ಸೋಮವಾರ, ಸೆಪ್ಟೆಂಬರ್ 7, 2020

unit 7

ಅಧ್ಯಾಯ 7:
ಸಮಕಾಲೀನ ರಾಜಕೀಯ ವಿದ್ಯಮಾನಗಳು:

ಒಂದು ಅಥವ ಎರಡು ಅಂಕಗಳ ಪ್ರಶ್ನೋತ್ತರಗಳು:

1. ಉದಾರೀಕರಣ ಎಂದರೇನು?
ಉ: ಸರ್ಕಾರವು ಆರ್ಥಿಕ ಚಟುವಟಿಕೆಗಳ ಮೇಲಿನ ತನ್ನ ನಿಯಂತ್ರಣವನ್ನು ಸಡಿಲಗೊಳಿಸುವುದಕ್ಕೆ ಉದಾರೀಕರಣ ಎನ್ನಬಹುದು.
2. ಲೇಸಸ್ ಫ಼ೇರ್ ಎಂದರೇನು? 
ಉ: ಲೇಸಸ್ ಫ಼ೇರ್ ಎಂದರೆ ಮುಕ್ತ ವ್ಯಾಪಾರ ಎಂದರ್ಥ.
3. ಭಾರತದಲ್ಲಿ ಉದಾರೀಕರಣ ಯಾವಾಗ ಪ್ರಾರಂಭವಾಯಿತು?
ಉ: ಭಾರತದಲ್ಲಿ ಉದಾರೀಕರಣ 1991ರಲ್ಲಿ ಪ್ರಾರಂಭವಾಯಿತು.
4. ಖಾಸಗೀಕರಣ ಎಂದರೇನು?
ಉ: ಸರ್ಕಾರದ ಒಡೆತನ ಅಥವ ನಿಯಂತ್ರಣದಲ್ಲಿರುವ ಕೈಗಾರಿಕೆ ಅಥವ ಸಂಸ್ಥೆಯನ್ನು ಕಾಸಗಿಯವರಿಗೆ ವರ್ಗಾಯಿಸುವುದನ್ನು ಖಾಸಗೀಕರಣ ಎನ್ನುವರು.
5. ಖಾಸಗೀಕರಣವು ಯಾವ ದೇಶದಲ್ಲಿ ಮೊದಲು ಪ್ರಾರಂಭವಾಯಿತು?
ಉ: ಅಮೇರಿಕದಲ್ಲಿ 1980ರಲ್ಲಿ ಖಾಸಗೀಕರಣವು ಮೊದಲು ಪ್ರಾರಂಭವಾಯಿತು.
6. IMF ಅನ್ನು ವಿಸ್ತರಿಸಿ.
ಉ: IMF ಅನ್ನು ವಿಸ್ತರಿಸಿದರೆ ಅಂತರರಾಷ್ಟ್ರೀಯ ಹಣಕಾಸು ನಿಧಿ [INTERNATIONAL MONITARY FUND] ಎಂದಾಗುತ್ತದೆ.
ಬಹು ರಾಷ್ಟ್ರೀಯ ಕಂಪನಿ ಎಂದರೇನು?
ಉ: ಒಂದು ಕಂಪನಿಯು ಒಂದಕ್ಕಿಂತ ಹೆಚ್ಚು ದೇಶಗಳೊಡನೆ ವ್ಯಾಪಾರ ಸಂಪರ್ಕ ಹೊಂದಿದ್ದರೆ ಅದನ್ನು ಬಹು ರಾಷ್ಟ್ರೀಯ ಕಂಪನಿ ಎನ್ನುವರು.
7.  ಜಾಗತೀಕರಣ ಎಂದರೇನು?
ಉ: ಮಾರುಕಟ್ಟೆಯ ಮೂಲಕ ದೇಶದೇಶಗಳ ಆರ್ಥಿಕ ವ್ಯವಸ್ಥೆಯನ್ನು ಒಂದುಗೂಡಿಸುವ ಪ್ರಕ್ರಿಯೆಗೆ ಜಾಗತೀಕರಣ ಎನ್ನುವರು.


ಭಾರತದ ಎರಡು ಖಾಸಗಿ ಕಂಪನಿಗಳನ್ನು ಉದಾಹರಿಸಿ?
ಉ: ಇನ್ಫ಼ೋರ್ಸಿಸ್ ಹಾಗು ವಿಪ್ರೋ ಭಾರತದ ಖಾಸಗಿ ಕಂಪನಿಗಳಿಗೆ ಉದಾಹರಣೆಗಳಾಗಿವೆ.
8. ಆಪ್ತಸ್ನೇಹಿ ಬಂಡವಾಳಶಾಹಿ ಎಂದರೇನು?
ಉ: ಆರ್ಥಿಕ ಯಶಸ್ಸಿಗಾಗಿ ಸರ್ಕಾರದ ಅಧಿಕಾರಶಾಹಿಗಳು ಹಾಗು ವಾಣಿಜ್ಯೋದ್ಯಮಿಗಳ ನಡುವಿನ ಸಂಬಂಧವನ್ನು ಆಪ್ತಸ್ನೇಹಿ ಬಂಡವಾಳಶಾಹಿ ಎನ್ನುವರು.
9. ಪ್ರಜಾಸತ್ತಾತ್ಮಕ ಚಳುವಳಿ ಎಂದರೇನು?
