ಅಧ್ಯಾಯ 6:
ಭಾರತ ರಾಜಕೀಯದ ನೂತನ ಪ್ರವ್ರುತ್ತಿಗಳು:
ಒಂದು ಅಥವ ಎರಡು ಅಂಕಗಳ ಪ್ರಶ್ನೋತ್ತರಗಳು:
1. ಕೊಯಲೇಶನ್ ಪದದ ಮೂಲ ಪದವನ್ನು ತಿಳಿಸಿ?
ಉ: ಕೊಯಲೇಶನ್ ಪದದ ಮೂಲ ಪದ ಲ್ಯಾಟೀನ್ ಭಾಷೆಯ ಕೊಯಲಿಶಿಯೇ ಆಗಿದೆ.ಇದು ಕೋ ಮತ್ತು ಅಲೆಸಿಯರ್ ಪದಗಳ ಸಂಮಿಶ್ರಣವಾಗಿದೆ.
2. ಕೋ ಮತ್ತು ಅಲೆಸಿಯರ್ ಅರ್ಥವೇನು?
ಉ: ಕೋ ಎಂದರೆ ಒಟ್ಟಿಗೆ ಮತ್ತು ಅಲೆಸಿಯರ್ ಎಂದರೆ ಬೆಳೆಯುವುದು ಎಂದಾಗುತ್ತದೆ.
3. C.M.P ವಿಸ್ತರಿಸಿ?
ಉ: C.M.P ವಿಸ್ತರಿಸಿದರೆ ಸಾಮಾನ್ಯ ಕನಿಷ್ಟ ಕಾರ್ಯಕ್ರಮ[COMMON MINIMUM PROGRAMME] ಎಂದಾಗುತ್ತದೆ.
4. ಸಂಮಿಶ್ರ ಸರ್ಕಾರ ಎಂದರೇನು?
ಉ: ಒಂದೇ ರಾಜಕೀಯ ಪಕ್ಷವು ಚುನಾವಣೆಯಲ್ಲಿ ಬಹುಮತ ಪಡೆಯದಿದ್ದಾಗ ಎರಡು ಅಥವ ಹೆಚ್ಚು ರಾಜಕೀಯ ಪಕ್ಷಗಳು ಸೇರಿ ಸರ್ಕಾರವನ್ನು ರಚಿಸಿದರೆ ಅದನ್ನು ಸಂಮಿಶ್ರ ಸರ್ಕಾರ ಎನ್ನುವರು.
5. ಚುನಾವಣಾ ಪೂರ್ವ ಮೈತ್ರಿಕೂಟ ಎಂದರೇನು?
ಉ: ವಿವಿಧ ರಾಜಕೀಯ ಪಕ್ಷಗಳು ಬಹುಮತ ಪಡೆಯಲು ಚುನಾವಣೆಗಿಂತ ಮೊದಲೇ ಸಹಕರಿಸಲು ನಿರ್ಧರಿಸುವುದನ್ನು ಚುನಾವಣಾ ಪೂರ್ವ ಮೈತ್ರಿಕೂಟ ಎನ್ನುವರು ಉ:u.p.a ಮತ್ತು n.d.a ಮೈತ್ರಿಕೂಟಗಳು.
6. ಚುನಾವಣೋತ್ತರ ಮೈತ್ರಿಕೂಟ ಎಂದರೇನು?
ಉ: ವಿವಿಧ ರಾಜಕೀಯ ಪಕ್ಷಗಳು ಬಹುಮತ ಪಡೆಯಲು ಚುನಾವಣೆಯ ನಂತರ ಸಹಕರಿಸಲು ನಿರ್ಧರ್ರಿಸಿದರೆ ಅದನ್ನು ಚುನಾವಣೋತ್ತರ ಮೈತ್ರಿಕೂಟ ಎನ್ನುವರು ಉ:ಮಹಾರಾಷ್ಟ್ರದಲ್ಲಿನ ಬಿ.ಜೆ.ಪಿ ಹಾಗು ಶಿವಸೇನೆ ಪಕ್ಷಗಳ ಮೈತ್ರಿಕೂಟ.
7. ಅಸ್ಮಿತೆ ರಾಜಕಾರಣದ ಪಿತಾಮಹ ಯಾರು?
ಉ: ಅಸ್ಮಿತೆ ರಾಜಕಾರಣದ ಪಿತಾಮಹ ಎಲ್.ಏ. ಕಾಫ಼್ಮನ್.
8. ಯಾವ ಚಳುವಳಿಯ ಮೂಲಕ ಅಸ್ಮಿತೆ ರಾಜಕಾರಣವು ಶಾಸನಬದ್ಧವಾಯಿತು?
ಉ: ಸಲಿಂಗಿಗಳ ಹಕ್ಕುಗಳ ಚಳುವಳಿಯ ಮೂಲಕ ಅಸ್ಮಿತೆ ರಾಜಕಾರಣವು ಶಾಸನಬದ್ಧವಾಯಿತು.
9. L.G.B.T ವಿಸ್ತರಿಸಿ?
ಉ: L.G.B.T ವಿಸ್ತರಿಸಿದರೆ ಲೆಜ್ಬಿಯನ್ ಗೇ ಬೈಸೆಕ್ಶೂವಲ್ ಟ್ರಾನ್ಸ್ಜಂಡರ್ ಎಂದಾಗುತ್ತದೆ.
10. ಭಾರತದಲ್ಲಿ ಜಾತಿ ಪದ್ಧತಿಯ ವಿರುದ್ಧ ಹೋರಾಡಿದ ಸಮಾಜ ಸುಧಾರಕರನ್ನು ಹೆಸರಿಸಿ?
ಉ: ಭಾರತದಲ್ಲಿ ಕನಕದಾಸ,ಕಬೀರದಾಸ,ರಾಮದಾಸ,ತುಕಾರಾಮ,ಬಸವಣ್ಣನವರು ಜಾತಿ ಪದ್ಧತಿಯ ವಿರುದ್ಧ ಹೋರಾಡಿದ ಸಮಾಜ ಸುಧಾರಕರಾಗಿದ್ದಾರೆ.
11. ಭಾರತದಲ್ಲಿ ಪ್ರಾದೇಶಿಕ ಅಸ್ಮಿತೆಗಾಗಿ ನಡೆದ ಹೋರಾಟಗಳಿಗೆ ಉದಾಹರಣೆ ನೀಡಿ?
