ramesh hemareddy sankaraddi
ast professor, department of political science
government first grade college and pg study centre gadag.
phone: 9916313624
email: rameshsankaraddi19@gmail.com
ಸಾರಾಂಶ: ಕುಟುಂಬ ಸಮಾಜದ ಅತೀ ಪುರಾತನ ಸಂಸ್ಥೆ. ಕಾಲಾನುಕ್ರಮದಲ್ಲಿ ಅಸಂಖ್ಯ ಸಂಸ್ಥೆಗಳನ್ನು ಮಾನವ ಸ್ಥಾಪಿಸಿಕೊಂಡು ಬಂದಿರುವ. ಹೀಗೆ ಉದಯಗೊಂಡ ರಾಜ್ಯವೆಂಬ ಸಂಸ್ಥೆಯ ರಾಜಕೀಯ ವ್ಯವಹಾರದಲ್ಲಿ ಕುಟುಂಬ ಿಂದಿಗೂ ಪ್ರಭಾವ ಹೊಂದಿದೆ. ಕರ್ನಾಟಕ ರಾಜಕೀಯದ ಸಮಕಾಲೀನ ಸವಾಲುಗಳಲ್ಲಿ ಕುಟುಂಬ ರಾಜಕಾರಣ ೊಂದಾಗಿದೆ. ಕುಟುಂಬ ರಾಜಕಾರಣದ ಕುರುಹುಗಳು, ಪ್ರೇರಕ ಅಂಶಗಳು ಹಾಗು ದುಶ್ಪರಿಣಾಮಗಳನ್ನು ಈ ಪತ್ರಿಕೆಯಲ್ಲಿ ಚರ್ಚಿಸಲಾಗಿದೆ. ಜೊತೆಗೆ ಪತ್ರಿಕೆಯ ಕೊನೆಯಲ್ಲಿ ಕುಟುಂಬ ರಾಜಕಾರಣದ ಸಮರ್ಪಕ ಬಳಕೆಯಿಂದಾಗುವ ಲಾಭಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಅಲ್ಲದೇ ಕುಟುಂಬ ರಾಜಕಾರಣವನ್ನು ನಿರ್ಮೂಲನೆಗೊಳಿಸಲು ಅಗತ್ಯ ಪರಿಹಾರೋಪಾಯಗಳನ್ನು ಸೂಚಿಸಲಾಗಿದೆ. ಕುಟುಂಬ ರಾಜಕಾರಣವನ್ನು ಔಷಧೋಪಾದಿಯಲ್ಲಿ ರಾಜಕೀಯ ಪಕ್ಷಗಳು ಹಾಗು ಮತದಾರರು ಉಪಯೋಗಿಸಬೇಕೆಂಬ ಾಶಯವನ್ನು ಪತ್ರಿಕೆ ಪ್ರತಿಪಾದಿಸುತ್ತದೆ.
ಪ್ರಮುಖ ಪದಗಳು:
ಕರ್ನಾಟಕದ ರಾಜಕೀಯ
ಕುಟುಂಬ ಸದಸ್ಯರಿಗೆ
ರಾಜಕೀಯ ಪಕ್ಷಗಳು
ಚುನಾವಣೆ
ಆಧ್ಯತೆ
ಕರ್ನಾಟಕ ರಾಜಕೀಯದಲ್ಲಿ ಕುಟುಂಬ ರಾಜಕಾರಣ:
ಪೀಢಿಕೆ:
ಕುಟುಂಬವು ಸಮಾಜದ ಪ್ರಾಥಮಿಕ ಘಟಕ. ಸಮಾಜೋತ್ತರ ಬೆಳವಣಿಗೆಯಾದ ರಾಜಕೀಯ ವ್ಯವಸ್ಥೆಗೆ ಕುಟುಂಬಗಳ ಕಾಣಿಕೆಯನ್ನು ಕಾಣಬಹುದು. ಹೀಗಾಗಿ ಅರಿಸ್ಟಾಟಲ್ ರಾಜ್ಯವು ಕುಟುಂಬಗಳ ವಿಸ್ತರಣೆಯ ಫಲವೆಂದು ಪ್ರತಿಪಾದಿಸಿರುವನು. ಕಾಲಾನುಕ್ರಮದಲ್ಲಿ ಕೆಲವು ಪ್ರಬಲ ಕುಟುಂಬಗಳು ಆಡಳಿತದ ಚುಕ್ಕಾಣಿ ಹಿಡಿದು ಅನುವಂಶಿಯ ಅಧಿಕಾರ ಚಲಾಯಿಸಿರುವ ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ಗೋಚರವಾಗುವ ಸಹಜ ಸಂಗತಿಯಾಗಿದೆ. ರಾಜ ಮನೆತನಗಳ ಾಳ್ವಿಕೆಯಲ್ಲಿ ಕೆಲವೇ ಕುಟುಂಬಗಳ ಅಧಿಕಾರ ಚಲಾವಣೆ ಸರ್ವೇ ಸಾಮಾನ್ಯ ವಿಚಾರವಾಗಿ ಹೋಯಿತು. ಆಧುನಿಕ ಕಾಲದಲ್ಲಿ ಕುಟುಂಬ ಶಾಹಿತ್ವದ ವಿರುದ್ಧ ಹಲವು ಕ್ರಾಂತಿಗಳಾಗಿ ಪ್ರಜಾಪ್ರಭುತ್ವದ ುದಯದೊಡನೆ ರಾಜಕೀಯಧಿಕಾರ ಕುಟುಂಬಗಳ ಕೈ ತಪ್ಪುವಂತಾಯಿತು. ಕ್ರಮೇಣ ಜಗತ್ತಿನ ಬೇರೆಡೆ ಕುಟುಂಬ ರಾಜಕಾರಣ ಮಾಯವಾಗಿದ್ದರೂ ವಿವಿಧ ವೃತ್ತಿ ಮತ್ತು ಉದ್ಯಮ ವಲಯಗಳಲ್ಲಿ ಕುಟುಂಬ ಶಾಹಿತ್ವ ಿಂದಿಗೂ ಸ್ಥಾನ ಪಡೆದಿದೆ. ಪ್ರಸ್ತುತ ಶತಮಾನ ಪ್ರಜಾಪ್ರಭುತ್ವದ ಯುಗವೆಂದೇ ಚಿರಪರಿಚಿತವಾಗಿದೆ. ಪ್ರಜೆಗಳೆಲ್ಲ ಆಡಳಿತದಲ್ಲಿ ಭಾಗವಹಿಸುವ ಹಾಗು ನಿರ್ಧಾರ ಕೈಗೊಳ್ಳುವ ಸ್ತಾನ ಹೊಂದುವ ಸಮಾನವಕಾಶವನ್ನು ಪ್ರಜಾಪ್ರಭುತ್ವದಲ್ಲಿ ಪಡೆದಿರುತ್ತಾರೆ. ಈ ನಡುವೆ ಹಳೆಯ ಕುಟುಂಬಶಾಹಿತ್ವ ಕುಟುಂಬ ರಾಜಕಾರಣದ ಹೊಸ ಅವತಾರದಲ್ಲಿ ಪ್ರಜಾಪ್ರಭುತ್ವವನ್ನು ಾವರಿಸುತ್ತಿರುವುದು ಆತಂಕಕಾರಿ ವಿಚಾರ. ಭಾರತದಂತಹ ವಿಶಾಲ ಪ್ರಜಾಪ್ರಭುತ್ವ ದೇಶದಲ್ಲಿ ಕುಟುಂಬ ರಾಜಕಾರಣ ಕ್ರಮೇಣ ಸವಾಲಾಗುತ್ತಾ ಸಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಬೆಳವಣಿಗೆಯೇ ಸರಿ.
