ಅಧ್ಯಾಯ 5:
ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು:
ಒಂದು ಅಂಕದ ಪ್ರಶ್ನೋತ್ತರಗಳು
1. ರಾಷ್ಟ್ರೀಯತೆ ಎಂದರೇನು?
ಉ:ಒಂದು ನಿರ್ದಿಷ್ಟ ರಾಷ್ಟ್ರಕ್ಕೆ ಸೇರಿರುವ ನಾವೆಲ್ಲರು ಒಂದೇ ಎಂಬ ವ್ಯಕ್ತಿಯ ಮನೋಭಾವನೆಯನ್ನು ರಾಷ್ಟ್ರೀಯತೆ ಎನ್ನುವರು.
2. ರಾಷ್ಟ್ರ ರಾಜ್ಯ ಪ್ರಕ್ರಿಯೆಯು ಯಾವ ಒಪ್ಪಂದದಿಂದ ಮೂಡಿ ಬಂದಿತು?
ಉ: ರಾಷ್ಟ್ರ ರಾಜ್ಯ ಪ್ರಕ್ರಿಯೆಯು ವೆಸ್ಟ್ ಫ಼ಾಲಿಯಾ ಒಪ್ಪಂದದಿಂದ ಮೂಡಿ ಬಂದಿತು.
3. ರಾಷ್ಟ್ರ ರಾಜ್ಯ ಕ್ಕೆ ಸಂಬಂಧಿಸಿದಂತೆ ವೆಸ್ಟ್ ಫ಼ಾಲಿಯಾ ಒಪ್ಪಂದ ಯಾವಾಗ ಸಹಿ ಮಾಡಲ್ಪಟ್ಟಿತು?
ಉ: ರಾಷ್ಟ್ರ ರಾಜ್ಯ ಕ್ಕೆ ಸಂಬಂಧಿಸಿದಂತೆ ವೆಸ್ಟ್ ಫ಼ಾಲಿಯಾ ಒಪ್ಪಂದ 1648ರಲ್ಲಿ ಸಹಿ ಮಾಡಲ್ಪಟ್ಟಿತು.
4. ಯಾವ ರಾಷ್ಟ್ರವನ್ನು ಸಾಂಸ್ಕ್ರುತಿಕ ವೈವಿಧ್ಯತೆಗಳ ನಾಡು ಎಂದು ಕರೆಯಲಾಗಿದೆ?
ಉ: ಭಾರತವನ್ನು ಸಾಂಸ್ಕ್ರುತಿಕ ವೈವಿಧ್ಯತೆಗಳ ನಾಡು ಎಂದು ಕರೆಯಲಾಗಿದೆ.
5. ಯಾವ ರಾಷ್ಟ್ರವನ್ನು ಜನಾಂಗಿಯತೆಯ ನಾಡು ಎಂದು ಕರೆಯಲಾಗಿದೆ?
ಉ: ಭಾರತವನ್ನು ಜನಾಂಗಿಯತೆಯ ನಾಡು ಎಂದು ಕರೆಯಲಾಗಿದೆ.
6. ಅಸಮಾನತೆ ಎಂದರೇನು?
ಉ: ಜಾತಿ,ಲಿಂಗ,ಧರ್ಮ,ಜನ್ಮ ಸ್ಥಳಗಳ ಆಧಾರದ ಮೇಲೆ ತಾರತಮ್ಯ ಮಾಡಿ ಕೆಲವು ವರ್ಗಗಳಿಗೆ ಸೌಲಭ್ಯಗಳು ದೊರಕದಂತೆ ಮಾಡುವುದೇ ಅಸಮಾನತೆಯಾಗಿದೆ.
7. ಜಾತಿ ಆಧಾರಿತ ಅಸಮಾನತೆ ಎಂದರೇನು?
ಉ: ಜಾತಿಗಳ ಆಧಾರದ ಮೇಲೆ ತಾರತಮ್ಯ ಉಂಟು ಮಾಡುವುದೇ ಜಾತಿ ಆಧರಿತ ಅಸಮಾನತೆಯಾಗಿದೆ.
8. ಅನಕ್ಷರತೆಯ ವ್ಯಾಖ್ಯಾನ ನೀಡಿ?
ಉ: ಅಮರ್ತ್ಯಸೇನರ ಪ್ರಕಾರ ಅನಕ್ಷರತೆ ಅಸ್ವಾತಂತ್ರ್ಯವಾಗಿದೆ.
9. ಅನಕ್ಷರತೆ ಎಂದರೇನು?
ಉ: ಓದಲು ಹಾಗು ಬರೆಯಲು ಬಾರದ ಸ್ಥಿತಿಯನ್ನು ಅನಕ್ಷರತೆ ಎನ್ನುವರು
10. 2011ರ ಜನಗಣತಿಯಂತೆ ಭಾರತದ ಶೇಕಡಾವಾರು ಸಾಕ್ಷರಸ್ಥರ ಸಂಖೆ ಎಷ್ಟು?
ಉ: 2011 ರ ಜನಗಣತಿಯಂತೆ ಭಾರತ ಶೇಕಡ 74.04ರಷ್ಟು ಸಾಕ್ಷರತೆ ಹೊಂದಿದೆ.
11. 2011ರ ಜನಗಣತಿಯಂತೆ ಕರ್ನಾಟಕದ ಶೇಕಡಾವಾರು ಸಾಕ್ಷರಸ್ಥರ ಸಂಖೆ ಎಷ್ಟು?
ಉ: 2011ರ ಜನಗಣತಿಯಂತೆ ಕರ್ನಾಟಕ ಶೇಕಡ 75.36ರಷ್ಟು ಸಾಕ್ಷರತೆ ಹೊಂದಿದೆ.
12. 86ನೆಯ ಸಂವಿಧಾನ ತಿದ್ದುಪಡಿ ಕಾಯಿದೆಯನ್ನು ಯಾವಾಗ ಅಂಗೀಕರಿಸಲಾಯಿತು?
ಉ: 86ನೆಯ ಸಂವಿಧಾನ ತಿದ್ದುಪಡಿ ಕಾಯಿದೆಯನ್ನು 2002ರಲ್ಲಿ ಅಂಗೀಕರಿಸಲಾಯಿತು.
13. 86ನೆಯ ಸಂವಿಧಾನ ತಿದ್ದುಪಡಿ ಕಾಯಿದೆಯ ಮೂಲಕ ಯಾವ ಕಲಮನ್ನು ಹೊಸದಾಗಿ ಸೇರಿಸಲಾಯಿತು.
ಉ: 86ನೆಯ ಸಂವಿಧಾನ ತಿದ್ದುಪಡಿ ಕಾಯಿದೆಯ ಮೂಲಕ 21 A ಕಲಮನ್ನು ಹೊಸದಾಗಿ ಸೇರಿಸಲಾಯಿತು.
14. ಯಾವ ವಯೋಮಿತಿಯೊಳಗಿನ ಮಕ್ಕಳು ಕಡ್ಡಾಯ ಶಿಕ್ಷಣದಡಿ ಬರುತ್ತಾರೆ?
ಉ: 6 ರಿಂದ 14 ವಯೋಮಿತಿಯೊಳಗಿನ ಮಕ್ಕಳು ಕಡ್ಡಾಯ ಶಿಕ್ಷಣದಡಿ ಬರುತ್ತಾರೆ.
15. RTE ವಿಸ್ತರಿಸಿ?
ಉ: RTE ವಿಸ್ತರಿಸಿದರೆ ರೈಟ್ ಟು ಎಜುಕೇಶನ್ [RIGHT TO EDUCATION] ಎಂದಾಗುತ್ತದೆ.
16. ಕೋಮುವಾದ ಎಂದರೇನು?
ಉ: ತನ್ನ ಧರ್ಮವನ್ನು ಕುರಿತು ವ್ಯಕ್ತಿ ಹೊಂದಿರುವ ಸಂಕುಚಿತ ಭಾವನೆಯನ್ನು ಕೋಮುವಾದ ಎನ್ನಬಹುದು.
17. ಟೆರರಿಸಂನ ಮೂಲ ಪದ ಯಾವುದು?
ಉ: ಟೆರರಿಸಂನ ಮೂಲ ಪದ ಲ್ಯಾಟಿನ್ ಭಾಷೆಯ ಟೆರರ್ ಆಗಿದೆ.
18. ಯಾವುದಾದರು ಒಂದು ಭಯೋತ್ಪಾದನಾ ಸಂಘಟನೆಯನ್ನು ಹೆಸರಿಸಿ.
ಉ: LTTE,PWG,ULFA,IM,LET,JKLF,MNF,SIMI ಮುಂತಾದವುಗಳು ಪ್ರಮುಖ ಭಯೋತ್ಪಾದಕ ಸಂಘಟನೆಗಳಾಗಿವೆ
19. MISA ವಿಸ್ತರಿಸಿ.
ಉ: MISA ವಿಸ್ತರಿಸಿದರೆ ಆಂತರಿಕ ಭದ್ರತಾ ನಿರ್ವಹಣಾ ಕಾಯಿದೆ[MENTAINANCE OF INTERNAL SECURITY ACT] ಎಂದಾಗುತ್ತದೆ.
20. NSA ವಿಸ್ತರಿಸಿ?
ಉ: NSA ವಿಸ್ತರಿಸಿದರೆ ರಾಷ್ಟ್ರೀಯ ಭದ್ರತಾ ಕಾಯಿದೆ[NATIONAL SECURITY ACT] ಎಂದಾಗುತ್ತದೆ.
21. TADA ವಿಸ್ತರಿಸಿ?
ಉ: TADA ವಿಸ್ತರಿಸಿದರೆ ಭಯೋತ್ಪಾದನೆ ಹಾಗು ವಿಚ್ಚಿದ್ರಕಾರಿ ಚಟುವಟಿಕೆಗಳ ನಿಯಂತ್ರಣ ಕಾಯಿದೆ[TERRORISM AND DISRUPTIVE ACTIVITIES PREVENTION ACT] ಎಂದಾಗುತ್ತದೆ.
22. POTA ವಿಸ್ತರಿಸಿ.
ಉ: POTA ವಿಸ್ತರಿಸಿದರೆ ಭಯೋತ್ಪಾದಕ ನಿಯಂತ್ರಣ ಕಾಯಿದೆ[PREVENTION OF TERRORISM ACT] ಎಂದಾಗುತ್ತದೆ.
23. UAPA ವಿಸ್ತರಿಸಿ.
ಉ: UAPA ವಿಸ್ತರಿಸಿದರೆ ಕಾನೂನು ವಿರೋಧಿ ಚಟುವಟಿಕೆಗಳ ನಿಯಂತ್ರಣ ಕಾಯಿದೆ[UNLAWFUL ACTIVITIES PREVENTION ACT] ಎಂದಾಗುತ್ತದೆ.
24. ಬ್ರಷ್ಟಾಚಾರ ನಿಷೇಧ ಕಾಯಿದೆಯು ಯಾವಾಗ ಅಂಗೀಕರಿಸಲ್ಪಟ್ಟಿತು?
ಉ: ಬ್ರಷ್ಟಾಚಾರ ನಿಷೇಧ ಕಾಯಿದೆಯು 1988ರಲ್ಲಿ ಅಂಗೀಕರಿಸಲ್ಪಟ್ಟಿತು.
25. ಸ್ವೀಡನ್ ಬ್ರಷ್ಟಾಚಾರ ವಿರೋಧಿ ಸಂಸ್ಥೆಯನ್ನು ಏನೆಂದು ಕರೆಯುತ್ತಾರೆ?
ಉ: ಸ್ವೀಡನ್ ಬ್ರಷ್ಟಾಚಾರ ವಿರೋಧಿ ಸಂಸ್ಥೆಯನ್ನು ಒಂಬೂಡ್ಸ್ಮನ್ ಎಂದು ಕರೆಯುತ್ತಾರೆ.
26. ಲೋಕಪಾಲರನ್ನು ಯಾರು ನೇಮಿಸುತ್ತಾರೆ?
ಉ: ಲೋಕಪಾಲರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ.
27. ಲೋಕಪಾಲ ಸಂಸ್ಥೆಯು ಯಾವಾಗ ಅಸ್ತಿತ್ವಕ್ಕೆ ಬಂತು?
ಉ: ಲೋಕಪಾಲ ಸಂಸ್ಥೆಯು 1 ಜನೇವರಿ 2014ರಂದು ಅಸ್ತಿತ್ವಕ್ಕೆ ಬಂತು.
28. ಲೋಕಪಾಲರ ಅಧಿಕಾರವಧಿ ಎಷ್ಟು ವರ್ಷಗಳು?
ಉ: ಲೋಕಪಾಲರ ಅಧಿಕಾರವಧಿ ಐದು ವರ್ಷಗಳು.
29. ಲೋಕಾಯುಕ್ತರನ್ನು ಯಾರು ನೇಮಿಸುತ್ತಾರೆ?
ಉ: ಲೋಕಾಯುಕ್ತರನ್ನು ರಾಜ್ಯಪಾಲರು ನೇಮಿಸುತ್ತಾರೆ.
30. ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆಯು ಯಾವಾಗ ಜಾರಿಗೆ ಬಂದಿತು?
ಉ: ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆಯು 1984ರಲ್ಲಿ ಜಾರಿಗೆ ಬಂದಿತು.
31. ಲೋಕಾಯುಕ್ತರ ಅಧಿಕಾರವಧಿ ಎಷ್ಟು ವರ್ಷಗಳು?
ಉ: ಲೋಕಾಯುಕ್ತರ ಅಧಿಕಾರವಧಿ ಐದು ವರ್ಷಗಳು.
32. ಪ್ರಸ್ತುತ ಕರ್ನಾಟಕದ ಲೋಕಾಯುಕ್ತರು ಯಾರು?
ಉ: ಪ್ರಸ್ತುತ ಕರ್ನಾಟಕದ ಲೋಕಾಯುಕ್ತರು Y. ಭಾಸ್ಕರರಾವ್.
33. ಪ್ರಸ್ತುತ ಕರ್ನಾಟಕದ ಇಬ್ಬರು ಉಪ ಲೋಕಾಯುಕ್ತರು ಯಾರು.?
ಉ: ಪ್ರಸ್ತುತ ಕರ್ನಾಟಕದ ಇಬ್ಬರು ಉಪ ಲೋಕಾಯುಕ್ತರು S.B. ಮಜ್ಜಗಿ ಹಾಗು S.B ಆದಿ ಆಗಿದ್ದಾರೆ..
34. ಲೋಕಾಯುಕ್ತ ಎಂದರೇನು?
ಉ: ರಾಜ್ಯ ಮಟ್ಟದ ಬ್ರಷ್ಟಾಚಾರ ಸಂಬಂಧಿ ಪ್ರಕರಣಗಳ ತನಿಖೆ ನಡೆಸಿ ಶಿಕ್ಷೆ ವಿಧಿಸಲು ಸ್ಥಾಪನೆಗೊಂದಿರುವ ಸಂಸ್ಥೆಗೆ ಲೋಕಾಯುಕ್ತ ಎನ್ನುವರು.
35. CBI ವಿಸ್ತರಿಸಿ.
ಉ: CBI ವಿಸ್ತರಿಸಿದರೆ ಕೇಂದ್ರೀಯ ತನಿಖಾ ದಳ[CENTRAL BEAURO OF, INVESTIGATION] ಎಂದಾಗುತ್ತದೆ.
36. CBI ಯಾವಾಗ ಸ್ಥಾಪನೆಯಾಯಿತು?
ಉ: CBI 1963 ರಲ್ಲಿ ಸ್ಥಾಪನೆಯಾಯಿತು.
37. CVC ವಿಸ್ತರಿಸಿ.
ಉ: CVC ವಿಸ್ತರಿಸಿದರೆ ಕೇಂದ್ರ ಜಾಗ್ರುತ ಆಯೋಗ[CENTRAL VISULENCE COMMISSION] ಎಂದಾಗುತ್ತದೆ.
38. CVC ಯಾವಾಗ ಸ್ಥಾಪನೆಯಾಯಿತು?
ಉ: CVC 1964 ರಲ್ಲಿ ಸ್ಥಾಪನೆಗೊಂಡಿತು.
ಎರಡು ಅಂಕಗಳ ಪ್ರಶ್ನೋತ್ತರಗಳು:
1. ರಾಷ್ಟ್ರರಾಜ್ಯ ಎಂದರೇನು?
ಉ:ಒಂದೇ ಜನಾಂಗ,ಭಾಷೆ,ಧರ್ಮ,ಚರಿತ್ರೆ,ಸಂಸ್ಕ್ರುತಿಗಳ ಆಧಾರದ ಮೇಲೆ ಒಂದುಗೂಡಿರುವ ಪರಮಾಧಿಕಾರಿ ರಾಜ್ಯದ ಜನ ಸಮೂಹವನ್ನು ರಾಷ್ಟ್ರರಾಜ್ಯ ಎನ್ನುವರು.
2. ರಾಷ್ಟ್ರ ನಿರ್ಮಾಣ ಎಂದರೇನು?
ಉ: ದೇಶದ ಜನರಲ್ಲಿ ರಾಷ್ಟ್ರೀಯತೆಯನ್ನು ಮೂಡಿಸಿ,ರಾಷ್ಟ್ರ ಶಕ್ತಿಯನ್ನು ಬೆಳೆಸಿ,ಸಾಮಾಜಿಕ,ಶೈಕ್ಷಣಿಕ,ಆರ್ಥಿಕ,ವೈಜಾನಿಕ,ಪ್ರಗತಿಯನ್ನು ಉಂಟು ಮಾಡುವುದೇ ರಾಷ್ಟ್ರ ನಿರ್ಮಾಣವಾಗಿದೆ.ಇಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ದೇಶವನ್ನು ಬಲಿಷ್ಟಗೊಳಿಸಲು ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸಲು ಶ್ರಮಿಸಲಾಗುತ್ತದೆ.
3. ರಾಷ್ಟ್ರ ನಿರ್ಮಾಣದ ಒಂದು ವ್ಯಾಖ್ಯೆಯನ್ನು ಕೊಡಿ.
ಉ:
4. ಉತ್ತಮ ಆಡಳಿತ ಎಂದರೇನು?
ಉ: ದೇಶದ ಆಡಳಿತವು ಜವಾಬ್ದಾರಿತ್ವ ಹೊಂದಿರಬೇಕು.ಜೊತೆಗೆ ಆಡಳಿತದಲ್ಲಿ ದಕ್ಷತೆ,ಪಾರದರ್ಶಕತೆ,ನಿಯಂತ್ರಣ,ಸೇವಾ ಮನೋಭಾವ ಇರಬೇಕು.ಅಲ್ಲದೇ ಆಡಳಿತ ಯಂತ್ರವು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು.ಇದನ್ನೇ ಉತ್ತಮ ಆಡಳಿತ ಎನ್ನುವರು.
5. ರಾಷ್ಟ್ರ ನಿರ್ಮಾಣದ ಮೂರು ಅಗತ್ಯಾಂಶಗಳನ್ನು ತಿಳಿಸಿ.
ಉ: A. ಜನತೆಯ ಬೆಂಬಲ B. ಉತ್ತಮ ಆಡಳಿತ
C. ಸಮರ್ಥ ನಾಯಕತ್ವ ರಾಷ್ಟ್ರ ನಿರ್ಮಾಣದ ಅಗತ್ಯಾಂಶಗಳಾಗಿವೆ.
6. ರಾಷ್ಟ್ರ ನಿರ್ಮಾಣದಲ್ಲಿ ಎದುರಾಗುವ ಎರಡು ಅಡಚಣೆಗಳಾವುವು?
ಉ: ಬಡತನ,ಜನಸಂಖ್ಯಾ ಸ್ಪೋಟ,ಸಾಮಾಜಿಕ ಅಸಮತೋಲನ ರಾಷ್ಟ್ರ ನಿರ್ಮಾಣದಲ್ಲಿ ಎದುರಾಗುವ ಅಡಚಣೆಗಳಾಗಿವೆ.
7. ರಾಷ್ಟ್ರ ನಿರ್ಮಾಣದ ಸಮಸ್ಯೆಗೆ ಎರಡು ಪರಿಹಾರಗಳಾವುವು?
ಉ: ರಾಜಕೀಯ ಸ್ಥಿರತೆ,ಆಧ್ಯತೆಗಳ ಆಯ್ಕೆ,ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನ,ಮಿಶ್ರ ಆರ್ಥಿಕತೆ ರಾಷ್ಟ್ರ ನಿರ್ಮಾಣದ ಸಮಸ್ಯೆಗೆ ಪರಿಹಾರಗಳಾಗಿವೆ.
8. ಅಸಮಾನತೆ ಎಂದರೇನು?
