ಸಾಧನವಾಯಿತು. ಭಾರತದ ನೆಹರು,ಇಂಡೊನೇಷ್ಯಾದ ಸುಕಾರ್ಣೊ,ಇಜಿಪ್ತಿನ ನಾಸೆರ್,ಯುಗೋಸ್ಲಾವಿಯಾದ ಟೀಟೊ ಅಲಿಪ್ತ ಚಳುವಳಿಯ ಪ್ರಮುಖ ನಾಯಕರಾಗಿದ್ದರು. ಅಲಿಪ್ತ ಚಳುವಳಿಯ ಮೊದಲ ಸಮ್ಮೇಳನವು ಯುಗೋಸ್ಲಾವಿಯಾದ ಬೆಲ್ಗ್ರೇಡ್ನಲ್ಲಿ 1961ರಲ್ಲಿ ಜರುಗಿದ್ದು ಇತ್ತೀಚಿನ ಸಮ್ಮೇಳನವು ವೆನೆಜುವೆಲಾದಲ್ಲಿನಡೆಯಿತು.
B. ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿಗೆ ವಿರೋಧ:
C. ವಿಶ್ವ ಸಂಸ್ಥೆಯಲ್ಲಿ ನಂಬಿಕೆ: D. ಗುರಿ ಮತ್ತು ಮಾರ್ಗ:
E. ವರ್ಣಬೇಧ ಹಾಗು ಜನಾಂಗೀಯ ತಾರತಮ್ಯಕ್ಕೆ ವಿರೋಧ: F. ಪಂಚಶೀಲಗಳ ಪಾಲನೆ:
G. ಕಾಮನ್ವೆಲ್ತ್ ದೇಶಗಳೊಡನೆ ಒಪ್ಪಂದ: H. ನಿಶಸ್ತ್ರೀಕರಣ:
I. ವಿಭಜಿತ ರಾಷ್ಟ್ರಗಳ ಬಗ್ಗೆ ಅನುಕಂಪ: J. ಚಿಕ್ಕ ರಾಷ್ಟ್ರಗಳ ಕುರಿತು ಒಲವು:
K. ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳಿಗೆ ವಿಶೇಷ ಆಸಕ್ತಿ: L. ಶೀತಲ ಸಮರಕ್ಕೆ ವಿರುದ್ಧ:
2. ಪಂಚಶೀಲ ತತ್ವಗಳನ್ನು ಕುರಿತು ಟಿಪ್ಪಣಿ ಬರೆಯಿರಿ?
ಉ: ಪಂಚಶೀಲ ಒಪ್ಪಂದವು 29 ಏಪ್ರಿಲ್ 1954ರಂದು ಭಾರತದ ನೆಹರು ಮತ್ತು ಚೀನಾದ ಅಧ್ಯಕ್ಷ ಚೌ-ಎನ್-ಲೈ ನಡುವೆ ಜರುಗಿತು. ಈ ವ್ಯಾಪಾರಿ ಒಪ್ಪಂದದಲ್ಲಿ ಬಳಕೆಯಾದ ಐದು ಪಂಚಶೀಲ ತತ್ವಗಳೆಂದರೆ
ಅ. ಪರಸ್ಪರರು ಪ್ರಾದೇಶಿಕ ಐಖ್ಯತೆ ಹಾಗು ಸಾರ್ವಭೌಮತೆಯನ್ನು ಗೌರವಿಸುವುದು.
ಆ. ಪರಸ್ಪರರು ಆಕ್ರಮಣ ನಡೆಸದಿರುವುದು.
ಇ. ಪರಸ್ಪರರು ಇನ್ನೊಬ್ಬರ ಆಂತರಿಕ ವ್ಯವಹಾರದಲ್ಲಿ ಕೈ ಹಾಕದಿರುವುದು.
ಈ. ಸಮಾನತೆ ಹಾಗು ಪರಸ್ಪರ ಸಹಕಾರ ತೋರುವುದು.
ಉ. ಪರಸ್ಪರರು ಶಾಂತಿಯುತ ಸಹ ಬಾಳ್ವೆ ನಡೆಸುವುದು.
3. ಭಾರತ ಮತ್ತು ಶ್ರೀಲಂಕಾ ದೇಶಗಳ ನಡುವಿನ ವಿವಾದಾಂಶಗಳನ್ನು ತಿಳಿಸಿ?
