ಮಂಗಳವಾರ, ಏಪ್ರಿಲ್ 28, 2020

ಭಾರತದ ಸಂಯುಕ್ತ ವ್ಯವಸ್ಥೆ::indian federal sistom

ವೈಶಿಷ್ಟ್ಯಪೂರ್ಣ ಸಂಯುಕ್ತ ವ್ಯವಸ್ಥೆ::

ಕೇಂದ್ರ ಹಾಗು ರಾಜ್ಯ ಎಂಬ ಎರಡು ಬಗೆಯ ಸರ್ಕಾರಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ವ್ಯವಸ್ಥೆಗೆ ಸಂಯುಕ್ತ ಸರ್ಕಾರ ಪದ್ಧತಿ ಎನ್ನಬಹುದಾಗಿದೆ. ದ್ವೀ ಸರ್ಕಾರಗಳ ಅಸ್ತಿತ್ವವು ಸಂಯುಕ್ತ ವ್ಯವಸ್ಥೆಯ ಪ್ರಧಾನ ಲಕ್ಷಣ. ಸ್ವತಂತ್ರ ಪೂರ್ವದಲ್ಲಿದ್ದ ಬ್ರಿಟಿಷ್ ಪ್ರಾಂತ್ಯಗಳು ಹಾಗು ದೇಶೀಯ ಸಂಸ್ಥಾನಗಳನ್ನು ಸುವ್ಯವಸ್ಥಿತವಾಗಿ ಭಾರತದ ಒಕ್ಕೂಟದೊಡನೆ ಕೊಂಡೊಯ್ಯಲು ಸಂಯುಕ್ತ ವ್ಯವಸ್ಥೆಯ ಅವಲಂಬನೆ ನಮ್ಮ ಸಂವಿಧಾನ ರಚನಾಕಾರರಿಗಲ್ಲದೇ ಬ್ರಿಟಿಷರಿಗೂ ದಾರಿ ದೀಪವಾಗಿತ್ತು. ವೈವಿಧ್ಯತೆಯಿಂದ ಕೂಡಿದ ಭಾರತದ ಮುಂದುವರಿಕೆಗೆ ಸಂಯುಕ್ತ ವ್ಯವಸ್ಥೆ ಅನಿವಾರ್ಯ ಸಂಗತಿ ಎನಿಸಿದ್ದು ಸುಳ್ಳಲ್ಲ. ಸಂಯುಕ್ತ ವ್ಯವಸ್ಥೆಯ ಅನೇಕ ಅಂಶಗಳನ್ನು ಅಳವಡಿಸಿಕೊಂಡಿದ್ದರೂ ಸಂವಿಧಾನ ರಚನಾಕಾರರು ಸಂವಿಧಾನದ ಯಾವುದೇ ಭಾಗದಲ್ಲಿ ಸಂಯುಕ್ತ ವ್ಯವಸ್ಥೆ ಎಂಬ ಪದವನ್ನು ಬಳಸಿಲ್ಲ. ಬದಲಾಗಿ ಸಂವಿಧಾನದ ಮೊದಲ ವಿಧಿಯು ಭಾರತ ರಾಜ್ಯಗಳ ಒಕ್ಕೂಟ ಎಂದು ವಿವರಿಸಿದೆ. ಸಂಯುಕ್ತ ವ್ಯವಸ್ಥೆಯ ಮೂಲಾಂಶಗಳೊಡನೆ ಸಾಂದರ್ಭಿಕವಾಗಿ ಏಕಾತ್ಮಕ ವ್ಯವಸ್ಥೆಯ ಅಂಶಗಳನ್ನೂ ಬೆರೆಸಿಕೊಂಡು ಭಾರತ ಭಿನ್ನ ಸಂಯುಕ್ತ ವ್ಯವಸ್ಥೆ ಎನಿಸಲು ಭಾರತ ಸಂವಿಧಾನ ರಚನಾಕಾರರು ಪ್ರಯತ್ನಿಸಿದ್ದಾರೆ. ಹೀಗಾಗಿ ಭಾರತದ ಸಂಯುಕ್ತ ವ್ಯವಸ್ಥೆಯನ್ನು ಕ್ವಾಜಿಫೆಡರಲ್ ಎಂದು ಚಿಂತಕ ಬಣ್ಣಿಸಿದ್ದಾನೆ. ಅಮೇರಿಕದ ಸಂಯುಕ್ತ ವ್ಯವಸ್ಥೆಯು ವಿಶ್ವದ ಅತ್ಯುತ್ತಮ ಸಂಯುಕ್ತ ವ್ಯವಸ್ಥೆಯಾಗಿದೆ. ಭಾರತವು ಸಂಯುಕ್ತ ಹಾಗು ಏಕಾತ್ಮಕ ವ್ಯವಸ್ಥೆಯ ಲಕ್ಷಣಗಳುಳ್ಳ ವಿಶಿಷ್ಟ ವ್ಯವಸ್ಥೆಯಾಗಿದ್ದು ಅದರ ಲಕ್ಷಣಗಳು ಕೆಳಗಿನಂತಿವೆ.
