ಗುರುವಾರ, ಸೆಪ್ಟೆಂಬರ್ 10, 2020

meaning and definition of political science

ಅರ್ಥ: ರಾಜ್ಯಶಾಸ್ತ್ರ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ಪೊಲಿಟಿಕಲ್ ಸೈನ್ಸ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳು ಲ್ಯಾಟಿನ್ ಭಾಷೆಯ ಪೊಲಿಟಿಕಸ್ ಅಥವ ನಗರ ರಾಜ್ಯ ಎಂಬರ್ಥವುಳ್ಳ ಗ್ರೀಕ್ ಭಾಷೆಯ ಪಾಲಿಸ್ ಪದದಿಂದ ಉತ್ಪತ್ತಿ ಹೊಂದಿವೆ. ಪ್ರಾಚೀನ ಗ್ರೀಕ್ ನಗರ ರಾಜ್ಯಗಳ ವಿವಿಧ ಚಟುವಟಿಕೆಗಳ ಅಧ್ಯಯನ ಮಾಡುವ ವಿಷಯವನ್ನು ಅಂದು ಪಾಲಿಟಿಕ್ಸ್ ಎಂಬುದಾಗಿ ಗುರುತಿಸಲಾಗಿತ್ತು. ಹೀಗಾಗಿ ಅರಿಸ್ಟಾಟಲ್ನು ತನ್ನ ಗ್ರಂಥಕ್ಕೆ ದಿ ಪಾಲಿಟಿಕ್ಸ್ ಎಂಬ ಶಿರ್ಶಿಕೆ ನೀಡಿದ್ದನು. ಜೊತೆಗೆ ಪ್ರಾಚೀನ ಗ್ರೀಕರು ನಗರ ರಾಜ್ಯಗಳ ನಾನಾ ಚಟುವಟಿಕೆ ಅಥವ ವ್ಯವಹಾರಗಳನ್ನು ೊಳಗೊಂಡಂತೆ ಸಮಗ್ರ ರಾಜಕೀಯ ವಿದ್ಯಮಾನಗಳಿಗೆ ಪೊಲಿಟಿಕಾ ಎನ್ನುತ್ತಿದ್ದರು. ಪುಟ್ಟ ನಗರ ರಾಜ್ಯಗಳ ಬದಲು ಪ್ರಸ್ತುತ ಬೃಹತ್ ರಾಷ್ಟ್ರ ರಾಜ್ಯಗಳು ಅಸ್ತಿತ್ವದಲ್ಲಿದ್ದು ರಾಜಕೀಯದ ಗ್ರೀಕರ ಪರಿಕಲ್ಪನೆ ಇಂದಿಗೂ ಪ್ರಸ್ತುತವಾಗಿದೆ. ಆದರೆ ಇಂದು ಪ್ರಾಚೀನ ರಾಜಕೀಯವು ವೈಜ್ಙಾನಿಕತೆ ಮೈಗೂಡಿಸಿಕೊಂಡು ರಾಜ್ಯಶಾಸ್ತ್ರವಾಗಿ ಗುರುತಿಸಲ್ಪಟ್ಟಿದ್ದು ಸಮಾಜ ವಿಜ್ಙಾನಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ..

ಸಾಮಾನ್ಯ ಅರ್ಥದಲ್ಲಿ ಮಾನವನ ರಾಜಕೀಯ ಚಟುವಟಿಕೆಗಳನ್ನು ಅಭ್ಯಸಿಸುವ ಶಾಸ್ತ್ರವೇ ರಾಜ್ಯಶಾಸ್ತ್ರ. ವಿಶಾಲಾರ್ಥದಲ್ಲಿ ರಾಜ್ಯ ಮತ್ತು ಸರ್ಕಾರಗಳ ವಿವಿಧ ವ್ಯವಹಾರಗಳ ವ್ಯವಸ್ಥಿತ ಅಧ್ಯಯನ ವಿಷಯವನ್ನು ರಾಜ್ಯಶಾಸ್ತ್ರ ಎನ್ನಬಹುದು. ರಾಜ್ಯಶಾಸ್ತ್ರವು ಮಾನವ ರಾಜ್ಯ ಮತ್ತು ಸರ್ಕಾರಗಳೊಡನೆ ಹೊಂದಿರುವ ಸಂಬಂಧಗಳನ್ನು ಅಧ್ಯಯನ ಮಾಡುವ ವಿಷಯವಾಗಿದೆ. ರಾಜ್ಯವೇ ರಾಜ್ಯಶಾಸ್ತ್ರದ ಕೇಂದ್ರಬಿಂದು ವಿಷಯವಸ್ತುವಾಗಿದ್ದರೂ ರಾಜ್ಯಕ್ಕೆ ಪೂರಕವಾದ ಸರ್ಕಾರ, ಸಂವಿಧಾನ, ಚುನಾವಣೆ, ರಾಯಭಾರ, ಯುದ್ಧ ಮುಂತಾದ ಅಂಶಗಳನ್ನೂ ಅದು ಅಭ್ಯಸಿಸುತ್ತದೆ. ಇದರೊಡನೆ ವ್ಯಕ್ತಿಗಳ ರಾಜಕೀಯ ಸ್ವಭಾವ ಹಾಗು ವರ್ತನೆಗಳ ಮೇಲೆಯೂ ರಾಜ್ಯಶಾಸ್ತ್ರ ಬೆಳಕು ಚೆಲ್ಲುತ್ತದೆ.

