ಸಾರಾಂಶ: ವಿಶ್ವದ ಬಹುತೇಕ ದೇಶಗಳಂತೆ ಭಾರತ ಪ್ರಾತಿನಿಧಿಕ ಪ್ರಜಾಪ್ರಭುತ್ವ ಹೊಂದಿದೆ. ಭಾರತೀಯ ಪ್ರಜಾಪ್ರಭುತ್ವದ ಯಶಸ್ಸು ನಿಶ್ಪಕ್ಷಪಾತ ಚುನಾವಣೆಯನ್ನು ಆಧರಿಸಿದೆ. ಪ್ರಜಾಪ್ರಭುತ್ವಕ್ಕೆ ಜೀವಾಳವಾಗಿರುವ ಬಾರತೀಯ ಚುನಾವಣಾ ವ್ಯವಸ್ಥೆಯಲ್ಲಿಯೇ ಹಲವು ನವೀನ ಸಮಸ್ಯೆಗಳು ಜನ್ಮ ತಾಳುತ್ತಿವೆ. ಚುನಾವಣಾ ಸಮಸ್ಯೆಗಳೊಡ್ಡುವ ಸವಾಲುಗಳಿಂದ ಭಾರತೀಯ ಪ್ರಜಾಪ್ರಭುತ್ವ ಬಳಲುವಂತಾಗಿದೆ. ಚುನಾವಣೆ ವ್ಯವಸ್ಥೆಯ ಪ್ರಸಕ್ತ ಸಮಸ್ಯೆಗಳು ಮತ್ತು ಭಾರತೀಯ ಪ್ರಜಾಪ್ರಭುತ್ವಕ್ಕೆ ತಲೆದೋರಿರುವ ಸವಾಲುಗಳನ್ನು ಈ ಪತ್ರಿಕೆಯಲ್ಲಿ ಚರ್ಚಿಸಲಾಗಿದೆ. ಜೊತೆಗೆ ಪ್ರಜಾಪ್ರಭುತ್ವ ನಿರಂತರವಾಗಿ ಯಶಸ್ಸಿನ ಪಥದಲ್ಲಿ ಸಾಗಲು ಅವಶ್ಯಕವಾದ ಕೆಲವು ಪರಿಹಾರಾತ್ಮಕ ಸಲಹೆಗಳನ್ನು ಪತ್ರಿಕೆಯಲ್ಲಿ ಪ್ರತಿಪಾದಿಸಲಾಗಿದೆ.
ಪ್ರಮುಖ ಪದಗಳು:
ಪ್ರಜಾಪ್ರಭುತ್ವ
ಚುನಾವಣಾ ವ್ಯವಸ್ಥೆ
ಮತದಾರರ ಭಾಗವಹಿಸುವಿಕೆ
ರಾಜಕೀಯ ಪಕ್ಷಗಳು
ಅನುಷ್ಟಾನ
ಪ್ರಸ್ತಾವನೆ:
ಪ್ರಜೆಗಳು ಆಡಳಿತದಲ್ಲಿ ಪಾಲು ಹೊಂದಿರುವ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವ. ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರತ್ಯಕ್ಷ ಪ್ರಜಾಪ್ರಭುತ್ವದ ಅನುಷ್ಟಾನ ಾಧುನಿಕ ರಾಷ್ಟ್ರ ರಾಜ್ಯಗಳಲ್ಲಿ ಅಸಾಧ್ಯ. ಹೀಗಾಗಿ ಪ್ರಜೆಗಳು ಪ್ರತಿನಿಧಿಗಳ ಮೂಲಕ ಾಡಳಿತದಲ್ಲಿ ಭಾಗವಹಿಸುವ ಪ್ರಾತಿನಿಧಿಕ ಪ್ರಜಾಪ್ರಭುತ್ವ ಇಂದು ಜಗತ್ತಿನೆಲ್ಲೆಡೆ ಜಾರಿಯಲ್ಲಿದೆ. ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಚುನಾವಣೆಗಳು ಅನಿವಾರ್ಯ. ಹೀಗಾಗಿ ಪ್ರಜಾಪ್ರಭುತ್ವ ಮತ್ತು ಚುನಾವಣೆಗಳನ್ನು ಒಂದೇ ನಾಣ್ಯದ ೆರಡು ಮುಖಗಳು ಎನ್ನಲಾಗುತ್ತದೆ. ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಚುನಾವಣೆಗಳು ಸಹಜ ಹಾಗು ಸಂಖೀರ್ಣವಾಗಿವೆ. ನಿರ್ಭೀತ, ನಿಶ್ಪಕ್ಷಪಾತ ಹಾಗು ಪಾರದರ್ಶಕ ಚುನಾವಣೆಗಳು ಭಾರತೀಯ ಪ್ರಜಾಪ್ರಭುತ್ವದ ನಿರಂತರತೆಗೆ ಅನಿವಾರ್ಯ. ಸಂವಿಧಾನಾತ್ಮಕ ಸ್ವತಂತ್ರ ಾಯೋಗ, ವಿವಿಧ ಕಾನೂನುಗಳ ಜಾರಿ, ನಾನಾ ಚುನಾವಣಾ ಸುಧಾರಣಾ ಸಮೀತಿಗಳ ಶಿಫಾರಸುಗಳ ಅನುಷ್ಟಾನಗಳ ನಡುವೆಯೂ ಭಾರತೀಯ ಪ್ರಜಾಪ್ರಭುತ್ವದಲ್ಲಿ ಚುನಾವಣಾ ವ್ಯವಸ್ಥೆ ಹಲವು ಸವಾಲುಗಳಿಂದ ಮುಕ್ತವಾಗಿಲ್ಲ.
ಚುನಾವಣಾ ವ್ಯವಸ್ಥೆಯಲ್ಲಿನ ಸಮಸ್ಯೆಗಳು:
ಪ್ರಸ್ತುತ ಭಾರತೀಯ ಚುನಾವಣಾ ವ್ಯವಸ್ಥೆಯು ತೃಪ್ತಿಕರವಾಗಿಲ್ಲ. ಕಾರಣ ಅನೇಕ ಸಮಸ್ಯೆಗಳಿಂದ ಚುನಾವಣಾ ಪ್ರಕ್ರಿಯೆ ಬಳಲುತ್ತಿದೆ. ಸರ್ವ ಸಮ್ಮತ, ನಿಶ್ಪಕ್ಷಪಾತ ಹಾಗು ಯಶಸ್ವಿ ಚುನಾವಣೆಗೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಕೆಳಗಿನ ಸಮಸ್ಯೆಗಳು ತೊಡಕಾಗಿರುವುದನ್ನು ಕಾಣಬಹುದು.
