Page number 1
ಕೌಟಿಲ್ಯನ ಜೀವನ ಚಿತ್ರಣ:
ಪ್ರಸ್ತಾವನೆ: ಜಗತ್ತಿನ ಶ್ರೇಷ್ಠ ರಾಜಕೀಯ ಚಿಂತಕರಲ್ಲಿ ಕೌಟಿಲ್ಯನೂ ಒಬ್ಬ. ಈತನನ್ನು ಪ್ರಾಚೀನ ಬಾರತದ ರಾಜಕೀಯ ಚಿಂತನೆಯ ಪಿತಾಮಹ ಎಂದು ಪರಿಗಣಿಸಲಾಗಿದೆ. ಕೌಟಿಲ್ಯನ ರಾಜ್ಯಾಡಳಿತ ಮತ್ತು ಸಾರ್ವಜನಿಕ ಜೀವನ ಕುರಿತಾದ ಚಿಂತನೆಗಳು ಅತ್ಯಂತ ಅಮೂಲ್ಯವಾಗಿವೆ. ಜೊತೆಗೆ ಆತನ ಚಿಂತನೆಗಳು ವಾಸ್ತವಿಕತೆಗೆ ಸಮೀಪವಿರುವುದರಿಂದ ಕೌಟಿಲ್ಯನನ್ನು ರಾಜಕೀಯ ವಾಸ್ತವವಾದಿ ಎನ್ನಲಾಗುತ್ತದೆ.
ಕಾಲ ಮತ್ತು ಜನ್ಮ ಸ್ಥಳ: ಕೌಟಿಲ್ಯನ ಕಾಲ ಮತ್ತು ಜನ್ಮ ಸ್ಥಳಗಳನ್ನು ಕುರಿತು ಹೆಚ್ಚಿನ ಆಧಾರಗಳು ಲಭ್ಯವಿಲ್ಲ. ಆದ್ದಾಗ್ಯೂ ಇತಿಹಾಸಕಾರರು ಸಮ್ಮತಿಸುವಂತೆ ಕ್ರಿ. ಪೂ. ೩೫೦ ರಿಂದ ೨೫೦ ರ ನಡುವೆ ಅಂದರೆ ಕ್ರಿ. ಪೂ. ನಾಲ್ಕನೇ ಶತಮಾನದಲ್ಲಿ ಕೌಟಿಲ್ಯ ಬದುಕಿದ್ದನು. ಆಧಾರಗಳಂತೆ ಕೌಟಿಲ್ಯನ ಜನ್ಮ ಸ್ಥಳ ತಕ್ಷಶಿಲೆ ಎಂಬುದಾಗಿ ತಿಳಿದು ಬರುತ್ತದೆ.
ಮೂಲ ಹೆಸರು: ಕೌಟಿಲ್ಯನ ಮೂಲ ಹೆಸರು ಚಾಣುಕ್ಯ ಅಥವ ವಿಷ್ಣು ಗುಪ್ತ ಎಂಬುದಾಗಿ ತಿಳಿದು ಬಂದಿದೆ. ರಾಜಕೀಯದಲ್ಲಿ ಕುಟಿಲ ನೀತಿಯನ್ನು ಬಳಸಲು ಪ್ರಾಧಾನ್ಯತೆ ನೀಡಿದ್ದರಿಂದ ಮತ್ತು ಆ ಕುರಿತಾದ ಉಪನ್ಯಾಸಗಳನ್ನು ನೀಡುತ್ತಿದ್ದರಿಂದ ಕೌಟಿಲ್ಯ ಎಂಬ ಹೆಸರು ಬಂದಿತೆಂದು ನಂಬಲಾಗಿದೆ. ಒಟ್ಟಾರೆ ಕೌಟಿಲ್ಯ, ಚಾಣುಕ್ಯ ಮತ್ತು ವಿಷ್ಣು ಗುಪ್ತ ಕೌಟಿಲ್ಯನ ಹೆಸರುಗಳಾಗಿವೆ.