ಉ: ಅಸ್ಸಾಮ್ನ ಬೊಡೊ ಲ್ಯಾಂಡ್,ಪಶ್ಚಿಮ ಬಂಗಾಳದ ಗೂರ್ಕಾ ಲ್ಯಾಂಡ್,ಆಂಧ್ರಪ್ರದೇಶದ ತೆಲಂಗಾಣದಹೋರಾಟಗಳು ಪ್ರಾದೇಶಿಕ ಅಸ್ಮಿತೆಗಾಗಿ ನಡೆದ ಹೋರಾಟಗಳಾಗಿವೆ.
12. ಭಾರತದಲ್ಲಿ ಮತದಾರರ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ?
ಉ: ಪ್ರತಿ ವರ್ಷದ ಜನೇವರಿ 25ರಂದು ಭಾರತದಲ್ಲಿ ಮತದಾರರ ದಿನಾಚರಣೆ ಆಚರಿಸಲಾಗುತ್ತದೆ.
13. A.A.S.U ವಿಸ್ತರಿಸಿ?
ಉ: A.A.S.U ವಿಸ್ತರಿಸಿದರೆ ಆಲ್ ಅಸ್ಸಾಮ್ ಸ್ಟುಡೆಂಟ್ಸ್ ಯೂನಿಯನ್ ಎಂದಾಗುತ್ತದೆ.
14. ಭಾರತದ ಪ್ರಮುಖ ರಾಷ್ಟ್ರೀಯ ಸಮಸ್ಯೆಗಳನ್ನು ತಿಳಿಸಿ?
ಉ: ಜನಸಂಖ್ಯಾ ಹೆಚ್ಚಳ,ಕೋಮುವಾದ,ಬ್ರಷ್ಟಾಚಾರ,ಭಯೋತ್ಪಾದನೆ,ಅಸಮಾನತೆಗಳು ಭಾರತದ ರಾಷ್ಟ್ರೀಯ ಸಮಸ್ಯೆಗಳಾಗಿವೆ.
15. ಆಯಾತ ಹಾಗು ನಿರ್ಯಾತಗಳ ಮೇಲೆ ಯಾವ ಸರ್ಕಾರ ತೆರಿಗೆ ವಿಧಿಸುವುದು?
ಉ: ಆಯಾತ ಹಾಗು ನಿರ್ಯಾತಗಳ ಮೇಲೆ ರಾಜ್ಯ ಸರ್ಕಾರವು ತೆರಿಗೆ ವಿಧಿಸಬಹುದು.
16. ಕೇಂದ್ರ ಹಣಕಾಸು ಆಯೋಗ ಹಾಗು ರಾಜ್ಯ ಹಣಕಾಸು ಆಯೋಗವನ್ನು ಯಾರು ನೇಮಿಸುತ್ತಾರೆ?
ಉ: ಕೇಂದ್ರ ಹಣಕಾಸು ಆಯೋಗವನ್ನು ರಾಷ್ಟ್ರಪತಿ ಹಾಗು ರಾಜ್ಯ ಹಣಕಾಸು ಆಯೋಗವನ್ನು ರಾಜ್ಯಪಾಲರು ನೇಮಿಸುತ್ತಾರೆ.
17. ಅಂತರರಾಜ್ಯ ವ್ಯಾಪಾರ ಹಾಗು ವಾಣಿಜ್ಯಗಳು ಯಾವ ಸರ್ಕಾರದ ವ್ಯಾಪ್ತಿಗೆ ಬರುತ್ತವೆ?
ಉ: ಅಂತರರಾಜ್ಯ ವ್ಯಾಪಾರ ಹಾಗು ವಾಣಿಜ್ಯಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ.
18. ಭಾರತದಲ್ಲಿ ಎಷ್ಟು ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ?
ಉ: ಭಾರತದಲ್ಲಿ ಇದುವರೆಗೆ ಮೂರು ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ [1962 1971 1975]
19. ರ್ರಾಜ್ಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ರಾಜ್ಯ ಪಟ್ಟಿಯಲ್ಲಿನ ವಿಷಯಗಳ ಮೇಲೆ ರಚಿಸಲಾದ ಶಾಸನಗಳಿಗೆ ಯಾರ ಒಪ್ಪಿಗೆ ಅಗತ್ಯವಾಗಿರುತ್ತದೆ?
ಉ: ರ್ರಾಜ್ಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ರಾಜ್ಯ ಪಟ್ಟಿಯಲ್ಲಿನ ವಿಷಯಗಳ ಮೇಲೆ ರಚಿಸಲಾದ ಶಾಸನಗಳಿಗೆ ರಾಷ್ಟ್ರಪತಿಯವರ ಒಪ್ಪಿಗೆ ಅಗತ್ಯವಾಗಿದೆ.
20. ರಾಜ್ಯ ಪಟ್ಟಿಯಲ್ಲಿನ ಒಂದು ವಿಷಯವನ್ನು ಕೇಂದ್ರ ಪಟ್ಟಿಗೆ ಒಂದು ವರ್ಷದ ಮಟ್ಟಿಗೆ ವರ್ಗಾಯಿಸುವ ಅಧಿಕಾರವನ್ನು ಯಾರು ಪಡೆದಿದ್ದಾರೆ?
ಉ: ರಾಜ್ಯ ಪಟ್ಟಿಯಲ್ಲಿನ ಒಂದು ವಿಷಯವನ್ನು ಕೇಂದ್ರ ಪಟ್ಟಿಗೆ ಒಂದು ವರ್ಷದ ಮಟ್ಟಿಗೆ ವರ್ಗಾಯಿಸುವ ಅಧಿಕಾರವನ್ನು ರಾಜ್ಯಸಭೆಯು ಪಡೆದಿದೆ.
21. ಸಮವರ್ತಿ ಪಟ್ಟಿಯಲ್ಲಿನ ಮೂರು ವಿಷಯಗಳನ್ನು ತಿಳಿಸಿ?
ಉ: ವಿವಾಹ,ವಿಚ್ಚೇಧನ,ಶಿಕ್ಷಣಗಳು ಸಮವರ್ತಿ ಪಟ್ಟಿಯಲ್ಲಿನ ವಿಷಯಗಳಾಗಿವೆ.
22. ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಹಣಕಾಸಿನ ಅಧಿಕಾರವು ಯಾರ ಕೈಯಲ್ಲಿರುತ್ತದೆ?
ಉ: ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಹಣಕಾಸಿನ ಅಧಿಕಾರವು ರಾಷ್ಟ್ರಪತಿಯವರ ಕೈಯಲ್ಲಿರುತ್ತದೆ.