* ಕಡಿಮೆ ಪ್ರಮಾಣದ ಮತದಾನ: ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು ಇತ್ತೀಚಿನ ಚುನಾವಣೆಗಳವರೆಗೆ ಮತದಾನದ ಪ್ರಮಾಣ ಸಮಾಧಾನಕರವಾಗಿಲ್ಲ. ಸರಾಸರಿ 50 ರಿಂದ 70 ಮತದಾರರು ಮಾತ್ರ ಮತ ಚಲಾಯಿಸುವರು. ಚುನಾವಣಾ ಆಯೋಗ ಮತದಾನದ ದಿನ ರಜೆ ನೀಡುವ ಸುಧಾರಣೆ ಜಾರಿಗೊಳಿಸಿದ್ದು ಮತದಾನದ ಅರಿವು ಮೂಡಿಸಲು ಶ್ರಮಿಸುತ್ತಿದೆ. ಅಲ್ಲದೇ ಭಾರತೀಯರ ಸಾಕ್ಷರತೆಯ ಮಟ್ಟ ವ್ಯಾಪಕವಾಗಿ ಹೆಚ್ಚಾಗಿದೆ. ಆದರೂ ಚುನಾವಣೆಯಲ್ಲಿ ಮತದಾನಕ್ಕೆ ಮುಂದಾಗದಿರುವುದು ಚುನಾವಣಾ ವ್ಯವಸ್ಥೆಯ ಸಮಸ್ಯೆಯಾಗಿ ಉಳಿದುಕೊಂಡಿದೆ.
* ಅಧಿಕ ಚುನಾವಣಾ ವೆಚ್ಚ: ುಳಿದೆಲ್ಲ ಪ್ರಜಾಪ್ರಭುತ್ವ ದೇಶಗಳಿಗಿಂತ ಭಾರತೀಯ ಚುನಾವಣೆಗಳು ಅಧಿಕ ವೆಚ್ಚದಾಯಕ. ಕಾರಣ ೆತೇಚ್ಚ ಜನಸಂಖೆಯಿಂದಾಗಿ ಒಂದು ಲೋಕಸಭಾ ಮತಕ್ಷೇತ್ರವು ಲಕ್ಷಗಟ್ಟಲೇ ಮತದಾರರನ್ನು ಹೊಂದಿವೆ. ಸ್ಪರ್ಧಾಳುಗಳು ಅಸಂಖ್ಯ ಮತದಾರರನ್ನು ತಲುಪಿ ಪ್ರಚಾರ ನಡೆಸಲು ಸಾಕಷ್ಟು ವೆಚ್ಚ ಮಾಡಬೇಕಾಗುತ್ತದೆ. ಕೆಲವು ಪಕ್ಷಗಳು ತಮ್ಮ ುಮೇದುವಾರರಿಗೆ ಪಕ್ಷದ ನಿಧಿಯನ್ನು ನೀಡಿದರೆ ಹಲವು ಪಕ್ಷಗಳು ಸಾಕಷ್ಟು ವೆಚ್ಚ ಮಾಡಲು ಸಾಮರ್ಥ್ಯವಿರುವವರನ್ನೆ ಹುಡುಕಿ ಟಿಕೆಟ್ ನೀಡುತ್ತಿವೆ. ಚುನಾವಣಾ ಆಯೋಗ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು ನಿಗಧಿಪಡಿಸಿದೆ. ಜೊತೆಗೆ ವೆಚ್ಚದ ಮಿತಿಯನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ವೆಚ್ಚದ ವೀಕ್ಷಕರನ್ನೂ ನೇಮಿಸುತ್ತಿದೆ. ಆದರೆ 1 ಸಾರ್ವತ್ರಿಕ ಚುನಾವಣೆಯಿಂದ ಸಾರ್ವತ್ರಿಕ ಚುನಾವಣೆಗೆ ಚುನಾವಣಾ ವೆಚ್ಚ ಿಮ್ಮಡಿಗೊಳ್ಳುತ್ತಾ ಸಾಗಿರುವುದು ಚುನಾವಣೆಯಲ್ಲಿ ಕಪ್ಪು ಹಣದ ಬಳಕೆಯ ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿದೆ.
* ರಾಜಕೀಯ ಅಪರಾಧೀಕರಣ: ಅತ್ಯಾಚಾರ, ಕೊಲೆ ಯತ್ನ, ಬ್ರಷ್ಟಾಚಾರ, ದಬ್ಬಾಳಿಕೆ ಆರೋಪ ಹೊಂದಿದವರು ಚುನಾವಣಾ ಕಣಕ್ಕಿಳಿಯುವುದನ್ನು ರಾಜಕೀಯ ಅಪರಾಧೀಕರಣ ೆನ್ನಬಹುದು. ಇಂದು ಭಾರತದಲ್ಲಿ ರಾಜಕೀಯ ಅಪರಾಧೀಕರಣ ಸರ್ವೇ ಸಾಮಾನ್ಯ ಸಂಗತಿ ಎಂಬಂತೆ ಎಲ್ಲ ರಾಜಕೀಯ ಪಕ್ಷಗಳು ಅನುಸರಿಸುತ್ತಿವೆ. ಭಾರತದಲ್ಲಿ ಪ್ರತಿನಿಧಿಗಳು ಶುದ್ಧ ಚಾರಿತ್ರ್ಯ ಹೊಂದಿರಬೇಕೆಂಬ ಅಂಶವನ್ನು ಕಡೆಗಣಿಸಿ ಅಪರಾಧ ಹಿನ್ನೆಲೆಯುಳ್ಳವರಿಗೆ ಚುನಾವಣಾ ವೇಳೆ ಮಣೆ ಹಾಕಲಾಗುತ್ತಿದೆ. ಅಸೋಶಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ ಪ್ರಕಾರ 16 ನೇ ಸಾರ್ವತ್ರಿಕ ಚುನಾವಣೆಯ ವೇಳೆ ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣ ಪತ್ರಗಳನುಸಾರ 2 ಲೋಕಸಭೆಯ ಶೇ. 34 ಸದಸ್ಯರು ಅಪರಾಧ ಹಿನ್ನೆಲೆಯಲ್ಲಿ ಪ್ರಕರಣ ೆದುರಿಸುವವರಾಗಿದ್ದಾರೆ. 2004 ಮತ್ತು 2009 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಅಪರಾಧ ಹಿನ್ನೆಲೆಯುಳ್ಳ ಪ್ರತಿನಿಧಿಗಳ ಪ್ರಮಾಣ ಕ್ರಮವಾಗಿ ಶೇ. 24 ಹಾಗು 30 ಆಗಿತ್ತು. ಒಟ್ಟಾರೆ ರಾಜಕೀಯ ಅಪರಾಧೀಕರಣ ಭಾರತ ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಯಾಗುತ್ತಾ ಸಾಗಿದೆ.
