ಗುರುವಾರ, ಜುಲೈ 15, 2021

ಎರಡನೇ ಅಧ್ಯಾಯದ ಮಾದರಿ ಬಹು ಆಯ್ಕೆಯ ಪ್ರಶ್ನೆಗಳು ಮತ್ತು ಅವುಗಳ ಉತ್ತರ:

* ಮಾನವರಿಂದ ಪ್ರತ್ಯೇಕಿಸಲಾಗದ ಹಕ್ಕುಗಳನ್ನು ಹೀಗೆ ಕರೆಯುತ್ತಾರೆ. (ಮಾನವ ಹಕ್ಕು)
• * 1215 ರಲ್ಲಿ ಮ್ಯಾಗ್ನ ಕಾರ್ಟಾ ಮೂಲಕ ತನ್ನ ಪ್ರಜೆಗಳಿಗೆ ಕೆಲವು ಮೂಲಭೂತ ಹಕ್ಕುಗಳನ್ನೊದಗಿಸಿದ್ದ ಇಂಗ್ಲೆಂಡಿನ ದೊರೆ (ಎರಡನೇ ಜಾನ್)
• * ಬಿಲ್ ಆಫ್ ರೈಟ್ಸ್ ಮೂಲಕ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಿದ್ದ ಸಂವಿಧಾನವೆಂದರೆ (ಅಮೇರಿಕದ ಸಂವಿಧಾನ)
• * ಭಾರತ ಸಂವಿಧಾನದ ಯಾವ ಭಾಗದಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ವಿವರಿಸಲಾಗಿದೆ? (೩ ನೇ ಭಾಗ)
• * ಭಾರತದ ಪ್ರಜೆಗಳು ಆರಂಭದಲ್ಲಿ ಎಷ್ಟು ಮೂಲಭೂತ ಹಕ್ಕುಗಳನ್ನು ಹೊಂದಿದ್ದರು? (ಏಳು)
• * ಮೂಲಭೂತ ಹಕ್ಕುಗಳ ಪಟ್ಟಿಯಿಂದ ಯಾವ ಹಕ್ಕನ್ನು ರದ್ದುಗೊಳಿಸಲಾಗಿದೆ? (ಆಸ್ತಿಯ ಹಕ್ಕು)
• * ಆಸ್ತಿಯ ಹಕ್ಕನ್ನು ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ರದ್ದುಗೊಳಿಸಲಾಯಿತು? (ಸಂವಿಧಾನದ 44 ನೇ ತಿದ್ದುಪಡಿ)
• * ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿರುವ ಮೂಲಭೂತ ಹಕ್ಕು ಯಾವುದು? (ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು)
• * ಭಾರತದಲ್ಲಿ ಯಾವ ಮೂಲಭೂತ ಹಕ್ಕಿನಡಿ ಅಸ್ಪೃಷ್ಯತೆಯನ್ನು ರದ್ದುಗೊಳಿಸಲಾಗಿದೆ? (ಸಮಾನತೆಯ ಹಕ್ಕು)
• * ಸೈನಿಕ ಮತ್ತು ಶೈಕ್ಷಣಿಕ ಬಿರುದುಗಳನ್ನು ಹೊರತುಪಡಿಸಿ ಉಳಿದೆಲ್ಲ ಬಿರುದುಗಳನ್ನು ರದ್ದುಗೊಳಿಸಿರುವ ಸಂವಿಧಾನದ ವಿಧಿ ಯಾವುದು? (18 ನೇ ವಿಧಿ)
• * ಪ್ರಜೆಗಳಿಗೆ ಭಾರತದಲ್ಲಿ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕನ್ನೊಡಗಿಸಿರುವ ವಿಧಿ ಯಾವುದು? (21 ನೇ ವಿಧಿ)