23. I.A.C ವಿಸ್ತರಿಸಿ?
ಉ: I.A.C ವಿಸ್ತರಿಸಿದರೆ ಬ್ರಷ್ಟಾಚಾರದ ವಿರುದ್ಧ ಭಾರತ [INDIA AGAINEST CURRUPTION] ಎಂದಾಗುತ್ತದೆ.
24. ಸಂವಿಧಾನದ ಯಾವ ವಿಧಿಯಂತೆ ಸಂಸತ್ತು ಅಂತರರಾಜ್ಯ ಜಲವಿವಾದಗಳನ್ನು ಬಗೆಹರಿಸುತ್ತದೆ?
ಉ: ಸಂವಿಧಾನದ 262ನೆಯ ವಿದಿಯಂತೆ ಸಂಸತ್ತು 1956ರಲ್ಲಿ ಕಾಯಿದೆ ರಚಿಸಿ ಅಂತರರಾಜ್ಯ ಜಲ ವಿವಾದಗಳನ್ನು ಬಗೆ ಹರಿಸುತ್ತದೆ.
25. ಭಾರತದಲ್ಲಿ ಯಾವಾಗ ಮತ್ತು ಯಾರು ಆಂತರಿಕ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದರು?
ಉ: ಭಾರತದಲ್ಲಿ 1975ರಲ್ಲಿ ಪ್ರಧಾನಿ ಇಂದಿರಾ ಗಾಂಧೀಯವರು ಆಂತರಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದರು.
26. [ಈ ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯಕ್ಕೆ ಸಾಲುವಷ್ಟು ಇದೆಯೇ ಹೊರತು ದುರಾಸೆಯನ್ನು ಪೂರೈಸುವಷ್ಟಿಲ್ಲ] ಎಂದವರು ಯಾರು?
ಉ: [ಈ ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯಕ್ಕೆ ಸಾಲುವಷ್ಟು ಇದೆಯೇ ಹೊರತು ದುರಾಸೆಯನ್ನು ಪೂರೈಸುವಷ್ಟಿಲ್ಲ] ಎಂದವರು ಮಹಾತ್ಮಾ ಗಾಂಧೀಜಿ.
27. ಶೇಷಾಧಿಕಾರಗಳು ಎಂದರೇನು? ಅವು ಯಾವ ಸರ್ಕಾರಕ್ಕೆ ಸೇರಿರುತ್ತವೆ?
ಉ: ಕೇಂದ್ರಪಟ್ಟಿ, ರಾಜ್ಯ ಪಟ್ಟಿ ಹಾಗು ಸಮವರ್ತಿ ಪಟ್ಟಿಗೆ ಸೇರದ ವಿಶಯಗಳನ್ನು ಶೇಷಾಧಿಕಾರಗಳು ಎನ್ನಲಾಗುತ್ತಿದ್ದು ಅವು ಕೇಂದ್ರ ಸರ್ಕಾರಕ್ಕೆ ಸೇರಿರುತ್ತವೆ.
28. ರಾಷ್ಟ್ರೀಯ ಐಖ್ಯತಾ ಮಂಡಳಿಯು ಯಾವಾಗ ಸ್ಥಾಪನೆಗೊಂಡಿದೆ? ಅದರ ಉದ್ದೇಶವೇನು?
ಉ: ರಾಷ್ಟ್ರೀಯ ಐಖ್ಯತಾ ಮಂಡಳಿಯು 1961ರಲ್ಲಿ ಸ್ಥಾಪನೆಯಾಗಿದ್ದು ಕೋಮುವಾದ,ಭಾಷಾವಾದ ಹಾಗು ಪ್ರಾದೇಶಿಕತೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಇದರ ಉದ್ದೇಶವಾಗಿದೆ.
29. ಜಗತ್ತಿನಲ್ಲಿ ಅಸ್ಮಿತೆ ರಾಜಕಾರಣಕ್ಕೆ ಪ್ರಮುಖ ಕಾರಣಗಳಾವುವು?
ಉ: ಅಸ್ಮಿತೆ ರಾಜಕಾರಣಕ್ಕೆ ಪ್ರಮುಖ ಕಾರಣಗಳೆಂದರೆ
ಅ.ದುರಾಡಳಿತ ಆ.ಪ್ರಾದೇಶಿಕ ಪಕ್ಷಗಳ ಉಗಮ ಇ.ಅತಿಯಾದ ಬಡತನ ಈ.ಜನಾಂಗಗಳ ಸಾಂಸ್ಕ್ರುತಿಕ ನಾಶದ ಭೀತಿ ಉ.ಸಾಕ್ಷರತೆಯ ಹೆಚ್ಚಳ ಇತ್ಯಾದಿಗಳು ಜಗತ್ತಿನಲ್ಲಿ ಅಸ್ಮಿತೆ ರಾಜಕಾರಣಕ್ಕೆ ಕಾರಣಗಳಾಗಿವೆ.
30. ಅಸ್ಮಿತೆ ರಾಜಕಾರಣದ ಅರ್ಥವನ್ನು ಬರೆಯಿರಿ?
ಉ: ವೈಯಕ್ತಿಕ ಅಥವ ಗುಂಪಿನ ಗುರುತಿಸಿಕೊಳ್ಳುವ ಪ್ರಕ್ರಿಯೆಯನ್ನು ಸರಳವಾಗಿ ಅಸ್ಮಿತೆ ರಾಜಕಾರಣ ಎನ್ನಬಹುದು.ವಿಶಾಲಾರ್ಥದಲ್ಲಿ ಸ್ವಂತಿಕೆಯ ವಿಧಾನ,ಸುಖದ ಹುಡುಕಾಟ ಹಾಗು ಸಮುದಾಯವನ್ನು ತಲುಪುವ ಪ್ರಯತ್ನಗಳಸಂಮಿಶ್ರಣವೇ ಅಸ್ಮಿತೆ ರಾಜಕಾರಣವಾಗಿದೆ.ಇಲ್ಲಿ ಜನಾಂಗ,ಭಾಷೆ,ಪ್ರದೇಶಗಳ ಆಧಾರದ ಮೇಲೆ ಬಲಶಾಲಿಯಾಗಲು,ಪ್ರಾತಿನಿಧ್ಯ ಪಡೆಯಲು ಹಾಗು ಸಾಮಾಜಿಕ ಗುಂಪು ಕಟ್ಟಿಕೊಳ್ಳುವ ಪ್ರಯತ್ನವಿರುತ್ತದೆ.