ವ್ಯಾಖ್ಯೆಗಳು: ರಾಜ್ಯಶಾಸ್ತ್ರ ಕುರಿತಂತೆ ರಾಜನೀತಿಜ್ಙರಲ್ಲಿ ಭಿನ್ನಾಭಿಪ್ರಾಯಗಳಿವೆ. ಸರ್ವಮಾನ್ಯ ಅಥವ ಏಕರೂಪದ ವಿವರಣೆಯನ್ನು ನೀಡುವಲ್ಲಿ ರಾಜನೀತಿಜ್ಙರು ಸಫಲರಾಗಿಲ್ಲ. ರಾಜ್ಯಶಾಸ್ತ್ರ ಎಂದರೇನು? ಎಂಬ ಪ್ರಶ್ನೆಗೆ ತಜ್ಙರು ನೀಡಿರುವ ಪ್ರಮುಖ ವ್ಯಾಖ್ಯಾನಗಳು ಕೆಳಗಿನಂತಿವೆ.
ಜೆ. ಡಬ್ಲ್ಯೂ. ಗಾರ್ನರ್ ಪ್ರಕಾರ "ರಾಜ್ಯದೊಡನೆ ಆರಂಭವಾಗಿ ರಾಜ್ಯದೊಡನೆ ಮುಕ್ತಾಯವಾಗುವ ಅಧ್ಯಯನ ಶಾಸ್ತ್ರವೇ ರಾಜ್ಯಶಾಸ್ತ್ರ"
ರೈಮಂಡ್ ಜೆ. ಗೆಟಲ್ ಪ್ರಕಾರ "ರಾಜ್ಯವು ಹಿಂದೆ ಹೇಗಿತ್ತು ಎಂಬ ಐತಿಹಾಸಿಕ ಅವಲೋಕನ, ರಾಜ್ಯವು ಪ್ರಸ್ತುತ ಹೇಗಿದೆ ಎಂಬ ವಿಶ್ಲೇಷಣೆ ಮತ್ತು ರಾಜ್ಯವು ಮುಂದೆ ಹೇಗಿರಬೇಕು ಎಂಬ ನೈತಿಕ ಚರ್ಚೆಯೇ ರಾಜ್ಯಶಾಸ್ತ್ರ"
ಪಾಲ್ ಜಾನೆಟ್ ಪ್ರಕಾರ "ರಾಜ್ಯದ ಮೂಲಾಧಾರ ಹಾಗು ಸರ್ಕಾರದ ತತ್ವಗಳನ್ನು ವಿವರಿಸುವ ಸಮಾಜ ವಿಜ್ಙಾನಗಳ ಒಂದು ಭಾಗವೇ ರಾಜ್ಯಶಾಸ್ತ್ರ".
ಸರ್ ಜಾನ್ ಸೀಲೆ ಪ್ರಕಾರ "ಅರ್ಥಶಾಸ್ತ್ರ ಆರ್ಥಿಕ ಚಟುವಟಿಕೆಗಳನ್ನು, ಜೀವಶಾಸ್ತ್ರ ಜೀವಿಗಳನ್ನು, ಸಂಖ್ಯಾಶಾಸ್ತ್ರ ಅಂಕಿಸಂಖೆಗಳನ್ನು ಅಭ್ಯಸಿಸುವಂತೆ ಸರ್ಕಾರದ ವಿದ್ಯಮಾನಗಳನ್ನು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ"
ಕ್ಯಾಟಲಿನ್ ಪ್ರಕಾರ "ಸಂಘಟಿತ ಮಾನವ ಸಮಾಜದ ರಾಜಕೀಯ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ"

ಮೇಲ್ಕಂಡ ರಾಜನೀತಿಜ್ಙರ ವಿವಿಧ ವ್ಯಾಖ್ಯಾನಗಳನ್ನು ಅವಲೋಕಿಸಿದಾಗ ರಾಜ್ಯಶಾಸ್ತ್ರ ರಾಜ್ಯ ಮತ್ತು ಸರ್ಕಾರಗಳ ಅಧ್ಯಯನ ನಡೆಸುವ ಶಾಸ್ತ್ರವೆಂಬುದು ಸ್ಪಷ್ಟವಾಗುತ್ತದೆ. ಮುಂದುವರೆದು ರಾಜ್ಯಶಾಸ್ತ್ರವು ರಾಜ್ಯ ಮತ್ತು ಸರ್ಕಾರಗಳಿಗೆ ಸಂಬಂಧಿಸಿದ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ವಿಷಯವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...