ಸ್ನಾತಕ ಹಾಗು ಸ್ನಾತಕೋತ್ತರ ಅಧ್ಯಯನಕ್ಕೆ ನೆರವಾಗುವ ಮಾಹಿತಿಯನ್ನು ಹಂಚಿಕೊಳ್ಳುವ ವೇದಿಕೆ. ಮಾತೃ ಭಾಷೆಯಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ ವಿದ್ಯಾರ್ಥಿಗಳಿಗೆ ಸಹಕಾರಿಯಾಗಬಲ್ಲ ಉಪಯುಕ್ತ ವಿವರಣೆ ಹಂಚಿಕೆಯ ಉದ್ದೇಶದಿಂದ ರಚಿಸಲಾದ ತಾಣ.
ಬುಧವಾರ, ಏಪ್ರಿಲ್ 29, 2020
ಸೈಮನ್ ಆಯೋಗ::simon commission
ಸೈಮನ್ ಆಯೋಗ: ನವೆಂಬರ್ 1927 ರಲ್ಲಿ ಬ್ರಿಟಿಷ್ ಸರ್ಕಾರವು ಸೈಮನ್ ಆಯೋಗವೆಂದು ಖ್ಯಾತಿಯಾಗಿರುವ ಶಾಸನಾತ್ಮಕ ಆಯೋಗವನ್ನು ರಚಿಸಿತು. 1919 ರ ಭಾರತ ಸರ್ಕಾರ ಕಾಯಿದೆಯ ಅನುಷ್ಟಾನವನ್ನು ಪರಿಶೀಲಿಸುವುದು ಹಾಗು ಜವಾಬ್ದಾರಿ ಸರ್ಕಾರಕ್ಕೆ ಅಗತ್ಯ ಸುಧಾರಣೆಗಳನ್ನು ಶಿಫಾರಸು ಮಾಡುವುದು ಈ ಆಯೋಗ ರಚನೆಯ ಉದ್ದೇಶಗಳಾಗಿದ್ದವು. ಜಾನ್ ಸೈಮನ್ ಅಧ್ಯಕ್ಷತೆಯಲ್ಲಿ 7 ಯೂರೊಪಿಯನ್ ಸದಸ್ಯರು ಆಯೋಗದಲ್ಲಿದ್ದು ಭಾರತಿಯರಿಗೆ ಅವಕಾಶವಿರಲಿಲ್ಲ. ಆದ್ದರಿಂದ 1927 ರ ಡಾ. ಅನ್ಸಾರಿ ಅಧ್ಯಕ್ಷತೆಯ ಮದ್ರಾಸ್ ಕಾಂಗ್ರೆಸ್ ಅಧಿವೇಶನ ಸೈಮನ್ ಆಯೋಗವನ್ನು ಬಹಿಷ್ಕರಿಸಲು ನಿರ್ಧರಿಸಿತು. ಭಾರತಕ್ಕೆ ಸೈಮನ್ ಆಯೋಗ ಫೆಬ್ರವರಿ 1928 ಮತ್ತು ಅಕ್ಟೋಬರ್ 1928 ರಲ್ಲಿ ಎರಡು ಬಾರಿ ಭೇಟಿ ನೀಡಿ ಹಲವು ಪ್ರದೇಶಗಳನ್ನು ಸಂದರ್ಶಿಸಿತು. ಸೈಮನ್ ಆಯೋಗ ಮುಂಬೈಗೆ 3 ಫೆಬ್ರವರಿ 1928 ರಂದು ಬಂದಿಳಿದಾಗ ಭಾರತದಾದ್ಯಂತ ಸೈಮನ್ ಗೊ ಬ್ಯಾಕ್ ಎಂಬ ಘೋಷಣೆ ಮೊಳಗಿತು. ಈ ಪ್ರತಿಭಟನೆಯ ಸಮಯದಲ್ಲಿ ಪೋಲಿಸರ ಲಾಠಿ ಏಟಿಗೆ ಲಾಲಾ ಲಜಪತರಾಯ್ ನಿಧನರಾದರು. ಈ ಘಟನೆಗೆ ಪ್ರತಿಕಾರವಾಗಿ ಭಗತ್ಸಿಂಗ್ ಸ್ಯಾಂಡರ್ಸ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದನು. ಕೊನೆಗೆ ಸೈಮನ್ ಆಯೋಗವು ತನ್ನ ವರದಿಯನ್ನು ಬ್ರಿಟಿಷ್ ಸರ್ಕಾರಕ್ಕೆ 27 ಮೇ 1930 ರಂದು ಸಲ್ಲಿಸಿತು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
first semister syllabus
ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