31. ಸಂಮಿಶ್ರ ಸರ್ಕಾರ ಎಂದರೇನು?
ಉ: ಸಾರ್ವತ್ರಿಕ ಚುನಾವಣೆಯಲ್ಲಿ ಒಂದೇ ರಾಜಕೀಯ ಪಕ್ಷವು ಬಹುಮತ ಪಡೆಯದಿದ್ದಾಗ ಎರಡು ಅಥವ ಹೆಚ್ಚು ಸಮಾನ ಮನಸ್ಕ ಪಕ್ಷಗಳು ಒಂದಾಗಿ ಸರ್ಕಾರ ರಚಿಸುವುದಕ್ಕೆ ಸಂಮಿಶ್ರ ಸರ್ಕಾರ ಎನ್ನುವರು.ಇಲ್ಲಿ ಪಾಲುದಾರ ಪಕ್ಷಗಳು ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳಡಿಯಲ್ಲಿ ಆಡಳಿತ ನಡೆಸುತ್ತವೆ.
32. ಸಂಮಿಶ್ರ ಸರ್ಕಾರದ ಒಂದು ವ್ಯಾಖ್ಯಾನ ನೀಡಿ?
ಉ: ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಒಂದಾಗಿ ಸರ್ಕಾರ ಅಥವ ಮಂತ್ರಿಮಂಡಲವನ್ನು ರಚಿಸುವುದಕ್ಕೆ ಸಂಮಿಶ್ರ ಸರ್ಕಾರ ಎಂದು f.a.ಆಗ್ ಸಂಮಿಶ್ರ ಸರ್ಕಾರವನ್ನು ವ್ಯಾಖ್ಯಾನಿಸಿದ್ದಾರೆ.
33. ಸಂಮಿಶ್ರ ಸರ್ಕಾರಹೊಂದಿರುವ ರಾಷ್ಟ್ರಗಳಿಗೆ ಎರಡು ಉದಾಹರಣೆ ನೀಡಿ?
ಉ: ಸಂಮಿಶ್ರ ಸರ್ಕಾರ ಪದ್ಧತಿಯನ್ನು ಹೊಂದಿರುವ ರಾಷ್ಟ್ರಗಳಿಗೆ ಭಾರತ,ಫ಼್ರಾನ್ಸ್,ಜರ್ಮನಿ,ಇಟಲಿಗಳು ಉದಾಹರಣೆಗಳಾಗಿವೆ.
34. ಸಾಮೂಹಿಕ ನಾಯಕತ್ವ ಎಂದರೇನು?
ಉ: ಆಡಳಿತಕ್ಕೆ ಸಂಬಧಿಸಿದ ತೀರ್ಮಾನಗಳನ್ನು ಕೈಗೊಳ್ಳುವಾಗ ಸಂಮಿಶ್ರ ಸರ್ಕಾರದಲ್ಲಿ ಪಾಲು ಹೊಂದಿದ ಎಲ್ಲ ನಾಯಕರೊಡನೆ ವಿಚಾರ ವಿನಿಮಯ ಮಾಡಿ ಕೈಗೊಳ್ಳುವುದಕ್ಕೆ ಸಾಮೂಹಿಕ ನಾಯಕತ್ವ ಎನ್ನುವರು.ಇಲ್ಲಿ ಅಧಿಕಾರದಲ್ಲಿರುವವರ ಅಭಿಪ್ರಾಯಕ್ಕಿಂತ ಸರ್ವಸಮ್ಮತ ಅಭಿಪ್ರಾಯ ಮಹತ್ವ ಪಡೆದುಕೊಳ್ಳುತ್ತದೆ.
35. ಸಂಮಿಶ್ರ ಸರ್ಕಾರ ರಚನೆಗೆ ಕಾರಣವಾಗುವ ಎರಡು ಸಂಧರ್ಬಗಳಾವುವು?
ಉ: ವಿದೇಶಿಯರ ದಾಳಿಯ ಭಯ,ರಾಜಕೀಯ ಅಸ್ಥಿರತೆ,ಚುನಾವಣಾ ಪೂರ್ವ ಅಥವ ನಂತರದ ಮೈತ್ರಿಕೂಟಗಳ ರಚನೆ ಮುಂತಾದವುಗಳು ಸಂಮಿಶ್ರ ಸರ್ಕಾರದ ಸ್ಥಾಪನೆಗೆ ಕಾರಣಗಳಾಗುತ್ತವೆ.
36. ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಎಂದರೇನು?
ಉ: ತಮ್ಮ ಸೈದ್ಧಾಂತಿಕ ಭಿನ್ನತೆಗಳನ್ನು ಬದಿಗಿಟ್ಟು ಸಂಮಿಶ್ರ ಸರ್ಕಾರದ ಸುಗಮ ಹಾಗು ದಕ್ಷ ಆಡಳಿತಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಜಾರಿಗೊಳಿಸಲು ತೀರ್ಮಾನಿಸಿದ ಕಾರ್ಯಕ್ರಮಗಳ ಪಟ್ಟಿಯನ್ನು ಸಾಮಾನ್ಯ ಕನಿಷ್ಟ ಕಾರ್ಯಯೋಜನೆ ಎನ್ನಬಹುದು.ಇಲ್ಲಿ ಶಾಂತಿ ಸ್ಥಾಪನೆ,ಆರ್ಥಿಕ ಪ್ರಗತಿ,ಜನಪರ ಯೋಜನೆ,ಸಾಮಾಜಿಕ ಸಾಮರ್ಸ್ಯದಂತಹ ಅಂಶಗಳು ಸೇರಿರುತ್ತವೆ.
37. N.D.Aನ ಎರಡು ಮಿತ್ರ ಪಕ್ಷಗಳನ್ನು ಹೆಸರಿಸಿ?
ಉ: ಶಿವಸೇನೆ ಹಾಗು ತೆಲಗು ದೇಶಂ ಪಕ್ಷಗಳು N.D.Aನ ಮಿತ್ರ ಪಕ್ಷಗಳಾಗಿವೆ.
38. U.P.Aನ ಎರಡು ಮಿತ್ರ ಪಕ್ಷಗಳನ್ನು ಹೆಸರಿಸಿ?
ಉ: ಉತ್ತರಪ್ರದೇಶದ B.S.P ಹಾಗು ಬಿಹಾರದ R.J.D ಪಕ್ಷಗಳು U.P.Aನ ಮಿತ್ರ ಪಕ್ಷಗಳಾಗಿವೆ.