ಕುಟುಂಬ ರಾಜಕಾರಣದ ೈತಿಹಾಸಿಕ ಕುರುಹುಗಳು:
ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕುಟುಂಬ ರಾಜಕಾರಣದ ಕುರುಹುಗಳನ್ನು ಗಮನಿಸಬಹುದು. ದೇಶೀಯ ಸಂಸ್ಥಾನಗಳಲ್ಲಿ ಕುಟುಂಬ ರಾಜಕಾರಣ ಸಹಜ ಸಂಗತಿಯಾಗಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿ ಸಮಾಜದ ಕೆಲವೇ ಕುಟುಂಬಗಳು ಆಡಳಿತಾತ್ಮಕ ಅವಕಾಶ ಹೊಂದಿದ್ದವು. ಮೋತಿಲಾಲ್ ನೆಹರು ತಮ್ಮ ಮಗ ಜವಾಹರಲಾಲ್ ನೆಹರು ಲಾಹೋರ್ ಅಧಿವೇಶನದ ಅಧ್ಯಕ್ಷನಾಗಲು ತೋರಿದ ಾಸಕ್ತಿ ಕುಟುಂಬ ರಾಜಕಾರಣದ ಬೇರುಗಳ ಪ್ರತೀಕ. ಸಂವಿಧಾನದ ಜಾರಿಯೊಡನೆ ಮೊದಲಿದ್ದ ವಸಾಹತು ಶಾಹಿತ್ವ ಹಾಗು ರಾಜಪ್ರಭುತ್ವ ಮಾಯವಾದವು. ಆದರೆ ಹಲವು ರಾಜಕಾರಣಿಗಳು ಸ್ವತಂತ್ರ್ಯೋತ್ತರ ಕಾಲದಲ್ಲೂ ತಮ್ಮ ಕುಟುಂಬಶಾಹಿತ್ವವನ್ನು ನೀರೆರೆದು ಬೆಳೆಸಿದರು. ಭಾರತದಲ್ಲಿ ಇಂದಿರಾ ಗಾಂಧಿ ಕುಟುಂಬ, ಕಾಶ್ಮೀರದಲ್ಲಿ ಅಬ್ದುಲ್ಲಾ ಕುಟುಂಬ, ಬಿಹಾರದ ಲಾಲೂ ಪ್ರಸಾದ್ ಕುಟುಂಬ, ಮಹಾರಾಷ್ಟ್ರದ ಢಾಕರೇ ಕುಟುಂಬ, ತಮಿಳುನಾಡಿನ ಕರುಣಾನಿಧಿ ಕುಟುಂಬ, ಉತ್ತರ ಪ್ರದೇಶದ ಯಾದವ್ ಕುಟುಂಬಗಳು ಚುನಾವಣಾ ಕುಟುಂಬ ರಾಜಕೀಯದ ಸಂಖೇತಗಳೆನ್ನಬಹುದು. ಇದರೊಡನೆ ಪಕ್ಷದ ನೀತಿ ಮತ್ತು ಸಿದ್ಧಾಂತಗಳ ಮೇಲೆ ಪ್ರಭಾವ ಬೀರುವ ಮೂಲಕ ರಾಜಕೀಯ ಹಿಡಿತ ಹೊಂದಿರುವ ಮಹಾರಾಷ್ಟ್ರದ ಬಾಳಾ ಠಾಕರೆಯಂತಹ ಕುಟುಂಬ ರಾಜಕೀಯವನ್ನು ಗಮನಿಸಬಹುದಾಗಿದೆ. ಭಾರತದ ಿತರೆ ರಾಜ್ಯಗಳಲ್ಲಿ ಕುಟುಂಬ ರಾಜಕಾರಣ ಮನೆ ಮಾಡಿರುವಂತೆ ಕರ್ನಾಟಕದಲ್ಲೂ ತನ್ನ ಪ್ರಭಾವವನ್ನು ಅದು ಹೊಂದಿದೆ. ಕರ್ನಾಟಕದಲ್ಲಿ ಕಳೆದೆರಡು ದಶಕಗಳವರೆಗೆ ಬೆರಳೆಣಿಕೆಯಷ್ಟಿದ್ದ ರಾಜಕೀಯ ಕುಟುಂಬಗಳು