ಬುಧವಾರ, ಏಪ್ರಿಲ್ 29, 2020

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್::indian national congress

ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ಅಖಿಲ ಭಾರತ ಮಟ್ಟದ ಮೊದಲ ಸಂಸ್ಥೆಯಾಗಿದ್ದು ನಿವೃತ್ತ ಬ್ರಿಟಿಷ್ ಅಧಿಕಾರಿ ಏ. ಓ ಹ್ಯೂಮ್ ಇದರ ಸ್ಥಾಪಕ. ಬಾಂಬೆಯ ಗೋಕುಲದಾಸ್ ತೇಜ್ಪಾಲ್ ಸಂಸ್ಕೃತ ಕಾಲೇಜಿನಲ್ಲಿ 28 ಡಿಸೆಂಬರ್ 1885 ರಂದು ಐ. ಎನ್. ಸಿ ಆರಂಭವಾಯಿತು. ಅಂದು ಮೊದಲ ಅಧಿವೇಶನದ ಅಧ್ಯಕ್ಷತೆಯನ್ನು ಡಬ್ಲೂ. ಸಿ. ಬ್ಯಾನರ್ಜಿ ವಹಿಸಿದ್ದು 72 ಪ್ರತಿನಿಧಿಗಳು ಭಾಗವಹಿಸಿದ್ದರು. ಬದ್ರುದ್ದೀನ್ ತ್ಯಾಬ್ಜಿ 1887ರ ಐ. ಎನ್. ಸಿಯ ಮದ್ರಾಸ್ನ ಮೂರನೆಯ ಅಧಿವೇಶನದ ಮೊದಲ ಮುಸ್ಲಿಮ್ ಅಧ್ಯಕ್ಷರಾಗಿದ್ದರು. ಜಾರ್ಜ್ ಯೂಲ್ ಐ. ಎನ್. ಸಿಯ 1888 ರ ಻ಲಹಾಬಾದ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಮೊದಲ ವಿದೇಶಿ ಪ್ರಜೆಯಾಗಿದ್ದನು. ದಾದಾಬಾಯ್ ನೌರೊಜಿ 1886, 1893 ಮತ್ತು 1906ರ ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ನ ಮೂರು ಅಧಿವೇಶನಗಳ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಏ. ಓ. ಹ್ಯೂಮ್ 1892 ರವರೆಗೆ ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ನ ಜನರಲ್ ಸೆಕ್ರೆಟರಿಯಾಗಿದ್ದರು. ಕಾಂಗ್ರೆಸ್ ಎಂದರೆ ಜನರ ಸಭೆ ಎಂದರ್ಥವಾಗಿದ್ದು ದಾದಾಬಾಯ್ ನೌರೋಜಿ ಈ ಪದವನ್ನು ಸೂಚಿಸಿದ್ದರು. ಐ. ಎನ್. ಸಿಗೆ 1891 ರ ನಾಗಪುರ ಅಧಿವೇಶನದಲ್ಲಿ ರಾಷ್ಟ್ರೀಯ [national] ಬ ಪದವನ್ನು ಸೇರಿಸಲಾಗಿದ್ದು ಆವರೆಗೆ ಭಾರತಿಯ ಕಾಂಗ್ರೆಸ್ ಎನ್ನಲಾಗುತ್ತಿತ್ತು. ಐ. ಎನ್. ಸಿಯ 1896 ರ ಕಲ್ಕತ್ತಾ ಅಧಿವೇಶನದಲ್ಲಿ ಮೊಟ್ಟ ಮೊದಲು ವಂದೇ ಮಾತರಂ ಗೀತೆಯನ್ನು ಹಾಡಲಾಯಿತು. 1907 ರ ರಾಸ್ ಬಿಹಾರಿ ಬೋಸ್ ಅಧ್ಯಕ್ಷತೆಯ ಸೂರತ್ ಅಧಿವೇಶನದಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಎಂಬುದಾಗಿ ಕಾಂಗ್ರೆಸ್ ವಿಭಜನೆಯಾಯಿತು. ಅನಿಬೆಸೆಂಟ್ ಐ. ಎನ್. ಸಿಯ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು. ಮುಂದೆ 1916 ರ ಲಕ್ನೌ ಅಧಿವೇಶನದಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಒಂದುಗೂಡಿದರು.ಜೊತೆಗೆ ಕಾಂಗ್ರೆಸ್ ಹಾಗು ಮುಸ್ಲೀಮ್ ಲೀಗ್ ಜಂಟಿಯಾಗಿ ಭಾಗವಹಿಸಿದ್ದವು. 1920 ರ ವಿಶೇಷ ಕಲ್ಕತ್ತಾ ಅಧಿವೇಶನದಲ್ಲಿ ಗಾಂಧೀಜಿ ಅಸಹಕಾರ ಚಳುವಳಿಯನ್ನು ಪ್ರತಿಪಾದಿಸಿದರು. 1923 ರ ದೆಹಲಿ ಅಧಿವೇಶನದಲ್ಲಿ ಐ. ಎನ್. ಸಿ ಅಖಿಲ ಭಾರತಿಯ ಖಾದಿ ಮಂಡಳಿ ಸ್ಥಾಪಿಸಲು ನಿರ್ಧರಿಸಿತು. ಗಾಂಧೀಜಿಯು 1924ರ ಏಕೈಕ ಬೆಳಗಾಂ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.   ಸರೋಜಿನಿ ನಾಯ್ಡು ಮೊದಲ ಭಾರತಿಯ ಮಹಿಳೆಯಾಗಿ 1925ರ ಕಾನ್ಪುರ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಕಾರ್ಯಕರ್ತರು ಖಾದಿ ಧರಿಸುವುದನ್ನು 1926 ರ ಗುವಾಹತಿ ಅಧಿವೇಶನದಲ್ಲಿ ಕಡ್ಡಾಯಗೊಳಿಸಿತು. 1927 ರ ಮದ್ರಾಸ್ ಅಧಿವೇಶನದಲ್ಲಿ ಕಾಂಗ್ರೆಸ್ ಸ್ವತಂತ್ರ್ಯ ನೀಡಿಕೆ ಮತ್ತು ಸೈಮನ್ ಆಯೋಗದ ಬಹಿಷ್ಕಾರದ ನಿರ್ಣಯ ಕೈಗೊಂಡಿತು. ಇದೇ ಅಧಿವೇಶನದಲ್ಲಿ ಭಾರತದ ಮಾದರಿ ಸಂವಿಧಾನವನ್ನು ಮಂಡಿಸಲಾಯಿತು. ಐ. ಎನ್. ಸಿಯ ಅಂಗವಾಗಿ ಅಖಿಲ ಭಾರತಿಯ ಯುವ ಕಾಂಗ್ರೆಸ್ಸನ್ನು 1928 ರ ಕಲ್ಕತ್ತಾ ಅಧಿವೇಶನದಲ್ಲಿ ಸ್ಥಾಪಿಸಲಾಯಿತು. 1929 ರ ಲಾಹೋರ್ ಅಧಿವೇಶನದ ಅಧ್ಯಕ್ಷತೆಯನ್ನು ಜವಾಹರಲಾಲ್ ನೆಹರು ವಹಿಸಿದ್ದು ಸಂಪೂರ್ಣ ಸ್ವಾತಂತ್ರ್ಯ ನೀಡಲು ಘೋಷಿಸಿದರಲ್ಲದೇ 26 ಜನೇವರಿ 1930 ರಂದು ಸ್ವತಂತ್ರ ದಿನಾಚರಣೆಯನ್ನು ಆಚರಿಸಲು ದೇಶದ ಜನತೆಗೆ ಕರೆಕೊಟ್ಟರು. 1931 ರ ಕರಾಚಿ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ಯೋಜನೆಗಳ ಪ್ರಸ್ತಾವನೆಗಳನ್ನು ಅಂಗೀಕರಿಸಲಾಯಿತು. ನೆಲ್ಲಿನ್ ಸೇನ್ ಗುಪ್ತಾ ಮೂರನೆಯ ಮಹಿಳಾ ಅಧ್ಕ್ಷೆಯಾಗಿ 1933 ರ ಕಲ್ಕತ್ತಾ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. 1938 ರ . ಎನ್. ಸಿ ಅಧಿವೇಶನ ಹರಿಪುರ ಬ ಹಳ್ಳಿಯಲ್ಲಿ ಏರ್ಪಟ್ಟಿತ್ತು. 1939 ರ ತ್ರಿಪುರಾ ಅಧಿವೇಶನದಲ್ಲಿ ಸುಬಾಷ್ಚಂದ್ರ ಬೋಸ್ ಗಾಂಧೀಜಿಯ ಅಭ್ಯರ್ಥಿ ಪಟ್ಟಾಭಿ ಸೀತಾರಾಮಯ್ಯರನ್ನು ಸೋಲಿಸಿದ್ದು ಕಾರಣಾಂತರದಿಂದ ಸುಬಾಷ್ ರಾಜೀನಾಮೆ ನೀಡಿದಾಗ ರಾಜೇಂದ್ರ ಪ್ರಸಾದ್ ಕಾಂಗ್ರೆಸ್ನ ಅಧ್ಯಕ್ಷರಾದರು. 1940 ರ ರಾಮಗರ್ ಅಧಿವೇಶನದಲ್ಲಿ ವೈಯಕ್ತಿಕ ಸತ್ಯಾಗ್ರಹದ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.


ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ನ 1885 ರಿಂದ 1905 ರ ಕಾಲಾವಧಿಯನ್ನು ಮಂದಗಾಮಿಗಳ ಯುಗವೆಂದು ಕರೆಯಲಾಗುತ್ತದೆ. ದಾದಾಬಾಯ್ ನೌರೋಜಿ, ಬದ್ರುದ್ದೀನ್ ತ್ಯಾಬ್ಜಿ, ಸುರೇಂದ್ರನಾಥ್ ಬ್ಯಾನರ್ಜಿ, ಫಿರೋಜ್ಶಾ ಮೆಹತಾ, ಗೋಪಾಲಕೃಷ್ಣ ಗೋಖಲೆ ಮುಂತಾದವರು ಮಂದಗಾಮಿ ಯುಗದ ಪ್ರಮುಖ ನಾಯಕರಾಗಿದ್ದರು. ಮಂದಗಾಮಿಗಳು ಸಂವಿಧಾನಾತ್ಮಕ ಮಾರ್ಗಗಳಲ್ಲಿ ನಂಬಿಕೆ ಹೊಂದಿದ್ದು ಮನವಿ ಸಲ್ಲಿಕೆ, ನಿಯೋಗದಲ್ಲಿ ಭೇಟಿ, ಹಕ್ಕೊತ್ತಾಯ ಮುಂತಾದ ಶಾಂತಿಯುತ ವಿಧಾನ ಅನುಸರಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...