* ಚುನಾಯಿತ ಪ್ರತಿನಿಧಿಗಳ ಪಕ್ಷಾಂತರ: ಚುನಾಯಿತ ಪ್ರತಿನಿಧಿ ತನ್ನ ಪಕ್ಷವನ್ನು ತೊರೆದು ಬೇರೊಂದು ಪಕ್ಷ ಸೇರುವುದನ್ನು ಪಕ್ಷಾಂತರ ೆನ್ನಬಹುದು. ಸ್ವತಂತ್ರ್ಯ ಪೂರ್ವದಿಂದಲೂ ತನ್ನ ಕುರುಹು ಹೊಂದಿರುವ ಪಕ್ಷಾಂತರ 1967 ರ ಬಳಿಕ ಭಾರತದಲ್ಲಿ ಅಧಿಕವಾಯಿತು. ಇದರಿಂದ ಚುನಾವಣೆಯಲ್ಲಿ ವ್ಯಕ್ತವಾಗುವ ಮತದಾರರ ಸೈದ್ಧಾಂತಿಕ ಮನೋಭಿಲಾಷೆ ಮಹತ್ವ ಕಳೆದುಕೊಳ್ಳತೊಡಗಿತು. 1985 ರ ಪಕ್ಷಾಂತರ ನಿಷೇಧ ಕಾಯಿದೆ ಮೂಲಕ ಪಕ್ಷಾಂತರ ತಡೆಗೆ ಸರ್ಕಾರ ಮುಂದಾಯಿತು. ಆದರೆ ರಾಜ್ಯ ಮಟ್ಟದಲ್ಲಿ ಇಂದಿಗೂ ಕಾನೂನಿನಲ್ಲಿನ ದೌರ್ಭಲ್ಯದಿಂದ ೀ ಪಿಡುಗು ಅಸ್ತಿತ್ವದಲ್ಲಿದೆ. ಪ್ರಸ್ತುತ, ಚುನಾವಣೆಯ ುದ್ದೇಶವನ್ನು ಅಣಕಿಸುವಷ್ಟು ಪಕ್ಷಾಂತರ ಭಾರತದಲ್ಲಿ ಸಮಸ್ಯೆಯಾಗಿದೆ ಎಂದರೆ ತಪ್ಪಾಗಲಾರದು.
* ಜಾತಿ ಆಧರಿತ ಮತದಾನ: ಜಾತಿ ಪದ್ಧತಿಯು ಭಾರತೀಯ ಸಮಾಜದ ಪ್ರಧಾನ ಲಕ್ಷಣ. ಿತ್ತೀಚೆಗೆ ರಾಜಕಾರಣಿಗಳ ಸ್ವಾರ್ಥದಿಂದ ಚುನಾವಣೆಗಳಲ್ಲಿ ಜಾತಿಯ ಪ್ರಭಾವ ಾಳವಾಗಿ ಬೇರೂರಿದೆ. 3 ರಾಜಕೀಯ ಪಕ್ಷಗಳು ನಿರ್ದಿಷ್ಟ ಮತಕ್ಷೇತ್ರದ ಜಾತಿಯ ಲೆಕ್ಕಾಚಾರದ ಮೇಲೆ ಟಿಕೇಟ್ ಹಂಚುವ ಪರಿಪಾಠ ಬೆಳೆಸಿಕೊಂಡಿವೆ. ಪ್ರತಿ ಅಭ್ಯರ್ಥಿ ಅಭಿವೃದ್ಧಿಯ ಬದಲು ಜಾತಿ ಆಧರಿಸಿ ಚುನಾವಣಾ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಜೊತೆಗೆ ಮತದಾರರೂ ಸಹ ತಮ್ಮ ಜಾತಿಯ ುಮೇದುವಾರರಿಗೆ ಕಣ್ಣು ಮುಚ್ಚಿಕೊಂಡು ಮತದಾನ ಮಾಡುತ್ತಿದ್ದಾರೆ. ಇದರಿಂದ ಭಾರತದ ಚುನಾವಣೆ ವ್ಯವಸ್ಥೆ ಜಾತಿಯಾಧರಿತ ಮತದಾನದ ಸಂಕೀರ್ಣ ಸಮಸ್ಯೆಯಿಂದ ಬಳಲುತ್ತಿದೆ.
* ಮತದಾರ ಹಾಗು ಸ್ಪರ್ಧಾಳುವಿನ ವಯೋಮಿತಿ ಅಂತರ: ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನಿರ್ದಿಷ್ಟ ವಯೋಮಿತಿಯನ್ನು ಸಾಕಷ್ಟು ಚರ್ಚೆಯ ಬಳಿಕ ನಿಗದಿಪಡಿಸಲಾಗಿದೆ. ರಾಷ್ಟ್ರಪತಿ ಹಾಗು ಉಪ ರಾಷ್ಟ್ರಪತಿಯಾಗಲು 35, ರಾಜ್ಯಸಭೆ ಹಾಗು ವಿಧಾನ ಪರಿಷತ್ತ್ ಸದಸ್ಯನಾಗಲು 30, ಲೋಕಸಭೆ ಹಾಗು ವಿಧಾನಸಭೆ ಸದಸ್ಯನಾಗಲು 25 ವಯೋಮಿತಿಯವರೆಗೆ ಮತದಾರ ಕಾಯಬೇಕಾಗುತ್ತದೆ.ಆದರೆ 18 ವರ್ಷಕ್ಕೆ ರಾಜಕೀಯ ಹಕ್ಕನ್ನು ಪಡೆದ ಮತದಾರ ತಾನು ಸ್ಪರ್ಧೆಯ ಅವಕಾಶ ವಂಚಿತನೆಂಬ ಭಾವನೆಯನ್ನು ಹೊಂದಿರುವ. ಿದರಿಂದ ಯುವ ಮತದಾರರಿಂದ ಕೂಡಿರುವ ಭಾರದ ಚುನಾವಣಾ ವ್ಯವಸ್ಥೆಯು ಪರೋಕ್ಷ ಸಮಸ್ಯೆಯನ್ನು ಎದುರಿಸಬೇಕಾಗಿದೆ.