39. ರಾಜ್ಯ ಪ್ರೇರಿತ ಭಯೋತ್ಪಾದನೆ ಎಂದರೇನು?
ಉ: ಜಗತ್ತಿನ ಕೆಲ ದೇಶಗಳ ಸರ್ಕಾರಗಳೇ ಭಯೋತ್ಪಾದನಾ ಸಂಘಟನೆಗಳ ತರಬೇತಿಗೆ ನೆರವಾಗಿವೆ.ತಮ್ಮ ದೇಶದ ಭಯೋತ್ಪಾದಕರನ್ನು ಸಮರ ಸೇನಾನಿಗಳಂತೆ ಪರಿಗಣಿಸುತ್ತಿವೆ.ಮ್ರುದು ಧೋರಣೆ ತಾಳಿ ಸರ್ಕಾರವೇ ಭಯೋತ್ಪಾದನೆಯನ್ನು ಹೆಚ್ಚಿಸುತ್ತದೆ.ಇದನ್ನೇ ರಾಜ್ಯ ಪ್ರೇರಿತ ಭಯೋತ್ಪಾದನೆ ಎನ್ನಬಹುದು.
40. ಸಾಮಾನ್ಯ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಯಾವ ವಿಷಯದಲ್ಲಿ ಸಲಹೆ ನೀಡಬಹುದು?
ಉ: ಸಾಮಾನ್ಯ ಸ್ಥಿತಿಯಲ್ಲಿ ಕೇಂದ್ರವು ರಾಜ್ಯಗಳಿಗೆ ದೇಶದ ಹಿತ ದ್ರುಷ್ಟಿಯಿಂದ ರೈಲ್ವೆ,ಸಂಪರ್ಕ,ಭದ್ರತೆ,ಸಾರಿಗೆ ಮುಂತಾದ ವಿಚಾರಗಳಲ್ಲಿ ನಿರ್ದೇಶನ ನೀಡಬಹುದು.
41. ಬ್ರಷ್ಟಾಚಾರ ಎಂದರೇನು?
ಉ: ಸಾರ್ವಜನಿಕ ಹುದ್ದೆಯನ್ನು ಖಾಸಗಿ ಉದ್ದೇಶಕ್ಕಾಗಿ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಬಳಸಿಕೊಳ್ಳುವುದನ್ನು ಬ್ರಷ್ಟಾಚಾರ ಎನ್ನಬಹುದು.ಇಲ್ಲಿ ಸ್ವಜನ ಪಕ್ಷಪಾತ,ಲಂಚ ಸ್ವೀಕಾರ,ಸಿಬ್ಬಂದಿಗಳ ದುರ್ಬಳಕೆ ಮುಂತಾದ ಚಟುವಟಿಕೆಗಳು ಸೇರಿರುತ್ತವೆ.
42. ಭಾರತದಲ್ಲಿ ಬ್ರಷ್ಟಾಚಾರ ತಡೆಯಲು ಇರುವ ಎರಡು ಅಡಚಣೆಗಳಾವುವು?
ಉ: ಭಾರತದಲ್ಲಿ ಬ್ರಷ್ಟಾಚಾರ ತಡೆಯಲು ಆಡಳಿತದಲ್ಲಿನಅದಕ್ಷತೆ,ಪ್ರಜಾಪ್ರಭುತ್ವ ಮೌಲ್ಯಗಳ ಕುಸಿತ,ಸ್ವಾರ್ಥ ಮನೋಭಾವ,ಶಿಕ್ಷೆಯ ಭಯವಿಲ್ಲದಿರುವುದು ಪ್ರಮುಖ ಅಡೆ ತಡೆಗಳಾಗಿವೆ.
43. ಬ್ರಷ್ಟಾಚಾರ ನಿರ್ಮೂಲನೆಗೊಳಿಸಲು ಭಾರತದಲ್ಲಿ ನಡೆದ ಒಂದು ಆಂದೋಲನವನ್ನು ಕುರಿತು ಬರೆಯಿರಿ?
ಉ: ಅಣ್ಣಾ ಹಜಾರೇಯವರ ನೇತ್ರುತ್ವದಲ್ಲಿಬ್ರಷ್ಟಾಚಾರದ ವಿರುದ್ಧ ಭಾರತ ಎಂಬ ಸಂಘಟನೆ ನಡೆಸಿದ ಆಂದೋಲನವು ಭಾರತದಲ್ಲಿ ಬ್ರಷ್ಟಾಚಾರದ ವಿರುದ್ಧ ನಡೆದ ಆಂದೋಲನವಾಗಿದೆ.ಇದರ ಪರಿಣಾಮವಾಗಿ ಪ್ರಬಲ ಲೋಕಪಾಲ ಸಂಸ್ಥೆಯು ಜಾರಿಗೊಂಡಿತು.
ಸಂಭವನೀಯ ಐದು ಅಥವ ಹತ್ತು ಅಂಕಗಳ ಪ್ರಶ್ನೆಗಳು:
ಸಂಮಿಶ್ರ ಸರ್ಕಾರದ ಲಕ್ಷಣಗಳು
ಉ: ಸಂಮಿಶ್ರ ಸರ್ಕಾರವು ಈ ಕೆಳಗಿನ ಲಕ್ಷಣಗಳನ್ನು ಹೊಂದಿರುವ ರಾಜಕೀಯ ವ್ಯವಸ್ಥೆಯಾಗಿದೆ.
A ಸಂಮಿಶ್ರ ಸರ್ಕಾರವು ಬಹು ಪಕ್ಷ ಪದ್ಧತಿಯಲ್ಲಿ ಮಾತ್ರ ಕಂಡು ಬರುತ್ತದೆ: ಈ ಸರ್ಕಾರದ ರಚನೆಗೆ ಎರಡಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳ, ಅಗತ್ಯವಿರುತ್ತದೆ.
B ಸಂಮಿಶ್ರ ಸರ್ಕಾರವು ಹೆಚ್ಚು ಪ್ರಜಾಸತ್ತಾತ್ಮಕವಾಗಿರುತ್ತದೆ: ಈ ಸರ್ಕಾರದಲ್ಲಿ ಸರ್ಕಾರ ರಚಿಸಲು ಬೆಂಬಲ ನೀಡಿದ ಎಲ್ಲ ರಾಜಕೀಯ ಪಕ್ಷಗಳ ಅಭಿಪ್ರಾಯಕ್ಕೆ ಮಹತ್ವ ನೀಡಲಾಗುತ್ತದೆ.