ಉ: ಜಾತಿ,ಲಿಂಗ,ಧರ್ಮ,ಜನ್ಮ ಸ್ಥಳಗಳ ಆಧಾರದ ಮೇಲೆ ತಾರತಮ್ಯ ಮಾಡಿ ಕೆಲವು ವರ್ಗಗಳಿಗೆ ಸೌಲಭ್ಯಗಳು ದೊರಕದಂತೆ ಮಾಡುವುದೇ ಅಸಮಾನತೆಯಾಗಿದೆ.
9. ಜಾತಿ ಆಧಾರಿತ ಅಸಮಾನತೆ ಎಂದರೇನು?
ಉ: ಜಾತಿಗಳ ಆಧಾರದ ಮೇಲೆ ತಾರತಮ್ಯ ಉಂಟು ಮಾಡುವುದೇ ಜಾತಿ ಆಧರಿತ ಅಸಮಾನತೆಯಾಗಿದೆ. ಇಲ್ಲಿ ಮೇಲು ಕೀಳು, ಮಡಿ ಮೈಲಿಗೆ ಭಾವನೆಯಿಂದ ಸಮಾನ ಅವಕಾಶ ನಿರಾಕರಿಸಲಾಗುತ್ತದೆ.
10. ಜಾತಿ ಆಧರಿತ ಅಸಮಾನತೆಗೆ ಕಾರಣಗಳಾವುವು?
ಉ: ವರ್ಣಾಶ್ರಮ ವ್ಯವಸ್ಥೆ,ಸಾಮಾಜಿಕ ಅಂತರ,ಅನಕ್ಷರತೆ,ಮೇಲರಿಮೆ ಜಾತಿಯಾಧಾರಿತ ಅಸಮಾನತೆಗೆ ಕಾರಣಗಳಾಗಿವೆ.
11. ಲಿಂಗಾಧಾರಿತ ಅಸಮಾನತೆ ಎಂದರೇನು?
ಉ: ಪುರುಷ ಹಾಗು ಮಹಿಳೆ ಎಂಬ ಲಿಂಗಾಧಾರದ ಮೇಲೆ ತಾರತಮ್ಯ ಮಾಡಿ ಸಮಾನ ಅವಕಾಶಗಳನ್ನು ನೀಡದಿರುವುದಕ್ಕೆ ಲಿಂಗಾಧಾರಿತ ಅಸಮಾನತೆ ಎನ್ನುವರು. ಇಲ್ಲಿ ಪುರುಷರಿಗೆ ಸಮಾನವಾದ ಸೌಲಭ್ಯಗಳನ್ನು ಮಹಿಳೆಗೆ ನಿರಾಕರಿಸಲಾಗುತ್ತದೆ.
12. ಲಿಂಗಾಧಾರಿತ ಅಸಮಾನತೆಗೆ ಕಾರಣಗಳಾವುವು?
ಉ: ಮನು ಸ್ಮ್ರುತಿಯ ವಿವರಣೆ,ಪುರುಷ ಪ್ರಾಬಲ್ಯ,ಶಿಕ್ಷಣದ ನಿರಾಕರಣೆ,ವರದಕ್ಷಿಣಾ ಪದ್ಧತಿ ಲಿಂಗಾಧಾರಿತ ಅಸಮಾನತೆಗೆ ಪ್ರಮುಖ ಕಾರಣಗಳಾಗಿವೆ.
13. ಅನಕ್ಷರತೆ ಎಂದರೇನು?
ಉ: ಓದಲು ಹಾಗು ಬರೆಯಲು ಬಾರದ ಸ್ಥಿತಿಯನ್ನು ಅನಕ್ಷರತೆ ಎನ್ನುವರು
14. ಅನಕ್ಷರತೆಗೆ ಕಾರಣಗಳಾವುವು?
ಉ: ಜನಸಂಖ್ಯಾ ಸ್ಪೋಟ,ಬಡತನ,ಸಾಮಾಜಿಕ ಹಿಂಬೀಳಿಕೆ,ಬಾಲಕಾರ್ಮಿಕ ಪದ್ಧತಿ,ಮೂಲಭೂತ ಸೌಲಬ್ಯಗಳ ಕೊರತೆ ಮುಂತಾದವುಗಳು ಅನಕ್ಷರತೆಗೆ ಕಾರಣಗಳಾಗಿವೆ.
15. ಕೋಮುವಾದ ಎಂದರೇನು?
ಉ: ತನ್ನ ಧರ್ಮವನ್ನು ಕುರಿತು ವ್ಯಕ್ತಿ ಹೊಂದಿರುವ ಸಂಕುಚಿತ ಭಾವನೆಯನ್ನು ಕೋಮುವಾದ ಎನ್ನಬಹುದು.ಇಲ್ಲಿ ಅನ್ಯ ಧರ್ಮೀಯರ ಬಗ್ಗೆ ಸೈರಣೆ ಕಂಡು ಬರುವುದಿಲ್ಲ.
16. ಕೋಮುವಾದಕ್ಕೆ ಕಾರಣಗಳಾವುವು?
ಉ: ಬ್ರಿಟಿಷರ್ಅ ನೀತಿ,ಹಿಂದು ಹಾಗು ಮುಸಲ್ಮಾನರ ರಾಷ್ಟ್ರವಾದ,ಕೋಮು ಗಲಭೆಗಳು,ರಾಜಕೀಯ ಪ್ರೋತ್ಸಾಹ ಹಾಗು ಧಾರ್ಮಿಕ ಹಿತಾಸಕ್ತಿ ಸಂಘಟನೆಗಳು ಕೋಮುವಾದಕ್ಕೆ ಕಾರಣಗಳಾಗಿವೆ.
17. ಭಯೋತ್ಪಾದನೆ ಎಂದರೇನು?
ಉ: ತಮ್ಮ ಸೈದ್ಧಾಂತಿಕ ಗುರಿ ಸಾಧಿಸಿಕೊಳ್ಳಲು ಹಿಂಸಾತ್ಮಕ ವಿಧಾನಗಳ ಮೂಲಕ ಜನರಲ್ಲಿ ಭಯವನ್ನು ಉಂಟು ಮಾಡುವುದೇ ಭಯೋತ್ಪಾದನೆ.
18.
19. ಭಯೋತ್ಪಾದನೆಗೆ ಕಾರಣಗಳಾವುವು?
ಉ: ಪ್ರತ್ಯೇಕತಾ ಚಳುವಳಿಗಳು,ಧಾರ್ಮಿಕ ಮೂಲಭೂತವಾದ,ಈಶಾನ್ಯ ಭಾಗದ ಜನಾಂಗೀಯ ಸಮಸ್ಯೆಗಳು,ದುರ್ಬಲ ರಾಜಕೀಯ ವ್ಯವಸ್ಥೆ ಹಾಗು ಆರ್ಥಿಕ ತಾರತಮ್ಯ ಭಯೋತ್ಪಾದನೆಗೆ ಕಾರಣಗಳಾಗಿವೆ.
20.
21. ಬ್ರಷ್ಟಾಚಾರ ಎಂದರೇನು?
ಉ: ಸಾರ್ವಜನಿಕ ಹುದ್ದೆಯಲ್ಲಿರುವವರು ತಮ್ಮ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದಕ್ಕೆ ಬ್ರಷ್ಟಾಚಾರ ಎನ್ನುವರು.
22. ಬ್ರಷ್ಟಾಚಾರದ ಎರಡು ಮಾದರಿಗಳನ್ನು ತಿಳಿಸಿ.
ಉ: ಲಂಚ ಸ್ವೀಕಾರ,ಕಾಣಿಕೆ ಪಡೆದುಕೊಳ್ಳುವುದು,ಸ್ವಜನ ಪಕ್ಷಪಾತ ತೋರುವುದು,ಖಾಸಗಿ ಕಾರ್ಯಗಳಿಗೆ ಸಾರ್ವಜನಿಕ ವ್ಯಕ್ತಿ ವಸ್ತುಗಳನ್ನು ಬಳಸಿಕೊಳ್ಳುವುದು ಮುಂತಾದವುಗಳು ಬ್ರಷ್ಟಾಚಾರದ ಮಾದರಿಗಳಾಗಿವೆ.
23. ಬಾಲ ಕಾರ್ಮಿಕ ಪದ್ಧತಿಯು ಅನಕ್ಷರತೆಗೆ ಹೇಗೆ ಕಾರಣವಾಗಿದೆ?
ಉ: ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳು ಹೊಟೆಲ್,ಗ್ಯಾರೇಜ್,ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.2011ರ ವರದಿಯಂತೆ ಸುಮಾರು 2 ಕೋಟಿ ಮಕ್ಕಳು ಈ ಪದ್ಧತಿಗೆ ಒಳಪಟ್ಟಿದ್ದು ಶಾಲೆಯಿಂದ ದೂರವಿದ್ದಾರೆ.ಇದರಿಂದಾಗಿ ಅನಕ್ಷರತೆಯು ಕಡಿಮೆಯಾಗಿಲ್ಲ.
24. ಭಯೋತ್ಪಾದಕತೆ ಧಾರ್ಮಿಕ ಮೂಲಬೂತವಾದಕ್ಕೆ ಹೇಗೆ ಕಾರಣವಾಗಿದೆ?
ಉ:ಹಿಂದು,ಇಸ್ಲಾಮ್,ಕ್ರಿಶ್ಚಿಯನ್ ಧರ್ಮಗಳ ಜನರು ತಮ್ಮ ಹಿತ ರಕ್ಷಣೆಗೆ ಕೆಲ ಧಾರ್ಮಿಕ ಸಂಘಟನೆಗಳಿಗೆ ಬೆಂಬಲ ನೀಡಿದರು.ಇದರಿಂದ ಪ್ರೇರಿತರಾದ ಸಂಘಟನೆಗಳು ಧರ್ಮ ರಕ್ಷಣೆಯ ಹೆಸರಿನಲ್ಲಿ ಭಯೋತ್ಪಾದನೆಗೆ ಕೈ ಹಾಕತೊಡಗಿದವು.ಉದಾ:ಹಿಂದುಗಳ ಬೆಂಬಲದಿಂದ ಮಂಗಳೂರಿನಲ್ಲಿ ಜರುಗಿದ ಪಬ್ ದಾಳಿಗಳು.
25. ನೈತಿಕತೆಯ ಕೊರತೆಯು ಬ್ರಷ್ಟಾಚಾರಕ್ಕೆ ಹೇಗೆ ಕಾರಣವಾಗಿದೆ?
ಉ: ನೈತಿಕತೆ ವ್ಯಕ್ತಿಯಲ್ಲಿ ಸೇವೆ,ನಿಸ್ವಾರ್ಥ,ಪ್ರಾಮಾಣಿಕತೆ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ.ಇಂದು ಮನೆಯಲ್ಲಿ ಪೋಷಕರಿಂದ ಹಿಡಿದು ಸಮಾಜದ ಎಲ್ಲ ವರ್ಗದವರಲ್ಲಿ ನೈತಿಕತೆ ಕಡಿಮೆಯಾಗುತ್ತಿದೆ.ಇದರಿಂದಾಗಿ ಸ್ವಾರ್ಥ,ಲಾಬ ಗಳಿಕೆ,ವಂಚನೆ,ಪಕ್ಷಪಾತಗಳು ಹೆಚ್ಚಾಗಿ ಬ್ರಷ್ಟಾಚಾರ ಅಧಿಕವಾಗುತ್ತಿದೆ.
26. ಉಚಿತ ಹಾಗು ಕಡ್ಡಾಯ ಶಿಕ್ಷಣ ಎಂದರೇನು?
ಉ: 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ದಾಖಲಾತಿ ನೀಡಿ ಹಾಜರಾತಿ ಕೊಟ್ಟು ಅವರು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವಂತೆ ಮಾಡುವುದು ಸರ್ಕಾರದ ಜವಾದ್ಬಾರಿಯಾಗಿದೆ. ಅದೇ ರೀತಿ ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕಾಗಿದ್ದು ತಪ್ಪಿದಲ್ಲಿ ಶಿಕ್ಷೆಗೆ ಅರ್ಹರಾಗಿರುತ್ತಾರೆ. ಇದನ್ನೇ ಉಚಿತ ಹಾಗು ಕಡ್ಡಾಯ ಶಿಕ್ಷಣ ಎನ್ನಬಹುದು.
27. ಜಾತ್ಯಾತೀತತೆ ಎಂದರೇನು?
ಉ: ಯಾವುದೇ ಒಂದು ಧರ್ಮವನ್ನು ರಾಜ್ಯ ಧರ್ಮವೆಂದು ಘೋಷಿಸದೇ ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವುದಕ್ಕೆ ಜಾತ್ಯಾತೀತತೆ ಎನ್ನುವರು.ಉದಾ: ಭಾರತದಲ್ಲಿ ಹಿಂದೂ,ಇಸ್ಲಾಮ್,ಜೈನ,ಬೌದ್ಧ,ಕ್ರಿಶ್ಚಿಯನ್ ಧರ್ಮಗಳನ್ನು ಸಮಾನವಾಗಿ ಕಂಡು ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿರುವುದು.
28. ರಾಷ್ಟ್ರೀಯ ಭಾವೈಖ್ಯತೆ ಎಂದರೇನು?
ಉ: ಜನಾಂಗ,ಧರ್ಮ,ಆಹಾರ,ಭಾಷೆ,ಸಂಸ್ಕ್ರುತಿಯಲ್ಲಿ ವೈವಿಧ್ಯತೆಗಳಿದ್ದರೂ ನಾವೆಲ್ಲ ಭಾರತೀಯರು ಎಂಬ ಮನೋಭಾವವನ್ನು ರಾಷ್ಟ್ರೀಯ ಭಾವೈಖ್ಯತೆ ಎನ್ನಬಹುದು. ಇದನ್ನು ಸಾಧಿಸಲು ಭಾರತದಲ್ಲಿ ರಾಷ್ಟ್ರೀಯ ಭಾವೈಖ್ಯತಾ ಮಂಡಳಿ,ವಲಯ ಸಮೀತಿಗಳು ಹಾಗು ಸೇನಾ ಪಡೆಗಳು ನೆರವಾಗಿವೆ.
29. ಲೋಕಪಾಲ ಎಂದರೇನು?
ಉ: ರಾಷ್ಟ್ರ ಮಟ್ಟದ ಬ್ರಷ್ಟಾಚಾರ ಸಂಬಂಧಿ ಪ್ರಕರಣಗಳ ತನಿಖೆ ನಡೆಸಿ ಶಿಕ್ಷೆ ವಿಧಿಸಲು ಒಂಬೂಡ್ಸ್ಮನ್ ಮಾದರಿಯ ಸಂಸ್ಥೆಗೆ ಲೋಕಪಾಲ ಎನ್ನಲಾಗುತ್ತದೆ.ಇದು ಒಂದು ಜನೇವರಿ 2014 ರಂದು ಜಾರಿಗೊಂಡಿದೆ.
ಸಂಭವನೀಯ ಐದು ಅಥವ ಹತ್ತು ಅಂಕಗಳ ಪ್ರಶ್ನೆಗಳು:
1. ರಾಷ್ಟ್ರ ನಿರ್ಮಾಣದ ಅಗತ್ಯಾಂಶಗಳನ್ನು ವಿವರಿಸಿ?
ಉ:
A. ಜನತೆಯ ಬೆಂಬಲ: ರಾಆಆಷ್ಟ್ರ ನಿರ್ಮಾಣಕ್ಕೆ ಜನರ ಇಚ್ಚೆ ಮತ್ತು ಬೆಂಬಲ ಅಗತ್ಯ. ಜನರು ಶಿಸ್ತು, ಕರ್ತವ್ಯ ನಿಷ್ಟೆ, ದೇಶಭಕ್ತಿ ಬೆಳೆಸಿಕೊಳ್ಳಬೇಕು. ಜೊತೆಗೆ ವಿವಿಧ ಬೆಳವಣಿಗೆ ಕುರಿತು ಜಾಗ್ರುತರಾಗಿದ್ದು ಸಾರ್ವಜನಿಕಾಭಿಪ್ರಾಯ ರೂಪಿಸಬೇಕು. ಇದರಿಂದ ಜನರು ಉತ್ತಮ ಗುಣ ಮಟ್ಟದ ರಾಷ್ಟ್ರ ಕಟ್ಟಲು ಮುಂದಾಗಬೇಕು.
B. ಉತ್ತಮ ಆಡಳಿತ: ದೇಶದ ಆಡಳಿತವು ಜವಾಬ್ದಾರಿತ್ವ ಹೊಂದಿರಬೇಕು.ಜೊತೆಗೆ ಆಡಳಿತದಲ್ಲಿ ದಕ್ಷತೆ,ಪಾರದರ್ಶಕತೆ,ನಿಯಂತ್ರಣ,ಸೇವಾ ಮನೋಭಾವ ಇರಬೇಕು.ಅಲ್ಲದೇ ಆಡಳಿತ ಯಂತ್ರವು ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು. ಉ: ಮೋದಿ ಸರ್ಕಾರ ಡಿಜಿಟಲ್ ಇಂಡಿಯಾ ಮೂಲಕ ಈ ಆಡಳಿತ ಅಳವಡಿಸಲು ಮುಂದಾಗಿರುವುದು. ಇದರಿಂದ ರಾಷ್ಟ್ರ ನಿರ್ಮಾಣವು ಸುಲಭವಾಗುತ್ತದೆ.
C. ಸಮರ್ಥ ನಾಯಕತ್ವ: ರಾಷ್ಟ್ರ ನಿರ್ಮಾಣಕ್ಕೆ ಬದ್ಧತೆಯುಳ್ಳ ನಾಯಕರ ಸೇವೆ ಅಗತ್ಯ. ಆರ್ಥಿಕ ಮಹಾ ಕುಸಿತದಿಂದ ಹೊರ ಬಂದ ಅಮೇರಿಕ ಸೂಪರ್ ಪವರ್ ದೇಶವಾಗಲು ರೂಸ್ವೆಲ್ಟ್ ಜಾರಿಗೊಳಿಸಿದ ನ್ಯೂ ಡೀಲ್ ಯೋಜನೆ ನೆರವಾಯಿತು. ಅದೇ ರೀತಿ ನೆಹರೂರವರ ಪಂಚ ವಾರ್ಷಿಕ ಯೋಜನೆಗಳು, ಇಂದಿರಾರ ಸಮಾಜವಾದಿ ಕಾರ್ಯಕ್ರಮಗಳು, ರಾಜೀವ್ ಗಾಂಧಿಯವರ ತಾಂತ್ರಿಕ ಪ್ರೋತ್ಸಾಹಗಳು ಭಾರತವನ್ನು ಕಟ್ಟುವಲ್ಲಿ ಪ್ರಮುಖವಾದ ಹೆಜ್ಜೆಗಳಾಗಿವೆ. ನಾಯಕರ ವರ್ಚಸ್ಸು ದೇಶ ನಿರ್ಮಾಣಕ್ಕೆ ಪೂರಕವಾಗುತ್ತದೆ. ಉದಾ: ಮೋದಿನಾಯಕತ್ವವು ಭಾರತದ ಪ್ರಗತಿಗೆ ನೆರವಾಗಿರುವುದು.
D. ರಾಜಕೀಯ ಸಂಸ್ಕ್ರುತಿ: ದೇಶದ ರಾಜಕೀಯ ವ್ಯವಸ್ಥೆಗೆ ಅಗತ್ಯವಾದ ಮೌಲ್ಯಗಳು, ಪ್ರವ್ರುತ್ತಿಗಳು, ನಡವಳಿಕೆಗಳನ್ನು ರಾಜಕೀಯ ಸಂಸ್ಕ್ರುತಿ ಎನ್ನಲಾಗುತ್ತದೆ. ದೇಶದ ಜನರು ಮತ್ತು ನಾಯಕರು ಉತ್ತಮ ರಾಜಕೀಯ ಸಂಸ್ಕ್ರುತಿ ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬಹುದು. ಜನಸೇವೆ, ನಿಸ್ಪಕ್ಷಪಾತತೆ, ಪ್ರಾಮಾಣಿಕ ಮತದಾನಇತ್ಯಾದಿ ಉದಾತ್ತ ಮೌಲ್ಯಗಳ ರಾಜಕೀಯ ಸಂಸ್ಕ್ರುತಿಯುಳ್ಳ ದೇಶದ ನಿರ್ಮಾಣ ಸುಲಭವಾಗುತ್ತದೆ.
