ರಾಜ್ಯಶಾಸ್ತ್ರ್ರ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ಪೊಲಿಟಿಕಲ್ ಸೈನ್ಸ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲ ಪದ ಗ್ರೀಕ್ ಭಾಷೆಯ ಪಾಲಿಸ್ ಆಗಿದೆ. ಪಾಲಿಸ್ ಎಂದರೆ ನಗರ ರಾಜ್ಯ ಎಂದರ್ಥ. ರಾಜ್ಯಶಾಸ್ತ್ರ ಸಮಾಜ ವಿಜ್ಞಾನಗಳಲ್ಲಿ ಒಂದಾಗಿದ್ದು ಪ್ರಾಚೀನ ಗ್ರೀಕ್ ನಗರ ರಾಜ್ಯಗಳಷ್ಟು ಹಿಂದಿನ ಇತಿಹಾಸ ಹೊಂದಿದೆ. ಸರಳಾರ್ಥದಲ್ಲಿ ಮಾನವನ ರಾಜಕೀಯ ಚಟುವಟಿಕೆಗಳ ಅಧ್ಯಯನವನ್ನು ರಾಜ್ಯಶಾಸ್ತ್ರ ಎನ್ನಬಹುದಾಗಿದೆ. ವಿಶಾಲಾರ್ಥದಲ್ಲಿ ರಾಜ್ಯ ಮತ್ತು ಸರ್ಕಾರಗಳ ಕುರಿತಾದ ಸಮಗ್ರ ಅಧ್ಯಯನವು ರಾಜ್ಯಶಾಸ್ತ್ರವಾಗಿದೆ. ಇಲ್ಲಿ ಪೌರತ್ವ, ಹಕ್ಕುಗಳು, ಚುನಾವಣೆ, ಸಂವಿಧಾನ, ಸಾರ್ವಜನಿಕ ಆಡಳಿತ, ರಾಯಬಾರ, ಯುದ್ಧ, ಅಂತರರಾಷ್ಟ್ರೀಯ ಸಂಘಟನೆಗಳ ಅಧ್ಯಯನ ಕಂಡು ಬರುತ್ತದೆ. ಪ್ರಾಚೀನ ಗ್ರೀಕ್ನ ಬುದ್ಧಿವಂತ ತ್ರಿವಳಿಗಳೆಂದು ಪರಿಚಿತರಾಗಿರುವ ಸಾಕ್ರಟಿಸ್, ಪ್ಲೇಟೊ ಹಾಗು ಅರಿಸ್ಟಾಟಲ್ ರಾಜ್ಯಶಾಸ್ತ್ರಕ್ಕೆ ಬುನಾದಿ ಹಾಕಿದರು. ಅರಿಸ್ಟಾಟಲ್ ಸಾಕ್ರಟಿಸ್ ಹಾಗು ಪ್ಲೇಟೊರಂತೆ ಸಂವಾದ ರೂಪದಲ್ಲಿ ರಾಜಕೀಯ ವಿಚಾರಗಳನ್ನು ಚರ್ಚಿಸದೇ ತನ್ನ ದಿ ಪಾಲಿಟಿಕ್ಸ್ ಗ್ರಂಥದಲ್ಲಿ ವೈಜ್ಞಾನಿಕವಾಗಿ ರಾಜಕೀಯ ವಿಚಾರಗಳನ್ನು ಮಂಡಿಸಿ ರಾಜ್ಯಶಾಸ್ತ್ರದ ಪಿತಾಮಹ ಎನಿಸಿದನು. ಮುಂದೆ ಇಟಲಿಯ ನಿಕೋಲೊ ಮೆಕೆವಲ್ಲಿ 1513 ರಲ್ಲಿ ದಿ ಪ್ರಿನ್ಸ್ ಕೃತಿ ಬರೆದು ರಾಜ್ಯಶಾಸ್ತ್ರಕ್ಕೆ ಹೊಸ ಆಯಾಮ ಒದಗಿಸಿ ಆಧುನಿಕ ರಾಜ್ಯಶಾಸ್ತ್ರದ ಪಿತಾಮಹ ಎನಿಸಿದನು. 20 ನೇ ಶತಮಾನದಲ್ಲಿ ಮತದಾನ, ಜನಾಭಿಪ್ರಾಯ, ಪ್ರಜಾಪ್ರಭುತ್ವ ಹರಡಿಕೆ, ಜಾಗತೀಕರಣ ಮುಂತಾದ ಅಂಶಗಳ ಸೇರ್ಪಡೆಯಿಂದ ರಾಜ್ಯಶಾಸ್ತ್ರ ಅತ್ಯುಪಯುಕ್ತ ಶಾಸ್ತ್ರವೆನಿಸಿದೆ. ಆರಂಭದಿಂದ ರಾಜ್ಯಶಾಸ್ತ್ರಕ್ಕೆ ರಾಜಕೀಯ, ರಾಜ್ಯ ವಿಜ್ಞಾನ, ರಾಜಕೀಯ ವಿಜ್ಞಾನ ಎಂಬ ನಾನಾ ಹೆಸರುಗಳನ್ನು ಬಳಸಲಾಗುತ್ತಿದ್ದು ಕೊನೆಗೆ ಯುನೆಸ್ಕೊ ಆಯೋಜಿತ 1948 ರ ವಿಶ್ವ ರಾಜ್ಯಶಾಸ್ತ್ರಜ್ಞರ ಪ್ಯಾರಿಸ್ ಸಮ್ಮೇಳನದ ಬಳಿಕ ರಾಜ್ಯಶಾಸ್ತ್ರ ಪದವನ್ನು ಸಾರ್ವತ್ರಿಕವಾಗಿ ಬಳಸಲು ನಿರ್ಧರಿಸಲಾಯಿತು.
ರಾಜ್ಯ: ರಾಜ್ಯ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ಸ್ಟೇಟ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲ ಪದ ಗ್ರೀಕ್ ಭಾಷೆಯ ಪಾಲಿಸ್ ಆಗಿದೆ. ಸರಳಾರ್ಥದಲ್ಲಿ ನಿರ್ದಿಷ್ಟ ಭೂ ಪ್ರದೇಶದಲ್ಲಿ ಕಾನೂನಿಗೋಸ್ಕರ ಸಂಘಟಿತವಾದ ಜನ ಸಮೂಹವನ್ನು ರಾಜ್ಯ ಎನ್ನಬಹುದು. ವಿಶಾಲಾರ್ಥದಲ್ಲಿ ನಿರ್ದಿಷ್ಟ ಭೂ ಪ್ರದೇಶದಲ್ಲಿ ರಾಜಕೀಯವಾಗಿ ಸಂಘಟಿತವಾಗಿದ್ದು ಆಂತರಿಕ ಹಾಗು ಬಾಹ್ಯ ಸ್ವಾತಂತ್ರ್ಯ ಹೊಂದಿರುವ ಜನ ಸಮೂಹವನ್ನು ರಾಜ್ಯ ಎನ್ನಬಹುದು. ರಾಜ್ಯವನ್ನು ಪ್ರಾಚೀನ ಭಾರತೀಯರು ಜನಪದ, ಗ್ರೀಕರು ಪಾಲಿಸ್, ರೋಮನ್ನರು ಸಿವಿಟಸ್ ಎಂದು ಕರೆಯುತ್ತಿದ್ದರು. ಇಟಲಿಯ ಚಿಂತಕ ನಿಕೋಲೊ ಮೆಕೆವಲ್ಲಿ ತನ್ನ ದಿ ಪ್ರಿನ್ಸ್ ಗ್ರಂಥದಲ್ಲಿ ಮೊಟ್ಟ ಮೊದಲು ರಾಜ್ಯ ಎಂಬ ಪದವನ್ನು ಬಳಸಿದನು. ರಾಜ್ಯ ಪದಕ್ಕೆ ರಾಜ್ಯಶಾಸ್ತ್ರದಲ್ಲಿ ವಿಶೇಷ ಅರ್ಥವಿದ್ದು ದೇಶ, ರಾಷ್ಟ್ರ, ಸಮಾಜ, ಒಕ್ಕೂಟ ಪ್ರಾಂತಗಳಿಗೆ ಸಮಾನವಾಗಿ ರಾಜ್ಯ ಎಂಬ ಪದ ಬಳಕೆ ಮಾಡುವುದು ಸರಿಯಲ್ಲ. ರಾಜ್ಯವು ಪರಮಾಧಿಕಾರ ಹೊಂದಿದ್ದು ಉಳಿದ ಸಂಸ್ಥೆಗಳಿಗಿಂತ ಭಿನ್ನವಾಗಿದೆ. ರಾಜ್ಯಶಾಸ್ತ್ರದ ಪ್ರಕಾರ ಜನಸಂಖೆ, ನಿರ್ದಿಷ್ಟ ಭೂ ಪ್ರದೇಶ, ಸರ್ಕಾರ ಹಾಗು ಪರಮಾಧಿಕಾರ ಎಂಬ ನಾಲ್ಕು ಮೂಲಾಂಶ ಹೊಂದಿರುವ ಭಾರತ, ಚೀನಾ, ಶ್ರೀಲಂಕಾ, ನೇಪಾಳ, ಜರ್ಮನಿ, ಫ್ರಾನ್ಸ್ ಮಾತ್ರ ರಾಜ್ಯ ಎನಿಸುತ್ತವೆ. ಕರ್ನಾಟಕ, ತೆಲಂಗಾಣ, ಕೇರಳ, ಬಿಹಾರ ಮುಂತಾದವು ಭಾರತ ಹೊಂದಿರುವ ಏಕ ಪರಮಾಧಿಕಾರದಡಿ ಕಾರ್ಯ ನಿರ್ವಹಿಸುತ್ತಿರುವ ಒಕ್ಕೂಟ ಪ್ರಾಂತ್ಯಗಳಾಗಿವೆ. ಆದ್ದರಿಂದ ಪರಮಾಧಿಕಾರ ಹೊಂದಿರದ ಕರ್ನಾಟಕ, ತೆಲಂಗಾಣ, ಕೇರಳ, ಬಿಹಾರ ಮುಂತಾದ ಭಾರತ ಒಕ್ಕೂಟ ಪ್ರಾಂತ್ಯಗಳಿಗೆ ರಾಜ್ಯ ಎಂದು ಸಂಬೋಧಿಸುವುದು ಸರಿಯಲ್ಲ.
ರಾಷ್ಟ್ರ: ರಾಷ್ಟ್ರ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ನೇಷನ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲ ಪದ ಲ್ಯಾಟಿನ್ ಭಾಷೆಯ ನೇಷಿಯೋ ಆಗಿದೆ. ನೇಷಿಯೋ ಎಂದರೆ ರಕ್ತ ಸಂಬಂಧ ಎಂದರ್ಥ. ಒಂದೇ ಭಾಷೆ, ಧರ್ಮ, ಜನಾಂಗ, ಸಂಸ್ಕೃತಿಗಳ ಆಧಾರದ ಮೇಲೆ ಒಂದುಗೂಡಿದ್ದು ನಾವೆಲ್ಲರೂ ಒಂದೇ ಎಂಬ ಭಾವನೆಯುಳ್ಳ ಜನ ಸಮೂಹವನ್ನು ರಾಷ್ಟ್ರ ಎನ್ನಬಹುದಾಗಿದೆ. ರಾಜ್ಯ ಮತ್ತು ರಾಷ್ಟ್ರ ಎಂಬ ಪದಗಳ ನಡುವೆ ವ್ಯತ್ಯಾಸವಿದ್ದು ಅವುಗಳನ್ನು ಸಮಾನವಾಗಿ ಬಳಸುವುದು ಸರಿಯಲ್ಲ. ರಾಜ್ಯವು ರಾಜಕೀಯ ಸಂಸ್ಥೆಯಾಗಿದ್ದು ರಾಷ್ಟ್ರ ಭಾವನಾತ್ಮಕ ಸಂಸ್ಥೆಯಾಗಿದೆ. ಜೊತೆಗೆ ರಾಜ್ಯ ಪರಮಾಧಿಕಾರ ಪಡೆದಿದ್ದು ರಾಷ್ಟ್ರ ಪರಮಾಧಿಕಾರ ಹೊಂದಿಲ್ಲ ಉದಾ: ಉತ್ತರ ಕೋರಿಯಾ ಹಾಗು ದಕ್ಷಿಣ ಕೋರಿಯಾ ಬೇರೆ ಬೇರೆ ಪರಮಾಧಿಕಾರಿ ರಾಜ್ಯಗಳಾಗಿದ್ದರೂ ಕೋರಿಯನ್ ರಾಷ್ಟ್ರ ಒಂದೇ ಆಗಿದೆ. ರಾಜ್ಯಕ್ಕೆ ನಿರ್ದಿಷ್ಟ ಭೂ ಪ್ರದೇಶದ ಅಗತ್ಯವಿದ್ದರೆ ರಾಷ್ಟ್ರಕ್ಕೆ ಅದರ ಅಗತ್ಯವಿಲ್ಲ ಉದಾ: ಸ್ವಿಡ್ಜರ್ ಲ್ಯಾಂಡ್ನಲ್ಲಿ ಹಲವು ರಾಷ್ಟ್ರೀಯತೆಯ ಜನರು ವಾಸಿಸುತ್ತಿದ್ದಾರೆ. ರಾಜ್ಯವು ಐದು ಸಾವಿರ ವರ್ಷಗಳ ಪ್ರಾಚೀನತೆ ಹೊಂದಿದ್ದರೆ ರಾಷ್ಟ್ರವು ಆಧುನಿಕ ಯುಗದಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರವರ್ಧಮಾನಕ್ಕೆ ಬಂದಿದೆ.
