ಆಗಸ್ಟ್ 1928 ರ ನೆಹರು ವರದಿಯನ್ನು ಅಧಿಕೃತವಾಗಿ ಸರ್ವ ಪಕ್ಷಗಳ ಸಮ್ಮೇಳನ ವರದಿ ಎಂದು ಕರೆಯಲಾಗುತ್ತದೆ. 1927 ರ ಮದ್ರಾಸ್ ಕಾಂಗ್ರೆಸ್ ಅಧಿವೇಶನದ ನಿರ್ಣಯದಂತೆ 29 ಸಂಘಟನೆಗಳ ಸರ್ವ ಪಕ್ಷಗಳ ಸಮ್ಮೇಳನವು 12 ಫೆಬ್ರುವರಿ 1928 ರಂದು ದೆಹಲಿಯಲ್ಲಿ ಸಭೆ ಸೇರಿತು. ಜೊತೆಗೆ 19 ಮೇ 1928 ರಂದು ಮೋತಿಲಾಲ್ ನೆಹರುರವರ ಮುಖಂಡತ್ವದಲ್ಲಿ ಕರಡು ಸಂವಿಧಾನ ರಚಿಸಲು ಸರ್ವ ಪಕ್ಷಗಳ ಸಮ್ಮೇಳನ ನಿರ್ಧರಿಸಿತು. ನೆಹರು ವರದಿ ಸಿದ್ಧಪಡಿಸಿದ ಮಾದರಿ ಭಾರತ ಸಂವಿಧಾನ 7 ಭಾಗಗಳು, 2 ಅನುಸೂಚಿಗಳು ಹಾಗು 3 ಅಪೆಂಡಿಸಿಸ್ ಹೊಂದಿತ್ತು. ನೆಹರು ವರದಿಯ ಮುಖ್ಯಾಂಶಗಳೆಂದರೆ
a. ಭಾರತಕ್ಕೆ ಡೊಮೀನಿಯನ್ ಸ್ಥಾನಮಾನ ನೀಡುವುದು.
b. ವಿವೇಚನಾ, ವೃತ್ತಿ ಹಾಗು ಧರ್ಮಾಚರಣೆಯ ಸ್ವಾತಂತ್ರ್ಯ ನೀಡಿಕೆ.
c. ಸಾರ್ವತ್ರಿಕ ವಯಸ್ಕ ಮತದಾನಕ್ಕೆ ಅವಕಾಶ.
d. ಮೂಲಭೂತ ಹಕ್ಕುಗಳ ನೀಡಿಕೆ.
ಒಟ್ಟಿನಲ್ಲಿ ನೆಹರು ವರದಿ ಭಾರತಿಯರ ಬೇಡಿಕೆಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿತು. ಈ ನೆಹರು ವರದಿಯನ್ನು ಮುಸ್ಲೀಮ್ ಲೀಗ್ ಅಂಗೀಕರಿಸದೇ 14 ಅಂಶಗಳನ್ನು ಅದರ ನಾಯಕ ಮಹಮದಲಿ ಜಿನ್ನಾ 28 ಮಾರ್ಚ್ 1929 ರಂದು ಮಂಡಿಸಿದನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