ಉ: ಪ್ರಜೆಗಳ ಹಕ್ಕು ಮತ್ತು ಆಡಳಿತಾಧಿಕಾರಕಾಗಿ ನಡೆದ ಪ್ರಬಲ ಹೋರಾಟಕ್ಕೆ ಪ್ರಜಾಸತ್ತಾತ್ಮಕ ಚಳುವಳಿ ಎನ್ನುವರು.


ಭಾರತದಲ್ಲಿ ಜಾಗತೀಕರಣವು ಯಾವಾಗ ಆರಂಭವಾಯಿತು?
ಉ: ಭಾರತದಲ್ಲಿ ಜಾಗತೀಕರಣವು 1990ರಲ್ಲಿ ಆರಂಭವಾಯಿತು.
10. ನೇಪಾಳದಲ್ಲಿ ಮಾಗ್ನಕಾರ್ಟ ಎಂದು ಯಾವುದನ್ನು ಕರೆಯಲಾಗಿದೆ?
ಉ: 18ಮೇ 2006ರಂದು ಜನಾಂದೋಲನದ ಇಚ್ಚೆಗಳನ್ನು ಪೂರೈಸಲು ಪಾಸು ಮಾಡಲಾದ ಕಾನೂನುಗಳನ್ನು ನೇಪಾಳದ ಮಾಗ್ನಕಾರ್ಟ ಎನ್ನುವರು.


11. ಭೂತಾನದಲ್ಲಿ ಯಾವ ಮಾದರಿಯ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ?
ಉ: ಭೂತಾನದಲ್ಲಿ ಬಹು ಪಕ್ಷಗಳ ಪ್ರಜಾಪ್ರಬುತ್ವ ಮಾದರಿಯ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ.
12. ಭೂತಾನದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಗೆ ಸ್ಪೂರ್ತಿ ನೀಡಿದವರು ಯಾರು?
ಉ: ರಾಂಗ್ತೊಂಗ್ ಕುನಲಿ ದೋರಜಿ ಭೂತಾನದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಗೆ ಸ್ಪೂರ್ತಿ ನೀಡಿದರು.

ನೇಪಾಳದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ಯಾರು ಆರಂಭಿಸಿದರು? ಅದರ ನಾಯಕನ ಹೆಸರೇನು?
ಉ: ನೇಪಾಳದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ಕಮ್ಯೂನಿಷ್ಟ್ ಪಕ್ಷದವರು ಆರಂಭಿಸಿದರು.ಈ ಚಳುವಳಿಯ ನಾಯಕತ್ವವನ್ನು ಗಿರಿಜಾ ಪ್ರಸಾದ್ ಕೊಯ್ರಾಲಾ ವಹಿಸಿದ್ದರು.
13. ಭೂತಾನದಲ್ಲಿ ಮೊದಲ ಪ್ರಜಾಸತ್ತಾತ್ಮಕ ಚುನಾವಣೆ ಯಾವಾಗ ನಡೆಯಿತು?
ಉ: ಭೂತಾನದಲ್ಲಿ ಮೊದಲ ಪ್ರಜಾಸತ್ತಾತ್ಮಕ ಚುನಾವಣೆ 24ಮಾರ್ಚ್ 2008ರಂದು ನಡೆಯಿತು.

14. ಭೂತಾನದಲ್ಲಿ ಪ್ರಜಾಸತ್ತಾತ್ಮಕ ಚಳುವಳಿ ಯಾವಾಗ ಪ್ರಾರಂಭವಾಯಿತು?
ಉ: ಭೂತಾನದಲ್ಲಿ ಪ್ರಜಾಸತ್ತಾತ್ಮಕ ಚಳುವಳಿ 1990 ರಲ್ಲಿ ಪ್ರಾರಂಭವಾಯಿತು.
15. ಭೂತಾನದ ಸಂವಿಧಾನವನ್ನು ಎಂದು ಜಾರಿಗೊಳಿಸಲಾಯಿತು?
ಉ: ಭೂತಾನ್ ಸಂವಿಧಾನವನ್ನು 18/7/2011ರಂದು ಜಾರಿಗೊಳಿಸಲಾಯಿತು.
16. ಆಫ್ಘಾನಿಸ್ಥಾನದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಭೆಗೆ ಯಾವಾಗ ಚುನಾವಣೇಗಳು ನಡೆದವು?
ಉ: ಆಫ್ಘಾನಿಸ್ಥಾನದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಭೆಗೆ ಅಕ್ಟೋಬರ್ 2004ರಲ್ಲಿ ಚುನಾವಣೆಗಳು ನಡೆದವು.

17. ಆಫ್ಘಾನಿಸ್ಥಾನದ ಪ್ರಸ್ತುತ ಅಧ್ಯಕ್ಷರನ್ನು ಹೆಸರಿಸಿ .
ಉ: ಆಫ್ಘಾನಿಸ್ಥಾನದ ಪ್ರಸ್ತುತ ಅಧ್ಯಕ್ಷ .
18. ಆಫ್ಘಾನಿಸ್ಥಾನದ ಸಂವಿಧಾನವನ್ನು ಯಾವಾಗ ಜಾರಿಗೊಳಿಸಲಾಯಿತು?