ಪೌರ/ಪೌರತ್ವ: ಪೌರ ಎಂದರೆ ಪದಶಃ ನಗರವಾಸಿ ಎಂದಾಗುತ್ತದೆ. ಯಾವುದೇ ಒಂದು ರಾಜ್ಯದ ಸದಸ್ಯನನ್ನು ಪೌರ ಎನ್ನಬಹುದಾಗಿದೆ. ಅದೇ ರೀತಿ ವ್ಯಕ್ತಿ ಹೊಂದಿರುವ ರಾಜ್ಯದ ಸದಸ್ಯತ್ವವನ್ನು ಪೌರತ್ವ ಎನ್ನಲಾಗುತ್ತದೆ. ಸಾಮಾನ್ಯವಾಗಿ ಒಂದು ರಾಜ್ಯ ನೀಡುವ ಹಕ್ಕುಗಳನ್ನು ಹಾಗು ಸೂಚಿಸುವ ಕರ್ತವ್ಯಗಳನ್ನು ಆ ರಾಜ್ಯದ ಪೌರತ್ವ ಪಡೆದ ಪೌರ ಪಾಲಿಸಬೇಕಾಗುತ್ತದೆ. ಹಿಂದೆ ವಿದ್ಯಾವಂತ, ಆಸ್ತಿ ಹೊಂದಿದ ಹಾಗು ತೆರಿಗೆ ನೀಡುವ ಕೆಲವು ವ್ಯಕ್ತಿಗಳು ಮಾತ್ರ ಪೌರತ್ವ ಪಡೆಯುತ್ತಿದ್ದು ಪ್ರಸ್ತುತ ಪೌರತ್ವವನ್ನು ಸಾರ್ವತ್ರಿಕವಾಗಿ ಸರ್ವರಿಗೂ ನೀಡಲಾಗುತ್ತದೆ. ಜನನ, ರಕ್ತಸಂಬಂಧ, ವಿವಾಹ, ದೀರ್ಘ ಕಾಲೀನ ವಾಸ, ಸರ್ಕಾರಿ ಸೇವೆ, ಆಸ್ತಿ ಹೊಂದುವಿಕೆಯ ಆಧಾರದ ಮೇಲೆ ಇಂದು ಪೌರತ್ವ ನೀಡಲಾಗುತ್ತಿದೆ. ಪೌರತ್ವದಲ್ಲಿ ಕೆಳಗಿನ ಪ್ರಕಾರಗಳನ್ನು ಕಾಣಬಹುದಾಗಿದೆ.
ಏಕ ಪೌರತ್ವ: ವ್ಯಕ್ತಿ ದೇಶದ ಕೇಂದ್ರ ಸರ್ಕಾರ ನೀಡುವ ಒಂದೇ ಪೌರತ್ವ ಪಡೆದು ದೇಶದ ಯಾವುದೇ ಭಾಗದಲ್ಲಿ ನೆಲೆಸಲು ಅವಕಾಶವಿದ್ದರೆ ಅದನ್ನು ಏಕ ಪೌರತ್ವ ಎನ್ನಲಾಗುತ್ತದೆ. ಉದಾ: ಭಾರತದಲ್ಲಿ ಕೇಂದ್ರ ಸರ್ಕಾರ ನೀಡುವ ಪೌರತ್ವ ಪಡೆದ ವ್ಯಕ್ತಿ ಒಕ್ಕೂಟ ಪ್ರಾಂತ್ಯಗಳಾದ ಕೇರಳ, ಗುಜರಾತ್, ಕರ್ನಾಟಕ, ಪಂಜಾಬ್ ಅಥವ ಮಧ್ಯಪ್ರದೇಶದಲ್ಲಿ ವಾಸಿಸಬಹುದಾಗಿದೆ.
* ದ್ವೀ ಪೌರತ್ವ: ವ್ಯಕ್ತಿ ಕೇಂದ್ರ ಸರ್ಕಾರ ಮತ್ತು ನಿರ್ದಿಷ್ಟ ಪ್ರಾಂತ್ಯ ಸರ್ಕಾರ ನೀಡುವ ಪೌರತ್ವ ಪಡೆದು ಆ ಪ್ರಾಂತ್ಯದಲ್ಲಿಯೇ ವಾಸಿಸಲು ಸಾಧ್ಯವಿದ್ದರೆ ಅದನ್ನು ದ್ವೀ ಪೌರತ್ವ ಎನ್ನಲಾಗುತ್ತದೆ. ಉದಾ: ಅಮೇರಿಕದಲ್ಲಿ ಒಬ್ಬ ವ್ಯಕ್ತಿ ಕೇಂದ್ರ ಸರ್ಕಾರದ ಹಾಗು ನಿರ್ದಿಷ್ಟ ಪ್ರಾಂತ್ಯ ಸರ್ಕಾರದ ಪೌರತ್ವಪಡೆಯಬೇಕಿದ್ದು ಆ ಪ್ರಾಂತ್ಯದಲ್ಲಿಯೇ ವಾಸಿಸುತ್ತಾನೆ.
ಪರಮಾಧಿಕಾರ: ಪರಮಾಧಿಕಾರ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ಸಾವರಂಟಿ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲ ಪದ ಲ್ಯಾಟಿನ್ ಭಾಷೆಯ ಸುಪರ್ನಸ್ ಆಗಿದೆ. ಸುಪರ್ನಸ್ ಎಂದರೆ ಸರ್ವಶ್ರೇಷ್ಠ ಅಥವ ಸರ್ವೋಚ್ಛ ಎಂದರ್ಥ. ರಾಜ್ಯವು ಹೊಂದಿರುವ ಸರ್ವೋಚ್ಛ ಅಧಿಕಾರವನ್ನು ಸರಳವಾಗಿ ಪರಮಾಧಿಕಾರ ಎನ್ನಬಹುದು. ವಿಶಾಲಾರ್ಥದಲ್ಲಿ ಯಾರೂ ನಿಯಂತ್ರಿಸಲಾರದ, ಮಿತಿಗೊಳಪಡಿಸದ ಹಾಗು ನಿರ್ಬಂಧಿಸಲಾಗದ ರಾಜ್ಯದ ಸರ್ವ ಶ್ರೇಷ್ಠ ಅಧಿಕಾರವು ಪರಮಾಧಿಕಾರ ಎನಿಸುತ್ತದೆ. ಪರಮಾಧಿಕಾರ ರಾಜ್ಯದ ಜೀವಾಳವಾಗಿದ್ದು ಪರಮಾಧಿಕಾರವನ್ನು ಕಳೆದುಕೊಂಡ ರಾಜ್ಯ ನಶಿಸುತ್ತದೆ. ಆದ್ದರಿಂದ ಪರಮಾಧಿಕಾರವನ್ನು ರಾಜ್ಯದ ಹೃದಯ ಮತ್ತು ಆತ್ಮ ಎಂದು ಪರಿಗಣಿಸಲಾಗಿದೆ. ಪರಮಾಧಿಕಾರದ ಪರಿಕಲ್ಪನೆ ಅಸ್ಪಷ್ಟವಾಗಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದು ಪರಮಾಧಿಕಾರ ಪದವನ್ನು ಮೊಟ್ಟ ಮೊದಲು ಜೀನ್ ಬೋಡಿನ್ ತನ್ನ ಡಿ ರಿಪಬ್ಲಿಕಾ ಕೃತಿಯಲ್ಲಿ ಬಳಸಿದನು. ಮುಂದೆ ಥಾಮಸ್ ಹಾಬ್ಸ್ ಶಾಸನಬದ್ಧ ಪರಮಾಧಿಕಾರ, ಜಾನ್ ಲಾಕ್ ರಾಜಕೀಯ ಪರಮಾಧಿಕಾರ, ರೂಸೊ ಜನತಾ ಪರಮಾಧಿಕಾರ ಕುರಿತು ಚರ್ಚಿಸಿದರು. ಪರಮಾಧಿಕಾರದ ಏಕತ್ವ ಸಿದ್ಧಾಂತ ಹಾಗು ಬಹುತ್ವ ಸಿದ್ಧಾಂತಗಳು ಚಿಂತಕರಿಂದ ಮಂಡಿಸಲ್ಪಟ್ಟಿವೆ. ಪರಮಾಧಿಕಾರವು ಕೆಳಗಿನ ಎರಡು ಸ್ವರೂಪ ಪಡೆದಿದೆ.
* ಆಂತರಿಕ ಪರಮಾಧಿಕಾರ: ರಾಜ್ಯದ ಗಡಿಯೊಳಗಿನ ಎಲ್ಲ ಪ್ರಜೆಗಳು ಮತ್ತು ಸಂಘಸಂಸ್ಥೆಗಳ ಮೇಲೆ ರಾಜ್ಯವು ಹೊಂದಿರುವ ಸರ್ವೋನ್ನತ ಅಧಿಕಾರವನ್ನು ಆಂತರಿಕ ಪರಮಾಧಿಕಾರ ನ್ನಲಾಗುತ್ತದೆ. ಇದನ್ನು ಜೀನ್ ಬೋಡಿನ್ ಪ್ರತಿಪಾದಿಸಿದ್ದಾನೆ.
* ಬಾಹ್ಯ ಪರಮಾಧಿಕಾರ: ರಾಜ್ಯವು ಹೊರಗಿನವರ ನಿಯಂತ್ರಣಕ್ಕೊಳಪಡದೇ ತನಗೆ ಸರಿ ತೋರಿದ ನಿರ್ಧಾರಗಳನ್ನು ವಿದೇಶಗಳೊಡನೆ ವ್ಯವಹರಿಸುವಾಗ ಕೈಗೊಳ್ಳಲು ಅಧಿಕಾರ ಪಡೆದಿದ್ದರೆ ಅದನ್ನು ಬಾಹ್ಯ ಪರಮಾಧಿಕಾರ ನ್ನಲಾಗುತ್ತದೆ. ಇದನ್ನು ಹ್ಯೂಗೊ ಗ್ರೋಶಿಯಸ್ ಪ್ರತಿಪಾದಿಸಿದ್ದಾರೆ.
ಅಧಿಕಾರ: ಅಧಿಕಾರ ಬ ಪದವು ಆಂಗ್ಲ ಭಾಷೆಯ ಪವರ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲ ಪದ ಲ್ಯಾಟಿನ್ ಭಾಷೆಯ ಪೊಟರೆ. ಇತರರ ವರ್ತನೆಗಳನ್ನು ನಿಯಂತ್ರಿಸುವ ವ್ಯಕ್ತಿಯ ಸಾಮರ್ಥ್ಯವನ್ನು ಅಧಿಕಾರ ದು ಸರಳವಾಗಿ ಹೇಳಬಹುದು. ವಿಶಾಲಾರ್ಥದಲ್ಲಿ ಬೇರೆಯವರ ಕ್ರಿಯೆಗಳನ್ನು ನಿರ್ದೇಶಿಸುವ ಹಾಗು ನಿಯಂತ್ರಿಸುವ ವ್ಯಕ್ತಿಯ ಸಾಮರ್ಥ್ಯವು ಅಧಿಕಾರ ನಿಸುತ್ತದೆ. ರಾಜ್ಯಶಾಸ್ತ್ರದಲ್ಲಿ ಅಧಿಕಾರಕ್ಕೆ ವಿಶೇಷ ಸ್ಥಾನವಿದ್ದು ತಜ್ಞರಲ್ಲಿ ಅಧಿಕಾರದ ಕುರಿತು ಏಕಾಭಿಪ್ರಾಯವಿಲ್ಲ. ಸಾಮಾನ್ಯವಾಗಿ ಬಲ, ಶಕ್ತಿ ಹಾಗು ಅಧಿಕಾರ ಪದಗಳನ್ನು ಸಮಾನವಾಗಿ ಬಳಸಲಾಗುತ್ತಿದ್ದು ಆ ಪದಗಳು ತಮ್ಮದೇ ಅರ್ಥವನ್ನು ಹೊಂದಿರುವುದನ್ನು ಅರಿಯುವುದು ಅಗತ್ಯವಾಗಿದೆ.