• ದ್ವೀ ಸರ್ಕಾರ: ಭಾರತ ಸಂವಿಧಾನವು ಎರಡು ಬಗೆಯ ಸರ್ಕಾರಗಳಿಗೆ ಅವಕಾಶ ಮಾಡಿಕೊಟ್ಟಿದೆ. ದೇಶದಾಡಳಿತಕ್ಕೆ ಒಂದು ಕೇಂದ್ರ ಸರ್ಕಾರವಿದ್ದು ಆಯಾ ಪ್ರದೇಶಗಳ ಆಡಳಿತಕ್ಕೆ ಅನೇಕ ರಾಜ್ಯ ಸರ್ಕಾರಗಳಿವೆ. ಇವೆರಡೂ ಸರ್ಕಾರಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಕೇಂದ್ರ ಸರ್ಕಾರ ಹಲವು ರೀತಿಯಲ್ಲಿ ರಾಜ್ಯ ಸರ್ಕಾರಗಳನ್ನು ನಿಯಂತ್ರಿಸುತ್ತದೆ.
• ಅಧಿಕಾರದ ವಿಭಜನೆ: ಅಸ್ತಿತ್ವದಲ್ಲಿರುವ ಎರಡು ಬಗೆಯ ಸರ್ಕಾರಗಳಿಗೆ ಸಂವಿಧಾನ ಸಂಯುಕ್ತ ವ್ಯವಸ್ಥೆಯಲ್ಲಿ ಅಧಿಕಾರ ವಿಭಜನೆ ಮಾಡಿರುತ್ತದ. ಭಾರತ ಸಂವಿಧಾನವೂ ಸಹ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಹಾಗು ಸಮವರ್ತಿ ಪಟ್ಟಿ ಎಂಬ ಶಿರ್ಶಿಕೆಯಡಿ ದ್ವೀ ಸರ್ಕಾರಗಳ ನಡುವೆ ಅಧಿಕಾರ ವಿಭಜನೆಗೆ ಪ್ರಯತ್ನಿಸಿದೆ. ಆದರೆ ಕೇಂದ್ರ ಪಟ್ಟಿಯಲ್ಲಿ 99 ವಿಷಯಗಳಿದ್ದರೆ ರಾಜ್ಯ ಪಟ್ಟಿಯಲ್ಲಿ 61 ವಿಷಯಗಳಿವೆ. ಸಮವರ್ತಿ ಪಟ್ಟಿಯಲ್ಲಿ 52 ವಿಷಯಗಳಿದ್ದು ಕೇಂದ್ರ ಅಥವ ರಾಜ್ಯ ಸರ್ಕಾರಗಳು ಶಾಸನ ರಚಿಸಬಹುದಾದರೂ ಕೇಂದ್ರದ ಶಾಸನವೇ ಅಂತಿಮವಾಗಿ ಅನುಷ್ಟಾನಗೊಳ್ಳುತ್ತದೆ. ಅಲ್ಲದೇ ಶೇಷಾಧಿಕಾರಗಳು ಕೇಂದ್ರ ಸರ್ಕಾರಕ್ಕೆ ಭಾರತದಲ್ಲಿ ಸೇರಿದ್ದು ಅಸಮಾನ ಅಧಿಕಾರ ಹಂಚಿಕೆಯನ್ನು ಗಮನಿಸಬಹುದಾಗಿದೆ.