Page number 2
ವಿದ್ಯಾಭ್ಯಾಸ: ಕೌಟಿಲ್ಯನು ಸುಪ್ರಸಿದ್ಧ ನಳಂದಾ ವಿಶ್ವ ವಿದ್ಯಾ ನಿಲಯದಲ್ಲಿ ಶಿಕ್ಷಣ ಪಡೆದನು. ಈ ಸಮಯದಲ್ಲಿ ಚಂದ್ರಗುಪ್ತ ಮೌರ್ಯ ಕೌಟಿಲ್ಯನ ಸಹಪಾಠಿಯಾಗಿದ್ದ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಸಾಮ್ರಾಜ್ಯ ಸ್ಥಾಪನೆಯಲ್ಲಿ ಪಾತ್ರ: ಕೌಟಿಲ್ಯ ತನ್ನ ಶಿಕ್ಷಣ ಪೂರೈಸಿದ ಬಳಿಕ ನಂದರಸು ಧನನಂದನನ ಆಸ್ಥಾನಕ್ಕೆ ಉದ್ಯೋಗವನ್ನು ಅರಸಿ ಹೋದ. ಅಹಂಕಾರಿಯಾಗಿದ್ದ ಧನನಂದನನು ಕೌಟಿಲ್ಯನನ್ನು ಕುರೂಪವನ್ನು ಹೀಯಾಳಿಸಿ ಉದ್ಯೋಗ ನಿರಾಕರಿಸಿದ. ಅವಮಾನಗೊಂಡ ಕೌಟಿಲ್ಯ ಧನನಂದನನನ್ನು ಅಧಿಕಾರದಿಂದ ಕಿತ್ತೊಗೆಯಲು ನಿರ್ಧರಿಸಿದ. ಜೊತೆಗೆ ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವವರೆಗೆ ಬಿಚ್ಚಿದ ತನ್ನ ಜಡೆಯನ್ನು ಕಟ್ಟುವುದಿಲ್ಲ ಎಂಬುದಾಗಿ ಪ್ರತಿಜ್ಙೆ ಮಾಡಿದ. ಈ ಪ್ರತಿಜ್ಙೆ ಇತಿಹಾಸದಲ್ಲಿ ಚಾಣುಕ್ಯ ಶಪತ ಎಂದೇ ಪ್ರಸಿದ್ಧವಾಗಿದೆ. ಚಂದ್ರಗುಪ್ತನ ನೆರವಿನಿಂದ ಕೌಟಿಲ್ಯ ನಂದ ಮನೆತನವನ್ನು ಸೋಲಿಸಿ ಮೌರ್ಯ ಸಾಮ್ರಾಜ್ಯವನ್ನು ಚಂದ್ರಗುಪ್ತ ಸ್ಥಾಪಿಸಲು ನೆರವಾದನು. ಜೊತೆಗೆ ಚಂದ್ರ ಗುಪ್ತನ ನಿಧನದವರೆಗೆ ಆತನ ಸಲಹೆಗಾರನಾಗಿ ಕಾರ್ಯವೆಸಗಿದನು.
ಕೊನೆಯ ದಿನಗಳು: ಕೌಟಿಲ್ಯ ಕೆಲ ಮೂಲಗಳಂತೆ ಚಂದ್ರಗುಪ್ತನ ಮಗ ಬಿಂದುಸಾರನಿಗೂ ಪ್ರಧಾನ ಸಲಹೆಗಾರನಾಗಿ ಕರ್ತವ್ಯ ನಿರ್ವಹಿಸಿ ನಿಧನ ಹೊಂದಿದನು.
ಅರ್ಥಶಾಸ್ತ್ರ ಕೃತಿ: ಅರ್ಥಶಾಸ್ತ್ರ ಕೌಟಿಲ್ಯ ರಚಿಸಿದ ಮೇರು ಕೃತಿಯಾಗಿದೆ. ೧೯೦೫ ರಲ್ಲಿ ಮೈಸೂರಿನ ಶಾಮಾಶಾಸ್ತ್ರಿ ಎಂಬ ಸಂಶೋಧಕ ತಾಳೆಗರಿಯ ಅರ್ಥಶಾಸ್ತ್ರ ಗ್ರಂಥವನ್ನು ಜಗತ್ತಿಗೆ ಪರಿಚಯಿಸಿದನು. ಪ್ರಾಚೀನ ಭಾರತದಲ್ಲಿ ರಾಜಕೀಯ ಚಿಂತನೆ ಮನುಸ್ಮೃತಿ, ವೇಧಗಳು, ನೀತಿಶಾಸ್ತ್ರಗಳಲ್ಲಿ ಕಂಡು ಬಂದರೂ ಅದಕ್ಕೆ ಪರಿಪೂರ್ಣತೆ ದೊರತದ್ದು ಕೌಟಿಲ್ಯನ ಅರ್ಥಶಾಸ್ತ್ರದ ಮೂಲಕ ಎಂದರೆ ತಪ್ಪಾಗಲಾರದು. ೧೫ ಭಾಗಗಳಿರುವ ಅರ್ಥಶಾಸ್ತ್ರ ಗ್ರಂಥವು ರಾಜ್ಯಾಡಳಿತ ಮತ್ತು ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಚರ್ಚಿಸಿದೆ. ಪ್ರಧಾನವಾಗಿ ಕೌಟಿಲ್ಯ ಅರ್ಥಶಾಸ್ತ್ರದಲ್ಲಿ ಬೆಳಕು ಚೆಲ್ಲಿರುವ ರಾಜಕೀಯ ಕ್ಷೇತ್ರಗಳೆಂದರೆ
Page number 3
ಅ. ಕೇಂದ್ರ ಮತ್ತು ಪ್ರಾಂತೀಯ ಆಡಳಿತಆ.
ಆ. ರಾಜ್ಯದ ಮೂಲಾಂಶಗಳು ಸಪ್ತಾಂಗ ಸಿದ್ಧಾಂತದ ಮೂಲಕ.
ಇ. ಆರ್ಥಿಕಾಭಿವೃದ್ಧಿ.
ಈ. ತೆರಿಗೆ ಮತ್ತು ನಾಣ್ಯ ಪದ್ಧತಿ.
Page number 4
ಉ. ಯುದ್ಧ ಕಲೆ ಶಡ್ಗುಣ್ಯ ಸಿದ್ಧಾಂತದ ಮೂಲಕ.
ಊ. ವಿದೇಶಾಂಗ ವ್ಯವಹಾರಗಳ ನಿರ್ವಹಣೆ ಮಂಡಳ ಸಿದ್ಧಾಂತದ ಮೂಲಕ.
ಋ. ರಾಯಭಾರತ್ವ ಮತ್ತು ಗೂಢಾಚಾರಿಕೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