ಕಾನೂನು: ಕಾನೂನು ಎಂಬ ಪದವು ಆಂಗ್ಲ ಭಾಷೆಯ ಲಾ ಪದದ ತರ್ಜಿಮೆಯಾಗಿದೆ. ಈ ರಡೂ ಪದಗಳ ಮೂಲ ಪದ ಟ್ಯೂಟಾನಿಕ್ ಭಾಷೆಯ ಲ್ಯಾಗ್. ಲ್ಯಾಗ್ ಎಂದರೆ ಸಮನಾದ ಅಥವ ತೀರ್ಮಾನಿಸು ಎಂದರ್ಥ. ಮಾನವನ ಬಾಹ್ಯ ವರ್ತನೆಗಳನ್ನು ನಿಯಂತ್ರಿಸುವ ನಿಯಮಗಳಿಗೆ ಕಾನೂನು ಎಂದು ಸರಳವಾಗಿ ಹೇಳಬಹುದು. ವಿಶಾಲಾರ್ಥದಲ್ಲಿ ಮಾನವನ ವರ್ತನೆಯನ್ನು ನಿಯಂತ್ರಿಸಲು, ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸಲು, ರಾಜ್ಯವು ರೂಪಿಸಿ ಜಾರಿಗೊಳಿಸಿರುವ ನಿಯಮಾವಳಿಗಳಿಗೆ ಕಾನೂನು ಎನ್ನಲಾಗುತ್ತದೆ. ಕಾನೂನು ರಾಜ್ಯದ ಶಿಶು ಹಾಗು ರಕ್ಷಕ ನಿಸಿದೆ. ಜೊತೆಗೆ ರಾಜ್ಯದ ಪರಮಾಧಿಕಾರದ ಜಾರಿಗೆ ಕಾನೂನು ನೆರವಾಗಿದ್ದು ಪರಮಾಧಿಕಾರದ ವಾಹನ ದು ಪರಿಗಣಿಸಲ್ಪಟ್ಟಿದೆ. ಕಾನೂನು ಸಾರ್ವತ್ರಿಕ ಸ್ವರೂಪ ಹೊಂದಿದ್ದು ರಾಜ್ಯದೊಳಗಿನ ಲ್ಲ ಪ್ರಜೆಗಳು ಮತ್ತು ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಇದರ ಲ್ಲಂಘನೆಗೆ ಶಿಕ್ಷೆ ನೀಡಲಾಗುತ್ತದೆ. ಸಂವಿಧಾನಾತ್ಮಕ ಕಾನೂನು, ಸಾಮಾನ್ಯ ಕಾನೂನು, ಖಾಸಗಿ ಕಾನೂನು, ಆಡಳಿತಾತ್ಮಕ ಕಾನೂನು, ರಾಷ್ಟ್ರೀಯ ಕಾನೂನು, ಅಂತರರಾಷ್ಟ್ರೀಯ ಕಾನೂನು ಎಂಬ ಕಾನೂನಿನ ವಿಧಗಳಿವೆ.
ಸಮಾನತೆ: ಏಕರೂಪದ ಉಪಚಾರ ಹಾಗು ಪ್ರತಿಫಲವನ್ನು ಸಮಾನತೆ ಪ್ರತಿನಿಧಿಸುತ್ತದೆ. ಸರಳವಾಗಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳಿರುವುದನ್ನು ಸಮಾನತೆ ಎನ್ನಬಹುದು. ಆದರೆ ಸ್ವಾಭಾವಿಕವಾಗಿ ಬಣ್ಣ, ಲಿಂಗ, ಮನೋಭಾವ, ಗುರಿ, ಅಭಿರುಚಿ, ಬುದ್ಧಿವಂತಿಕೆಯಲ್ಲಿ ಎಲ್ಲರೂ ಸಮಾನವಾಗಿರುವುದಿಲ್ಲ. ಹೀಗಾಗಿ ವಿಶಾಲಾರ್ಥದಲ್ಲಿ ಮಾನವ ನಿರ್ಮಿತ ಸಾಮಾಜಿಕ, ರಾಜಕೀಯ, ಆರ್ಥಿಕ ಅಸಮಾನತೆ ಹೋಗಲಾಡಿಸಿ ಸರ್ವರಿಗೂ ಸಾಕಷ್ಟು ಅವಕಾಶಗಳನ್ನು ಒದಗಿಸುವುದು ಸಮಾನತೆಯಾಗುತ್ತದೆ. 1789 ರ ಫ್ರೇಂಚ್ ಮಹಾ ಕ್ರಾಂತಿಯು ಎಲ್ಲ ಮಾನವರು ಸಮಾನವಾಗಿ ಜನ್ಮ ತಾಳಿದ್ದು ಹಾಗೆಯೇ ಮುಂದುವರೆಯುತ್ತಾರೆ ಎಂದು ಘೋಷಿಸಿತ್ತು. ಕೆಲವೊಮ್ಮೆ ಸಮಾನತೆ ಸಾಧಿಸಲು ಹಿಂದುಳಿದ ವರ್ಗದವರಿಗೆ ಮೀಸಲಾತಿಯ ಮೂಲಕ ಹೆಚ್ಚುವರಿ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಉದಾ: ಭಾರತದಲ್ಲಿ ಪಜಾ ಪಪಂ ವರ್ಗದವರಿಗೆ ನೀಡಲಾಗುತ್ತಿರುವ ಸೌಲಭ್ಯಗಳು. ಸಮಾನತೆಯಲ್ಲಿ ನೈಸರ್ಗಿಕ ಸಮಾನತೆ, ನಾಗರಿಕ ಸಮಾನತೆ, ರಾಜಕೀಯ ಸಮಾನತೆ, ಆರ್ಥಿಕ ಸಮಾನತೆ, ಸಾಮಾಜಿಕ ಸಮಾನತೆ ಎಂಬ ವಿಧಗಳಿವೆ.
ಸ್ವಾತಂತ್ರ್ಯ: ಸ್ವಾತಂತ್ರ್ಯ ಬ ಕನ್ನಡ ಪದವು ಆಂಗ್ಲ ಭಾಷೆಯ ಲಿಬರ್ಟಿ ಪದದ ತರ್ಜಿಮೆಯಾಗಿದೆ. ಈ ರಡೂ ಪದಗಳ ಮೂಲ ಪದ ಲ್ಯಾಟಿನ್ ಭಾಷೆಯ ಲೈಬರ್ ಆಗಿದೆ. ಲೈಬರ್ ಎಂದರೆ ಮುಕ್ತತೆ ಅಥವ ವಿಮೋಚನೆ ಎಂದರ್ಥ. ಸರಳವಾಗಿ ವ್ಯಕ್ತಿ ತನಗೆ ಸರಿ ತೋರಿದಂತೆ ವರ್ತಿಸುವುದನ್ನು ಸ್ವಾತಂತ್ರ್ಯ ನ್ನಬಹುದಾಗಿದೆ. ದರೆ ಸ್ವಾತಂತ್ರ್ಯ ಬೇರೆಯವರಿಗೆ ತೊಂದರೆಯುಂಟು ಮಾಡುವ ಸ್ವೇಚ್ಛಾಚಾರವಲ್ಲ. ವಿಶಾಲಾರ್ಥದಲ್ಲಿ ವ್ಯಕ್ತಿ ಇತರರಿಗೆ ತೊಂದರೆ ನೀಡದೇ ತನಗೆ ಸರಿ ತೋರಿದಂತೆ ವರ್ತಿಸಲು ಹೊಂದಿರುವ ಅವಕಾಶವನ್ನು ಸ್ವಾತಂತ್ರ್ಯ ನ್ನಲಾಗುತ್ತದೆ. ಹಲವು ನಿರ್ಬಂಧಗಳ ನಡುವೆ ಅನುಭವಿಸುವ ಸಕಾರಾತ್ಮಕ ಸ್ವಾತಂತ್ರ್ಯ ಮತ್ತು ನಿರ್ಬಂಧಗಳೇ ಇರದ ನಕಾರಾತ್ಮಕ ಸ್ವಾತಂತ್ರ್ಯ ಚಿಂತಕರಿಂದ ಮಂಡಿಸಲ್ಪಟ್ಟಿವೆ. ಇಂದು ನಾವೆಲ್ಲ ಅನುಭವಿಸುತ್ತಿರುವುದು ಸಕಾರಾತ್ಮಕ ಸ್ವಾತಂತ್ರ್ಯ. ಕಾರಣ ಸಮಾಜದಲ್ಲಿ ವಾಸಿಸುವ ಮಾನವರ ಹಿತ ದೃಷ್ಟಿಯಿಂದ ರಾಜ್ಯವು ಕಾನೂನಿನ ಮೂಲಕ ನಮ್ಮ ಸ್ವಾತಂತ್ರ್ಯದ ಮೇಲೆ ನಿಯಂತ್ರಣಗಳನ್ನು ಹೇರಿದೆ. ಸ್ವಾತಂತ್ರ್ಯವು ವ್ಯಕ್ತಿಯಿಂದ ಹಿಡಿದು ರಾಷ್ಟ್ರದವರೆಗೆ ಅಗತ್ಯವಾದ ರಾಜಕೀಯ ಪರಿಕಲ್ಪನೆಯಾಗಿದೆ. ನೈಸರ್ಗಿಕ ಸ್ವಾತಂತ್ರ್ಯ, ನಾಗರಿಕ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ, ರ್ಥಿಕ ಸ್ವಾತಂತ್ರ್ಯ, ರಾಷ್ಟ್ರೀಯ ಸ್ವಾತಂತ್ರ್ಯ ಬ ಸ್ವಾತಂತ್ರ್ಯದ ವಿಧಗಳನ್ನು ಕಾಣಬಹುದಾಗಿದೆ.
ನ್ಯಾಯ: ನ್ಯಾಯ ಬ ಕನ್ನಡ ಪದವು ಆಂಗ್ಲ ಭಾಷೆಯ ಜಸ್ಟಿಸ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲ ಪದ ಲ್ಯಾಟಿನ್ ಭಾಷೆಯ ಜಸ್ ಆಗಿದೆ. ಜಸ್ ಎಂದರೆ ಕಟ್ಟು ಅಥವ ಸಮನ್ವಯಗೊಳಿಸು ಎಂದರ್ಥ. ಸರಳವಾಗಿ ಸ್ವಾತಂತ್ರ್ಯ, ಸಮಾನತೆ ಹಾಗು ಸಹೋದರತೆ ಮೌಲ್ಯಗಳನ್ನು ಸಮನ್ವಯಗೊಳಿಸುವುದನ್ನು ನ್ಯಾಯ ನ್ನಬಹುದು. ನ್ಯಾಯವು ಕ್ರಿಯಾತ್ಮಕ ಹಾಗು ಚಲನಶೀಲ ಪರಿಕಲ್ಪನೆಯಾಗಿದೆ. ಒಂದು ರಾಜ್ಯದಲ್ಲಿ ನ್ಯಾಯವನ್ನು ಜಾರಿಗೊಳಿಸಲು ಉತ್ತಮ ರಾಜ್ಯ ವ್ಯವಸ್ಥೆ, ನೈತಿಕತೆ ಹಾಗು ನಿಷ್ಪಕ್ಷಪಾತತೆ ಅವಶ್ಯಕ. ನ್ಯಾಯವು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿರುವುದನ್ನು ಕಾಣಬಹುದಾಗಿದೆ. ನ್ಯಾಯವು ಸಾಮಾಜಿಕ ನ್ಯಾಯ, ರಾಜಕೀಯ ನ್ಯಾಯ, ರ್ಥಿಕ ನ್ಯಾಯ, ಕಾನೂನುಬದ್ಧ ನ್ಯಾಯ ಹಾಗು ಹಂಚಿಕೆಯ ನ್ಯಾಯ ಬ ವಿಧಗಳಿಂದ ಕೂಡಿದೆ.
ಹಕ್ಕು: ಹಕ್ಕು ಎಂಬ ಕನ್ನಡ ಪದವು ಆಂಗ್ಲ ಭಾಷೆಯ ರೈಟ್ ಪದದ ತರ್ಜಿಮೆಯಾಗಿದೆ. ಹಕ್ಕು ಎಂದರೆ ಪದಶಃ ಸೌಲಭ್ಯ ಅಥವ ಅವಕಾಶ ದರ್ಥ. ವ್ಯಕ್ತಿಯ ಬೆಳವಣಿಗೆಗೆ ಅಗತ್ಯವಾದ ಸಾಮಾಜಿಕ ಸೌಲಭ್ಯಗಳಿಗೆ ಸರಳವಾಗಿ ಹಕ್ಕು ಎನ್ನಬಹುದಾಗಿದೆ. ವಿಶಾಲಾರ್ಥದಲ್ಲಿ ಸಮಾಜ ಹಾಗು ರಾಜ್ಯದಿಂದ ಮಾನ್ಯ ಮಾಡಲ್ಪಟ್ಟು ವ್ಯಕ್ತಿಗೆ ಒದಗಿಸಲಾದ ಅವಕಾಶಗಳಿಗೆ ಹಕ್ಕು ಎನ್ನಲಾಗುತ್ತದೆ. ಉದಾ: ಮಾತನಾಡುವ ಹಕ್ಕು, ಸಂಚರಿಸುವ ಹಕ್ಕು, ಶಿಕ್ಷಣ ಹೊಂದುವ ಹಕ್ಕು ಇತ್ಯಾದಿ. ಹಕ್ಕುಗಳು ಸಮಾಜದಲ್ಲಿ ಮಾತ್ರ ಜಾರಿಯಲ್ಲಿದ್ದು ಪ್ರತಿಯೊಂದು ಹಕ್ಕು ತನ್ನದೇ ಕರ್ತವ್ಯ ಪಡೆದಿರುತ್ತದೆ. ಹಕ್ಕುಗಳು ಸಾರ್ವತ್ರಿಕತೆ, ನಿರಂತರತೆ, ಚಲನಶೀಲತೆ ಗುಣಗಳಿಂದ ಕೂಡಿದ್ದು ರಾಜ್ಯದಿಂದ ರಕ್ಷಿಸಲ್ಪಡುತ್ತವೆ.ಒಂದು ದೇಶದ ಗುಣಮಟ್ಟವನ್ನು ಆ ದೇಶದ ಪ್ರಜೆಗಳಿಗೆ ನೀಡಲಾಗಿರುವ ಹಕ್ಕುಗಳಿಂದ ನಿರ್ಧರಿಸಲಾಗುತ್ತದೆ. ಹಕ್ಕುಗಳನ್ನು ನಾಗರಿಕ, ರಾಜಕೀಯ ಹಾಗು ಆರ್ಥಿಕ ಹಕ್ಕುಗಳೆಂದು ಪ್ರಧಾನವಾಗಿ ವಿಂಗಡಿಸಲಾಗುತ್ತದೆ.