ಇತ್ತೀಚೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಬಳ್ಳಾರಿಯ ರೆಡ್ಡಿ ಸಹೋದರರು, ಕನಕಪುರದ ಡಿ. ಕೆ ಸಹೋದರರು, ಬೆಳಗಾವಿಯ ಜಾರಕಿಹೊಳೆ ಸಹೋದರರು, ಧಾರವಾಡದ ಶೆಟ್ಟರ್ ಸಹೋದರರು ಪ್ರಸ್ತುತ ಕರ್ನಾಟಕ ರಾಜಕಾರಣದಲ್ಲಿ ಸಕ್ರೀಯವಾಗಿರುವ ರಾಜಕೀಯ ಕುಟುಂಬಗಳು. ಕರ್ನಾಟಕದಲ್ಲಿ ಕೆಲ ಕಾಲದವರೆಗೆ ತಂದೆ ಮಕ್ಕಳ ಪಕ್ಷವೆಂದು ದೂರುತ್ತಿದ್ದ ಜಾತ್ಯಾತೀತ ಜನತಾ ದಳವನ್ನು ನಾಚಿಸುವಂತೆ ರಾಷ್ಟ್ರೀಯ ಪಕ್ಷಗಳು ತಾವೇ ಕರ್ನಾಟಕದಲ್ಲಿ ಕುಟುಂಬ ರಾಜಕಾರಣವನ್ನು ಪ್ರಸ್ತುತ ಪಾಲಿಸುತ್ತಿವೆ. ಸ್ಥಳೀಯ ಸಂಸ್ಥೆಗಳ ರಾಜಕೀಯದಲ್ಲಂತೂ ಕುಟುಂಬ ರಾಜಕಾರಣ ತನ್ನ ವಿಶಾಲ ಬಾಹುಗಳನ್ನು ಚಾಚಿದೆ. ಒಂದು ಕುಟುಂಬದ ಬಹು ಸದಸ್ಯರು ದೀರ್ಘ ಕಾಲದವರೆಗೆ ಸ್ಥಳೀಯ ರಾಜಕಾರಣದಲ್ಲಿ ಬಿಗಿ ಹಿಡಿತ ಹೊಂದಿರುವುದು ಸುಸ್ಪಷ್ಟ.
ಕುಟುಂಬ ರಾಜಕಾರಣದ ಪ್ರೇರಕ ಅಂಶಗಳು:
* ಪಕ್ಷಗಳ ಮಹತ್ವಾಕಾಂಕ್ಷೆಯಿಂದ ಕುಟುಂಬ ರಾಜಕಾರಣ ಬಲಗೊಳ್ಳುತ್ತಿದೆ. ಕರ್ನಾಟಕದ ೆಲ್ಲ ಪಕ್ಷಗಳೂ ಪೂರ್ವಿಕರ ಜನಪ್ರೀಯತೆಯ ಲಾಭಕ್ಕಾಗಿ ಆಯಾ ಕುಟುಂಬದವರಿಗೆ ಮಣೆ ಹಾಕುತ್ತವೆ. ತಂದೆಗೆ ವಯಸ್ಸಾದರೆ ಮಗ ಅಥವ ಮಗಳಿಗೆ, ಪತಿ ನಿಧನವಾದರೆ ಪತ್ನಿ ಅಥವ ಮಗನಿಗೆ, ಅಣ್ಣನ ಬದಲು ತಮ್ಮನಿಗೆ ಅವಕಾಶ ನೀಡಿ ಕುಟುಂಬ ರಾಜಕಾರಣ ವಿಸ್ತರಿಸುತ್ತಾ ಬಂದಿದೆ. 2018 ರಲ್ಲಿ ರಸ್ತೆ ಅಪಘಾತದಲ್ಲಿ ಮಡಿದ ಸಿದ್ದು ನ್ಯಾಮಗೌಡರ ಬದಲು ಅವರ ಮಗನಿಗೆ ಕಾಂಗ್ರೆಸ್ ಹಾಗು ಕುಮಾರಸ್ವಾಮಿಯವರಿಂದ ದ್ವೀ ಸ್ಥಾನಗಳ ಪೈಕಿ ತೆರವಾದ ರಾಮನಗರಕ್ಕೆ ಜಾತ್ಯಾತೀತ ಜನತಾ ದಳ ಅವರ ಹೆಂಡತಿ ಅನಿತಾ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡಿದ್ದವು.