* ನಿರ್ದಿಷ್ಟ ವಿದ್ಯಾರ್ಹತೆ ಹಾಗು ಸ್ಪರ್ಧಾ ಅವಧಿಯ ಕೊರತೆ: ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುವ ುಮೇದುವಾರರಿಗೆ ಯಾವುದೇ ಶೈಕ್ಷಣಿಕ ಅರ್ಹತೆಯನ್ನು ನಿಗಧಿಪಡಿಸಿಲ್ಲ. ಿದರಿಂದ ತಾನು ಪ್ರತಿನಿಧಿಸುವ ಜನರ ಬವಣೆಯನ್ನು ಅರಿತು ಪರಿಹರಿಸುವಲ್ಲಿ ಪ್ರತಿನಿಧಿ ವಿಫಲಗೊಂಳ್ಳುವನು. ಜೊತೆಗೆ ಒಬ್ಬ ಸ್ಪರ್ಧಾಳು ಸ್ಪರ್ಧಿಸುವ ಚುನಾವಣೆಗಳ ನಡುವೆ ನಿರ್ದಿಷ್ಟ ಅಂತರವಿರಬೇಕು. ಒಂದು ಸ್ಥಾನಕ್ಕೆ ಆಯ್ಕೆಯಾದ ವ್ಯಕ್ತಿ ಆ ಸ್ಥಾನದ ಅವಧಿ ಮುಗಿಯುವ ಮೊದಲೇ ಬೇರೊಂದು ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಹೀಗೆ ಭಾರತದಲ್ಲಿ ಮನಬಂದಷ್ಟು ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಿದ್ದು ಚುನಾವಣಾ ವ್ಯವಸ್ಥೆಯನ್ನು ಹಾಳುಗೆಡವುತ್ತದೆ.
* ಪಾವತಿಸಿದ ಸುದ್ದಿಗಳ ಭರಾಟೆ: ತಮ್ಮ ರಾಜಕೀಯ ಗುರಿ ಸಾಧನೆಗಾಗಿ ರಾಜಕಾರಣಿಗಳು ಹಣ ಪಾವತಿಸುವ ಮೂಲಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಪಾವತಿಸಿದ ರಾಜಕಾರಣಿಗಳ ಪರವಾಗಿ ದೃಶ್ಯ ಹಾಗು ಮುದ್ರಿತ ಮಾಧ್ಯಮಗಳು ಅಲೆಯನ್ನುಂಟು ಮಾಡಲು ಮುಂದಾಗುತ್ತವೆ. ಪ್ರಸ್ತುತ ಚುನಾವಣೆಗಳಲ್ಲಿ ಪಾವತಿಸಿದ ಸುದ್ದಿಗಳ ಹಾವಳಿ ಮತದಾರರನ್ನು ಮರಳುಗೊಳಿಸಿ ನಿರೀಕ್ಷಿತ ಫಲಿತಾಂಶ ಗಳಿಸಲು ಯಶಸ್ವಿಯಾಗುತ್ತಿವೆ. ಈ ಬೆಳವಣಿಗೆಯು ನಿಶ್ಪಕ್ಷಪಾತ ಚುನಾವಣೆ ನಡೆಸಲು ಸಮಸ್ಯೆಯಾಗಿ ಪರಿಣಮಿಸಿದೆ.
ಈ ಮೇಲೆ ಪ್ರಸ್ತಾಪಿಸಲಾದ ಪ್ರಚಲಿತ ಸಮಸ್ಯೆಗಳು ಭಾರತೀಯ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿವೆ. ಜೊತೆಗೆ ಬಹುಮತ ತತ್ವ, ಕೋಮು ರಾಜಕಾರಣ, ಸ್ಪರ್ಧೆಯಲ್ಲಿ ಕುಟುಂಬಶಾಹಿತ್ವ, ಪ್ರತ್ಯೇಕ ಚುನಾವಣಾ ಯಂತ್ರದಭಾವ, ಾಡಳಿತ ಯಂತ್ರದ ದುರುಪಯೋಗ ಮುಂತಾದ ಜ್ವಲಂತ ಸಮಸ್ಯೆಗಳು ಚುನಾವಣಾ ವ್ಯವಸ್ಥೆಯಲ್ಲಿರುವುದು ಆತಂಕದ ವಿಚಾರ.
ಚುನಾವಣಾ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದ ಭಾರತೀಯ ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು:
ಯಾವುದೇ ಒಂದು ಕ್ಷೇತ್ರದ ನಿರ್ದಿಷ್ಟ ಸಮಸ್ಯೆಯು ಸವಾಲನ್ನು ಸಹಜವಾಗಿ ಸೃಷ್ಟಿಸುತ್ತದೆ. ಅಂತೆಯೇ ಭಾರತದ ಚುನಾವಣಾ ವ್ಯವಸ್ಥೆ ಎದುರಿಸುತ್ತಿರುವ ಪ್ರಚಲಿತ ಪ್ರಸ್ತಾಪಿತ ಸಮಸ್ಯೆಗಳು ತಮ್ಮದೇ ಸವಾಲುಗಳನ್ನು ಪ್ರತಿನಿಧಿಸುತ್ತವೆ. ವಿಶ್ವದ ವಿಶಾಲ ಪ್ರಜಾಪ್ರಭುತ್ವದ ಯಶಸ್ಸಿಗೆ ತೊಡಕಾಗಿರುವ ಾ ಸವಾಲುಗಳು ಕೆಳಗಿನಂತಿವೆ.