ಉ: ಆಫ್ಘಾನಿಸ್ಥಾನದ   ಸಂವಿಧಾನವನ್ನು ಜನೇವರಿ 2004ರಲ್ಲಿ ಜಾರಿಗೊಳಿಸಲಾಯಿತು.
19. ಈಜಿಪ್ಟಿನಲ್ಲಿ ಸಂವಿಧಾನವನ್ನು ಯಾವಾಗ ಜಾರಿಗೊಳಿಸಲಾಯಿತು?
ಉ: ಈಜಿಪ್ಟಿನಲ್ಲಿ ಹೊಸ ಸಂವಿಧಾನವು ಜನೇವರಿ 1956ರಲ್ಲಿ ಜಾರಿಗೊಂಡಿತು.

20. ಈಜಿಪ್ಟಿನಲ್ಲಿ ಬದಲಾವಣೆಯ ಪ್ರಥಮ ಚಳುವಳಿ ಯಾವಾಗ ಪ್ರಾರಂಭವಾಯಿತು?
ಉ: ಈಜಿಪ್ಟಿನಲ್ಲಿ ಬದಲಾವಣೆಯ ಪ್ರಥಮ ಚಳುವಳಿ 1952ರಲ್ಲಿ ಪ್ರಾರಂಭವಾಯಿತು.
೨೧. ಲಿಬ್ಯಾದ ನಿರಂಕುಶಾಧಿಕಾರಿಯನ್ನು ಹೆಸರಿಸಿ.
ಉ: ಲಿಬ್ಯಾದ ನಿರಂಕುಶಾಧಿಕಾರಿ ಗಢಾಫಿ.
೨೨. ಯಾರ ಅಧಿಕಾರವಧಿಯಲ್ಲಿ ಲಿಬ್ಯಾದ ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು?
ಉ: ಗಢಾಫಿ ಅಧಿಕಾರವಧಿಯಲ್ಲಿ ಲಿಬ್ಯಾದ ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು.
೨೩. ಲಿಬ್ಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಗಳು ಯಾವಾಗ ಪ್ರಾರಂಭವಾಯಿತು?
ಉ: ಲಿಬ್ಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಗಳು 27/2/2011ರಂದು ಪ್ರಾರಂಭವಾಯಿತು.

೨೪. ಸಿರಿಯಾ ದೇಶವು ಫ್ರಾನ್ಸ್ ನಿಂದ ಯಾವಾಗ ಮುಕ್ತಿಪಡೆಯಿತು?
ಉ: ಸಿರಿಯಾ ದೇಶವು 1946ರಲ್ಲಿ ಫ಼್ರಾನ್ಸ್ ದೇಶದಿಂದ ಮುಕ್ತಿಪಡೆಯಿತು.
೨೫. WTO ಅನ್ನು ವಿಸ್ತರಿಸಿ.
ಉ: WTO ವಿಸ್ತರಿಸಿದರೆ ವಿಶ್ವ ವಾಣಿಜ್ಯ ಸಂಸ್ಥೆ [WORLD TRADE ORGANISATION] ಎಂದಾಗುತ್ತದೆ.
26. ಸಿರಿಯಾದ ಪ್ರಸ್ತುತ ಅಧ್ಯಕ್ಷರನ್ನು ಹೆಸರಿಸಿ.
ಉ: ಬಸರ್ ಅಲ್ ಅಸಾದ್ ಸಿರಿಯಾದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
27. P.V ನರಸಿಂಹರಾವ್ ಹಾಗು ಡಾ. ಮನಮೋಹನಸಿಂಗ್ ಭಾರತದಲ್ಲಿನ LPG ಯ ಪಿತಾಮಹರು ಎನಿಸಿರುವರು.
28. ಸ್ಯಾಮ್ಸಂಗ್,ಸನ್ಸುಯ್,ಪೆಪ್ಸಿ,ಇನ್ಫ಼ೋರ್ಸಿಸ್,ವಿಪ್ರೊ,ನೋಕಿಯ ಮುಂತಾದವು ಬಹು ರಾಷ್ಟ್ರೀಯ ಕಂಪನಿಗಳಿಗೆ ಉದಾಹರನೆಗಳಾಗಿವೆ.
29. LPG ಯನ್ನು ವಿಸ್ತರಿಸಿದರೆ ಉದಾರೀಕರಣ,ಖಾಸಗೀಕರಣ,ಜಾಗತೀಕರಣ[LIBERALISATION,PRIVATISATION,GLOBALISATION] ಎಂದಾಗುತ್ತದೆ.
30. ಉದಾರೀಕರಣದ ಅರ್ಥವೇನು?
ಉ: ಸರ್ಕಾರವು  ವಾಣಿಜ್ಯ ಹಾಗು ಆರ್ಥಿಕ ಚಟುವಟಿಕೆಗಳ ಮೇಲಿನ ತನ್ನ ನಿಯಂತ್ರಣವನ್ನು ಸಡಿಲಗೊಳಿಸುವ ಪ್ರಕ್ರಿಯೆಯನ್ನು ಉದಾರೀಕರಣ ಎನ್ನಬಹುದು.ಇಲ್ಲಿ ತೆರಿಗೆ ಹಾಗು ಸುಂಕ ವಿನಾಯಿತಿ ದೊರೆತು ಖಾಸಗಿಯವರಿಗೆ ಉತ್ತಮ ಪ್ರಗತಿಗೆ ಅವಕಾಶವಿರುತ್ತದೆ.