• * ಸಂವಿಧಾನದ 24 ನೇ ವಿಧಿಯು ಯಾವ ಪದ್ಧತಿಯನ್ನು ನಿಷೇಧಿಸುತ್ತದೆ? (ಬಾಲ ಕಾರ್ಮಿಕ ಪದ್ಧತಿ)
• ಭಾರತೀಯರಿಗೆ ಪ್ರಸ್ತುತ ಆಸ್ತಿಯ ಹಕ್ಕು (ಕಾನೂನುಬದ್ಧ ಹಕ್ಕಾಗಿದೆ)
• * ಯಾವ ಮೂಲಭೂತ ಹಕ್ಕನ್ನು ಬಿ. ಆರ್. ಅಂಬೇಡ್ಕರರು ಸಂವಿಧಾನದ ಹೃದಯ ಮತ್ತು ಆತ್ಮ ಎಂದು ಬಣ್ಣಿಸಿರುವರು? (ಸಂವಿಧಾನಾತ್ಮಕ ಪರಿಹಾರೋಪಾಯದ ಹಕ್ಕು)
• * ಭಾರತದ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಪ್ರಜೆಗಳು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಸೇರ್ಪಡಿಸಲು ಯಾವ ಸಮೀತಿ ಸಲಹೆ ನೀಡಿತ್ತು? (ಸ್ವರ್ಣಸಿಂಗ್ ಸಮೀತಿ)
• * ಸಂಸತ್ತು 1976 ರಲ್ಲಿ ಎಷ್ಟನೇ ತಿದ್ದುಪಡಿಯ ಮೂಲಕ ಭಾರತೀಯ ಪ್ರಜೆಗಳ ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸೇರಿಸಿತು? (೪೨ ನೇ ಸಂವಿಧಾನ ತಿದ್ದುಪಡಿ)
• * ಭಾರತ ಸಂವಿಧಾನದ ಯಾವ ಭಾಗ ಮತ್ತು ವಿಧಿಯಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಾಣಬಹುದಾಗಿದೆ? (೪ [A] ಭಾಗ ಮತ್ತು ೫೧ [A] ವಿಧಿಯಲ್ಲಿ)
• * ೮೬ ನೇ ತಿದ್ದುಪಡಿಯ ಮೂಲಕ ಭಾರತೀಯ ಪ್ರಜೆಗಳು ಪಾಲಿಸಬೇಕಾದ ಎಷ್ಟನೇ ಕರ್ತವ್ಯವನ್ನು ಮೂಲಭೂತ ಕರ್ತವ್ಯಗಳ ಪಟ್ಟಿಗೆ ಸೇರಿಸಲಾಯಿತು? (ಹನ್ನೊಂದನೇ)
• * ಭಾರತದ ಸಾರ್ವಭೌಮತೆ, ಐಖ್ಯತೆ ಹಾಗೂ ಯಾವುದನ್ನು ಎತ್ತಿ ಹಿಡಿಯುವುದು ಭಾರತೀಯರ ಮೂಲಭೂತ ಕರ್ತವ್ಯವಾಗಿದೆ? (ಅಖಂಡತೆಯನ್ನು)
• * ಭಾರತದಲ್ಲಿ ಪೋಷಕರು ಎಷ್ಟು ವರ್ಷದೊಳಗಿನ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವುದು ಮೂಲಭೂತ ಕರ್ತವ್ಯವಾಗಿದೆ? (೧೪)
• ರಾಷ್ಟ್ರ ನೀತಿ ನಿರ್ದೇಶಕ ತತ್ವಗಳನ್ನು ಭಾರತ ಸಂವಿಧಾನದ (ನಾವಿಣ್ಯತೆಯ ಲಕ್ಷಣ) ಎಂದಿರುವವರು ಯಾರು? (ಡಾ. ಬಿ. ಆರ್. ಅಂಬೇಡ್ಕರ್