C ಸಂಮಿಶ್ರ ಸರ್ಕಾರವು ಏಕ ಪಕ್ಷ ಪ್ರಾಬಲ್ಯಕ್ಕೆ ಸವಾಲಾಗಿದೆ: ಏಕ ಪಕ್ಷವು ಬಹುಮತ ಪಡೆದರೆ ಸರ್ವಾಧಿಕಾರದ ಜಾರಿಗೊಳ್ಳಲು ಅವಕಾಶವಿದ್ದು ಸಂಮಿಶ್ರ ಸರ್ಕಾರವು ಅದಕ್ಕೆ ಪರಿಹಾರವಾಗಿದೆ.
D ಸಂಮಿಶ್ರ ಸರ್ಕಾರವು ಚುನಾವಣಾ ಪೂರ್ವ ಅಥವ ಚುನಾವಣಾ ನಂತರದ ಮೈತ್ರಿಯ ಫಲವಾಗಿರುತ್ತದೆ: ಭಾರತದ ಬಿಹಾರದಲ್ಲಿ JDU RJD ಚುನಾವಣಾ ಪೂರ್ವ ಮತ್ತು BJP ಶಿವಸೇನೆ ಚುನಾವಣಾ ನಂತರ ಮೈತ್ರಿಯ ಫಲವಾಗಿ ಸಂಮಿಶ್ರ ಸರ್ಕಾರ ಜಾರಿಗೊಂಡವು.
E ಸಂಮಿಶ್ರ ಸರ್ಕಾರವು ಸಾಮಾನ್ಯ ಕನಿಷ್ಟ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತದೆ: ಇಲ್ಲಿ ಎಲ್ಲ ಪಕ್ಷಗಳು ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಯನ್ನು ಸಮಾನವಾಗಿ ಸೇರಿಸಲಾಗಿರುತ್ತದೆ.
F ಸಂಮಿಶ್ರ ಸರ್ಕಾರವು ತುರ್ತು ಪರಿಸ್ಥಿತಿಯಲ್ಲಿ ರಚನೆಗೊಳ್ಳುತ್ತದೆ: ದೇಶವು ಯುದ್ಧ, ಆರ್ಥಿಕ ದುಸ್ಥಿತಿ, ನೈಸರ್ಗಿಕ ವಿಕೋಪಗಳ ಸುಳಿಯಲ್ಲಿದ್ದಾಗ ಸಂಮಿಶ್ರ ಸರ್ಕಾರ ಜಾರಿಗೊಳ್ಳುತ್ತದೆ.
G ಸಂಮಿಶ್ರ ಸರ್ಕಾರದಲ್ಲಿ ಪ್ರಧಾನ ಮಂತ್ರಿ ದುರ್ಬಲ ನಾಯಕನಾಗಿರುತ್ತಾನೆ:
H ಸಂಮಿಶ್ರ ಸರ್ಕಾರದಲ್ಲಿ ಮಿತ್ರ ಪಕ್ಷಗಳ ತಮಗೆ ಸರಿ ತೋರಿದಾಗ ಸರ್ಕಾರದಿಂದ ಹೊರ ಹೋಗಲು ಅವಕಾಶವಿರುವುದು:
I ಸಂಮಿಶ್ರ ಸರ್ಕಾರದಲ್ಲಿ ಪ್ರಧಾನಿಯಾದವನು ಸರ್ವ ಸಮ್ಮತ ನಾಯಕನಾಗಿರುತ್ತಾನೆ:
J ಸಂಮಿಶ್ರ ಸರ್ಕಾರವು ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡುತ್ತದೆ:
ಸಂಮಿಶ್ರ ಸರ್ಕಾರದ ಗುಣ ಮತ್ತು ಅವಗುಣಗಳು
ಉ: ಸಂಮಿಶ್ರ ಸರ್ಕಾರವು ಈ ಕೆಳಗಿನ ಗುಣಗಳಿಂದ ಕೂಡಿರುವ ರಾಜಕೀಯ ವ್ಯವಸ್ಥೆಯಾಗಿದೆ.
A ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡುತ್ತದೆ: ಇಲ್ಲಿ ವಿವಿಧ ಪ್ರದೇಶದ ರಾಜಕೀಯ ಪಕ್ಷಗಳು ಸೇರಿ ಸರ್ಕಾರ ರಚಿಸಿರುತ್ತವೆ. ಚಿಕ್ಕ ಹಾಗು ಬೇರೆ ಬೇರೆ ಭಾಗದ ಪಕ್ಷಗಳು ತಮ್ಮ ಪ್ರದೇಶಗಳ ಅಭಿವ್ರುದ್ಧಿಗೆ ಶ್ರಮಿಸುವುದರಿಂದೆ ಅಸಮಾನತೆ ಮಾಯವಾಗುತ್ತದೆ.
B ಅಲ್ಪ ಸಂಖ್ಯಾತರಿಗೆ ರಕ್ಷಣೆ ಒದಗಿಸುತ್ತದೆ: ಅಲ್ಪ ಸಂಖ್ಯಾತರು ತಮ್ಮದೇ ರಾಜಕೀಯ ಪಕ್ಷಗಳನ್ನು ಹೊಂದಿರುತ್ತಾರೆ. ಉ: ಅಕಾಲಿ ದಳ, ಮುಸ್ಲೀಮ್ ಲೀಗ್, MES. ಈ ಪಕ್ಷಗಳು ಸಂಮಿಶ್ರ ಸರ್ಕಾರದಲ್ಲಿ ಪಾಲು ಹೊಂದಿ ಅಲ್ಪ ಸಂಖ್ಯಾತರ ಹಿತ ಕಾಪಾಡಲು ಸಾಧ್ಯವಾಗುತ್ತದೆ.
C ಆಡಳಿತದಲ್ಲಿ ವೈವಿಧ್ಯತೆ ಕಾಣಬಹುದಾಗಿದೆ: ಸಂಮಿಶ್ರ ಸರ್ಕಾರದಲ್ಲಿ ವಿವಿಧ ಪಕ್ಷಗಳು ಪಾಲು ಹೊಂದಿದ್ದು ಪ್ರತಿ ರಾಜಕೀಯ ಪಕ್ಷದ ಉದ್ದೇಶ ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ಆಡಳಿತದಲ್ಲಿ ವೈವಿಧ್ಯತೆ ಕಂಡು ಬರುತ್ತದೆ.