31. IMF ವಿಸ್ತರಿಸಿ? ಇದು ಯಾವಾಗ ಸ್ಥಾಪನೆಯಾಯಿತು?
ಉ: i.m.f ವಿಸ್ತರಿಸಿದರೆ ಇಂಟರ್ನ್ಯಾಷನಲ್ ಮಾನಿಟರಿ ಫ಼ಂಡ್ [ಅಂತರರಾಷ್ಟ್ರೀಯ ಹಣಕಾಸು ನಿಧಿ] ಎಂದಾಗುತ್ತದೆ.ಇದು 1944ರಲ್ಲಿ ಬ್ರೆಟ್ನ್ ವುಡ್ಸ್ ಸಮ್ಮೇಳನದಲ್ಲಿ ರಚನೆಯಾದರೂ ಅಧಿಕ್ರುತವಾಗಿ 27 ಡಿಸೆಂಬರ್ 1945ರಂದು ಸ್ಥಾಪನೆಗೊಂಡಿತು.
32. ನವ ಉದಾರವಾದಿ ಚಿಂತನೆಗಳೆಂದು ಯಾವುದನ್ನು ಕರೆಯುತ್ತಾರೆ?
ಉ: 1991ರಿಂದ ಈಚೆಗೆ ಬಳಕೆಗೆ ಬಂದಿರುವ ಮುಕ್ತ ವ್ಯಾಪಾರ,ಖಾಸಗೀಕರಣ,ತೆರಿಗೆ ಸುಧಾರಣೆಯಂತಹ ಅಂಶಗಳನ್ನು ನವ ಉದಾರವಾದಿ ಚಿಂತನೆಗಳು ಎನ್ನುವರು.
33. ಮುಕ್ತ ಮಾರುಕಟ್ಟೆ ಎಂದರೇನು?
ಉ: ಗ್ರಾಹಕ ಮತ್ತು ಮಾರ‍ಾಟಗಾರರ ಮೇಲೆ ಯಾವುದೇ ನಿರ್ಬಂಧವಿಲ್ಲದ ಮಾರುಕಟ್ಟೆಯನ್ನು ಮುಕ್ತ ಮಾರುಕಟ್ಟೆ ಎನ್ನಬಹುದು.ಇಲ್ಲಿ ಖಾಸಗಿ ಕಂಪನಿಗಳು ಸುಲಭವಾಗಿ ಒಂದು ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ.ಅಲ್ಲದೇ ಅಧಿಕ ಬಂಡವಾಳ ಹೂಡಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿ ಲಾಭ ಗಳಿಸಲು ಅವಕಾಶವಿರುತ್ತದೆ.ಇದು ಸರ್ಕಾರದ ಆರ್ಥಿಕ ನೀತಿಯಲ್ಲಿನ ಸಡಿಲಿಕೆಯ ಫ಼ಲವಾಗಿರುತ್ತದೆ.
34. ಆಧುನಿಕ ಜಗತ್ತಿನಲ್ಲಿ ಉದಾರೀಕರಣವು ಏಕೆ ಮಹತ್ವ ಪಡೆದಿದೆ?
ಉ: ಉದಾರೀಕರಣದಿಂದ ಪ್ರವೇಶಿಸುವ ಖಾಸಗಿ ಕಂಪನಿಗಳು ಅಧಿಕ ಬಂಡವಾಳ ಹಾಗು ಹೊಸ ತಾಂತ್ರಿಕತೆ ಬಳಸಿ ಉತ್ತಮ ಗುಣಮಟ್ಟದ ಸರಕು ಸೇವೆಗಳನ್ನು ಒದಗಿಸುತ್ತವೆ.ಜೊತೆಗೆ ಈ ಕಂಪನಿಗಳ ನಡುವೆ ಸ್ಪರ್ಧೆ ನಡೆದು ಬೆಲೆಗಳೂ ಇಳಿಯುತ್ತವೆ.ಇದರಿಂದ ಆರ್ಥಿಕ ಪ್ರಗತಿ ಉಂಟಾಗುವುದರಿಂದ ಉದಾರೀಕರಣವು ಮಹತ್ವ ಪಡೆದಿದೆ.
35. ವ್ಯಾಪಾರದಲ್ಲಿ ಏಕಸ್ವಾಮ್ಯ ಎಂದರೇನು?
ಉ: ಖಾಸಗಿ ಕಂಪನಿಯವರು ಒಂದು ಸರಕು ಅಥವ ಸೇವೆಯ ಉತ್ಪಾದನೆ ವಿತರಣೆ ಹಾಗು ಬೆಲೆ ನಿಯಂತ್ರಣವನ್ನು ತಮ್ಮಲ್ಲಿ ಮಾತ್ರ ಉಳಿಸಿಕೊಳ್ಳಲು ಬಯಸುತ್ತಾರೆ.ಅಧಿಕ ಲಾಭ ಗಳಿಕೆಯು ಇದರ ಉದ್ದೇಶವಾಗಿರುತ್ತದೆ.ಇದನ್ನೇ ವ್ಯಾಪಾರದಲ್ಲಿನ ಏಕಸ್ವಾಮ್ಯ ಎನ್ನಬಹುದು.