* ಸಮಗ್ರ ಪ್ರಾತಿನಿಧ್ಯದ ಕೊರತೆ: ಚುನಾವಣೆಯಲ್ಲಿ ಸರ್ವ ಮತದಾರರು ಮತದಾನಕ್ಕೆ ಮುಂದಾಗದೇ ಕಡಿಮೆ ಮತದಾನವಾಗುತ್ತದೆ. ಚಲಾವಣೆಯಾದ ಮತಗಳನ್ನು ಕಣದಲ್ಲಿರುವ ಬೇರೆ ಬೇರೆ ಅಭ್ಯರ್ಥಿಗಳು ಪಡೆದಿರುತ್ತಾರೆ. ಉಳಿದಿರುವವರಿಗಿಂತ ಹೆಚ್ಚು ಮತ ಗಳಿಸಿದವ ಪ್ರತಿನಿಧಿಯಾಗಿ ಆಯ್ಕೆಯಾಗುತ್ತಾನೆ. ಆದರೆ ವಾಸ್ತವದಲ್ಲಿ ಆತ ಮತಕ್ಷೇತ್ರದ ಕೇವಲ ಶೇ. 25 ರಿಂದ 30 ಮತ ಪಡೆದಿರುತ್ತಾನೆ. ಹೀಗಾಗಿ 4 ಪ್ರಜಾಪ್ರಭುತ್ವದ ಆಶಯದಂತೆ ಪ್ರತಿನಿಧಿ ಸರ್ವ ಪ್ರಜೆಗಳಿಂದ ಮತ್ತು ಸರ್ವ ಪ್ರಜೆಗಳಿಗಾಗಿ ಆಡಳಿತ ನಡೆಸಲು ಮುಂದಾಗನು. ಹೀಗೆ ಕಡಿಮೆ ಪ್ರಮಾಣದ ಮತದಾನ ಪ್ರಜಾಪ್ರಭುತ್ವಕ್ಕೆ ಭಾರತದಲ್ಲಿ ಸವಾಲಾಗಿ ಪರಿಣಮಿಸಿದೆ.
* ಸರ್ವರ ಸ್ಪರ್ಧೆ ಗಗನ ಕುಸುಮ: ಭಾರತದಲ್ಲಿ ಪ್ರತಿಯೊಬ್ಬ ಮತದಾರ ಕೆಲವು ಅರ್ಹತೆಗಳೊಂದಿಗೆ ಸ್ಪರ್ಧಿಸಲೂ ಹಕ್ಕು ಪಡೆದಿದ್ದಾನೆ. ಆದರೆ ಲಕ್ಷಗಟ್ಟಲೇ ಮತದಾರರಿರುವ ಮತಕ್ಷೇತ್ರದಲ್ಲಿ ಸಾರಿಗೆ ಹಾಗು ಪ್ರಚಾರಕ್ಕೆ ಅಪಾರ ಮೊತ್ತದ ಹಣ ಅನಿವಾರ್ಯ. ರಾಜಕೀಯ ಪಕ್ಷಗಳೂ ಪಕ್ಷದ ನಿಧಿಯನ್ನು ಾನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತೆ ಕಡಿಮೆ ಪ್ರಮಾಣದಲ್ಲಿ ಪೂರೈಸುತ್ತವೆ. ಹೀಗಾಗಿ ಆರ್ಥಿಕವಾಗಿ ಸಬಲರಲ್ಲದವರು ಚುನಾವಣಾ ಸ್ಪರ್ಧೆಯಿಂದ ದೂರ ುಳಿಯುವರು. ಆಡಳಿತದ ಸಾಮರ್ಥ್ಯವಿದ್ದರೂ ವೆಚ್ಚಕ್ಕೆ ಅಂಜಿ ಕಣದಿಂದ ಹಿಂಜರಿಯುವರು. ಹೀಗಾಗಿ ಕೆಲವೇ ಶ್ರೀಮಂತರು, ಕಪ್ಪು ಹಣದ ಕುಬೇರರು, ಬಂಡ ಬ್ರಷ್ಟರು ಹಾಗು ಉದ್ಯಮಿಗಳು ಮಾತ್ರ ಚುನಾವಣೆಗೆ ಸ್ಪರ್ಧಿಸುವರು. ಇದರಿಂದ ಸಾಮಾನ್ಯರು ಸ್ಪರ್ಧಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಚುನಾವಣೆಗಳು ಹಣ ಹಾಕಿ ಹಣ ತೆಗೆಯುವ ುದ್ಯಮವಾಗಿ ಪ್ರಜಾಪ್ರಭುತ್ವದ ಸಮಾನವಕಾಶ ತತ್ವ ಕಣ್ಮರೆಯಾಗಿದೆ.
* ಪ್ರಜೆಗಳ ಹಿತಾಸಕ್ತಿಯ ನಿರ್ಲಕ್ಷ: ಭಾರತದಲ್ಲಿ ರಾಜಕೀಯ ಪಕ್ಷಗಳು ಯಾವುದೇ ಮಾರ್ಗದಿಂದ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೇಟ್ ನೀಡಲು ಮುಂದಾಗುತ್ತಿವೆ. ಇದರಿಂದ ಅಪರಾಧ ಹಿನ್ನೆಲೆಯ ವ್ಯಕ್ತಿಗಳು ಚುನಾವಣೆಯ ಕಣಕ್ಕಿಳಿಯುತ್ತಿದ್ದಾರೆ. ಇಂಥವರು ತಮ್ಮಲ್ಲಿರುವ ಹಣಬಲ ಹಾಗು ತೋಳ್ಬಲ ಬಳಸಿ ಮತದಾರ ಮತ ಗಳಿಸಿ ಜಯಶಾಲಿಯಾಗುತ್ತಾರೆ. ಅಧಿಕಾರ ಬಂದೊಡನೆ ಆ ಮದದಿಂದ ಅಪರಾಧ ಕೃತ್ಯಗಳಲ್ಲಿ ತೊಡಗಲು ಮತ್ತು ಬೆಂಬಲಿಗರ, ಅಪರಾಧ ಚಟುವಟಿಕೆಗಳನ್ನು ಸಮರ್ಥಿಸುವ ಕಾರ್ಯದಲ್ಲಿ ತೊಡಗುವರು. ಆಗ ಸಾಮಾನ್ಯ ಪ್ರಜೆಗಳು ಭಯದ ವಾತಾವರಣದಲ್ಲಿ ಬದುಕಬೇಕಾಗುತ್ತದೆ. ತಮ್ಮ ಸಮಸ್ಯೆಗಳನ್ನು ಪ್ರತಿನಿಧಿಯ ಮೂಲಕ ಪರಿಹರಿಸಿಕೊಳ್ಳಲಾಗದೇ ಹೋಗುತ್ತಾರೆ. ಪ್ರಜಾಪ್ರಭುತ್ವದ ಅಂತಿಮ ಗುರಿ ಪ್ರಜೆಗಳ ಹಿತಾಸಕ್ತಿಯ ರಕ್ಷಣೆ. ಅಪರಾಧ ಹಿನ್ನೆಲೆಯ ಪ್ರತಿನಿಧಿಗಳಿಂದ ಪ್ರಜೆಗಳು ಪ್ರಜಾಪ್ರಭುತ್ವದಲ್ಲಿನ ನಂಬಿಕೆಯನ್ನು ಕ್ರಮೇಣ ಕಳೆದುಕೊಳ್ಳುತ್ತಿರುವುದು ಗಂಭೀರ ಸವಾಲಾಗಿದೆ.
