2020/21 ನೇ ಸಾಲಿನಿಂದ ಕರ್ನಾಟಕ ವಿಶ್ವ ವಿದ್ಯಾಲಯವು ಜಾರಿಗೊಳಿಸಿದ ಸಿ. ಬಿ. ಸಿ. ಎಸ್ ಪಠ್ಯಕ್ರಮಾನುಸಾರ ಐದನೇ ಸೆಮಿಸ್ಟರಿನ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ನಿಗಧಿಪಡಿಸಲಾದ (ಸಾರ್ವಜನಿಕ ಆಡಳಿತದ ಪರಿಚಯ) ಎಂಬ ಶಿರ್ಷಿಕೆಯ ಪತ್ರಿಕೆಯ ವಿಷಯವಸ್ತು:
ಅಧ್ಯಾಯ 1: ಸಾರ್ವಜನಿಕ ಆಡಳಿತದ ಸ್ವರೂಪ ಮತ್ತು ವ್ಯಾಪ್ತಿ:
ಅ. ಸಾರ್ವಜನಿಕ ಆಡಳಿತದ ಅರ್ಥ, ಸ್ವರೂಪ, ವ್ಯಾಪ್ತಿ ಹಾಗೂ ಮಹತ್ವ.
ಆ. ಸಾರ್ವಜನಿಕ ಆಡಳಿತದ ಅಧ್ಯಯನ ವಿಧಾನಗಳು.
ಅಧ್ಯಾಯ 2: ವ್ಯವಸ್ಥಾಪನೆಯ ಪರಿಕಲ್ಪನೆ:
ಅ. ನೂತನ ಸಾರ್ವಜನಿಕ ವ್ಯವಸ್ಥಾಪನಾ ಪರಿಕಲ್ಪನೆಯ ಉಗಮ ಹಾಗೂ ಬೆಳವಣಿಗೆ, ಅರ್ಥ, ಲಕ್ಷಣಗಳು ಮತ್ತು ಅನುಷ್ಠಾನ.
ಆ. ನೂತನ ಸಾರ್ವಜನಿಕ ವ್ಯವಸ್ಥಾಪನೆಯ ಪ್ರಧಾನ ಪರಿಕಲ್ಪನೆಗಳು ಮತ್ತು ಅದರ ಮೂಲ ಘಟಕಗಳು.
ಅಧ್ಯಾಯ 3: ಆಡಳಿತದ ಪರಿಕಲ್ಪನೆ:
ಅ. ಅಭಿವೃದ್ಧಿ ಆಡಳಿತದ ಅರ್ಥ, ಸ್ವರೂಪ ಮತ್ತು ಲಕ್ಷಣಗಳು.
ಆ. ಭಾರತದಲ್ಲಿನ ಆಡಳಿತಾತ್ಮಕ ಸುಧಾರಣೆಗಳು.
ಅಧ್ಯಾಯ 4: ತೌಲನಿಕ ಆಡಳಿತದ ಪರಿಕಲ್ಪನೆ:
ಅ. ತೌಲನಿಕ ಸಾರ್ವಜನಿಕ ಆಡಳಿತದ ಅರ್ಥ, ಸ್ವರೂಪ, ಅಗತ್ಯ, ಲಕ್ಷಣಗಳು ಮತ್ತು ವಿಧಗಳು.
ಆ. ತೌಲನಿಕ ಸಾರ್ವಜನಿಕ ಆಡಳಿತದ ಅಧ್ಯಯನದ ವಿಧಾನಗಳು [ರೆಗ್ಗ್ಸಿಯನ್ ಮಾದರಿ]
ಅಧ್ಯಾಯ 5: ಆಳ್ವಿಕೆಯ ಪರಿಕಲ್ಪನೆಗಳು:
ಅ. ಉತ್ತಮ ಆಳ್ವಿಕೆ ಪರಿಕಲ್ಪನೆಯ ವಿಕಾಸ, ಲಕ್ಷಣಗಳು ಮತ್ತು ಅನ್ವಯ.