E. ಅಧಿಕಾರದ ಹಂಚಿಕೆ: ಸಮಾಜದಲ್ಲಿನ ಎಲ್ಲ ವರ್ಗದವರಿಗೆ ನಿರ್ಧಾರ ಕೈಗೊಳ್ಳುವ ರಾಜಕೀಯ ಅಧಿಕಾರ ದೊರೆಯಬೇಕು. ಇದರಿಂದ ಕೆಲವೇ ವ್ಯಕ್ತಿ ಅಥವ ಕುಟುಂಬದಲ್ಲಿನ ಅಧಿಕಾರದಿಂದ ಉಂಟಾಗುವ ಸರ್ವಾಧಿಕಾರ ಮಾಯವಾಗುತ್ತದೆ. ಎಲ್ಲರ ಭಾಗವಹಿಸುವಿಕೆಯಿಂದ ಸಾಮಾಜಿಕ ನ್ಯಾಯ ದೊರೆತು ದೇಶಕ್ಕಾಗಿ ಶ್ರಮಿಸಲು ಜನರು ಮುಂದಾಗುತ್ತಾರೆ. ಆದ್ದರಿಂದಲೇ ಭಾರತದಲ್ಲಿ ಪಜಾ, ಪಪಂ, ಹಿಂದುಳಿದ ವರ್ಗ ಹಾಗು ಮಹಿಳೆಯರಿಗೆ ಮೀಸಲಾತಿಯ ಮೂಲಕ ಅಧಿಕಾರ ನೀಡಲಾಗುತ್ತಿದೆ. ಇದರಿಂದ ರಾಷ್ಟ್ರ ನಿರ್ಮಾಣದ ಗುರಿ ನನಸಾಗುತ್ತದೆ.
F. ಸಾರ್ವತ್ರಿಕ ಶಿಕ್ಷಣ: ದೇಶದ ಜನರು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಶಿಕ್ಷಣ ಅಗತ್ಯ. ಜೊತೆಗೆ ದೇಶದ ಸಮಸ್ಯೆಗಳನ್ನು ಅರಿತು ದೇಶಕ್ಕಾಗಿ ತಮ್ಮ ಕಾಣಿಕೆ ನೀಡಲು ಜನರನ್ನು ಶಿಕ್ಷಣ ಸಿದ್ಧಗೊಳಿಸುತ್ತದೆ. ಅಲ್ಲದೇ ಕೋಮುವಾದ, ಜಾತೀಯತೆ, ಪ್ರಾದೇಶಿಕತೆ, ಧರ್ಮಾಂಧತೆಯಂತಹ ರಾಷ್ಟ್ರ ನಿರ್ಮಾಣದ ತೊಡಕುಗಳಿಂದ ಜನರನ್ನು ದೂರವಿಡಲು ಶಿಕ್ಷಣ ಅನಿವಾರ್ಯವಾಗಿದೆ.
G. ರಾಷ್ಟ್ರೀಯ ಗುಣ: ಪ್ರಪಂಚದ ಪ್ರತಿ ದೇಶವು ವಿಶಿಷ್ಟ ಗುಣದಿಂದ ಗುರುತಿಸಲ್ಪಡುತ್ತಿದ್ದು ಅದನ್ನು ರಾಷ್ಟ್ರೀಯ ಗುಣ ಎನ್ನಬಹುದು. ಉ: ಇಂಗ್ಲೆಂಡ್ ಸಂಪ್ರದಾಯತೆ, ಆಫ್ರಿಕಾ ಜನಾಂಗೀಯತೆ, ಆಸ್ಟ್ರೇಲಿಯಾ ಮೂಲ ನಿವಾಸಿತನ, ಭಾರತ ವಿವಿಧತೆಯಲ್ಲಿ ಏಕತೆ, ಅಮೇರಿಕ ಸಂಪೂರ್ಣ ಸ್ವಾತಂತ್ರ್ಯವನ್ನು ರಾಷ್ಟ್ರೀಯ ಗುಣಗಳಾಗಿ ಪಡೆದಿವೆ. ನಾನಾ ವಿಧಾನದ ಮೂಲಕ ಜನರಲ್ಲಿ ಬೆಳೆದು ಬರುವ ಇಂತಹ ರಾಷ್ಟ್ರೀಯ ಗುಣ ದೇಶಾಭಿಮಾನ ಹಾಗು ರಾಷ್ಟ್ರೀಯತೆಯನ್ನು ಮೂಡಿಸಿ ದೇಶ ಕಟ್ಟಲು ನೆರವಾಗುತ್ತದೆ.
H. ಸಮೂಹ ಮಾಧ್ಯಮಗಳು: ದೇಶದ ಜನರು ಹಾಗು ಸರ್ಕಾರದ ನಡುವೆ ಸಮೂಹ ಮಾಧ್ಯಮಗಳು ಸಂಪರ್ಕ ಸೇತುವೆಯಾಗಿವೆ. ಜೊತೆಗೆ ರಾಷ್ಟ್ರ ನಿರ್ಮಾಣದಲ್ಲಿ ಜನರು ಹಾಗು ಸರ್ಕಾರದ ಪಾತ್ರಏನೆಂಬುದನ್ನು ತಿಳಿಸುತ್ತವೆ. ಅಲ್ಲದೇ ದೇಶದ ಆಧುನಿಕರಣ ಮತ್ತು ಸಾಮಾಜೀಕರಣದಲ್ಲಿ ನೆರವಾಗಿವೆ. ಉದಾ ಸ್ವಚ್ಚ ಭಾರತ ನಿರ್ಮಾಣದಲ್ಲಿ ಇವುಗಳ ಕಾಣಿಕೆ ಅಪಾರ. ಆದ್ದರಿಂದ ಮೂಲಭೂತ ಹಕ್ಕಾಗಿ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿ ಸಮೂಹ ಮಾಧ್ಯಮಗಳಿಗೆ ಅವಕಾಶ ಕಲ್ಪಿಸಲಾಗಿದೆ.
I. ಜವಾಬ್ದಾರಿಯುತ ಬೌದ್ಧಿಕತೆ: ರಾಷ್ಟ್ರ ನಿರ್ಮಾಣಕ್ಕೆ ಆ ದೇಶದ ಬುದ್ಧಿ ಜೀವಿಗಳ ಕಾನಿಕೆ ಅಗತ್ಯ. ಇವರು ವಿವಿಧ ರಂಗಗಳಲ್ಲಿ ಕೈಗೊಂಡ ಸಂಶೋಧನೆ ಹಾಗು ಆವಿಶ್ಕಾರಗಳು ದೇಶ ಕಟ್ಟಲು ಸಹಾಯಕವಾಗಿವೆ. ಸಮಾಜ ವಿಜ್ನಾನಗಳಲ್ಲಿ ಅಮರ್ತ್ಯಸೇನ್, MN ಶ್ರೀನಿವಾಸ್ ರಜನಿ ಕೊಠಾರಿ, ವಂದನಾ ಶಿವಾ, ರಾಜೀವ್ ಮಲ್ಹೊತ್ರಾ ಅಮೋಘ ಸಾಧನೆ ಮಾಡಿರುವರು. ಜೊತೆಗೆ ವಿಜ್ನಾನ ಕ್ಷೇತ್ರದಲ್ಲಿ ಸರ್ M ವಿಶ್ವೇಶ್ವರಯ್ಯಾ, ಡಾ. ರಾಜಾ ರಾಮಣ್ಣಾ, ಡಾ. APJ ಅಬ್ದುಲ್ ಕಲಾಂ ಸೇವೆ ಅಗಾಧ.ಇಂತಹ ಬುದ್ಧಿ ಜೀವಿಗಳ ನೆರವು ರಾಷ್ಟ್ರ ನಿರ್ಮಾಣಕ್ಕೆ ಅತ್ಯಗತ್ಯ.
J. ರಾಷ್ಟ್ರೀಯ ಸಮಗ್ರತೆ: ದೇಶದ ಪ್ರಜೆಗಳನ್ನು ಭಾವನಾತ್ಮಕವಾಗಿ ಹಾಗು ರಾಜಕೀಯವಾಗಿ ಒಂದುಗೂಡಿಸುವುದನ್ನು ರಾಷ್ಟ್ರೀಯ ಸಮಗ್ರತೆ ಎನ್ನಬಹುದು. ಭಾರತದಲ್ಲಿ ಇದನ್ನು ತರಲು ಸರ್ದಾರ್ ಪಟೇಲ್, ಮೌಲಾನಾ ಆಜಾದ್, ಲಾಲ್ಬಹದೂರ್ ಶಾಸ್ತ್ರಿ, ಇಂದಿರಾ ಮುಂತಾದ ನಾಯಕರು ಶ್ರಮಿಸಿದರು. ರಾಷ್ಟ್ರ ನಿರ್ಮಾಣಕ್ಕೆ ಸಮಗ್ರತೆಯ ಅಗತ್ಯ ಅಪಾರವಾಗಿರುತ್ತದೆ.
ಸೂ: [ಜ ಉಸರಾ ಅಸಾರಾ ಸಜರಾ]
2. ರಾಶ್ಟ್ರ ನಿರ್ಮಾಣದ ಅಡಚಣೆಗಳು ಮತ್ತು ಅವುಗಳಿಗೆ ಪರಿಹಾರಗಳನ್ನು ವಿವರಿಸಿ?
ಉ: * ಬಡತನ: ಭಾರತದಲ್ಲಿ ಬಹುತೇಕ ಜನರು ಹಳ್ಳಿಗಳಲ್ಲಿದ್ದು ಕ್ರುಷಿಯನ್ನು ಅವಲಂಬಿಸಿದ್ದಾರೆ. ಅವರು ಮಳೆಯನ್ನು ಆಧರಿಸಿದ್ದು ಉತ್ತಮ ಬೆಲೆ ಮತ್ತು ಬೆಳೆ ಬಾರದೇ ತೊಂದರೆ ಅನುಭವಿಸುತ್ತಿದ್ದಾರೆ. ಇಂದಿಗೂ ಐದನೇ ಒಂದರಷ್ಟು ಭಾರತೀಯರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ. ಇದರಿಂದ ಮೂಲಭೂತ ಆಹಾರ, ಶಿಕ್ಷಣ, ಆರೋಗ್ಯ, ವಸತಿಗೆ ಸರ್ಕಾರವನ್ನು ಅವಲಂಬಿಸಿರುವರು. ಹೀಗಾಗಿ ರಾಷ್ಟ್ರ ನಿರ್ಮಾಣ ಕುಂಟಿತಗೊಂಡಿದೆ.
*ಜನಸಂಖ್ಯಾ ಸ್ಪೋಟ: ಭಾರತದ ಜನಸಂಖೆ ವೇಗವಾಗಿ ಬೆಳೆಯುತ್ತಿದೆ. ಇಂದು 125 ಕೋಟಿಗೂ ಹೆಚ್ಚು ಜನರು ದೇಶದಲ್ಲಿದ್ದಾರೆ. ಇದರಿಂದ ಬಡತನ ಹಾಗು ನಿರುದ್ಯೋಗ ಅಧಿಕವಾಗಿದೆ. ಜೊತೆಗೆ ನಾಗರಿಕ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದೆ. ಸರ್ಕಾರ ಇದರತ್ತ ಶ್ರಮಿಸುತ್ತಿದ್ದು ರಾಷ್ಟ್ರ ನಿರ್ಮಾಣಕ್ಕೆ ತೊಡಕಾಗಿದೆ.
* ಪ್ರಾದೇಶಿಕ ಅಸಮತೋಲನ: ಭಾರತದ ಎಲ್ಲ ಪ್ರದೇಶಗಳು ಸಮಾನವಾಗಿ ಅಭಿವ್ರುದ್ಧಿ ಹೊಂದಿಲ್ಲ. ಇದರಿಂದ ಹಿಂದುಳಿದ ಪ್ರದೇಶಗಳ ಜನರು ಪ್ರತ್ಯೇಕತೆಯ ಚಳುವಳಿ ಹೂಡಿದ್ದಾರೆ. ಉದಾ: ಮಹಾರಾಷ್ಟ್ರದ ವಿದರ್ಭಾ, ಒಡಿಸ್ಸಾದ ಕಾಳಹಂದಿ ಈಶಾನ್ಯ ರಾಜ್ಯಗಳ ಬುಡಕಟ್ಟು ಪ್ರದೇಶದ ಜನರ ಚಳುವಳಿಗಳು. ಚಳುವಳಿ ನಿಯಂತ್ರಣಕ್ಕೆ ಸರ್ಕಾರ ಗಮನ ಹರಿಸಬೇಕಿದ್ದು ರಾಷ್ಟ್ರ ನಿರ್ಮಾಣಕ್ಕೆ ತೊಡಕಾಗಿದೆ.ಈ
*ವಿವಿಧ ಕ್ಷೋಭೆಗಳು: ಇತ್ತೀಚೆಗೆ ಭಾರತದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೋಭೆಗಳು ಸಾಮಾನ್ಯವಾಗಿವೆ. ಜಾತೀಯತೆ, ಮತಾಂತರ, ಗೋ ರಕ್ಷಣೆ ಮುಂತಾದ ಸಾಮಾಜಿಕ ಹಾಗು ಬರ, ಪ್ರವಾಹ, ಯುದ್ಧ ಭೀತಿಯಂತಹ ಆರ್ಥಿಕ ಕ್ಷೋಭೆಗಳು ಉಂಟಾಗುತ್ತಿವೆ. ಜೊತೆಗೆ ಅಂತರರಾಜ್ಯ ವಿವಾದಗಳು ರಾಜಕೀಯ ಕ್ಷೋಭೆಯನ್ನು ಉಂಟು ಮಾಡಿವೆ. ಉದಾ: ಕಾವೇರಿ ನದಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡಿನ ತಿಕ್ಕಾಟ. ಇವುಗಳತ್ತ ಗಮನ ಹರಿಸುವ ಸರ್ಕಾರಗಳು ರಾಷ್ಟ್ರ ನಿರ್ಮಾಣವನ್ನು ಕಡೆಗಣಿಸುತ್ತವೆ.
*ರಾಜಕೀಯ ಕ್ಬಿಕ್ಕಟ್ಟು: ಭಾರತದಲ್ಲಿ ಸಂಮಿಶ್ರ ಸರ್ಕಾರಗಳು ಹೆಚ್ಚುತ್ತಿವೆ. ಇದರಿಂದ ರಾಜಕೀಯವಾಗಿ ದಿಟ್ಟ ಕ್ರಮ ಕೈಗೊಳ್ಳುವುದು ಕಠಿಣವಾಗುತ್ತಿದೆ. ಜೊತೆಗೆ ರಾಜಕಾರಣದಲ್ಲಿ ತತ್ವಾದರ್ಶ ಹಾಗು ಮೌಲ್ಯಗಳು ಮಾಯವಾಗಿವೆ. ಹಣ ಮತ್ತು ತೋಳ್ಬಲ ಹೊಂದಿದವರು ಅಧಿಕಾರ ಪಡೆದು ಆಡಳಿತ ನಡೆಸುತ್ತಿದ್ದಾರೆ. ಇದರಿಂದ ರಾಷ್ಟ್ರ ನಿರ್ಮಾಣ ತೊಂದರೆಗೀಡಾಗಿದೆ.
* ರಾಜಕೀಯ ಸ್ಥಿರತೆ: ಜನರಿಂದ ಆಯ್ಕೆಗೊಳ್ಳುವ ಸರ್ಕಾರ ಪೂರ್ಣಾವಧಿ ಕಾರ್ಯ ನಿರ್ವಹಿಸಬೇಕು. ಆಗಾಗ ಸರ್ಕಾರಗಳು ಬದಲಾಗುತ್ತಿದ್ದರೆ ಆಡಳಿತ ನಿಧಾನವಾಗಿ ನಿಗದಿತ ಗುರಿ ತಲುಪಲಾಗುವುದಿಲ್ಲ. ಆದ್ದರಿಂದ ರಾಜಕೀಯ ಸ್ಥಿರತೆ ತರಲು ಸಂವಿಧಾನ ಪುನರ್ರಚನಾ ಸಮೀತಿ ಸೂಚಿಸಿರುವ ರಚನಾತ್ಮಕ ಅವಿಶ್ವಾಸ ಪದ್ಧತಿಯನ್ನು ಅಳವಡಿಸಿಕೊಂಡು ಅಸ್ಥಿರತೆ ಹೋಗಲಾಡಿಸಬೇಕಾಗಿದೆ. ಇದರಿಂದ ರಾಷ್ಟ್ರ ನಿರ್ಮಾಣ ವೇಗವಾಗುತ್ತದೆ.
* ಆಧ್ಯತೆಗಳ ಆಯ್ಕೆ: ದೇಶದ ಪ್ರಜೆಗಳ ಅಗತ್ಯಕ್ಕೆ ತಕ್ಕಂತೆ ಸರ್ಕಾರ ಆಧ್ಯತೆಗಳನ್ನು ಗುರುತಿಸಬೇಕು. ಕಾರಣ ಪ್ರಜೆಗಳ ಉನ್ನತಿಯಿಂದ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ. ಹೀಗಾಗಿ ಸರ್ಕಾರ ಮೂಲಭೂತ ಸೌಲಭ್ಯಗಳಾದ ಆಹಾರ, ವಸತಿ, ಆರೋಗ್ಯ, ಶಿಕ್ಷಣಕ್ಕೆ ಆಧ್ಯತೆ ನೀಡಬೇಕು. ಜೊತೆಗೆ ಕ್ರುಷಿ, ಕೈಗಾರಿಕೆ, ಸಾರಿಗೆಗೆ ಆಧ್ಯತೆ ಒದಗಿಸಬೇಕು. ಆಗ ರಾಷ್ಟ್ರ ನಿರ್ಮಾಣ ಸುಲಭವಾಗುತ್ತದೆ.
*ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನ: ಸರ್ಕಾರ ಉತ್ತಮ ಕಾರ್ಯಕ್ರಮ ಹಾಗು ಯೋಜನೆಗಳನ್ನು ಹಮ್ಮಿಕೊಂಡರೆ ಸಾಲದು. ಅವುಗಳ ಫಲ ಜನರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕಾಗಿದೆ. ಆಗ ಜನರ ಅಭಿವ್ರುದ್ಧಿಯಾಗಿ ರಾಷ್ಟ್ರ ನಿರ್ಮಾಣ ಕೈಗೂಡುತ್ತದೆ. ಉದಾ: ಭಾರತಸರ್ಕಾರ ಹಮ್ಮಿಕೊಂದಿರುವ ಪಂಚ ವಾರ್ಷಿಕ, ಉದ್ಯೋಗ ಖಾತ್ರಿ, ಜನ ಧನ್ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೊಂಡು ಗುರಿ ತಲುಪಿದರೆ ರಾಷ್ಟ್ರ ನಿರ್ಮಾಣ ಸರಳವಾಗುತ್ತದೆ.
* ಮಿಶ್ರ ಆರ್ಥಿಕತೆ: ಸರ್ಕಾರಿ ಒಡೆತನದ ಉದ್ದಿಮೆಗಳಿಂದ ಮಾತ್ರ ದೇಶದ ಆರ್ಥಿಕ ಅಭಿವ್ರುದ್ಧಿ ಸಾಧ್ಯವಿಲ್ಲ. ಸರ್ಕಾರ ಹಾಗು ಖಾಸಗಿ ಒಡೆತನದ ಆರ್ಥಿಕ ಚಟುವಟಿಕೆಗಳಿಗೆ ಅವಕಾಶವಿರುವ ಮಿಶ್ರ ಆರ್ಥಿಕ ವ್ಯವಸ್ಥೆ ಜಾರಿಗೊಳಿಸಿದರೆ ಪ್ರಗತಿ ವೇಗವಾಗುತ್ತದೆ. ಉದಾ: ಭಾರತದಲ್ಲಿ ಟಾಟಾ, ರಿಲಯನ್ಸ್, ಇನ್ಫೊರ್ಸಿಸ್ ಮುಂತಾದ ಖಾಸಗಿ ಕಂಪನಿಗಳು ಉದ್ಯೋಗ ಸ್ರುಷ್ಟಿಸುವ ಜೊತೆಗೆ ಆರ್ಥಿಕವಾಗಿ ದೇಶವನ್ನು ಬಲಗೊಳಿಸಿವೆ..
* ರಾಷ್ಟ್ರ ನೀತಿ ನಿರ್ದೇಶಕ ತತ್ವಗಳ ಜಾರಿ: ನಮ್ಮ ಸಂವಿಧಾನದ ನಾಲ್ಕನೇಯ ಭಾಗದಲ್ಲಿ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳಿದ್ದು ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆ ತರಲು ಸರ್ಕಾರಗಳಿಗೆ ಸೂಚನೆ ನೀಡಿವೆ. ದೇಶದ ಸಂಪತ್ತು ಕೆಲವರಲ್ಲಿ ಸಂಗ್ರಹವಾಗುವುದನ್ನು ತಡೆದು ಪಜಾ, ಪಪಂ ಹಾಗು ಮಹಿಳೆಯರನ್ನು ಮುಂದೆ ತರಲು ಇದರಲ್ಲಿ ಕ್ರಮಗಳಿವೆ. ಅವುಗಳನ್ನು ಜಾರಿಗೊಳಿಸಿದರೆ ರಾಷ್ಟ್ರ ನಿರ್ಮಾಣ ಸುಲಭವಾಗುತ್ತದೆ.
