ರೌಲೆಟ್ ಕಾಯಿದೆ:
ಬ್ರಿಟಿಷರು ಎರಡನೇ ಮಹಾ ಯುದ್ಧದ ಹಿನ್ನೆಲೆಯಲ್ಲಿ ತಮ್ಮ ವಸಾಹತುಗಳಲ್ಲಿನ ಸಾರ್ವಜನಿಕ ಅಶಾಂತಿ ಮತ್ತು ಸರ್ಕಾರದ ವಿರುದ್ಧದ ಪಿತೂರಿಗಳನ್ನು ತಡೆಯಲು ರೌಲೆಟ್ ಕಾಯಿದೆಯನ್ನು ಜಾರಿಗೊಳಿಸಿದರು. ಭಾರತದಲ್ಲಿ ಮಾರ್ಚ್ 1919 ರಲ್ಲಿ ರೌಲೆಟ್ ಕಾಯಿದೆ ಜಾರಿಗೊಂಡಿತು. ಈ ಕಾಯಿದೆ ಸಂಶಯಾಸ್ಪದ ವ್ಯಕ್ತಿಗಳನ್ನು ಬಂಧಿಸಿ ವಿಚಆರಣೆ ನಡೆಸಲು ಅವಕಾಶ ನೀಡಿತ್ತು. ಇದರ ದುರುಪಯೋಗ ಹೆಚ್ಚಾಗಿ ಜನರ ನಾಗರಿಕ ಹಾಗು ರಾಜಕೀಯ ಸ್ವಾತಂತ್ರ್ಯ ಧಕ್ಕೆಗೊಳಗಾಗುವುದೆಂದು ಭಾವಿಸಿದ ಗಾಂಧೀಜಿ 1 ಮಾರ್ಚ್ 1919 ರಂದು ರೌಲೆಟ್ ಕಾಯಿದೆಯನ್ನು ಖಂಡಿಸಿದರು. ಜೊತೆಗೆ ದೇಶದಾದ್ಯಂತ 6 ಏಪ್ರಿಲ್ 1919 ರಂದು ಸತ್ಯಾಗ್ರಹಕ್ಕೆ ಮುಂದಾದರು. ಈ ಕಾಯಿದೆಗೆ ಕಾರಣವಾದ ಯೋಗದ ಅಧ್ಯಕ್ಷ ಬ್ರಿಟಿಷ್ ನ್ಯಾಧೀಶ ಸಿಗ್ನಿ ರೌಲೆಟ್ ಆಗಿದ್ದರಿಂದ ಕಾಯಿದೆಗೆ ರೌಲೆಟ್ ಎಂಬ ಹೆಸರು ಬಂದಿತು. ರೌಲೆಟ್ ಕಾಯಿದೆಯ ಅಧಿಕೃತ ಹೆಸರು ಅನಾರ್ಕಿಕಲ್ ಆಯ್ಡ್ ರೆವಲ್ಯುಷನರಿ ಕ್ರೈಮ್ ಆಕ್ಟ್.
ಜಲಿಯನ್ ವಾಲಾಬಾಗ್ ಹತ್ಯಾಕಾಂಡ:
ಗಾಂಧೀಜಿ ಅಮಾನವಿಯ ರೌಲೆಟ್ ಕಾಯಿದೆಯನ್ನು ವಿರೋಧಿಸಲು ಮುಂದಾದರು. ಪಂಜಾಬಿನ ಅಮೃತಸರದಲ್ಲಿ ಬೈಸಾಕಿ ದಿನವಾದ 13 ಏಪ್ರಿಲ್ 1919 ರಂದು ಜನರು ತಮ್ಮ ನಾಯಕರಾದ ಡಾ. ಸೈಫುದ್ದೀನ್ ಕಿಚ್ಲು ಹಾಗು ಡಾ. ಸತ್ಯಪಾಲ್ ಬಂಧನವನ್ನು ವಿರೋಧಿಸಲು ಜಲಿಯನ್ ವಾಲಆಬಾಗ್ ಎಂಬಲ್ಲಿ ಸಭೆ ಸೇರಿದ್ದರು. ನಿರಾಯುಧರಾಗಿದ್ದ ಜನರ ಮೇಲೆ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಗುಂಡು ಹಾರಿಸಲು ಆಜ್ಞಾಪಿಸಿದನು. ಪರಿಣಾಮ ನೂರಾರು ಜನರು ಹತ್ಯೆಯಾದರು. ಪಂಜಾಬ್ ಗೌರ್ನರ್ ಮೈಕಲ್ ಓ ಡಯರ್ ಈ ಘಟನೆಯನ್ನು ಬೆಂಬಲಿಸಿ ಪಂಜಾಬಿನಲ್ಲಿ ಮಾರ್ಷಲ್ ಕಾಯಿದೆಯನ್ನು ಜಾರಿಗೊಳಿಸಿದನು. ಈ ಘಟನೆಯ ಪ್ರತಿಭಟನೆಗಾಗಿ ಠಾಕೂರರು ನೈಟ್ ಹುಡ್ ಮತ್ತು ಗಾಂಧೀಜಿ ಕೈಸರ್ ಈ ಹಿಂದ್ ಪ್ರಶಸ್ತಿಯನ್ನು ಹಿಂದಿರುಗಿಸಿದರು. ಮುಂದೆ ಜಲಿಯನ್ ವಾಲಾಬಾಗ್ ನರಮೇಧದ ವಿಚಾರಣೆಗಾಗಿ 1920 ರಲ್ಲಿ ಹಂಟರ್ ಆಯೋಗವನ್ನು ಬ್ರಿಟಿಷ್ ಸರ್ಕಾರ ರಚಿಸಿತು. ಗಾಂಧೀಜಿ ಹಂಟರ್ ಆಯೋಗವನ್ನು ವೈಟ್ ವಾಶ್ ಎಂದು ಟೀಕಿಸಿದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣನಾಗಿದ್ದ ಪಂಜಾಬ್ ಗೌರ್ನರ್ ಮೈಕೆಲ್ ಓ ಡಯರ್ನನ್ನು ಉದಾಮ್ಸಿಂಗ್ [ಮಹಮದ್ ಸಿಂಗ್ ಆಜಾದ್] ಎಂಬ ಭಾರತೀಯ ಎಂಜಿನೀಯರ್ 13 ಮಾರ್ಚ 1940 ರಂದು ಲಂಡನ್ನಿನ ಕಾಕ್ಸ್ಟನ್ ಹಾಲ್ ಎಂಬಲ್ಲಿ ಗುಂಡಿಟ್ಟು ಕೊಂದನು. ಉದಾಮ್ಸಿಂಗನಿಗೆ 13 ಜೂನ್ 1940 ರಂದು ಗಲ್ಲಿಗೇರಿಸಲಾಯಿತು. ಆತನ ಬೂದಿಯನ್ನು 19 ಜುಲೈ 1974 ರಂದು ಭಾರತಕ್ಕೆ ತರಲಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