ಬುಧವಾರ, ಏಪ್ರಿಲ್ 28, 2021

ಬಿ. ಎ., ಬಿ. ಎಸ್ಸಿ, ಬಿ. ಕಾಂ ವಿದ್ಯಾರ್ಥಿಗಳಿಗೆ ಕಡ್ಡಾಯ ಪತ್ರಿಕೆಯಾದ ಭಾರತ ಸಂವಿಧಾನದ ಪಠ್ಯಕ್ರಮ ಮತ್ತು ಪ್ರಶ್ನೆ ಪತ್ರಿಕೆಯ ವಿನ್ಯಾಸ:

ಬಿ. ಎ., ಬಿ. ಎಸ್ಸಿ, ಬಿ. ಕಾಂ ವಿದ್ಯಾರ್ಥಿಗಳಿಗೆ ಕಡ್ಡಾಯ ಪತ್ರಿಕೆಯಾದ ಭಾರತ ಸಂವಿಧಾನದ ಪಠ್ಯಕ್ರಮ ಮತ್ತು ಪ್ರಶ್ನೆ ಪತ್ರಿಕೆಯ ವಿನ್ಯಾಸ:

ನೂತನ ಸಿ. ಬಿ. ಸಿ. ಎಸ್ ಪಠ್ಯಕ್ರಮದಡಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯವು ಎರಡನೇ ಸೆಮಿಸ್ಟರಿಗೆ ಬಿ. ಎ., ಬಿ. ಎಸ್ಸಿ., ಬಿ. ಕಾಂ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನ ಎಂಬ ಕಡ್ಡಾಯ ಪತ್ರಿಕೆಯನ್ನು ನಿಗಧಿಪಡಿಸಿದ್ದು ಅದರ ಪಠ್ಯಕ್ರಮವು ಕೆಳಗಿನಂತಿದೆ.

ಅಧ್ಯಾಯ 1: ಸಂವಿಧಾನದ ರಚನೆ.
[A] ಭಾರತದ ಸಂವಿಧಾನಾತ್ಮಕ ಇತಿಹಾಸ, ಸಂವಿಧಾನ ರಚನಾ ಸಭೆಯ ರಚನೆ ಮತ್ತು ಸ್ವರೂಪ.
[B] ಪ್ರಸ್ತಾವನೆ ಮತ್ತು ಅದರ ತತ್ವಗಳು, ಸಂವಿಧಾನದ ಪ್ರಧಾನ ಲಕ್ಷಣಗಳು, ಪೌರತ್ವ ಹಾಗೂ ಸಂವಿಧಾನ ತಿದ್ದುಪಡಿ ವಿಧಾನ.
ಅಧ್ಯಾಯ 2: ಪ್ರಮುಖ ನಿಬಂಧನೆಗಳು.
[A] ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು.
[B] ರಾಷ್ಟ್ರ ನೀತಿ ನಿರ್ದೇಶಕ ತತ್ವಗಳು.
ಅಧ್ಯಾಯ 3: ಕೇಂದ್ರ ಸರ್ಕಾರ.
[A] ಕೇಂದ್ರ ಶಾಸಕಾಂಗ: ರಚನೆ ಮತ್ತು ಅಧಿಕಾರ ಕಾರ್ಯಗಳು ಹಾಗೂ ಸ್ಪೀಕರ್ (ಲೋಕಸಭಾಧ್ಯಕ್ಷ).
[B]  ಕೇಂದ್ರ ಕಾರ್ಯಾಂಗ: ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಮಂತ್ರಿಮಂಡಲ.
ಅಧ್ಯಾಯ 4: ರಾಜ್ಯ ಸರ್ಕಾರ.
[A] ರಾಜ್ಯ ಶಾಸಕಾಂಗ: ರಚನೆ ಮತ್ತು ಅಧಿಕಾರ ಕಾರ್ಯಗಳು ಹಾಗೂ ಸ್ಪೀಕರ್ (ವಿಧಾನ ಸಭಾಧ್ಯಕ್ಷ).
[B]  ರಾಜ್ಯ ಕಾರ್ಯಾಂಗ: ರಾಜ್ಯಪಾಲ, ಮುಖ್ಯ ಮಂತ್ರಿ ಹಾಗೂ ಮಂತ್ರಿಮಂಡಲ.
ಅಧ್ಯಾಯ 5: ನ್ಯಾಯಾಂಗ.
[A] ಸರ್ವೋಚ್ಛ ನ್ಯಾಯಾಲಯ: ರಚನೆ ಮತ್ತು ಅಧಿಕಾರ ಕಾರ್ಯಗಳು ಹಾಗೂ ನ್ಯಾಯಾಂಗ ವಿಮರ್ಷಾಧಿಕಾರ.
[B] ಉಚ್ಛ ನ್ಯಾಯಾಲಯ: ರಚನೆ ಮತ್ತು ಅಧಿಕಾರ ಕಾರ್ಯಗಳು.
ಗಮನಿಸಿ: ಈ ಮೇಲಿನ ಪಠ್ಯಕ್ರಮದ ಬೋಧನೆಗೆ ವಾರಕ್ಕೆ ಎರಡು ಅವಧಿಗಳನ್ನು ನಿಗಧಿಪಡಿಸಲಾಗಿದೆ. 50 ಅಂಕಗಳ ಭಾರತ ಸಂವಿಧಾನ ಪತ್ರಿಕೆಯ 10 ಅಂಕಗಳನ್ನು ಆಂತರಿಕ ಮೌಲ್ಯ ಮಾಪನಕ್ಕೆ ಮತ್ತು ಚಾತುರ್ಮಾಸದ ಅಂತ್ಯದಲ್ಲಿ 40 ಅಂಕಗಳ ಪರೀಕ್ಷೆಗೆ ಹಂಚಿಕೆ ಮಾಡಲಾಗಿದೆ. 40 ಅಂಕಗಳ ಪರೀಕ್ಷೆಯು 2 ಅಂಕಗಳ 5, 5 ಅಂಕಗಳ 4 ಮತ್ತು 10 ಅಂಕದ 1 ಪ್ರಶ್ನೆಗಳಿಂದ ಕೂಡಿದ್ದು ವಿವರಣಾತ್ಮಕ ಉತ್ತರವನ್ನು ನೀಡಬೇಕಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...