* ಕ್ರಿಯಾಶೀಲ ನಾಗರಿಕ ಸಮಾಜ: ದೇಶದ ಪ್ರಜ್ನಾವಂತ ನಾಗರಿಕ ಸಂಘಟನೆಗಳು ರಾಷ್ಟ್ರ ನಿರ್ಮಾಣವನ್ನು ಸರಳಗೊಳಿಸುತ್ತವೆ. ಆಡಳಿತದಲ್ಲಿನ ಬ್ರಷ್ಟಾಚಾರ, ವಿಳಂಬ ನೀತಿ, ಇಚ್ಚಾ ಶಕ್ತಿಯ ಕೊರತೆಯಂತಹ ಅಂಶಗಳನ್ನು ಈ ನಾಗರಿಕ ಸಂಘಟನೆಗಳು ಕಿತ್ತೊಗೆಯಲು ಹೋರಾಡುತ್ತವೆ. ಉ: ಅಣ್ಣಾ ಹಜಾರೆ ನಾಯಕತ್ವದ ಬ್ರಷ್ಟಾಚಾರ ವಿರುದ್ಧ ಭಾರತ, ಎಲೆಕ್ಶನ್ ವಾಚ್. ಈ ಸಂಘಟನೆಗಳ ನೆರವಿನಿಂದ ಆಡಳಿತ ದಕ್ಷಗೊಂಡು ಪ್ರಗತಿ ಉಂಟಾಗುತ್ತದೆ.
ಒಟ್ಟಿನಲ್ಲಿ ರಾಷ್ಟ್ರ ನಿರ್ಮಾಣ ಸವಾಲಿನ ಕಾರ್ಯ. ಈ ಮೇಲಿನ ಅಂಶಗಳಲ್ಲದೇ ಸಮರ್ಥ ನಾಯಕರು, ದಕ್ಷ ಆಡಳಿತ ಯಂತ್ರ, ಜಾಗ್ರುತ ಸಮೂಹ ಮಾಧ್ಯಮಗಳು ರಾಷ್ಟ್ರ ನಿರ್ಮಾಣದ ಸಮಸ್ಯೆಗೆ ಪರಿಹಾರಗಳಾಗಿವೆ.
ಜಾತಿಯಾಧಾರಿತ ಅಸಮಾನತೆಗೆ ಕಾರಣಗಳನ್ನು ಚರ್ಚಿಸಿರಿ?
ಉ: ಜಾತಿಗಳ ಆಧಾರದ ಮೇಲೆ ತಾರತಮ್ಯ ಉಂಟು ಮಾಡುವುದೇ ಜಾತಿ ಆಧರಿತ ಅಸಮಾನತೆಯಾಗಿದೆ.
A ವರ್ಣಾಶ್ರಮ ವ್ಯವಸ್ಥೆ: ಪ್ರಾಚೀನ ಕಾಲದಿಂದಲೂ ವರ್ಣಾಶ್ರಮ ಪದ್ಧತಿ ಭಾರತದಲ್ಲಿ ಜಾರಿಯಲ್ಲಿದೆ. ಜನರ ವ್ರುತ್ತಿಯನ್ನು ಆಧರಿಸಿ ಬ್ರಾಮ್ಹಣ, ಕ್ಷತ್ರಿಯ, ವೈಷ್ಯ ಹಾಗು ಶೂದ್ರ ಎಂಬ ವರ್ಗಗಳು ಜಾರಿಗೊಂಡವು. ಕ್ರಮೇಣ ಈ ವರ್ಗಗಳು ವಿವಿಧ ಜಾತಿಗಳ ಸ್ವರೂಪ ಪಡೆದವು. ಜೊತೆಗೆ ಮನು ಸ್ಮ್ರುತಿಯ ಪಾಲನೆಯಿಂದ ಸಮಾಜದಲ್ಲಿ ಜಾತಿಗಳ ತಾರತಮ್ಯ ಬೆಳೆದು ಬಂದಿದೆ.
B ಸಾಮಾಜಿಕ ಅಂತರ: ಪ್ರತಿಯೊಂದು ಜಾತಿಗಳ ಆಹಾರ, ಸಂಸ್ಕ್ರುತಿ, ಪದ್ಧತಿಗಳು ಭಿನ್ನವಾಗಿ ಬೆಳೆದು ಬಂದವು. ಜೊತೆಗೆ ಜಾತಿಗಳ ನಡುವೆ ಚಲನಶೀಲತೆ ಕಂಡು ಬಾರದೇ ಮುಚ್ಚಿದ ಸಾಮಾಜಿಕ ವ್ಯವಸ್ಥೆ ಬೆಳೆಯಿತು. ಹೀಗಾಗಿ ಜಾತಿಯಾಧಾರಿತ ತಾರತಮ್ಯಗಳು ಹೆಚ್ಚುತ್ತಾ ಬಂದವು.
C ಅನಕ್ಷರತೆ ಮತ್ತು ಸಂಪ್ರದಾಯತೆ: ಅನಕ್ಷರತೆಯಿಂದ ವಿವೇಚನಾ ಶಕ್ತಿ ಇಲ್ಲವಾಗಿ ಸಂಪ್ರದಾಯಗಳ ಪಾಲನೆ ಹೆಚ್ಚಾಗುತ್ತದೆ. ಹಿಂದಿನ ಅರ್ಥರಹಿತ ರೂಢಿಗಳನ್ನು ಮೌಢ್ಯರಾಗಿ ಮುಂದುವರೆಸಿಕೊಂಡು ಬರಲಾಗುತ್ತದೆ. ಇದರಿಂದ ಜಾತಿಗಳ ನಡುವಿನ ಅಸಮಾನತೆ ಬೆಳೆದು ಬಂದಿದೆ.
D ಮೇಲರಿಮೆ: ತಾವು ಶ್ರೇಷ್ಠರಾದವರು ಎಂಬ ಭಾವನೆಯೇ ಮೇಲರಿಮೆ. ಮೇಲ್ಜಾತಿಗಳಲ್ಲಿ ಕಂಡು ಬರುವ ಮೇಲರಿಮೆಯಿಂದ ಕೆಳ ಜಾತಿಯವರು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದರಿಂದ ಜಾತಿ ಅಸಮಾನತೆ ಅಧಿಕವಾಗುತ್ತಿದೆ.
E ವೈವಾಹಿಕ ನಿರ್ಬಂಧಗಳು: ಒಂದು ಜಾತಿಯವರು ಅದೇ ಜಾತಿಯವರನ್ನು ವಿವಾಹವಾಗಬೇಕೆಂಬ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಅಂತರ್ಜಾತಿಯ ವಿವಾಹವಾದರೆ ಆ ಜಾತಿಯವರು ವಿವಾಹವಾದವನೊಡನೆ ಸಹಕರಿಸಲೂ ನಿರ್ಬಂಧಗಳಿವೆ. ಹೀಗಾಗಿಜಾತಿಗಳ ನಡುವಿನ ಅಸಮಾನತೆ ಗಟ್ಟಿಯಾಗಿ ಬೇರೂರಿದೆ.
ಲಿಂಗಾಧಾರಿತ ಅಸಮಾನತೆಗೆ ಕಾರಣಗಳನ್ನು ವಿವರಿಸಿ.
ಉ: ಪುರುಷ ಹಾಗು ಮಹಿಳೆ ಎಂಬ ಲಿಂಗಾಧಾರದ ಮೇಲೆ ತಾರತಮ್ಯ ಮಾಡಿ ಸಮಾನ ಅವಕಾಶ ನೀಡದಿರುವುದನ್ನು ಲಿಂಗ ಅಸಮಾನತೆ ಎನ್ನಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಮಹಿಳೆಯನ್ನು ಕಡೆಗಣಿಸಿ ಪುರುಷ ಪ್ರಧಾನ ಸಮಾಜ ಬೆಳೆದು ಬಂದಿದೆ. ಲಿಂಗಾಧಾರಿತ ಅಸಮಾನತೆಗೆ ಈ ಕಾರಣಗಳು ಪ್ರಮುಖವಾಗಿವೆ.
A ಮನುವಿನ ವಿವರಣೆ: ಮನು ಮಹಿಳೆಯನ್ನು ಪುರುಷನ ಅಧೀನಳೆಂದು ಚಿತ್ರಿಸಿರುವ. ಮಹಿಳೆ ಅಬಲೆಯಾಗಿದ್ದು ಜೀವನವಿಡೀ ಇತರರ ಮೇಲೆ ಪರಾವಲಂಬಿಯಾಗಿರುವಳು ಎಂದು ವಿವರಿಸಿರುವ. ಮನುಸ್ಮ್ರುತಿಯಲ್ಲಿನ ಈ ವಿಚಾರಗಳನ್ನು ಪಾಲಿಸಿಕೊಂಡು ಬಂದಿರುವುದರಿಂದ ಲಿಂಗ ಅಸಮಾನತೆ ಬೆಳೆದುಕೊಂಡು ಬಂದಿದೆ.
B ಪುರುಷ ಪ್ರಾಭಲ್ಯ: ಮಹಿಳೆ ಪುರುಷನಿಗಿಂತ ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲಳು. ಆದ್ದರಿಂದ ಜೀವನದ ಪ್ರಮುಖ ಜವಾಬ್ದಾರಿಗಳನ್ನು ಮಹಿಳೆಗೆ ನಿರಾಕರಿಸುತ್ತಾ ಬರಲಾಗಿದೆ.ಆಗ ಇವರಿಬ್ಬರ ನಡುವೆ ಅಂತರ ಹೆಚ್ಚಾಗಿ ಲಿಂಗಾಧಾರದ ಅಸಮಾನತೆ ಮುಂದುವರೆಯಿತು.
C ಶಿಕ್ಷಣದ ನಿರಾಕರಣೆ: ಪುರುಷನಿಗಿಂತ ಶಿಕ್ಷಣದಲ್ಲಿ ಮಹಿಳೆ ವಂಚಿತಳಾದಳು ನಾನಾ ಕಾರಣಕ್ಕೆ ಪೋಷಕರು ಮಹಿಳೆಯನ್ನು ಶಿಕ್ಷಣದಿಂದ ದೂರವಿಟ್ಟು ಕುಟುಂಬಕ್ಕೆ ಸೀಮಿತಗೊಳಿಸಿದರು. ಈ ಕ್ರಮವು ಲಿಂಗ ಅಸಮಾನತೆಯನ್ನು ಹೆಚ್ಚಿಸಿತು.
D ವರದಕ್ಷಿಣಾ ಪದ್ಧತಿ: ವರದಕ್ಷಿಣೆಯು ಸ್ತ್ರೀಯ ಸ್ಥಾನಮಾನವನ್ನು ಹಾನಿಗೊಳಿಸಿತು. ಈ ಪದ್ಧತಿ ಹೆಣ್ಣು ಕುಟುಂಬಕ್ಕೆ ಹೊರೆ ಎಂಬ ಭಾವನೆ ಮೂಡಿಸಿತು. ಇದರಿಂದ ಲಿಂಗ ತಾರತಮ್ಯ ಅಧಿಕವಾಯಿತು.
E ಸೂಕ್ತ ಸ್ಥಾನಮಾನ ಸಿಗದಿರುವುದು: ಜನಸಂಖೆಯ ಅರ್ಧದಷ್ಟು ಮಹಿಳೆಯರಿದ್ದರೂ ಸಾಕಷ್ಟು ಅವಕಾಶ ಯಾವುದೇ ರಂಗಗಳಲ್ಲಿ ಮಹಿಳೆಗೆ ದೊರೆಯುತ್ತಿಲ್ಲ. ಆಡಳಿತ ಹಾಗು ರಾಜಕೀಯ ಕ್ಷೇತ್ರಗಳಲ್ಲಿ ಅಗತ್ಯ ಪ್ರಾತಿನಿಧ್ಯ ಮಹಿಳೆಗೆ ನೀಡಲಾಗುತ್ತಿಲ್ಲ. ಹೀಗಾಗಿ ಲಿಂಗ ತಾರತಮ್ಯ ಕಂಡು ಬರುತ್ತಿದೆ.
ಜಾತಿ ಅಥವ ಲಿಂಗ ಅಸಮಾನತೆ ಪ್ರಜಾಪ್ರಭುತ್ವದ ಕಳಂಕ:
ಉ: ಸ್ವಾತಂತ್ರ್ಯ, ಸಮಾನತೆ ಹಾಗು ಸಹೋದರತೆ ಪ್ರಜಾಪ್ರಭುತ್ವದ ಅಡಿಗಲ್ಲುಗಳಾಗಿವೆ. ಆದರೆ ಜಾತಿ ಅಥವ ಲಿಂಗ ಅಸಮಾನತೆಯು ಪ್ರಜಾಪ್ರಭುತ್ವದ ಈ ಮೌಲ್ಯಗಳನ್ನು ನಾಶಗೊಳಿಸುತ್ತಿವೆ. ಕೆಳಗಿನ ಅಂಶಗಳು ಅಸಮಾನತೆ ಹೇಗೆ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಎಂಬುದನ್ನು ವಿವರಿಸುತ್ತವೆ.
A ರಾಷ್ಟ್ರೀಯ ಭಾವೈಖ್ಯತೆಗೆ ಧಕ್ಕೆ: ಪ್ರಜಾಪ್ರಭುತ್ವದ ಯಶಸ್ಸು ಆ ದೇಶದ ಜನರಲ್ಲಿನ ಸಹೋದರ ಭಾವನೆಯನ್ನು ಅವಲಂಬಿಸಿರುತ್ತದೆ. ಜಾತಿ ಅಥವ ಲಿಂಗ ಅಸಮಾನತೆಯು ಪ್ರಜೆಗಳಲ್ಲಿನ ತಾರತಮ್ಯದಿಂದ ಸಹೋದರ ಭಾವನೆಯನ್ನು ಹಾಳು ಮಾಡುತ್ತದೆ. ಅಸಮಾನತೆಯು ಕೆಲವರ ಶೋಷಣೆಗೆ ಕಾರಣವಾಗಿ ಒಗ್ಗಟ್ಟನ್ನು ನಾಶಗೊಳಿಸಿ ಪ್ರಜಾಪ್ರಭುತ್ವ ಹಾನಿಗೊಳಗಾಗುತ್ತದೆ.
B ಸಹಭಾಗಿತ್ವದ ಕೊರತೆ: ಆಡಳಿತದಲ್ಲಿ ಎಲ್ಲ ಪ್ರಜೆಗಳ ಭಾಗವಹಿಸುವಿಕೆಯಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಆದರೆ ಜಾತಿ ಅಥವ ಲಿಂಗ ಅಸಮಾನತೆಯಿಂದ ಕೆಳ ಜಾತಿಯವರು ಮತ್ತು ಮಹಿಳೆಯರು ಭಾಗವಹಿಸುವುದನ್ನು ನಿರಾಕರಿಸಲಾಗುತ್ತದೆ. ಸರ್ವರಿಗೆ ಸಂಬಂಧಿಸಿದ ತೀರ್ಮಾನಗಳನ್ನು ಸರ್ವರೂ ಕೈಗೊಳ್ಳದಾಗಿ ಪ್ರಜಾಪ್ರಭುತ್ವ ನಾಶಗೊಳ್ಳುತ್ತದೆ.
C ಪ್ರಗತಿಗೆ ಅಡ್ಡಿ: ಮಹಿಳೆಯರಲ್ಲಿ ಹಾಗು ಕೆಳ ಜಾತಿಯವರಲ್ಲಿ ಪ್ರತಿಭಾವಂತ ಜನರಿರುತ್ತಾರೆ. ಅವರಿಗೆ ಅವಕಾಶಗಳನ್ನು ಒದಗಿಸಿದರೆ ದೇಶ ಪ್ರಗತಿ ಹೊಂದಿ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಆದರೆ ಜಾತಿ ಹಾಗು ಲಿಂಗ ಅಸಮಾನತೆ ಅವರಿಗೆ ಸಮಾನವಕಾಶ ನೀಡದೇ ಪ್ರಗತಿಯನ್ನು ತಡೆಯುತ್ತಿದೆ. ಆಗ, ಪ್ರಜಾಪ್ರಭುತ್ವ ಪ್ರಗತಿಯ ಕೊರತೆಯಿಂದ ಹದಗೆಡುತ್ತದೆ.
D ರಾಜಕೀಯ ದುರವಸ್ಥೆ: ಮಹಿಳೆ ಮತ್ತು ಕೆಳ ಜಾತಿಯವರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಚುನಾವಣೆಗಳಲ್ಲಿ ಮೇಲ್ಜಾತಿಯ ಮತ್ತು ಪುರುಷ ಪ್ರತಿನಿಧಿಗಳೇ ಹೆಚ್ಚಾಗಿ ಕಂಡು ಬರುತ್ತಾರೆ. ಇದರಿಂದ ಜಾತಿ ಹಾಗು ಲಿಂಗ ಅಸಮಾನತೆಗೊಳಗಾದವರು ರಾಜಕೀಯವಾಗಿ ನಿರಾಸಕ್ತಿ ಹೊಂದುವರು. ಆಗ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ.
ಜಾತಿ ಅಸಮಾನತೆಗೆ ಪರಿಹಾರವಾಗಿ ಮೀಸಲಾತಿಯ ಕ್ರಮಗಳನ್ನು ವಿವರಿಸಿ:
ಭಾರತವು ಸಾವಿರಾರು ಜಾತಿಗಳ ಆಗರವಾಗಿದೆ. ಹೀಗಾಗಿ ಜಾತಿ ಅಸಮಾನತೆ ಸಹಜವಾಗಿ ಬೆಳೆದು ಬಂದಿದೆ. ಸ್ವಾತಂತ್ರ್ಯ ನಂತರ ಸಂವಿಧಾನ ರಚನಾಕಾರರು ಹಾಗು ಸರ್ಕಾರಗಳು ಜಾತಿ ಸಮಾನತೆ ತರಲು ಈ ಕೆಳಗಿನ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿರುವರು.
* ಶಿಕ್ಷಣದಲ್ಲಿ ಮೀಸಲಾತಿ: ಸಂವಿಧಾನದ 15 ಯ ವಿಧಿಯು ಪಜಾ, ಪಪಂ ಹಾಗು ಹಿಂದುಳಿದ ಜಾತಿಯವರಿಗೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸಮಾನ ಅವಕಾಶ ಒದಗಿಸಿದೆ. ಇತ್ತೀಚೆಗೆ 86 ಯ ತಿದ್ದುಪಡಿ ಮೂಲಕ ಶಿಕ್ಷಣವನ್ನು ಎಲ್ಲರ ಮೂಲಭೂತ ಹಕ್ಕೆಂದು ಪರಿಗಣಿಸಲಾಗಿದೆ. ಅಲ್ಲದೇ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಳ ಜಾತಿಯ ಮಕ್ಕಳು ಶಿಕ್ಷಣ ಹೊಂದಲು ನೆರವಾಗುವ ಮೀಸಲಾತಿಯನ್ನು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯಿದೆಯಂತೆ ಜಾರಿಗೊಳಿಸಲಾಗಿದೆ. ಇದರಿಂದ ಕ್ರಮೇಣ ಜಾತಿ ಅಸಮಾನತೆಯು ಸಮಾಜದಿಂದ ಮರೆಯಾಗುತ್ತದೆ.
* ಉದ್ಯೋಗದಲ್ಲಿ ಮೀಸಲಾತಿ: ಸಂವಿಧಾನದ 16 ಯ ವಿಧಿಯು ಸರ್ಕಾರಿ ಉದ್ಯೋಗದಲ್ಲಿ ಪಜಾ, ಪಪಂ ಹಾಗು ಹಿಂದುಳಿದ ಜಾತಿಯವರಿಗೆ ಮೀಸಲಾತಿ ನೀಡಿದೆ. ಪ್ರಸ್ತುತ ಸರ್ಕಾರಿ ಉದ್ಯೋಗದಲ್ಲಿ ಪರಿಶಿಷ್ಠ ವರ್ಗದವರಿಗೆ ಶೇ 15 ಮತ್ತು ಪರಿಶಿಷ್ಠ ಜಾತಿಯವರಿಗೆ ಶೇ 3 ಸ್ಥಾನಗಳನ್ನು ಮೀಸಲಿಡಲಾಗಿದೆ. ಮಂಡಲ್ ಆಯೋಗದ ಸಲಹೆಯಂತೆ 1990 ರಿಂದ ಇತರೆ ಹಿಂದುಳಿದ ವರ್ಗದವರಿಗೆ ಶೇ 27 ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ. ಇದರಿಂದ ಆರ್ಥಿಕವಾಗಿ ಕೆಳ ಜಾತಿಯವರು ಸಬಲರಾಗಿ ಜಾತಿ ಅಸಮಾನತೆ ಮಾಯವಾಗುತ್ತದೆ.
