ಮಂಗಳವಾರ, ಏಪ್ರಿಲ್ 28, 2020

ಸಂಸತ್ತಿನ ಅವನತಿ::decline of parliament

ಭಾರತ ನಮಗೆಲ್ಲ ತಿಳಿದಿರುವಂತೆ ಸಂಸಧಿಯ ಸರ್ಕಾರ ಪದ್ಧತಿಯನ್ನು ಹೊಂದಿದೆ. ಈ ಮಾದರಿಯ ಸರ್ಕಾರದಲ್ಲಿ ಕಾರ್ಯಾಂಗವು ಶಾಸಕಾಂಗದಿಂದ ರಚನೆಗೊಂಡು ಶಾಸಕಾಂಗಕ್ಕೆ ಜವಾಬ್ದಾರಿ ತೋರುತ್ತದೆ. ಹೀಗಾಗಿ ಶಾಸಕಾಂಗ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಕೇಂದ್ರ ಶಾಸಕಾಂಗವನ್ನು ಸಂಸತ್ತು ಎನ್ನಲಾಗುತ್ತದೆ. ಭಾರತದ ಶಕ್ತಿ ಕೇಂದ್ರವೇ ಆಗಿರುವ ಸಂಸತ್ತು ದೇಶದ ಅಗತ್ಯಾನುಸಾರ ಶಾಸನಗಳನ್ನು ರಚಿಸುವ ಜವಾಬ್ದಾರಿ ಪಡೆದಿದೆ. ಆದರೆ ಸಂಸತ್ತು ತನ್ನ ಹಿಂದಿನ ಸ್ಥಾನಮಾನವನ್ನು ಕ್ರಮೇಣ ಕಳೆದುಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಸಂಸತ್ತಿನ ಅವನತಿಗೆ ಕಾರಣವಾಗಿರುವ ಅಂಶಗಳನ್ನು ಎಸ್.‌ ಎಸ್.‌ ಅವಾಸ್ತಿ ಪುಸ್ತಕವನ್ನಾಧರಿಸಿ ಕೆಳಗೆ ಚರ್ಚಿಸಲಾಗಿದೆ.

1. ಸಂಸತ್ತಿನ ರಚನೆಯಲ್ಲಾದ ಬದಲಾವಣೆ: ಆರಂಭದಲ್ಲಿ ಸಂಸತ್ತು ವಕೀಲರು, ಸಮಾಜ ಸುಧಾರಕರು, ಶಿಕ್ಷಣ ತಜ್ನರು, ಸೇವಾ ಮನೋಭಾವನೆಯುಳ್ಳ ಪ್ರತಿನಿಧಿಗಳಿಂದ ಕೂಡಿರುತ್ತಿತ್ತು. ಆದರೆ ಪ್ರಸ್ತುತ ಗ್ರಾಮೀಣ ಹಿನ್ನೆಲೆಯುಳ್ಳ, ಜಾತಿ ಬಲವುಳ್ಳ, ಹಣವುಳ್ಳ, ಅಪರಾಧ ಹಿನ್ನೆಲೆಯುಳ್ಳ ಪ್ರತಿನಿಧಿಗಳಿಂದ ಕೂಡಿದೆ. ಹೀಗಾಗಿ ದೇಶದ ಹಿತವನ್ನಾಧರಿಸಿದ ಚರ್ಚೆಗಳು ಕ್ಷೀಣಿಸಿವೆ. ಇದರಿಂದ ಜನ ಸಾಮಾನ್ಯರು ಸಂಸತ್ತಿನ ಮೇಲೆ ವಿಶ್ವಾಸ ಕಳೆದುಕೊಂಡು ಸಂಸತ್ತು ಅವನತಿ ಹೊಂದುವಂತಾಗಿದೆ.