4. ಭಾರತ ಮತ್ತು ಸೋವಿಯತ್ ರಷ್ಯಾ ನಡುವಿನ ಸಂಬಂಧವನ್ನು ವಿವರಿಸಿ?
5. ಭಾರತ ಮತ್ತು ಪಾಕಿಸ್ತಾನ ಸಂಬಂಧದಲ್ಲಿ ಕಾಶ್ಮೀರ ಸಮಸ್ಯೆಯನ್ನು ವಿಶ್ಲೇಷಿಸಿ?
6. ಭಾರತ ಮತ್ತು ಚೀನಾಗಳ ನಡುವಿನ ಸಂಬಂಧಗಳ ಏರಿಳಿತಗಳನ್ನು ಚರ್ಚಿಸಿರಿ?
7. ಭಾರತ ಮತ್ತು ಅಮೇರಿಕಗಳ ನಡುವಿನವಿವಿಧ ಕ್ಷೇತ್ರಗಳ ಸಂಬಂಧವನ್ನು ವಿವರಿಸಿ?
8. ಭಾರತ ಮತ್ತು ಶ್ರೀಲಂಕಾಗಳ ನಡುವಿನ ಸಂಬಂಧವನ್ನು ವಿವರಿಸಿ?
9. ಬಾಂಗ್ಲಾ ದೇಶದ ಉಗಮಕ್ಕೆ ಕಾರಣಗಳು ಮತ್ತು ಭಾರತದ ಪಾತ್ರವನ್ನು ಸಂಕ್ಷಿಪ್ತವಾಗಿ ವಿವರಿಸಿ?
10. ಅಲಿಪ್ತ ನೀತಿ ಅಥವ ಚಳುವಳಿ ಕುರಿತು ಟಿಪ್ಪಣಿ ಬರೆಯಿರಿ?
ಉ: ಅಮೇರಿಕ ನೇತ್ರುತ್ವದ ಬಂಡವಾಳಶಾಹಿ ಬಣಕ್ಕಾಗಲಿ ಅಥವ ರಷ್ಯಾ ನೇತ್ರುತ್ವದ ಸಮಾಜವಾದಿ ಬಣಕ್ಕಾಗಲಿ ಸೇರದೇ ಸ್ವತಂತ್ರವಾಗಿದ್ದು ತನಗೆ ಸರಿ ತೋರಿದ ನಿರ್ಧಾರಗಳನ್ನು ಕೈಗೊಳ್ಳುವ ನೀತಿಯೇ ಅಲಿಪ್ತ ನೀತಿ.ಇದರ ಶಿಲ್ಪಿ ಭಾರತದ ಜವಾಹರಲಾಲ್ ನೆಹರು. ಭಾರತದ ನೆಹರು,ಇಂಡೊನೇಷ್ಯಾದ ಸುಕಾರ್ಣೊ,ಇಜಿಪ್ತಿನ ನಾಸೆರ್,ಯುಗೋಸ್ಲಾವಿಯಾದ ಟೀಟೊ ಅಲಿಪ್ತ ಚಳುವಳಿಯ ಪ್ರಮುಖ ನಾಯಕರಾಗಿದ್ದರು. ಅಲಿಪ್ತ ಚಳುವಳಿಯ ಮೊದಲ ಸಮ್ಮೇಳನವು ಯುಗೋಸ್ಲಾವಿಯಾದ ಬೆಲ್ಗ್ರೇಡ್ನಲ್ಲಿ 1961ರಲ್ಲಿ ಜರುಗಿತು. ಅಲಿಪ್ತ ಚಳುವಳಿಯ 16ನೆಯ ಸಮ್ಮೇಳನವು ಇರಾನಿನ ಟೆಹರಾನ್ನಲ್ಲಿ 2012ರಲ್ಲಿ ಜರುಗಿತು. ಪ್ರಸ್ತುತ ಅಲಿಪ್ತ ಚಳುವಳಿ ಸಂಘಟನೆಯಲ್ಲಿ 120 ಸದಸ್ಯ ರಾಷ್ಟ್ರಗಳಿವೆ. ಇದನ್ನು NAM ಎಂದೂ ಕರೆಯಲಾಗುತ್ತದೆ. ಅಲಿಪ್ತ ಚಳುವಳಿಯ 17ನೆಯ ಸಮ್ಮೇಳನವು 2015ರಲ್ಲಿ ವೆನಿಜುವೆಲ್ಲಾದಲ್ಲಿ ಜರುಗಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