* ಶಾಸನ ಸಭೆಯಲ್ಲಿ ಮೀಸಲಾತಿ: ಸಂವಿಧಾನದ 330 ಮತ್ತು 332 ವಿಧಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಪಜಾ ಹಾಗು ಪಪಂ ವರ್ಗದವರಿಗೆ ಸ್ಥಾನಗಳನ್ನು ಮೀಸಲಿಡಲಾಗಿದೆ. ಈ ಮೀಸಲು ಕ್ಷೇತ್ರಗಳಲ್ಲಿ ಪಜಾ ಅಥವ ಪಪಂ ವರ್ಗದ ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸಿ ಆಯ್ಕೆಯಾಗುವರು. ಇದರಿಂದ ನಿರ್ಧಾರ ಕೈಗೊಳ್ಳುವಲ್ಲಿ ಎಲ್ಲ ಜಾತಿಯವರು ಭಾಗವಹಿಸುವ ಮೂಲಕ ಅಸಮಾನತೆ ದೂರವಾಗುತ್ತದೆ.
* ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ: ಸಂವಿಧಾನದ 243D ಮತ್ತು 243T ವಿಧಿಯಂತೆ ಗ್ರಾಮೀಣ ಹಾಗು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಜಾ, ಪಪಂ ಹಾಗು ಹಿಂದುಳಿದ ವರ್ಗದ ಜಾತಿಯವರಿಗೆ ಸ್ಥಾನಗಳನ್ನು ಮೀಸಲಿಡಲಾಗಿದೆ. ಜೊತೆಗೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೂ ಆಯಾ ರಾಜ್ಯ ಸರ್ಕಾರಗಳ ಕಾಯಿದೆಯಂತೆ ಮೀಸಲಾತಿಯನ್ನು ಕೆಳ ಜಾತಿಯವರಿಗೆ ಮೀಸಲಾತಿ ನೀಡಲಾಗಿದೆ. ಇದರಿಂದ ಆಡಳಿತದಲ್ಲಿ ಎಲ್ಲ ಜಾತಿಗಳು ಸಮಾನವಾಗಿ ಭಾಗವಹಿಸುವ ಮೂಲಕ ಜಾತಿ ಅಸಮಾನತೆ ಮಾಯವಾಗುತ್ತದೆ.
ಒಟ್ಟಾರೆ ಮೇಲಿನ ವಿವಿಧ ಮೀಸಲಾತಿ ಕ್ರಮಗಳಿಂದ ಜಾತಿ ಅಸಮಾನತೆ ಕ್ರಮೇಣ ಭಾರತದಲ್ಲಿ ಮಾಯವಾಗುತ್ತಿದೆ. ಅಲ್ಲದೇ ಸಾಮಾಜಿಕ ಜೀವನವನ್ನು ರಕ್ಷಿಸಲು 1989 ರಲ್ಲಿ ದೌರ್ಜನ್ಯ ತಡೆ ಕಾಯಿದೆಯನ್ನು ಅಂಗೀಕರಿಸಲಾಗಿದೆ.
ಲಿಂಗ ಅಸಮಾನತೆಗೆ ಪರಿಹಾರವಾಗಿ ಮೀಸಲಾತಿ ಕ್ರಮಗಳು:
ಲಿಂಗ ಅಸಮಾನತೆ ಒಂದು ದೇಶದ ಪ್ರಗತಿಗೆ ಮಾರಕವಾಗುತ್ತದೆ. ಜನಸಂಖೆಯ ಅರ್ಧದಷ್ಟು ಮಹಿಳೆಯರಿದ್ದು ಅವರ ಸಬಲೀಕರಣ ಅಗತ್ಯ. ಹೀಗಾಗಿ ಮೀಸಲಾತಿಯನ್ನು ನೀಡಿ ಭಾರತದಲ್ಲಿ ಲಿಂಗ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಲಾಗಿದೆ. ಮಹಿಳಾ ಮೀಸಲಾತಿ ಒದಗಿಸಿರುವ ವಿವಿಧ ಕ್ಷೇತ್ರಗಳು ಕೆಳಗಿನಂತಿವೆ.
A ಶೈಕ್ಷಣಿಕ ಮೀಸಲಾತಿ: ಶಿಕ್ಷಣದಿಂದ ವಂಚಿತಳಾದ ಮಹಿಳೆಗೆ ಸರ್ಕಾರ ನಾನಾ ಕ್ರಮಗಳನ್ನು ಹಮ್ಮಿಕೊಂಡಿದೆ. 20೦1ರಲ್ಲಿ ಸರ್ವ ಶಿಕ್ಷಣ ಅಭಿಯಾನ ಆರಂಭಿಸಿ ಸರ್ವರಿಗೂ ಸಮಾನ ಶಿಕ್ಷಣ ಒದಗಿಸಲು ಮುಂದಾಗಿದೆ. ಜೊತೆಗೆ ಕಸ್ತೂರ ಬಾ ವಿದ್ಯಾಲಯ ಸ್ಥಾಪಿಸಿ ಹಿಂದುಳಿದ ಬಾಲಕಿಯರಿಗೆ ನೆರವಾಗಿದೆ. ಅಲ್ಲದೇ ಶುಲ್ಕ ವಿನಾಯಿತಿ, ಶಿಷ್ಯ ವೇತನ, ವಸತಿ ನಿಲಯಗಳನ್ನು ಒದಗಿಸಲಾಗಿದೆ. ಇತ್ತೀಚೆಗೆ ಮಹಿಳೆಯರಿಗಾಗಿ ಮಹಿಳಾ ವಿವಿಗಳನ್ನು ಸ್ಥಾಪಿಸಲಾಗಿದೆ. ಉದಾ: ವಿಜಯಪುರ ವಿಶ್ವ ವಿದ್ಯಾಲಯ.
B ಉದ್ಯೋಗ ಮೀಸಲಾತಿ: ಆರ್ಥಿಕವಾಗಿ ಮಹಿಳೆಯರ ಸಬಲೀಕರಣಕ್ಕೆ ಉದ್ಯೋಗ ಅಗತ್ಯ. ಸಂವಿಧಾನದ 16ನೇ ವಿಧಿಯಂತೆ ಮಹಿಳೆಯರಿಗೆ ಉದ್ಯೋಗದಲ್ಲಿ ಶೇಕಡಾ 33ರಷ್ಟು ಮೀಸಲಾತಿ ಒದಗಿಸಲಾಗಿದೆ. ಜೊತೆಗೆ ಸ್ವ ಉದ್ಯೋಗ ಕೈಗೊಳ್ಳಲು ಅಗತ್ಯ ನೆರವು ನೀಡಲು ಮಹಿಳಾ ಬ್ಯಾಂಕುಗಳನ್ನು ಸ್ಥಾಪಿಸಲಾಗಿದೆ.
C ರಾಜಕೀಯ ಮೀಸಲಾತಿ: ನಿರ್ಧಾರ ಕೈಗೊಳ್ಳುವ ರಾಜಕೀಯ ಅಧಿಕಾರದಿಂದ ಮಹಿಳೆ ವಂಚಿತಳಾಗಿದ್ದಳು. ಹೀಗಾಗಿ ಸಂವಿಧಾನದ 243 [D] ಮತ್ತು 243 [T] ವಿಧಿಯಂತೆ ಗ್ರಾಮೀಣ ಹಾಗು ನಗರ ಸ್ಥಳೀಯ ಸಂಸ್ಥೆಗಳಲ್ಲಿ 3-1ರಷ್ಟು ಮೀಸಲಾತಿ ಒದಗಿಸಲಾಗಿದೆ. ಈ ಮೀಸಲಾತಿ ಕರ್ನಾಟಕದಲ್ಲಿ ಶೇಕಡಾ 50ರಷ್ಟು ಆಗಿದೆ. ಕೇಂದ್ರ ಹಾಗು ರಾಜ್ಯಗಳ ಶಾಸನ ಸಭೆಯಲ್ಲಿಯೂ ಮಹಿಳಾ ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆ ಪುರುಷ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆಯಿಂದ ಇನ್ನೂ ಜಾರಿಗೊಂಡಿಲ್ಲ.
D ಸಂವಿಧಾನಿಕ ಕ್ರಮಗಳು: ಲಿಂಗ ಸಮಾನತೆ ತರಲು ಸಂವಿಧಾನದ ಹಲವು ವಿಧಿಗಳು ನೆರವಾಗಿವೆ. ವಿಧಿ 15 ಲಿಂಗ ತಾರತಮ್ಯ ಮಾಡದಂತೆ, 16 ಸರ್ಕಾರಿ ಉದ್ಯೋಗ ಮಹಿಳೆಗೂ ದೊರೆಯುವಂತೆ, 23 ಹಾಗು 24 ಶೋಷಣೆ ಮಾಡದಂತೆ, 39[B] ಸಮಾನ ದುಡಿಮೆಗೆ ಸಮಾನ ವೇತನ ನೀಡುವಂತೆ, 51A[F] ಮಹಿಳೆಯನ್ನು ಗೌರವಿಸುವಂತೆ ಸೂಚಿಸಿವೆ.
ಈ ಮೇಲಿನ ವಿವಿಧ ಕ್ಷೇತ್ರಗಳ ಮೀಸಲಾತಿಯು ಲಿಂಗ ಅಸಮಾನತೆಯಿಂದ ಮಹಿಳೆಯನ್ನು ಹೊರ ತರಲು ಪ್ರಯತ್ನಿಸಿವೆ. ಇದರಿಂದ ಹಲವು ಮಹಿಳೆಯರು ಪುರುಷನಿಗೆ ಸಮಾನವಾಗಿ ಬೆಳೆಯಲು ಸಾಧ್ಯವಾಗಿದೆ. ಉದಾ ಶಕುಂತಲಾ ದೇವಿ, ಕಿರಣ್ ಬೇಡಿ, ಗಂಗೂಬಾಯಿ.
ಭಾರತದ ಅನಕ್ಷರತೆಗೆ ಕಾರಣಗಳನ್ನು ವಿವರಿಸಿ?
ಉ: ಯಾವುದೇ ಒಂದು ಭಾಷೆಯನ್ನು ಓದಲು ಮತ್ತು ಬರೆಯಲಾಗದ ವ್ಯಕ್ತಿಯ ಸ್ಥಿತಿಗೆ ಅನಕ್ಷರತೆ ಎನ್ನುವರು. ಒಂದು ವೇಳೆ ಓದಲು ಬಂದು ಬರೆಯಲು ಬಾರದಿರುವ ಸ್ಥಿತಿಯೂ ಅನಕ್ಷರತೆ ಎನ್ನಬಹುದು. ಸ್ವಾತಂತ್ರ ನಂತರ ಸರ್ಕಾರಗಳು ಅನೇಕ ಕ್ರಮಗಳನ್ನು ಜಾರಿಗೊಳಿಸಿದ್ದರೂ ಭಾರತದಲ್ಲಿ ಅನಕ್ಷರತೆ ಸಂಪೂರ್ಣವಾಗಿ ಮರೆಯಾಗಿಲ್ಲ. ಅನಕ್ಷರತೆಗೆ ಮುಖ್ಯ ಕಾರಣಗಳೆಂದರೆ
A ಜನಸಂಖ್ಯಾ ಸ್ಪೋಟ: ಜನಸಂಖೆಯಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ದೊಡ್ಡ ದೇಶವಾಗಿದೆ. ಈಚಿನ ಜನಗಣತಿಯಂತೆ ಭಾರತ 120 ಕೋಟಿಗೂ ಹೆಚ್ಚಿನ ಜನಸಂಖೆ ಹೊಂದಿದ್ದು ಜಗತ್ತಿನ ಶೇಕಡಾ 17.5ರಷ್ಟು ವಿಶ್ವದ ಜನರನ್ನು ಹೊಂದಿದೆ. ಅಲ್ಲದೇ ಕರ್ನಾಟಕ6.11 ಕೋಟಿ ಜನಸಂಖೆ ಹೊಂದಿದೆ. ಈ ಪ್ರಮಾಣದ ಜನರಿಗೆ ಸರ್ಕಾರ ಶಿಕ್ಷಣ ಒದಗಿಸಲಾಗದೇ ಅನಕ್ಷರತೆ ಜೀವಂತವಾಗಿದೆ.
B ಬಡತನ: ಭಾರತದಲ್ಲಿ ಅನೇಕರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ. ಕಡಿಮೆ ಆದಾಯದಿಂದ ಪೋಷಕರು ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸದಾಗಿದ್ದಾರೆ. ಆದಾಯಕ್ಕೆ ಆಕರ್ಷಿತರಾಗಿ ಶಿಕ್ಷಣವನ್ನು ಕಡೆಗಣಿಸಿದ್ದಾರೆ. ಇದರಿಂದ ಅನಕ್ಷರತೆ ಮುಂದುವರೆದಿದೆ.
C ಸಾಮಾಜಿಕವಾಗಿ ಹಿಂದುಳಿದಿರುವಿಕೆ: ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ, ಕೀಳರಿಮೆ, ಶೈಕ್ಷಣಿಕ ನಿರುತ್ಸಾಹ ಇಂದಿಗೂ ಅಲ್ಲಲ್ಲಿ ಕಂಡು ಬರುತ್ತಿವೆ. ಜೊತೆಗೆ ಸಾಮಾಜಿಕ ಕಟ್ಟಳೆಗಳು ಬಾಲಕಿಯರ ಶಿಕ್ಷಣ ಹೊಂದದಂತೆ ತೊಡಕಾಗಿವೆ. ಇದರಿಂದಾಗಿ ಅನಕ್ಷರತೆ ಪೂರ್ಣವಾಗಿ ನಾಶವಾಗುತ್ತಿಲ್ಲ.
D ಬಾಲಕಾರ್ಮಿಕ ಪದ್ಧತಿ: ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳು ಹೊಟೆಲ್,ಗ್ಯಾರೇಜ್,ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.2011ರ ವರದಿಯಂತೆ ಸುಮಾರು 2 ಕೋಟಿ ಮಕ್ಕಳು ಈ ಪದ್ಧತಿಗೆ ಒಳಪಟ್ಟಿದ್ದು ಶಾಲೆಯಿಂದ ದೂರವಿದ್ದಾರೆ.ಇದರಿಂದಾಗಿ ಅನಕ್ಷರತೆಯು ಕಡಿಮೆಯಾಗಿಲ್ಲ.
E ಕಳಪೆ ಮೂಲಭೂತ ಸೌಲಬ್ಯಗಳು: ಶಿಕ್ಷಣಕ್ಕೆ ಪೂರಕವಾದ ಕಟ್ಟಡ, ಪೀಠೋಪಕರಣ, ಕುಡಿಯುವ ನೀರು, ಪಠ್ಯ ಪುಸ್ತಕಗಳು ಉತ್ತಮ ಗುಣಮಟ್ಟ ಪಡೆದಿಲ್ಲ. ಜೊತೆಗೆ ಅಗತ್ಯ ಶಿಕ್ಷಕರು ಶಾಲೆಗಳಲ್ಲಿಲ್ಲ. ಗ್ರಾಮೀಣ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದರಿಂದ ಪೂರ್ಣ ಸಾಕ್ಷರತೆ ಹೊಂದಲಾಗದೇ ಅನಕ್ಷರತೆ ಬೆಳೆಯುತ್ತಿದೆ.
ಈ ಮೇಲಿನ ಕಾರಣಗಳು ಭಾರತದಲ್ಲಿ ಅನಕ್ಷರತೆಗೆ ಕಾರಣಗಳಾಗಿವೆ. ಸರ್ಕಾರ ಅನಕ್ಷರತೆಯನ್ನು ಹೋಗಲಾಡಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು ಅವುಗಳು ಫಲ ನೀಡಿಲ್ಲ.
ಪ್ರಜಾಪ್ರಭುತ್ವಕ್ಕೆ ಅನಕ್ಷರತೆ ಹೇಗೆ ಸವಾಲಾಗಿದೆ?
ಉ: ಪ್ರಜಾಪ್ರಭುತ್ವದ ಯಶಸ್ಸು ಆ ದೇಶದ ಪ್ರಜೆಗಳ ಜಾಗ್ರುತಿ ಮತ್ತು ಸಹಭಾಗಿತ್ವವನ್ನು ಆಧರಿಸಿದೆ. ಆದರೆ ಭಾರತದಲ್ಲಿ ನಾನಾ ಕಾರಣಗಳಿಂದ ಪೂರ್ಣ ಸಾಕ್ಷರತೆ ತಲುಪಲಾಗಿಲ್ಲ. ಇದರಿಂದ ಪ್ರಜಾಪ್ರಭುತ್ವ ಹಾನಿಗೊಳಗಾಗುತ್ತಿದೆ. ಈ ಕೆಳಗಿನ ಅಂಶಗಳ ಹಿನ್ನೆಲೆಯಲ್ಲಿ ಅನಕ್ಷರತೆ ಪ್ರಜಾಪ್ರಭುತ್ವಕ್ಕೆ ತೊಡಕಾಗಿದೆ.
* ರಾಜಕೀಯ ಪ್ರಜ್ನೆಯ ಕೊರತೆ: ಅನಕ್ಷರತೆಯಿಂದ ಅನೇಕರು ರಾಜಕೀಯ ತಿಳುವಳಿಕೆ ಹೊಂದಿಲ್ಲ. ಮತದಾನದ ಮಹತ್ವ, ರಾಜಕೀಯ ಪಕ್ಷಗಳ ಉದ್ದೇಶ, ಸರ್ಕಾರದ ಸಾಧನೆ ಹಾಗು ವಿಫಲತೆಗಳು ಮುಂತಾದ ರಾಜಕೀಯ ಕ್ಷೇತ್ರದ ಬೆಳವಣಿಗೆಗಳು ಅನಕ್ಷರಸ್ಥರಿಗೆ ಉಂಟಾಗುವುದಿಲ್ಲ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹಾನಿಯಾಗಿ ಪ್ರಜಾಪ್ರಭುತ್ವ ಕ್ಷೀಣಿಸುತ್ತದೆ.
* ಕಡಿಮೆ ಪ್ರಮಾಣದ ಮತದಾನ: ಅನಕ್ಷರಸ್ಥರು ಮತದಾನದ ಮಹತ್ವ ತಿಳಿದಿರುವುದಿಲ್ಲ. ಅವರು ಮತದಾನ ತಮ್ಮ ಪವಿತ್ರ ಕಾರ್ಯವೆಂಬುದನ್ನು ಅರಿಯಲಾರರು. ಹೀಗಾಗಿ ಮತದಾನದ ದಿನ ತಮ್ಮ ದೈನಂದಿನ ಚಟುವಟಿಕೆಗಳಿಗೆ ಗಮನ ಹರಿಸುವರು. ಪರಿಣಾಮ ಮತದಾನದ ಪ್ರಮಾಣ ಕಡಿಮೆಯಾಗುತ್ತದೆ. ಉ: ಮತದಾನ ಶೇಕಡಾ ಅರವತ್ತನ್ನು ಭಾರತದಲ್ಲಿ ಇನ್ನೂ ದಾಟಿಲ್ಲ. ಕಡಿಮೆ ಮತದಾನದಿಂದ ಪ್ರತಿನಿಧಿಗಳು ಸರ್ವರ ಕಲ್ಯಾಣಕ್ಕೆ ಶ್ರಮಿಸದೇ ಪ್ರಜಾಪ್ರಭುತ್ವ ನಾಶಗೊಳ್ಳುತ್ತಿದೆ.
* ಹಣಬಲ ಮತ್ತು ತೋಳ್ಬಲಗಳ ಪ್ರಭಾವ: ಇಂದಿನ ಚುನಾವಣೆಗಳಲ್ಲಿ ರಾಜಕಾರಣಿಗಳು ಮತ್ತು ಉದ್ಯಮಿಗಳ ನಡುವೆ ಉತ್ತಮ ಸಂಬಂಧ ಬೆಳೆಯುತ್ತದೆ. ಉದ್ಯಮಿಗಳು ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಹಣ ನೀಡಿ ಅವರು ಅಧಿಕಾರಕ್ಕೆ ಬಂದ ಮೇಲೆ ಲಾಭ ಪಡೆಯುವರು. ಆ ಹಣವನ್ನು ಬಳಸಿ ಅನಕ್ಷರಸ್ಥರಿಗೆ ಹಂಚಿ ಮತ್ತು ತೋಳ್ಬಲ ಬಳಸಿ ರಾಜಕಾರಣಿಗಳು ಗೆಲ್ಲುತ್ತಾರೆ. ಇದರಿಂದ ಪ್ರಜಾಪ್ರಭುತ್ವ ನಾಶವಾಗುತ್ತದೆ.