ಮೂಲಭೂತ ಹಕ್ಕು: ಯಾವ ಹಕ್ಕುಗಳಿಲ್ಲದೇ ರಾಜ್ಯದ ಪ್ರಜೆಗಳು ಉತ್ತಮ ಜೀವನ ನಡೆಸಲು ಸಾಧ್ಯವಿಲ್ಲವೋ ಅಂತಹ ಹಕ್ಕುಗಳಿಗೆ ಮೂಲಭೂತ ಹಕ್ಕು ಎನ್ನಲಾಗುತ್ತದೆ. ಈ ಹಕ್ಕುಗಳನ್ನು ಇತರ ಪ್ರಜೆಗಳಾಗಲಿ ಅಥವ ಸರ್ಕಾರವಾಗಲಿ ಉಲ್ಲಂಘಿಸುವಂತಿಲ್ಲ. ಕೆಂದರೆ ಮೂಲಭೂತ ಹಕ್ಕುಗಳು ಸಂವಿಧಾನದಲ್ಲಿ ಸ್ಥಾನ ಪಡೆದಿದ್ದು ಅವುಗಳನ್ನು ನ್ಯಾಯಾಲಯಗಳು ರಕ್ಷಿಸುತ್ತವೆ. ಜಗತ್ತಿನಲ್ಲಿ ಅಮೇರಿಕಾ ದೇಶವು ಮೊಟ್ಟ ಮೊದಲು ತನ್ನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಿತು. ಭಾರತದ ಸಂವಿಧಾನವೂ ಸಹ ಮೂರನೇ ಭಾಗದಲ್ಲಿ 12 ರಿಂದ 35 ನೇ ವಿಧಿಯ ಮೂಲಕ 7 ಮೂಲಭೂತ ಹಕ್ಕುಗಳನ್ನು ನೀಡಿತ್ತು. 1978 ರಲ್ಲಿ 44 ನೇ ತಿದ್ದುಪಡಿ ತಂದು ಆಸ್ತಿಯ ಹಕ್ಕನ್ನು ರದ್ದುಗೊಳಿಸಿದ್ದರಿಂದ ಪ್ರಸ್ತುತ 6 ಮೂಲಭೂತ ಹಕ್ಕುಗಳನ್ನು ಭಾರತದ ಪ್ರಜೆಗಳು ಹೊಂದಿದ್ದಾರೆ. ಅವೆಂದರೆ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಹಾಗು ಶೈಕ್ಷಣಿಕ ಹಕ್ಕು ಹಾಗು ಸಂವಿಧಾನಾತ್ಮಕ ಪರಿಹಾರದ ಹಕ್ಕು.
ಮಾನವ ಹಕ್ಕು: ಮಾನವರಿಂದ ಬೇರ್ಪಡಿಸಲಾಗದ ಹಕ್ಕುಗಳಿಗೆ ಮಾನವ ಹಕ್ಕು ಎನ್ನಲಾಗುತ್ತದೆ. ಜೀವಿಸುವ, ಮಾತನಾಡುವ, ಸಂಚರಿಸುವ, ಶಿಕ್ಷಣ ಹೊಂದುವ, ಕುಟುಂಬ ಸ್ಥಾಪಿಸಿಕೊಳ್ಳುವ ಹಕ್ಕುಗಳನ್ನು ಮಾನವನಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ವಿಶ್ವ ಸಂಸ್ಥೆಯು 10 ಡಿಸೆಂಬರ್ 1948 ರಂದು ವಿಶ್ವ ಮಾನವ ಹಕ್ಕುಗಳ ಘೋಷಣೆ ಅಂಗೀಕರಿಸಿ ಪ್ರತಿಯೊಂದು ದೇಶ ತನ್ನ ಪ್ರಜೆಗಳಿಗೆ ನೀಡಬೇಕಾದ ಮಾನವ ಹಕ್ಕುಗಳನ್ನು ಒದಗಿಸಲು ಕರೆ ಕೊಟ್ಟಿತು. ಆದ್ದರಿಂದ ಪ್ರತಿ ವರ್ಶ ಡಿಸೆಂಬರ್ 10 ನ್ನು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಎಂದು ಆಚರಿಸಲಾಗುತ್ತದೆ.
ಮೂಲಭೂತ ಕರ್ತವ್ಯಗಳು: ದೇಶದ ಪ್ರಜೆಗಳು ತಮ್ಮ ದೈನಂದಿನ ಜೀವನದಲ್ಲಿ ದೇಶಕ್ಕಾಗಿ ನಿರ್ವಹಿಸಬೇಕಾದ ಕಾರ್ಯಗಳನ್ನು ಮೂಲಭೂತ ಕರ್ತವ್ಯ ನ್ನಲಾಗುತ್ತದೆ. ಭಾರತದ ಮೂಲ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳಿರಲಿಲ್ಲ. ಮುಂದೆ 1976 ರಲ್ಲಿ 42 ನೇ ತಿದ್ದುಪಡಿಯ ಮೂಲಕ ಸ್ವರ್ಣಸಿಂಗ್ ಸಮೀತಿಯ ಸಲಹೆಯಂತೆ ಸೇರಿಸಲಾಗಿದೆ. ಪ್ರಸ್ತುತ ಭಾರತ ಸಂವಿಧಾನದ 4 [A] ಭಾಗದ 51 [A] ಉಪ ವಿದಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಕಾಣಬಹುದಾಗಿದೆ.
ರಾಷ್ಟ್ರ ನೀತಿ ನಿರ್ದೇಶಕ ತತ್ವಗಳು: ಸಂವಿಧಾನವು ಪ್ರಜೆಗಳ ಸಾಮಾಜಿಕ ಹಾಗು ಆರ್ಥಿಕ ಪ್ರಗತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಿರುವ ಮಾರ್ಗದರ್ಶಿ ಸೂತ್ರಗಳಿಗೆ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳು ಎನ್ನಲಾಗುತ್ತದೆ. ಭಾರತವನ್ನು ಕಲ್ಯಾಣ ರಾಜ್ಯವಾಗಿಸುವುದು ಇವುಗಳ ಗುರಿಯಾಗಿದೆ. ಐರ್ಲ್ಯಾಂಡ್ ಸಂವಿಧಾನದಿಂದ ಪ್ರಭಾವಿತರಾದ ಸಂವಿಧಾನ ರಚನಾಕಾರರು ರಾಷ್ಟ್ರ ನೀತಿ ನಿರ್ದೇಶಕ ತತ್ವಗಳನ್ನು ಭಾರತ ಸಂವಿಧಾನದಲ್ಲಿ ಅಳವಡಿಸಿದರು. ಭಾರತ ಸಂವಿಧಾನದ 4 ನೇ ಭಾಗದಲ್ಲಿ 36 ರಿಂದ 51 ನೇ ವಿಧಿಯವರೆಗೆ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳನ್ನು ಕಾಣಬಹುದಾಗಿದೆ. ಈ ತತ್ವಗಳು ಸಮಾಜವಾದಿ, ಉದಾರವಾದಿ, ಗಾಂಧೀವಾದಿ ಸಿದ್ಧಾಂತಗಳಿಂದ ಪ್ರಭಾವಿತಗೊಂಡಿವೆ. ಇವುಗಳಿಗೆ ನ್ಯಾಂಗದ ರಕ್ಷಣೆ ಇಲ್ಲವಾಗಿದ್ದು ಸರ್ಕಾರಗಳು ಇವನ್ನು ಜಾರಿಗೊಳಿಸದಿದ್ದರೆ ಶಿಕ್ಷಿಸಲು ಬರುವುದಿಲ್ಲ.
ಜಾತ್ಯಾತೀತತೆ: ಯಾವುದೇ ಒಂದು ಧರ್ಮಕ್ಕೆ ಮಹತ್ವ ನೀಡದೆ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವುದನ್ನು ಜಾತ್ಯಾತೀತತೆ ಎನ್ನಲಾಗುತ್ತದೆ. ಭಾರತ ಯಾವುದೇ ಧರ್ಮವನ್ನು ರಾಜ್ಯ ಧರ್ಮವೆಂದು ಘೋಷಿಸಿಲ್ಲ. ಬದಲಾಗಿ ಅಸ್ತಿತ್ವದಲ್ಲಿರುವ ಸ್ಲಾಮ್, ಜೈನ, ಬೌದ್ಧ, ಸಿಕ್ಕ್, ಪಾರಸಿ ಧರ್ಮದವರಿಗೆ ಸಮಾನವಕಾಶ ನೀಡಿದ್ದರಿಂದ ಭಾರತದಲ್ಲಿ ಜಾತ್ಯಾತೀತತೆ ಕಂಡು ಬರುತ್ತದೆ. ಸಮಾನತೆ, ಸ್ವಾತಂತ್ರ್ಯ ಹಾಗು ಸಹೋದರತೆಯನ್ನು ಎತ್ತಿ ಹಿಡಿಯುವ ಜಾತ್ಯಾತೀತತೆಯು ಕೋಮುವಾದಕ್ಕೆ ಪರಿಹಾರವಾಗಿದೆ. ಜೊತೆಗೆ ರಾಷ್ಟ್ರೀಯ ಭಾವೈಖ್ಯತೆಗೆ ಸಹಾಯಕವಾಗಿದೆ.
ಗಣರಾಜ್ಯ: ದೇಶದ ಮುಖ್ಯಸ್ಥ ಜನರಿಂದ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಚುನಾಯಿತನಾಗುತ್ತಿದ್ದರೆ ಅದನ್ನು ಗಣರಾಜ್ಯ ನ್ನಲಾಗುತ್ತದೆ. ಭಾರತದಲ್ಲಿ ದೇಶದ ಮುಖ್ಯಸ್ಥ ರಾಷ್ಟ್ರಪತಿಯು ಜನರಿಂದ ಚುನಾಯಿತರಾದ ಲೋಕಸಭೆ, ರಾಜ್ಯಸಭೆ ಹಾಗು ಎಲ್ಲ ರಾಜ್ಯಗಳ ವಿಧಾನಸಭಾ ಸದಸ್ಯರಿಂದ ಮತ ಪಡೆದು ಚುನಾಯಿತನಾಗುತ್ತಾನೆ. ಅದೇ ರೀತಿ ಅಮೇರಿಕದ ಅಧ್ಯಕ್ಷ ಜನರಿಂದ ನೇರವಾಗಿ ಮತ ಪಡೆದು ಚುನಾಯಿತನಾಗುತ್ತಾನೆ. ಹೀಗಾಗಿ ಭಾರತ ಹಾಗು ಅಮೇರಿಕ ಗಣರಾಜ್ಯಗಳಾಗಿವೆ. ಆದರೆ ಬ್ರಿಟನ್ನಿನ ರಾಜ ಅಥವ ರಾಣಿ ಜನರಿಂದ ಯ್ಕೆಗೊಳ್ಳದೇ ಅನುವಂಶೀಯವಾಗಿ ದೇಶದ ಮುಖ್ಯಸ್ಥರಾಗುತ್ತಾರೆ. ಆದ್ದರಿಂದ ಬ್ರಿಟನ್ ಗಣರಾಜ್ಯವಲ್ಲ. ಸಾಮಾನ್ಯವಾಗಿ ಬಹುತೇಕ ಪ್ರಜಾಪ್ರಭುತ್ವ ದೇಶಗಳೇ ಗಣರಾಜ್ಯ ನಿಸಿಕೊಳ್ಳುತ್ತವೆ.