36. ಖಾಸಗೀಕರಣವು ಯಾವಾಗ ಮತ್ತು ಯಾವ ದೇಶಗಳಲ್ಲಿ ಆರಂಭವಾಯಿತು?
ಉ: ಖಾಸಗೀಕರಣವು 1980ರಲ್ಲಿ ಅಮೇರಿಕ ಹಾಗು ಇಂಗ್ಲೆಂಡ್ನಲ್ಲಿ ಆರಂಭವಾಯಿತು.
37. ಖಾಸಗೀಕರಣದಲ್ಲಿ ಸಂಪತ್ತಿನ ಕೇಂದ್ರೀಕರಣ ಎಂದರೇನು?
ಉ: ಖಾಸಗಿ ಕಂಪನಿಗಳ ಉದ್ದೇಶ ಲಾಭ ಗಳಿಕೆಯಾಗಿದೆ.ಹೀಗಾಗಿ ಅವು ಅಪಾರ ಬಂಡವಾಳ ಹೂಡಿ ಹೆಚ್ಚಿನ ಲಾಭ ಗಳಿಸುತ್ತವೆ.ಇದರಿಂದ ಸಂಪತ್ತು ಖಾಸಗಿಯವರಲ್ಲಿ ಕೇಂದ್ರೀಕರಣವಾಗುತ್ತದೆ.ಇದನ್ನೇ ಖಾಸಗಿಕರಣದಲ್ಲಿನ ಸಂಪತ್ತಿನ ಕೇಂದ್ರೀಕರಣ ಎನ್ನುವರು.
38. ಮಾರುಕಟ್ಟೆ ಆಧರಿತ ಆರ್ಥಿಕತೆ ಬಗ್ಗೆ ನಿಮಗೇನು ತಿಳಿದಿದೆ?
ಉ: ದೇಶಗಳ ಆರ್ಥಿಕ ವ್ಯವಸ್ಥೆ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಅವಲಂಬಿಸಿದೆ.ಸರ್ಕಾರದ ಆರ್ಥಿಕ ನಿರ್ಧಾರಗಳು ಮಾರುಕಟ್ಟೆ ಸ್ನೇಹಿಯಾಗಿವೆ.ಮಾರುಕಟ್ಟೆಯ ಸುಧಾರಣೆಗಾಗಿಯೇ ಆರ್ಥಿಕ ವ್ಯವಸ್ಥೆಗಳು l.p.g ಗೆ ತೆರೆದುಕೊಳ್ಳುತ್ತಿವೆ.ಇದನ್ನೇ ಮಾರುಕಟ್ಟೆ ಆಧರಿತ ಆರ್ಥಿಕತೆ ಎನ್ನಲಾಗುವುದು.
39. ಪ್ರತಿಭಾ ಪಲಾಯನ ಎಂದರೇನು?
ಉ: ಒಂದು ದೇಶದ ಬುದ್ಧಿವಂತ ಉದ್ಯೋಗಿಗಳು ಹೆಚ್ಚಿನ ಹಣ,ಗೌರವ ಹಾಗು ಪ್ರತಿಷ್ಟೆಗಾಗಿ ಬೇರೆ ದೇಶಕ್ಕೆ ಹೋಗುವರು.ವಿದ್ಯಾರ್ಥಿಗಳು ಕಲಿಯುತ್ತಿರುವಾಗಲೇ ಬಹು ರಾಷ್ಟ್ರೀಯ ಕಂಪನಿಗೆ ನೇಮಕಗೊಂಡು ವಿದೇಶಗಳಿಗೆ ಹಾರುತ್ತಿರುವರು.ಇದನ್ನೇ ಪ್ರತಿಭಾ ಪಲಾಯನ ಎನ್ನುವರು.
40. ಜಾಗತೀಕರಣ ಎಂದರೇನು?
ಉ: ಮಾರುಕಟ್ಟೆಯ ಮೂಲಕ ವಿವಿಧ ದೇಶಗಳ ಆರ್ಥಿಕ ವ್ಯವಸ್ಥೆಗಳನ್ನು ಒಂದುಗೂಡಿಸುವುದನ್ನು ಜಾಗತೀಕರಣ ಎನ್ನುವರು.ಏಕ ಕಾಲದಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಸರಕು ಸೇವೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ವಹಿವಾಟು ನಡೆಸುವುದೇ ಜಾಗತೀಕರಣ.ಇಲ್ಲಿ ಸರಕು,ಬಂಡವಾಳ,ತಾಂತ್ರಿಕತೆ ಹಾಗು ಮಾನವರ ಮುಕ್ತ ಚಲನೆ ಕಂಡು ಬರುತ್ತದೆ.
41. WTO ಕುರಿತು ಬರೆಯಿರಿ?
ಉ: w.t.o ವಿಸ್ತರಿಸಿದರೆ ವಿಶ್ವ ವಾಣಿಜ್ಯ ಸಂಸ್ಥೆ ಎಂದಾಗುತ್ತದೆ.ಇದು 1ಜನೇವರಿ 1995ರಂದು ಜಾರಿಗೊಂಡಿತು.ಇದರಲ್ಲಿ ಪ್ರಸ್ತುತ 153 ಸದಸ್ಯ ರಾಷ್ಟ್ರಗಳಿವೆ.w.t.oನ ಕೇಂದ್ರ ಕಚ್ಹೇರಿಯು ಸ್ವಿಡ್ಜರ್ಲ್ಯಾಂಡ್ನ ಜಿನೇವಾದಲ್ಲಿದೆ.ವಿಶ್ವ ವ್ಯಾಪಾರದ ನಿಯಂತ್ರಣವು ಇದರ ಕಾರ್ಯವಾಗಿದೆ.