* ಜನಪ್ರೀಯ ರಾಜಕಾರಣ: ಅನಕ್ಷರಸ್ಥರು ರಾಜಕಾರಣಿಗಳು ಘೋಷಿಸುವ ಜನಪ್ರೀಯ ಯೋಜನೆಗಳಿಗೆ ಆಕರ್ಷಿತರಾಗಿ ಅಸಮರ್ಥರನ್ನು ಚುನಾಯಿಸುತ್ತಾರೆ. ಇದರಿಂದ ಆಡಳಿತ ಹದಗೆಟ್ಟು ಪ್ರಜಾಪ್ರಭುತ್ವ ಕುಸಿಯುತ್ತದೆ. ಅಲ್ಲದೇ ಚುನಾವಣೆ ಬಳಿಕ ಜನಪ್ರೀಯ ಯೋಜನೆಗಳಿಂದ ವಿವಿಧ ಸೌಲಭ್ಯ ಪಡೆದು ತಮ್ಮಲ್ಲಿನ ಸ್ರುಜನಶೀಲತೆ ಮತ್ತು ಸ್ವಾವಲಂಬನೆ ಕಳೆದುಕೊಳ್ಳುತ್ತಾರೆ. ಆಗ ದೇಶದ ಪ್ರಗತಿ ಕುಂಟಿತಗೊಂಡು ಪ್ರಜಾಪ್ರಭುತ್ವ ನಾಶವಾಗುತ್ತದೆ. ಉದಾ: ಅನ್ನ ಭಾಗ್ಯ, ಭಾಗ್ಯ ಲಕ್ಷ್ಮಿ.
* ಸರ್ವಾಧಿಕಾರತ್ವದ ಉಗಮ: ಅನಕ್ಷರಸ್ಥ ಮತದಾರರು ಚುನಾವಣೆಯಲ್ಲಿ ಜವಾಬ್ದಾರಿಯಿಂದ ನಿರ್ಧಾರ ಕೈಗೊಳ್ಳುವುದಿಲ್ಲ. ಇದರಿಂದ ಅಸಮರ್ಥ ಅಥವ ಮಹತ್ವಾಕಾಂಕ್ಷಿ ನಾಯಕನಿಗೆ ಅಧಿಕಾರ ದೊರೆತು ಸರ್ವಾಧಿಕಾರತ್ವ ಉಂಟಾಗಬಹುದಾಗಿದೆ.ಉ: 1975ರಲ್ಲಿ ಇಂದಿರಾಗಾಂಧಿ ತೋರಿದ ವರ್ತನೆ. ಆಗ ಪ್ರಜಾಪ್ರಭುತ್ವದ ಅಳಿವು ಖಚಿತಗೊಳ್ಳುತ್ತದೆ.
ಅನಕ್ಷರತೆಗೆ ಪರಿಹಾರವಾಗಿ ಕಡ್ಡಾಯ ಶಿಕ್ಷಣ
ಭಾರತದ ಸಂವಿಧಾನದ 45ನೇ ವಿಧಿ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ಒದಗಿಸಲು ಸೂಚಿಸಿದೆ. ಈ ಉದ್ದೇಶಕ್ಕಾಗಿ 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಯಿತು. ಮುಂದೆ 1992ರಲ್ಲಿ ಇದಕ್ಕೆ ಹೊಸ ಶಿಕ್ಷಣ ನೀತಿ ಎಂದು ಮರು ನಾಮಕರಣ ಮಾಡಲಾಯಿತು. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೈಗೊಂಡ ನಾನಾ ಕ್ರಮಗಳಿಂದ ಅನಕ್ಷರತೆ ದೂರವಾಗಲಿಲ್ಲ. ಆಗ 2002ರಲ್ಲಿ ಸಂವಿಧಾನಕ್ಕೆ 86ನೇ ತಿದ್ದುಪಡಿ ತಂದು 21[A] ಉಪ ವಿಧಿಯನ್ನು ಸೇರಿಸಲಾಯಿತು. ಈ 21[A] ಉಪ ವಿಧಿಯಂತೆ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕಾಗಿ ಪರಿವರ್ತನೆಗೊಂಡಿತು. ಈ ಕಡ್ಡಾಯ ಶಿಕ್ಷಣ ಹಕ್ಕಿನ ಮುಖ್ಯಾಂಶಗಳು ಕೆಳಗಿನಂತಿವೆ.
A 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ಒದಗಿಸುವುದು ಮತ್ತು ಇದಕ್ಕಾಗಿ ಉಚಿತ, ದಾಖಲಾತಿ ಹಾಗು ಹಾಜರಾತಿ ನೀಡಿ ಮಕ್ಕಳ ಶಿಕ್ಷಣ ಪೂರೈಸುವುದು ಸರ್ಕಾರದ ಜವಾಬ್ದಾರಿಯಾಯಿತು.
B ಪೋಷಕರು ತಮ್ಮ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಮೂಲಭೂತ ಕರ್ತವ್ಯವಾಯಿತು.
C ಕಡ್ಡಾಯ ಶಿಕ್ಷಣ ಸಾಧಿಸಲು ಸರ್ಕಾರ ವಿದ್ಯಾರ್ಥಿಗಳ ಸಂಖೆಗೆ ತಕ್ಕಂತೆ ಶಿಕ್ಷಕರು, ಆಟದ ಮೈದಾನ, ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಯಿತು.
D ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಅನುಪಾತದಲ್ಲಿ ಭರಿಸಬೇಕು.
E ಶಾಲಾ ಅಭಿವ್ರುದ್ಧಿ ಮಂಡಳಿ ಹಾಗು ಸಂಬಂಧಿಸಿದ ಪ್ರಾಧಿಕಾರಗಳು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ತರಬೇತಿ ನೀಡಿ ವಯೋಮಿತಿಗೆ ತಕ್ಕ ತರಗತಿಗೆ ಸೇರಿಸುವುದು.
F ಕಡ್ಡಾಯ ಶಿಕ್ಷಣ ಕಾಯಿದೆ ಸೆಕ್ಶನ್ 12ರಂತೆ ಖಾಸಗಿ, ಖಾಸಗಿ ಅನುದಾನಿತ ಹಾಗು ಅಲ್ಪಸಂಖ್ಯಾತ ಶಾಲೆಗಳಲ್ಲಿ ಶೇಕಡಾ 25ರಷ್ಟು ಸ್ಥಾನಗಳನ್ನು ಪಜಾ, ಪಪಂ ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ಮೀಸಲಿಡಬೇಕಾಗುತ್ತದೆ.
ಭಾರತದಲ್ಲಿ ಕೋಮುವಾದಕ್ಕೆ ಪ್ರಮುಖ ಕಾರಣಗಳನ್ನು ಮತ್ತು ನಿವಾರಣೋಪಾಯಗಳನ್ನು ಚರ್ಚಿಸಿ?
ಉ:
A. ಬ್ರಿಟಿಷರ್ಅ ನೀತಿ: ಭಾರತದಲ್ಲಿ ಬ್ರಿಟಿಷರು ತಮ್ಮ ಲಾಭಕ್ಕಾಗಿ ಒಡೆದು ಆಳುವ ನೀತಿ ಅನುಸರಿಸಿ ಏಕತೆ ಹಾಳುಗೆಡವಿದರು. ಲಾರ್ಡ್ ಕರ್ಜನ್ 1905ರಲ್ಲಿ ಧರ್ಮದ ಆಧಾರದ ಮೇಲೆ ಬಂಗಾಳವನ್ನು ವಿಭಜಿಸಿದನು. ಮುಂದೆ 1909ರಲ್ಲಿ ಲಾರ್ಡ್ ಮಿಂಟೊ ಮುಸ್ಲೀಮರಿಗೆ ಪ್ರತ್ಯೇಕ ಮತ ಕ್ಷೇತ್ರಗಳನ್ನು ನೀಡಿದ. ಇದರಿಂದ ಹಿಂದು ಮತ್ತು ಮುಸಲ್ಮಾನರಲ್ಲಿ ಕೋಮು ಭಾವನೆಗಳು ಬಲಗೊಂಡವು.
B. ಹಿಂದು ಹಾಗು ಮುಸಲ್ಮಾನರ ರಾಷ್ಟ್ರವಾದ: 1906ರಲ್ಲಿ ಮುಸ್ಲೀಮ್ ಲೀಗ್ ಎಂಬ ಕೋಮು ಸಂಘಟನೆ ಸ್ಥಾಪನೆಯಾಯಿತು. ಇದೇ ವೇಳೆ ಹಿಂದೂ ಮಹಾ ಸಭಾ ಆರಂಭವಾಯಿತು. ಕಾಲ ಕಳೆದಂತೆ ಮುಸ್ಲೀಮ್ ಲೀಗ್ ನಾಯಕ ಮಹಮದಲಿ ಜಿನ್ನಾ ದ್ವೀ ರಾಷ್ಟ್ರ ಸಿದ್ಧಾಂತ ಆಧರಿಸಿ ಪ್ರತ್ಯೇಕ ದೇಶದ ಬೇಡಿಕೆ ಮಂಡಿಸಿದನು. ಇದರಿಂದ ಹಿಂದೂ ಮತ್ತು ಮುಸ್ಲೀಮ್ ರಾಷ್ಟ್ರವಾದ ಬೆಳೆದು ದೇಶ ವಿಭಜನೆಯಾಯಿತಲ್ಲದೇ ಕೋಮುವಾದ ಹೆಮ್ಮರವಾಯಿತು.
C. ಕೋಮು ಗಲಭೆಗಳು: ದೇಶ ವಿಭಜನೆಯ ನಂತರ ಧರ್ಮಾಂಧರು ಪಾಕಿಸ್ಥಾನದಲ್ಲಿ ಹಿಂದುಗಳ ಮೇಲೆ ಮತ್ತು ಭಾರತದಲ್ಲಿ ಮುಸಲ್ಮಾನರ ಮೇಲೆ ದಾಳಿ ನಡೆಸಿ ಕೋಮು ಗಲಭೆಗಳನ್ನು ಉಂಟು ಮಾಡಿದರು. ಗಾಂಧಿ ಪ್ರಯತ್ನದಿಂದ ಆಗ ಕಡಿಮೆಯಾದ ಗಲಭೆಗಳು ಕೋಮುವಾದ ಬಲಗೊಳಿಸಿದವು. ಬಳಿಕ ಲಕ್ನೌ, ಮೀರತ್, ಅಹಮದಾಬಾದ್, ಮುಂಬೈಗಳಲ್ಲಿ ಗಲಭೆಗಳು ಕಾಣಿಸಿಕೊಂಡವು. 1992ರಲ್ಲಿ ಬಾಬ್ರಿ ಮಸೀದಿ ವಿಚಾರವಾಗಿ ದೇಶದ ಹಲವೆಡೆ ಕೋಮು ಗಲಭೆಗಳು ಮರುಕಳಿಸಿದವು. ಇವು ಜನರಲ್ಲಿ ಕೋಮುವಾದ ಜೀವಂತವಾಗಿರಲು ಕಾರಣವಾಗಿವೆ.
D. ರಾಜಕೀಯ ಪ್ರೋತ್ಸಾಹ: ಒಂದು ಕೋಮಿನ ಜನರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಾಗು ರಾಜಕಾರಣಿಗಳು ಧಾರ್ಮಿಕ ವಿಚಾರಗಳನ್ನು ಕೆರಳಿಸುತ್ತರೆ. ತಮ್ಮ ಸ್ವಾರ್ಥ ಸಾಧನೆಗೆ ಅನ್ಯ ಧರ್ಮದವರನ್ನು ಟೀಕಿಸುತ್ತಾರೆ. ಇಂತಹ ಬೆಳವಣಿಗೆಗಳು ಕೋಮುವಾದವನ್ನು ಬೆಳೆಸುತ್ತವೆ.
E. ಧಾರ್ಮಿಕ ಹಿತಾಸಕ್ತಿ ಸಂಘಟನೆಗಳು: ಭಾರತದಲ್ಲಿ ಎಲ್ಲ ಕೋಮುಗಳೂ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಧಾರ್ಮಿಕ ಸಂಘಟನೆಗಳನ್ನು ರಚಿಸಿಕೊಂಡಿವೆ. ಈ ಸಂಘಟನೆಗಳು ತಮ್ಮ ಕೋಮಿನಲ್ಲಿ ಐಖ್ಯತೆ ತರಲು ಸಮಾಜದಲ್ಲಿರುವ ಸಾಮರಸ್ಯವನ್ನು ಕಡೆಗಣಿಸುತ್ತವೆ. ಇದರಿಂದ ಕೋಮುವಾದ ಆಳವಾಗಿ ಬೇರೂರುತ್ತಾ ಸಾಗಿದೆ.
ಭಾರತದಲ್ಲಿ ವಿವಿಧ ಕೋಮಿಗೆ ಸೇರಿದ ಜನರು ವಾಸವಾಗಿದ್ದು ಕೋಮುವಾದ ಸರ್ವೇ ಸಾಮಾನ್ಯವಾಗಿದೆ. ಈ ಕೋಮುವಾದ ದೇಶದ ಜನರ ನಡುವೆ ದ್ವೇಷ ಭಾವನೆ ಮೂಡಿಸಿ ಘರ್ಷಣೆಗೆ ಅವಕಾಶ ಮಾಡಿಕೊಟ್ಟಿದೆ. ಕೋಮುವಾದವನ್ನು ದೇಶದಿಂದ ಕಿತ್ತೊಗೆಯಲು ಕೆಳಗಿನ ಪರಿಹಾರಗಳು ನೆರವಾಗಿವೆ.
* ಜಾತ್ಯಾತೀತತೆ: ಯಾವುದೇ ಒಂದು ಧರ್ಮವನ್ನು ರಾಜ್ಯ ಧರ್ಮವೆಂದು ಘೋಷಿಸದೇ ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವುದಕ್ಕೆ ಜಾತ್ಯಾತೀತತೆ ಎನ್ನುವರು.ಉದಾ: ಭಾರತದಲ್ಲಿ ಹಿಂದೂ,ಇಸ್ಲಾಮ್,ಜೈನ,ಬೌದ್ಧ,ಕ್ರಿಶ್ಚಿಯನ್ ಧರ್ಮಗಳನ್ನು ಸಮಾನವಾಗಿ ಕಂಡು ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿರುವುದು. ಇದರಿಂದ ಕೋಮುವಾದ ನಿವಾರಣೆಯಾಗುತ್ತದೆ. ಪ್ರಜೆಗಳಲ್ಲಿ ಏಕತೆ ಹಾಗು ಸಮಾನತೆ ತರಲು ನಮ್ಮ ಸಂವಿಧಾನದ ವಿಧಿ 26 ಇಷ್ಟ್ವಾದ ಧರ್ಮ ಪಾಲಿಸಲು, ಪ್ರಚಾರ ಮಾಡಲು ಹಾಗು ಸಂಸ್ಥೆ ಸ್ಥಾಪಿಸಲು ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿದೆ. ಅಲ್ಲದೇ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಸಾಕಾದಷ್ಟು ಅವಕಾಶಗಳನ್ನು ಒದಗಿಸಲಾಗಿದೆ. ಇತ್ತೀಚೆಗೆ ಕೋಮು ಗಲಭೆ ನಿಯಂತ್ರಿಸಲು ಸಂಸತ್ತು ಕಠಿಣ ಕಾನೂನು ರಚಿಸಲು ಮುಂದಾಗಿದೆ. ಇಂತಹ ಜಾತ್ಯಾತೀತ ವ್ಯವಸ್ಥೆಯಿಂದ ಎಲ್ಲ ಕೋಮಿನವರು ಸಾಮರಸ್ಯದಿಂದ ಬಾಳಲು ಮುಂದಾಗಿ ಕೋಮುವಾದ ಮಾಯವಾಗುತ್ತದೆ.
* ರಾಷ್ಟ್ರೀಯ ಭಾವೈಕ್ಯತೆ: ಜನಾಂಗ,ಧರ್ಮ,ಆಹಾರ,ಭಾಷೆ,ಸಂಸ್ಕ್ರುತಿಯಲ್ಲಿ ವೈವಿಧ್ಯತೆಗಳಿದ್ದರೂ ನಾವೆಲ್ಲ ಭಾರತೀಯರು ಎಂಬ ಮನೋಭಾವವನ್ನು ರಾಷ್ಟ್ರೀಯ ಭಾವೈಖ್ಯತೆ ಎನ್ನಬಹುದು. ಭಾರತದ ಪ್ರಜಾಪ್ರಭುತ್ವವನ್ನ್ ಯಶಸ್ಸುಗೊಳಿಸಲು ಇದರ ಅಗತ್ಯವಿದೆ. ರಾಷ್ಟ್ರೀಯ ಭಾವೈಖ್ಯತೆ ಸಾಧಿಸಲು ಭಾರತದ ಸಂವಿಧಾನದಲ್ಲಿನ ರಾಷ್ಟ್ರೀಯ ಭಾವೈಖ್ಯತಾ ಮಂಡಳಿ,ವಲಯ ಸಮೀತಿಗಳು ಹಾಗು ಸೇನಾ ಪಡೆಗಳು ನೆರವಾಗಿವೆ. ಇದರಿಂದ ಕೋಮುವಾದ ಮರೆಯಾಗುತ್ತದೆ.
* ನೆರೆಹೊರೆಯ ಶಾಂತಿ ಪಾಲನಾ ಸಮೀತಿಗಳು: ಬಾಬ್ರಿ ಮಸೀದಿ ಧ್ವಂಸದ ಬಳಿಕ ದೇಶದಾದ್ಯಂತ ಕೋಮು ಗಲಭೆಗಳು ಜರುಗಿದವು. ಸರ್ಕಾರಗಳು ಗಲಭೆಗಳನ್ನು ತಡೆಯಲು ಅಸಾಧ್ಯವಾಯಿತು. ಆಗ ಗಲಭೆ ನಡೆದ ಸ್ಥಳಗಳಲ್ಲಿ ಶಾಂತಿ ನೆಲಸಲು ಸರ್ಕಾರದಿಂದಲೇ ನೆರೆಹೊರೆಯ ಶಾಂತಿ ಸಮೀತಿಗಳು ರಚನೆಗೊಂಡವು. ಈ ಸಮೀತಿಯಲ್ಲಿ ಕೋಮು ಗಲಭೆ ಸಂಭವಿಸಿದ ಹಾಗು ಕೋಮು ಸೂಕ್ಷ್ಮ ಪ್ರದೇಶದ ವಿವಿಧ ಕೋಮಿನ ನಾಯಕರು ನಾಮ ನಿರ್ದೇಶನಗೊಳ್ಳುತ್ತಾರೆ. ಈ ಸಮೀತಿಯ ಮುಖ್ಯ ಕಾರ್ಯಗಳೆಂದರೆ
* ಆ ಪ್ರದೇಶದಲ್ಲಿ ಗಲಭೆಗೆ ಕಾರಣವಾಗುವ ಚಟುವಟಿಕೆ ತಡೆಯುವುದು.
* ಕೋಮು ಹಿಂಸಾಚಾರ ನಡೆದಲ್ಲಿ ಶಾಂತಿ ಸಭೆ ಕೈಗೊಳ್ಳುವುದು.
* ಕೋಮು ಗಲಭೆಯಿಂದ ಹಾಳಾದ ದೈನಂದಿನ ಜೀವನವನ್ನು ಜನರಿಗೆ ಒದಗಿಸಲು ಶ್ರಮಿಸುವುದು.
* ಕೋಮು ವಿವಾದಗಳನ್ನು ಸೌಹಾರ್ದತೆಯಿಂದ ಬಗೆ ಹರಿಸುವುದು.
* ಗಲಭೆಯಲ್ಲಿ ಸಂತ್ರಸ್ಥರಾದವರಿಗೆ ಸಾಧ್ಯವಾದ ನೆರವು ಒದಗಿಸುವುದು.
ಕೋಮುವಾದವು ಪ್ರಜಾಪ್ರಭುತ್ವಕ್ಕೆ ಹೇಗೆ ಕಳಂಕವಾಗಿದೆ ಎಂಬುದನ್ನು ವಿವರಿಸಿ.
ಉ: ಸ್ವಾತಂತ್ರ್ಯ, ಸಮಾನತೆ ಹಾಗು ಸಹೋದರತೆ ಪ್ರಜಾಪ್ರಭುತ್ವದ ಅಡಿಗಲ್ಲುಗಳಾಗಿವೆ. ಕೋಮುವಾದ ಜನರ ನಡುವೆ ಅಸಮಾನತೆ ಹಾಗು ಅನೈಖ್ಯತೆ ಉಂಟುಮಾಡಿ ವೈವಿಧ್ಯಮಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ.ಕೆಳಗಿನ ಅಂಶಗಳ ಹಿನ್ನೆಲೆಯಲ್ಲಿ ಕೋಮುವಾದ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ತೊಡಕಾಗಿದೆ.