ಸಂವಿಧಾನ: ದೇಶದ ಡಳಿತಕ್ಕೆ ಅಗತ್ಯವಾದ ನಿಯಮಾವಳಿಗಳ ದಾಖಲೆಗಳ ಸಂಗ್ರಹವೇ ಸಂವಿಧಾನ ದು ಸರಳವಾಗಿ ಹೇಳಬಹುದು. ವಿಶಾಲಾರ್ಥದಲ್ಲಿ ಸರ್ಕಾರದ ರಚನೆ ಹಾಗು ಕಾರ್ಯಗಳು, ಪ್ರಜೆಗಳ ಹಕ್ಕು ಹಾಗು ಕರ್ತವ್ಯಗಳು ಮತ್ತು ಸರ್ಕಾರ ಹಾಗು ಪ್ರಜೆಗಳ ನಡುವಿನ ಸಂಬಂಧಗಳನ್ನು ನಿರ್ಧರಿಸುವ ನಿಯಮಾವಳಿಗಳ ಸಂಗ್ರಹವೇ ಸಂವಿಧಾನವಾಗಿದೆ. ಮಾನವನಿಗೆ ಶಿರವಿರುವಂತೆ ಜಗತ್ತಿನಲ್ಲಿರುವ ಪ್ರತಿಯೊಂದು ದೇಶಕ್ಕೂ ಸಂವಿಧಾನವಿರಲೇಬೇಕು. ಸಂವಿಧಾನವನ್ನು ವಿಶೇಷ ಸಭೆ ಅಥವ ಸಂವಿಧಾನ ರಚನಾ ಸಭೆ ರಚಿಸುತ್ತವೆ ಉದಾ: ಫಿಲಿಡೆಲ್ಪಿಯಾ ಸಮ್ಮೇಳನವು ಅಮೇರಿಕದ ಸಂವಿಧಾನವನ್ನು ಹಾಗು ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ರಚಿಸಿತು.ಸಂವಿಧಾನ ಅರಿಸ್ಟಾಟಲ್ನ ಕಾಲದಷ್ಟು ಹಿಂದೆಯೇ ಜಾರಿಯಲ್ಲಿದ್ದು ಆತ 158 ಸಂವಿಧಾನಗಳ ಅಧ್ಯಯನ ಮಾಡಿರುವ ನಿದರ್ಶನವಿದೆ. ಸಂವಿಧಾನಕ್ಕೆ ರಾಜ್ಯದ ಪ್ರನಾಳಿಕೆ ಅಥವ ರಾಜ್ಯಾಂಗ ದೂ ಕರೆಯಲಾಗುತ್ತದೆ. ಜಗತ್ತಿನ ಅತೀ ಚಿಕ್ಕ ಹಾಗು ಮೊದಲ ಲಿಖಿತ ಸಂವಿಧಾನ ಅಮೇರಿಕ ಸಂವಿಧಾನವಾಗಿದೆ. ಭಾರತ ಸಂವಿಧಾನ ಜಗತ್ತಿನ ಅತೀ ದೊಡ್ಡ ಸಂವಿಧಾನ ನಿಸಿದೆ. ಸಂವಿಧಾನದಲ್ಲಿ ಈ ಕೆಳಗಿನ ನಾಲ್ಕು ವಿಧಗಳನ್ನು ಕಾಣಬಹುದಾಗಿದೆ.
ಸಂವಿಧಾನದ ನಿಯಮಾವಳಿಗಳು ಬರಹ ರೂಪದಲ್ಲಿರುವ ಲಿಖಿತ ಸಂವಿಧಾನ ದಾ: ಭಾರತದ ಸಂವಿಧಾನ.
* ಸಂವಿಧಾನದ ನಿಯಮಾವಳಿಗಳು ಬರಹ ರೂಪದಲ್ಲಿರದ ಅಲಿಖಿತ ಸಂವಿಧಾನ ದಾ: ಇಂಗ್ಲೆಂಡ್ ಸಂವಿಧಾನ.
* ಸಂವಿದಾನದ ತಿದ್ದುಪಡಿ ವಿಧಾನ ಸರಳವಾಗಿರುವ ನಮ್ಯ ಸಂವಿಧಾನ ದಾ: ಇಂಗ್ಲೆಂಡ್ ಸಂವಿಧಾನ.
* ಸಂವಿಧಾನದ ತಿದ್ದುಪಡಿ ಕಠಿಣವಾಗಿರುವ ಅನಮ್ಯ ಸಂವಿಧಾನ ದಾ: ಅಮೇರಿಕದ ಸಂವಿಧಾನ.
ಪ್ರಸ್ತಾವನೆ: ಸಂವಿಧಾನ ಹೊಳಗೊಂಡಿರುವ ತತ್ವಗಳು, ಮೌಲ್ಯಗಳು, ಸಿದ್ಧಾಂತಗಳು, ಉದ್ದೇಶಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಸಂವಿಧಾನದ ಭಾಗವೇ ಪ್ರಸ್ತಾವನೆ. ಪ್ರಸ್ತಾವನೆಯನ್ನು ಪೂರ್ವ ಪೀಠಿಕೆ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಲಿಖಿತ ಸಂವಿಧಾನಗಳು ಪ್ರಸ್ತಾವನೆಯನ್ನು ಹೊಂದಿರುತ್ತವೆ. ಕೆ. ಎಂ. ಮುನ್ಶಿ ಪ್ರಸ್ತಾವನೆಯನ್ನು ರಾಜಕೀಯ ಜಾತಕ ದು ಬಣ್ಣಿಸಿದ್ದಾರೆ. ಭಾರತ ಸಂವಿಧಾನದ ಪ್ರಸ್ತಾವನೆಯು ಭಾರತದ ಪ್ರಜೆಗಳಾದ ನಾವು ಎಂದು ಆರಂಭವಾಗಿ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿತಗೊಳಿಸಿ, ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂದು ಮುಕ್ತಾಯವಾಗುತ್ತದೆ. ಸಂವಿಧಾನದೊಳಗಿನ ಯಾವುದಾದರೂ ನಿಯಮಗಳ ವಿವರಣೆಯ ಸಮಯದಲ್ಲಿ ನ್ಯಾಯಾಲಯಗಳು ಪ್ರಸ್ತಾವನೆಯನ್ನು ಪರಿಗಣಿಸಿ ತೀರ್ಪು ನೀಡುತ್ತವೆ.
ಸಾರ್ವತ್ರಿಕ ವಯಸ್ಕ ಮತದಾನ: ಜಾತಿ, ಲಿಂಗ, ಬಣ್ಣ, ಧರ್ಮ, ಪ್ರದೇಶಗಳ ಧಾರದ ಮೇಲೆ ತಾರತಮ್ಯ ಮಾಡದೇ ನಿರ್ದಿಷ್ಟ ವಯೋಮಿತಿ ದಾಟಿದ ಲ್ಲ ಪ್ರಜೆಗಳಿಗೆ ಚುನಾವಣೆಯಲ್ಲಿ ಮತ ನೀಡಲು ಅವಕಾಶವಿದ್ದರೆ ಅದನ್ನು ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎನ್ನಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶಗಳಲ್ಲಿ ಇದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಮತದಾನದ ವಯೋಮಿತಿ ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ ಉದಾ: ಭಾರತದಲ್ಲಿ ಮತದಾರನ ವಯೋಮಿತಿ 18 ವರ್ಷ, ಸ್ವಿಡ್ಜರ್ ಲ್ಯಾಂಡ್ನಲ್ಲಿ ಮತದಾರನ ವಯೋಮಿತಿ 20 ವರ್ಷ. 20 ನೇ ಶತಮಾನದ ರಂಭದವರೆಗೆ ಅಮೇರಿಕ ಹಾಗು ಇಂಗ್ಲೆಂಡ್ ಮಹಿಳಾ ಮತದಾನವನ್ನು ನಿರಾಕರಿಸಿದ್ದು ಸಾರ್ವತ್ರಿಕ ವಯಸ್ಕ ಮತದಾನವನ್ನು ಸಂಪೂರ್ಣವಾಗಿ ಹೊಂದಿರಲಿಲ್ಲ. ದರೆ ಭಾರತವು ಸಂವಿಧಾನ ಜಾರಿಯೊಡನೆ ಪರಿಪೂರ್ಣ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯನ್ನು ಅಳವಡಿಸಿಕೊಂಡಿರುವುದು ಸಾಧನೆಯ ಸಂಗತಿಯಾಗಿದೆ.
ಸರ್ಕಾರ: ರಾಜ್ಯದ ನಿಯೋಗಿಯೇ ಸರ್ಕಾರ. ರಾಜ್ಯವು ತನ್ನ ಚ್ಛೆಯನ್ನು ಸರ್ಕಾರ ಬ ಪ್ರತಿನಿಧಿಯ ಮೂಲಕ ಜಾರಿಗೊಳಿಸುತ್ತದೆ. ಹೀಗಾಗಿ ರಾಜ್ಯ ಯಜಮಾನನಾದರೆ ಸರ್ಕಾರ ಸೇವಕನಿದ್ದಂತೆ. ರಾಜ್ಯ ಹಾಗು ಸರ್ಕಾರ ಪದಗಳನ್ನು ಪರ್ಯಾಯವಾಗಿ ಬಳಸುವ ರೂಢಿಯಿದ್ದು ಆ ಪರಿಪಾಠ ಸರಿಯಲ್ಲ. ಸಾಮಾನ್ಯವಾಗಿ ಪ್ರತಿ ದೇಶದ ಸರ್ಕಾರ ಮೂರು ಅಂಗಗಳಿಂದ ಕೂಡಿದ್ದು ಅವೆಂದರೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ. ಜಗತ್ತಿನಲ್ಲಿ ಹಲವು ಮಾದರಿಯ ಸರ್ಕಾರಗಳಿದ್ದು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಮಾದರಿಯ ಸರ್ಕಾರಗಳಿರುತ್ತವೆ ಉದಾ: ಭಾರತದಲ್ಲಿ ಸಂಸಧೀಯ ಸರ್ಕಾರ, ಅಮೇರಿಕದಲ್ಲಿ ಅಧ್ಯಕ್ಷೀಯ ಸರ್ಕಾರ, ಜಪಾನಿನಲ್ಲಿ ಅರಸೊತ್ತಿಗೆ ಸರ್ಕಾರ ಜಾರಿಯಲ್ಲಿವೆ. ಜೊತೆಗೆ ಪ್ರಜಾಪ್ರಭುತ್ವ ಸರ್ಕಾರ, ನಿರಂಕುಶ ಸರ್ಕಾರ, ಸಂಯುಕ್ತ ಸರ್ಕಾರ, ಕಾತ್ಮಕ ಸರ್ಕಾರ ಮುಂತಾದ ಸರ್ಕಆರದ ಪ್ರಕಾರಗಳೂ ಜಾರಿಯಲ್ಲಿವೆ.
ಪ್ರಜಾಪ್ರಭುತ್ವ ಸರ್ಕಾರ: ಪ್ರಜಆಪ್ರಭುತ್ವ ಬ ಕನ್ನಡ ಪದವು ಆಂಗ್ಲ ಭಾಷೆಯ ಡೆಮಾಕ್ರೆಸಿ ಎಂಬ, ಪದದಿಂದ ಬಂದಿದೆ. ಈ ಎರಡೂ ಪದಗಳ ಮೂಲ ಪದ ಗ್ರೀಕ್ ಭಾಷೆಯ ಡೆಮೋಸ್ ಮತ್ತು ಕ್ರಾಟೊಸ್ ಆಗಿದ್ದು ಜನರು ಹಾಗು ಆಳ್ವಿಕೆ ಎಂಬರ್ಥ ಹೊಂದಿವೆ. ಸರಳಾರ್ಥದಲ್ಲಿ ರಾಜ್ಯಾಡಳಿತದಲ್ಲಿ ಭಾಗವಹಿಸಲು ಪ್ರಜೆಗಳಿಗೆ ಅವಕಾಶವಿರುವುದನ್ನು ಪ್ರಜಾಪ್ರಭುತ್ವ ನ್ನಲಾಗುತ್ತದೆ. ವಿಶಾಲಾರ್ಥದಲ್ಲಿ ಪ್ರಜೆಗಳ ಶಯದಂತೆ ಪ್ರಜಾ ಪ್ರತಿನಿಧಿಗಳು ನಿರ್ಧಾರ ಕೈಗೊಳ್ಳುವ ಪ್ರಭುತ್ವ ಪಡೆದಿರುವ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ನ್ನಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಆಳುವವರು ಮತ್ತು ಆಳಿಸಿಕೊಳ್ಳುವವರು ಪ್ರಜೆಗಳೇ ಆಗಿರುತ್ತಾರೆ. ಹೀಗಾಗಿ ಅಮೇರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ [ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ಸರ್ಕಾರವನ್ನು ಪ್ರಜಾಪ್ರಭುತ್ವ ] ದಿರುವರು. ಜಾನ್ ಶೀಲೆ ಹೇಳುವಂತೆ ಪ್ರಜಾಪ್ರಭುತ್ವದಲ್ಲಿ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಪ್ರತಿಯೊಬ್ಬ ಪ್ರಜೆಯೂ ಆಡಳಿತದಲ್ಲಿ ಪಾಲು ಹೊಂದಿರುತ್ತಾನೆ. ಪ್ರಜಾಪ್ರಭುತ್ವವು ಜನರಿಗೆ ಮತದಾನದ ಮೂಲಕ ಅತ್ಯುನ್ನತ ಅಧಿಕಾರವನ್ನು ನೀಡಿ ಪ್ರಜೆಗಳನ್ನು ಪ್ರಭುಗಳನ್ನಾಗಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತ್ಯಕ್ಷಪ್ರಜಾಪ್ರಭುತ್ವ ಹಾಗು ಪರೋಕ್ಷ ಪ್ರಜಾಪ್ರಭುತ್ವ ಬ ರಡು ಮಾದರಿಗಳಿವೆ. ಕಡಿಮೆ ಜನಸಂಖೆ ಮತ್ತು ಚಿಕ್ಕ ಭೂ ಪ್ರದೇಶ ಹೊಂದಿದ್ದ ಪ್ರಾಚೀನ ಗ್ರೀಕ್ ನಗರ ರಾಜ್ಯಗಳಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ಜಾರಿಯಲ್ಲಿದ್ದು ಪ್ರಸ್ತುತ ಸ್ವಿಡ್ಜರ್ಲ್ಯಾಂಡ್ ಹಾಗು ಅಮೇರಿಕದಲ್ಲಿ ಬದಲಾವಣೆಯೊಂದಿಗೆ ಇಂದಿಗೂ ಜಾರಿಯಲ್ಲಿದೆ. ಇಂದು ಪ್ರತಿಯೊಂದು ದೇಶ ಅಧಿಕ ಜನಸಂಖೆ ಹಾಗು ವಿಶಾಲ ಭೂ ಪ್ರದೇಶಗಳಿಂದ ಕೂಡಿದ್ದು ಪ್ರತಿನಿಧಿಗಳ ಮೂಲಕ ಡಳಿತ ಜರುಗುವ ಪರೋಕ್ಷ ಪ್ರಜಾಪ್ರಭುತ್ವ ಜನಪ್ರೀಯವಾಗಿದೆ. ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ದೇಶವಾಗಿದೆ.