* ಜನಪ್ರೀಯತೆಯ ಲಾಭ ಪಡೆಯುವ ಕಾರಣಕ್ಕೆ ಕುಟುಂಬ ರಾಜಕಾರಣ ಹೆಚ್ಚುತ್ತಿದೆ. ಅಂಬರೀಶ ನಿಧನದ ಬಳಿಕ ಅವರ ಚಲನಚಿತ್ರ ಹಾಗು ರಾಜಕೀಯದ ಜನಪ್ರೀಯತೆಯನ್ನು ಬಳಸಿಕೊಳ್ಳಲು ಅವರ ಪತ್ನಿ ಸುಮಲತಾ ಅಂಬರೀಶರಿಗೆ 2019 ರ ಚುನಾವಣೆಯಲ್ಲಿ ಟಿಕೆಟ್ ನೀಡಲು ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಅಲ್ಲದೇ ಸಿದ್ಧರಾಮಯ್ಯರ ಮಗ ಡಾ. ಯತೀಂದ್ರ, ಮಲ್ಲಿಕಾರ್ಜುನ್ ಖರ್ಗೆ ಮಗ ಪ್ರಿಯಾಂಕ್ ಖರ್ಗೆ, ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಜನಾರ್ಧನ ರೆಡ್ಡಿಯವರ ಸಹೋದರ ಸೋಮಶೇಕರ ರೆಡ್ಡಿ, ರಾಮಲಿಂಗರೆಡ್ಡಿಯವರ ಮಗಳು ಸೌಮ್ಯಾ ರೆಡ್ಡಿ ಕರ್ನಾಟಕದಲ್ಲಿ ರಾಜಕೀಯಕ್ಕೆ ಬರಲು ಅವರ ಕುಟುಂಬದ ಜನಪ್ರೀಯತೆಯ ಲಾಬ ಗಳಿಸಲು ಮುಂದಾಗಿರುವುದೇ ಆಗಿದೆ.
* ಕುಟುಂಬಗಳ ಸಂಪತ್ತಿನ ಪ್ರಭಾವವೂ ಆ ಕುಟುಂಬ ರಾಜಕಾರಣವನ್ನು ವಿಸ್ತರಿಸುತ್ತದೆ. ರಾಜಕೀಯ ಪಕ್ಷಗಳಿಗೆ ಸಂಕಷ್ಟದಲ್ಲಿ ನೆರವಾದ ಶ್ರೀಮಂತ ಕುಟುಂಬಗಳು ತಮ್ಮ ಹಿತಾಸಕ್ತಿಯ ರಕ್ಷಣೆಗಾಗಿ ರಾಜಕೀಯ ಪ್ರಭಾವ ಹೆಚ್ಚಿಸಿಕೊಳ್ಳಲು ಮುಂದಾಗುತ್ತವೆ. ಆಗ ಕುಟುಂಬದ ುಳಿದ ಸದಸ್ಯರಿಗೆ ರಾಜಕೀಯ ಪ್ರವೇಶ ಸಾಧ್ಯವಾಗುತ್ತದೆ. ಗಣಿ ಧಣಿ ಜನಾರ್ಧನ ರೆಡ್ಡಿ ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ಮಾತ್ರವಲ್ಲದೇ ಸ್ನೇಹಿತ ಬಿ. ಶ್ರೀರಾಮಲು ಕುಟುಂಬ ರಾಜಕಾರಣಕ್ಕೂ ಕಾರಣರಾದರು. ಇದರಿಂದ ಕುಟುಂಬ ಶಾಹಿತ್ವ ರಾಜಕಾರಣದಲ್ಲಿ ಹೆಮ್ಮರವಾಗುತ್ತಾ ಸಾಗುತ್ತದೆ.
* ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಮೀಸಲಾತಿ ಬದಲಾವಣೆ ಕೂಡ ಕುಟುಂಬ ರಾಜಕಾರಣಕ್ಕೆ ಕಾರಣವೆನಿಸುವುದು. ನಿರ್ದಿಷ್ಟ ಮತಕ್ಷೇತ್ರ ಮಹಿಳೆಗೆ ಮೀಸಲಾದರೆ ಒಂದು ಪ್ರಭಾವಿ ಕುಟುಂಬದ ಮಹಿಳೆಯನ್ನು ಮೀಸಲು ಕ್ಷೇತ್ರಕ್ಕೆ ಕಣಕ್ಕಿಳಿಸಿ ಅದೇ ಕುಟುಂಬದ ಪುರುಷ ಪಕ್ಕದ ಮತಕ್ಷೇತ್ರದಲ್ಲಿ ಸ್ಪರ್ಧಿಸುವ. ಹೀಗಾಗಿ ಕುಟುಂಬ ರಾಜಕಾರಣ ಿಂಬು ಪಡೆಯುತ್ತಿದೆ. ಜೊತೆಗೆಮೀಸಲು ಕಾರಣ ವಲಸೆ ಹೋಗಿದ್ದ ರಾಜಕಾರಣಿ ನಂತರ ಮೂಲ ಮತಕ್ಷೇತ್ರದಲ್ಲೂ ತನ್ನವರೇ ಸ್ಪರ್ಧಿಸಬೇಕೆಂದು ಬಯಸುತ್ತಾನೆ. ಇದರಿಂದಲೂ ಕುಟುಂಬ ರಾಜಕಾರಣ ಬಲಗೊಳ್ಳುತ್ತದೆ.