2. ಪಕ್ಷ ಪದ್ಧತಿಯಲ್ಲಿನ ದೋಷಗಳು: ರಾಜಕೀಯ ಪಕ್ಷಗಳು ತಮ್ಮ ಸಂಸಧರು ತಮ್ಮ ಪಕ್ಷದ ನಿರ್ಧಾರಗಳನ್ನು ಬೆಂಬಲಿಸುವಂತೆ ಒತ್ತಡ ಹೇರುತ್ತವೆ. ಜೊತೆಗೆ ಪಕ್ಷಾಂತರ ಕಾಯಿದೆಯ ಭಯದಿಂದ ಸಂಸಧರು ತಮ್ಮ ಪಕ್ಷದ ನಿಲುವಿಗಿಂತ ಭಿನ್ನವಾದ ತಮ್ಮ ವಿಚಾರಗಳನ್ನು ಮಂಡಿಸಲು ಮುಂದಾಗುತ್ತಿಲ್ಲ. ಅಲ್ಲದೇ ಸಂಸತ್ತಿನ ಅಧಿವೇಶನಗಳಲ್ಲಿ ಪುಟ್ಟ ಪಕ್ಷಗಳ ಅಭಿವ್ಯಕ್ತಿಗೆ ಅವಕಾಶವೇ ಇಲ್ಲದಂತಹ ಸನ್ನಿವೇಶ ೆದುರಾಗುತ್ತದೆ. ಹೀಗಾಗಿಸಂಸತ್ತಿನಲ್ಲಿ ಸಂಸಧರಿಗೆ ಮುಕ್ತ ವಾತಾವರಣವಿಲ್ಲದೇ ಸಂಸತ್ತು ಅವನತಿಯತ್ತ ಸಾಗಿದೆ.

3. ಸಚಿವ ಸಂಪುಟದಿಂದ ಸಂಸತ್ತಿನ ನಿಯಂತ್ರಣ: ಸಂಸತ್ತಿನ ಅಧಿವೆಶನ ಕರೆಯುವ ಹಾಗು ಮುಂದೂಡುವ ಕಾರ್ಯವನ್ನು ಪರೋಕ್ಷವಾಗಿ ಸಚಿವ ಸಂಪುಟ ಮಾಡುತ್ತದೆ. ಜೊತೆಗೆ ಸಂಸತ್ತಿನಲ್ಲಿ ಮಂಡಿಸಬೇಕಾದ ವಿಷಯಗಳ ನಿರ್ಣಯವನ್ನು ಸಚಿವ ಸಂಪುಟವೇ ನಿರ್ಧರಿಸುತ್ತದೆ. ಸಂಸತ್ತಿನಲ್ಲಿ ರಾಷ್ಟ್ರಪತಿ ಮಾಡುವ ಭಾಷಣವನ್ನು ಸಚಿವ ಸಂಪುಟವೇ ತಯಾರಿಸಿ ಹೆಚ್ಚಿನ ಚರ್ಚೆಗೊಳಪಡಿಸದೇ ಮತಕ್ಕೆ ಹಾಕಿ ಅಂಗೀಕರಿಸುತ್ತದೆ. ಬಹುಮತ ಹೊಂದಿರುವ ಕಾರಣ ಅನ್ಯ ಪಕ್ಷದ ಸಂಸಧರ ಸಲಹೆಗಳನ್ನು ಕೇಳದೇ ಮಸೂದೆಯನ್ನು ಸಂಸತ್ತಿನಿಂದ ಸಚಿವ ಸಂಪುಟ ಅಂಗೀಕಾರಗೊಳ್ಳುವಂತೆ ಮಾಡುತ್ತದೆ. ಇದರಿಂದ ಸಂಸತ್ತಿನ ಸ್ಥಾನಮಾನ ಕುಸಿದು ಅವನತಿಗೊಳಗಾಗಿದೆ.