ಸಂಯುಕ್ತ ಸರ್ಕಾರ: ಸರ್ಕಾರಗಳ ನಡುವೆ ಅಧಿಕಾರ ಹಂಚಿಕೆಯ ತತ್ವವನ್ನು ಆಧರಿಸಿ ಸಂಯುಕ್ತ ಸರ್ಕಾರ ಪದ್ಧತಿ ಜನ್ಮ ತಾಳಿದೆ. ಸಂಯುಕ್ತ ವ್ಯವಸ್ಥೆಎಂಬ ಪರಿಕಲ್ಪನೆಯು ಆಂಗ್ಲ ಭಾಷೆಯ ಫೆಡರೇಶನ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲ ಪದ ಲ್ಯಾಟೀನ್ ಭಾಷೆಯ ಫೋಡಸ್ ಆಗಿದ್ದು ಒಪ್ಪಂದ ಅಥವ ಕರಾರು ಎಂಬರ್ಥ ಹೊಂದಿದೆ. ದೇಶದಲ್ಲಿ ಕೇಂದ್ರ ಹಾಗು ಪ್ರಾಂತ್ಯ ಬ ದ್ವೀ ಸರ್ಕಾರಗಳು ಜಾರಿಯಲ್ಲಿದ್ದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅದನ್ನು ಸಂಯುಕ್ತ ಸರ್ಕಾರ ಪದ್ಧತಿ ಎನ್ನಬಹುದಾಗಿದೆ. ವಿಶಾಲಾರ್ಥದಲ್ಲಿ ಸಂವಿಧಾನದಿಂದ ಅಧಿಕಾರ ಪಡೆದು ಸ್ವತಂತ್ರವಾಗಿ ಏಕ ಪರಮಾಧಿಕಾರದಡಿ ಕಾರ್ಯ ನಿರ್ವಹಿಸುವ ಕೇಂದ್ರ ಸರ್ಕಾರ ಮತ್ತು ಪ್ರಾಂತ್ಯ ಸರ್ಕಾರ ಕಂಡುಬರುವ ವ್ಯವಸ್ಥೆಯನ್ನು ಸಂಯುಕ್ತ ಸರ್ಕಾರ ನ್ನಲಾಗುತ್ತದೆ. ಹಲವು ಪ್ರಾಂತ್ಯಗಳು ನಾನಾ ಉದ್ದೇಶಗಳು ಅಥವ ಕಾರಣಗಳಿಗಾಗಿ ತಮ್ಮ ಪರಮಾಧಿಕಾರವನ್ನು ತ್ಯಜಿಸಿ ಏಕ ಪರಮಾಧಿಕಾರದಡಿ ಅಗತ್ಯ ಸ್ವಾಯತ್ತತೆಯೊಂದಿಗೆ ಕಾರ್ಯ ನಿರ್ವಹಿಸಲು ಒಪ್ಪಿದಾಗ ಸಂಯುಕ್ತ ಸರ್ಕಾರ ವ್ಯವಸ್ಥೆಯು ಉದಯವಾಗುತ್ತದೆ. ಅಮೇರಿಕ, ಭಾರತ, ಕೆನಡಾ, ಆಸ್ಟ್ರೇಲಿಯಾಗಳು ಸಂಯುಕ್ತ ಸರ್ಕಾರ ಹೊಂದಿರುವ ವಿಶ್ವದ ಪ್ರಮುಖ ದೇಶಗಳಾಗಿವೆ. ಇಲ್ಲಿ ಕೇಂದ್ರ ಹಾಗು ಪ್ರಾಂತ್ಯ ಸರ್ಕಾರಗಳು ಪರಸ್ಪರ ಸಹಕರಿಸಿ ಕಾರ್ಯ ನಿರ್ವಹಿಸಬೇಕಾದ್ದರಿಂದ ತ್ತೀಚೆಗೆ ಸಹಕಾರಿ ಸಂಯುಕ್ತ ವ್ಯವಸ್ಥೆಯ ಪರಿಕಲ್ಪನೆ ಮೊಳಕೆಯೊಡೆದು ಮಹತ್ವವನ್ನು ಪಡೆದಿದೆ. ಸಂಯುಕ್ತ ಸರ್ಕಾರ ಪದ್ಧತಿಯು ಸಾಮಾನ್ಯವಾಗಿ ಅಧಿಕಾರ ವಿಭಜನೆ, ದ್ವೀ ಶಾಸಕಾಂಗ, ದ್ವೀ ಪೌರತ್ವ, ನ್ಯಾಯಾಂಗಕ್ಕೆ ಮಹತ್ವ, ತಿದ್ದುಪಡಿಗೆ ಅವಕಾಶ ಮುಂತಾದ ಲಕ್ಷಣಗಳನ್ನು ಹೊಂದಿರುತ್ತದೆ.
ಶಾಸಕಾಂಗ: ಶಾಸಕಾಂಗ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ಪಾರ್ಲಿಮೆಂಟ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲ ಪದ ಫ್ರೆಂಚ್ ಭಾಷೆಯ ಪಾರ್ಲರ್ ಆಗಿದೆ. ಪಾರ್ಲರ್ ಎಂದರೆ ಚರ್ಚಿಸು ಅಥವ ಮಾತನಾಡು ಎಂದರ್ಥ. ಸರಳವಾಗಿ ಕಾನೂನುಗಳನ್ನು ರಚಿಸುವ ಸರ್ಕಾರದ ಮೊದಲ ಅಂಗವನ್ನು ಶಾಸಕಾಂಗ ಎನ್ನಬಹುದಾಗಿದೆ. ವಿಶಾಲಾರ್ಥದಲ್ಲಿ ದೇಶದ ಆಡಳಿತಕ್ಕೆ ಅಗತ್ಯವಾದಹೊಸ ಕಾನೂನುಗಳನ್ನು ರಚಿಸುವ, ಜಾರಿಯಲ್ಲಿರುವ ಕಾನೂನುಗಳನ್ನು ಬದಲಿಸುವ ಹಾಗು ಬೇಡವಾದ ಕಾನೂನನ್ನು ರದ್ದುಗೊಳಿಸುವ ಸರ್ಕಾರದ ಅಂಗವು ಶಾಸಕಾಂಗವಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಜಯಶಾಲಿಯಾದ ದೇಶದ ಜನ ಪ್ರತಿನಿಧಿಗಳು ಶಾಸಕಾಂಗದ ಸದಸ್ಯರಾಗಿರುತ್ತಾರೆ. ಶಾಸಕಾಂಗ ಜನಾಭಿಪ್ರಾಯದ ಕನ್ನಡಿ ಎಂದು ಪರಿಗಣಿಸಲ್ಪಟ್ಟಿದೆ. ಶಾಸಕಾಂಗವನ್ನು ಬೇರೆ ಬೇರೆ ದೇಶಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತದೆ ಉದಾ: ಭಾರತದಲ್ಲಿ ಸಂಸತ್ತು, ಇಂಗ್ಲೆಂಡಿನಲ್ಲಿ ಪಾರ್ಲಿಮೆಂಟ್, ಅಮೇರಿಕದಲ್ಲಿ ಕಾಂಗ್ರೆಸ್, ಜಪಾನಿನಲ್ಲಿ ಡಯಟ್, ಇತ್ಯಾದಿ. ಭಾರತದಲ್ಲಿ ಶಾಸಕಾಂಗ ಅಂದರೆ ಸಂಸತ್ತು ಲೋಕಸಭೆ, ರಾಜ್ಯಸಭೆ ಹಾಗು ರಾಷ್ಟ್ರಪತಿಗಳನ್ನು ಒಳಗೊಂಡಿದೆ. ಶಾಸಕಾಂಗದಲ್ಲಿ ಕೆಳಗಿನ ಎರಡು ಪ್ರಕಾರಗಳನ್ನು ಕಾಣಬಹುದು.
ಒಂದೇ ಸದನ ಅಥವ ಮನೆ ಹೊಂದಿರುವ ಏಕ ಸದನ ಶಾಸಕಾಂಗ ಉದಾ: ಚೀನಾ, ರಷ್ಯಾ.
*ಎರಡು ಸದನ ಅಥವ ಮನೆ ಹೊಂದಿರುವ ದ್ವೀ ಸದನ ಶಾಸಕಾಂಗ ಉದಾ: ಭಾರತ ಸಂಸತ್ತು ರಾಜ್ಯಸಭೆ ಎಂಬ ಮೇಲ್ಮನೆ ಹಾಗು ಲೋಕಸಭೆ ಎಂಬ ಕೆಳಮನೆ ಹೊಂದಿದರೆ ಅಮೇರಿಕದ ಕಾಂಗ್ರೆಸ್ ಸೆನೆಟ್ ಎಂಬ ಮೇಲ್ಮನೆ ಹಾಗು ಹೌಸ್ ಆಫ್ ರೆಪ್ರಜೆಂಟೆಟಿವ್ಸ್ ಎಂಬ ಕೆಳಮನೆ ಹೊಂದಿದೆ.
ಕಾರ್ಯಾಂಗ: ಶಾಸಕಾಂಗ ರಚಿಸಿದ ಕಾನೂನುಗಳನ್ನು ಜಾರಿಗೊಳಿಸುವ ಸರ್ಕಾರದ ರಡನೆ ಅಂಗವೇ ಕಾರ್ಯಾಂಗ. ವಿಶಾಲಾರ್ಥದಲ್ಲಿ ದೇಶದ ಮುಖ್ಯಸ್ಥ, ತನ ಸಲಹೆಗಾರರು ಮತ್ತು ಜವಾನನಿಂದ ಹಿಡಿದು ಮುಖ್ಯ ಕಾರ್ಯದರ್ಶಿಯವರೆಗಿನ ನಾಗರಿಕ ಸೇವಾ ವರ್ಗದ ಸಿಬ್ಬಂದಿಯನ್ನು ಕಾರ್ಯಾಂಗ ನ್ನಲಾಗುತ್ತದೆ. ದೇಶದ ಮುಖ್ಯಸ್ಥ ಹಾಗು ಆತನ ಸಲಹೆಗಾರರು ರಾಜಕೀಯ ಕಾರ್ಯಾಂಗ ನಿಸಿದರೆ ನಾಗರಿಕ ಸೇವಾ ವರ್ಗದ ಸಿಬ್ಬಂದಿಗಳು ಶಾಶ್ವತ ಕಾರ್ಯಾಂಗ ನಿಸಿಕೊಳ್ಳುತ್ತಾರೆ. ಜನಸಾಮಾನ್ಯರು ಕಾರ್ಯಾಂಗವನ್ನೇ ಸರ್ಕಾರ ದು ಸಂಬೋಧಿಸುತ್ತಿದ್ದು ಆ ಪರಿಪಾಠ ಸರಿಯಲ್ಲ. ಬೇರೆ ಬೇರೆ ಮಾದರಿಯ ಸರ್ಕಾರ ಪದ್ಧತಿಯಲ್ಲಿ ಕಾರ್ಯಾಂಗದ ಸ್ವರೂಪ ಬದಲಾಗುತ್ತದೆ. ನಾಮ ಮಾತ್ರ ಕಾರ್ಯಾಂಗ, ವಾಸ್ತವ ಕಾರ್ಯಾಂಗ, ಕತ್ವ ಕಾರ್ಯಾಂಗ, ಬಹುತ್ವ ಕಾರ್ಯಾಂಗ, ಅನುವಂಶೀಯ ಕಾರ್ಯಾಂಗ, ಚುನಾಯಿತ ಕಾರ್ಯಾಂಗ ಬ ವಿವಿಧ ಸ್ವರೂಪದ ಕಾರ್ಯಾಂಗ ಪದ್ಧತಿಗಳು ಪ್ರಪಂಚದಲ್ಲಿ ಜಾರಿಯಲ್ಲಿವೆ.
