ಬುಧವಾರ, ಏಪ್ರಿಲ್ 29, 2020

ದುಂಡು ಮೇಜಿನ ಸಮ್ಮೇಳನ::round table conference

ಸೈಮನ್ ಆಯೋಗದ ಶಿಫಾರಸುಗಳನ್ನು ಚರ್ಚಿಸಲು ಬ್ರಿಟಿಷ್ ಸರ್ಕಾರ ಲಂಡನ್ನಿನಲ್ಲಿ ಮೂರು ದುಂಡು ಮೇಜಿನ ಸಮ್ಮೇಳನಗಳನ್ನು ಏರ್ಪಡಿಸಿತು. ಮೊದಲ ದುಂಡು ಮೇಜಿನ ಸಮ್ಮೇಳನವು 12 ನವೆಂಬರ್ 1930 ರಿಂದ 19 ಜನೇವರಿ 1931 ರವರೆಗೆ ಜರುಗಿತು. ಮೊದಲ ಸಮ್ಮೇಳನದ ಅಧ್ಯಕ್ಷತೆಯನ್ನು ಬ್ರಿಟಿಷ್ ಪ್ರಧಾನಿ ರ್ಯಾಮ್ಸೇ ಮ್ಯಾಕ್ ಡೊನಾಲ್ಡ್ ವಹಿಸಿದ್ದರು. ಇದರಲ್ಲಿ ತೇಜ್ಬಹದೂರ್ ಸಪ್ರು, ಬಾಬಾಸಾಹೇಬ್ ಅಂಬೇಡ್ಕರ್, ಮಹಮದ್ ಶಫಿ, ಮಹಮದಲಿ ಜಿನ್ನಾ ಮುಂತಾದವರು ಭಾಗವಹಿಸಿದ್ದು ಕಾಂಗ್ರೆಸ್ ಹಾಜರಾಗಲಿಲ್ಲ. ಎರಡನೇ ದುಂಡು ಮೇಜಿನ ಸಮ್ಮೇಳನ 7 ಸೆಪ್ಟೆಂಬರ್ 1931 ರಿಂದ ಆರಂಭವಾಯಿತು. ಇದರಲ್ಲಿ 107 ಭಾರತೀಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಗಾಂಧೀಜಿ ಕಾಂಗ್ರೆಸ್ನ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಆದರೆ ಈ ಸಮ್ಮೇಳನ ವಿಫಲವಾಗಿದ್ದರಿಂದ ಕಾನೂನು ಭಂಗ ಚಳುವಳಿಪುನಃ 3 ಜನೇವರಿ 1932 ರಂದು ಆರಂಭವಾಯಿತು. ಮೂರನೆಯ ದುಂಡು ಮೇಜಿನ ಸಮ್ಮೇಳನವು 17 ನವೆಂಬರ್ ರಿಂದ 24 ಡಿಸೆಂಬರ್ ನಡುವೆ 1932 ರಲ್ಲಿ ಜರುಗಿ ಭಾರತದಲ್ಲಿ ತರಲಾಗುವ ಹಲವು ಸಂವಿಧಾನಿಕ ಸುಧಾರಣೆಗಳಿಗೆ ಅನುಮತಿ ನೀಡಿತು. ಈ ಮೂರು ದುಂಡು ಮೇಜಿನ ಸಮ್ಮೇಳನಗಳ ಸಲಹೆಗಳನ್ನೊಳಗೊಂಡ ಶ್ವೇತ ಪತ್ರವನ್ನು ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಲಾಯಿತು. ಈ ಮೂರು ಸಮ್ಮೇಳನಗಳಿಗೆ ಬಾಬಾಸಾಹೇಬ್ ಅಂಬೇಡ್ಕರ್ ಹಾಜರಾಗಿದ್ದರೆ ಗಾಂಧೀಜಿ ಕೇವಲ ಎರಡನೇ ಸಮ್ಮೇಳನಕ್ಕೆ ಮಾತ್ರ ಹಾಜರಾಗಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...