42. ಕಾರ್ಮಿಕರ ಚಲನಶೀಲತೆ  ಎಂದರೇನು?
ಉ: ಬಹು ರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು ದೇಶದಿಂದ ದೇಶಕ್ಕೆ ಮುಕ್ತವಾಗಿ ಚಲಿಸುತ್ತಾರೆ.ಅಲ್ಲದೇ ಅಂತರ್ಜಾಲದ ನೆರವಿನಿಂದ ಕಾರ್ಮಿಕರ ಶ್ರಮವು ಹೊರ ಗುತ್ತಿಗೆಯ ಮೂಲಕ ಕುಳಿತಲ್ಲಿಂದಲೇ ಚಲಿಸತೊಡಗುತ್ತದೆ.ಇದನ್ನು ಕಾರ್ಮಿಕ ಚಲನಶೀಲತೆ ಎನ್ನಬಹುದು.
43. ಜಗತ್ತಿನಲ್ಲಿ ಆಪ್ತಸ್ನೇಹಿ ಬಂಡವಾಳ ಸಿದ್ಧಾಂತದ ಉಗಮಕ್ಕೆ ಕಾರಣಗಳಾವುವು?
ಉ: ಖಾಸಗೀಕರಣದಿಂದ ಉಂಟಾದ ಸಮಸ್ಯೆಗಳ ಪರಿಹಾರ ಮತ್ತು ವಾಣಿಜ್ಯೋದ್ಯಮಿಗಳ ಲಾಭದ ಬಯಕೆಗಳು ಆಪ್ತ ಸ್ನೇಹಿ ಬಂಡವಾಳ ಸಿದ್ಧಾಂತದ ಉಗಮಕ್ಕೆ ಕಾರಣಗಳಾಗಿವೆ.
44. ಜಗತ್ತಿನ ಇಬ್ಬರು ಅಧಿಕಾರಯುತ ಆಡಳಿತಗಾರರನ್ನು ಹೆಸರಿಸಿ?
ಉ: ಜಗತ್ತಿನ ಇಬ್ಬರು ಅಧಿಕಾರಯುಕ್ತ ಸರ್ಕಾರದ ಆಡಳಿತಗಾರರೆಂದರೆ ಲಿಬಿಯಾದ ಗಡಾಫ಼ಿ ಹಾಗು ನೇಪಾಳದ ಬಿರೇಂದ್ರ ಬಿರ್ ಬಿಕ್ರಮ್ ಷಾ ದೇವ್.
45. ಲೋಕತಾಂತ್ರಿಕ ದಿನವನ್ನು ನೇಪಾಳದಲ್ಲಿ ಏಕೆ ಆಚರಿಸಲಾಗುತ್ತದೆ?
ಉ: 18ಮೇ 2006ರಂದು ನೇಪಾಳದಲ್ಲಿ ರಾಜಪ್ರಭುತ್ವ ಕೊನೆಗೊಂಡು ಪ್ರಜಾಪ್ರಭುತ್ವ ಜಾರಿಗೊಂಡಿತು ಅದಕ್ಕಾಗಿ ಆ ದಿನವನ್ನು ಲೋಕ ತಾಂತ್ರಿಕ ದಿನವೆಂದು ನೇಪಾಳದಲ್ಲಿ ಆಚರಿಸಲಾಗುತ್ತದೆ.
46. ನೇಪಾಳದ ಮೊದಲ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಹೆಸರಿಸಿ?
ಉ: ನೇಪಾಳದ ಮೊದಲ ಅಧ್ಯಕ್ಷ ರಾಮ್ ಬರನ್ ಯಾದವ್ ಹಾಗು ಪ್ರಧಾನಿ ಪುಷ್ಪ ಕಮಲ ದಲ್[ಪ್ರಚಂಡ]
47. ಬೂತಾನಿನ ಸಂವಿಧಾನದ ಬಗ್ಗೆ ಬರೆಯಿರಿ?
ಉ: ಬೂತಾನಿನ ಸಂವಿಧಾನವು 18ಜುಲೈ 2007ರಂದು ಜಾರಿಗೊಂಡಿತು.ಈ ಸಂವಿಧಾನದಂತೆ ರಾಜ ಪ್ರಧಾನಿ ಹಾಗು ಮಂತ್ರಿಮಂಡಲವನ್ನು ರದ್ದುಪಡಿಸುವ ಅಧಿಕಾರ ಪಡೆದಿದ್ದಾನೆ.ಜೊತೆಗೆ ಸಂವಿಧಾನದ 2ನೇ ವಿಧಿ ಸಂಸತ್ತಿಗೆ ಸಂವಿಧಾನ ತಿದ್ದುವ ಅಧಿಕಾರವಿಲ್ಲವೆಂದು ತಿಳಿಸಿದೆ.
48.  ಅಪಘಾನಿಸ್ಥಾನದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು ಯಾವಾಗ ಪ್ರಾರಂಭವಾದವು?