ಚುನಾವಣೆ: ಚುನಾವಣೆ ಎಂಬ ಕನ್ನಡ ಪದವು ಆಂಗ್ಲ ಭಾಷೆಯ ಲೆಕ್ಷನ್ ಪದದ ತರ್ಜಿಮೆಯಾಗಿದೆ. ಈ ಎರಡೂ ಪದಗಳ ಮೂಲ ಪದ ಲ್ಯಾಟಿನ್ ಭಾಷೆಯ ಲಿಗೆರೆ ಆಗಿದೆ. ಎಲಿಗೆರೆ ಎಂದರೆ ಆಯ್ಕೆ ಮಾಡು ಎಂದರ್ಥ. ಮತದಾರರು ಮತ ನೀಡುವ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಚುನಾವಣೆ ಎನ್ನಬಹುದು. ವಿಶಾಲಾರ್ಥದಲ್ಲಿ ಮತದಾರರು ತಮ್ಮ ಹಿತಾಸಕ್ತಿ ಕಾಪಾಡಿದವರನ್ನು ಅಧಿಕಾರಕ್ಕೆ ತರಲು ಮತ್ತು ಕಡೆಗಣಿಸಿದವರನ್ನು ಅಧಿಕಾರದಿಂದ ದೂರವಿಡಲು ಪಡೆದಿರುವ ರಾಜಕೀಯ ಅವಕಾಶಕ್ಕೆ ಚುನಾವಣೆಗಳು ಎನ್ನಲಾಗುತ್ತದೆ. ಚುನಾವಣೆಗಳು ಪ್ರಜಾಪ್ರಭುತ್ವದಲ್ಲಿ ಅಧಿಕಾರದ ಬದಲಾವಣೆಯ ಸಾಧನವಾಗಿದ್ದು ಅದರ ಯಶಸ್ಸಿಗೆ ಅಗತ್ಯಾಂಶಗಳಾಗಿವೆ ದಾ: 2014 ರ ಚುನಾವಣೆಯು ಭಾರತದಲ್ಲಿ ಆಡಳಿತಾಧಿಕಾರವನ್ನು ಸಂಯುಕ್ತ ಪ್ರಗತಿಪರ ಕ್ಕೂಟದ ಬದಲು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ಕೂಟಕ್ಕೆ ನೀಡಿತು.
ಸಾರ್ವತ್ರಿಕ ಚುನಾವಣೆ: ದೇಶದ ಅರ್ಹ ಮತದಾರರು ಯಾವುದೇ ತಾರತಮ್ಯವಿಲ್ಲದೇ ನಿರ್ದಿಷ್ಟ ಕಾಲಕ್ಕೆ ನಡೆಯುವ ಚುನಾವಣೆಯಲ್ಲಿ ಭಾಗವಹಿಸಿದರೆ ಅದನ್ನು ಸಾರ್ವತ್ರಿಕ ಚುನಾವಣೆ ಎನ್ನುವರು. ಸಾರ್ವತ್ರಿಕ ಚುನಾವಣೆಗಳ ಅವಧಿಯು ದೇಶದಿಂದ ದೇಶಕ್ಕೆ ಬೇರೆ ಬೇರೆಯಾಗಿರುತ್ತದೆ ಉದಾ: ಭಾರತದಲ್ಲಿ ಐದು ವರ್ಷಗಳಿಗೊಮ್ಮೆ ಜರುಗಿದರೆ ಅಮೇರಿಕದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಜರುಗುತ್ತವೆ. ಭಾರತದಲ್ಲಿ 1951/1952 ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ಜರುಗಿತು. 2014 ರಲ್ಲಿ ಭಾರತದ ಹದಿನಾರನೆಯ ಸಾರ್ವತ್ರಿಕ ಚುನಾವಣೆ ನಡೆದರೆ 2019 ರಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ ಜರುಗಲಿದೆ.
ಉಪ ಚುನಆವಣೆ: ಒಬ್ಬ ಚುನಾಯಿತ ಪ್ರತಿನಿಧಿಯ ಸ್ಥಾನವು ಆತನ ರಾಜೀನಾಮೆ, ಅನರ್ಹತೆ ಅಥವ ನಿಧನದಿಂದ ತೆರವಾದರೆಆರು ತಿಂಗಳೊಳಗೆ ಆ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಉಪ ಚುನಾವಣೆ ಎನ್ನುವರು. ಆದರೆ ಸ್ಥಾನ ತೆರವಾದ ರು ತಿಂಗಳೊಳಗೆ ಸಾರ್ವತ್ರಿಕ ಚುನಾವಣೆಗಳು ಜರುಗಲಿದ್ದರೆ ತೆರವಾದ ಸ್ಥಾನಕ್ಕೆ ಪ ಚುನಾವಣೆಯನ್ನು ನಡೆಸುವುದಿಲ್ಲ. ದಾ: ಕಾಂಗ್ರೆಸ್ಸಿನ ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ನಂಜನಗೂಡು ವಿಧಾನಸಭಾ ಮತ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ.
ಆಡಳಿತ: ಡಳಿತ ಬ ಕನ್ನಡ ಪದವು ಆಂಗ್ಲ ಭಾಷೆಯ ಡ್ಮಿನ್ಸ್ಟ್ರೇಶನ್ ಪದದ ತರ್ಜಿಮೆಯಾಗಿದೆ. ಈ ಎರಡು ಪದಗಳ ಮೂಲ ಪದ ಲ್ಯಾಟಿನ್ ಭಾಷೆಯ ಆಯಡ್ ಹಾಗು ಮಿನ್ಸ್ಟ್ರೇರ್ ಆಗಿದ್ದು ಜನರು ಹಾಗು ಸೇವೆ ಮಾಡು ಎಂಬರ್ಥ ಹೊಂದಿವೆ.ಸರಳಾರ್ಥದಲ್ಲಿ ಆಡಳಿತ ದರೆ ಸಾಮಾನ್ಯ ಗುರಿ ಸಾಧನೆಗೆ ನಡೆಸುವ ಸಾಮೂಹಿಕ ಚಟುವಟಿಕೆ ಎಂದಾಗುತ್ತದೆ. ವಿಶಾಲಾರ್ಥದಲ್ಲಿ ಸಂಘಟನೆ ಮತ್ತು ವ್ಯವಸ್ಥಾಪನಾ ಚಟುವಟಿಕೆಗಳಿಂದ ಕೂಡಿರುವ ವ್ಯವಸ್ಥೆಯನ್ನು ಆಡಳಿತ ನ್ನಬಹುದು.
ಆಡಳಿತ ಸೇವಾ ವರ್ಗ ಅಥವ ನಾಗರಿಕ ಸೇವಾ ವರ್ಗ: ಸರಳಾರ್ಥದಲ್ಲಿ ಸರ್ಕಾರಿ ನೌಕರರ ಸಮೂಹವೇ ಆಡಳಿತ ಸೇವಾ ವರ್ಗವಾಗಿದೆ. ಒಂದು ದೇಶದಲ್ಲಿನ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಶ್ರಮಿಸುವ ದೇಶದ ಮುಖ್ಯಸ್ಥ,ಪ್ರಧಾನಿ ನಾಯಕತ್ವದ ಮಂತ್ರಿಮಂಡಳ ಹಾಗು ಉನ್ನತ ಹಂತದ ಕಾರ್ಯದರ್ಶಿಯಿಂದ ಹಿಡಿದು ಕೆಳ ಹಂತದ ಜವಾನನವರೆಗಿನ ನೌಕರರ ಸಮೂಹವನ್ನು ಆಡಳಿತ ಸೇವಾ ವರ್ಗವೆಂದು ಪರಿಗಣಿಸಲಾಗುತ್ತದೆ. ಆಡಳಿತ ಸೇವಾ ವರ್ಗವು ಸರ್ಕಾರದ ರಡನೆಯ ಅಂಗ ಕಾರ್ಯಾಂಗವನ್ನು ಪ್ರತಿನಿಧಿಸುತ್ತದೆ.
23. ಆಡಳಿತ ಸೇವಾ ವರ್ಗದ [ನಾಗರಿಕ ಸೇವಾ ವರ್ಗದ] ವರ್ಗೀಕರಣವನ್ನು ತಿಳಿಸಿ?
ಉ:ಆಡಳಿತ ಸೇವಾ ವರ್ಗವನ್ನು ಭಾರತದಲ್ಲಿ ಈ ಕೆಳಗಿನಂತೆ ವರ್ಗೀಕರಿಸಲಾಗುತ್ತದೆ.
A.ಅಖಿಲ ಭಾರತೀಯ ಸೇವೆಗಳು
B.ಕೇಂದ್ರೀಯ ಸೇವೆಗಳು
C.ರಾಜ್ಯ ಸೇವೆಗಳು
ಬಹುಮತ: ಸಾಮಾನ್ಯವಾಗಿ ಪ್ರಜಾಪ್ರಭುತ್ವ ದೇಶಗಳಲ್ಲಿ ಬಹುಮತ ಪರಿಕಲ್ಪನೆ ಜನಪ್ರೀಯವಾಗಿರುತ್ತದೆ. ನಿರ್ಧಾರ ಕೈಗೊಳ್ಳುವಾಗ ಬಹುಮತದ ಅನಿವಾರ್ಯತೆ ಅಪಾರವಾಗಿರುತ್ತದೆ. ಜನಸಾಮಾನ್ಯರ ಭಾಷೆಯಲ್ಲಿ ಬಹುಮತವೆಂದರೆ ಅರ್ಧಕ್ಕಿಂತ ಹೆಚ್ಚು ಎಂದಾಗುತ್ತದೆ. ಆದರೆ ರಾಜ್ಯಶಾಸ್ತ್ರೀಯ ಹಿನ್ನೆಲೆಯಲ್ಲಿ ಬಹುಮತ ಸೂತ್ರವೊಂದನ್ನು ಆಧರಿಸಿದೆ. ಒಟ್ಟು ಸ್ಥಾನಗಳನ್ನು 2 ರಿಂದ ಭಾಗಿಸಬೇಕು. ಆಗ ಬರುವ ತ್ತರಕ್ಕೆ 1 ನ್ನು ಸೇರಿಸಬೇಕು. ಈಗ ಬಹುಮತ ದೊರೆತ ಹಾಗಾಗುತ್ತದೆ. ಉದಾ: ಕರ್ನಾಟಕದ ವಿಧಾನಸಭೆಯಲ್ಲಿ 224 ಸದಸ್ಯರಿದ್ದು 224 ನ್ನು 2 ರಿಂದ ಭಾಗಿಸಿದಾಗ 112 ತ್ತರ ಬರುತ್ತದೆ. 112 ಕ್ಕೆ ಒಂದನ್ನು ಸೇರಿಸಿದಾಗ 113 ಗಿದ್ದು ಅದೇ ಕರ್ನಾಟಕ ವಿಧಾನಸಭೆಯ ಬಹುಮತ ನಿರ್ಧಾರಕ ಸಂಖೆಯಾಗುತ್ತದೆ. ಬಹುಮತ ಸೂಚಿಸುವ ಸಂಖೆಯನ್ನು ಮ್ಯಾಜಿಕ್ ನಂಬರ್ ಎಂದೂ ಕರೆಯಲಾಗುತ್ತದೆ.ಚುನಾವಣಾ ವೇಳೆಯಲ್ಲಿ ಪ್ರತಿಯೊಂದು ಪಕ್ಷ ಶಾಸಕಾಂಗದಲ್ಲಿ ಬಹುಮತ ಗಳಿಸಲು ಹೋರಾಡುತ್ತವೆ. ಯಾವುದೇ ಪಕ್ಷಕ್ಕೆ ಬಹುಮತ ದೊರೆಯದಿದ್ದಾಗ ಹಲವು ಸಮಾನ ಮನಸ್ಕ ಪಕ್ಷಗಳು ಸೇರಿ ಬಹುಮತ ಹೊಂದಲು ಮುಂದಾಗುತ್ತವೆ. ಬಹುಮತ ಪರಿಕಲ್ಪನೆಯನ್ನು ಸರಳವಾಗಿ ಅರಿಯಲು ಜಾರಿಯಲ್ಲಿರುವ ನುಡಿಗಟ್ಟೊಂದು ಸಹಾಯಕವಾಗಬಹುದಾಗಿದ್ದು ಅದೆಂದರೆ 51 ನೂರಕ್ಕೆ ಸಮ ಹಾಗು 49 ಶೂನ್ಯಕ್ಕೆ ಸಮ. ಸಂಸಧೀಯ ಪ್ರಜಾಪ್ರಭುತ್ವ ಅಳವಡಿಸಿಕೊಂಡಿರುವ ಭಾರತದಲ್ಲಿ ಕಾರ್ಯಾಂಗವನ್ನು ರಚಿಸಲು, ಶಾಸನ ಅಂಗೀಕರಿಸಲು, ನ್ಯಾಧೀಶರುತೀರ್ಪು ನೀಡಲು, ರಾಷ್ಟ್ರಪತಿ ಜಯಶಾಲಿಯಾಗಲು ಬಹುಮತ ತತ್ವ ಪಾಲನೆಯಾಗುತ್ತದೆ. ಜೊತೆಗೆ ಪ್ರಜಾಪ್ರಭುತ್ವ ಜೀವನ ವಿಧಾನವೂ ಆಗಿದ್ದು ನಮ್ಮ ನಿತ್ಯ ಜೀವನದ ಹಲವು ಸಂದರ್ಭಗಳಲ್ಲಿ ಬಹುಮತ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಪಾಲಿಸಲ್ಪಡುತ್ತದೆ.