* ಜನತಾ ಪರಮಾಧಿಕಾರಕ್ಕೆ ಅಗೌರವ: ಚುನಾವಣೆಯ ವೇಳೆ ಪ್ರಜೆಗಳು ಮತದಾನದ ಮೂಲಕ ಪ್ರತಿನಿಧಿಯು ಯಾವ ಸಿದ್ಧಾಂತಕ್ಕೆ ಬದ್ಧನಾಗಿರಬೇಕೆಂಬ ತೀರ್ಪು ನೀಡಿರುತ್ತಾರೆ. ಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕೆ ಪಕ್ಷಾಂತರಕ್ಕೆ ಒಳಗಾಗುವರು. ಜೊತೆಗೆ ಪ್ರಜೆಗಳ ಹಿತವೇ ತಮ್ಮ ನಿರ್ಧಾರಕ್ಕೆ ಕಾರಣವೆಂಬ ಸಮರ್ಥನೆ ನೀಡುವರು. ಇಂತಹ ಬೆಳವಣಿಗೆಯಿಂದ ಪ್ರಜೆಗಳು ಚುನಾವಣೆಯಲ್ಲಿ ತಮ್ಮ ಮನೋಭಿಲಾಷೆಗೆ ಮಹತ್ವವಿಲ್ಲವೆಂದು ಚುನಾವಣೆಯಿಂದ ದೂರವೇ ಉಳಿಯುವರು. ಪ್ರತಿನಿಧಿಗಳ ಪಕ್ಷಾಂತರ ಚಟುವಟಿಕೆ ಭಾರತದ ಮತದಾರರಲ್ಲಿ ರಾಜಕೀಯ ನಿರಾಸಕ್ತಿಯನ್ನು ಮೂಡಿಸಿದೆ. ಹೀಗಾಗಿ ಪ್ರಜಾಪ್ರಭುತ್ವ ಭಾರತದಲ್ಲಿ ಸಕ್ರೀಯ ಭಾಗವಹಿಸುವಿಕೆ ಸವಾಲನ್ನು ಎದುರಿಸಬೇಕಾಗಿದೆ.
* ಯುವಕರ ಸಹಭಾಗಿತ್ವದ ಿಳಿಮುಖ: ಭಾರತದಲ್ಲಿ ಸ್ಪರ್ಧಾಳುವಾಗಲು 25 ವರ್ಷದವರೆಗೆ ಕಾಯಬೇಕು. ಅದಕ್ಕಿಂತ ಕಡಿಮೆ ಮಯೋಮಿತಿಯ ಮತದಾರರು ಕೇವಲ ಮತ ಚಲಾಯಿಸುವ ಅವಕಾಶವನ್ನು ಮಾತ್ರ ಪಡೆದಿರುತ್ತಾರೆ. ಯುವಕರು 25 ವರ್ಷದೊಳಗೆ ತಮ್ಮ ಜೀವನ ರೂಪಿಸಿಕೊಳ್ಳಲು ವಿವಿಧ ಕ್ಷೇತ್ರದಲ್ಲಿ ತೊಡಗುವರು. ಹೀಗಾಗಿ ವಂಚಿತ ಭಾವನೆಯಿಂದ ರಾಜಕೀಯದತ್ತ ಯುವಕರು ಮುಖ ಮಾಡುತ್ತಿಲ್ಲ. ಅಲ್ಲದೇ ಮತದಾನಕ್ಕೂ ಮುಂದಾಗುತ್ತಿಲ್ಲ. ಹೀಗಾಗಿ ಬಹು ಸಂಖ್ಯಾತ ಯುವ ಸಮುದಾಯದ ಸಹಭಾಗಿತ್ವ ಭಾರತೀಯ ಪ್ರಜಾಪ್ರಭುತ್ವಕ್ಕೆ ಸವಾಲಾಗಿ ಪರಿಣಮಿಸಿದೆ.
* ಅಬಾಧಿತ ಮತ್ತು ಅಸಮರ್ಥರ ಾಯ್ಕೆ: ಭಾರತದಲ್ಲಿ ಕೆಲವೇ ವ್ಯಕ್ತಿಗಳು ನಿರಂತರವಾಗಿ ಆಯ್ಕೆಯಾಗುತ್ತಿರುವುದು ಸಹಜ ಸಂಗತಿಯಾಗಿದೆ. ಹಣ ಪಾವತಿಸಿದ ಸುದ್ದಿಗಳ ನೆರವಿನಿಂದ ಮತದಾರರ ಕಣ್ಣಿಗೆ ಮಣ್ಣೆರಚಿ ನಿರಂತರವಾಗಿ ಚುನಾವಣೆಗಳಲ್ಲಿ ಪುನರಾಯ್ಕೆಗೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಹೊಸತನದ ಕೊರತೆಯನ್ನು ತಂದೊಡ್ಡಿದೆ. ಅಲ್ಲದೇ ಜಾತಿ, ಹಣ, ತೋಳ್ಬಲ, ಕೋಮು ಭಾವನೆಗಳ ಬಲದಿಂದ ಅಸಮರ್ಥರು ಚುನಾವಣೆಯಲ್ಲಿ ಜಯಶಾಲಿಯಾಗುತ್ತಿದ್ದಾರೆ. ಪರಿಣಾಮ ಪ್ರಗತಿ ಕಾಣದೇ ಮತದಾರರು ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿರುವುದು ಸವಾಲಿನ ವಿಚಾರವಾಗಿದೆ.