A ರಾಷ್ಟ್ರೀಯ ಏಕತೆಗೆ ಧಕ್ಕೆ: ಪ್ರಜಾಪ್ರಭುತ್ವಕ್ಕೆ ಪ್ರಜೆಗಳಲ್ಲಿ ಸಹೋದರತೆ ಹಾಗು ಏಕತೆಯ ಭಾವನೆ ಅಗತ್ಯ. ಆದರೆ ಕೋಮುವಾದ ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುತ್ತದೆ. ಜೊತೆಗೆ ವಿವಿಧ ಕೋಮಿನ ಜನರಲ್ಲಿ ದ್ವೇಷವನ್ನು ಬಿತ್ತುತ್ತದೆ. ಆಗ ಕೋಮು ಗಲಭೆಗಳು ಉಂಟಾಗಿ ಬ್ರಾತ್ರುತ್ವ ಭಾವನೆ ಹಾಗು ಏಕತೆಗೆ ಪೆಟ್ಟು ಬಿದ್ದು ಪ್ರಜಾಪ್ರಭುತ್ವ ನಶಿಸುತ್ತದೆ.
B ರಾಷ್ಟ್ರೀಯವಾದ ಮತ್ತು ದೇಶಾಭಿಮಾನಕ್ಕೆ ಧಕ್ಕೆ: ಪ್ರಜಾಪ್ರಭುತ್ವ ಯಶಸ್ಸುಗೊಳ್ಳಲು ಪ್ರಜೆಗಳಲ್ಲಿ ದೇಶ ಮತ್ತು ಸರ್ಕಾರ ತನ್ನದು ಎಂಬ ಭಾವನೆ ಇರಬೇಕಾಗುತ್ತದೆ. ಜೊತೆಗೆ ತಾವೆಲ್ಲರೂ ಒಂದೇ ರಾಷ್ಟ್ರಕ್ಕೆ ಸೇರಿದವರು ಎಂಬ ಕಲ್ಪನೆಯನ್ನು ಪಾಲಿಸಬೇಕಾಗುತ್ತದೆ. ಆದರೆ ಕೋಮುವಾದ ಪ್ರಜೆಗಳಲ್ಲಿ ಅಂತರವನ್ನು ಬೆಳೆಸಿ ಸಹೋದರತೆಯನ್ನು ಹಾಳು ಮಾಡುತ್ತದೆ.
C ರಾಷ್ಟ್ರೀಯ ಅಭಿವ್ರುದ್ಧಿಗೆ ತೊಡಕು: ಪ್ರಜಾಪ್ರಭುತ್ವಕ್ಕೆ ಪ್ರಗತಿಯು ಅನಿವಾರ್ಯ. ಆದರೆ ಕೋಮುವಾದ ಚಿಕ್ಕ ಪುಟ್ಟ ಕಾರಣಗಳಿಗೆ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತದೆ. ಇದರಿಂದ ಜೀವ ಹಾಗು ಆಸ್ತಿ ಹಾನಿಯಾಗಿ ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ. ಆಗ ಪ್ರಜೆಗಳು ಸರ್ಕಾರದ ವಿರುದ್ಧ ಹೋರಾಟ ನಡೆಸಿ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ.
D ಅಸಮರ್ಥ ರಾಜಕೀಯ ನಾಯಕತ್ವ: ಪ್ರಜಾಪ್ರಭುತ್ವದ ಯಶಸ್ಸಿಗೆ ಸಮರ್ಥ ಪ್ರತಿನಿಧಿಗಳ ಆಯ್ಕೆ ಅಗತ್ಯ. ಆದರೆ ಕೋಮುವಾದದಿಂದ ಚುನಾವಣೆಯಲ್ಲಿ ಧರ್ಮಾಧಾರಿತ ಮತದಾನ ನಡೆಯುತ್ತದೆ. ಇದರಿಂದ ಅಸಮರ್ಥ ರಾಜಕಾರಣಿಗಳು ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವದ ತತ್ವಗಳನ್ನು ನಾಶಗೊಳಿಸುತ್ತಾರೆ.
E ರಾಷ್ಟ್ರೀಯ ಸಾರ್ವಬೌಮತೆಗೆ ಧಕ್ಕೆ: ಪ್ರಜಾಪ್ರಭುತ್ವದಲ್ಲಿ ಪರಮಾಧಿಕಾರಕ್ಕೆ ಹೆಚ್ಚಿನ ಮಹತ್ವವಿರುತ್ತದೆ. ಆದರೆ ಕೋಮು ಭಾವನೆ ತಮ್ಮ ಕೋಮು ಶ್ರೇಷ್ಠವೆಂದು ಸಾಬೀತು ಪಡಿಸಲು ಗಲಭೆಯನ್ನು ಹುಟ್ಟು ಹಾಕಿ ಸಾರ್ವಭೌಮ ಅಧಿಕಾರವನ್ನು ಹಾಳು ಮಾಡುತ್ತದೆ. ಕೋಮುವಾದವು ಜನರಲ್ಲಿ ಸಮಾನತೆಯನ್ನು ನಶಿಸುವಂತೆ ಮಾಡಿ ಪ್ರಜಾಪ್ರಭುತ್ವದ ಅವನತಿಗೆ ಕಾರಣವಾಗುತ್ತದೆ.
ಭಯೋತ್ಪಾದನೆಗೆ ಕಾರಣಗಳನ್ನು ವಿವರಿಸಿ.
ಉ: ಭಯೋತ್ಪಾದನೆ ಜಗತ್ತಿನ ಎಲ್ಲೆಡೆ ಕಂಡು ಬರುತ್ತಿರುವ ಚಟುವಟಿಕೆಯಾಗಿದೆ. ದೇಶದಿಂದ ದೇಶಕ್ಕೆ ಭಯೋತ್ಪಾದನೆಯ ಕಾರಣಗಳು ಭಿನ್ನವಾಗಿರುತ್ತವೆ. ಭಾರತದಲ್ಲಿ ಭಯೋತ್ಪಾದನೆಗೆ ಈ ಕೆಳಗಿನವು ಪ್ರಮುಖ ಕಾರಣಗಳಾಗಿವೆ.
A ಪ್ರತ್ಯೇಕತಾ ಚಳುವಳಿಗಳು: ಭಾರತವು ಸ್ವತಂತ್ರ ಪಡೆದಾಗಿನಿಂದ ಇಂದಿನವರೆಗೆ ಪ್ರತ್ಯೇಕತಾ ಚಳುವಳಿಗಳನ್ನು ಎದುರಿಸುತ್ತಿದೆ. 1947ರಿಂದ ಜಮ್ಮು ಕಾಶ್ಮೀರದಲ್ಲಿ JKLF ಪ್ರತ್ಯೇಕತೆಗೆ ಹೋರಾಡುತ್ತಿವೆ. 1980ರಲ್ಲಿ ಪಂಜಾಬ್ ಪ್ರತ್ಯೇಕತೆಗೆ ಸಿಕ್ ಭಯೋತ್ಪಾದಕರು ಮುಂದಾದರು. ಈಗಲೂ ಅಲ್ಲಿ ಭಯೋತ್ಪಾದನಾ ಘಟನೆಗಳು ಜರುಗುತ್ತಿವೆ. ಇದರಿಂದ ಪ್ರೇರಿತರಾದ ಇತರ ಪ್ರತ್ಯೇಕತಾವಾದಿಗಳು ಭಯೋತ್ಪಾದನೆಯಲ್ಲಿ ತೊಡಗಲಾರಂಭಿಸಿದ್ದಾರೆ.
B ಧಾರ್ಮಿಕ ಮೂಲಭೂತವಾದ: ಹಿಂದು, ಇಸ್ಲಾಮ್, ಕ್ರಿಶ್ಚಿಯನ್ ಮುಂತಾದ ಧರ್ಮಗಳ ಜನರು ತಮ್ಮ ಹಿತ ರಕ್ಷಣೆಗೆ ಕೆಲ ಧಾರ್ಮಿಕ ಸಂಘಟನೆಗಳಿಗೆ ಬೆಂಬಲ ನೀಡಿದರು. ಇದರಿಂದ ಪ್ರೇರಿತರಾದ ಸಂಘಟನೆಗಳು ಭಯೋತ್ಪಾದನೆಗೆ ಕೈ ಹಾಕತೊಡಗಿದವು. ಉದಾ ಹಿಂದುಗಳ ಬೆಂಬಲದಿಂದ ಮಂಗಳೂರಿನಲ್ಲಿ ಜರುಗಿದ ಪಬ್ ಮೇಲಿನ ದಾಳಿಗಳು.
C ಈಶಾನ್ಯ ಭಾಗದ ಜನಾಂಗೀಯ ಸಮಸ್ಯೆಗಳು: ಭಾರತದ ಈಶಾನ್ಯ ಭಾಗದಲ್ಲಿ ವಿವಿಧ ಜನಾಂಗಗಳ ಜನರು ವಾಸವಾಗಿದ್ದಾರೆ. ಅಲ್ಲಿ ಬಹು ಸಂಖೆಯ ಜನಾಂಗದವರು ಅಲ್ಪ ಸಂಖೆಯ ಜನಾಂಗದವರನ್ನು ಶೋಷಿಸತೊಡಗಿದರು. ಅಲ್ಲದೇ ದಬ್ಬಾಳಿಕೆಯಿಂದ ಕಾಣತೊಡಗಿದರು. ಆಗ ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾಗುವ ಭಯೋತ್ಪಾದನಾ ಸಂಘಟನೆಗಳು ಹುಟ್ಟಿಕೊಂಡವು. ಉದಾ: ULFA, MNF
D ದುರ್ಬಲ ರಾಜಕೀಯ ವ್ಯವಸ್ಥೆ: ಭಾರತದಲ್ಲಿ ವಿವಿಧ ಪಕ್ಷಗಳು ನಾನಾ ಸಿದ್ಧಾಂತಕ್ಕೆ ಅಂಟಿಕೊಂಡಿವೆ. ಬಹು ಪಕ್ಷಪದ್ಧತಿಯಿಂದ ಸಂಮಿಶ್ರ ಸರ್ಕಾರಗಳು ಜಾರಿಗೊಂಡು ಭಯೋತ್ಪಾದನೆ ತಡೆಯಲು ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿವೆ. ಉದಾ: POTA ಜಾರಿಗೊಳಿಸಲು ವಾಜಪೇಯಿ ಸರ್ಕಾರ ಜಂಟಿ ಅಧಿವೇಶನ ಕರೆಯಬೇಕಾಯಿತು. ಪರಿಣಾಮವಾಗಿ ಭಯೋತ್ಪಾದನೆ ಭಾರತದಲ್ಲಿ ಹರಡತೊಡಗಿತು.
E ಆರ್ಥಿಕ ತಾರತಮ್ಯ: ಭಾರತದಲ್ಲಿ ಇಂದಿಗೂ ಬಡವ ಹಾಗು ಶ್ರೀಮಂತನ ನಡುವಿನ ಅಂತರ ಇನ್ನೂ ಕಡಿಮೆಯಾಗಿಲ್ಲ. ಸರ್ಕಾರದಿಂದ ಬಡವರನ್ನು ತಾರತಮ್ಯದಿಂದ ಕಂಡು ಶೋಷಿಸಲಾಗುತ್ತಿದೆ. ಇಂಥವರ ಪರವಾಗಿ PWGಗೆ ಸೇರಿದ ಮಾವೋವಾದಿಗಳು ಅಥವ ನಕ್ಸಲೀಯರು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ. ಉದಾ: ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಬುಡಕಟ್ಟು ಪರವಾದ ಹೋರಾಟ.
ಭಯೋತ್ಪಾದನೆಗೆ ಕಾರಣಗಳಾಗಿವೆ.
ಪ್ರಜಾಪ್ರಭುತ್ವಕ್ಕೆ ಭಯೋತ್ಪಾದನಾ ಚಟುವಟಿಕೆ ಹೇಗೆ ತೊಡಕಾಗಿದೆ?
ಉ: ಭಯೋತ್ಪಾದನೆ ಇಂದು ಜಾಗತಿಕ ಸವಾಲಾಗಿದೆ. ಭಾರತವೂ ಸಹ ಭಯೋತ್ಪಾದಕರಿಂದ ಅನೇಕ ಬಾರಿ ತೊಂದರೆಗೊಳಗಾಗಿದೆ. ಇದರಿಂದ ಭಾರತ ಪ್ರಜಾಪ್ರಭುತ್ವ ಕಳೆಗುಂದುತ್ತಿದೆ. ಈ ಕೆಳಗಿನ ಅಂಶಗಳ ಹಿನ್ನೆಲೆಯಲ್ಲಿ ಭಯೋತ್ಪಾದನೆ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ತೊಡಕಾಗಿರುವುದನ್ನು ಅರಿಯಬಹುದಾಗಿದೆ.
A ಆಡಳಿತ ಯಂತ್ರಕ್ಕೆ ಅಡ್ಡಿ: ಪ್ರಜಾಪ್ರಭುತ್ವಕ್ಕೆ ಪ್ರಗತಿ ಅಗತ್ಯ. ಆಡಳಿತ ಯಂತ್ರವು ಪ್ರಗತಿಗಾಗಿ ಗುರಿಗಳನ್ನು ಹಾಕಿಕೊಂಡು ಕಾರ್ಯ ನಿರ್ವಹಿಸುತ್ತದೆ. ಭಯೋತ್ಪಾದಕರು ಆಡಳಿತ ನಡೆಸುವ ಅಧಿಕಾರಿ ಅಥವ ರಾಜಕಾರಣಿಗಳನ್ನು ಅಪಹರಿಸಿ ಬೆದರಿಸಿ ಆಡಳಿತವನ್ನು ಕುಂಟಿತಗೊಳಿಸುವರು. ಜೊತೆಗೆ ಭಯೋತ್ಪಾದಕರ ಚಟುವಟಿಕೆಯಿಂದ ಆಡಳಿತ ಹದಗೆಟ್ಟು ಗುರಿಗಳನ್ನು ತಲುಪಲಾಗುವುದಿಲ್ಲ. ಆಗ ತೊಂದರೆಗೊಳಗಾದ ಜನರಿಂದ ಟೀಕೆಗೊಳಗಾಗಿ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ.
B, ಸಂವಿಧಾನಕ್ಕೆ ಗೌರವವಿಲ್ಲ: ಭಯೋತ್ಪಾದಕರು ಸಂವಿಧಾನದ ಚೌಕಟ್ಟನ್ನು ಮೀರಿದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇದರಿಂದ ಪ್ರಜೆಗಳ ದೈನಂದಿನ ಜೀವನಕ್ಕೆ ತೊಂದರೆಯಾಗುತ್ತದೆ. ಸರ್ಕಾರ ಕೆಲವೊಮ್ಮೆ ಭಯೋತ್ಪಾದಕರ ಒತ್ತಡಕ್ಕೆ ಮಣಿದು ಸಂವಿಧಾನಬಾಹೀರ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಉದಾ: ಕಂದಹಾರ ವಿಮಾನ ಅಪಹರಣದ ವೇಳೆ ಭಾರತ ಸರ್ಕಾರ ಕೆಲವರನ್ನು ಬಿಡುಗಡೆ ಮಾಡಿದ್ದು. ಇಂತಹ ಬೆಳವಣಿಗೆಯಿಂದ ಪ್ರಜೆಗಳು ಪ್ರಜಾಪ್ರಭುತ್ವದಲ್ಲಿನ ನಂಬಿಕೆ ಕಳೆದುಕೊಳ್ಳುತ್ತಾರೆ.
C ಮಾನವ ಹಕ್ಕುಗಳ ಉಲ್ಲಂಘನೆ: ತನ್ನ ಪ್ರಜೆಗಳ ವಿವಿಧ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಸರ್ಕಾರ ಕಾಪಾಡಬೇಕಾಗುತ್ತದೆ. ಭಯೋತ್ಪಾದಕರು ಸರ್ಕಾರದ ಗಮನವನ್ನು ತಮ್ಮೆಡೆ ಸೆಳೆಯಲು ಕಾನೂನು ಉಲ್ಲಂಘಿಸಿ ಹಿಂಸಾಚಾರ ನಡೆಸುತ್ತಾರೆ. ಆಗ ಪ್ರಜೆಗಳು ತಮ್ಮ ಜೀವ, ಅಂಗಾಂಗ, ಆಸ್ತಿಪಾಸ್ತಿಯನ್ನು ದಾಳಿಯಲ್ಲಿ ಕಳೆದುಕೊಳ್ಳುತ್ತಾರೆ. ಇಂತಹ ದಾಳಿಗಳನ್ನು ತಡೆಯದ ಸರ್ಕಾರದ ವಿರುದ್ಧ ಜನರು ಹೋರಾಟಕ್ಕೆ ಇಳಿಯುತ್ತಾರೆ. ಆಗ ಪ್ರಜಾಪ್ರಭುತ್ವ ನಶಿಸುತ್ತದೆ ಉದಾ ಜಮ್ಮು ಕಾಶ್ಮೀರದಲ್ಲಿ ನಿರಂತರ ಭಯೋತ್ಪಾದಕ ದಾಳಿಗೆ ಒಳಗಾದ ಜನರು ನಡೆಸಿರುವ ಪ್ರತಿಭಟನೆಗಳು
D ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು: ಪ್ರಜಾಪ್ರಭುತ್ವದ ಗುರಿ ಸಾಧನೆಗೆ ಚುನಾವಣೆಗಳು ಅಗತ್ಯವಾಗಿವೆ. ಆದರೆ ಭಯೋತ್ಪಾದಕರು ಚುನಾವಣಾ ಅಧಿಕಾರಿಗಳ ಅಪಹರಣ, ಚುನಾವಣಾ ಸಾಮಗ್ರಿಗಳ ನಾಶ, ಚುನಾವಣಾ ಸಮಯದಲ್ಲಿ ಬಾಂಬ್ ಸ್ಪೋಟ ಮುಂತಾದ ಚಟುವಟಿಕೆಗಳಿಂದ ಚುನಾವಣೆ ಹಾಳುಮಾಡುತ್ತಾರೆ. ಜೊತೆಗೆ ಭಯೋತ್ಪಾದನಾ ಕ್ರುತ್ಯಗಳಿಂದ ಅಶಾಂತಿ ಉಂಟಾಗಿ ನಿರ್ದಿಷ್ಟ ಕಾಲಕ್ಕೆ ನಡೆಯಬೇಕಾದ ಚುನಾವಣೆಗಳು ನಡೆಯದಾಗುತ್ತವೆ. ಉದಾ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ಮುಂದೂಡಲಾದ ಚುನಾವಣೆಗಳು. ನಿಯತಕಾಲಿಕ ಚುನಾವಣೆಗಳು ಜರುಗದೇ ಪ್ರಜಾಪ್ರಭುತ್ವ ಶಿಥಿಲಗೊಳ್ಳುತ್ತಿದೆ.
E ಆರ್ಥಿಕ ಬೆಳವಣಿಗೆಗೆ ಅಡ್ಡಿ: ಪ್ರಜಾಪ್ರಭುತ್ವದ ಯಶಸ್ಸು ಜನರ ಪ್ರಗತಿಯನ್ನು ಅವಲಂಬಿಸುತ್ತದೆ. ಪ್ರಗತಿ ಉಂಟಾಗಲು ಭಯೋತ್ಪಾದನೆ ಅಡ್ಡಿಯಾಗಿದೆ. ಇಂದು ಸೈನ್ಯ ಮತ್ತು ಪೋಲಿಸ್ ಪಡೆಯನ್ನು ಬಲ ಪಡಿಸಲು ಹೆಚ್ಚಿನ ಹಣ ಪೋಲಾಗುತ್ತಿದೆ. ಭಯೋತ್ಪಾದಕರ ಬೆದರಿಕೆಯಿಂದ ಪ್ರಮುಖರಿಗೆ ನೀಡುವ ಆಧುನಿಕ ಭದ್ರತೆಯಿಂದ ಅಪಾರ ಹಣ ನಾಶವಾಗುತ್ತಿದೆ. ಅಲ್ಲದೇ ಭಯೋತ್ಪಾದಕರ ದಾಳಿಯಿಂದ ಪ್ರವಾಸೋದ್ಯ್ಮ, ಬಂಡವಾಳ ಹೂಡಿಕೆ, ವ್ಯಾಪಾರ ವಹಿವಾಟು ಕಡಿಮೆಯಾಗಿ ಆರ್ಥಿಕ ದುಸ್ಥಿತಿ ಉಂಟಾಗುತ್ತದೆ. ಆಗ ಸೌಲಭ್ಯಗಳಿಂದ ವಂಚಿತರಾಗುವ ಜನರು ಸರ್ಕಾರವನ್ನು ಪ್ರತಿಭಟಿಸತೊಡಗಿ ಪ್ರಜಾಪ್ರಭುತ್ವ ನಾಶವಾಗುತ್ತದೆ.