ಉ: ಅಪ್ಘಾನಿಸ್ತಾನದಲ್ಲಿ 2001ರಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದವು.ಇದಕ್ಕೆ ಅಮೇರಿಕ ನೇತ್ರುತ್ವದ ದಾಳಿಯು ಕಾರಣವಾಗಿತ್ತು.
49. ಇಜಿಪ್ತಿನಲ್ಲಿ ನಡೆದ ಎರಡನೆಯ ಕ್ರಾಂತಿಕಾರಕ ಬದಲಾವಣೆಯು ಯಾವುದು?
ಉ: ಇಜಿಪ್ತಿನಲ್ಲಿ ಎರಡನೆಯ ಕ್ರಾಂತಿಕಾರಕ ಬದಲಾವಣೆಯು 2011ರಲ್ಲಿ ವಿವಿಧ ಜನಸಮುದಾಯಗಳು ಮತ್ತು ಬುದ್ಧಿಜೀವಿಗಳ ಪ್ರಯತ್ನದಿಂದ ಆರಂಭವಾಯಿತು.
50. ಇಜಿಪ್ತಿನ ಸಂವಿಧಾನವನ್ನು ಯಾರು ಮತ್ತು ಯಾವಾಗ ರದ್ದು ಪಡಿಸಿದರು?
ಉ: ಇಜಿಪ್ತಿನ ಸಂವಿಧಾನವನ್ನು ಜೂನ್ 2013ರಲ್ಲಿ ಅಬ್ದುಲ್ ಆಲಿಯವರು ರದ್ದುಗೊಳಿಸಿದರು.
51. ಲಿಬಿಯಾದ ಪ್ರಜಾಸತ್ತತ್ಮಕ ಚಳುವಳಿಯನ್ನು ಯಾರು ಮತ್ತು ಯಾವಾಗ ಆರಂಭಿಸಿದರು?
ಉ: ಲಿಬಿಯಾದ ಜನತೆ n.t.c ಮುಂದಾಳತ್ವದಲ್ಲಿ 27ಫ಼ೇಬ್ರವರಿ 2011ರಂದು ಪ್ರಜಾಸತ್ತಾತ್ಮಕ ಹೋರಾಟವನ್ನು ಆರಂಭಿಸಿದರು.
52. ಸಿರಿಯಾದ ಎರಡು ಜನಾಂಗೀಯ ಗುಂಪುಗಳನ್ನು ತಿಳಿಸಿ?
ಉ: ಅರಬ್ ಖಡ್ಸ್,ಅರ್ಮೇನಿಯನ್ಸ್,ಟರ್ಕಮೆನಿಸ್ ಎಂಬುವವು ಸಿರಿಯಾದ ಜನಾಂಗಿಯ ಗುಂಪುಗಳಾಗಿವೆ.
53. ಸಿರಿಯಾದಲ್ಲಿನ ಬಾತ್ ಪಕ್ಷದ ಬಗ್ಗೆ ನಿಮಗೇನು ತಿಳಿದಿದೆ?
ಉ: ಸಿರಿಯಾದಲ್ಲಿ ಬಾತ್ ಪಕ್ಷವು 1963ರಲ್ಲಿ ಏಕಪಕ್ಷದ ಪ್ರಾಬಲ್ಯವನ್ನು ಸ್ಥಾಪಿಸಿ ತು.2011ರಲ್ಲಿ ಬಾತ್ ಪಕ್ಷದ ದಬ್ಬಾಳಿಕೆಯ ವಿರುದ್ಧ ಧಂಗೆಯಾಗಿ ಚುನಾವಣೆಗಳು ನಡೆದರೂ ಬಾತ್ ಪಕ್ಷವೇ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ.ಪ್ರಸ್ತುತ ಇದರ ಅಧ್ಯಕ್ಷ ಅಬ್ದುಲ್ ಅಲ್ ಅಸಾದ್ ಹಾಗು ಪ್ರಧಾನಿ ನದಿಲ್ ಅಲ್ ಅಕೀಜಿ ಆಗಿದ್ದಾರೆ.
54. ಸಿರಿಯಾದ ಪ್ರಜಾಸತ್ತಾತ್ಮಕ ಚಳುವಳಿಯ ಉದ್ದೇಶಗಳನ್ನು ಬರೆಯಿರಿ?
ಉ: ಸಿರಿಯಾದಲ್ಲಿ 2011ರ ಪ್ರಜಾಸತ್ತಾತ್ಮಕ ಚಳುವಳಿಯ ಮುಖ್ಯ ಉದ್ದೇಶಗಳೆಂದರೆ
a.ಬಾತ್ ಪಕ್ಷದ ಸರ್ವಾಧಿಕಾರವನ್ನು ತಡೆಯುವುದು. b.ಉದಾರವಾದಿ ಪ್ರಜಾಸತ್ತಾತ್ಮಕ ತತ್ವದಂತೆ ಸರ್ಕಾರವನ್ನು ಸ್ಥಾಪಿಸುವುದು.
55. ಸೌಹುರ್ಕ ಕ್ರಾಂತಿ ಎಂದರೇನು?