ಸಲಹೆಗಳು:
ಪ್ರತಿ ಸಮಸ್ಯೆ ಹಾಗು ಆ ಸಮಸ್ಯೆಯಿಂದ ತಲೆದೋರುವ ಸವಾಲಿಗೆ ತನ್ನದೇ ಪರಿಹಾರಗಳಿರುತ್ತವೆ. ಅದೇ ರೀತಿ ಭಾರತೀಯ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯ ಸವಾಲುಗಳಿಗೂ ಕೆಲ ಪರಿಹಾರ ಕ್ರಮಗಳಿವೆ. ವಿವಿಧ ಚುನಾವಣಾ ಸುಧಾರಣಾ ಸಮೀತಿಗಳು ನೀಡಿರುವ ಶಿಫಾರಸುಗಳೊಡನೆ ಪ್ರಚಲಿತ ಸವಾಲುಗಳಿಗೆ ಕೆಳಗಿನ ಕೆಲವು ಸಲಹೆಗಳು ಭಾರತೀಯ ಪ್ರಜಾಪ್ರಭುತ್ವದ ಯಶಸ್ವಿ ಚುನಾವಣೆಗಳಿಗೆ ನೆರವಾಗಬಹುದು.
* ಕಡ್ಡಾಯ ಮತದಾನಕ್ಕೆ ಕ್ರಮ: ಸರ್ಕಾರದ ಸೇವೆಗಳನ್ನು ಮತದಾನದಲ್ಲಿ ಭಾಗಿಯಾದವರಿಗೆ ಮಾತ್ರ ೊದಗಿಸಬೇಕು. ನೌಕರರಿಗೆ ಮತದಾನದ ದಿನ ರಜೆಯನ್ನು ನೀಡಲಾಗುತ್ತಿದ್ದು ಮರುದಿನ ಮತದಾನ ಮಾಡಿರುವ ಬಗ್ಗೆ ಮೇಲಾಧಿಕಾರಿ ಖಚಿತಪಡಿಸಿಕೊಳ್ಳಬೇಕು. ಮತದಾನ ಮಾಡದಿದ್ದಲ್ಲಿ ನೌಕರನ ರಜಾ ಸೌಲಭ್ಯವನ್ನು ನಿರಾಕರಿಸಬೇಕು. ಅನಿವಾರ್ಯವಾದಲ್ಲಿ ಕಾನೂನಿನ ಮೂಲಕ ಮತದಾನಕ್ಕೆ ಮುಂದಾಗಬೇಕು.
* ರಾಜ್ಯವೇ ಚುನಾವಣಾ ವೆಚ್ಚವನ್ನು ಭರಿಸುವುದು:5 ಪಾಶ್ಚಿಮಾತ್ಯ ದೇಶಗಳಲ್ಲಿರುವಂತೆ ಸರ್ಕಾರವು ಚುನಾವಣಾ ಪರಿಕರಗಳನ್ನು ಹಾಗು ಸೇವೆಗಳನ್ನು ಒದಗಿಸಬೇಕು. ಇದರಿಂದ ಚುನಾವಣಾ ವೆಚ್ಚ ತಗ್ಗುವುದಲ್ಲದೇ ಬಡವ ಬಲ್ಲಿದರು ಸಮಾನ ಸ್ಪರ್ಧೆಯ ಅವಕಾಶ ಹೊಂದಬಹುದಾಗಿದೆ.
* ಚುನಾವಣಾ ಸಿಬ್ಬಂದಿಯ ನೇಮಕಕ್ಕೆ ನಿರ್ಧಾರ: ಕೇಂದ್ರ ಚುನಾವಣಾ ಆಯೋಗ ಪ್ರಸ್ತುತ ಚುನಾವಣೆಗಳ ನಿರ್ವಹಣೆಗೆ ಕೇಮದ್ರ ಹಾಗು ರಾಜ್ಯ ಸರ್ಕಾರದ ಸಿಬ್ಬಂದಿಯನ್ನು ಅವಲಂಬಿಸಿದೆ. ಇದರ ಬದಲು ಬೃಹತ್ ಪ್ರಜಾಪ್ರಭುತ್ವದ ವಿವಿಧ ಚುನಾವಣೆಗಳ ನಿರ್ವಹನೆಗಾಗಿ ನ್ಯಾಯಾಂಗ ಸಿಬ್ಬಂದಿಯಂತೆಶಾಶ್ವತ ಹುದ್ದೆಗಳನ್ನು ಸೃಷ್ಟಿಸಿ ನೇಮಕ ಮಾಡಿಕೊಳ್ಳಬೇಕು. ಇದರಿಂದ ಾಡಳಿತಾರೂಢ ಪಕ್ಷಗಳ ಚುನಾವಣಾ ಅಕ್ರಮಗಳು ಹಾಗು ಆಡಳಿತ ಯಂತ್ರದ ದುರ್ಬಳಕೆ ತಡೆಯಬಹುದಾಗಿದೆ.