• * ಭಾರತ ಸಂವಿಧಾನದ ಯಾವ ಭಾಗದಲ್ಲಿ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳನ್ನು ಕಾಣಬಹುದಾಗಿದೆ? (ನಾಲ್ಕನೇ ಭಾಗದಲ್ಲಿ)
• * ಯಾವ ಸಂವಿಧಾನವು ಭಾರತ ಸಂವಿಧಾನದ ರಾಷ್ಟ್ರ ನೀತಿ ನಿರ್ದೇಶಕ ತತ್ವಗಳ ಅಳವಡಿಕೆಗೆ ಪ್ರಭಾವ ಬೀರಿದೆ? (ಐರ್ಲ್ಯಾಂಡ್ ಸಂವಿಧಾನ)
• * ರಾಷ್ಟ್ರ ನೀತಿ ನಿರ್ದೇಶಕ ತತ್ವಗಳ ನಾಲ್ಕನೇ ಭಾಗದಲ್ಲಿ ಬಳಕೆಯಾಗುವ ರಾಜ್ಯ ಎಂಬುವ ಪರಿಕಲ್ಪನೆಯ ವ್ಯಾಖ್ಯಾನವನ್ನು ಸಂವಿಧಾನದ ಯಾವ ವಿಧಿಯು ನೀಡಿದೆ?( ೩೬ ನೇ ವಿಧಿ)
• * ರಾಷ್ಟ್ರ ನೀತಿ ನಿರ್ದೇಶಕ ತತ್ವಗಳಿಗೆ ನ್ಯಾಯಾಂಗದ ರಕ್ಷಣೆ ನೀಡಲಾಗಿಲ್ಲ. ಈ ಹೇಳಿಕೆ ಸರಿ.
• * ರಾಷ್ಟ್ರ ನೀತಿ ನಿರ್ದೇಶಕ ತತ್ವಗಳು ಭಾರತವನ್ನು ಎಂತಹ ರಾಜ್ಯವನ್ನಾಗಿಸಲು ಅಗತ್ಯವಾದ ಸೂತ್ರಗಳನ್ನು ಒಳಗೊಂಡಿವೆ? (ಕಲ್ಯಾಣ ರಾಜ್ಯ)
* ಸಂವಿಧಾನದ ಯಾವ ವಿಧಿಯಂತೆ ರಾಜ್ಯವು ಮಹಿಳೆ ಹಾಗೂ ಪುರುಷನಿಗೆ ಸಮಾನ ದುಡಿಮೆಗೆ ಸಮಾನ ವೇತನ ದೊರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು? (೩೯ [D])
* ಸಂವಿಧಾನದ ಯಾವ ವಿಧಿಯಂತೆ ಭಾರತದ ಎಲ್ಲ ಪ್ರಜೆಗಳಿಗೆ ರಾಜ್ಯವು ಏಕರೂಪ ನಾಗರಿಕ ಸಂಹಿತೆಯ ಭರವಸೆಯನ್ನು ಒದಗಿಸಬೇಕು? (೪೪ ನೆ ವಿಧಿ)
* ಸಂವಿಧಾನದ ಯಾವ ವಿಧಿಯಂತೆ ರಾಜ್ಯವು ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಿ ಅವುಗಳು ಸ್ವಯಂ ಸರ್ಕಾರದಂತೆ ಕಾರ್ಯ ನಿರ್ವಹಿಸಲು ಅಗತ್ಯ ಅಧಿಕಾರವನ್ನೊದಗಿಸಲು ಕ್ರಮ ಕೈಗೊಳ್ಳಬೇಕು? (೪೦ ನೇ ವಿಧಿಯಂತೆ)
* ಸಂವಿಧಾನಕ್ಕೆ ೯೭ ನೇ ತಿದ್ದುಪಡಿ ಮೂಲಕ ಸೇರಿಸಲಾದ ಯಾವ ವಿಧಿಯಂತೆ ರಾಜ್ಯವು ಸಹಕಾರಿ ಸಂಸ್ಥೆಗಳ ಸ್ವಯಂ ರಚನೆ, ಸ್ವತಂತ್ರ ಕಾರ್ಯನಿರ್ವಹಣೆ, ಪ್ರಜಾಸತ್ತಾತ್ಮಕ ನಿಯಂತ್ರಣ ಹಾಗೂ ವೃತ್ತಿಪರ ನಿರ್ವಹಣೆಗೆ ಪ್ರೋತ್ಸಾಹ ನೀಡಬೇಕು? (೪೩ [ಬಿ])

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...