ಉ: 27ಏಪ್ರಿಲ್ 1978ರಂದು papa ಪಕ್ಷದ ನೂರ್ ಮಹಮದ್ ತಾರಕಿ,ಬಾಬ್ರಾ ಕಮಾಲ್ ಹಾಗು ಅಮೀನ್ ಪಾಂಡೆ ನಾಯಕರು ಸೇರಿಕೊಂಡು ಅಪ್ಘಾನಿಸ್ತಾನದಲ್ಲಿ ಮಹಮದ್ ದಾವೂದ್ ಸರ್ಕಾರವನ್ನು ಕಿತ್ತೊಗೆಯಲು ನಡೆಸಿದ ಕೊಲೆಪಾತವನ್ನು ಸೌಹೂರ್ ಕ್ರಾಂತಿ ಎನ್ನುವರು.
56. ಉದಾರೀಕರಣವು ಗ್ರಾಹಕನಿಗೆ ಹೇಗೆ ಉಪಯುಕ್ತವಾಗಿದೆ?
ಉ: ಉದಾರೀಕರಣವು ಗ್ರಾಹಕರಿಗೆ ಸಹಾಯಕವಾಗಿದೆ.ಹೇಗೆಂದರೆ ಉದಾರೀಕರಣದಿಂದ ಖಾಸಗಿ ಕಂಪನಿಯವರು ಅಪಾರ ಬಂಡವಾಳ ಹೂಡಿ ಉತ್ಪಾದನೆಯನ್ನು ಹೆಚ್ಚಿಸುತ್ತವೆ.ಅಲ್ಲದೇ ಲಾಭ ಗಳಿಸಲು ಸ್ಪರ್ಧೆ ನಡೆದು ಗುಣಮಟ್ಟ ಮತ್ತು ಬೆಲೆಯಲ್ಲಿ ಪೈಪೊಟಿ ಜರುಗುತ್ತದೆ.ಇದರಿಂದ ಗ್ರಾಹಕನ ಆಯ್ಕೆ ಹೆಚ್ಚಾಗಿ ಉತ್ತಮ ಗುಣಮಟ್ಟ ಮತ್ತು ಬೆಲೆಯ ವಸ್ತುಗಳನ್ನು ಪಡೆಯುತ್ತಾನೆ.
57. ಜಾಗತಿಕ ಗ್ರಾಮ ಎಂದರೇನು?
ಉ: ಜಾಗತೀಕರಣದಿಂದ ಮುಕ್ತ ವ್ಯಾಪಾರ ಕಂಡು ಬರುತ್ತದೆ.ದೇಶದೇಶಗಳ ಆರ್ಥಿಕ ವ್ಯವಸ್ಥೆಗಳು ಒಂದುಗೂಡುವುದರಿಂದ ಅವುಗಳ ಸಂಬಂಧ ಹೆಚ್ಚುತ್ತದೆ.ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳು ಸಾರಿಗೆ ಹಾಗು ತಾಂತ್ರಿಕತೆ ಸುಧಾರಿಸಿಕೊಂಡು ದೇಶೀಯ ಮಾರುಕಟ್ಟೆಯಲ್ಲಿಯೇ ಎಲ್ಲ ವಸ್ತುಗಳು ದೊರೆಯುವಂತೆ ಮಾಡಿವೆ.ಇದರಿಂದಾಗಿ ದೇಶದೇಶಗಳ ನಡುವಿನ ಅಂತರ ಕಡಿಮೆಯಾಗಿ ಜಾಗತಿಕ ಗ್ರಾಮ ಕಲ್ಪನೆ ಉದಯಿಸಿದೆ.

ಸಂಭವನೀಯ ಐದು ಅಥವ ಹತ್ತು ಅಂಕಗಳ ಪ್ರಶ್ನೆಗಳು:
1. ಉದಾರೀಕರಣದ ಅರ್ಥ ಮತ್ತು ಮಹತ್ವವನ್ನು ವಿವರಿಸಿ?
2. ಉದಾರೀಕರಣದ ರಾಜಕೀಯ ಪರಿಣಾಮಗಳನ್ನು ಚರ್ಚಿಸಿರಿ?
3. ಖಾಸಗೀಕರಣದ ಪ್ರಾಮುಖ್ಯತೆಯನ್ನು ವಿವರಿಸಿ? 
4. ಜಾಗತೀಕರಣದ ರಾಜಕೀಯ ಪರಿಣಾಮಗಳನ್ನು ವಿವರಿಸಿ?
5. ಆಪ್ತ ಸ್ನೇಹಿ ಬಂಡವಾಳ ಸಿದ್ಧಾಂತದ ಲಕ್ಷಣಗಳನ್ನು ವಿವರಿಸಿ?
6. ಅಪಘಾನಿಸ್ತಾನದ ಪ್ರಜಾಸತ್ತಾತ್ಮಕ ಬೆಳವಣಿಗೆಯನ್ನು ವಿವರಿಸಿ?
7. ಇಜಿಪ್ತಿನ ಪ್ರಜಾಸತ್ತಾತ್ಮಕ ಚಳುವಳಿಯನ್ನು ಚರ್ಚಿಸಿರಿ?
8. ಬೂತಾನ್ ಪ್ರಜಾಸತ್ತಾತ್ಮಕ ಹೋರಾಟವನ್ನು ಕುರಿತು ಟಿಪ್ಪಣಿ ಬರೆಯಿರಿ?
9. ನೇಪಾಳದಲ್ಲಿನ ಪ್ರಜಾಪ್ರಭುತ್ವದ ಬೆಳವಣಿಗೆಯನ್ನು  ಚರ್ಚಿಸಿರಿ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...