ತಿದ್ದುಪಡಿ: ತಿದ್ದುಪಡಿ ಎಂದರೆ ಮಾರ್ಪಾಟು ಎಂದರ್ಥ. ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಬದಲಾವಣೆ ತರುವುದನ್ನು ತಿದ್ದುಪಡಿ ಎನ್ನಬಹುದು. ತಿದ್ದುಪಡಿಯು ಸಂವಿಧಾನಾತ್ಮಕ ತಿದ್ದುಪಡಿ ಮತ್ತು ಸಾಮಾನ್ಯ ಕಾನೂನು ತಿದ್ದುಪಡಿ ಎಂಬ ರಡು ಸ್ವರೂಪಗಳನ್ನು ಪಡೆದಿರುತ್ತದೆ. ಸಂವಿಧಾನದಲ್ಲಿರುವ ಮೂಲಭೂತ ಕಾನೂನುಗಳನ್ನು ಬದಲಾಯಿಸಿದರೆ ಸಂವಿಧಾನಾತ್ಮಕ ತಿದ್ದುಪಡಿ ಎನಿಸಿಕೊಳ್ಳುತ್ತದೆ. ಶಾಸಕಾಂಗಗಳು ಕಾಲಕಾಲಕ್ಕೆ ಜಾರಿಗೊಳಿಸಿರುವ ಸಾಮಾನ್ಯ, ಕಾನೂನುಗಳನ್ನು ತಿದ್ದುಪಡಿಗೊಳಿಸಿದರೆ ಕಾನೂನಾತ್ಮಕ ತಿದ್ದುಪಡಿ ಎನಿಸಿಕೊಳ್ಳುತ್ತದೆ. ಸಂವಿದಾನಾತ್ಮಕ ತಿದ್ದುಪಡಿಯ ವ್ಯಾಪ್ತಿಯು ವಿಶಾಲವಾಗಿದ್ದು ಅಸ್ತಿತ್ವದಲ್ಲಿರುವ ನಿರುಪಯುಕ್ತ ನಿಯಮಾವಳಿಗಳನ್ನು ರದ್ದುಗೊಳಿಸುವ, ಹೊಸ ನಿಯಮಾವಳಿಗಳನ್ನು ಸೇರಿಸುವ ಮತ್ತು ಈಗಿರುವ ನಿಯಮಾವಳಿಗಳಲ್ಲಿ ಅಗತ್ಯ ಮಾರ್ಪಾಟು ಮಾಡುವ ಚಟುವಟಿಕೆಗಳನ್ನು ಸೂಚಿಸುತ್ತದೆ. ಜೊತೆಗೆ ಸಂವಿಧಾನಾತ್ಮಕ ತಿದ್ದುಪಡಿ ವಿಶೇಷ ವಿಧಾನಗಳಿಂದ ಮಾಡಲಾಗುತ್ತದೆ. ಉದಾ: ಭಾರತದಲ್ಲಿ ಸಂಸತ್ತಿನ ಭಯ ಸದನಗಳ ಸಾಮಾನ್ಯ ಬಹುಮತದ ಮೂಲಕ, ಸಂಸತ್ತಿನ ವಿಶೇಷ ಬಹುಮತದ ಮೂಲಕ ಮತ್ತು ಸಂಸತ್ತು ಹಾಗು ಅರ್ಧಕ್ಕಿಂತ ಹೆಚ್ಚು ರಾಜ್ಯ ಶಾಸಕಾಂಗಗಳ ಅನುಮೋದನೆಯ ಮೂಲಕ ತಿದ್ದುಪಡಿ ಮಾಡಲಾಗುತ್ತದೆ. ಸಂವಿಧಾನಾತ್ಮಕ ತಿದ್ದುಪಡಿ ಅಧಿಕಾರವನ್ನು ಸಂವಿಧಾನದಲ್ಲಿಯೇ ವಿವರಿಸಲಾಗುತ್ತದೆ. ಭಾರತ ಸಂವಿಧಾನದ 368 ನೇ ವಿಧಿಯು ತಿದ್ದುಪಡಿ ಅವಕಾಶವನ್ನು ಕುರಿತು ವಿವರಿಸಿದೆ. ಆದರೆ ಕಾನೂನಾತ್ಮಕ ತಿದ್ದುಪಡಿಗಳ ತಿದ್ದುಪಡಿ ಸುಲಭವಾಗಿದ್ದು ಶಾಸಕಾಂಗದಲ್ಲಿ ಸರಳ ಬಹುಮತದೊಡನೆ ತಿದ್ದುಪಡಿ ಮಾಡಲಾಗುತ್ತದೆ.
ತುರ್ತು ಪರಿಸ್ಥಿತಿ: ಅಸಹಜ ಸನ್ನಿವೇಶವನ್ನು ತುರ್ತು ಪರಿಸ್ಥಿತಿ ಎನ್ನಬಹುದು. ದೇಶದಲ್ಲಿ
ಜಂಟಿ ಅಧಿವೇಶನ: ಸಂಸತ್ತು ಲೋಕಸಭೆ ಹಾಗು ರಾಜ್ಯಸಭೆ ಎಂಬ ರಡು ಸದನಗಳನ್ನು ಹೊಂದಿದೆ. ವಿವಿಧ ಧಿವೇಶನಗಳ ಸಮಯದಲ್ಲಿ ಲೋಕಸಭೆ ಹಾಗು ರಾಜ್ಯಸಭೆ ಪ್ರತ್ಯೇಕವಾಗಿ ತಮ್ಮ ಕಾರ್ಯಕಲಾಪಗಳನ್ನು ನಡೆಸುತ್ತವೆ. ಒಂದು ಮಸೂದೆಯನ್ನು ಕುರಿತು ಸಂಸತ್ತಿನ ಭಯ ಸದನಗಳ ನಡುವೆ ಭಿನ್ನಾಭಿಪ್ರಾಯ ಟಾದರೆ ಅದನ್ನು ಬಗೆಹರಿಸಲು ರಾಷ್ಟ್ರಪತಿ ಜಂಟಿ ಅಧಿವೇಶನ ಕರೆಯುತ್ತಾರೆ. ಒಂದು ಮಸೂದೆಯನ್ನು ಒಂದು ಸದನವು ಅಂಗೀಕರಿಸಿ ಇನ್ನೊಂದು ಸದನವು ತಿರಸ್ಕರಿಸಿದಾಗ ಜಂಟಿ ಅಧಿವೇಶನದ ಅಗತ್ಯ ಟಾಗುತ್ತದೆ. ಮಸೂದೆ ತಿರಸ್ಕರಿಸುವ ಸದನವು ಶಿಫಾರಸ್ಸು ಮಾಡಿದ ತಿದ್ದುಪಡಿಗಳನ್ನು ಮಸೂದೆ ಅಂಗೀಕರಿಸಿರುವ ಸದನವು ಪ್ಪಿಕೊಳ್ಳದೇ ಆರು ತಿಂಗಳು ಗತಿಸಿದಾಗ ರಾಷ್ಟ್ರಪತಿ ಸಂವಿಧಾನದ 108 ನೇ ವಿಧಿಯಾನುಸಾರ ಜಂಟಿ ಅಧಿವೇಶನ ಕರೆಯುತ್ತಾರೆ. ಸಂವಿಧಾನಾತ್ಮಕ ತಿದ್ದುಪಡಿ ಮಸೂದೆ ಹಾಗು ಹಣಕಾಸು ಮಸೂದೆ ಕುರಿತು ಸಂಸತ್ತಿನ ರಡು ಸದನಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದರೆ ಜಂಟಿ ಅಧಿವೇಶನಕ್ಕೆ ಅವಕಾಶವಿಲ್ಲ. ಕೇವಲ ಸಾಮಾನ್ಯ ಮಸೂದೆ ಕುರಿತ ಗೊಂದಲಗಳ ಪರಿಹಾರಕ್ಕೆ ಮಾತ್ರ ಸಂವಿಧಾನ ರಚನಾಕಾರರು ಜಂಟಿ ಅಧಿವೇಶನಕ್ಕೆ ಅವಕಾಶ ಕಲ್ಪಿಸಿದ್ದಾರೆ.ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಲೋಕಸಭಾಧ್ಯಕ್ಷ ಅಥವ ಸ್ಪೀಕರನೇ ವಹಿಸುತ್ತಾನೆ. ಭಾರತದಲ್ಲಿ ಈವರೆಗೆ ಮೂರು ಬಾರಿ ಜಂಟಿ ಅಧಿವೇಶನ ಕರೆಯಲಾಗಿದೆ. ಮೊದಲ ಜಂಟಿ ಅಧಿವೇಶನವು 6 9 ಮೇ 1961 ರಂದು ಜರುಗಿ 1959 ರ ವರದಕ್ಷಿಣಾ ನಿಷೇಧ ಕಾಯಿದೆಯನ್ನು ಕುರಿತ ಭಿನ್ನಾಭಿಪ್ರಾಯವನ್ನು ಬಗೆಹರಿಸಿತು. ಎರಡನೇ ಜಂಟಿ ಅಧಿವೇಶನವು 16 ಮೇ 1978 ರಂದು ಜರುಗಿ ರಾಜ್ಯಸಭೆ ತಿರಸ್ಕರಿಸಿದ್ದ ಭ್ಯಾಂಕಿಂಗ್ ಸೇವೆಗಳ ಯೋಗ ರದ್ದತಿ ಕಾಯಿದೆ 1977 ನ್ನು ಅಂಗೀಕರಿಸಿತು. ಮೂರನೇ ಜಂಟಿ ಅಧಿವೇಶನವು 26 ಮಾರ್ಚ್ 2002 ರಂದು ಜರುಗಿದ್ದು ಭಯೋತ್ಪಾದನಾ ನಿಯಂತ್ರಣ ಕಾಯಿದೆಯನ್ನು ಸುಗ್ರೀವಾಜ್ನೆಯ ಬದಲಾಗಿ ಲೋಕಸಭೆ ಅಂಗೀಕರಿಸಿ ರಾಜ್ಯಸಭೆ ವಿರೋಧಿಸಿತು. ಆಗ ಭಯೋತ್ಪಾದನಾ ನಿಯಂತ್ರಣ ಕಾಯಿದೆಯನ್ನು ಅಂಗೀಕರಿಸಲಾಯಿತು. ಗಮನಿಸಬೇಕಾದ ಅಂಶವೆಂದರೆ ಜಂಟಿ ಅಧಿವೇಶನದಲ್ಲಿ ವಿವಾದಿತ ಮಸೂದೆಯನ್ನು ಚರ್ಚಿಸಿ ಮತಕ್ಕೆ ಹಾಕಲಾಗುತ್ತದೆ. ಲೋಕಸಭೆಯು ತನ್ನ ಅಧಿಕ ಸಂಖ್ಯಾ ಬಲದಿಂದ ರಾಜ್ಯಸಭೆಯ ನಿಲುವನ್ನು ಹಿಂದಿಕ್ಕಿ ಮೇಲುಗೈ ಪಡೆಯುತ್ತದೆ.
ಕೋರಂ: ಸಾಮಾನ್ಯವಾಗಿ ಭಾರತದಲ್ಲಿ ಕೇಂದ್ರ ಹಾಗು ರಾಜ್ಯ ಶಾಸಕಾಂಗಗಳು ಬಡ್ಜೆಟ್, ಮಳೆಗಾಲದ ಹಾಗು ಚಳಿಗಾಲದ ಅಧಿವೇಶನ ಸೇರುತ್ತವೆ. ಶಾಸನಸಭೆಯ ಅಧಿವೇಶನ ಜರುಗುವಾಗ ಹಾಜರಿರಬೇಕಾದ ಕನಿಷ್ಟ ಶಾಸನಸಭೆಯ ಸದಸ್ಯರ ಸಂಖೆಯನ್ನು ಕೋರಂ ಎನ್ನಲಾಗುತ್ತದೆ. ಭಾರತದಲ್ಲಿ ಹತ್ತನೇ ಒಂದರಷ್ಟು ಶಾಸನಸಭೆಯ ಕೋರಂ ಆಗಿದೆ. ಉದಾ: ಲೋಕಸಭೇಯ ಟ್ಟು ಸದಸ್ಯರ ಸಂಖೆ 543 ಆಗಿದ್ದು ಲೋಕಸಭೆಯ ಕೋರಂ 55 ಆಗಿದೆ. ಅದೇ ರೀತಿ ಕರ್ನಾಟಕದ ವಿಧಾನಸಭಾ ಸದಸ್ಯರ ಟ್ಟು ಸಂಖೆ 224 ಆಗಿದ್ದು ಕೋರಂ ಸಂಖೆ 23 ಆಗಿದೆ. ಕೋರಂ ಸಂಖೆಯಷ್ಟು ಸದಸ್ಯರು ಹಾಜರಿರದಿದ್ದರೆ ಅಧಿವೇಶನವನ್ನು ಸಭಾಧ್ಯಕ್ಷ, ನಡೆಸಲಾಗದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