* ವ್ಯಕ್ತಿಗಳ ರಾಜಕೀಯ ಬಡ್ತಿಯೂ ಕೂಡ ಕುಟುಂಬ ರಾಜಕಾರಣದ ೇಳಿಗೆಗೆ ಪ್ರಭಾವ ಬೀರುತ್ತದೆ. ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ತೆರಳಿದಾಗ ಾ ನಾಯಕ ತನ್ನ ಕುಟುಂಬದ ಸದಸ್ಯರನ್ನು ರಾಜ್ಯ ರಾಜಕಾರಣದಲ್ಲಿ ಮುನ್ನೆಲೆಗೆ ತರಲು ಹವಣಿಸುತ್ತಾನೆ. ಈ ಪರಿಪಾಠ ಸ್ಥಳೀಯ ಸಂಸ್ಥೆಗಳ ರಾಜಕಾರಣದಲ್ಲೂ ಜಾರಿಯಲ್ಲಿರುತ್ತದೆ. ಪಕ್ಷಗಳ ತಾತ್ಕಾಲಿಕ ಲಾಭದ ನಿರ್ಣಯಗಳು ಇಂತಹ ಸನ್ನಿವೇಶವನ್ನು ತಂದೊಡ್ಡುತ್ತವೆ.
* ಸಾಂಸ್ಥಿಕ ಚುನಾವಣೆಗಳ ಅನುಪಸ್ಥಿತಿ ಕುಟುಂಬ ರಾಜಕಾರಣಕ್ಕೆ ಹೆದ್ದಾರಿಯಾಗುತ್ತದೆ. ಚುನಾವಣೆ ಹೊಸ ಪ್ರಯೋಗಗಳಿಗೆ ವೇಧಿಕೆ. ಹೊಸ ಮುಖಗಳು ಮುನ್ನೆಲೆಗೆ ಬರಲು ಸಾಂಸ್ಥಿಕ ಚುನಾವಣೆಗಳು ಕಾರಣವಾಗುತ್ತವೆ. ಆದರೆ ಇವುಗಳ ಬಳಕೆ ರಾಜಕೀಯ ಪಕ್ಷಗಳಲ್ಲಿ ಅಪರೂಪವಾಗಿದೆ. ಪರಿಣಾಮ ಪ್ರಭಾವಿ ಕುಟುಂಬಗಳು ವಿವಿಧ ರೂಪದಲ್ಲಿ ಕುಟುಂಬ ರಾಜಕಾರಣವನ್ನು ಬೆಳೆಸುತ್ತಿವೆ.
ಕುಟುಂಬ ರಾಜಕಾರಣದ ದುಷ್ಪರಿಣಾಮಗಳು:
* ತಾರತಮ್ಯವಿಲ್ಲದೇ ಪ್ರತಿಯೊಬ್ಬ ಪ್ರಜೆ ಆಳಲು ಅರ್ಹನೆಂಬ ಪ್ರಜಾಪ್ರಭುತ್ವದ ಾಶಯವನ್ನು ಕುಟುಂಬ ರಾಜಕಾರಣ ಹಾಳು ಮಾಡಿದೆ. ಒಂದೇ ಕುಟುಂಬದ ುತ್ತರಾಧಿಕಾರಿಗಳೇ ಚುನಾವಣೆಗೆ ಟಿಕೆಟ್ ಪಡೆಯುವ ಮೂಲಕ ಸಾಮಾನ್ಯ ಪ್ರಜೆಗಳನ್ನು ದೂರವಿಡಲಾಗುತ್ತದೆ.
* ಆಡಳಿತದಲ್ಲಿ ದಕ್ಷತೆಯು ಮಾಯವಾಗುತ್ತದೆ. ಕೇವಲ ಕುಟುಂಬದ ಾಧಾರದ ಮೇಲೆ ಅಸಮರ್ಥರು ಅಧಿಕಾರವನ್ನು ಗಳಿಸಿದಾಗ ಅಧಿಕಾರಶಾಹಿ ಬಲಗೊಳ್ಳುತ್ತದೆ. ಸಮಯೋಚಿತ ಹಾಗು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳದೇ ಆಡಳಿತ ಯಂತ್ರ ದಾರಿ ತಪ್ಪುತ್ತದೆ.