• * ಲಿಖಿತ ಹಾಗು ಅನಮ್ಯ ಸಂವಿಧಾನ: ಸಂಯುಕ್ತ ವ್ಯವಸ್ಥೆಯ ಮುಂದುವರಿಕೆಗೆ ಈ ಅಂಶ ಅನಿವಾರ್ಯ. ಭಾರತದಲ್ಲಿ ಲಿಖಿತ ಸಂವಿಧಾನವಿದ್ದರೂ ಕೆಲವು ಹಲವು ಅಲಿಖಿತ ಸಂಪ್ರದಾಯಗಳನ್ನು ಪಾಲಿಸಲಾಗುತ್ತಿದೆ. ಜೊತೆಗೆ ಸಂವಿಧಾನವು ಪೂರ್ಣವಾಗಿ ಅನಮ್ಯವಾಗಿಲ್ಲ. ಕಾರಣ ಸಂವಿಧಾನದ 368 ನೇ ವಿಧಿ ಮೂರು ಬಗೆಯಲ್ಲಿ ತಿದ್ದುಪಡಿಗೆ ಅವಕಾಶ ನೀಡಿದೆ. ಹೀಗಾಗಿ ಇದುವರೆಗೆ 103 ತಿದ್ದುಪಡಿಗಳನ್ನು ಜಾರಿಗೊಳಿಸಲಾಗಿದ್ದು ಅನಮ್ಯತೆ ಸಂಯುಕ್ತ ವ್ಯವಸ್ಥೆ ಬಯಸುವಷ್ಟು ಇಲ್ಲವೆನ್ನಬಹುದು.
• * ಸಂವಿಧಾನದ ಶ್ರೇಷ್ಠತೆ: ಸಂಯುಕ್ತ ವ್ಯವಸ್ಥೆಯಲ್ಲಿ ಸಂವಿಧಾನವೇ ಸರ್ವ ಶ್ರೇಷ್ಠ. ಭಾರತದಲ್ಲೂ ಸಂವಿಧಾನವು ಪರಮೋಚ್ಚವಾಗಿದ್ದು ಸಂಸತ್ತು ಅಥವ ರಾಜ್ಯ ಶಾಸಕಾಂಗಗಳು ಅಂಗೀಕರಿಸುವ ಕಾಯಿದೆಗಳು ಸಂವಿಧಾನದ ಚೌಕಟ್ಟಿನಲ್ಲೇ ಇರುತ್ತವೆ. 
• * ದ್ವೀ ಸದನ ಶಾಸಕಾಂಗ: ಭರತವು ಸಂಯುಕ್ತ ವ್ಯವಸ್ಥೆಯಲ್ಲಿರುವಂತೆ ಜನಪ್ರತಿನಿಧಿಗಳ ಕೆಳಮನೆ ಹಾಗು ರಾಜ್ಯಗಳ ಪ್ರತಿನಿಧಿಗಳ ಮೇಲ್ಮನೆ ಹೊಂದಿದೆ. ಆದರೆ ಅಮೇರಿಕದ ಸಿನೆಟ್ನಂತೆ ಮೇಲ್ಮನೆಯಲ್ಲಿ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯವಿಲ್ಲ. ಬದಲಾಗಿ ಆಯಾ ರಾಜ್ಯಗಳ ಜನಸಂಖೆಗೆ ಅನುಗುಣವಾಗಿಸ್ಥಾನಗಳನ್ನು ಅಸಮಾನವಾಗಿ ಹಂಚಲಾಗಿದೆ.