4. ಕೋರಂ ಕೊರತೆ: ಸಂಸತ್ತಿನ ಅಧಿವೇಶನ ಜರುಗಲು ಹಾಜರಿರಬೇಕಾದ ಕನಿಷ್ಟ ಸಂಸಧರ ಸಂಖೆಯನ್ನು ಕೋರಂ ಎನ್ನಲಾಗುತ್ತದೆ. ಇಂದು ಸಂಸಧರು ಸಂಸತ್ತಿನ ಅಧಿವೇಶನವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ದೇಶಕ್ಕೆ ಅಗತ್ಯವಾದ ನಿರ್ಧಾರಗಳನ್ನು ಕೈಗೊಳ್ಳಲು ತಾವು ಹೊಂದಿರುವ ಜವಾಬ್ದಾರಿಯನ್ನು ಮರೆತು ವಿನಾಕಾರಣ ಅಧಿವೇಶನದಿಂದ ದೂರ ುಳಿಯುತ್ತಿದ್ದಾರೆ. ಪರಿಣಾಮ ಪ್ರಮುಖ ತೀರ್ಮಾನಗಳು ಸಂಸತ್ತಿನಲ್ಲಿ ಕೆಲವೇ ಜನರ ಸಮ್ಮತಿಯೊಡನೆ ಜಾರಿಗೊಂಡು ಜನ ಹಿತವನ್ನು ಕಡೆಗಣಿಸಬಹುದಾಗಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ಧಾರಕ್ಕೆ ಕೇವಲ ಮೂವತ್ತು ಜನ ಸಂಸಧರ ೊಪ್ಪಿಗೆ ಸಂಸಧರ ಗೈರು ಹಾಜರಿನಿಂದ ಸಾಕಾಯಿತು. ಹೀಗಾಗಿ ಸಂಸತ್ತು ಅಳಿವಿನತ್ತ ಮುಖ ಮಾಡಿದೆ.

5. ಸಂಸತ್ತಿನಲ್ಲಿ ಕಂಡು ಬರುತ್ತಿರುವ ಅಸಹ್ಯ ವರ್ತನೆಗಳು: ದೇಶದ ಅಗತ್ಯಗಳನ್ನು ಚರ್ಚಿಸಬೇಕಾದ ಸದಸ್ಯರು ಒಂದು ವಿಚಾರಕ್ಕೆ ಗದ್ದಲ, ವಾಘ್ವಾದ ಹಾಗುಧರಣಿ ಮಾಡಲು ಮುಂದಾಗುತ್ತಾರೆ. ಜೊತೆಗೆ ನಿದ್ರಿಸುವುದು, ಮೊಬೈಲ್ ವೀಕ್ಷಣೆ, ಪಕ್ಕದವರೊಡನೆ ಹರಟುವುದು ಮುಂತಾದ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಇದರಿಂದ ಸಂಸಧೀಯ ುದ್ದೇಶ ಮರೆಯಾಗಿಅವನತಿ ಆರಂಭವಾಗಿದೆ.

6. ನಿಯೋಜಿತ ಶಾಸನಗಳಿಗೆ ಅವಕಾಶ: ಸಂಸತ್ತು ವರ್ಷದಲ್ಲಿ ಮೂರು ಬಾರಿ ಅಧಿವೇಶನ ಸೇರುತ್ತದೆ. ಅಧಿವೇಶನಗಳ ಅಲ್ಪ ಸಮಯದಲ್ಲಿ ದೇಶಕ್ಕೆ ಅಗತ್ಯವಾದ ನಾನಾ ಶಾಸನಗಳನ್ನು ಕೂಲಂಕುಶವಾಗಿ ಚರ್ಚಿಸಲು ಸಾಧ್ಯವಾಗದು. ಹೀಗಾಗಿ ಸಂಸಧರು ಮಸೂದೆಯ ಮುಖ್ಯಾಂಶಗಳನ್ನು ಆಧರಿಸಿ ಅನುಮೋದನೆ ನೀಡುವರು. ಶಾಸನದ ುಪ ನಿಯಮಾವಳಿಗಳನ್ನು ಸಚಿವ ಸಂಪುಟ ಅಥವ ಅಧಿಕಾರಶಾಹಿ ವರ್ಗ ರಚಿಸುತ್ತದೆ. ಈ ವೇಳೆ ಜನ ವಿರೋಧಿ ನಿಯಮಾವಳಿಗಳು ಶಾಸನದಲ್ಲಿ ಸೇರಿ ಜನರು ಸಂಸತ್ತು ಜನಹಿತ ಕಡೆಗಣಿಸುತ್ತಿದೆ ಎಂಬ ನಿರ್ಧಾರಕ್ಕೆ ಬರುತ್ತಾರೆ. ಹೀಗೆ ಶಾಸನದ ಚೌಕಟ್ಟನ್ನು ಸಂಸತ್ತು ಅನುಮೋದಿಸಿ ಉಪ ನಿಯಮಾವಳಿಗಳನ್ನು ಬೇರೆಯವರಿಗೆ ರಚಿಸಲು ಅವಕಾಶ ನೀಡುವ ನಿಯೋಜಿತ ಶಾಸನ ಪರಿಕಲ್ಪನೆಯು ಸಂಸತ್ತಿನ ಅವನತಿಗೆ ಕಾರಣವಾಗಿದೆ.

