ಬುಧವಾರ, ಏಪ್ರಿಲ್ 29, 2020

ಮುಸ್ಲಿಂ ಲೀಗ್::muslim leag

ಮುಸ್ಲೀಮ್ ಲೀಗ್ 30 ಡಿಸೆಂಬರ್ 1906 ರಂದು ಆಗಾಖಾನ್ ನಾಯಕತ್ವದಲ್ಲಿ ಸ್ಥಾಪನೆಯಾಯಿತು. ಢಾಕಾದ ಸಲಿಮುಲ್ಲಾ ಖಾನ್ ಇದರ ಮೊದಲ ಅಧ್ಯಕ್ಷನಾಗಿದ್ದನು. ಮಹಮದ್ ಇಕ್ಬಾಲ್ ಲೀಗ್ನ 1930 ರ ಅಲಹಾಬಾದ್ ಅಧಿವೇಶನದ ಅಧ್ಯಕ್ಷತೆ ವಹಿಸಿ ವಾಯುವ್ಯ ಭಾರತದಲ್ಲಿ ಪ್ರತ್ಯೇಕ ಮುಸ್ಲೀಮ್ ರಾಷ್ಟ್ರ ಪ್ರತಿಪಾದಿಸಿ ಪಾಕಿಸ್ಥಾನದ ಪರಿಕಲ್ಪನೆಯ ಪಿತಾಮಹ ಎನಿಸಿದರು. ಪಾಕಿಸ್ತಾನ ಎಂಬ ಪದವನ್ನು ಹುಟ್ಟು ಹಾಕಿದವನು ರಹಮತ್ ಅಲಿ ಎಂಬ ಓರ್ವ ವಿದ್ಯಾರ್ಥಿ. ಮುಸ್ಲೀಮ್ ಲೀಗ್ನ 1940 ರ ಲಾಹೋರ್ ಅಧಿವೇಶನದಲ್ಲಿ ಮಹಮದಲಿ ಜಿನ್ನಾ ದ್ವೀ ರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿ ಪಾಕಿಸ್ತಾನದ ಬೇಡಿಕೆಯನ್ನು ಬ್ರಿಟಿಷರ ಮುಂದಿಟ್ಟನು. ಮುಂದೆ ಜಿನ್ನಾ 16 ಆಗಸ್ಟ್ 1946 ರಂದು ನೇರ ಕಾರ್ಯಾಚರಣೆಗೆ ಕರೆಕೊಟ್ಟು ಹಿಂಸಾಚಾರಕ್ಕೆ ಕಾರಣವಾಯಿತು. ಕೊನೆಗೆ ಮುಸ್ಲೀಮ್ ಲೀಗ್ನ ಆಶಯದಂತೆ ಬ್ರಿಟಿಷರು ಭಾರತವನ್ನು ವಿಭಜಿಸಿ ಪಾಕಿಸ್ತಾನಕ್ಕೆ 14 ಆಗಸ್ಟ್ 1947 ರಂದು ಸವಾತಂತ್ರ ನೀಡಿ ಪಾಕಿಸ್ತಾನ ದಯವಾಯಿತು. ಮಹಮದಲಿ ಜಿನ್ನಾ ಪಾಕ್ನಗೌರ್ನರ್ ಜನರಲ್ ಎನಿಸಿದನಲ್ಲದೇ ಪಾಕಿಸ್ತಾನದ ಪಿತಾಮಹ ಎಂಬ ಬಿರುದನ್ನು ಪಡೆದನು. ಸರೋಜಿನಿ ನಾಯ್ಡು ಜಿನ್ನಾರನ್ನು ಹಿಂದೂ ಮುಸ್ಲೀಮ್ ಐಖ್ಯತೆಯ ಪ್ರವಾದಿ ಎಂದು ಕರೆದಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...