ಆ. ವಿದ್ಯುನ್ಮಾನ ಆಡಳಿತ ಪರಿಕಲ್ಪನೆಯ ವಿಕಾಸ, ಅರ್ಥ, ವಿಧಗಳು ಮತ್ತು ಅನುಕೂಲಗಳು.
ಸಾರ್ವಜನಿಕ ನೀತಿ ಎಂಬ ಶಿರ್ಷಿಕೆಯುಳ್ಳ ಎರಡನೇ ಪತ್ರಿಕೆಯ ವಿಷಯ ವಸ್ತು:
ಅಧ್ಯಾಯ 1: ಸಾರ್ವಜನಿಕ ನೀತಿ:
ಅ. ಸಾರ್ವಜನಿಕ ನೀತಿಯ ಅರ್ಥ, ಸ್ವರೂಪ, ವ್ಯಾಪ್ತಿ ಮತ್ತು ಆಧುನಿಕ ಹಾಗೂ ಪರಿವರ್ತನಾ ಸನ್ನಿವೇಶದಲ್ಲಿ ಅದರ ಮಹತ್ವ.
ಆ. ಭಾರತದಲ್ಲಿ ಸಾರ್ವಜನಿಕ ನೀತಿಯ ಪ್ರಕ್ರಿಯೆ.
ಅಧ್ಯಾಯ 2: ಸಾರ್ವಜನಿಕ ನೀತಿಯ ನಿರೂಪಣೆ ಮತ್ತು ಅದರ ನಿರ್ಧಾರಕ ಅಂಶಗಳು:
ಅ. ಹಿತಾಸಕ್ತಿ ಗುಂಪುಗಳು, ಒತ್ತಡ ಗುಂಪುಗಳು, ರಾಜಕೀಯ ಪಕ್ಷಗಳು, ಸಮೂಹ ಮಾಧ್ಯಮಗಳು ಮತ್ತು ಸಾಮಾಜಿಕ ಚಳುವಳಿಗಳು.
ಆ. ನೀತಿ ಅನುಷ್ಠಾನದಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪಾತ್ರ.
ಅಧ್ಯಾಯ 3: ಭಾರತೀಯ ಒಕ್ಕೂಟವಾದ ಮತ್ತು ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳು:
ಅ. ಆಡಳಿತಾತ್ಮಕ, ಶಾಸನೀಯ ಮತ್ತು ಹಣಕಾಸಿನ ಸಂಬಂಧಗಳು.
ಆ. ಕೇಂದ್ರ ಮತ್ತು ರಾಜ್ಯಗಳ ಸಂಬಂಧದಲ್ಲಿನ ಸಂಘರ್ಷಮಯ ವಿಷಯಗಳು.
ಅಧ್ಯಾಯ 4: ಭಾರತದಲ್ಲಿನ ಸಂವಿಧಾನಾತ್ಮಕ ಸಂಸ್ಥೆಗಳ ಮಹತ್ವ:
ಅ. ಮಹಾ ಲೆಕ್ಕ ಪರಿಶೋಧಕರು ಮತ್ತು ಮಹಾ ನ್ಯಾಯವಾದಿಗಳ ಅಧಿಕಾರ ಕಾರ್ಯಗಳು.
ಆ. ಹಣಕಾಸು ಆಯೋಗದ ರಚನೆ ಮತ್ತು ಅಧಿಕಾರ ಕಾರ್ಯಗಳು.
ಅಧ್ಯಾಯ 5: ಆಡಳಿತದಲ್ಲಿನ ನಿಯಂತ್ರಣ:
ಅ. ಶಾಸನೀಯ, ಕಾರ್ಯಾಂಗೀಯ ಹಾಗೂ ನ್ಯಾಯಾಂಗೀಯ ನಿಯಂತ್ರಣ.
ಆ. ಭಾರತದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳ ಕಾರ್ಯಾಚರಣೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