7. ಬ್ರಷ್ಟಾಚಾರದ ಛಾಯೆ: ಸಂಸಧರು ಜನಸೇವೆಯಾಗಿ ರಾಜಕಾರಣ ಮಾಡುತ್ತಿಲ್ಲ. ಸಂಸತ್ತಿನಲ್ಲಿ ಪ್ರಶ್ನೆ ಕೇಳಲು, ಚರ್ಚೆ ನಡೆಸಲು ಹಾಗು ಸರ್ಕಾರದ ಗಮನ ಸೆಳೆಯಲು ನಿರ್ದಿಷ್ಟ ವರ್ಗದ ಾಮಿಷ್ಯಗಳಿಗೆ ಸಂಸಧರು ಒಳಗಾಗುತ್ತಿದ್ದಾರೆ. ಜೊತೆಗೆ ಸಂಸಧರ ನಿಧಿಯಲ್ಲಿ ಬ್ರಷ್ಟಾಚಾರದ ವಾಸನೆ ಕಂಡು ಬರುತ್ತಿದೆ. ಬಂಡವಾಳಶಾಹಿಗಳ ಸಖ್ಯ ಹೊಂದಿದ ಸಂಸಧರು ಜನ ವಿರೋಧಿ ತೀರ್ಮಾನಗಳಿಗೆ ಮಣೆ ಹಾಕಲು ಮುಂದಾಗಿದ್ದಾರೆ. ಹೀಗಾಗಿ ಸಂಸಧೀಯ ಮೌಲ್ಯಗಳು ಅರ್ಥ ಕಳೆದುಕೊಂಡಿವೆ.

8. ಸಂಸತ್ತಿನ ಮೇಲೆ ಪ್ರಜೆಗಳ ವಿಶ್ವಾಸದ ಿಳಿಮುಖ: ಪ್ರಜೆಗಳ ಕಲ್ಯಾಣಕ್ಕೆ ಅಗತ್ಯವಾದ ಚಟುವಟಿಕೆಗಳು ಜರುಗುವ ಸಂಸತ್ತಿನಲ್ಲಿ ಜನರಿಗೆ ಅಪಾರ ನಂಬಿಕೆ ಕಾಣಬಹುದಾಗಿತ್ತು. ಆದರೆ ಇಂದು ಅಪರಾಧಿಗಳು, ಅನಕ್ಷರಸ್ಥರು, ಬ್ರಷ್ಟಾಚಾರಿಗಳು ಸಂಸಧರಾಗಿ ಆಯ್ಕೆಯಾಗುತ್ತಿದ್ದು ದೇಶದ ಹಿತ ಚಿಂತನೆ ನಿರ್ಲಕ್ಷಿಸಲಾಗುತ್ತಿದೆ. ಹೀಗಾಗಿ ಸಂಸತ್ತು ಅವನತಿಯನ್ನು ಹೊಂದುವಂತಾಗಿದೆ.

9. ರಾಜಕೀಯ ಪಕ್ಷಗಳ ಅವಕಾಶವಾದಿ ನಿರ್ಧಾರಗಳು:

10. ಏಕ ಕಾಲಕ್ಕೆ ಲೋಕಸಭೆ ಹಾಗು ವಿಧಾನಸಭೆಗೆ ಚುನಾವಣೆ ನಡೆಯದಿರುವುದು:

11. ವಿರೋಧಗಳಿಲ್ಲದೇ ಸಂಸಧರ ಸೌಲಭ್ಯಗಳ ಹೆಚ್ಚಳ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...