D ಉತ್ತಮ ಆಡಳಿತ ಒದಗಿಸುತ್ತದೆ: ಸಂಮಿಶ್ರ ಸರ್ಕಾರದಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಜನರಿಂದ ಮೆಚ್ಚುಗೆ ಪಡೆಯಲು ನಾ ಮುಂದೆ ತಾ ಮುಂದೆ ಎಂದು ಉತ್ತಮ ಯೋಜನೆಅಥವ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸುತ್ತವೆ. ಇದರಿಂದ ಉತ್ತಮ ಆಡಳಿತ ಕಂಡು ಬರುತ್ತದೆ.
E ಜನರಿಗೆ ವಿಶಾಲವಾದ ಆಯ್ಕೆ: ಸಂಮಿಶ್ರ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ವಿವಿಧ ರಾಜಕೀಯ ಪಕ್ಷಗಳ ದಕ್ಷತೆ, ಪ್ರಾಮಾಣಿಕತೆ ಹಾಗು ಸೇವಾ ಮನೋಭಾವವನ್ನು ಜನರು ಗಮನಿಸುತ್ತಾರೆ. ಆಗ ಚುನಾವಣೆಯಲ್ಲಿ ಮತ ನೀಡುವಾಗ ಜನರ ಮುಂದೆ ಹಲವು ಆಯ್ಕೆಗಳಿಗೆ ಅವಕಾಶವಿರುತ್ತದೆ.
F ಸರ್ವಾಧಿಕಾರತ್ವ ತಡೆಯುತ್ತದೆ: ಏಕ ಪಕ್ಷ ಸರ್ಕಾರದ ನಾಯಕ ನಿರಂಕುಶವಾಗಿ ವರ್ತಿಸುತ್ತಾನೆ. ಆದರೆ ಸಂಮಿಶ್ರ ಸರ್ಕಾರದಲ್ಲಿ ಹಲವು ರಾಜಕೀಯ ಪಕ್ಷಗಳಲ್ಲಿ ಒಂದು ಪಕ್ಷ ನಿರಂಕುಶವಾಗಲು ಹೊರಟರೆ ಉಳಿದ ಪಕ್ಷಗಳು ಅದನ್ನು ತಡೆಯುತ್ತವೆ.
ಸಂಮಿಶ್ರ ಸರ್ಕಾರದ ಅವಗುಣಗಳು
ಉ: ಸಂಮಿಶ್ರ ಸರ್ಕಾರವು ಈ ಕೆಳಗಿನ ಅನಾನುಕೂಲಗಳಿಂದ ಕೂಡಿರುವ ರಾಜಕೀಯ ವ್ಯವಸ್ಥೆಯಾಗಿದೆ.
A ಒಮ್ಮತದ ನಿರ್ಧಾರ ಕಷ್ಟಕರ: ಇಲ್ಲಿ ಎರಡಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳ ಒಪ್ಪಿಗೆ ಅಗತ್ಯ.
B ಸರ್ಕಾರದ ಮುಖ್ಯಸ್ಥರು ಸ್ವತಂತ್ರವಾಗಿರುವದಿಲ್ಲ: ಇಲ್ಲಿ ಸರ್ಕಾರಕ್ಕೆ ಬೆಂಬಲ ನೀಡಿದ ಉಳಿದ ಪಕ್ಷಗಳ ಅಭಿಪ್ರಾಯದಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ.
C ತಮ್ಮ ತಮ್ಮ ಭರವಸೆ ಈಡೇರಿಸಲು ಶ್ರಮಿಸುತ್ತವೆ: ಇಲ್ಲಿ ದೇಶದ ಹಿತ, ಆರ್ಥಿಕ ಸ್ಥಿತಿ ಗಮನಿಸದೇ ತಮ್ಮ ಭರವಸೆಗಳ ಅನುಷ್ಟಾನಕ್ಕೆ ಪಕ್ಷಗಳು ಬಡಿದಾಡುತ್ತವೆ.
D ಜವಾಬ್ದಾರಿಯಿಂದ ನುಣುಚಿಕೊಳ್ಳುವಿಕೆ: ಇಲ್ಲಿ ಎಲ್ಲ ರಾಜಕೀಯ ಪಕ್ಷಗಳು ಉತ್ತಮ ಕೆಲಸಕ್ಕೆ ತಾವೇ ಕಾರಣವೆಂದು ಹೆಸರು ಪಡೆದರೆ ತಪ್ಪುಗಳು ನಡೆದಾಗ ಜನರಿಗೆ ಉತ್ತರ ನೀಡದೇ ಕಾಲು ಕೀಳುತ್ತವೆ.
E ಆಡಳಿತ ಗೌಪ್ಯತೆ ಸಾಧ್ಯವಿಲ್ಲ: ಇಲ್ಲಿ ಪ್ರಧಾನಿ ಎಲ್ಲ ವಿಚಾರಗಳ ಬೆಂಬಲ ನೀಡಿದ ರಾಜಕೀಯ ಪಕ್ಷದ ನಾಯಕರಿಗೆ ತಿಳಿಸಬೇಕಾಗುತ್ತದೆ. ಒಪ್ಪಂದ, ರಕ್ಷಣೆ, ಶಸ್ತ್ರಾಸ್ತ್ರ ಮುಂತಾದ ವಿಷಯಗಳನ್ನು ಬಹಿರಂಗವಾಗಿ ದೇಶಕ್ಕೆ ಹಾನಿಯಾಗುತ್ತದೆ.
F ರಾಷ್ಟ್ರೀಯ ಹಿತಾಸಕ್ತಿಯ ನಿರ್ಲಕ್ಷ:
G ಆರ್ಥಿಕವಾಗಿ ಭಾರವನ್ನುಂಟು ಮಾಡುತ್ತದೆ:
H ಅಪವಿತ್ರ ಮೈತ್ರಿಗೆ ಹಾದಿ:
1. ಸಂಮಿಶ್ರ ಸರ್ಕಾರ ಎಂದರೇನು?ಅದರ ಲಕ್ಷಣಗಳನ್ನು ವಿವರಿಸಿ?
ಉ: ಸಾರ್ವತ್ರಿಕ ಚುನಾವಣೆಯಲ್ಲಿ ಒಂದೇ ರಾಜಕೀಯ ಪಕ್ಷವು ಬಹುಮತ ಪಡೆಯದಿದ್ದಾಗ ಎರಡು ಅಥವ ಹೆಚ್ಚು ಸಮಾನ ಮನಸ್ಕ ಪಕ್ಷಗಳು ಒಂದಾಗಿ ಸರ್ಕಾರ ರಚಿಸುವುದಕ್ಕೆ ಸಂಮಿಶ್ರ ಸರ್ಕಾರ ಎನ್ನುವರು.ಇಲ್ಲಿ ಪಾಲುದಾರ ಪಕ್ಷಗಳು ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳಡಿಯಲ್ಲಿ ಆಡಳಿತ ನಡೆಸುತ್ತವೆ. ಇದರ ಪ್ರಮುಖ ಲಕ್ಷಣಗಳೆಂದರೆ
* ಬಹುಪಕ್ಷ ಪದ್ಧತಿಯಲ್ಲಿ ಮಾತ್ರ ಕಂಡು ಬರುತ್ತದೆ.
* ಪ್ರಜಾಸತ್ತಾತ್ಮಕ ವ್ಯವಸ್ಥೆಯಾಗಿದೆ.
* ಏಕಪಕ್ಷ ಪದ್ಧತಿಗೆ ಸವಾಲಾಗಿದೆ.
* ಚುನಾವಣಾ ಪೂರ್ವ ಅಥವ ನಂತರದ ಮೈತ್ರಿಯಾಗಿದೆ.
* ಸಾಮಾನ್ಯ ಕನಿಷ್ಟ ಕಾರ್ಯಕ್ರಮದ ಆಧಾರ.
* ತುರ್ತು ಪ್ರಿಸ್ಥಿತಿಯಲ್ಲಿ ರಚನೆಗೊಳ್ಳುವುದು.
* ಪ್ರಧಾನ ಮಂತ್ರಿಗೆ ಸ್ವಾತಂತ್ರವಿರುವುದಿಲ್ಲ.
* ಸರ್ವ ಸಮ್ಮತ ವ್ಯಕ್ತಿಯ ನಾಯಕತ್ವ.
* ಅಸ್ಥಿರ ಸರ್ಕಾರ.
2. ಸಂಮಿಶ್ರ ಸರ್ಕಾರದ ಗುಣ ಮತ್ತು ದೋಷಗಳನ್ನು ಚರ್ಚಿಸಿರಿ?
ಉ: * ಪ್ರಾದೇಶಿಕ ಅಸಮತೋಲನದ ನಿವಾರಣೆ.
* ಜನಾಭಿಪ್ರಾಯ ಆಧರಿತ ತೀರ್ಮಾನಗಳು.
* ಆಡಳಿತದಲ್ಲಿ ವೈವಿಧ್ಯತೆ.
* ಸಂವಿಧಾನಿಕ, ಬಿಕ್ಕಟ್ಟನ್ನು ಹೋಗಲಾಡಿಸುವುದು.
* ದಬ್ಬಾಳಿಕೆಯನ್ನು ತಡೆಯುವುದು.
ಈ ಮೇಲಿನವು ಸಂಮಿಶ್ರ ಸರ್ಕಾರದ ಗುಣಗಳಾಗಿದ್ದು ಕೆಳಗಿನವು ಅದರ ದೋಷಗಳಾಗಿವೆ.
* ಒಮ್ಮತದ ನಿರ್ಧಾರ ಸಾಧ್ಯವಿಲ್ಲ.
* ಪ್ರಧಾನಿಗೆ ಸ್ವಾತಂತ್ರವಿರುವುದಿಲ್ಲ.
* ರಾಜಕೀಯ ಅಸ್ಥಿರತೆ.
ಗೌಪ್ಯತೆ ಕಠಿಣವಾಗುತ್ತದೆ.
* ರಾಷ್ಟ್ರೀಯ ಹಿತಾಸಕ್ತಿಯ ನಿರ್ಲಕ್ಷ.
* ಅನಗತ್ಯ ಚುನಾವಣೆಗೆ ಅವಕಾಶ.
3. ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಡುವಿನ ಶಾಸನೀಯ ಸಂಬಂಧವನ್ನು ವಿವರಿಸಿ?
4. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆಡಳಿತಾತ್ಮಕ ಸಂಬಂಧಗಳನ್ನು ಚರ್ಚಿಸಿರಿ?
5. ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಡುವಿನ ವಿವಿಧ ಸಂಬಂಧಗಳನ್ನು ಸಂಕ್ಷಿಪ್ತವಾಗಿ ವಿವರಿಸಿ?
6. ಅಸ್ಮಿತೆ ರಾಜಕಾರಣಕ್ಕೆ ಕಾರಣಗಳನ್ನು ವಿವರಿಸಿ?
ಉ: ಅಸ್ಮಿತೆ ರಾಜಕಾರಣಕ್ಕೆ ಪ್ರಮುಖ ಕಾರಣಗಳೆಂದರೆ
ಅ.ದುರಾಡಳಿತ ಆ.ಪ್ರಾದೇಶಿಕ ಪಕ್ಷಗಳ ಉಗಮ
ಇ.ಅತಿಯಾದ ಬಡತನ ಈ.ಜನಾಂಗಗಳ ಸಾಂಸ್ಕ್ರುತಿಕ ನಾಶದ ಭೀತಿ
ಉ.ಸಾಕ್ಷರತೆಯ ಹೆಚ್ಚಳ ಊ. ನೈಸರ್ಗಿಕ ಸಂಪನ್ಮೂಲಗಳ ಅಸಮಾನ ಹಂಚಿಕೆ
ರು. ಶಿಕ್ಷಣ ಹಾಗು ಉದ್ಯೋಗ ಕಳೆದುಕೊಳ್ಳುವ ಭೀತಿ ಎ. ಭಾಷೆ ಹಾಗು ಸಂಸ್ಕ್ರುತಿ ನಾಶದ ಭಯ
7. ಅಸ್ಮಿತೆ ರಾಜಕಾರಣದ ಒಂದು ಅಂಶವಾಗಿ ಭಾಷೆಯನ್ನು ಚರ್ಚಿಸಿರಿ?
8. ಭಯೋತ್ಪಾದನೆ ನಿವಾರಣೆಯಲ್ಲಿ ಯುವಕರ ಪಾತ್ರವನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಕ್ರಮಗಳನ್ನು ಚರ್ಚಿಸಿರಿ?
9. ಬ್ರಷ್ಟಾಚಾರದ ನಿವಾರಣೆಯಲ್ಲಿ ಯುವಕರ ಪಾತ್ರವನ್ನು ವಿವರಿಸಿ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