* ಪಕ್ಷಾಂತರ ಅನರ್ಹತೆಯ ತೀರ್ಮಾನ ಚುನಾವಣಾ ಆಯೋಗಕ್ಕೆ ನೀಡುವುದು: ಪ್ರಸ್ತುತ ಪಕ್ಷಾಂತರ ಕುರಿತು ಆ ಶಾಸನ ಸಭೆಯ ಸ್ಪೀಕರರಿಗೆ ಪರಮಾಧಿಕಾರವಿದೆ. ಸ್ಪೀಕರ್ ತನ್ನ ಪಕ್ಷದ ಕೈಗೊಂಬೆಯಾಗಿ ಪ್ರಜಾಪ್ರಭುತ್ವ ವಿರೋಧಿ ನಿರ್ಧಾರಗಳಿಗೆ ಮುಂದಾಗಬಹುದು. ಆದ್ದರಿಂದ ಪಕ್ಷಾಂತರಕ್ಕೆ ಒಳಗಾದ ಪ್ರತಿನಿಧಿಗಳ ಅನರ್ಹತೆಯ ತೀರ್ಮಾನವನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿದರೆ ಆ ಪಿಡುಗು ನಿಯಂತ್ರಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
* ಮಾದರಿ ನೀತಿ ಸಂಹಿತೆಯ ುಲ್ಲಂಘನೆಗೆ ಶೀಘ್ರ ಮತ್ತು ಸೂಕ್ತ ಶಿಕ್ಷೆ: ಚುನಾವಣಾ ಪ್ರಚಾರದ ವೇಳೆ ಜಾರಿಗೊಳ್ಳುವ ಮಾದರಿ ನೀತಿ ಸಂಹಿತೆಯನ್ನು ಯಾವುದೇ ಪಕ್ಷ ಅಥವ ುಮೇದುವಾರ ಕಡೆಗಣಿಸಿದರೆ ತಕ್ಷಣವೇ ಸೂಕ್ತ ಶಿಕ್ಷೆ ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉಳಿದವರು ಆ ಸಂಹಿತೆಯನ್ನು ಪಾಲಿಸಲು ನೆರವಾಗುತ್ತದೆ.
* ಸ್ಪರ್ಧೆಯ ಮೇಲೆ ಮಿತಿ ಹೇರಿಕೆ: ದ್ವೀ ಕ್ಷೇತ್ರಗಳಲ್ಲಿ ಒಬ್ಬ ವ್ಯಕ್ತಿ ಸ್ಪರ್ಧಿಸುವುದನ್ನು ಹೋಗಲಾಡಿಸಬೇಕು. ಜೊತೆಗೆ 6 ಒಂದು ಚುನಾವಣೆಯಲ್ಲಿ ಜಯಶಾಲಿಯಾದ ಪ್ರತಿನಿಧಿ ಆ ಹುದ್ದೆಯ ಅವಧಿ ಮುಗಿಯುವವರೆಗೆ ಬೇರೊಂದು ಚುನಾವಣೆಗೆ ಸ್ಪರ್ಧಿಸದಂತೆ ಮಿತಿ ಹೇರಬೇಕು. ಅಲ್ಲದೇ ಸತತ ಾರೇಳು ಅವಧಿಗೆ ಸ್ಪರ್ಧಿಸುವುದನ್ನು ಮೂರು ಅವಧಿಗೆ ಸೀಮಿತಗೊಳಿಸಬೇಕು.
* ಮಾಧ್ಯಮಗಳ ನಿಶ್ಪಕ್ಷಪಾತತೆಯ ರಕ್ಷಣೆ: ಪ್ರಜಾಪ್ರಭುತ್ವದ ಾಧಾರ ಸ್ಥಂಬವಾಗಿರುವ ಮಾಧ್ಯಮ ಾಮಿಷ್ಯಗಳಿಗೊಳಗಾಗದಂತೆ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ವಾಮ ಮಾರ್ಗದಲ್ಲಿ ಜವಾಬ್ದಾರಿ ಮರೆತ ದೃಶ್ಯ ಹಾಗು ಮುದ್ರಿತ ಮಾಧ್ಯಮಗಳನ್ನು ನಿಷೇಧಿಸಬೇಕು. ರಾಜಕಾರಣಿಗಳ ೊಡೆತನದ ಮಾಧ್ಯಮಗಳನ್ನು ನಿರ್ಮೂಲನೆಗೊಳಿಸಬೇಕು. ಇದರಿಂದ ಪಾವತಿಸಿದ, ಸುದ್ದಿಗಳ ಹಾವಳಿ ದೂರವಾಗಿ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ.
ಸಮಾರೋಪ: ಪತ್ರಿಕೆಯಲ್ಲಿ ಪ್ರಸ್ತಾಪಿತ ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿನ ಪ್ರಸ್ತುತ ಸಮಸ್ಯೆಗಳು ಭಾರತೀಯ ಪ್ರಜಾಪ್ರಭುತ್ವಕ್ಕೆ ಸವಾಲುಗಳನ್ನು ಒಡ್ಡಿರುವುದು ಸುಳ್ಳಲ್ಲ. ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಹಾಗು ಸಮಯೋಚಿತ ಕ್ರಮಗಳನ್ನು ಕಾಲಕಾಲಕ್ಕೆ ಜಾರಿಗೊಳಿಸಿದರೆ ಸವಾಲುಗಳ ನಿರ್ಮೂಲನೆ ಸುಲಭ ಸಾಧ್ಯ. ವಿಶೇಷವಾಗಿ ಜನರು ಹಾಗು ಜನಪ್ರತಿನಿಧಿಗಳ ಿಚ್ಚಾಶಕ್ತಿಯಿಂದ ಚುನಾವಣಾ ಸಮಸ್ಯೆಗಳ ಪರಿಹಾರ ಸಾಧ್ಯವಾಗುತ್ತದೆ. ಈ ಸಮಸ್ಯೆಗಳ ನಿವಾರಣೆಯ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಕೆಲವು ಸವಾಲುಗಳು ದೂರವಾಗುತ್ತವೆ. ಭಾರತೀಯ ಪ್ರಜಾಪ್ರಭುತ್ವದ ಯಶಸ್ಸಿಗೆ ಪೂರಕವಾದ ಬೆಳವಣಿಗೆಗಳು ಶೀಘ್ರ ಜರುಗಬೇಕಾದ ಅನಿವಾರ್ಯವಿದೆ ಎಂದರೆ ತಪ್ಪಾಗಲಾರದು.
ಾಧಾರಗಳು:
1. Sumantra Bose, "Culture of corruption: Democracy and Power in India," Global Policy 2002, www.Globalpolicy.org
2. http//timesofindia:Indiatimes.com/india/53-Lok-Sabha-member_face _criminal_charges/ article
3. Parkash, chandra (1999). Changing Demensions of the Communal Polities in India, Dehli, p-23.
4. Paul Brass, "Fractional Politics in Indian state, "University of California, Berkley, 1965.
5. Singhvi, L.M. (1971), Elections and Electoral Reforms in India. New Delhi: Sterling Publishing house.
6. Election Commission of India, Proposed Electoral Reforms, New Delhi: Nirwachan Sadan, 2004.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