• * ಏಕ ಪೌರತ್ವ: ಸಂಯುಕ್ತ ವ್ಯವಸ್ಥೆಯಲ್ಲಿ ದ್ವೀ ಪೌರತ್ವ ಸಾಮಾನ್ಯ ಸಂಗತಿ. ಆದರೆ ಭಾರತದಲ್ಲಿ ಏಕ ನಾಗರಿತ್ವ ಅಳವಡಿಸಿಕೊಳ್ಳಲಾಗಿದೆ. ಏಕ ಭಾರತ ಪೌರತ್ವ ಹೊಂದಿರುವ ಭಾರತೀಯ ಪ್ರಜೆ ಭಾರತದ ಯಾವುದೇ ರಾಜ್ಯದಲ್ಲಿ ನೆಲೆಸುವ ಅವಕಾಶ ಪಡೆದಿದ್ದಾನೆ. ಅಮೇರಿಕದಲ್ಲಿ ಪೌರರು ಅಮೇರಿಕ ಸಂಯುಕ್ತ ಸರ್ಕಾರದ ಹಾಗು ತಾನು ವಾಸಿಸುವ ಪ್ರಾಂತ್ಯದ ಸರ್ಕಾರದಿಂದ ಪೌರತ್ವ ಪಡೆಯಬೇಕಾಗುತ್ತದೆ.
• * ಅಖಿಲ ಭಾರತೀಯ ಸೇವೆಗಳು: ಭಾರತ ಸಂವಿಧಾನ ಕೇಂದ್ರ ಹಾಗು ರಾಜ್ಯಗಳಿಗೆ ಪ್ರತ್ಯೇಕ ಲೋಕಸೇವಾ ಆಯೋಗಗಳನ್ನು ನೀಡಿದೆ. ಆದರೆ ಜಂಟಿ ಲೋಕಸೇವಾ ಆಯೋಗಕ್ಕೂ ಅವಕಾಶ ನೀಡಿರುವುದು ವಿಶೇಷ. ಜೊತೆಗೆ ಕೇಂದ್ರ ಲೋಕಸೇವಾ ಆಯೋಗ ನೇಮಿಸುವ ಅಖಿಲ ಭಾರತೀಯ ಸೇವಾ ವರ್ಗದವರು ಕೇಂದ್ರ ಹಾಗು ರಾಜ್ಯ ಸರ್ಕಾರಗಳಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ. ಇವರ ಮೇಲೆ ರಾಜ್ಯಗಳಿಗಿಂತ ಕೇಂದ್ರ ಸಾಕಷ್ಟು ಹಿಡಿತ ಹೊಂದಿರುತ್ತದೆ.
• * ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ: ಸಂವಿಧಾನದ 370 ವಿಧಿಯು ಉಳಿದ ರಾಜ್ಯಗಳಿಗಿಂತ ಜಮ್ಮು ಕಾಶ್ಮೀರಕ್ಕೆ ಮಹತ್ವ ನೀಡುತ್ತದೆ. ಆ ರಾಜ್ಯವು ತನ್ನದೇ ಸಂವಿಧಾನ ಹೊಂದಲು ಅವಕಾಶ ನೀಡಲಾಗಿದ್ದು ವಿಶಿಷ್ಠ ನಿಲುವೆನ್ನಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

first semister syllabus

ಕರ್ನಾಟಕ ವಿಶ್ವ ವಿದ್ಯಾಲಯವು ಬಿ. ಎ. ಪ್ರಥಮ ಸೆಮಿಸ್ಟರಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಮೂಲ ಪರಿಕಲ್ಪನೆಗಳು ಎಂಬ ಶಿರ್ಷಿಕೆಯ ಪತ್ರಿಕೆಯನ್ನು ನಿಗಧ...