* ಕುಟುಂಬ ರಾಜಕಾರಣವು ಕ್ರಮೇಣ ಜನರಲ್ಲಿ ರಾಜಕೀಯ ಾಸಕ್ತಿಯನ್ನು ನಾಶಗೊಳಿಸುತ್ತದೆ. ಪ್ರತಿ ಚುನಾವಣೆಯಲ್ಲೂ ಒಂದೇ ಕುಟುಂಬದ ುಮೇದುವಾರರನ್ನು ಕಾಣುವ ಜನಸಾಮಾನ್ಯ ಮತದಾನದಿಂದಲೂ ದೂರವುಳಿಯುವ ಸಾಧ್ಯತೆ ಕಂಡು ಬರುತ್ತದೆ.
* ಕುಟುಂಬ ರಾಜಕಾರಣದಿಂದ ಅಧಿಕಾರ ವಿಕೇಂದ್ರೀಕರಣದ ಕನಸು ನನಸಾಗುವುದಿಲ್ಲ. ಅಧಿಕಾರವು ನಿರ್ದಿಷ್ಟ ಕುಟುಂಬದಲ್ಲಿ ಸೀಮಿತಗೊಂಡು ಸ್ವಾರ್ಥ ಸಾಧನೆಗೆ ಕಾರಣವಾಗುತ್ತದೆ. ಇದರಿಂದ ಜನಸಾಮಾನ್ಯ ಶೋಷಣೆಗೊಳಗಾಗುವ ಸಾಧ್ಯತೆ ಅಧಿಕವಾಗುತ್ತದೆ.
* ಕುಟುಂಬ ರಾಜಕೀಯವು ಸಮಾಜದಲ್ಲಿನ ಅಲ್ಪ ಸಂಖ್ಯಾತ ವರ್ಗವನ್ನು ಧ್ವನಿ ರಹಿತಗೊಳಿಸುತ್ತದೆ. ಸಾಮಾನ್ಯವಾಗಿ ಸಮಾಜದ ಪ್ರಬಲ ವರ್ಗದ ಕುಟುಂಬ ಅಧಿಕಾರ ಅನುಭವಿಸುವುದರಿಂದ ಅಲ್ಪ ಸಂಖ್ಯಾತರು ಕಡೆಗಣಿಸಲ್ಪಡುವರು. ಅವರ ಸಮಸ್ಯೆಗಳಿಗೆ ಧ್ವನಿ ಇಲ್ಲದಂತಾಗುತ್ತದೆ.
ಸಮಾರೋಪ:
ಆಧುನಿಕ ಯುಗದಲ್ಲಿ ಸರ್ವಾಧಿಕಾರತ್ವ ಮತ್ತು ರಾಜಪ್ರಭುತ್ವ ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯವೆನ್ನಬಹುದಾದ ಕುಟುಂಬ ರಾಜಕಾರಣ ಪ್ರಸ್ತುತ ಪ್ರಜಾಪ್ರಭುತ್ವದಲ್ಲೂ ಬಲಗೊಳ್ಳುತ್ತಿದೆ. ಕರ್ನಾಟಕದಲ್ಲಿ ಕುಟುಂಬ ರಾಜಕಾರಣವು ಸ್ಥಿರ ನಾಯಕತ್ವವನ್ನು ಒದಗಿಸಿ ಪಕ್ಷದೊಳಗಿನ ರಾಜಕೀಯ ಮೇಲಾಟಗಳನ್ನು ತಡೆಯುವಲ್ಲಿ ಕೆಲ ಮಟ್ಟಿಗೆ ನೆರವಾಗಿದೆ. ಕುಮಾರಸ್ವಾಮಿಯವರಿಗೆ ಜಾತ್ಯಾತೀತ ಜನತಾ ದಳದ ನಾಯಕತ್ವ ನೀಡಿದ ಬಳಿಕ ಪಕ್ಷದೊಳಗಿನ ರಾಜಕೀಯ ಮೇಲಾಟಗಳು ನಿಯಂತ್ರಣದಲ್ಲಿವೆ ಎನ್ನಬಹುದು. ಜೊತೆಗೆ ರಾಜಕೀಯವನ್ನು ಹತ್ತಿರದಿಂದ ನೋಡಿದವರಿಗೆ ಅವಕಾಶವನ್ನು ನೀಡಿ ದಕ್ಷ ಾಡಳಿತಕ್ಕೆ ಕಾರಣವಾಗಬಹುದು. ಬಿ. ಎಸ್ ಯಡೆಯೂರಪ್ಪನವರ ಮಗ ಬಿ. ವಾಯ್ ರಾಘವೇಂದ್ರರಿಗೆ ಅವಕಾಶ ದೊರೆತಾಗ ಸಮರ್ಥವಾಗಿ ಲೋಕಸಭಾ ಸದಸ್ಯ ಸ್ಥಾನವನ್ನು ನಿಭಾಯಿಸಲು ಸಾಧ್ಯವೆನಿಸಿದೆ. ಅಲ್ಲದೇ ಕುಟುಂಬ ರಾಜಕಾರಣದ ನೆರವಿನಿಂದ ಮಹಿಳೆಯರು ರಾಜಕೀಯ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಕರ್ನಾಟಕದಲ್ಲಿ ವಿಧಾನಸಭಾ ಸದಸ್ಯೆ ಸೌಮ್ಯಾ ರೆಡ್ಡಿ ಹಾಗು ಮಾಜಿ ಸಂಸಧೆ ಜೆ. ಶಾಂತಾ ಕುಟುಂಬ ರಾಜಕಾರಣದ ನೆರವಿನಿಂದ ರಾಜಕೀಯ ಮುನ್ನೆಲೆಗೆ ಬಂದವರು. ಈ ಹಿನ್ನೆಲೆಯಲ್ಲಿ ಕುಟುಂಬ ರಾಜಕಾರಣವನ್ನು ಬೆಂಬಲಿಸದೇ ರಾಜಕೀಯ ನ್ಯಾಯವನ್ನು ಸ್ತಾಪಿಸಲು ರಾಜಕೀಯ ಪಕ್ಷಗಳು ಚಿಂತಿಸಬೇಕು. ಪಕ್ಷಗಳಲ್ಲಿ ಸಾಂಸ್ಥಿಕ ಚುನಾವಣೆಗಳನ್ನು ಆಯೋಜಿಸುವ, ನಿರ್ದಿಷ್ಟ ಮತಕ್ಷೇತ್ರದಲ್ಲಿ ಬೇರೆಬೇರೆ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ, ಮತದಾರರು ವ್ಯಕ್ತಿ ಪೂಜೆಯನ್ನು ಕೈಬಿಡುವ, ರಾಜಕಾರಣಿಗಳು ಸ್ವಯಂ ನಿರ್ಬಂಧ ಹೇರಿಕೊಳ್ಳುವ ುಪಕ್ರಮಗಳಿಂದ ಕುಟುಂಬ ರಾಜಕಾರಣವನ್ನು ಹೋಗಲಾಡಿಸಬಹುದು. ಕರ್ನಾಟಕದಲ್ಲಿ ಪ್ರಸ್ತುತ ಹಲವು ಕುಟುಂಬಗಳು ರಾಜಕಾರಣದಲ್ಲಿ ಸಕ್ರಿಯವಾಗಿವೆ. ಹಿಂದೆ ತಿಳಿಸಲಾದ ುಪಕ್ರಮಗಳ ಮೂಲಕ ಕುಟುಂಬ ರಾಜಕಾರಣವನ್ನು ಕಿತ್ತೊಗೆಯಲು ರಾಜಕೀಯ ಪಕ್ಷಗಳು, ಮತದಾರರು, ಸ್ವಯಂ ನಿಯಂತ್ರಣದ ಮೂಲಕ ರಾಜಕಾರಣಿಗಳು ಮುಂದಾಗುವ ಅನಿವಾರ್ಯವಿದೆ ಎನ್ನಬಹುದು. ಆಗ ಕರ್ನಾಟಕವು ನಿರ್ದಿಷ್ಟ ಕುಟುಂಬದ ಹಿಡಿತದಲ್ಲಿರುವ ರಾಜ್ಯವೆಂಬ ಕುಖ್ಯಾತಿಯಿಂದ ದೂರವಿರಲು ಸಾಧ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