ಭಯೋತ್ಪಾದನೆಯ ನಿವಾರಣೆಗೆ ಕೈಗೊಳ್ಳಲಾದ ಶಾಸನೀಯ ಕ್ರಮಗಳನ್ನು ವಿವರಿಸಿ.
ಉ: ಭಾರತದಲ್ಲಿ ಸರ್ಕಾರಗಳು ಭಯೋತ್ಪಾದನೆ ಚಟುವಟಿಕೆಗಳನ್ನು ಆರಂಭದಲ್ಲಿಯೇ ತಡೆಯಲು ನಾನಾ ಕಾನೂನುಗಳನ್ನು ಜಾರಿಗೊಳಿಸಿದೆ. 1950ರಲ್ಲಿ ಕಾನೂನು ವಿರೋಧಿ ಚಟುವಟಿಕೆಗಳ ನಿಯಂತ್ರಣಾ ಕಾಯಿದೆ [UAPA] ಜಾರಿಗೊಳಿಸಲಾಯಿತು. ಮುಂದೆ 1971ರಲ್ಲಿ ಆಂತರಿಕ ಭದ್ರತಾ ನಿರ್ವಹಣಾ ಕಾಯಿದೆ [MISA] ಅಸ್ತಿತ್ವಕ್ಕೆ ಬಂದು ಜನತಾ ಸರ್ಕಾರದಿಂದ ರದ್ದಾಯಿತು. ಬಳಿಕ 1980ರಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆ [NSA] ಜಾರಿಗೊಂಡಿತು. ನಂತರ 1987ರಲ್ಲಿ ಭಯೋತ್ಪಾದನೆ ಮತ್ತು ವಿಚ್ಚಿದ್ರಕಾರಿ ಚಟುವಟಿಕೆಗಳ ನಿಯಂತ್ರಣ ಕಾಯಿದೆ [TADA] ಜಾರಿಗೊಳಿಸಲಾಯಿತು. 2001ರಲ್ಲಿ ಭಯೋತ್ಪಾದಕರ ಬೆದರಿಕೆ ಹೆಚ್ಚಾದಾಗ ಭಯೋತ್ಪಾದನಾ ನಿಯಂತ್ರಣ ಕಾಯಿದೆ [POTA ] ಜಾರಿಗೊಂಡಿತು. POTA ಅನ್ನು 2008ರಲ್ಲಿ ರದ್ದುಗೊಳಿಸಿ ಮನಮೋಹನ ಸಿಂಗ್ ಸರ್ಕಾರ ಕಾನೂನು ವಿರೋಧಿ ಚಟುವಟಿಕೆಗಳ ನಿಯಂತ್ರಣ ಕಾಯಿದೆಗೆ ಹೊಸ ರೂಪ ನೀಡಿ ಜಾರಿಗೊಳಿಸಿತು. ಇದರ ಪ್ರಮುಖ ಅಂಶಗಳು ಕೆಳಗಿನಂತಿವೆ.
A ಭಾರತದ ಏಕತೆ ಹಾಗು ಅಖಂಡತೆಯನ್ನು ಹಾಳು ಮಾಡುವ, ಜನರಲ್ಲಿ ಹಿಂಸೆಯ ಮೂಲಕ ಭಯ ಹುಟ್ಟಿಸುವ ಅಥವ ದೇಶದೊಳಗೆ ಇಲ್ಲವೇ ವಿದೇಶಗಳಲ್ಲಿ ಭೀತಿಯುಂಟು ಮಾಡುವುದು ಈ ಕಾಯಿದೆಯ ಸೆಕ್ಶನ್ 15ರಂತೆ ಭಯೋತ್ಪಾದನಾ ಚಟುವಟಿಕೆಯಾಗಿದೆ.
B ಭಯೋತ್ಪಾದಕರಿಗೆ ಸಹಾಯ ಮಾಡುವ ವ್ಯಕ್ತಿಗಳಿಗೆ ಹತ್ತು ವರ್ಷ ಸೆರೆವಾಸ ಅಥವ ದಂಡ ವಿಧಿಸುವ ಮೂಲಕ ಶಿಕ್ಷಿಸಲು ಅವಕಾಶವಿದೆ.
C ಭಯೋತ್ಪಾದನೆಗೆ ಅಗತ್ಯವಾದ ನೆರವು ನೀಡುವ ಅಥವ ವಂತಿಕೆ ಸಂಗ್ರಹಿಸುವವರಿಗೆ ಸೆರೆವಾಸ, ದಂಡ ಅಥವ ಜೀವಾವಧಿ ಶಿಕ್ಷೆ ನೀಡಲು ಅವಕಾಶವಿದೆ.
D ಭಯೋತ್ಪಾದನೆಗೆ ವ್ಯಕ್ತಿಗಳನ್ನು ನೇಮಿಸುವುದು ಅಥವ ತರಬೇತಿಗೊಳಿಸುವುದು ಅಪರಾಧವಾಗಿದ್ದು ಅಂಥವರಿಗೆ ಶಿಕ್ಷೆ ವಿಧಿಸಬಹುದಾಗಿದೆ.
E ಶಂಕಿತ ಭಯೋತ್ಪಾದಕರನ್ನು ಬಂಧಿಸಿ 90 ದಿನಗಳವರೆಗೆ ಅಗತ್ಯವಿದ್ದಲ್ಲಿ 180 ದಿನಗಳವರೆಗೆ ತನಿಖೆಗಾಗಿ ನ್ಯಾಯಾಂಗ ಬಂಧನದಲ್ಲಿಡಬಹುದಾಗಿದೆ.
F ಬಂಧಿತ ಭಯೋತ್ಪಾದಕನ ವಿರುದ್ಧ ಸಾಕಷ್ಟು ಸಾಕ್ಶಾಧಾರಗಳಿದ್ದಲ್ಲಿ ಆತನಿಗೆ ಜಾಮೀನು ನೀಡಲು ಅವಕಾಶವಿಲ್ಲ.
G ಭಯೋತ್ಪಾದನಾ ಸಂಘಟನೆಗೆ ಸೇರಿದ ಹಣ, ಆಸ್ತಿ ಅಥವ ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ.
* ಸಾಮಾಜಿಕ ಮತ್ತು ಆರ್ಥಿಕ ಕ್ರಮಗಳು
ಉ: ಭಾರತದಿಂದ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಕೇವಲ ಶಾಸನೀಯ ಕ್ರಮಗಳಿಂದ ಸಾಧ್ಯವಿಲ್ಲ. ಕೆಲ ಸಾಮಾಜಿಕ ಮತ್ತು ಆರ್ಥಿಕ ಕ್ರಮಗಳು ಭಯೋತ್ಪಾದನೆ ಹೋಗಲಾಡಿಸಲು ಅಗತ್ಯ. ಸರ್ಕಾರ ಈ ನಿಟ್ಟಿನಲ್ಲಿ ಕೈಗೊಂಡಿರುವ ಹಾಗು ಕೈಗೊಳ್ಳಬೇಕಾದ ಕ್ರಮಗಳು ಕೆಳಗಿನಂತಿವೆ.
A ಸಾಮಾಜಿಕ ಜೀವನಕ್ಕೆ ಅವಕಾಶ: ಭಯೋತ್ಪಾದನೆಯಿಂದ ಬೇಸತ್ತ ಕೆಲವರು ಶಸ್ತ್ರಾಸ್ತ್ರ ತ್ಯಜಿಸಲು ಮುಂದಾಗುವರು. ಆಗ ಸಮಾಜ ಅವರ ನಿರ್ಧಾರಗಳನ್ನು ಗೌರವಿಸಬೇಕು. ಜೊತೆಗೆ ತಮ್ಮ ನಡುವೆ ಜೀವನ ನಡೆಸಲು ಅವಕಾಶ ನೀಡಬೇಕು. ಉದಾ: ಪೂಲನ್ದೇವಿಗೆ ನೀಡಿದ ಅವಕಾಶ. ಇದರಿಂದ ಹೆಚ್ಚು ಹೆಚ್ಚು ಭಯೋತ್ಪಾದಕರು ಪರಿವರ್ತನೆಗೊಂಡು ಭಯೋತ್ಪಾದನೆ ಮಾಯವಾಗುತ್ತದೆ.
B ಉತ್ತಮ ಶಿಕ್ಷಣ ನೀಡಿಕೆ: ಅನಕ್ಷರಸ್ಥರು ಸುಲಭವಾಗಿ ಭಯೋತ್ಪಾದನೆಗೆ ಮುಂದಾಗುತ್ತಾರೆ. ಜೊತೆಗೆ ವಿವೇಚನಾ ರಹಿತರಾಗಿ ದುಶ್ಕ್ರುತ್ಯಗಳನ್ನು ಮಾಡುತ್ತಾರೆ. ಆದ್ದರಿಂದ ಸರ್ಕಾರ ಉತ್ತಮ ಶಿಕ್ಷಣಕ್ಕೆ ಪ್ರೋತ್ಸಾಹ ಒದಗಿಸಬೇಕಾಗಿದೆ. ಬಾಲ್ಯದಿಂದಲೇ ನೈತಿಕತೆ, ಮಾನವೀಯ ಮೌಲ್ಯ, ರಾಷ್ಟ್ರೀಯತೆ ಮೂಡಿಸುವ ಶಿಕ್ಷಣವನ್ನು ಸರ್ಕಾರ ಒದಗಿಸಬೇಕು. ಇದರಿಂದ ಯುವಕರಲ್ಲಿ ವಿವೇಚನಾ ಶಕ್ತಿ ಬೆಳೆದು ಭಯೋತ್ಪಾದನಾ ಸಿದ್ಧಾಂತದತ್ತ ಆಕರ್ಷಿತರಾಗುವುದಿಲ್ಲ. ಇದರಿಂದ ಭಯೋತ್ಪಾದನೆ ನಶಿಸುತ್ತದೆ.
C ಉದ್ಯೋಗ ಕಲ್ಪಿಸುವುದು: ವಿದ್ಯಾವಂತ ಯುವಕರಿಗೆ ಉದ್ಯೋಗ ದೊರೆಯದೇ ನಿರುದ್ಯೋಗಿಗಳಾಗುತ್ತಾರೆ. ಪರಾವಲಂಬಿಯಾಗಿ ಬಾಳಲಾಗದ ಇವರು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗುತ್ತಾರೆ. ಉದಾ: ನಕ್ಸಲೀಯರಲ್ಲಿ ಅನೇಕರು ಉನ್ನತ ವಿದ್ಯಾಭ್ಯಾಸ ಮಾಡಿದವರಿರುವುದು. ಸರ್ಕಾರ ಯುವಕರಿಗೆ ಉದ್ಯೋಗ ಒದಗಿಸಲು ಮುಂದಾಗಬೇಕು. ಸಾಧ್ಯವಾಗದಿದ್ದಲ್ಲಿ ಖಾಸಗಿ ಉದ್ಯಮಗಳಲ್ಲಿ ಉದ್ಯೋಗ ದೊರಕಲು ಕ್ರಮ್ ಕೈಗೊಳ್ಳಬೇಕು.ಆಗ ಯುವಕರು ದೊರೆಯದೇ ಭಯೋತ್ಪಾದನೆ ಕಡಿಮೆಯಾಗುತ್ತದೆ.
D ಹಣಕಾಸಿನ ಸಹಾಯ: ಸರ್ಕಾರ ಎಲ್ಲ ಯುವಕರಿಗೆ ಉದ್ಯೋಗ ಒದಗಿಸುವುದು ಅಸಾಧ್ಯ. ಆಗ ವಿವಿಧ ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡಲು ಮುಂದಾಗಬೇಕು ಉದಾ: ಭಾರತದಲ್ಲಿ JRY, NREGP ಯೋಜನೆಗಳ ಜಾರಿ. ಆಗ ಆರ್ಥಿಕ ಸ್ವಾವಲಂಬನೆ ಹೊಂದುವ ಯುವಕರು ಭಯೋತ್ಪಾದನಾ ಗುಂಪುಗಳ ಆಮಿಶ್ಯಗಳಿಗೆ ಬಲಿಯಾಗದೇ ಭಯೋತ್ಪಾದನೆ ಅವನತಿಯಾಗುತ್ತದೆ.
E ಆರ್ಥಿಕ ಸಮಾನತೆ ಸ್ಥಾಪನೆ: ಆರ್ಥಿಕ ಅಸಮಾನತೆಯಿಂದ ಬೇಸತ್ತ ಕೆಲವರು ಭಯೋತ್ಪಾದನೆಗೆ ಮುಂದಾಗುತ್ತಾರೆ. ಆದ್ದರಿಂದ ಸರ್ಕಾರಗಳು ಸಮಾಜದಲ್ಲಿ ಆರ್ಥಿಕ ಅಂತರ ಕಡಿಮೆ ಮಾಡಲು ಕೈಗಾರಿಕೆಗಳನ್ನು ವಿಕೇಂದ್ರಿಕರಿಸಿವೆ. ಜೊತೆಗೆ ಸಂಪತ್ತು ಕೆಲವರಲ್ಲಿ ಮಾತ್ರ ಸಂಗ್ರಹವಾಗದಂತೆ ಕ್ರಮಗಳನ್ನು ಜಾರಿಗೊಳಿಸಿವೆ. ಇದರಿಂದ ಅಸಮಧಾನ ಕಡಿಮೆಯಾಗಿ ಭಯೋತ್ಪಾದನೆ ಮರೆಯಾಗುತ್ತದೆ.
F ಪುನರ್ವಸತಿಗೆ ಕ್ರಮ: ಸರ್ಕಾರ ಅಭಿವ್ರುದ್ಧಿಗಾಗಿ ಆಣೆಕಟ್ಟು, ಕೈಗಾರಿಕೆ, ವಿಮಾನ ನಿಲ್ದಾಣ, ರಸ್ತೆ ಹಾಗು ರೈಲು ಮಾರ್ಗಗಳಿಗೆ ಮುಂದಾಗುತ್ತದೆ. ಇದರಿಂದ ಕೆಲವರು ತಮ್ಮ ಮನೆ ಅಥವ ಜಮೀನುಗಳನ್ನು ಕಳೆದುಕೊಳ್ಳುತ್ತಾರೆ. ಅವರಿಗೆ ಸೂಕ್ತ ಸಮಯದಲ್ಲಿ ಸಾಕಷ್ಟು ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಬೇಕು. ಇದರಿಂದ ಸಂಭವನೀಯ ಭಯೋತ್ಪಾದನಾ ಕ್ರುತ್ಯಗಳನ್ನು ತಡೆಯಬಹುದಾಗಿದೆ.
G ಪ್ರಾದೇಶಿಕ ಅಸಮತೋಲನ ಹೋಗಲಾಡಿಸುವಿಕೆ: ಸರ್ಕಾರ ಕೆಲ ನಿರ್ಲಕ್ಷಿತ ಪ್ರದೇಶ ಮತ್ತು ಗಡಿ ಪ್ರದೇಶಗಳ ಅಭಿವ್ರುದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ಆ ಭಾಗದ ಅಸಮಾಧಾನವನ್ನು ಹೋಗಲಾಡಿಸಿ ಉಗ್ರವಾದದ ಸಂಭವ ತಡೆಯಬಹುದು. ಇಲ್ಲವಾದಲ್ಲಿ ಭಯೋತ್ಪಾದಕರು ತಮ್ಮ ಚಟುವಟಿಕೆ ಕೈಗೊಳ್ಳಲು ಮುಂದಾಗುವರು.
11. ಬ್ರಶ್ಟಾಚಾರ ಎಂದರೇನು? ಭಾರತದಲ್ಲಿ ಅದಕ್ಕೆ ಕಾರಣಗಳನ್ನು ಚರ್ಚಿಸಿರಿ?
ಉ: ಸಾರ್ವಜನಿಕ ಹುದ್ದೆಯಲ್ಲಿರುವವರು ತಮ್ಮ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದಕ್ಕೆ ಬ್ರಷ್ಟಾಚಾರ ಎನ್ನುವರು. ಲಂಚ ಸ್ವೀಕಾರ,ಕಾಣಿಕೆ ಪಡೆದುಕೊಳ್ಳುವುದು,ಸ್ವಜನ ಪಕ್ಷಪಾತ ತೋರುವುದು,ಖಾಸಗಿ ಕಾರ್ಯಗಳಿಗೆ ಸಾರ್ವಜನಿಕ ವ್ಯಕ್ತಿ ವಸ್ತುಗಳನ್ನು ಬಳಸಿಕೊಳ್ಳುವುದು ಮುಂತಾದವುಗಳು ಬ್ರಷ್ಟಾಚಾರದ ರೂಪಗಳಾಗಿವೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ ದುರಾಸೆ, ಸ್ವಾರ್ಥ ಪರತೆ, ಬ್ರಷ್ಟ ರಾಜಕಾರಣಿಗಳು, ನೈತಿಕ ಕೊರತೆ ಮುಂತಾದವುಗಳು.
12. ಲೋಕಪಾಲ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ?
ಉ: ರಚನೆ
* ಸದಸ್ಯರ ಸಂಖೆ: ಒಟ್ಟು ಒಂಬತ್ತು ಸದಸ್ಯರಿರುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶ ಇದರ ಮುಖ್ಯಸ್ಥನಾಗಿರುತ್ತಾನೆ.
* ನೇಮಕ: ರಾಷ್ಟ್ರಪತಿ ನೇಮಿಸುತ್ತಾನೆ. ಆದರೆ ಪ್ರಧಾನಿ, ಸ್ಪೀಕರ್, ವಿರೋಧ ಪಕ್ಷದ ನಾಯಕ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನೊಡನೆ ಸಮಾಲೋಚಿಸಬೇಕು.
* ಅಧಿಕಾರವಧಿ: ಐದು ವರ್ಷಗಳು.
* ಅಧಿಕಾರ ವ್ಯಾಪ್ತಿ: ಪ್ರಧಾನಿ, ಕೇಂದ್ರ ಮಂತ್ರಿಗಳು, ಲೋಕಸಭಾ ಸಂಸತ್ತಿನ ಸದಸ್ಯರು, ರಾಜ್ಯ ಶಾಸಕಾಂಗ ಸದಸ್ಯರು, ಕೇಂದ್ರ ಸರ್ಕಾರದ ಎಲ್ಲ ನೌಕರರು ಸೇರಿರುತ್ತಾರೆ.
ಕಾರ್ಯಗಳು
* ಸರ್ಕಾರಿ ಉದ್ಯೋಗಿಗಳ ಬ್ರಷ್ಟಾಚಾರ ಕುರಿತಾದ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುವುದು.
* ವಿದೇಶದ ವಂತಿಕೆ ಪಡೆಯುವ ಸಂಸ್ಥೆಗಳ ಮೇಲಿನ ಆರೋಪಗಳನ್ನು ಪರಿಶೀಲಿಸುವುದು.
* ತನಗೆ ವಹಿಸುವ ಯಾವುದೇ ವಿಚಾರದ ತನಿಖೆ ನಡೆಸುವುದು.
* ಬ್ರಷ್ಟಾಚಾರದಿಂದ ಗಳಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು.
* ಬ್ರಷ್ಟಾಚಾರ ಸಾಬೀತಾದರೆ ಎರಡು ವರ್ಷ ಶಿಕ್ಷೆ ವಿಧಿಸಲು ಅವಕಾಶವಿದೆ.
13. ಕರ್ನಾಟಕದ ಲೋಕಾಯುಕ್ತದ ಕಾರ್ಯಗಳನ್ನು ವಿವರಿಸಿ?
14. ಬ್ರಷ್ಟಾಚಾರವು ಹೇಗೆ ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ?
ಉ: ಈ ಕೆಳಗಿನ ಅಂಶಗಳ ಹಿನ್ನೆಲೆಯಲ್ಲಿ ಬ್ರಷ್ಟಾಚಾರ ಪ್ರಜಾಪ್ರಭುತ್ವಕ್ಕೆ ತೊಡಕಾಗಿದೆ.
* ಶಕ್ತಿ ರಾಜಕೀಯ:
* ರಾಜಕೀಯ ಅಪರಾಧಿಕರಣ:
* ಅಧಿಕಾರಶಾಹಿಯ ಅನೈತಿಕತೆ:
* ಸಾರ್ವಜನಿಕ ನ್ಯಾಯದ ಉಲ್ಲಂಘನೆ:
* ಆರ್ಥಿಕ ಪ್ರಗತಿಗೆ ಧಕ್ಕೆ:
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